ಆಲದ ಮರ ಮತ್ತು ಅತೃಪ್ತ ಆತ್ಮಗಳು
ಸಂತೋಷ್ ಆಚಾರ್ಯ
ಮನೆಯ ಕಾಂಪೌಂಡಿನಿಂದ ಸುಮಾರು ಐವತ್ತು ಮೀಟರ್ ದೂರದಲ್ಲಿದ್ದ ಆಲದ ಮರದಲ್ಲಿ ಭೂತವಿತ್ತು ಎಂಬುದು ಅಜ್ಜಿ ಕಲಿಸಿಕೊಟ್ಟ ಸಂಗತಿ. ಆಗ ಭೂತವೆಂದರೆ ಬಿಳಿ ಸೀರೆಯನ್ನುಟ್ಟ ಮಹಿಳೆ ಎಂದೆನಿಸುತ್ತಿದ್ದೆ. ವಿಶಾಲವಾಗಿದ್ದ ಆ ಮರದ ಯಾವುದೋ ಕೊಂಬೆಯಲ್ಲಿ ರಾತ್ರಿ ಬಂದು ನೇತಾಡುತ್ತಿರಬಹುದು ಎಂದು ನನ್ನ ಊಹೆಯಾಗಿತ್ತು. ಅದು ನಾನು ಓದುತ್ತಿದ್ದ ಪುಸ್ತಕಗಳ ಮಹಿಮೆಯೋ ಟಿವಿಯ ಮಹಿಮೆಯೋ ಅಥವಾ ಅಜ್ಜಿಯ ಮಹಿಮೆಯೋ ಭೂತವೆಂದರೆ ಹೀಗೆಯೇ ಇರತ್ತೆ ಎಂದು ನಾನು ಅಂದುಕೊಂಡಿದ್ದೆ. ಅದರ ಮೇಲೆ ಮನೆಯ ಹಿಂದಿನ ಬ್ರಾಹ್ಮಣರ ತಂದೆಯ ಶವವನ್ನೂ ಅಲ್ಲೇ ಸುಟ್ಟಿದ್ದು ಅವರ ಭೂತ ಕೂಡ ಅಲ್ಲಿ ಸೇರಿರಬಹುದು ಎಂದು ನನ್ನ ಶಂಕೆಯಾಗಿತ್ತು. ಪುರುಷರೂ ಸತ್ತ ನಂತರ ಭೂತವಾಗುತ್ತಾರೆ. ಸೊಳ್ಳೆಗಳಂತೆ ಅವು ತೊಂದರೆ ಮಾಡುವುದಿಲ್ಲ ಎಂದು ನನ್ನ ಅನಿಸಿಕೆಯಾಗಿತ್ತು. ಒಟ್ಟಾರೆ ಸತ್ತ ಬಳಿಕ ಎಲ್ಲರೂ ಭೂತವಾಗುತ್ತಾರೆ ಮತ್ತು ಆ ಮರದಲ್ಲಿ ಜೋತು ಬೀಳುತ್ತಾರೆ ಎಂದು ಅಂದುಕೊಂಡಿದ್ದೆ. ನನ್ನ ಎಷ್ಟೋ ಟೆನ್ನಿಸ್ ಬಾಲುಗಳು ಆ ಮರದ ಕೆಳಗಿದ್ದ ಪೊದೆಗಳಲ್ಲಿ ಮರೆಯಾಗಿತ್ತು. ಹುಡುಕುವ ಧೈರ್ಯ ಯಾವತ್ತೂ ಮಾಡಿರಲಿಲ್ಲ. ಆದರೆ ಕ್ರಮೇಣ ಚಿಂತನೆಗಳು ಬದಲಾದಂತೆ ಇದೆಲ್ಲಾ ನಗಣ್ಯವಾಗಿದ್ದು ಬೇರೆ ಮಾತು. ಮತ್ತಷ್ಟು ಓದು 
ABVP ಸಮಾವೇಶಕ್ಕೆ ಹಿಂದಿ ಬ್ಯಾನರ್ ಯಾಕೆ?
ವಸಂತ ಶೆಟ್ಟಿ
ಮೊನ್ನೆ ಬಸವನಗುಡಿಯ ಟಾಗೋರ್ ಸರ್ಕಲ್ ಬಳಿ ಹೋಗುವಾಗ ಈ ಬ್ಯಾನರ್ ಕಂಡಿತು. ಇದೇನಪ್ಪ ಇದು ಅಂತ ನೋಡಿದ್ರೆ, ಬೆಂಗಳೂರಿನಲ್ಲಿ ನಡೆಯುತ್ತಿರುವ ABVP ಯವರ ಯಾವುದೋ ವಿಧ್ಯಾರ್ಥಿ ಸಮಾವೇಶದ ಬ್ಯಾನರ್, ಅದು ಪೂರ್ತಿ ಹಿಂದಿಯಲ್ಲಿ !!. ಅಲ್ಲಲ್ಲಿ…
ಮೊನ್ನೆ ಬಸವನಗುಡಿಯ ಟಾಗೋರ್ ಸರ್ಕಲ್ ಬಳಿ ಹೋಗುವಾಗ ಈ ಬ್ಯಾನರ್ ಕಂಡಿತು. ಇದೇನಪ್ಪ ಇದು ಅಂತ ನೋಡಿದ್ರೆ, ಬೆಂಗಳೂರಿನಲ್ಲಿ ನಡೆಯುತ್ತಿರುವ ABVP ಯವರ ಯಾವುದೋ ವಿಧ್ಯಾರ್ಥಿ ಸಮಾವೇಶದ ಬ್ಯಾನರ್, ಅದು ಪೂರ್ತಿ ಹಿಂದಿಯಲ್ಲಿ !!. ಅಲ್ಲಲ್ಲಿ ಕನ್ನಡದಲ್ಲೂ ಬ್ಯಾನರ್ ಕಂಡಿದ್ದೆ, ಆದರೆ ಕರ್ನಾಟಕದಲ್ಲಿ ಹಿಂದಿ ಬ್ಯಾನರ್ ಯಾವ ಪುರುಷಾರ್ಥಕ್ಕಾಗಿ ಹಾಕಿದ್ದಾರೆ ಅಂತ ಗೊತ್ತಾಗಲಿಲ್ಲ. ಮತ್ತಷ್ಟು ಓದು 
ಭೈರಪ್ಪ ಎಂಬ STAR WRITER

USB ಡ್ರೈವ್ ನಲ್ಲಿ ಲಿನಕ್ಸ್
ಓಂಶಿವಪ್ರಕಾಶ್ ಎಚ್. ಎಲ್
ಹೊಸದಾಗಿ ಲಿನಕ್ಸ್ ಬಳಸಬೇಕು ಅಂತಿರೋರು, ಹೊಸ ಹೊಸ ಗ್ನು/ಲಿನಕ್ಸ್ ಆವೃತ್ತಿಗಳನ್ನು ಟೆಸ್ಟ ಮಾಡಿನೋಡ್ಬೇಕು ಅಂತಿರೋ ನನ್ನಂತಹವರು ಪ್ರತಿ ಭಾರಿಯೂ ಲಿನಕ್ಸ್ ಅನ್ನು ನಮ್ಮ ಲ್ಯಾಪ್ಟಾಪ್ ಗಳಲ್ಲಿ ಅಥವಾ ಡೆಸ್ಕಾಪ್ ಗಳಲ್ಲಿ ಪುನ: ಪುನ: ಇನ್ಸ್ಟಾಲ್ ಮಾಡ್ಕೊಳ್ಳಿಕ್ಕೆ ಇಷ್ಟ ಪಡಲ್ಲ. ಹಾಗಿದ್ರೆ ಅದನ್ನ ಬಳಸೋದಾದ್ರೂ ಹ್ಯಾಗೆ?
ವರ್ಚುಅಲ್ ಬಾಕ್ಸ್ – ತಂತ್ರಜ್ಞಾನ ಕುರಿತಾದ ಲೇಖನಗಳನ್ನು ನೀವು ಓದ್ತಿದ್ರೆ ಇಷ್ಟೋತ್ತಿಗಾಗಲೇ ಇದರ ಹೆಸರು ನಿಮ್ಮ ಬಾಯಿಂದ ಹೊರಡಿರಬೇಕು. ಹೊಸಬರಿಗೆ ಅದೂ ಸ್ವಲ್ಪ ಕಿರಿ ಕಿರಿ ಅನ್ನಿಸ್ಬಹುದು. ಹಾಗಿದ್ರೆ ಅಂತವರಿಗೆಲ್ಲ ಗು/ಲಿನಕ್ಸ್ ನ ಔತಣವನ್ನ ಹೇಗೆ ಬಡಿಸೋದು ಅನ್ನೊದು ಮುಂದಿನ ಪ್ರಶ್ನೆ.
ಇದಕ್ಕೆ ಒಂದು ಉತ್ತರ ಹೇಳ್ತೀರಾ?
-> ಲೈವ್ ಸಿ.ಡಿ ಉಪಯೋಗಿಸ್ಬಹುದಲ್ವಾ?
ಟೆಕ್ ತಂಡ ಹೊರತಂದ ಡೆಬಿಯನ್ ಚಿಗುರು ಕೂಡಾ ಲೈವ್ ಸಿ.ಡಿ ಯೇ. ನಿಮ್ಮ ಕಂಪ್ಯೂಟರ್ ಅನ್ನು ಸಿ.ಡಿ ಯಲ್ಲಿ ಬೂಟ್ ಮಾಡಿದರಾಯಿತು. ಮತ್ತಷ್ಟು ಓದು 
ಗೋಹತ್ಯೆ ನಿಷೇಧದ ಸುತ್ತ…!
ಗೋಹತ್ಯೆ ಹಾಗೂ ಗೋಹತ್ಯೆ ನಿಷೇಧಕಾಯಿದೆ/ಶಾಸನಬದ್ಧಗೊಳಿಸುವ ಕುರಿತಂತೆ ಬಿಡುವಿಲ್ಲದೇ ಚರ್ಚೆಗಳು ನಡೆಯುತ್ತಿರುವುದನ್ನು ನಾವೆಲ್ಲ ಓದುತ್ತಿದ್ದೇವೆ. ಹಳೆಯ ಒಂದು ಹಿಂದೂ ಪತ್ರಿಕೆಯಲ್ಲಿ ಬಂದ ‘Cow slaughter ban is a tool to oppress Dalits’ ಸಿಬ್ಬಂದಿ ಮಾಡಿದ್ದ ವರದಿಯಲ್ಲಿ, ಆರ್.ಎಸ್.ಎಸ್. ಮತ್ತು ಅದರ ವಿರೋಧಿ ಪಾಳೇಯದ ಟೀಕಾ ಪ್ರಹಾರಗಳು ಕಂಡುಬಂದವು.
ಆರ್.ಎಸ್.ಎಸ್.ಅನ್ನು ಟೀಕಿಸುವರು ಹೇಳುವುದೆನೆಂದರೆ, ಭಾರತೀಯ ಸ್ಥಳೀಯ ಸಂಸ್ಕೃತಿಗಳಿಗೆ ಹಿಂದೂ ರಾಷ್ಟ್ರೀಯತೆ ಎಂಬ ಪರಿಕಲ್ಪನೆಯು ವಿದೇಶದಿಂದ ಆಮದು ಮಾಡಿಕೊಂಡ ಸರಕು, ಆದರೆ ಆರ್.ಎಸ್,ಎಸ್.ನವರು ಬೇರೆ ಬೇರೆಯ ರೀತಿಯ ಆಹಾರ ಪದ್ದತಿಗಳನ್ನು ಹೊಂದಿರುವ ಸಂಸ್ಕೃತಿಗಳನ್ನು ರಾಷ್ಟ್ರೀಯತೆಯ ವಿರೋಧಿಗಳು ಎಂದು ಗುರುತಿಸುವ ಮೂಲಕ, ಆಂತರೀಕವಾಗಿ ಶತ್ರುಗಳನ್ನು ಹುಟ್ಟುಹಾಕುತ್ತಿದ್ದಾರೆ ಎಂಬ ಹೇಳಿಕೆಯನ್ನು ಪ್ರಕಾಶ ಅವರು ನೀಡಿದ್ದಾರೆ. ಮತ್ತಷ್ಟು ಓದು 
ಹಕ್ಕಿಯ ಗೂಡಿನಲಿ ಹಾವು ನೆಲೆಯೂರಿದೆ…!
– ಆಸು ಹೆಗ್ಡೆ
ಹಕ್ಕಿಯ ಗೂಡಿನಲಿ ಹಾವು ನೆಲೆಯೂರಿದೆ, 
ಈ ಗೂಡು ತನ್ನದು, ಇದರಲ್ಲಿ ತನ್ನ ಬೆವರು ಬೆರೆತಿದೆ,
ತನ್ನ ಪರಿಶ್ರಮದ ಸಾಕ್ಷಿಯಾಗಿ ಇನ್ನೂ ಸುಭದ್ರವಾಗಿಯೇ ಅದು ಉಳಿದಿದೆ;
ಹಕ್ಕಿಯ ಗೂಡಿನಲಿ ಹಾವು ನೆಲೆಯೂರಿದೆ,
ಹಕ್ಕಿ ಹೊಸ ನೆಲೆಯ ಹುಡುಕಿ ಹೊರಡಬೇಕಾಗಿದೆ,
ಇಂದಿಗೆ ತೀರಿತು ಇಲ್ಲಿಯ ಋಣ, ಎಂದು ಇನ್ನು ಹೊಸಗೂಡು ಕಟ್ಟಬೇಕಾಗಿದೆ;
ಹಕ್ಕಿಯ ಗೂಡಿನಲಿ ಹಾವು ನೆಲೆಯೂರಿದೆ,
ತಾನು ತನ್ನದೆಂಬ ಭಾವುಕತೆಗೆ ಅಂಟಿರಲಾಗದಾಗಿದೆ,
ಭೌತಿಕ ವ್ಯಾಮೋಹ ತೊರೆದು ಮೈಕೊಡವಿ ಎದ್ದು ಹೊರನಡೆಯಬೇಕಾಗಿದೆ;
ಹಕ್ಕಿಯ ಗೂಡಿನಲಿ ಹಾವು ನೆಲೆಯೂರಿದೆ,
ವಿಷಜಂತುಗಳ ಜೊತೆಗೆ ಕಾಲಹರಣ ವ್ಯರ್ಥವಾದುದಾಗಿದೆ,
ಮನವೊಲಿಸಿ ತನ್ನದನ್ನು ಉಳಿಸಿಕೊಂಬ ವ್ಯರ್ಥ ಪ್ರಯತ್ನ ಇನ್ನು ಬೇಡವಾಗಿದೆ;
ಹಕ್ಕಿಯ ಗೂಡಿನಲಿ ಹಾವು ನೆಲೆಯೂರಿದೆ,,
ಇದ್ದಲ್ಲೇ ಒಳಗೊಳಗೇ ಮರುಗಿ ಬೇಯುವುದು ಬೇಡವಾಗಿದೆ,
ಹಾವಿನ ಸಹವಾಸವ ತೊರೆದು ಸ್ವಚ್ಛಂದ ಬಾನಿನಲ್ಲಿ ತಾನೀಗ ಹಾರಾಡಬೇಕಿದೆ;
ಹಕ್ಕಿಯ ಗೂಡಿನಲಿ ಹಾವು ನೆಲೆಯೂರಿದೆ,
ನಂಬಿದ ತತ್ವಗಳ ಇಂದು ಒರೆಗೆಹಚ್ಚಿ ಪರೀಕ್ಷಿಸಬೇಕಾಗಿದೆ,
ತಾನು ಸರ್ವಸಮರ್ಥ ಎಂಬುದ ಈ ಜಗದ ಮುಂದೆ ಸಾಬೀತುಪಡಿಸಬೇಕಾಗಿದೆ;
ಹಕ್ಕಿಯ ಗೂಡಿನಲಿ ಹಾವು ನೆಲೆಯೂರಿದೆ,
ತಲೆಯೆತ್ತಿ, ಎತ್ತ ದೈವಚಿತ್ತವೋ ಅತ್ತ ನಡೆದುಬಿಡಬೇಕಾಗಿದೆ,
ಹೊಸದೊಂದು ಸ್ಥಾನದಲ್ಲಿ ಹೊಸ ಅಸ್ಥಿತ್ವವನ್ನು ಸ್ಥಾಪಿಸಿ ಬೆಳೆಸಿಕೊಳ್ಳಬೇಕಾಗಿದೆ!
ಚಿತ್ರ ಕೃಪೆ : http://www.austinreptileservice.net
“ಗ್ರಾಮದೇಗುಲಗಳಾಗಿ ಗರೋಡಿಗಳು”

ಬೆಂಗಳೂರು-ಮಂಗಳೂರು ಬಸ್ಸಲ್ಲಿ…!
ವೇಣುವಿನೋದ್, ಪತ್ರಕರ್ತರು, ಮಂಗಳೂರು
ಇದುವರೆಗೆ ಸುಮಾರು ೩೦ ಬಾರಿ ಬೆಂಗಳೂರಿಗೆ ಹೋಗಿ ಬಂದಿದ್ದೇನೆ. ಅದರಲ್ಲಿ ಮೊನ್ನೆಯ ನನ್ನ ಬೆಂಗಳೂರಿನಿಂದ ಮಂಗಳೂರಿಗೆ ಪ್ರಯಾಣ ಮಾತ್ರ ದಾಖಲೆಯ ಪುಟದಲ್ಲಿ ಸೇರಿ ಹೋಯಿತು…
ಕ್ಯಾಮೆರಾ ರಿಪೇರಿ, ಒಂದಷ್ಟು ಪುಸ್ತಕ ಖರೀದಿ ಕೆಲಸ ಇದ್ದ ಕಾರಣ ಶನಿವಾರದ ವಾರದ ರಜೆಯನ್ನು ಉಪಯೋಗ ಮಾಡಿಕೊಳ್ಳೋಣ ಎಂದು ಶುಕ್ರವಾರ ರಾತ್ರಿ ಮಂಗಳೂರಿನಿಂದ ಹೊರಟೆ. ಕೆಟ್ಟ ರಸ್ತೆಯಲ್ಲಿ ಆರ್ಡಿನರಿ ಬಸ್‌ಗಳಲ್ಲಿ ಹೋದರೆ ಖಂಡಿತಾ ನಿದ್ದೆ ಬರುವುದು ಕಷ್ಟ ಎಂದು ಗೊತ್ತು. ಅದಕ್ಕೇ ೫೦೦ ರು. ಕೊಟ್ಟು ಕೆಎಸ್ಸಾರ‍್ಟಿಸಿ ಐರಾವತದಲ್ಲೇ ಸೀಟ್ ಬುಕ್ ಮಾಡಿಸಿದ್ದೆ. ೯.೨೩ರ ನನ್ನ ಬಸ್ ಎಸಿ ಸರಿ ಇಲ್ಲ ಎಂದು ಅರ್ಧ ಗಂಟೆ ವಿಳಂಬವಾಗಿ ಹೊರಟಿತು. ಶಿರಾಡಿ ಬ್ಲಾಕ್ ಆದ ಕಾರಣ ಮಡಿಕೇರಿ-ಮೈಸೂರು ರೋಡಲ್ಲಿ ಬಸ್ ಸಾಗಿತ್ತು. ಆದರೆ ಕೆಟ್ಟ ರಸ್ತೆ ಮತ್ತು ವೋಲ್ವೋ ಕೂಡಾ ಹಳೆಯದಾಗಿದ್ದರಿಂದಲೋ ಏನೋ ಚೆನ್ನಾಗಿ ನಿದ್ದೆ ತೆಗೆಯುವ ನನ್ನ ಉದ್ದೇಶ ಈಡೇರಲಿಲ್ಲ. ಘಾಟ್ ರಸ್ತೆಯಲ್ಲಿ ಕ್ರಶರ‍್ನಲ್ಲಿ ಹಾಕಿ ಕುಲುಕಿಸಿದ ಅನುಭವ. ಮತ್ತಷ್ಟು ಓದು 
ಕನ್ನಡ ಮಿಡಿಯಾ – ಎಡವುತ್ತಿರುವುದೆಲ್ಲಿ ?
ದಿನಾ ಓದೋ ಕನ್ನಡ ಪತ್ರಿಕೆಗಳಿರಬಹುದು (ವಿ.ಕ, ಪ್ರ.ವಾ,ಉ.ವಾ, ಕ.ಪ್ರ), ನೋಡೋ ಕನ್ನಡ ಸುದ್ದಿ ವಾಹಿನಿಗಳಿರಬಹುದು (ಟಿವಿ9, ಸುವರ್ಣ) ಇಲ್ಲವೇ ಕನ್ನಡದ ಮನರಂಜನೆ ಚಾನೆಲ್ ಗಳಿರಬಹುದು( ಜೀ ಕನ್ನಡ, ಕಸ್ತೂರಿ, ಈ ಟಿವಿ ಕನ್ನಡ, ಸುವರ್ಣ), ಇವರೆಲ್ಲರಲ್ಲಿ ಒಂದು ಸಾಮಾನ್ಯವಾದ ಅಂಶವೆಂದರೆ ಇವರಿಗಿರೋ ಹಿಂದಿ ಸಿನೆಮಾ, ಬಾಲಿವುಡ್ ಬಗೆಗಿನ ವಿಪರೀತ ಅಭಿಮಾನ. ಇವರ ಹಿಂದಿ ಸಿನೆಮಾ, ಹಾಡು, ನಟರ ಬಗೆಗಿನ disproportionate ಪ್ರಚಾರದ ವೈಖರಿ ನೋಡಿದವರಿಗೆ ಕರ್ನಾಟಕದಲ್ಲಿ ಹಿಂದಿ ಚಿತ್ರೋದ್ಯಮ ಕನ್ನಡಕ್ಕಿಂತ ದೊಡ್ಡದು ಅನ್ನುವಂತೆ ಅನ್ನಿಸುವ ಹಾಗೆ ಮಾಡಿದ್ದರೆ ಅಚ್ಚರಿಯಿಲ್ಲ. ಹಾಗಿದ್ರೆ ಇದೆಷ್ಟು ಸರಿಯಾದದ್ದು ?
ಮಾಧ್ಯಮದ ಮಂದಿಗೆ ಕೆಲವು ಪ್ರಶ್ನೆಗಳು
’ಹಿಂದಿ’ಗಿಂತ ’ಕನ್ನಡ’ದ ಮನರಂಜನೆ, ಕನ್ನಡ ಚಿತ್ರಗಳು ಗ್ರಾಹಕರಾಗಿ ಕನ್ನಡಿಗರ ಮನಸಿಗೆ ಹೆಚ್ಚು ಹತ್ತಿರ ಅನ್ನುವುದನ್ನು ಹಲವು ಹಿಟ್ ಚಿತ್ರಗಳು ( ಈ ವರ್ಷ ಜಾಕಿ, ಸೂಪರ್, ಪಂಚರಂಗಿ, ಆಪ್ತರಕ್ಷಕ, ಪೃಥ್ವಿ, ಕೃಷ್ಣನ್ ಲವ್ ಸ್ಟೋರಿ) ಸಾಬೀತು ಮಾಡಿದ್ದರೂ ಹಿಂದಿ ಚಿತ್ರಗಳ ಬಗ್ಗೆ ಕನ್ನಡದ ಪ್ರಿಂಟ್ ಮತ್ತು ಎಲೆಕ್ಟ್ರಾನಿಕ್ ಮಾಧ್ಯಮದಲ್ಲಿ ನಡೆಯುತ್ತಿರುವ ಮಿತಿ ಮೀರಿದ ಪ್ರಚಾರ ಇಂದಿಗೂ ಹಾಗೆಯೇ ಸಾಗಿದೆ. ಮತ್ತಷ್ಟು ಓದು 












