ABVP ಸಮಾವೇಶಕ್ಕೆ ಹಿಂದಿ ಬ್ಯಾನರ್ ಯಾಕೆ?
ವಸಂತ ಶೆಟ್ಟಿ
ಮೊನ್ನೆ ಬಸವನಗುಡಿಯ ಟಾಗೋರ್ ಸರ್ಕಲ್ ಬಳಿ ಹೋಗುವಾಗ ಈ ಬ್ಯಾನರ್ ಕಂಡಿತು. ಇದೇನಪ್ಪ ಇದು ಅಂತ ನೋಡಿದ್ರೆ, ಬೆಂಗಳೂರಿನಲ್ಲಿ ನಡೆಯುತ್ತಿರುವ ABVP ಯವರ ಯಾವುದೋ ವಿಧ್ಯಾರ್ಥಿ ಸಮಾವೇಶದ ಬ್ಯಾನರ್, ಅದು ಪೂರ್ತಿ ಹಿಂದಿಯಲ್ಲಿ !!. ಅಲ್ಲಲ್ಲಿ…
ಮೊನ್ನೆ ಬಸವನಗುಡಿಯ ಟಾಗೋರ್ ಸರ್ಕಲ್ ಬಳಿ ಹೋಗುವಾಗ ಈ ಬ್ಯಾನರ್ ಕಂಡಿತು. ಇದೇನಪ್ಪ ಇದು ಅಂತ ನೋಡಿದ್ರೆ, ಬೆಂಗಳೂರಿನಲ್ಲಿ ನಡೆಯುತ್ತಿರುವ ABVP ಯವರ ಯಾವುದೋ ವಿಧ್ಯಾರ್ಥಿ ಸಮಾವೇಶದ ಬ್ಯಾನರ್, ಅದು ಪೂರ್ತಿ ಹಿಂದಿಯಲ್ಲಿ !!. ಅಲ್ಲಲ್ಲಿ ಕನ್ನಡದಲ್ಲೂ ಬ್ಯಾನರ್ ಕಂಡಿದ್ದೆ, ಆದರೆ ಕರ್ನಾಟಕದಲ್ಲಿ ಹಿಂದಿ ಬ್ಯಾನರ್ ಯಾವ ಪುರುಷಾರ್ಥಕ್ಕಾಗಿ ಹಾಕಿದ್ದಾರೆ ಅಂತ ಗೊತ್ತಾಗಲಿಲ್ಲ.
ಎಲ್ಲ ಓಕೆ, ಹಿಂದಿ ಬ್ಯಾನರ್ ಯಾಕೆ?
ಸಮಾವೇಶ ಮಾಡೋದು, ಜನರನ್ನ ಸೇರಿಸೋದು, ತಮ್ಮ ನಿಲುವನ್ನ ಹೇಳಿಕೊಳ್ಳೊ ಅವಕಾಶ ಎಲ್ಲ ಸಂಘಟನೆಗಳಿಗೂ ಇದೆ. ಅದನ್ನೇ ABVPನೂ ಮಾಡಿದ್ರೆ ತಪ್ಪೇನಿಲ್ಲ, ಆದರೆ ಇದೇ ನೆಪದಲ್ಲಿ ಬೆಂಗಳೂರಲ್ಲಿ ಎಲ್ಲೆಡೆ ಹಿಂದಿ ಬ್ಯಾನರ್ ಹಾಕುವ ಉದ್ದೇಶವೇನು? ’ಹಿಂದಿ’ಗೂ ಬೆಂಗಳೂರಿಗೂ, ಇಲ್ಲವೇ ಕರ್ನಾಟಕಕ್ಕೂ ಏನ್ ಸಂಬಂಧ? ಸಮಾವೇಶಕ್ಕೆ ಬರೋ ಪರಭಾಷಿಕರಿಗಾಗಿ ಇಂಗ್ಲಿಷ್ ಅಲ್ಲಿ ಮಾಹಿತಿ, ಕನ್ನಡಿಗರಿಗಾಗಿ ಕನ್ನಡದಲ್ಲಿ ಮಾಹಿತಿ ಸಾಕಾಗಲ್ವಾ? ಅದ್ಯಾಕೆ ಬೇಡದಿದ್ದರೂ ’ಹಿಂದಿ’ನಾ ಕರ್ನಾಟಕಕ್ಕೆ ತೂರಿಸೋದು? ಇದೇ ಅಲ್ವಾ ಹಿಂದಿ ಹೇರಿಕೆ ಅಂದರೆ ? ಹಿಂದಿ ರಾಷ್ಟ್ರ ಭಾಷೆ ಅನ್ನೋ ಸುಳ್ಳನ್ನೇ ಸಾವಿರದ ಒಂದನೇ ಸಾರಿ ಕನ್ನಡಿಗರ ತಲೆಗೆ ತುಂಬೋದು ಇದರ ಹಿಂದಿನ ಉದ್ದೇಶವಾ? ಪಾಟ್ನಾದಲ್ಲೋ, ಲಕ್ನೋದಲ್ಲೋ ನಡೆಯುವ ಸಮಾವೇಶದಲ್ಲೂ ಹೀಗೆ ಕನ್ನಡ ಬ್ಯಾನರ್ ಹಾಕ್ತಾರಾ? ನಿಜವಾದ ರಾಷ್ಟ್ರವಾದಿಗಳು ಅನ್ನೋರು ರಾಷ್ಟ್ರದ ಎಲ್ಲ ಭಾಷೆಗಳನ್ನು ಸಮಾನವಾಗಿ ಕಾಣಬೇಕಿತ್ತಲ್ವಾ? ಅದ್ಯಾಕೆ ಒಂದು ಕಣ್ಣಿಗೆ ಬೆಣ್ಣೆ, ಒಂದು ಕಣ್ಣಿಗೆ ಸುಣ್ಣ ಅನ್ನೋ ಧೋರಣೆ? ಭಾರತದ ಭಾಷಾ ವೈವಿಧ್ಯತೆಯೇ ದೇಶದ ಏಕತೆಗೆ ಭಂಗ ತರುತ್ತಿರುವ ಅಂಶ, ಆದ್ದರಿಂದ ಅವೆಲ್ಲವನ್ನು ಗೌಣವಾಗಿಸಿ, ಹಿಂದಿಯೊಂದನ್ನೇ ದೇಶದ ಭಾಷೆ ಆಗಿಸಿ ಬಿಟ್ರೆ ದೇಶದಲ್ಲಿ ಏಕತೆ ತುಂಬಿ ತುಳುಕುತ್ತೆ ಅನ್ನೋ ಭ್ರಮೆಯಲ್ಲಿರುವವರಿಂದ ಇನ್ನೇನು ತಾನೇ ನಿರೀಕ್ಷಿಸಲಾದೀತು ಅನ್ನಿಸುತ್ತೆ.





ಇಂಗ್ಲಿಷ್ ಇರ್ಲಿ,ಹಿಂದಿ ಬೇಡ ಅನ್ನೋದು ಮೂರ್ಖತನ. ನೀವೇ ಹೇಳಿದಂತೆ ಬೆಂಗಳೂರಿನಲ್ಲಿರೋ ಕನ್ನಡೇತರರಿಗೆ ಹಾಕಿದ್ದಿರಬಹುದು. ಕನ್ನಡದಲ್ಲಿ ಹಾಕದೇ ಬರೇ ಹಿಂದೀನಲ್ಲಿ ಹಾಕಿದ್ರೆ ನಿಮ್ಮ ಮಾತು ಸರಿ.
ನೀವು ಬರ್ದಿರೋದ್ರಲ್ಲಿ ಇರೋ ಕಳಕಳಿ ನಂಗೂ ಇದೆ. ಆದರೆ ಅದಕ್ಕೆ ಕೊಟ್ಟಿರೋ ಅಭಾವಿಪ ಉದಾಹರಣೆ ಮಾತ್ರ ಸರಿ ಕಾಣುವುದಿಲ್ಲ ನನಗೆ. ಹಾಗೆ ನೋಡಿದ್ರೆ ಕನ್ನಡಕ್ಕೆ ಹಿಂದಿಗಿಂತ ಇಂಗ್ಲೀಷ್ ನದ್ದೇ ಹೆಚ್ಚು ಅಪಾಯ. ತನ್ನ ತಟ್ಟೇಲಿ ಹೆಗ್ಗಣ (ಇಂಗ್ಲಿಷ್) ಬಿದ್ದಿರೋವಾಗ ಪಕ್ಕದೋನ ತಟ್ಟೇಲಿ ಬಿದ್ದಿರೋ ನೊಣಾನ (ಹಿಂದಿ) ತೋರ್ಸ್ದಂಗೆ ಆಯ್ತು ನಿಮ್ ವಾದ.
ಮಹೇಶ್,
ವಸಂತ್ ಅವರ ಕಳಕಳಿ-ವಿರೋಧ ಇರುವುದು ‘ಹಿಂದಿ ಹೇರಿಕೆ’ಯ ವಿರುದ್ಧ.’ಹಿಂದಿ’ ಅನ್ನೋ ಭಾಷೆಯ ಮೇಲಲ್ಲ.ಬಹಳಷ್ಟು ಜನ ಇಂಗ್ಲೀಶ್ ಓಕೆ ಅನ್ನೋದೇ ಆದ್ರೆ ಹಿಂದಿ ಡಬಲ್ ಓಕೆ ಆಗ್ಬೇಕು ಅನ್ನೋ ಧಾಟಿಲಿ ಮಾತಾಡೋಕೆ ಇದು ಒಂದು ಕಾರಣವಿರಬಹುದು!, ಅಷ್ಟಕ್ಕೋ ಬೈಯಬೇಕಾಗಿರುವುದು ಇಂಗ್ಲೀಷನಲ್ಲ, ಸ್ವಾತಂತ್ರ್ಯ ಬಂದ ನಂತರ ಅವರವರ ಭಾಷೆಯನ್ನೇ ಅನ್ನ ಕೊಡುವ ಭಾಷೆಯನ್ನಾಗಿ ಬದಲಾಯಿಸಲು ಸೋತ ದೂರದೃಷ್ಟಿಯಿಲ್ಲದ,imperialism ಮನಸ್ಸಿನ ರಾಜಕಾರಣಿಗಳನ್ನ.ಬಹುಷಃ ನೀವು ನನ್ನ ‘ರಾಷ್ಟ್ರ ಭಾಷೆಯಿಲ್ಲದ ರಾಷ್ಟ್ರದಲ್ಲಿ’ ಲೇಖನ ಓದಿದ್ದಿರಿ ಅದರಲ್ಲಿ ಇದೆ ವಿಷಯವಾಗಿ ಬರೆದಿದ್ದೇನೆ ನಾನು.
ಹಿಂದಿಯನ್ನೇ ಮೆರೆಸಿ ಕನ್ನಡವನ್ನ ಮೂಲೆ ಗುಂಪು ಮಾಡುವುದೇಕೆ? ಅಷ್ಟಕ್ಕೂ ABVP ಸಮಾವೇಶಕ್ಕೆ ಬರಿ ಹಿಂದಿಯವರು ಮಾತ್ರ ಬಂದಿದ್ರ?, ಬೇರೆ ರಾಜ್ಯದಿಂದ ಬಂದಿರ್ಲಿಲ್ವಾ? ಹಿಂದಿ ಈ ದೇಶದ ಬಹುಸ್ನ್ಖ್ಯತರಿಗೆ ಗೊತ್ತು ಅನ್ನೋದೇ ಸುಳ್ಳು.ಹಿಂದಿ ಉತ್ತರ ಭಾರತದ ಒಂದು ಭಾಷೆ.ಭಾರತ ಅನ್ನೋದೇಶ ಕೇವಲ ಉತ್ತರದಿಂದ ಆಗಿಲ್ಲ ಇಲ್ಲಿ ದಕ್ಷಿಣ,ಪಶ್ಚಿಮ,ಪೂರ್ವ ಸಹ ಇವೆ. ಕನ್ನಡ ಪ್ರೀತಿ ತೋರಿದರೆ ಅದು ‘ಪ್ರಾದೇಶಿಕತೆ’. ಹಿಂದಿ ಅಂದ್ರೆ ‘ರಾಷ್ಟ್ರೀಯತೆ’ ಅನ್ನೋ ರೀತಿಯಲ್ಲಿ ನಮ್ಮ ಜನರನ್ನ ತಯಾರು ಮಾಡಿರೋ ಸರ್ಕಾರ,ವ್ಯವಸ್ತೆ,ಸಂಘಟನೆಗಳಿಗೆ ಧಿಕ್ಕಾರವಿರಲಿ.
ಇಂಗ್ಲೀಶ್ ಅನ್ನು ಬಯ್ಯುತ್ತ,ಹಿಂದಿಯನ್ನ ಭಾರತದ ಇತರ ಭಾಷೆಗಳ ಮೇಲೆ ಏರಿ ಅದನ್ನು ಅವನತಿಗೆ ತಳ್ಳಿದರೆ, ಸ್ವತಂತ್ರ ಭಾರತಕ್ಕೂ,ಬ್ರಿಟಿಷರ ಭಾರತಕ್ಕೂ ಯಾವ ವ್ಯತ್ಯಾಸವಿರುತ್ತದೆ?…ನಾನು ಕೂಡ ABVP ಯಲ್ಲಿ ಇದ್ದವನೇ,ಕಾಲೇಜಿನ ದಿನಗಳಲ್ಲಿ ಅನಾವಶ್ಯಕವಾಗಿ ಫೀಸು ಜಾಸ್ತಿಯಾದಾಗ ಅವ್ರ ಬಾವುಟವಿಡಿದು ಪ್ರತಿಭಟಿಸಿದ್ದೂ ಇದೆ.ಆದರೆ,ಕಣ್ಣ್ಮುಚ್ಚಿ ಯಾರನ್ನು ಯಾವುದನ್ನು ಒಪ್ಪಬಾರದು ಅನ್ನುವುದು ನನ್ನ ನೀತಿ. ಪೂರ್ವಾಗ್ರಹ ಪೀಡಿತರಾಗದೆ ಯೋಚಿಸುವ ಸರದಿ ನಿಮ್ಮದು.
ರಾಕೇಶ್ ಶೆಟ್ಟಿ 🙂
ಹಿಂದಿ ಮಾತ್ರ ರಾಷ್ಟ್ರೀಯ ಭಾಷೆ ಅಂತ ನಾನೂ ಹೇಳುತ್ತಿಲ್ಲ. ನಾನು ಮೊದ್ಲೇ ಹೇಳಿದಂತೆ ಹಿಂದಿಯಲ್ಲಿ ಮಾತ್ರ ಬ್ಯಾನರ್ ಹಾಕಿದ್ದಿದ್ರೆ ಅದು ತಪ್ಪು ಅಂತ ಹೇಳಬಹುದಿತ್ತು. ಇನ್ನು ವಸಂತ್ ಅವರ ವಾದ – ಹೊರನಾಡಿನವರಿಗೆ ಬೇಕಿದ್ದರೆ ಇಂಗ್ಲಿಷ್ ನಲ್ಲಿ ಹಾಕಬಹುದಿತ್ತಲ್ಲ – ಅನ್ನುವುದು ನನಗೆ ಶುಧ್ಧ ಹಿಂದಿ ದ್ವೇಷ ಕಾಣುತ್ತದೆಯೇ ಹೊರತು ಕನ್ನಡ ಕಳಕಳಿಯೇನೂ ಕಾಣುತ್ತಿಲ್ಲ.
For those outsider students, banner in English would do. What is the need for Hindi? Do we need a big door for big cat and a small door for small cat? Can’t the small cat too go in the big door?
There is nothing common to Hindi and Kannada. Even simple things such as gender, sentence construction and word formation are absolutely different in these two languages. Ditto for Kannada and English. Realize that Hindi and English are the…refore equidistant from Kannada.
However, English’s got bread attached to it (which the Hindiwallas know too) and Hindi’s got stinking North Indian Imperialism attached to it and absolutely no bread.
There is nothing in Hindi which would make it closer to a Kannadiga than English. This is a fact known to any linguist worth his name. I do not consider Hindi as “one of our own languages”. I don’t have more than one language to call my own.
Embracing English is not slavery. It used to be branded as slavery in the times of the struggle for Indian independence to win Indian hearts and unite India against the British. Those days are gone. We don’t need to unite against the British. Today, the enemy has changed. The enemy now is poverty, not the British. Even our own Hindi friends embrace English when it comes to bread. They themselves don’t believe Hindi can bring them bread.
People might argue that Hindi should be chosen because it’s the single largest spoken language is flawed to the core. It’s highly undemocratic to suppress Kannada because it’s not the single largest spoken language. Now, I see people crying… out “No, No, I don’t mean Kannada should be suppressed”, but that’s exactly what happens when the language of a people is sidelined by the system. Yes, it is nothing but suppressing Kannada because once you call Hindi the link-language, you start giving jobs to North Indians, you start giving them higher salaries because they can speak Hindi, you pass on the feeling that Kannadigas are inferior beings – all even if that is not your intention!
{Embracing English is not slavery} ಇದಕ್ಕಿಂತ ತಮಾಶೆ ಬೇರೊಂದಿಲ್ಲ. ಯಾವ ಲಾಜಿಕ್ಕಿಂದ ನೋಡಿದರೂ ಇಂಗ್ಲಿಷ್ ಹಿಂದಿಗಿಂತ ಒಂದು ಪೆಟ್ಟು ಹೆಚ್ಚೇ ಕೊಟ್ಟಿದೆ ಕನ್ನಡಕ್ಕೆ. ನಿಮ್ಮ ವಾದಕ್ಕೆ ಏನೆನ್ನಬೇಕೋ ಗೊತ್ತಾಗುತ್ತಿಲ್ಲ. ನನಗಂತೂ ಒಪ್ಪುವುದು ಕಷ್ಟ ನಿಮ್ಮ ವಾದ.
ಇಂಗ್ಲಿಷ್ ಅನ್ನು ಜನ ಸುಮ್ ಸುಮ್ನೆ ಅಪ್ಪಿಕೊಂಡಿಲ್ಲ. ಅದು ಅನ್ನ ಕೊಡ್ತಿದೆ, ಒಳ್ಳೆ ಬದುಕು ಕೊಡ್ತಿದೆ ಅನ್ನೋ ಕಾರಣಕ್ಕೆ ಅದಕ್ಕೆ ಅಷ್ಟು ಜನಮನ್ನಣೆ ಸಿಗ್ತಿರೋದು. ಕನ್ನಡವೂ ಅಂತಹ ಸಾಧ್ಯತೆ ಕೊಡ ಮಾಡಿದಾಗ ಇಂಗ್ಲಿಷ್ ಮೇಲಿನ ಈ ಮಮಕಾರ ಕಮ್ಮಿ ಆದೀತು.
ಹಿಂದಿ ಏನ್ ಕೊಟ್ಟಿದೆ ಕನ್ನಡಿಗರಿಗೆ? ಒಂದಿಷ್ಟು ಕಳಪೆ ಬಾಲಿವುಡ್ ಸಿನೆಮಾ ಬಿಟ್ರೆ ಇನ್ನೇನ್ ತಾನೇ ಕೊಡೊ ಅರ್ಹತೆ ಅದಕ್ಕಿದೆ ಹೇಳಿ ?
ಹಿಂದಿ ಬಗ್ಗೆ ನನಗೆ ಪ್ರೀತಿನೂ ಇಲ್ಲ, ದ್ವೇಷಾನೂ ಇಲ್ಲ. I am agnostic to hindi. ಹಿಂದಿಯಲ್ಲೂ ಬದುಕಿನ ವಿದ್ಯೆ ಬರಬೇಕು. ಹಿಂದಿನೂ ಬೆಳಿಬೇಕು ಆದ್ರೆ ಇಲ್ಲಲ್ಲ ಆ ನುಡಿಯಾಡುವ ಜನರಿರೋ ಭಾಗದಲ್ಲಿ.
ಸುಮ್ನೆ ಒಂದ್ ಸಲಿ ಕರ್ನಾಟಕದ ರೈಲ್ವೇ ಇಲಾಖೆಯಲ್ಲಿ ತುಂಬಿರೋ ಹಿಂದಿ ಭಾಷಿಕರ ಸಂಖ್ಯೆಯನ್ನು ಕನ್ನಡಿಗರ ಸಂಖ್ಯೆಯನ್ನು ಹೋಲಿಸಿ ನೋಡಿ, ಹಿಂದಿ ವಲಸೆ ಎಷ್ಟಾಗಿದೆ ಎಂಬುದು ನಿಮ್ಮ ಗಮನಕ್ಕೆ ಬಂದೀತು. ಅದಕ್ಕೆ ಮುಖ್ಯ ಕಾರಣವೇ ಹಿಂದಿಯಲ್ಲೇ ಪರೀಕ್ಷೆ ಬರಿಬೇಕು, ಹಿಂದಿ ಗೊತ್ತಿದ್ರೆ ಮಾತ್ರ ಕೆಲಸ ಅನ್ನುವ imperialistic ಧೋರಣೆಯಿಂದಲೇ ಇದಾಗಿದ್ದು. ಹಿಂದಿ ಹೇರಿಕೆಯಿಂದ ಕರ್ನಾಟಕಕ್ಕೆ ನಿರಂತರ ಹಿಂದಿ ಭಾಷಿಕರ ವಲಸೆ, ಹಿಂದಿ ಚಿತ್ರಗಳ ಮೂಲಕ ಸಾಂಸ್ಕೃತಿಕ ದಾಳಿ, ಹಿಂದಿ ಮೇಲು, ಕನ್ನಡ,ತುಳು, ಕೊಡವದಂತ ಈ ನೆಲದ ನುಡಿಗಳು ಕೀಳು ಅನ್ನುವ ಮನೋಭಾವನೆ ನಾಡಿನ ಯುವ ಜನಾಂಗದಲ್ಲಿ ಬಿತ್ತಿರೋದು ಮಾತ್ರವೇ ಕರ್ನಾಟಕಕ್ಕೆ ಆಗಿರುವ ಅತಿ ದೊಡ್ಡ ಲಾಭ.
ಇವತ್ತು ನೀವು ಬಳಸೋ ಮೊಬೈಲ್ ಫೋನ್, ಇಂಟರ್ ನೆಟ್, ಟಿವಿ ಯಿಂದು ಹಿಡಿದೆ ತಂತ್ರಜ್ಞಾನದ ಎಲ್ಲ ಹೊಸ ಸಾಧ್ಯತೆಯನ್ನು ಕೊಟ್ಟಿರುವುದು ಇಂಗ್ಲಿಷ್ ಹೊರತು ಹಿಂದಿಯೇನಲ್ಲ. ಇಂಗ್ಲಿಷ್ ಅಲ್ಲಿರುವ ಆ ಜ್ಞಾನ ಸಾಧ್ಯತೆಯನ್ನು ನಮ್ಮ ನಮ್ಮ ನುಡಿಯಲ್ಲಿ ಸಾಧ್ಯವಾಗಿಸಿದರೆ ಇಂಗ್ಲಿಷ್ ಮೇಲಿನ ವ್ಯಾಮೋಹ ತಾನೇ ತಾನಾಗಿ ಕಮ್ಮಿ ಆಗುತ್ತೆ. ಬದುಕಿನ ವಿದ್ಯೆಯ ಈ ಚರ್ಚೆ ಇರುವುದೇ ಇಂಗ್ಲಿಷ್ ಮತ್ತು ಕನ್ನಡದ ನಡುವೆ, ಇನ್ನೂ ಹಿಂದಿಯೆಲ್ಲಿಂದ ಬಂತು ? ಯಾಕಾಗಿ ಬೇಕು?
ಕನ್ನಡಿಗನ ರಾಷ್ಟ್ರೀಯತೆಗೆ ಕನ್ನಡವೊಂದೇ ಸಾಕು.. ಇನ್ನಾವುದೋ ನುಡಿ ಕಲಿತು ನಾನು ಭಾರತೀಯನಾಗಬೇಕಿಲ್ಲ.
ಕನ್ನಡಿಗರಿಗಾಗಿ ಕನ್ನಡ, ಬೇರೆ ಬೇರೆ ನುಡಿಯಾಡುವ ಎಲ್ಲ ಕನ್ನಡೇತರರಿಗಾಗಿ ಇಂಗ್ಲಿಷ್ ಅಲ್ಲಿ ಹಾಕಿ ಅನ್ನೋದು ಅದು ಹೇಗೆ ಹಿಂದಿ ದ್ವೇಷ ಆಗುತ್ತೆ ಸಾರ್? ಹಿಂದಿಗೂ ಕರ್ನಾಟಕಕ್ಕೂ ಏನ್ ಸಂಬಂಧ ? ಈ ಸಮಾವೇಶಕ್ಕೆ ಕನ್ನಡಿಗರನ್ನು ಬಿಟ್ರೆ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಬಂದಿದ್ದವರು ಮಹಾರಾಷ್ಟ್ರ, ಆಂಧ್ರ, ಕೇರಳದಂತ ಪಕ್ಕದ ರಾಜ್ಯದ ವಿಧ್ಯಾರ್ಥಿಗಳು. ಹಾಗಿದ್ರೆ ಆ ರಾಜ್ಯದ ಭಾಷೆಯಲ್ಲಿ ಬ್ಯಾನರ್ ಹಾಕಿ, ಆ ರಾಜ್ಯದಲ್ಲೂ ಮಾತನಾಡದ ಹಿಂದಿಯಲ್ಲೇಕೆ ಸ್ವಾಮಿ? ಇದನ್ನೇ ನಾನು ಹಿಂದಿ ಹೇರಿಕೆ ಎಂದು ಕರೆಯುತ್ತಿರುವುದು. ನಿಮಗೆ ಹಿಂದಿ ಬಗ್ಗೆ ಸಾಫ್ಟ್ ಕಾರ್ನರ್ ಇರಬಹುದು, ಹಾಗೆಂದ ಮಾತ್ರಕ್ಕೆ ಹಿಂದಿ ಹೇರಿಕೆಯನ್ನು ಪ್ರಶ್ನಿಸುವವರೆಲ್ಲ ಹಿಂದಿ ದ್ವೇಷಿಗಳಾಗಿ ಕಂಡರೆ ನಾನು ನಿಸ್ಸಹಾಯಕ 🙂
ಮಹೇಶ್,
ಮೊದಲಿಗೆ ನಿಮ್ಮ ವಾಕ್ಯ “ಹಿಂದಿ ಮಾತ್ರ ರಾಷ್ಟ್ರೀಯ ಭಾಷೆ ಅಂತ ನಾನೂ ಹೇಳುತ್ತಿಲ್ಲ”,ಹಿಂದಿ,ಕನ್ನಡವು ಸೇರಿದಂತೆ ಈ ರಾಶ್ಟ್ರಕ್ಕೆ ರಾಶ್ಟ್ರಭಾಷೆಯೇ ಇಲ್ಲ ಅನ್ನುವುದು ನಿಮಗೆ ಗೊತ್ತೇ ಇದೆ.ಸುಳ್ಳು ಹೇಲಿ ಹಿಂದಿಯನ್ನ ರಾಷ್ಟ್ರಭಾಷೆ ಅಂತ ಮಕ್ಕಳಿಗೆ ಹೇಳಿಕೊಟ್ಟು ಆ ಮೂಲಕ ಹಿಂದಿ ಹೇರಿಕೆ ಮಾಡುವ ಒಳಸಂಚಿನ ಭಾಗವಷ್ಟೆ ಇದು.
ವಸಂತ್ ಹೇಳಿದಂತೆ,
ಅ.ಭಾ.ವಿ.ಪಾ ಕ್ಕೆ ಹೊರ ರಾಜ್ಯದಿಂದ ಕೇವಲ ಹಿಂದಿ ಮಾತಡೂವವರು ಬಂದಿದ್ದರಾ?, ಬೇರೆ ರಾಜ್ಯದ ಜನಕ್ಕೆ ಇವರ ಹಿಂದಿ ಅರ್ಥವಾಯಿತಾ? ಅನ್ನೋದೆ ಪ್ರಶ್ನೆ.
ಇಂಗ್ಲೀಷರಿದ್ದಾಗ ಇಂಗ್ಲೀಶನ್ನ ನಮ್ಮ ಮೇಲೆ ಹೇರಿದ್ರು,ಈಗ ಸ್ವತಂತ್ರ ಭಾರತದಲ್ಲಿ ಹಿಂದಿ ಹೇರುತಿದ್ದಾರೆ!
ವಸಂತ್,
<>
ಈ ಮಾತಿನಿಂದ ಅಲ್ಲಲ್ಲಿ ಕನ್ನಡದಲ್ಲೂ “ಬ್ಯಾನರ್” ಗಳಿದ್ದವು ಅನ್ನುವುದು ತಿಳಿದುಬರುತ್ತಿದೆ..
ಕನ್ನಡದಲ್ಲೂ ಇದ್ದು, ಹಿಂದೀಯಲ್ಲೂ ಇದ್ದು, ಆಂಗ್ಲದಲ್ಲೂ “ಬ್ಯಾನರ್” ಗಳು ಇದ್ದರೆ, ಅದು ಒಂದು ಭಾಷೆಯ ಹೇರಿಕೆ ಆಗುತ್ತದೆಯೇ ಅನ್ನುವುದು ಪ್ರಶ್ನೆ.
ಅಲ್ಲಿ, ಅನ್ಯ ಭಾಷೆಯನ್ನು ಹೊರತುಪಡಿಸಿ ಬರಿಯ ಹಿಂದೀ ಭಾಷೆಯ “ಬ್ಯಾನರ್”ಗಳೇ ಇದ್ದಿದ್ದರೆ, ಅದನ್ನು ಹಿಂದೀ ಹೇರಿಕೆ ಅನ್ನಬಹುದಿತ್ತೇನೋ.
ನಮ್ಮ ಮಣಿಪಾಲ ಮಂಗಳೂರುಗಳಲ್ಲಿ, ಕಸ್ತೂರ್ ಬಾ ಆಸ್ಪತ್ರೆ ಮತ್ತಿತರ ಕಡೆಗಳಲ್ಲಿ, ಕನ್ನಡದ ಜೊತೆಗೆ ಮಲಯಾಳಂ ಭಾಷೆಯ ಸೂಚನಾ ಫಲಕಗಳು ಕಾಣಬರುತ್ತವೆ. ಅದರ ಅರ್ಥ ಕನ್ನಡಿಗರ ಮೇಲೆ ಮಲಯಾಳಂ ಹೇರಲಾಗುತ್ತಿದೆ ಎಂದಾಗುವುದಿಲ್ಲ, ಅಲ್ಲವೇ?
ಹಾಗೆಯೇ ಇದೂ ಕೂಡ.
ಅನ್ಯ ಭಾಷಿಗರ ಮೇಲೆ ಹಿಂದೀ ಹೇರಿಕೆ ಸಲ್ಲ ಅನ್ನುವುದು ಒಪ್ಪತಕ್ಕ ಮಾತು. ನನ್ನ ಸಹಮತ ಇದೆ.
ಆದರೆ ಇಲ್ಲಿ ನೀಡಿರುವ “ಬ್ಯಾನರ್” ಉದಾಹರಣೆ ಅಸಮಂಜಸ ಎಂದು ನನ್ನೆಣಿಕೆ.
ಸುರೇಶ್ ಅವರೇ,
ಈ ನೆಲದಲ್ಲಿ ಅಗತ್ಯವಿಲ್ಲದಿರುವ ನುಡಿಯೊಂದರಲ್ಲಿ ಏನೇ ಹಾಕಿದರೂ ಅದು ಹೇರಿಕೆಯೇ..
ಇಲ್ಲಿ ಅಗತ್ಯವಾಗಿದ್ದಿದ್ದು ಕನ್ನಡಿಗರಿಗಾಗಿ ಕನ್ನಡ, ಕನ್ನಡೇತರರಿಗಾಗಿ ಇಂಗ್ಲಿಷ್. ಹಿಂದಿ ಇಲ್ಯಾರಿಗೂ ಅಗತ್ಯವಿರದ ಭಾಷೆ. ಅದರಲ್ಲಿ ಹಾಕಿದ ಉದ್ದೇಶವೇನು?
ಮಣಿಪಾಲ್ ದಲ್ಲಿ ಮಲಯಾಳಂ ಬೋರ್ಡ್ ಯಾರಿಗಾಗಿ? ವಲಸೆ ಬರುವ ೪ ಜನರಿಗಾಗಿ ಊರ ತುಂಬಾ ಅವರ ಭಾಷೆಯಲ್ಲಿ ಬೋರ್ಡ್ ಹಾಕುವುದು worst kind of linguistic minority appeasement ಎಂದೇ ನನ್ನ ಅನಿಸಿಕೆ. ಮಣಿಪಾಲ್ ದಲ್ಲಿ ಸಹಜವಾಗಿ ಕನ್ನಡ, ತುಳು, ಇಂಗ್ಲಿಷ್ ನಲ್ಲ ಎಲ್ಲ ಮಾಹಿತಿ ನೀಡಬೇಕಾದದ್ದು ಸಹಜವಾದ ಕ್ರಮ. ಮಲಯಾಳಂ ಹಾಕಿದಾಗ ಪ್ರತಿಭಟಿಸಿಲ್ಲ ಅಂದ್ರೆ ಅದು ಅಲ್ಲಿನ ಕನ್ನಡಿಗರ ತಪ್ಪೇ ಹೊರತು ಅದು ಸರಿಯಾದ ಕ್ರಮ ಅಂತ ನನಗೇನು ಅನ್ನಿಸಲ್ಲ.
ನನಗೆ ಅರ್ಥವಾಗದ ಭಾಷೆಗಳಲ್ಲಿ ಯಾವುದೇ ಫಲಕಗಳಿದ್ದರೂ, ಅದರಿಂದ ಆ ಭಾಷೆಯನ್ನು ನನ್ನ ಮೇಲೆ ಹೇರಲಾಗಿದೆ ಅನ್ನುವುದು ಸರಿಯೇ?
ನಾನು ಸ್ವೀಕರಿಸದ, ನನಗೆ ಸಂಂಧಪಡದ ಅದೆಷ್ಟೋ ವಿಷಯಗಳು ಈ ಸಮಾಜದಲ್ಲಿ ನಡೆಯುತ್ತಿದೆ, ಅವನ್ನೆಲ್ಲಾ ನನ್ನ ಮೇಲೆ ಹೇರಲಾಗಿದೆಯೆಂದು ನಾನು ಕರುಬುತ್ತಿರಲಾಗದು. ನನಗೆ ನನ್ನ ಭಾಷೆಯಲ್ಲಿ ಕೊಡಮಾಡದೇ, ಅನ್ಯಭಾಷೆಯಲ್ಲಿರುವುದನ್ನೇ ನಾನೂ ಬಳಸಿಕೊಳ್ಳಬೇಕೆಂದು ನನ್ನ ಮೇಲೆ ಬಲವಂತ ಮಾಡಿದಾಗಲಷ್ಟೇ ಅದು ಹೇರಿಕೆಯಾಗುತ್ತದೆ.
ನನ್ನ ಪಾಲಿಗೆ, ದಾರಿಯಲ್ಲಿ ಪ್ರದರ್ಶಿತವಾಗಿರುವ, ನನಗರ್ಥವಾಗದ, ಅಗತ್ಯವಿಲ್ಲದ ಭಾಷೆಯ ಫಲಕವೂ ಒಂದೇ, ಮಾರ್ಗದ ಬದಿಯಲ್ಲಿ ಅನಾಗರಿಕರು ಉಚ್ಚೆಹೊಯ್ದು ಬಿಟ್ಟು ಹೋದ ಗಬ್ಬುನಾತವೂ ಒಂದೇ, ರಾತ್ರಿ ನಸುಬೆಳಕಿನಲ್ಲಿ ಈ ನಗರದ ಬೀದಿಗಳಲ್ಲಿ ನಿಂತು, ಕುಡಿನೋಟ ಬೀರಿ ಕೈನೀಡಿ ಕರೆಯುವ ಕರೆವೆಣ್ಣುಗಳೂ ಒಂದೇ.
ಯೋಚಿಸಿನೋಡಿ. ಅವು ನಮ್ಮ ಮೇಲೆ ಹೇರಿಕೆಯಾಗದಿದ್ದಾಗ, ಇವು ಹೇಗಾದಾವು?
ನಮಗೆ ಹೇರಿಕೆ ಅನಸಲು ಮೂಲ ಕಾರಣ ಏನೆಂದರೆ ನಮಗೆ ಹಿಂದೀ ಬರಹಗಳನ್ನು ಓದಲು ತಿಳಿದಿದೆ. ಅದು ನಮಗೆ ಅರ್ಥವಾಗುತ್ತದೆ. ಒಂದು ವೇಳೆ ನಮಗೆ ಹಿಂದೀ ಓದಲು ಬಾರದೇ ಇದ್ದಿದ್ದರೆ ನಾವಿಷ್ಟು ತಲೆಕೆಡಿಸಿಕೊಳ್ಳುತ್ತಲೇ ಇದ್ದಿರಲಿಲ್ಲ ಎಂದು ನನ್ನ ಅನಿಸಿಕೆ.
{ಇಂಗ್ಲಿಷ್ ಅನ್ನು ಜನ ಸುಮ್ ಸುಮ್ನೆ ಅಪ್ಪಿಕೊಂಡಿಲ್ಲ. ಅದು ಅನ್ನ ಕೊಡ್ತಿದೆ, ಒಳ್ಳೆ ಬದುಕು ಕೊಡ್ತಿದೆ ಅನ್ನೋ ಕಾರಣಕ್ಕೆ ಅದಕ್ಕೆ ಅಷ್ಟು ಜನಮನ್ನಣೆ ಸಿಗ್ತಿರೋದು. ಕನ್ನಡವೂ ಅಂತಹ ಸಾಧ್ಯತೆ ಕೊಡ ಮಾಡಿದಾಗ ಇಂಗ್ಲಿಷ್ ಮೇಲಿನ ಈ ಮಮಕಾರ ಕಮ್ಮಿ ಆದೀತು.}
ಕನಸು ಕಾಣ್ತಿದೀರ. ಇಂಗ್ಲೀಷ್ ಎಲ್ಲಾ ಕೊಡುತ್ತೆ ಅಂದ್ಮೇಲೆ ಯಾವ ಮೂರ್ಖ ಕನ್ನಡ ಕಲೀತಾನೆ? ನಿಮ್ಮ ವಾದದಲ್ಲಿ ಹುರುಳಿಲ್ಲ. ಒಂದೋ ಕನ್ನಡ ಮಾತ್ರ ಬೇಕು ಅನ್ನಿ, ಇಲ್ಲಾಂದ್ರೆ ಜನಕ್ಕೆ ಯಾವುದರಲ್ಲಿ ಲಾಭ ಇದ್ಯೋ ಅದನ್ನೇ ಮಾತಾಡ್ಲಿ. ಎರಡೂ ರೀತಿನಲ್ಲಿ ನೋಡಿದ್ರೂ ಅಭಾವಿಪದ ಹಿಂದಿ ಬ್ಯಾನರ್ ತಪ್ಪಾಗುವುದಿಲ್ಲ.
ಎಲ್ಲಾ ಬಿಟ್ಬಿಡಿ. ಸುಮ್ನೆ ಬ್ಯಾನರ್ ಬಗ್ಗೆ ತಲೆ ಕೆಡ್ಸೋ ಬದ್ಲು ಕನ್ನಡದಲ್ಲೇ ಯಾವುದಾದರು ಜನ ಮೆಚ್ಚುವಂಥದ್ದು ಬರೀರಿ. ಅಥವಾ ಒಂದಷ್ಟು ಕನ್ನಡದ ರೈತರಿಗೋ ಬಡವರಿಗೋ ಸಹಾಯ ಮಾಡಿ. ಅವ್ರೇ ಮುಂದೆ ಕನ್ನಡ ಉಳ್ಸೋರು. ಇಂಗ್ಲೀಷ್ ಕಲ್ತೋರು ಮುಂದೆ ಕನ್ನಡ ಪ್ರೇಮ ಬೆಳೆಸಿಕೊಳ್ತಾರೆ ಅಂತ ನೀವಂದ್ಕೊಂಡಿದ್ರೆ ಅದು ನಿಮ್ಮ ಭ್ರಮೆ ಅಷ್ಟೆ.
ಮಹೇಶ್,
ಇವತ್ತು ಸಮಾಜದಲ್ಲಿ ಒಳ್ಳೆ ದುಡಿಮೆ, ಒಳ್ಳೆ ಬದುಕು ಅನ್ನೋದನ್ನ ಅನುಭವಿಸ್ತಿರೊ ಜನರಿಗೆಲ್ಲ ಅದು ಸಿಕ್ಕಿರೋದು ಇಂಗ್ಲಿಷ್ ನಿಂದ ಅನ್ನೋದು ನಿಮಗೆ ಕಾಣಿಸುತ್ತಿಲ್ಲವೇ? ಜಾಗತೀಕರಣ ಬಂದ ನಂತರ ಭಾರತದ ಕೋಟ್ಯಾನುಕೋಟಿ ಮಧ್ಯಮ ವರ್ಗದ ಜನ ಅದರ ಲಾಭ ಪಡೆದುಕೊಂಡಿದ್ದು ಇಂಗ್ಲಿಷ್ ನಿಂದ ಅನ್ನುವುದು ಕಾಣಿಸುತ್ತಿಲ್ಲವೇ? ನನಗೇನು ಇಂಗ್ಲಿಷ್ ಬಗ್ಗೆ ಮಮಕಾರವಿಲ್ಲ. ಇಂಗ್ಲಿಷ್ ಎಲ್ಲರಿಗೂ ಎಲ್ಲ ಕೊಡುತ್ತೆ ಅಂತಲೂ ನಾನು ಹೇಳಿಲ್ಲ. Infact, ಇಂಗ್ಲಿಷ್ ಕೆಲವೇ ಜನರಿಗೆ ಎಲ್ಲ ಕೊಡೊಕೆ ಆಗುತ್ತೆ ಹೊರತು ಎಲ್ಲರಿಗೂ ಎಲ್ಲ ಕೊಡಲು ಸಾಧ್ಯವೇ ಇಲ್ಲ. ಇವತ್ತು ಪಾಲಕರು ತಮ್ಮ ಮಕ್ಕಳನ್ನ ಯಾವ ಶಾಲೆಗೆ ಸೇರಿಸಲು ಸಾಯ್ತಾರೆ? ನಿಮ್ಮ ಹಿಂದಿನೂ ಅಲ್ಲ, ನಮ್ಮ ಕನ್ನಡಾನೂ ಅಲ್ಲ. ಅದು ಇಂಗ್ಲಿಷ್.. ಯಾಕೆ? ಇಂಗ್ಲಿಷ್ ಕಲಿತ್ರೆ ಕೆಲಸ ಸಿಗುತ್ತೆ, ಒಳ್ಳೆ ಬದುಕು ಸಿಗುತ್ತೆ ಅನ್ನೋ ನಂಬಿಕೆಯಿಂದ ತಾನೇ? ಅಂತದ್ದೇ ಒಂದು ಬದುಕು ಕೊಡುವ ನಂಬಿಕೆ ಕನ್ನಡ ಹುಟ್ಟು ಹಾಕಿದ್ರೆ ( ಅಂದ್ರೆ ಕನ್ನಡದಲ್ಲೂ ಬದುಕಿನ ವಿದ್ಯೆಗಳೆಲ್ಲ ಬಂದ್ರೆ) ಖಂಡಿತ ಇಂಗ್ಲಿಷ್ ವ್ಯಾಮೋಹ ಬಿಟ್ಟು ಹೋದಿತು. ಅದು ಬಿಟ್ಟು ಇಂಗ್ಲಿಷ್ ಅನ್ನ ಬೈತಾ ಕೂರೋದ್ರಿಂದಲ್ಲ.
ಅಂದ ಹಾಗೇ ನೀವೆಲ್ಲಿ ಕೆಲಸ ಮಾಡುತ್ತಿದ್ದೀರಿ? ಎಲ್ಲೇ ಕೆಲಸ ಮಾಡುತ್ತಿದ್ದರೂ ಇಂಗ್ಲಿಷ್ ಬಳಸದೇ ನಿಮ್ಮ ಕೆಲಸ ಮಾಡಲು ಸಾಧ್ಯವಾಗುತ್ತಿದೆಯೇ? ಸಾಧ್ಯವಾಗಿದ್ದಲ್ಲಿ ನಿಮ್ಮನ್ನು ಅಭಿನಂದಿಸುತ್ತೇನೆ. ಅಂತಹ ಅನುಕೂಲ ಎಲ್ಲ ಕನ್ನಡಿಗರಿಗೂ ಕನ್ನಡ ಕೊಡುವಂತಾದಲ್ಲಿ ಇಂಗ್ಲಿಷ್ ಮೇಲಿನ ಈ ಕುರುಡು ವ್ಯಾಮೋಹ ತಾನೇ ತಾನಾಗಿ ಕಮ್ಮಿಯಾಗುತ್ತೆ.
ಪೂರ್ತಿ ಚರ್ಚೆಯೇ ಕನ್ನಡ ಮತ್ತು ಇಂಗ್ಲಿಷ್, ಅವಕ್ಕಿರುವ ಶಕ್ತಿ, ಅವಕ್ಕಿರುವ ದೌರ್ಬಲ್ಯ, ಒಪ್ಪಿಕೊಂಡಿರೆ ಇರೋ ಅನುಕೂಲ, ಅನಾನುಕೂಲದ ಬಗ್ಗೆನೇ ನಡಿತಿರೋದು. ಇಲ್ಲಿ ಹಿಂದಿ ಎಲ್ಲಿಂದ ಬಂತು ಸರ್? What value is it bringing onto the table my friend?
ಹಿಂದಿ ಒಪ್ಪಿಕೊಂಡ್ರೆ ನಿಮ್ಮೂರ ತುಂಬ ಹಿಂದಿಯೋರ ವಲಸೆ ಆಗುತ್ತೆ ಬಿಟ್ರೆ ಇನ್ನೇನು ಇಲ್ಲ.
ನಾನು ಆಗಲೇ ಹೇಳಿದಿನಿ. I don’t have more than one language to call my own. ನನಗೆ ನನ್ನ ಭಾಷೆ ನನ್ನ ಜನರ ಬದುಕಿನ ಭಾಷೆಯಾಗಬೇಕು. ಅದರಲ್ಲಿ ಬದುಕಿನ ವಿದ್ಯೆಗಳ ಸಾಧ್ಯತೆ ಕಾಣಿಸಬೇಕು. ಅದಾದಾಗಲೇ ಅದರ ಭವಿಷ್ಯದ ಬಗೆಗಿನ ಕಳವಳ ಕಡಿಮೆಯಾದೀತು. ಆದ್ರೆ ಅಂತದೊಂದು ದಿನ ಬರುವವರೆಗೂ ಈ ದಿನ ಬದುಕಿನ ವಿದ್ಯೆ ಕೊಡುತ್ತಿರುವ ಇಂಗ್ಲಿಷ್ ಅನ್ನು ಸಮರ್ಥವಾಗಿ ಬಳಸಿಕೊಂಡು, ಅದಕ್ಕಿರುವ ಸಾಮರ್ಥ್ಯವನ್ನು ನಮ್ಮ ನುಡಿಗೆ ಕೊಡಿಸುವಂತಾಗಬೇಕು. ಇಂಗ್ಲಿಷ್ ಅಲ್ಲಿರೋ ಜ್ಞಾನ,ವಿಜ್ಞಾನದ ಎಲ್ಲ ಸಾಧ್ಯತೆಗಳನ್ನ ಬಿಡದೇ ಪಡಿಬೇಕು, ನಾಳೆ ಅಂತದೊಂದು ವ್ಯವಸ್ಥೆ ಕನ್ನಡಕ್ಕೆ ತರಬೇಕು. ಅದು ಮಾತ್ರ ಕನ್ನಡವನ್ನು ಜನರೇ ಅಪ್ಪಿಕೊಂಡು ಉಳಿಸುವಂತೆ ಮಾಡುವ ಹಾದಿ.
ನೀವು ಅಷ್ಟೇ, ಇಲ್ಲಿ ಕೂತು ಹಿಂದಿ ಭಜನೆ ಮಾಡುವುದನ್ನು ಬಿಟ್ಟು, ಹಿಂದಿ ಕಲಿತ್ರೆ ದೇಶ ಪ್ರೇಮಿ ಅನ್ನುವ ಹುಸಿ ರಾಷ್ಟ್ರೀಯವಾದ ಬಿಟ್ಟು ನಿಮ್ಮ ಬದುಕು ಚೆನ್ನಾಗಿ ಕಟ್ಟಿಕೊಳ್ಳುವುದನ್ನು ನೋಡಿ. ಪ್ರತಿಯೊಬ್ಬ ಕನ್ನಡಿಗ ಅವನ ಬದುಕನ್ನು ಚೆನ್ನಾಗಿ ಕಟ್ಟಿಕೊಂಡರೆ ಕನ್ನಡನಾಡು ತಾನೇ ಉದ್ದಾರ ಆಗುತ್ತೆ. ಇಂಗ್ಲಿಷ್ ಕಲ್ತೋರು ಕನ್ನಡ ಮರಿತಾರೆ ಅನ್ನೋದು ನಿಮ್ಮ ಭ್ರಮೆ. ಅದು ನಿಮಗಿರುವ ಇಂಗ್ಲಿಷ್ ಬಗೆಗಿನ ಕಡು ಕೋಪ ತೋರಿಸುತ್ತಷ್ಟೇ. ಇವತ್ತು ಇಂಗ್ಲಿಷ್ ಹಿಂದಿ ಎರಡರಿಂದಲೂ ನಮಗೆ ತೊಂದರೆ ಇದೆ. ಇಂಗ್ಲಿಷ್ ಅಲ್ಲಿ ಕೊನೆಪಕ್ಷ ಒಂದಿಷ್ಟು ಪ್ರಯೋಜನ ಇದೆ. ಅದನ್ನ ಪಡ್ಕೊಂಡು ಇಂಗ್ಲಿಷ್ ಅಲ್ಲಿರೋ ಈ ಜ್ಞಾನ ಸಾಧ್ಯತೆಯನ್ನು ಕನ್ನಡಕ್ಕೆ ವಿಸ್ತಿರಿಸೋ ಬಗ್ಗೆ ಯೋಚನೆ ಮಾಡಿ. ಆಗ ಇಂಗ್ಲಿಷ್ ಕೂಡ ಬೇಕಾಗಲ್ಲ ನಮಗೆ.
ಹಿಂದಿ ಬೇಕು ಅಂತ ನಾನೆಲ್ಲಿ ಹೇಳಿದೆ.. ಕನ್ನಡ ಬ್ಯಾನರ್ ಜೊತೆ ಹಿಂದಿದೂ ಹಾಕಿದ್ದಕ್ಕೆ ಈ ಪರಿ ಬೊಬ್ಬಿರಿಯೋ ಅವಶ್ಯಕತೆ ಇಲ್ಲ, ಇದಕ್ಕಿಂತ ದೊಡ್ಡ ಸಮಸ್ಯೆಗಳು ಬೇರೆಯೇ ಇವೆ ಅಂದಿದ್ದು.
ಮತ್ತೆ ನಿಮ್ಮ ಇಂಗ್ಲಿಷ್ ಮತ್ತು ಒಳ್ಳೆ ಬದುಕು ವಾದ. ಹೌದು. ನಾನು ನನ್ನ ಕೆಲಸದಲ್ಲಿ ಇಂಗ್ಲೀಶ್ ನಲ್ಲೇ ವ್ಯವಹರಿಸೋದು. ಹೀಗೆ ಜಗಳವಾಡಲು ಮಾತ್ರ ಕನ್ನಡ ಉಪ್ಯೋಗಕ್ಕೆ ಬರ್ತಾಯಿದೆ. ಇದನ್ನ ಸರಿ ಮಾಡಕ್ಕೆ ಏನಾದ್ರು ಮಾಡೋದು ಬಿಟ್ಟು ಇಂಥದ್ದಕ್ಕೆಲ್ಲ ಸಮಯ ಹಾಳು ಮಾಡಿ ಏನು ಉಪಯೋಗ ಅಂತ ನಾನು ಕೇಳಿದ್ದು. ನಾನು ಹಿಂದಿ ಪರ ಮಾತಾಡುತ್ತಿಲ್ಲ ಇಲ್ಲಿ. ಧನಾತ್ಮಕ ಕೆಲಸ ಮಾಡಿ ಅಂತ ಹೇಳಿದೆ ಅಷ್ಟೆ.
{ ಇಂಗ್ಲಿಷ್ ಅಲ್ಲಿರೋ ಈ ಜ್ಞಾನ ಸಾಧ್ಯತೆಯನ್ನು ಕನ್ನಡಕ್ಕೆ ವಿಸ್ತಿರಿಸೋ ಬಗ್ಗೆ ಯೋಚನೆ ಮಾಡಿ}
ಜ್ನಾನ ಇಂಗ್ಲೀಷ್ ನಲ್ಲಿ ಮಾತ್ರ ಅಲ್ಲ, ಹಿಂದಿನಲ್ಲೂ ಇದೆ. ಬೇರೆ ಭಾಷೆಗಳಲ್ಲೂ ಇದೆ. ಕಾಲೇಜು ಪಠ್ಯಪುಸ್ತಕ ಮಾತ್ರ ಜ್ನಾನ ಅಂತ ನೀವು ಅಂದುಕೊಂಡಿದ್ದರೆ ಅದು ನನ್ನ ತಪ್ಪಲ್ಲ. ಹಾಗಿದ್ದ ಮೇಲೆ ಇಲ್ಲಿ ಹಿಂದಿ ಇಂಗ್ಲಿಷ್ ಪ್ರಶ್ನೆ ಬರದು. ಯಾವುದೇ ಭಾಷೆಯಿಂದ ಪುಸ್ತಕಗಳನ್ನು ತರ್ಜುಮೆ ಮಾಡಿದಲ್ಲಿ ಅದು ಸ್ವಾಗತಾರ್ಹವೇ.
{ ಹಿಂದಿ ಕಲಿತ್ರೆ ದೇಶ ಪ್ರೇಮಿ ಅನ್ನುವ ಹುಸಿ ರಾಷ್ಟ್ರೀಯವಾದ ಬಿಟ್ಟು }
ಆ ಥರ ನಾನೆಲ್ಲಿ ಹೇಳಿದೆ. ನೀವೇ ಕಲ್ಪಿಸಿಕೊಂಡಿದೀರ ಅಷ್ಟೆ.
{ ಇಂಗ್ಲಿಷ್ ಕಲ್ತೋರು ಕನ್ನಡ ಮರಿತಾರೆ ಅನ್ನೋದು ನಿಮ್ಮ ಭ್ರಮೆ. ಅದು ನಿಮಗಿರುವ ಇಂಗ್ಲಿಷ್ ಬಗೆಗಿನ ಕಡು ಕೋಪ ತೋರಿಸುತ್ತಷ್ಟೇ}
ಭ್ರಮೆ ಅಲ್ಲ. ನಾನು ನೋಡಿದ್ದನ್ನ ಹೇಳಿದೆ. ಇಂಗ್ಲೀಷ್ ಕಲ್ತಿರೋರಲ್ಲಿ ಎಷ್ಟು ಜನ ಕನ್ನಡ ಪುಸ್ತಕ ಓದ್ತಾರೆ ಹೇಳಿ ನೋಡೋಣ..
^ ಇಲ್ಲಿ ಇಂಗ್ಲೀಷ್ ಕಲ್ತಿರೋರು ಅಂದ್ರೆ ಇಂಗ್ಲಿಷ್ ಮಾಧ್ಯಮದಲ್ಲಿ ಕಲ್ತಿರೋರು. ನನ್ನಂಥೋರು ಕನ್ನಡ ಮಾಧ್ಯಮದಲ್ಲಿ ಕಲ್ತು ಆಮೇಲೆ ಇಂಗ್ಲಿಷ್ ಕಲ್ತಿರೋರು. ಅವ್ರಲ್ಲಿ ಬಾಲ್ಯದಲ್ಲಿ ಬಂದಿರೋ ಭಾಷ ಸಂಸ್ಕಾರ ಇನ್ನೂ ಉಳ್ದಿರುತ್ತೆ. ಅಂಥೋರನ್ನ ಬಿಟ್ಟು ಯೋಚ್ನೆ ಮಾಡಿ. ಆಗ ತಿಳಿಯುತ್ತೆ ಆಂಗ್ಲ ಮಾಧ್ಯಮ ಬೇಕೋ ಬೇಡವೋ ಅಂತ.
ಹಿಂದಿ ಹೇರಿಕೆ ಅಂತೀರ. ಸರಿ. ಹೇರಿಕೆ ಇದ್ದಲ್ಲಿ ಅದನ್ನ ವಿರೋಧಿಸೋಣ. ಆದ್ರೆ ನಾವು ನಾವಾಗಿಯೇ ನಮ್ಮ ಮೇಲೆ ಇಂಗ್ಲೀಷ್ ಹೇರಿಕೆ ಮಾಡೋದು ನಿಮಗೆ ಕಾಣಿಸ್ತಿಲ್ಲವೇ? ಅದ್ರ ಬಗ್ಗೆ ನಿಮಗ್ಯಾಕೆ ಇಷ್ಟೊಂದು ಸಮರ್ಥನೆ?
ಸುರೇಶ್ ಅವರೇ,
ಇಲ್ಲಿ ಈ ಬ್ಯಾನರ್ ಸಾಂಕೇತಿಕ. ಇಲ್ಲಿ ಪ್ರಶ್ನಿಸಬೇಕಾಗಿರುವುದು ಮನಸ್ಥಿತಿ. ಅದ್ಯಾಕೆ ಭಾರತದ ಎಲ್ಲ ಭಾಗದ ಜನರು ಬಂದಾಗ ಅವರೆಲ್ಲರ ನುಡಿಯಲ್ಲಿ ಬ್ಯಾನರ್ ಹಾಕಲ್ಲ ? ಅದ್ಯಾಕೆ ಹಿಂದಿಯೊಂದರಲ್ಲೇ ಹಾಕೋದು? ಹಿಂದಿಯೊಂದೇ ಅಲ್ಲ, ಭಾರತದ ಎಲ್ಲ ಭಾಷೆಗಳು ರಾಷ್ಟ್ರಭಾಷೆಗಳೇ. ಹಾಗಿದ್ದಾಗ ಯಾರಿಗೂ ಇಲ್ಲದ ಪ್ರಾಮುಖ್ಯತೆ ಹಿಂದಿಗಷ್ಟೇ ಏಕೆ?
ಇನ್ನೂ ಹೇರಿಕೆ ಬಗ್ಗೆ ಬಂದರೆ, ಬ್ಯಾಂಕು, ವಿಮೆ, ತೆರಿಗೆ, ರೈಲ್ವೇ ಹೀಗೆ ಸಾಲು ಸಾಲು ಕೇಂದ್ರ ಸರ್ಕಾರಿ ಕಚೇರಿಗಳಲ್ಲಿ ಹಿಂದಿ ಕಲಿತ್ರೆ ಕೆಲಸ, ಹಿಂದಿಯಲ್ಲೇ ಪರೀಕ್ಷೆ, ಹಿಂದಿ ಕಲಿತ್ರೆ ಪ್ರಮೋಶನ್, ನಮ್ಮ ಹಳ್ಳಿ ಹಳ್ಳಿಯ ಕೇಂದ್ರ ಸರ್ಕಾರಿ ಕಚೇರಿಗಳಲ್ಲಿ ನಾಡಿನ ಭಾಷೆಯನ್ನೇ ಕಡೆಗಣಿಸಿ ಹಿಂದಿಯಲ್ಲಿ ಅರ್ಜಿ ಇತ್ಯಾದಿಗಳನ್ನು ಇರಿಸುವುದು, ಹಿಂದಿ ರಾಷ್ಟ್ರಭಾಷೆ ಅನ್ನುವ ಸುಳ್ಳನ್ನು ಪ್ರಚಾರ ಮಾಡಲು ಪ್ರಚಾರ ಸಭೆಗಳ ಮೂಲಕ ಕೋಟ್ಯಾಂತರ ರೂಪಾಯಿ ತೆರಿಗೆ ಹಣ ಪೋಲು ಮಾಡುವುದು, ಹಿಂದಿಯೇತರ ರಾಜ್ಯಗಳನ್ನು ಹಿಂದಿಮಯ ಮಾಡಲು ರಾಜಭಾಷಾ ಕಾಯಿದೆ ಅನ್ನುವ ಸಂವಿಧಾನ ವಿರೋಧಿ ಕಾಯಿದೆ ಮೂಲಕ ವರ್ಷಕ್ಕಿಷ್ಟು ಎಂದು ಟಾರ್ಗೆಟ್ ಇಟ್ಕೊಂಡು ಹೇರಿಕೆ ಮಾಡುವುದು ಇದೆಲ್ಲ ಹಿಂದಿ ಹೇರಿಕೆಗೆ ಕೆಲವು ಉದಾಹರಣೆಗಳಷ್ಟೇ.
೧೯೪೬ರಲ್ಲಿ ದೇಶದ ಸ್ವಾತಂತ್ರ್ಯ ಬರುವ ಸಮಯದಲ್ಲೇ ಹಿಂದಿ ಹೇರಿಕೆಗೆ ಎಂತದ್ದೆಲ್ಲ ಪ್ರಯತ್ನ ನಡೆದಿತ್ತು, ಆಗ ಹಿಂದಿಗಾಗಿ ಜನಸಂಘ ಎಂತದ್ದೆಲ್ಲ ಪ್ರಯತ್ನ ಮಾಡಿತ್ತು ಅನ್ನುವುದನ್ನ ಒಮ್ಮೆ ಇಲ್ಲಿ ಓದಿ
http://www.hindu.com/mag/2004/01/18/stories/2004011800040300.htm
ಇವತ್ತು ಅದೇ ಚಿಂತನೆಯ ಮೂಸೆಯಿಂದ ಬಂದಿರುವ ABVPಗೆ ಹಿಂದಿ ಹೇರಿಕೆ ಬಗ್ಗೆ ಏನ್ ನಿಲುವಿದೆ ಅನ್ನುವುದನ್ನು ನಾನೇನು ವಿಶೇಷವಾಗಿ ಹೇಳಬೇಕಾಗಿಲ್ಲ.
ರಾಜಭಾಷಾ ಕಾಯಿದೆಯ ತಾಣದಲ್ಲಿರುವ ಕೆಲವು ಅಂಶಗಳನ್ನೇ ಗಮನಿಸಿ.
http://www.rajbhasha.nic.in/annualeng.htm
The answers of question papers, except that of the compulsory paper of English, should also be allowed to be written in Hindi in recruitment examinations of subordinate services and such question papers should be made available both in Hindi and English. In interviews too, there should invariably be option to converse in Hindi. The candidates should have the option to answer the question papers of all the in-service, departmental and promotion examinations (including all India level examinations) of all the ministries, departments of the Central Govt. and its attached and subordinate offices and of all corporations, undertakings, banks etc. owned or controlled by the Central Govt. in Hindi. The question papers should compulsorily be set in both the languages (Hindi and English). Wherever interview is to be held, the candidate should have the option to answer in Hindi.
>> Does such an option exist for Kannada in Karnataka?
Every type of training, whether of long-term or of short term, should generally be imparted through Hindi medium in ‘A’ and ‘B’ regions. For imparting training in ‘C’ region the training material should be got prepared both in Hindi and in English and made available to the trainees in Hindi or in English as per their requirements.
>> Karnataka falls in Region C and hence only Hindi or English. Where is Kannada?
It is the Constitutional obligation of senior officials of Ministries/Departments/ Offices/Undertakings to make increasing use of Hindi in their official work.
>> It should have been applicable to states having Hindi as their official language. Why is this applicable to entire India? Will a Kannadiga or Tamilian or a Malayalee ever become proficient in hindi when compared to a native hindi speaker? Having such unethical rules will hamper the chances of a non hindi speaker from getting employment, promotion in central govt offices. Isn’t this imposition?
Under rule 10 (4), of the Official Language Rules 1976, the following items of work should be done in Hindi in the branches of the notified banks-Demand drafts, payment orders to be issued on the application form filled by the customers in Hindi.
>> If someone fills a form in hindi in any central govt office in KA, he should get an answer in hindi. Actually such a law should first be enacted for Kannada in Karnataka in central govt offices. In the middle of all this, where is Kannada? Aren’t these laws rendering Kannada as useless for transactions in Central govt offices within Karnataka?
ಜನಸಂಘ ಮಾಡಿದ್ದು ಸರಿ ಎಂದು ಇಲ್ಲಿ ಯಾರೂ ಹೇಳುತ್ತಿಲ್ಲ. ಅಭಾವಿಪ ದಲ್ಲಿರೋ ಕನ್ನಡದೋರು ಈ ಬಗ್ಗೆ ಮಾತೆತ್ತಿ ಆಗಿರೋ ತಪ್ಪನ್ನು ಸರಿಪಡಿಸಬಹುದು. ಅದಕ್ಕೆ ಯಾರದ್ದೂ ವಿರೋಧವಿಲ್ಲ. ಈ ಹಿಂದಿ ಹೇರಿಕೆ ಕಾನ್ಸೆಪ್ಟ್ ಮೊದ್ಲು ಇದ್ದಿದ್ದು ಹೌದು. ಈಗ ಅಷ್ಟೊಂದು ಇಲ್ಲ. ಅದಕ್ಕೆ ಯಾವ ಭಾಶಿಕರೂ ಸೊಪ್ಪು ಹಾಕಿಲ್ಲ. ಒಂದಷ್ಟು ಸರ್ಕಾರಿ ಕಾಗದ ಪತ್ರಗಳಲ್ಲಿ ಹಿಂದಿ ಇನ್ನೂ ಇವೆ ಅಷ್ಟೆ.
: : ಇಂಗ್ಲಿಷ್ ಕಲ್ತೋರು ಕನ್ನಡ ಮರಿತಾರೆ ಅನ್ನೋದು ನಿಮ್ಮ ಭ್ರಮೆ. ಅದು ನಿಮಗಿರುವ ಇಂಗ್ಲಿಷ್ ಬಗೆಗಿನ ಕಡು ಕೋಪ ತೋರಿಸುತ್ತಷ್ಟೇ. : :
ಇಲ್ಲಿ “ಇಂಗ್ಲಿಷ್” ಅನ್ನುವ ಪದದ ಬದಲು “ಹಿಂದೀ” ಅನ್ನುವ ಪದವನ್ನು ಬಳಸಿ ನೋಡಿ.
ಅದು ಭ್ರಮೆಯಾದರೆ ಇದೂ ಭ್ರಮೆಯೇ ಸರಿ.
ಹಿಂದಿ ಕಲಿತ್ರೆ ಕನ್ನಡ ಮರಿತಾರೆ ಅಂತಾ ನಾನೆಲ್ಲೂ ಹೇಳಿಲ್ಲ. ಸ್ವಲ್ಪ ನಿಮ್ಮ ಭ್ರಮಾ ಲೋಕದಿಂದ ಆಚೆ ಬನ್ನಿ ದೊರೆ 🙂
ಹಿಂದಿಯನ್ನು ಯಾವುದೇ ರೀತಿಯಲ್ಲಿ ಹೇರಬೇಡಿ ಅನ್ನುವುದಕ್ಕೂ ನಿಮ್ಮ ಮೇಲಿನ ವಾಕ್ಯಕ್ಕೂ ಅಂತರವಿದೆ. ಬಿಡಿ, as usual ವಾದಕ್ಕಾಗಿ ವಾದ ಮಾಡುವುದು ನಿಮ್ಮ ಶೈಲಿ ಕೂಡ ಅಲ್ಲವೇ 😉 ಮುಂದುವರೆಸಿ.. ಪುರ್ಸೊತ್ ಆದ್ರೆ ಅದಕ್ಕೂ ಉತ್ತರಿಸುವೆ.
😀
ಮಹೇಶ್,
ಜ್ಞಾನ ಸಾಧ್ಯತೆ ಎಂದು ನಾನು ಮಾತನಾಡಿದಾಗ ಅದು ವಿಜ್ಞಾನ-ತಂತ್ರಜ್ಞಾನದ ವಿದ್ಯೆಯನ್ನು ಗಮನದಲ್ಲಿಟ್ಟುಕೊಂಡು. ಅಭಿವೃದ್ಧಿ ಹೊಂದಿದ ಹೆಚ್ಚಿನ ದೇಶಗಳು Knowledge based economyಗಳಾಗಿವೆ. ಅವುಗಳ ಮುಂದುವರಿಕೆಗೆ ಕಾರಣ ಅವರ ತಾಯ್ನುಡಿಯಲ್ಲಿ ಬದುಕಿನ, ಏಳಿಗೆಯ ವಿದ್ಯೆಗಳು ಲಭ್ಯವಿರುವುದು. ಹಿಂದಿಯಲ್ಲಿ ಖಂಡಿತವಾಗಿಯೂ ವಿಜ್ಞಾನ-ತಂತ್ರಜ್ಞಾನದ ಯಾವ ವಿದ್ಯೆಯೂ ಇಲ್ಲ. ಇದ್ದಿದ್ದರೆ ಅವರೆಲ್ಲ ಇಂಗ್ಲಿಷ್ ಕಲಿತು ಬೆಂಗಳೂರಿಗೆ ವಲಸೆ ಬರ್ತಾ ಇರಲಿಲ್ಲ ಅನ್ನಬಹುದು 🙂
ಅದರಾಚೆ, ಬೇರೆ ನುಡಿಯಲ್ಲಿರುವ ಧರ್ಮ, ಮೋಕ್ಷ, ಬದುಕಿನ ಇತರ ವಿದ್ಯೆಗಳೆನೇ ಇದ್ದರೂ ಅದೆಲ್ಲವೂ ಅನುವಾದಗೊಂಡು ಕನ್ನಡಿಗರಿಗೆ ಸಿಗಬೇಕು ಮತ್ತು ಆ ಅರಿವಿನಿಂದ ಅವರ ಬದುಕು ಇನ್ನಷ್ಟು ಹಸನಾಗಬೇಕು. ತಮಿಳು, ಮರಾಠಿ, ಉರ್ದು, ಹಿಂದಿ ಎಲ್ಲದರಿಂದಲೂ ಸಾಕಷ್ಟು ಒಳ್ಳೆಯದು ಕನ್ನಡಕ್ಕೆ ಅನುವಾದವಾಗಿದೆ. ಅದು ಒಳ್ಳೆಯ ನಡೆ ಕೂಡ.
ಇಲ್ಲಿ ಹಿಂದಿ ಹೇರಿಕೆ ಬಗ್ಗೆ ಮಾತನಾಡಿದ್ದು ಖಂಡಿತ ಹೊಡೆದಾಟ ಅಂದುಕೊಳ್ಳಬೇಡಿ. ದೇಶದ ಪ್ರತಿಯೊಂದು ಭಾಷೆಯೂ ಸಮಾನ, ಎಲ್ಲ ನುಡಿಗಳ ಅಭಿವೃದ್ಧಿಗೂ ಸಮ ಗಮನ ಕೊಡಬೇಕು, ಆ ಮೂಲಕ ಆ ಎಲ್ಲ ನುಡಿಗಳಲ್ಲಿ ಬದುಕಿನ ವಿದ್ಯೆ ತರುವ ಪ್ರಯತ್ನವಾಗಬೇಕು, ಅದಾದಾಗಲೇ ದೇಶದ ಎಲ್ಲ ನುಡಿಗಳು ಉಳಿದು ಬೆಳೆಯೋದು, ಹಾಗೇ ಆಯಾ ನುಡಿ, ಆ ನುಡಿಯಾಡುವ ಜನರ ಬದುಕಿನ ಭಾಷೆಯಾಗುವುದು. ಅದಕ್ಕೆ ಮೊದಲು ಆಗಬೇಕಿರುವುದು ದೇಶದ ಮಟ್ಟದಲ್ಲಿ ಸಮಾನ ಗೌರವದ ಭಾಷಾ ನೀತಿಯೊಂದನ್ನು ರೂಪಿಸುವ ಕೆಲಸ. ಇವತ್ತಿರುವ ಹಿಂದಿ ಮೇಲು, ಹಿಂದಿ ಮಾತ್ರ ರಾಷ್ಟ್ರೀಯ, ಉಳಿದದ್ದೆಲ್ಲ ಪ್ರಾದೇಶಿಕ ಅನ್ನುವ ಚಿಂತನೆಯ ಫಲವಾಗಿ ಈ ಎಲ್ಲ ನುಡಿಗಳು ಕಡೆಗಣನೆಗೊಳಗಾಗುತ್ತಿವೆ, ಅವುಗಳಿಗೆ ಸಿಗಬೇಕಾದ ಮಹತ್ವವೂ ಸಿಗುತ್ತಿಲ್ಲ. ಇದಕ್ಕೆ ಹಿಂದಿ ಹೇರಿಕೆಯ ಮನಸ್ಥಿತಿಯೂ ಬಹು ಮಟ್ಟಿಗೆ ಕಾರಣ.
ನಮ್ಮದೇ ಆದ ತುಳು ಭಾಷೆ ಅಳಿವಿನಂಚಿನಲ್ಲಿದೆ ಅನ್ನುವ ಮಾತು ಒಮ್ಮೆ ಕೇಳಿದ್ದೆ. ಸಂಕಟವಾಗಿತ್ತು. ತುಳು ಬರೀ ನುಡಿಯಲ್ಲ, ಅದೊಂದು ಜನ ಜೀವನ, ಸಂಸ್ಕೃತಿಯನ್ನು ತಿಳಿಸುವ ಜೀವದ ಸೆಲೆ. ಅದು ಎಂದಿಗೂ ಬತ್ತಬಾರದು. ಅದು ಎಂದಿಗೂ ಸಾಯಬಾರದು. ಪ್ರತಿಯೊಂದು ನುಡಿಯೂ ಉಳಿಬೇಕು, ಅದನ್ನಾಡುವ ಜನಕ್ಕೆ ಬದುಕು ಕೊಡಬೇಕು. ಅದಕ್ಕೆ ಒಂದು ಸರಿಯಾದ ಭಾಷಾ ನೀತಿ ಬರುವುದು ಬಲು ಮುಖ್ಯ. ಅದಿಲ್ಲದೇ ಹೋದರೆ ಮೊದಲು ಕೊಡವ, ಆಮೇಲೆ ತುಳು ಆನಂತರ ಕನ್ನಡವೂ ಸತ್ತು, ಇಡೀ ದೇಶ ಹಿಂದಿ ದೇಶ ಆಗಿ ಹೋಗುತ್ತೆ. ಹಾಗಾಗಬಾರದು.
ಇಂಗ್ಲಿಷ್ ಇಲ್ಲದೆಯೇ ಜಪಾನಿಗರು, ಚೀನಾದವರು, ಫ್ರೆಂಚರು, ಜರ್ಮನರು ವಿಜ್ನಾನದಲ್ಲಿ ಬೇಕಾದಷ್ಟು ಕೆಲಸ ಮಾಡಿದ್ದಾರೆ. ಹಾಗಿದ್ದಲ್ಲಿ “ಇಂಗ್ಲಿಷ್ ಬೇಕು, ಹಿಂದಿ ಬೇಡ” ಎನ್ನುವ ಮನೋಸ್ಥಿತಿ ಏಕೆ? ಒಂದೋ ಎರಡನ್ನೂ ವಿರೋಧಿಸಬೇಕು, ಅಥವಾ ಎರಡನ್ನೂ ಸಹಿಸಬೇಕು. ನೀವು ಈಗಿನ ಪರಿಸ್ಥಿತಿ ಮನಸ್ಸಿನಲ್ಲಿಟ್ಟುಕೊಂಡು ಇಂಗ್ಲೀಷ್ ಬೇಕು ಅಂತಿದ್ದೀರ. ನಾನು ಹೇಳ್ತಿರೋದು ಈಗಿನ ಪರಿಸ್ಥಿತಿ ಸುಧಾರಿಸಿ ಇಂಗ್ಲಿಷ್ ಜನಸಾಮಾನ್ಯನಿಗೆ ಅಗತ್ಯವಿಲ್ಲ ಎನ್ನುವ ಪರಿಸ್ಥಿತಿ ಬರಬೇಕು ಅಂತ. ಅದು ಬರಬೇಕಿದ್ದರೆ ನಿಮ್ಮ ನಮ್ಮಂಥೋರು ಅದನ್ನ ಆಗ್ರಹಿಸಬೇಕು. ಅದು ಬಿಟ್ಟು ಇಂಗ್ಲಿಷ್ ಇರ್ಲಿ, ಹಿಂದಿ ಬೇಡ ಅಂತ ಕೂತ್ರೆ ಏನು ಬದಲಾಗುತ್ತೆ?
{ಇಲ್ಲಿ ಹಿಂದಿ ಹೇರಿಕೆ ಬಗ್ಗೆ ಮಾತನಾಡಿದ್ದು ಖಂಡಿತ ಹೊಡೆದಾಟ ಅಂದುಕೊಳ್ಳಬೇಡಿ}
ಇಲ್ಲ ಅಂದುಕೊಂಡಿಲ್ಲ. 🙂 ಅಲ್ದೆ ಹಿಂದಿ ಹೇರಿಕೆಯನ್ನು ಇಲ್ಲಿ ಯಾರೂ ಸಮರ್ಥಿಸಿಲ್ಲ.
{ ಅದಕ್ಕೆ ಮೊದಲು ಆಗಬೇಕಿರುವುದು ದೇಶದ ಮಟ್ಟದಲ್ಲಿ ಸಮಾನ ಗೌರವದ ಭಾಷಾ ನೀತಿಯೊಂದನ್ನು ರೂಪಿಸುವ ಕೆಲಸ}
ಇದಕ್ಕೆ ಎಲ್ಲರೂ ಸಮ್ಮತಿ ಸೂಚಿಸುವುದರೊಂದಿಗೆ ಈ ಚರ್ಚೆ ಮುಕ್ತಾಯಗೊಳ್ಳಲಿ. 🙂
{ನಮ್ಮದೇ ಆದ ತುಳು ಭಾಷೆ ಅಳಿವಿನಂಚಿನಲ್ಲಿದೆ ಅನ್ನುವ ಮಾತು ಒಮ್ಮೆ ಕೇಳಿದ್ದೆ}
ಹಾಗಾಗಲ್ಲ ಬಿಡಿ. ನಾವೆಲ್ಲ ಇದ್ದೇವಲ್ಲ. 🙂
ಅದೇ ನಾನು ಹೇಳಿದ್ದು. ಹೇಗ ಜಪಾನಿಗರು, ಜರ್ಮನ್ನರು ತಮ್ಮ ನುಡಿಯನ್ನು ಬದುಕು ಕೊಡುವ ನುಡಿಯಾಗಿಸಿಕೊಂಡರೋ ಅದೇ ರೀತಿ ನಾವು ನಮ್ಮ ನುಡಿಗೂ ಆ ಸಾಮಥ್ಯ ಕೊಡಿಸಬೇಕು. ಅಲ್ಲಿಯವರೆಗೂ ಭಾರತದಲ್ಲಿ ಇಂಗ್ಲಿಷ್ ಇರಲಿ ಅಂತ ಯಾಕೆ ಹೇಳಿದೆ ಅಂದರೆ ನಮ್ಮನ್ನು ಆಳಿದ ಬ್ರಿಟಿಷರಿಂದಾಗಿ ಬಂದ ಇಂಗ್ಲಿಷ್ ಇವತ್ತು ಬೇಕೊ ಬೇಡವೋ ನಮ್ಮ ಉನ್ನತ ಕಲಿಕೆಯ ನುಡಿಯಾಗಿದೆ. ನಮ್ ನಮ್ ನುಡಿಗೆ ಈ ಅರ್ಹತೆ ಕೊಡಿಸುವವರೆಗೂ ಇಂಗ್ಲಿಷ್ ಅನ್ನ ಕೈ ಬಿಡುವಂತಿಲ್ಲ ಎಂದಷ್ಟೇ ನಾನು ಹೇಳಿದ್ದು. ಅಲ್ಲಿವರೆಗೂ ಫ್ರೆಂಚ್, ಜರ್ಮನ್, ಜಪಾನೀಸ್ ಇರಲಿ ಅನ್ನೋಕಾಗಲ್ಲ, ಯಾಕೆಂದ್ರೆ ಈ ನುಡಿಗಳು ಇಲ್ಯಾವತ್ತು ಇರಲಿಲ್ಲ. ಆದ್ರೆ ಇಂಗ್ಲಿಷ್ ಗೆ ಈ ದೇಶದ ಕಲಿಕೆಯಲ್ಲಿ ಒಂದು ಇತಿಹಾಸ ಇದೆ ( ಅದು ನಮ್ಮ ನುಡಿಗಳನ್ನು ಆ ಎತ್ತರಕ್ಕೆ ಏರಿಸಲಾರದ ನಮ್ಮ ದೌರ್ಬಲ್ಯದಿಂದಲೂ ಆಗಿದೆ).
ತುಳು ಮಾತನಾಡುವವರ ಸಂಖ್ಯೆ ೨೫ ಲಕ್ಷ ಎಂದು ಕೇಳಪಟ್ಟೆ. ಅದು ಕೇವಲ ಮಾತಿನ ನುಡಿಯಾಗಿ ಉಳಿದರೆ ಅದರ ಭವಿಷ್ಯ ಗಟ್ಟಿಯಾಗದು. ಅದು ಕಲಿಕೆಯ ನುಡಿಯೂ ಆಗಬೇಕು.
ಎಲ್ಲ ನುಡಿಗಳಿಗೂ ಸಮಾನ ಗೌರವ, ಸಮಾನ ಆದ್ಯತೆ ಕೊಡುವ ಭಾಷಾ ನೀತಿ ಬಂದಾಗಲೇ ಈ ಎಲ್ಲ ನುಡಿಗಳನ್ನು ಭವಿಷ್ಯದೆಡೆಗೆ ಕೊಂಡೊಯ್ಯುವ ಕೆಲಸಕ್ಕೆ ವೇಗ ಸಿಗುವುದು. ಅದಕ್ಕೆ ಮೊದಲು ಹಿಂದಿ ಹೇರುವ ರಾಜಾಭಾಷಾ ಕಾಯಿದೆಯನ್ನು ಕೈಬಿಟ್ಟು, ದೇಶದ ಒಗ್ಗಟ್ಟು ಬಲಪಡಿಸುವ ಕೆಲಸಕ್ಕೆ ಕೇಂದ್ರ ಸರ್ಕಾರ ಮುಂದಾಗಬೇಕು.
Hindi at some point was proposed to be used as a common administrative language (and for other reasons as well) throughout the country. However it would have been unfair for states for whom Hindi was completely new and alien.
India is a diverse country with more than 25 official language and close to a 1000 dialects. I think the intent of having a common language for administrative purpose was good, but somewhere too many mistakes were made and has left a bad taste of Hindi down South. Each one of India’s official languages (the one that is recognized under 8th schedule of constitution) has over 1000 years of history, and a script and it’s own literary heritage.
Today because of business reasons, English has become the most important language. Hindi is the language of the Northern,or specifically UP-Bihar belt.Hindi is an Indian Language.but it is wrong to say its India’s language.its unfair to try and impose Hindi’s supremacy upon South Indians.
Bicose this is N s o