ಕನ್ನಡ ಮತ್ತು ಸಂಸ್ಕೃ’ತ’ ಇಲಾಖೆಯೇ?
ಸಂಸ್ಕೃತದಲ್ಲಿ ಅಡಗಿರುವ ಅರಿವನ್ನು ಹೆಚ್ಚು ಜನರಿಗೆ ಪರಿಚಯಿಸುವ ಉದ್ದೇಶದಿಂದ ಶುರುವಾದ ಸಂಸ್ಕೃತ ಭಾರತಿ ಸಂಸ್ಥೆ ಬೆಂಗಳೂರಿನಲ್ಲಿ ಸಂಸ್ಕೃತ ಪುಸ್ತಕ ಮೇಳ ಆಯೋಜಿಸಿದೆ ಅನ್ನುವ ಜಾಹೀರಾತು ಪತ್ರಿಕೆಗಳಲ್ಲಿ ಕಂಡೆ. ವೇದ, ಉಪನಿಷತ್ತು, ಆಯುರ್ವೇದ ಸೇರಿದಂತೆ ಹಲವು ಜ್ಞಾನ ಸಂಪತ್ತನ್ನು ಜನ ಸಾಮಾನ್ಯರಿಗೆ ಮುಟ್ಟಿಸುವುದು ಈ ಮೇಳದ ಉದ್ದೇಶವಾಗಿದೆಯಂತೆ. ಪುಸ್ತಕ ಮೇಳಕ್ಕೆ ನನ್ನ ಯಾವುದೇ ವಿರೋಧವಿಲ್ಲ. ಸಂಸ್ಕೃತದ ಬಗ್ಗೆ ಮೊದಲೇ ವಿರೋಧ ಇಲ್ಲ. ಸಂಸ್ಕೃತದಲ್ಲಿರುವ ಎಲ್ಲ ಒಳ್ಳೆಯದು ಕನ್ನಡಕ್ಕೆ ಅನುವಾದಗೊಂಡು ಕನ್ನಡಿಗರಿಗೆ ದೊರಕಲಿ ಅನ್ನುವುದು ನನ್ನ ನಿಲುವು. ಆದರೆ ಈ ಮೇಳದ ಜಾಹೀರಾತು ನೋಡಿದಾಗ ಅಚ್ಚರಿಯಾಗಿದ್ದು, ಈ ಮೇಳದ ಸಹ ಪ್ರಾಯೋಜಕರು ಕರ್ನಾಟಕ ಸರ್ಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಎಂಬುದು !
ಆರ್.ಎಸ್.ಎಸ್ ನ ಅಂಗಸಂಸ್ಥೆಯಾದ “ಸಂಸ್ಕೃತ ಭಾರತಿ” ಸಂಸ್ಕೃತ ಪ್ರಚಾರ, ಪುಸ್ತಕ ಮೇಳ ಅಂತ ಖಾಸಗಿಯಾಗಿ ಕಾರ್ಯಕ್ರಮ ನಡೆಸುವುದಕ್ಕೆ ಯಾರ ವಿರೋಧವೂ ಇಲ್ಲ. ಆದರೆ ಇಂತಹ ಕಾರ್ಯಕ್ರಮವನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಪ್ರಾಯೋಜಿಸುವುದರ ಹಿಂದಿನ ರಹಸ್ಯವೇನು? ಇಮಾಮ ಸಾಬಿಗೂ ಗೋಕುಲಾಷ್ಟಮಿಗೂ ಏನ್ ಸಂಬಂಧ? ಬೆಳಗಾವಿಯಲ್ಲಿ ನಡೆಯಬೇಕಿದ್ದ ವಿಶ್ವ ಕನ್ನಡ ಸಮ್ಮೇಳನಕ್ಕೆ ಸರಿಯಾದ ಆದ್ಯತೆ, ಗಮನ ಕೊಡದೇ ವರ್ಷಾನುಗಟ್ಟಲೆ ಅದನ್ನು ಮುಂದೆ ಹಾಕುವ ಸರ್ಕಾರ ಸಂಸ್ಕೃತ ಪುಸ್ತಕ ಮೇಳದ ಯಶಸ್ಸಿಗೆ ಟೊಂಕ ಕಟ್ಟಿ ನಿಲ್ಲುವುದನ್ನು ನೋಡಿದಾಗ ಅದನ್ನು misplaced priority ಅನ್ನದೇ ವಿಧಿಯಿಲ್ಲ. ಹೇಗೆ ಕೊಂಕಣಿ ಅಕಾಡೆಮಿಯ ಕೆಲಸ ಕೊಂಕಣಿ ಭಾಷೆ, ಸಂಸ್ಕೃತಿಯ ಉಳಿಸುವಿಕೆ-ಬೆಳೆಸುವಿಕೆಯೋ, ಹೇಗೆ ತುಳು ಅಕಾಡೆಮಿಯ ಕೆಲಸ ತುಳು ನುಡಿ, ತುಳು ಸಂಸ್ಕೃತಿಯ ಪೋಷಣೆ, ರಕ್ಷಣೆಯೋ, ಅದೇ ರೀತಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಕೆಲಸ ಕನ್ನಡ ನಾಡು-ನುಡಿ, ಸಂಸ್ಕೃತಿಯ ಉಳಿವು,ಬೆಳೆವು, ಕನ್ನಡಿಗರಲ್ಲಿ ಕನ್ನಡತನದ ಅರಿವು ಹೆಚ್ಚಿಸುವತ್ತ ಗಮನ ಹರಿಸುವುದೇ ವಿನಹ ಇಂದು ಸಂಸ್ಕೃತ ಮೇಳ ಇಲ್ಲವೇ ನಾಳೆ ದಿನ ತಮಿಳು ಮೇಳ, ಹಿಂದಿ ಮೇಳ ಅಂತ ತನ್ನ ಕಾರ್ಯ ವ್ಯಾಪ್ತಿಗೆ ಸಂಬಂಧಿಸದ ಮೇಳಗಳನ್ನು ಪ್ರಾಯೋಜಿಸುವುದಲ್ಲ. ಕನ್ನಡ ವಿಶ್ವವಿದ್ಯಾಲಯಗಳು ಅನುದಾನವಿಲ್ಲದೇ ಒದ್ದಾಡುತ್ತಿವೆ. ಗಡಿ ಭಾಗದ ಕನ್ನಡ ಶಾಲೆಗಳೆಲ್ಲ ಒಂದೊಂದಾಗಿ ಬಾಗಿಲು ಹಾಕಿ, ಅಲ್ಲಿನ ಕನ್ನಡಿಗರೆಲ್ಲ ಪರಭಾಷಿಕರಾಗುತ್ತಿದ್ದಾರೆ, ಇದಾವುದನ್ನೂ ಗಮನಿಸದ ಸರ್ಕಾರ, ಸಂಸ್ಕೃತ ಪುಸ್ತಕ ಮೇಳವನ್ನು ಪ್ರಾಯೋಜಿಸುವುದನ್ನು ನೋಡಿದಾಗ, ಕೋಟ್ಯಾಂತರ ಜನ ಆಡುವ ಜೀವಂತ ಭಾಷೆಯತ್ತ ಅದಕ್ಕಿರುವ ಆದ್ಯತೆ ಏನಿದೆ, ಎಷ್ಟಿದೆ ಅನ್ನುವ ಪ್ರಶ್ನೆ ಕನ್ನಡಿಗರ ಮನಸಲ್ಲಿ ಬರದೇ ಇರದು. ಮತ್ತಷ್ಟು ಓದು

ಇರುವೆ ಕೊಟ್ಟ ಕಿರಿಕಿರಿ
ಪ್ಯಾಂಟ್ ಹಾಕಿ ಇನ್ ಶರ್ಟ್ ಮಾಡಿ, ಶಾಲೆಗೆ ಟಿಪ್ ಟಾಪಾಗಿ ಹೋಗುತ್ತಿದ್ದೆ. ಸ್ವಲ್ಪ ತುಂಟನಾಗಿದ್ದ ನಾನು ತರಗತಿಯ ಕೊನೆಯ ಬೆಂಚಿನಲ್ಲಿ ಕೂರಲು ಇಷ್ಟ ಪಡುತ್ತಿದ್ದೆ. ಟೀಚರ್ ತರಗತಿಗೆ ಬಂದೊಡನೆ “ದೀಪಕ್ ಎಲ್ಲಿ ಬಾ” ಎಂದು ಮುಂದಿನ ಬೆಂಚಿನಲ್ಲಿ ಕೂರಿಸಿ ನನ್ನಾಸೆಗೆ ತಣ್ಣೀರು ಹಾಕುತ್ತಿದ್ದರು.
ನಾಲ್ಕು ಕಣ್ಣಿನ ಆ ಟೀಚರ್ ಬಾರಿ ಸೀರಿಯಸ್ ಮತ್ತು ಜೋರಿನವರು. ಅವರ ಮುಖದಲ್ಲಿ ನಗು ನೋಡಿದರೆ ಏನೋ ವಿಸ್ಮಯ ಕಂಡಂತೆ ಆಗುತ್ತಿತ್ತು. ಎಂದಿನಂತೆ ಟೀಚರ್ ತರಗತಿಗೆ ಬಂದು ಹಾಜರಾತಿ ಕರೆದರು. ಒಂದು ಕೈಯಲ್ಲಿ ಬೆತ್ತ ಮತ್ತೊಂದು ಕೈಯಲ್ಲಿ ‘ಸಮಾಜ ವಿಜ್ಞಾನ’ ಪುಸ್ತಕ ಹಿಡಿದು ಪಾಠ ಶುರು ಮಾಡಿದರು.
ಅಷ್ಟರಲ್ಲಿ ನನ್ನ ಕಾಲಿನಲ್ಲಿ ಏನೋ ಹರಿದಂತೆ ಆಯಿತು. ನಿಧಾನವಾಗಿ ಮೇಲೆ-ಮೇಲೆ ಹತ್ತುತ್ತಾ ಬಂದ ಅ ಜೀವಿ ಎಡ ತೊಡೆಗೆ ‘ಚುನ್ಕ್ ‘ಎಂದು ಕಚ್ಚಿತು. ಓಹೋ … ಇದು ಇರುವೆಯದೆ ಕೆಲಸ ಎಂದು ತಿಳಿಯಿತು. ಹೇಗೋ ಸಹಿಸಿಕೊಂಡು ಕಾಲನ್ನು ಆ ಕಡೆ ಈ ಕಡೆ ಆಡಿಸಿದೆ. ಸ್ವಲ್ಪ ಹೊತ್ತು ಸುಮ್ಮನಾದ ಇರುವೆ ಮತ್ತೊಮ್ಮೆ ‘ಚೋಇಕ್ ‘ಎಂದು ಕಚ್ಚಿತ್ತು. ಉರಿ ತಡೆಯಲಾರದೆ ಮೆಲ್ಲೆ ” ಹ್ಹೂ …. ” ಎಂದೆ. ಟೀಚರ್ ನ ಕಿವಿ ನನ್ನ ಬಾಯಿಯಲ್ಲೇ ಇತ್ತೇನೋ ಎಂಬಂತೆ ಸರಕ್ಕನೆ ನನ್ನೆಡೆಗೆ ತಿರುಗಿದರು. ಹುಬ್ಬಾಡಿಸುತ್ತಾ “ಏನೋ? ” ಎಂದರು. “ಏನಿಲ್ಲ ” ಎಂದೆ. ಎದ್ದು ನಿಲ್ಲಲು ಹೇಳಿದರು. ” ಯಾರದ್ರು ಏನಾದ್ರು ಮಾಡಿದ್ರಾ ?” ಎಂದು ಕೇಳಿದರು. ‘ಇಲ್ಲ’ ಎಂಬಂತೆ ತಲೆಯಾಡಿಸಿದೆ. ನಾನು ಎದ್ದ ವೇಗಕ್ಕೆ ಇರುವೆಗೆ ಕೋಪ ನೆತ್ತಿಗೀರಿರಬೇಕು. ಅದು ಮತ್ತೊಮ್ಮೆ -ಮಗದೊಮ್ಮೆ ಕಚ್ಚ ತೊಡಗಿತು. ಪ್ಯಾಂಟಿನ ಒಳಗೆ ಇರುವೆ ಕಚ್ಚುತ್ತಿದೆ ಎಂದು ಹೇಳಿ ಬಿಡಲೇ?. ಬೇಡ- ಬೇಡ ಎಲ್ಲಾ ನಗುತ್ತಾರೆ, ಹೇಳದೆ ಹೋದರೆ ಟೀಚರ್ ಹೊಡಿಯುತ್ತಾರೆ. ಇರುವೆಯ ಕಡಿತ, ಟೀಚರ್ ಹೊಡೆತ ಯಾರಿಗೆ ಬೇಕು ? ಆ ಮಳೆಗಾಲದ ಚಳಿಯಲ್ಲೂ ಬೆವರತೊಡಗಿದೆ. ಯಾವ ಜನ್ಮದ ಶಾಪವೋ ಎಂದು ಯೋಚಿಸುತ್ತಿರಬೇಕಾದರೆ:, “ಕುಳಿತುಕೋ , ನಿನ್ನ ಕಪಿ ಚೆಸ್ತೆ ಮನೆಯಲ್ಲಿಟ್ಟುಕೋ, ನನ್ ಜೊತೆ ತೋರಿಸಬೇಡ ” ಎಂದು ಟೀಚರ್ ಗುಟುರು ಹಾಕಿ ಕೂರಿಸಿದರು . ಮತ್ತಷ್ಟು ಓದು 






