ವಿಷಯದ ವಿವರಗಳಿಗೆ ದಾಟಿರಿ

ಜನವರಿ 7, 2011

2

ಇರುವೆ ಕೊಟ್ಟ ಕಿರಿಕಿರಿ

‍ನಿಲುಮೆ ಮೂಲಕ

ದೀಪಕ್ ಮದೆನಾಡು

 ಪ್ಯಾಂಟ್ ಹಾಕಿ ಇನ್ ಶರ್ಟ್ ಮಾಡಿ, ಶಾಲೆಗೆ ಟಿಪ್ ಟಾಪಾಗಿ ಹೋಗುತ್ತಿದ್ದೆ. ಸ್ವಲ್ಪ ತುಂಟನಾಗಿದ್ದ ನಾನು ತರಗತಿಯ ಕೊನೆಯ ಬೆಂಚಿನಲ್ಲಿ ಕೂರಲು ಇಷ್ಟ ಪಡುತ್ತಿದ್ದೆ. ಟೀಚರ್ ತರಗತಿಗೆ ಬಂದೊಡನೆ “ದೀಪಕ್ ಎಲ್ಲಿ ಬಾ” ಎಂದು ಮುಂದಿನ ಬೆಂಚಿನಲ್ಲಿ ಕೂರಿಸಿ ನನ್ನಾಸೆಗೆ ತಣ್ಣೀರು ಹಾಕುತ್ತಿದ್ದರು.

ನಾಲ್ಕು ಕಣ್ಣಿನ ಆ ಟೀಚರ್ ಬಾರಿ ಸೀರಿಯಸ್ ಮತ್ತು ಜೋರಿನವರು. ಅವರ ಮುಖದಲ್ಲಿ ನಗು ನೋಡಿದರೆ ಏನೋ ವಿಸ್ಮಯ  ಕಂಡಂತೆ ಆಗುತ್ತಿತ್ತು. ಎಂದಿನಂತೆ ಟೀಚರ್ ತರಗತಿಗೆ ಬಂದು ಹಾಜರಾತಿ ಕರೆದರು. ಒಂದು ಕೈಯಲ್ಲಿ ಬೆತ್ತ ಮತ್ತೊಂದು ಕೈಯಲ್ಲಿ ‘ಸಮಾಜ ವಿಜ್ಞಾನ’ ಪುಸ್ತಕ ಹಿಡಿದು ಪಾಠ ಶುರು ಮಾಡಿದರು.

ಅಷ್ಟರಲ್ಲಿ ನನ್ನ ಕಾಲಿನಲ್ಲಿ ಏನೋ ಹರಿದಂತೆ ಆಯಿತು. ನಿಧಾನವಾಗಿ ಮೇಲೆ-ಮೇಲೆ ಹತ್ತುತ್ತಾ ಬಂದ ಅ ಜೀವಿ ಎಡ ತೊಡೆಗೆ ‘ಚುನ್ಕ್ ‘ಎಂದು ಕಚ್ಚಿತು. ಓಹೋ … ಇದು ಇರುವೆಯದೆ ಕೆಲಸ ಎಂದು ತಿಳಿಯಿತು. ಹೇಗೋ ಸಹಿಸಿಕೊಂಡು ಕಾಲನ್ನು ಆ ಕಡೆ ಈ ಕಡೆ ಆಡಿಸಿದೆ. ಸ್ವಲ್ಪ ಹೊತ್ತು ಸುಮ್ಮನಾದ ಇರುವೆ ಮತ್ತೊಮ್ಮೆ ‘ಚೋಇಕ್ ‘ಎಂದು ಕಚ್ಚಿತ್ತು. ಉರಿ ತಡೆಯಲಾರದೆ ಮೆಲ್ಲೆ ” ಹ್ಹೂ …. ” ಎಂದೆ. ಟೀಚರ್ ನ  ಕಿವಿ ನನ್ನ ಬಾಯಿಯಲ್ಲೇ ಇತ್ತೇನೋ ಎಂಬಂತೆ ಸರಕ್ಕನೆ ನನ್ನೆಡೆಗೆ ತಿರುಗಿದರು. ಹುಬ್ಬಾಡಿಸುತ್ತಾ “ಏನೋ? ” ಎಂದರು. “ಏನಿಲ್ಲ ” ಎಂದೆ. ಎದ್ದು ನಿಲ್ಲಲು ಹೇಳಿದರು. ” ಯಾರದ್ರು ಏನಾದ್ರು ಮಾಡಿದ್ರಾ ?” ಎಂದು ಕೇಳಿದರು. ‘ಇಲ್ಲ’ ಎಂಬಂತೆ ತಲೆಯಾಡಿಸಿದೆ. ನಾನು ಎದ್ದ ವೇಗಕ್ಕೆ ಇರುವೆಗೆ ಕೋಪ ನೆತ್ತಿಗೀರಿರಬೇಕು.  ಅದು ಮತ್ತೊಮ್ಮೆ -ಮಗದೊಮ್ಮೆ ಕಚ್ಚ ತೊಡಗಿತು. ಪ್ಯಾಂಟಿನ ಒಳಗೆ ಇರುವೆ ಕಚ್ಚುತ್ತಿದೆ ಎಂದು ಹೇಳಿ ಬಿಡಲೇ?. ಬೇಡ- ಬೇಡ ಎಲ್ಲಾ ನಗುತ್ತಾರೆ, ಹೇಳದೆ ಹೋದರೆ ಟೀಚರ್ ಹೊಡಿಯುತ್ತಾರೆ. ಇರುವೆಯ ಕಡಿತ, ಟೀಚರ್ ಹೊಡೆತ ಯಾರಿಗೆ ಬೇಕು ? ಆ ಮಳೆಗಾಲದ ಚಳಿಯಲ್ಲೂ ಬೆವರತೊಡಗಿದೆ. ಯಾವ ಜನ್ಮದ ಶಾಪವೋ ಎಂದು ಯೋಚಿಸುತ್ತಿರಬೇಕಾದರೆ:,   “ಕುಳಿತುಕೋ , ನಿನ್ನ ಕಪಿ ಚೆಸ್ತೆ ಮನೆಯಲ್ಲಿಟ್ಟುಕೋ, ನನ್ ಜೊತೆ ತೋರಿಸಬೇಡ ” ಎಂದು ಟೀಚರ್ ಗುಟುರು ಹಾಕಿ ಕೂರಿಸಿದರು .

ಏನಾದರು ಮಾಡಿ ಆ ಇರುವೆಯನ್ನು ಹಿಡಿಯಲೇ ಬೇಕು ಎಂದು ಶಪಥ ಮಾಡಿದೆ. ಮೆಲ್ಲನೆ ಎಡ ಜೇಬಿಗೆ ಕೈ ಹಾಕಿ, ತೊಡೆಯ ಬಳಿಯಲ್ಲಿ nonstop ಆಗಿ ಕಚ್ಚುತ್ತಿದ್ದ ಇರುವೆಯನ್ನು ಗಟ್ಟಿಯಾಗಿ ಒಸಕಿದೆ. ಮೊದಲು ಕಚ್ಚಿದ ಉರಿ ಹಾಗೆ ಇದ್ದರು ಇರುವೆಯನ್ನು ಸಾಯಿಸಿದೆ ಎಂಬ ಖುಷಿಯಾಯಿತು. ಅಂದು ಟೀಚರ್ ಹೇಳಿದ ‘ ಸಮಾಜ ವಿಜ್ಞಾನ’ದ ಒಂದು ಪದವೋ ಕಿವಿಯೊಳಗೆ  ಹೊಕ್ಕಿರಲಿಲ್ಲ.

ಅಷ್ಟರಲ್ಲಿ ಇನ್ನೆರಡು ಕಡೆಯಲ್ಲಿ ಏಕಕಾಲಕ್ಕೆ ಇರುವೆಗಳು ಕಚ್ಚಿದ ಅನುಭವ!! ಹೋ… pantinolage ದೊಡ್ಡ ಇರುವೆಯ ಸಂಸಾರವೇ ಅಡಗಿದೆ ಎಂದು ಗೊತ್ತಾಯಿತು. ಹೇ ಪರಮೇಶ್ವರಾ ! ಎಂದು ತಲೆ ಎತ್ತಿ ಮೇಲೆ ನೋಡುತ್ತಿದ್ದಂತೆ ಢನ ಢನ ಎಂದು ಗಂಟೆಯಾಯಿತು. ಟೀಚರ್ ತರಗತಿಯಿಂದ ಹೋಗುತ್ತಿದ್ದಂತೆ ನಾನು ಶೌಚಾಲಯದೆಡೆಗೆ ಓಟಕಿತ್ತೆ !!

ಆ ಶೌಚಾಲಯದ ಕತ್ತಲು ಕೊಣೆಯಲ್ಲಿ ಇರುವೆಯನ್ನು ಹುಡುಕುದಾದರು ಹೇಗೆ? ಸುಮ್ಮನೆ ಕಚ್ಚಿದಲ್ಲೆಲ್ಲಾ trupthiyaguvastu ಕೆರೆದುಕೊಂಡು, ಏನೂ ಆಗದವನಂತೆ ಶೌಚಾಲಯದಿಂದ ಹೊರಬಂದೆ.!

ಸಂಜೆಯವರೆಗೂ ನಾವಿನ್ನೂ jeevanthavagiddeve ಎಂಬಂತೆ ವಿರಾಮ ಕೊಟ್ಟು -ಕೊಟ್ಟು ಕಚ್ಚುತ್ತಿದ್ದವು. ಸಂಜೆ ಮನೆಗೆ ಓಡುತ್ತಲೇ ಬಂದು ಪ್ಯಾಂಟ್ ಜಾರಿಸಿ ಎಸೆದೆ. ತೊಡೆಯ ಭಾಗ ಬೊಬ್ಬೆ ಬಂದು ಕೆಂಪಾಗಿದ್ದವು. ಹಾಸಿಗೆ ಮೇಲೆ ಕೂತುಕೊಂಡು ” ಕಚ್ಚು … ಕಚ್ಚು … ಧೈರ್ಯ ಇದ್ರೆ ಈಗ ಕಚ್ಚು ನೋಡೋಣ …!! ” ಎಂದು ಕೋಪದಿಂದ ಇರುವೆಗಳನ್ನ ಹುಡುಕ ತೊಡಗಿದೆ.

ಈ ಇರುವೆಗಳು ಬಟ್ಟೆಯನ್ನು ಒಣಗಲು ಹಾಕಿದ್ದಲ್ಲಿ ಹತ್ತಿಕೊಂಡಿದ್ದವು. ಬೆಳಿಗ್ಗೆ pantannu ಸರಿಯಾಗಿ ಕೊದವಡೆ ಹಾಕಿಕೊಂಡಿದ್ದೆ! ಇರುವೆ ಶಾಲೆಯವರೆಗೆ ಬೆಚ್ಚನೆಯ ಸುಖ ಪ್ರಯಾಣ ಮಾಡಿದ್ದವು, ನನ್ನ ಜೀವ thindiddavu!!!

ಮುಂದುವರಿಯುವುದು…

Read more from ಲೇಖನಗಳು
2 ಟಿಪ್ಪಣಿಗಳು Post a comment
  1. rajani's avatar
    rajani
    ಜನ 11 2011

    sir thumbane chanagide…..:)ella ok….typing heege yaake?????????? editor enu madthidare……kannadada maryade ulisi dammayya………..

    ಉತ್ತರ
  2. divya's avatar
    divya
    ಫೆಬ್ರ 4 2011

    thumba chennagide sir….olle experience nimdu…..!! thumba frank agi nim anubhavana helikondidira……super super….ide tharada anubhavagala bagge barithe iri sir….good luck….

    ಉತ್ತರ

ನಿಮ್ಮ ಅನಿಸಿಕೆ...

Note: HTML is allowed. Your email address will never be published.

Subscribe to comments