ಜಗನ್ನಾಥ್ ಶಿರ್ಲಾಲ್

ತುಳುನಾಡು ಸಾಂಸ್ಕೃತಿಕ ಅನನ್ಯತೆಯ ನಾಡು. ದೈವ, ದೇವರುಗಳ ಸಮಾಗಮದ ಬೀಡು. ಇಲ್ಲಿನ ಪರಿಸರ, ಪ್ರಾಣಿ, ಪಕ್ಷಿ, ಗಿಡ, ಮರ, ಸ್ಥಳ, ವೀರ ಪುರುಷರ, ಆರಾಧನೆಯ ದೈವಿಕ ನೆಲೆಯಾಗಿದೆ. ಪ್ರತಿಯೊಂದು ನಂಬಿಕೆ ನಡವಳಿಕೆಗಳು ಜಾನಪದದ ಆಧಾರದಲ್ಲಿ ಹೆಣೆದಿರುವುದು ತುಳುನಾಡ ಸಂಸ್ಕೃತಿಯ ವೈಶಿಷ್ಟ್ಯ.
ವ್ಯಕ್ತಿಗಳು ತನ್ನ ಜೀವಿತ ಕಾಲದಲ್ಲಿ ಅಸಾಮಾನ್ಯ ರೀತಿಯಲ್ಲಿ ಬಾಳಿ ಬದುಕಿ ಬಲಿದಾನವಾದಾಗ ಅವರನ್ನು ದೈವತ್ವ ಮಟ್ಟಕ್ಕೆ ಏರಿಸಿ ಪೂಜಿಸುವ ಪದ್ಧತಿ ನಮ್ಮ ಸಂಸ್ಕೃತಿಯಲ್ಲಿ ಕಂಡುಬರುತ್ತದೆ. ಅತಿಮಾನುಷ ಶಕ್ತಿಗಳನ್ನು ಪೂಜಿಸಲು ಅತ್ತ ದೇವಸ್ಥಾನವು ಅಲ್ಲದ ಇತ್ತ ಭೂತ ಸ್ಥಾನವೂ ಅಲ್ಲದ ಒಂದು ವಿಶಿಷ್ಟ ಪೂಜಾ ಕೇಂದ್ರವಾಗಿ ‘ಗರೋಡಿ’ ಎಂಬ ದೇಗುಲವು ನಿರ್ಮಾಣವಾದುದು ಜನರ ಭಾವುಕ ಪ್ರಜ್ಞೆಗೆ ತಲೆಬಾಗಲೇ ಬೇಕಾದುದು. ಈ ಮೂಲಕ ಇಡೀ ಗ್ರಾಮ ವ್ಯವಸ್ಥೆಯಲ್ಲಿ ಆ ಗರೋಡಿಗೆ ಸಂಬಂಧಿಸಿದ ಸಮುದಾಯದ ಜನರನ್ನು ಒಂದುಗೂಡಿಸುವಲ್ಲಿ ದೈವ ಭಕ್ತಿಯು ಕಾರಣವಾಗಿದೆ. ಅಲ್ಲದೆ ಪ್ರಸ್ತುತ ಆಧುನಿಕ ಜಗತ್ತಿನಲ್ಲಿ ಸಮುದಾಯಗಳ ಮಧ್ಯೆ ಸಾಮರಸ್ಯ ಮೂಡಿಸಲು ಮತ್ತು ಪಾಲ್ಗೊಳ್ಳುವಿಕೆಗೆ ಗರೋಡಿಗಳು ಒಂದು ಕಾರಣವಾಗಿದೆ.
ಮತ್ತಷ್ಟು ಓದು 