ಸಾವನ್ನು ನಾಚಿಸಿದ ರ್ಯಾಂಡಿ!
– ಸುಪ್ರೀತ್.ಕೆ.ಎಸ್
‘ದಿ ಲಾಸ್ಟ್ ಲೆಕ್ಚರ್’ ಎಂಬ ಹೆಸರಿನಲ್ಲಿ ಕಾರ್ನೆಗಿ ಮೆಲ್ಲನ್ ವಿಶ್ವವಿದ್ಯಾಲಯ ಉಪನ್ಯಾಸ ಸರಣಿಯನ್ನು ಏರ್ಪಡಿಸುತ್ತದೆ. ವರ್ಷಕ್ಕೊಬ್ಬರ ಹಾಗೆ ತನ್ನ ವಿಶ್ವವಿದ್ಯಾಲಯದ ಅಧ್ಯಾಪಕರೊಬ್ಬರು ‘ಇದೇ ತಮ್ಮ ಬದುಕಿನ ಕಟ್ಟ ಕಡೆಯ ಉಪನ್ಯಾಸ’ ಎಂದು ಕಲ್ಪಿಸಿಕೊಂಡು ವಿದ್ಯಾರ್ಥಿಗಳಿಗೆ ಲೆಕ್ಚರ್ ಕೊಡಬೇಕು. ತಾವು ತಮ್ಮ ಬದುಕಿನ ಅಂತಿಮ ಘಟ್ಟದಲ್ಲಿ ನಿಂತಾಗ ತಮಗೆ ತಮ್ಮಿಡೀ ಬದುಕಿನಲ್ಲಿ ಬಹುಮುಖ್ಯವಾಗಿ ಕಾಣುವ ಸಂಗತಿಗಳ್ಯಾವುವು ಎಂಬ ವಿವೇಚನೆ ನಡೆಸಲು ಅಧ್ಯಾಕಪರಿಗೆ ಇದು ಅವಕಾಶ ಮಾಡಿಕೊಟ್ಟರೆ, ಅಕಾಡೆಮಿಕ್ ಮುಖವಾಡದಾಚೆಗಿನ ತಮ್ಮ ಲೆಕ್ಚರರ ವ್ಯಕ್ತಿತ್ವದ ಪರಿಚಯ ವಿದ್ಯಾರ್ಥಿಗಳಿಕ್ಕೆ ಸಿಕ್ಕುತ್ತದೆ ಎಂಬ ಉದ್ದೇಶ ವಿಶ್ವವಿದ್ಯಾಲಯದ್ದು .
ಸೆಪ್ಟೆಂಬರ್ ಹದಿನೆಂಟು ೨೦೦೭ರಂದು ‘ದಿ ಲಾಸ್ಟ್ ಲೆಕ್ಚರ್’ ಸರಣಿಯಲ್ಲಿ ಉಪನ್ಯಾಸ ನೀಡಿದವರು ಮೆಲಾನ್‌ನಲ್ಲಿ ಕಂಪ್ಯೂಟರ್ ಸೈನ್ಸ್ ಬೋಧಿಸುತ್ತಿದ್ದ ರಾಂಡಾಲ್ಫ್ ಫೆಡ್ರರಿಕ್ ಪೌಚ್. ಅವರ ಉಪನ್ಯಾಸ ಸಾಮಾನ್ಯವಾದುದಾಗಿರಲಿಲ್ಲ. ಉಳಿದೆಲ್ಲಾ ಅಧ್ಯಾಪಕರು ಅದು ತಮ್ಮ ಬದುಕಿನ ಕಟ್ಟ ಕಡೆಯ ಉಪನ್ಯಾಸ ಎಂದು ‘ಕಲ್ಪಿಸಿ’ಕೊಂಡು ಮಾತಾಡಿದ್ದರೆ ರ್‍ಯಾಂಡಿಗೆ ಅದು ನಿಜಕ್ಕೂ ಕಟ್ಟ ಕಡೆಯ ಉಪನ್ಯಾಸವಾಗಿತ್ತು. ಭಾಷಣ ನೀಡುವ ಹೊತ್ತಿಗೆ ಆತ ದೇಹದಲ್ಲಿ ಮನೆ ಮಾಡಿಕೊಂಡಿದ್ದ ಯಕೃತ್ತಿನ ಕ್ಯಾನ್ಸರ್ ಅಂತಿಮ ಘಟ್ಟದಲ್ಲಿತ್ತು. ಆತನಿಗೆ ಹೆಚ್ಚೆಂದರೆ ಆರು ತಿಂಗಳು ಬದುಕುವ ಅವಕಾಶವನ್ನು ನೀಡಿತ್ತು ಕ್ಯಾನ್ಸರ್. ಸಾವಿನ ಸಮ್ಮುಖದಲ್ಲಿ ನಿಂತಂತೆ ಕಲ್ಪಿಸಿಕೊಂಡು ಉಪನ್ಯಾಸ ಕೊಡುವುದು ಬೇರೆ. ಆದರೆ ಸಾವು ಡೇಟು ಕೊಟ್ಟು ಹೋದ ನಂತರ ತನ್ನ ಬದುಕಿನ ಬಗ್ಗೆ ಮಾತನಾಡುವುದು ಬೇರೆ.ಹಾಗೆ ಮಾತಾಡುವ ಮನುಷ್ಯನಲ್ಲಿ ಅದಮ್ಯ ಜೀವನೋತ್ಸಾಹ, ಆತ್ಮವಿಶ್ವಾಸ ಇರಬೇಕಾಗುತ್ತದೆ. ಅವೆಲ್ಲವೂ ರ್‍ಯಾಂಡಿಯಲ್ಲಿದ್ದವು. ಮತ್ತಷ್ಟು ಓದು 





