ಎಷ್ಟೊತ್ತು ನಿನ್ನ ಅಲಂಕಾರ ?
ಮೊನ್ನೆ ಬಸವನಗುಡಿಯ ದೊಡ್ಡ ಗಣಪತಿ ದೇವಸ್ಥಾನಕ್ಕೆ ನಾನು ನನ್ನ ಹೆಂಡತಿ ಹೋಗುವ ತಯಾರಿ ನಡೆಯುತ್ತಿತ್ತು. ಸಂಜೆ ನಾಲ್ಕಕ್ಕೆ ಹೊರಡುವ ನನ್ನ ತರಾತುರಿಗೂ ಅವಳ ಅಲಂಕಾರ ಪರಾಕಾಷ್ಟೆಗೂ ಸಮಯ ಐದುವರೆಯಾಗಿತ್ತು. ಅಂತು ಹೊರಡುವ ಭಾಗ್ಯ ಜೊತೆಗೆ ದೊಡ್ಡ ಗಣಪನಿಗೆ ನಮ್ಮ ದರ್ಶನದ ಭಾಗ್ಯ ನೆನೆದು ಕಿರುನಗೆ ಬೀರುತ್ತಾ, ಬೆಂಗಳೂರಿಗೆ ಹೊಸಬಳಾದ ನನ್ನಾಕೆ ರಸ್ತೆಯಲ್ಲಿ ಸಿಗುವ ಅಷ್ಟು ಕಟ್ಟಡಗಳು, ಪಾರ್ಕುಗಳು, ಸಿನಿಮಾ ಥಿಯೇಟರ್ಗಳು, ಅಂಗಡಿ, ಶಾಪಿಂಗ್ ಮಾಲ್ ಎಲ್ಲವನ್ನು ಕುತೂಹಲದಿಂದ ನೋಡುತ್ತಾ, ಪ್ರತಿಯೊಂದಕ್ಕೂ ವಿವರಣೆ ಕೇಳುತ್ತಾ, ಮತ್ತದನ್ನು ತನ್ನ ಊರುಗಳಿಗೆ ಹೊಲಿಸುತಾ ಸಾಗಿತು, ಸಂಜೆ ಆರಕ್ಕೆ ತಲುಪಿದ್ದಾಯಿತು.
ಅವಳ ಮನಸ್ಸಿನಲ್ಲಿ ಬೆಂಗಳೂರು ಏನು ಅಲ್ಲ, ನ್ಯೆಸರ್ಗಿಕ ಸೌಂದರ್ಯವಿಲ್ಲ, ಅಲ್ಲೆಲ್ಲೂ ಬೆಟ್ಟ ಗುಡ್ಡವಿಲ್ಲ, ನದಿ ತೊರೆಗಳಿಲ್ಲ, ನೇಗಿಲಿಲ್ಲ, ಉಳುವ ಯೋಗಿಯಿಲ್ಲ, ಹಸಿರು ಉಹೂ ಅದ ವಾಸನೆಯೇ ಇಲ್ಲ, ಪ್ರಾಣಿ ಪಕ್ಷಿಗಳಿಲ್ಲ, ಇದ್ದದ್ದು ಒಂದಷ್ಟು ಕಾಗೆಗಳಷ್ಟೇ, ಅದು ಎಲ್ಲೋ ದೂರಕ್ಕೆ ಅಕಸ್ಮಾತಾಗಿ ಬೆಳಯಲು ಬಿಟ್ಟಿದ್ದ ಮರಗಳಲ್ಲಿ, ಆಕಾಶದಲ್ಲಿ, ಮತ್ತೆಲ್ಲೋ ಹೊಟ್ಟೆಹೊರೆಯುವ ಕಾಯಕದಲ್ಲಿ, ಮಲ್ಲೇಶ್ವರಂ ದಾಟಿ ಆನಂದ್ ರಾವ್ ಸರ್ಕಲ್ಲಿಗೆ ಬರುವಾಗ ಇವಳನ್ನು ಫ್ಲ್ಯೆಓವರ್ ಮೇಲೆ ಕರೆದುಕೊಂಡು ಹೋಗುವ ಮನಸ್ಸಾಗಿ ಕೃಷ್ಣ ಪ್ಲೋರ್ ಮಿಲ್ ಕಡೆಗೆ ಗಾಡಿ ತಿರುಗಿಸಿದ್ದಾಯಿತು, ನೋಡೇ ಈಗ ಪ್ಹ್ಲ್ಯೇಓವರ್ ಬರುತ್ತೆ ಅದು ಮುಗಿಯುವ ವೇಳೆಗೆ ಪಕ್ಕದಲ್ಲೇ ರೇಸ್ ಕೋರ್ಸ್ ಸಿಗುತ್ತೆ ಅಂದೇ, ಯಾಕೋ ಏನು ಮಾತಾಡಲಿಲ್ಲ, ನನ್ನ ಹೆಮ್ಮೆಯ ಬೆಂಗಳೂರು ನೋಡ್ತಿದ್ದಾಳೆ ಅನಿಸಿ, ಸುಮ್ಮನೆ ಗಾಡಿ ಚಲಾಯಿಸುತ್ತಿದ್ದೆ, ಪ್ಹ್ಲ್ಯೇ ಓವರ್ ಇಳಿಯುವಾಗ ಕಾಣುವ ರೇಸ್ ಕೋರ್ಸ್ ತೋರಿಸಲು ಗಾಡಿ ಬಾಡಿಗೆ ಹಾಕಿ ನಿಲ್ಲಿಸಿದೆ, ಇದೆ ಕಣೆ ರೇಸ್ ಕೋರ್ಸ್ ಅಂದೇ, ಥೂ!!! ಇದೆನಾ ನಿಮ್ಮ ಬೆಂಗಳೂರು ಒಂದು ಗಿಡ ಮರ ಇಲ್ವೆಲ್ಲಲ್ರಿ, ಬರ ಬಂದ ಬಯಲುಸೀಮೆಯಾಗಿದೆ ನಿಮ್ಮೂರು, 🙂 ನಾನು ಅವಳಿಗೆ ರೇಸ್ ಕೋರ್ಸ್ ಬಗ್ಗೆ ಹೇಳೋಕೆ ಹೊರಟೆ, ಸುಮ್ನಿರಿ ಸಾಕು ಕೆಲಸಕ್ಕೆ ಬರದ ಕುದುರೆ ಜೂಜಿಗೆ ಇಷ್ಟು ಜಾಗವಿದೆ, ಒಂದಷ್ಟು ಕೆರೆ ಹೊಲ ಇರೋಕೆ ಜಾಗ ಇಲ್ಲ ಅಂದದ್ದಾಯಿತು. ಮತ್ತಷ್ಟು ಓದು 
ಆಂಗ್ ಸಾನ್ ಸೂಕಿ ಎಂಬ ಹೆಣ್ಣುಮಗಳಿಂದ ನಾವು ಕಲಿಯಬೇಕಾದದ್ದು !
ಬರ್ಮಾದ ಪ್ರಜಾಪ್ರಭುತ್ವ ಮತ್ತು ಮಾನವ ಹಕ್ಕುಗಳ ಹೋರಾಟಗಾರ್ತಿ ಆಂಗ್ ಸಾನ್ ಸೂ ಕಿಯ ಬಗ್ಗೆ ಚಿಕ್ಕಂದಿನಿಂದಲೂ ಬೇರೆ ಬೇರೆ ಪತ್ರಿಕೆಗಳಲ್ಲಿ ಓದುತ್ತಲೇ ಇದ್ದೆ. ತನ್ನ ನಾಡಿನ ಜನರ ಸ್ವಾತಂತ್ರ್ಯಕ್ಕಾಗಿ, ಅವರ ಹಕ್ಕುಗಳಿಗಾಗಿ ಹೋರಾಡುತ್ತ ಹೆಚ್ಚು ಕಡಿಮೆ ಬದುಕಿನ ಮುಕ್ಕಾಲು ಭಾಗ ಗೃಹ ಬಂಧನದಲ್ಲೇ ಕಳೆದ ಛಲಗಾರ್ತಿ ಈಕೆ. ಇತ್ತೀಚೆಗಷ್ಟೇ ಬಿಡುಗಡೆಗೊಂಡು ಆಚೆ ಬಂದ ಆಕೆಯ ಈ ಕೆಳಗಿನ ಮಾತುಗಳು ಏಳಿಗೆಗೆ ಕನ್ನಡವೊಂದನ್ನೇ ನೆಚ್ಚಿಕೊಂಡಿರುವ ಕೋಟ್ಯಾಂತರ ಅವಕಾಶವಂಚಿತ ಕನ್ನಡಿಗರ ನಡುವೆ “ಇಂಗ್ಲಿಷ್ ಮಾಧ್ಯಮದ ಶಿಕ್ಷಣ ಮತ್ತು ಅದು ಕೊಡ ಮಾಡುವ ಉದ್ಯೋಗ, ಜೀವನವಕಾಶದ ಪ್ರಯೋಜನ” ಪಡೆದುಕೊಂಡಿರುವ ಕೆಲವೇ ಕೆಲವು ಕನ್ನಡಿಗರ ಮನಸಿನಲ್ಲಿ ರಿಂಗಣಿಸಬೇಕಿದೆ. ಅಷ್ಟೇ ಅಲ್ಲ, ಸಂವಿಧಾನದ ಪ್ರಕಾರವೇ ಇಡೀ ಭಾರತದೆಲ್ಲೆಡೆ ಹಿಂದಿಯೇತರ ಜನರಿಗಿಂತ ಹೆಚ್ಚಿನ ಸವಲತ್ತು, ಸೌಕರ್ಯ ಪಡೆಯುತ್ತಿರುವ ಹಿಂದಿ ಭಾಷಿಕ ಭಾರತೀಯರ ಮನಸಲ್ಲೂ ಅವರ ಈ ಮಾತುಗಳು ಪ್ರತಿಧ್ವನಿಸಬೇಕಿದೆ:
The value systems of those with access to power and of those far removed from such access cannot be the same. The viewpoint of the privileged is unlike that of the underprivileged.
ಅಧಿಕಾರ, ಸವಲತ್ತು ಅನುಭವಿಸುತ್ತಿರುವ ಜನರು ನಂಬುವ ಮೌಲ್ಯ ವ್ಯವಸ್ಥೆ ಮತ್ತು ಅಧಿಕಾರ, ಸವಲತ್ತಿದಿಂದ ವಂಚಿತರಾಗಿರುವ ಜನರ ಮೌಲ್ಯ ವ್ಯವಸ್ಥೆ ಒಂದೇ ಆಗಿರುವುದಿಲ್ಲ. ಸವಲತ್ತು, ಹಕ್ಕು ಅನುಭವಿಸುತ್ತಿರುವ ಜನರ ನಿಲುವು ವಂಚಿತರಾದವರ ನಿಲುವಿಗಿಂತ ಯಾವತ್ತಿಗೂ ಬೇರೆಯೇ ಆಗಿರುತ್ತದೆ.






