ಭೈರಪ್ಪ ಮತ್ತು ತರ್ಲೆ ರಾಜ್ಯ ರಾಜಕೀಯ…
-ಶಂಶೀರ್, ಬುಡೋಳಿ
ಇವರೆಗೆ ನೀವು ಜೆಡಿಎಸ್, ಕಾಂಗ್ರೆಸ್ಸನ್ನು ಬಿಜೆಪಿ ತಮ್ಮ ತರಲೆ ಮನೋಸ್ಥಿತಿಯ ಮೂಲಕ ತರಾಟೆಗೆ ತೆಗೆದುಕೊಂಡಿರುವುದನ್ನು ನೋಡಿರಬಹುದು. ಆದರೆ ಈಗ ನಡೆದಿರುವುದು ವಿಶೇಷವೇನೂ ಅಲ್ಲವಾದರೂ ರಾಜಕೀಯ ವ್ಯಕ್ತಿಯಲ್ಲದ, ರಾಜಕೀಯ ಪರ ಮಾತನಾಡುವ ಸಾಹಿತಿಯೊಬ್ಬರು ತಮ್ಮ ಮನೋಸ್ಥಿತಿಯನ್ನು, ಕೋಮುವಾದಿ ಸಾಹಿತಿ ಎಂಬ ಹಣೆಪಟ್ಟಿ ಕಟ್ಟಿಕೊಂಡ ಕನ್ನಡ ಸಾಹಿತಿ ಎಸ್.ಎಲ್.ಭೈರಪ್ಪ ಹೊರಗೆಡುವ ಮೂಲಕ ಮತ್ತೊಮ್ಮೆ ಸುದ್ದಿಗೆ ಬಂದಿದ್ದಾರೆ. 
ಹೆಚ್ಚಿನದಾಗಿ ತಮ್ಮ ಕೃತಿಗಳಲ್ಲಿ ಜಾತಿ, ಧರ್ಮಗಳ ಬಗ್ಗೆ ಮಾತನಾಡುತ್ತಿದ್ದ ಭೈರಪ್ಪನವರು, ಏಕಾಏಕಿ ರಾಜ್ಯದಲ್ಲಿ ಅತಂತ್ರ ಸ್ಥಿತಿ ನಿರ್ಮಾಣವಾಗಿರುವುದರ ಹೊತ್ತಿನಲ್ಲಿ ಗುಜರಾತ್ ಮಾದರಿ ರಾಜಕೀಯವನ್ನು ಮುಂದಿಟ್ಟುಕೊಂಡು ಕರ್ನಾಟಕ ಸರಕಾರವನ್ನು ಬೆಂಬಲಿಸಬೇಕೆಂದು ಪರೋಕ್ಷವಾಗಿ ಕರೆ ಕೊಟ್ಟಿದ್ದಾರೆ. ತಾನು ವಾಸಿಸುವ, ಜನ್ಮ ತಾಳಿದ ಕರ್ನಾಟಕದ ರಾಜ್ಯದ ಜನರ ಮನಸ್ಥಿತಿಯನ್ನು ತರಲೆಗೆ ಹೊಲಿಸಿರುವ ಇಂತಹವರನ್ನು ಏನೆನ್ನಬೇಕು? ಕರ್ನಾಟಕ ರಾಜ್ಯದ ಜನರ ತರ‍್ಲೆ ಮನೋಸ್ಥಿತಿಯೇ ರಾಜ್ಯದ ಅಭಿವೃದ್ದಿಗೆ ಅಡ್ಡಿಯಾಗಿದೆ ಎಂದು ಇವರು ಹೇಳಿದ್ದು ತಪ್ಪಾಗಿದೆ ಎಂದೆನಿಸುತ್ತದೆ. ನಿಜವಾದ ಕಾರಣವೆಂದರೆ ರಾಜ್ಯ ಸಚಿವ ಸಂಪುಟದ ತರ‍್ಲೆ ಮನೋಸ್ಥಿತಿಯೆ ರಾಜ್ಯದ ಅಭಿವೃದ್ದಿಗೆ ಅಡ್ಡಿಯಾಗುತ್ತಿದೆ ಎಂದು ಹೇಳಬೇಕಾಗಿತ್ತು. ಆದರೆ ಭೈರಪ್ಪನವರು ಬೇಕೆಂತಲೂ ಅಥವಾ ಗೊತ್ತಿಲ್ಲದೆಯೋ ಇಂತಹ ಹೇಳಿಕೆ ಕೊಡುವ ಮೂಲಕ ಮತ್ತೊಮ್ಮೆ ತಮ್ಮ ಮನೋಸ್ಥಿತಿಯ ಅತಂತ್ರತೆಯನ್ನು ಬಿಚ್ಚಿಟ್ಟಿದ್ದಾರೆ ಎಂದೆನಿಸುತ್ತದೆ. ಮತ್ತಷ್ಟು ಓದು 




