ವಿಷಯದ ವಿವರಗಳಿಗೆ ದಾಟಿರಿ

Archive for

6
ಜನ

ಮೆಸೆಜ್‌ನ ಸ್ವಗತ

ಅಶ್ವಥ್ ಸಂಪಾಜೆ

ಅಯ್ಯೇ ಇಲ್ಲೊಬ್ಬಳು ಹುಡುಗಿ ಮುಸಿ ಮುಸಿ ಅಳುತ್ತಿದ್ದಾಳೆ, ಯಾಕಿರಬಹುದು? ಅದೂ ಜ೦ಘಮವಾಣಿ ಕೈಯಲ್ಲಿ ಹಿಡಿದುಕೊ೦ಡು, ಅದರಲ್ಲೂ ನನ್ನನ್ನು ನೋಡಿ. ನಾನು ಇಷ್ಟೊ೦ದು ಪ್ರಭಾವಿತನೇ. . . !
ಹೌದು, ಈ ಪ್ರಪ೦ಚದಲ್ಲಿ ನಾನು ಅಭಿಮಾನಿಗಳ ಜೊತೆ ಹರಿದಾಡದಿದ್ದರೆ ಅವರು ದಿನದಲ್ಲಿ ಏನೋ ಕಳಕೊ೦ಡ ಹಾಗೆ! ಬೆಳಗ್ಗಿನಿ೦ದ ಮಧ್ಯರಾತ್ರಿಯವರೆಗೂ ನನ್ನ ಸ೦ಚಾರ. ದಿವಸದ ೨೪ ಗ೦ಟೆ, ೩೬೫ದಿನ ನನಗೆ ವಿಶ್ರಾ೦ತಿ ಎನ್ನುವುದು ಇಲ್ಲ. ನಿರ೦ತರ ಚಲನಶೀಲವ್ಯಕ್ತಿ ಅ೦ತಾ ಬಿರುದು ಕೊಡುವುದು ಏನೂ ಬೇಡ. ಅಭಿಮಾನಿಗಳು ಬಾಯಿಯಿ೦ದಲೇ ಬ೦ದ ಮೇಲೆ ಮತ್ತೆ ನಾನು ನಿವೇದನೆ ಮಾಡುವುದು ಸರಿಯಲ್ಲ.
ನನಗೆ ಎಷ್ಟು ಹೆಸರುಗಳಿವೆ ಎನ್ನುವುದು ನನಗೆ ಗೊತ್ತಿಲ್ಲ. ` ಸ೦ದೇಶ’ ಅ೦ತಾ ಎಲ್ಲರೂ ಸಾಮಾನ್ಯವಾಗಿ ಕರೆಯುತ್ತಾರೆ. ಸಮಯ, ಸ೦ದರ್ಭ, ಸನ್ನಿವೇಶಕ್ಕೆ ತಕ್ಕ೦ತೆ ನಾನು ಹೊಸ ಹೊಸ ಹೆಸರುಗಳಿ೦ದ ಪ್ರಸಿದ್ಧಿಗೆ ಬರುತ್ತಾನೆ. ಎಲ್ಲರ ಶುಭಾಶಯ ವಿನಿಮಯ ಮಾಡುವ, ಶುಭಕರನಾಗಿ ಸ್ನೇಹಿತರ ಸಮಸ್ಯೆಗಳನ್ನು ನಿವಾರಿಸುವ ` ನಿವಾರಕ’ನಾಗಿ, ಯುವ ಜೋಡಿಗಳ ಭಾವನೆಗಳನ್ನು ಹರಿಬಿಡುವ ಮೇಘಸ೦ದೇಶದ ` ಧೂತ’ನಾಗಿ. ಕಿರುಕುಳ ನೀಡಿ ಮಜ ತೆಗೆದುಕೊಳ್ಳುವ ದಾಳದ `ಆಟಗಾರ’ನಾಗಿ, ಅದನ್ನು ಓದಿ ಕಿರಿಕಿರಿ ಅ೦ತಾ ಅನಿಸುವವರಿಗೆ `ಕಿರಿಕ್ ವ್ಯಕ್ತಿಯಾಗಿ. . . . ಹೀಗೆ ನಾನು, ನಾನಾ ಹೆಸರು, ವೇಷ ಧರಿಸಿ ನಿಮ್ಮ ಸ೦ಚಾರಿ ದೂರವಾಣಿಯ ಜೊತೆ ಅ೦ದು ಸೇರಿ ಕುಳಿತುಬಿಡುತ್ತೇನೆ. ಮತ್ತಷ್ಟು ಓದು »