ಕೋರೆ-ಷಡಕ್ಷರಿ-ಮಯ್ಯ ಶುರು ಮಾಡ್ತಾರಂತೆ ಸುವರ್ಣ ಕರ್ನಾಟಕ…ಹೌದಾ?
ಆತ್ರಾಡಿ ಸುರೇಶ ಹೆಗ್ಡೆ
ಹೌದು ಸುದ್ದಿಮನೆಯ ಸುತ್ತುಮುತ್ತಲಿಂದ, ಹೊಸ ಹೊಸ ಗಾಳಿ ಸುದ್ದಿಗಳು, ದಿನದಿಂದ ದಿನಕ್ಕೆ ಹೊಸ ಹೊಸ ಸಂಗತಿಗಳೊಂದಿಗೆ, ಯಾವುದೇ ಲಂಗು ಲಗಾಮಿಲ್ಲದೇ ತೇಲಿಬರುತ್ತಿವೆ.
ನಿನ್ನೆ ಸಂಜೆ ವಿಶೇಷವಾಗಿ ನನ್ನ ಕಿವಿಗಳಿಗೆ ಕೇಳಿಸಿದ ಪಿಸುಮಾತುಗಳ ಪ್ರಕಾರ, ವಿಜಯ ಕರ್ನಾಟಕದ ಮಾಜಿ ಪ್ರಧಾನ ಸಂಪಾದಕರಾದ ವಿಶ್ವೇಶ್ವರ ಭಟ್ಟರು ನವದೆಹಲಿಯಿಂದ ಬೆಂಗಳೂರಿಗೆ, ಹೊಸ ಸುದ್ದಿಯೊಂದನ್ನು, ಹೊಸ ಯೋಜನೆಯೊಂದರ ರೂಪುರೇಷೆಯನ್ನು ಗುಟ್ಟಾಗಿ ಹಿಡಿದುಕೊಂಡು ಬಂದಿರುತ್ತಾರಂತೆ.
ವಿಜಯ ಸಂಕೇಶ್ವರರ “ಆನಂದ ಕರ್ನಾಟಕ”ದ ಯೋಜನೆಗಳು ಪ್ರಾಥಮಿಕ ಹಂತದಲ್ಲಿ ಇರುವಾಗಲೇ, ಉದ್ಯಮಿ ಹಾಗೂ ಸಂಸದ ಪ್ರಭಾಕರ ಕೋರೆಯವರು ಮೀನಿಗೆ ಗಾಳ ಬೀಸಿದ್ದಾರೆ ಎನ್ನುವ ಸುದ್ದಿ ಇದೆ.
ಅಣಿಮುತ್ತುಗಳನ್ನು ದಿನವೂ ಉಣಬಡಿಸುವ ಷಡಕ್ಷರಿಯವರು ಮತ್ತು ಹೊಸ ಹೊಸ ಅಡುಗೆಗಳನ್ನು ಉಣಬಡಿಸುವ ಮಯ್ಯರವರನ್ನು ಸೇರಿಸಿಕೊಂಡು, ಕೋರೆಯವರು ಸುಮಾರು ೬೦-೭೦ ಕೋಟಿ ರೂಪಾಯಿಗಳ ಯೋಜನೆಯೊಂದನ್ನು ಭಟ್ಟರ ಮುಂದಿಟ್ಟಿದ್ದಾರಂತೆ. ಆ ಯೋಜನೆಯ ಪ್ರಕಾರ “ಸುವರ್ಣ ಕರ್ನಾಟಕ” ಅನ್ನುವ ಹೊಸ ದಿನಪತ್ರಿಕೆ ಈ ನಾಡಿನ ಪತ್ರಿಕಾ ರಂಗದಲ್ಲಿ ಸದ್ಯದಲ್ಲೇ ಸಂಚಲನ ಹೊರಡಿಸಲಿದೆಯಂತೆ. ಮತ್ತಷ್ಟು ಓದು 
೧೨ ವರ್ಷದ ಪೋರ ಅಲೆಕ್ಸ್ ಮಿಲ್ಲರ್ ನ ಕಥೆ
ಓಂಶಿವಪ್ರಕಾಶ್ ಎಚ್. ಎಲ್.
ಸ್ಕೂಲ್ ಮೆಟ್ಟಿಲೇರುತ್ತ, ಸಣ್ಣ ಪುಟ್ಟ ಲೆಕ್ಕ ಪಾಠಗಳನ್ನು ಕಲಿಯುತ್ತ, ೧೨ನೇ ವರ್ಷದ ಆಸುಪಾಸಿಗೆ ವಿಜ್ಞಾನ ಇತ್ಯಾದಿ ವಿಷಯಗಳ ಬಗ್ಗೆ ಕುತೂಹಲ ಬೆಳೆಸಿಕೊಳ್ಳುತ್ತ ಬೆಳೆದ ನನ್ನ, ನಿಮ್ಮಂತಹವರ ಕಥೆ ಹಳೆಯದಾಯಿತು ಬಿಡಿ. ವಿಶ್ವವ್ಯಾಪಿ ತನ್ನ ಚಾಚನ್ನು ಹರಿಸಿರುವ ಕಂಪ್ಯೂಟರು, ಕೀಲಿಮಣೆಯ ಮೇಲೆಯೇ ಸಂಪರ್ಕವನ್ನು ನೀಡುವ ಇಂಟರ್ನೆಟ್ ಇರುವ ಈ ಶತಮಾನದಲ್ಲಿ, ಅಪ್ಪ ಅಮ್ಮಂದಿರನ್ನೂ ಮೀರಿಸಿ ತಂತ್ರಜ್ಞಾನವನ್ನು ತಮ್ಮದಾಗಿಸಿಕೊಳ್ಳುತ್ತಿರುವ ಅನೇಕರು ಇಂದು ನಮ್ಮ ಸುತ್ತಮುತ್ತಲಿದ್ದಾರೆ. ವಿಸ್ಮಯಗಳ ಲೋಕದಲ್ಲಿ ಇದೂ ಒಂದು. ಆಗಾಗ್ಗೆ ಹೀಗೆ ನಮ್ಮ ಮಧ್ಯೆ ಕಂಡು ಬರುವ ಇಂತಹವರು ನಮ್ಮ ಹುಡುಗರಿಗೂ ಒಂದಿಷ್ಟು ಸ್ಪೂರ್ತಿಯಾಗಲಿ, ಜೊತೆಗೆ ವೇಳೆ, ತಂತ್ರಜ್ಞಾನ, ಸೌಲಭ್ಯಗಳ ಕೊರತೆ ಇವುಗಳ ಮಧ್ಯೆ ಇದು ನಮ್ಮವರಿಗೆ ಹೊರೆಯೂ ಆಗದಿರಲಿ.ಈ ಕಥೆ ೧೨ ವರ್ಷದ ಪೋರ ಅಲೆಕ್ಸ್ ಗ್ಲೆನ್ ನದ್ದು. ಪೋರನಾಗಿದ್ದರೂ ಈತ ಸಾಮಾನ್ಯನಲ್ಲ. ಇಂಟರ್ನೆಟ್ ಬ್ರೌಸ್ ಮಾಡಲು ಬಳಸುವ ಮೋಜಿಲ್ಲಾ ಫೈರ್ ಫಾಕ್ಸ್ ನ ಸುರಕ್ಷತೆಯ ಕೊರತೆಗಳನ್ನು ಹೆಕ್ಕಿ ತೆಗೆಯುವುದು ಈತನ ಹವ್ಯಾಸ. ಎರಡು ವಾರಗಳ ಇವನದೊಂದು ಹುಡುಕು ೩೦೦೦$ ಗಳನ್ನು ನಿರಾಯಾಸವಾಗಿ ಮೋಜಿಲ್ಲಾ ಫೌಂಡೇಶನ್ ನಿಂದ ಸಂಪಾದಿಸುವಂತೆ ಮಾಡಿದೆ.
ಸುರಕ್ಷತೆಗೆ ಪ್ರಾಶಸ್ತ್ಯ ನೀಡುವ ಸಾಪ್ಟ್ವೇರ್ ಕಂಪೆನಿಗಳು, ತಮ್ಮ ತಂತ್ರಾಂಶದ ಸುರಕ್ಷತೆಯ ಕೊರತೆಯ ಬಗ್ಗೆ ಸುಳಿವನ್ನು ನೀಡುವವರಿಗೆ ಡಾಲರುಗಳ ಮೊತ್ತದಲ್ಲಿ ಇನಾಮು ನೀಡುತ್ತವೆ. ಇದೇ ಯುನಿವರ್ಸಿಟಿ ಪ್ರೆಪ್ ಅಕ್ಯಾಡೆಮಿಯಲ್ಲಿ ೭ನೇ ಇಯತ್ತೆಯಲ್ಲಿ ವ್ಯಾಸಂಗ ಮಾಡುತ್ತಿದ್ದ ಅಲೆಕ್ಸ್ ಗೆ ಪ್ರೇರೇಪಣೆ. ತನ್ನ ಕಂಪ್ಯೂಟರಿನ ಬ್ರೌಸರ್ ನಲ್ಲೇ ಇರಬಹುದೇ ಕೊರತೆ ಎಂದು ಇವನು ಪ್ರತಿದಿನ ೯೦ ನಿಮಿಷಗಳಷ್ಟು ಹೊತ್ತು ನೆಡೆಸಿದ ಸಂಶೋಧನೆ ಕೊನೆಗೂ ಫಲ ನೀಡಿದೆ. ಕಂಪ್ಯೂಟರಿನ ಸೃತಿಯಲ್ಲಿನ ಒಂದು ದೋಷವನ್ನು ಕಂಡುಹಿಡಿದ ಈತನ ಸಾಧನೆ ಸಾಮಾನ್ಯವಾದುದ್ದಲ್ಲ ಮತ್ತು ಇಂತಹ ನ್ಯೂನ್ಯತೆಯನ್ನು ಕಂಡು ಹಿಡಿಯುವುದು ನಿಷ್ಣಾತರಿಗೇ ಸೈ ಎಂದು ಮೋಜಿಲ್ಲಾದ ಸೆಕ್ಯೂರಿಟಿ ಕಾರ್ಯಕ್ರಮದ ನಿರ್ವಾಹಕ ಹೇಳುತ್ತಾರೆ. ಮತ್ತಷ್ಟು ಓದು 




