ವಿಷಯದ ವಿವರಗಳಿಗೆ ದಾಟಿರಿ

Archive for

18
ಜನ

ಹುಡುಗರೇ ಹುಶಾರ್…!!!

ಸಾತ್ವಿಕ್ ಎನ್ ವಿ

ಹುಡುಗಿಯರ ಹಿಂದೆ ಲವ್ ಲವ್ ಅಂತ ಗಂಟು ಬೀಳೋ ಮಜ್ನುಗಳಿಂದ ತಪ್ಪಿಸಿ ಕೊಳ್ಳಲು ಹುಡುಗಿಯರ ಹತ್ರ ಹಲವಾರು ಅಸ್ತ್ರಗಳಿರುತ್ತವೆ. ಒಂದೋ ರಾಖಿ ಕಟ್ಟಿ ಬಿಡುವುದು ಇಲ್ಲವೇ ಮೊದಲ ಪರಿಚಯದಲ್ಲೇ ಅಣ್ಣ ಅಂದು ಬಿಡುವುದು!… ರಾಖಿ ಕಟ್ಟುವ ಪ್ರಯೋಗ ಎಲ್ಲ ಟೈಮಲ್ಲೂ ಯೂಸ್ ಅಗುತ್ತೆ ಅಂತ ಏನೂ ಇಲ್ಲ. ಯಾಕೆಂದರೆ ರಾಖಿ ಕಟ್ಟಲು ಹೋದ ಮೂಮೆಂಟನ್ನೇ ಪ್ರಪೋಸ್ ಮಾಡೋ ಅವಕಾಶವಾಗಿ ಪರಿವರ್ತಿಸಿಕೊಂಡ ಹೈಕಳ ಪಟ್ಟಿ ದೊಡ್ಡದಿದೆ. ಹೀಗಾಗಿ ರಾಖಿ ಕಟ್ಟೊ ವಿಷಯ ಬಿಟ್ಟು ಹುಡುಗಿಯರು ಅಯ್ದುಕೊಂಡ ಮತ್ತೊಂದು ಹಾದಿಯೇ ಮೊದಲ ಪರಿಚಯದಿಂದ ಕಂಡ ಕಂಡಲ್ಲಿ ಆತನನ್ನು ಅಣ್ಣನೆಂದು ಕರೆದು ಪ್ರತಿಷ್ಠಾಪಿಸಿ ಬಿಡುವುದು. ಹೀಗೆ ಹೇಳಿದ ಮೇಲೆ ಹುಡುಗ ಬಾಯಿ ಬಿಡೊ ಹಾಗಿಲ್ಲ. ಅಂತಹ ಅಣ್ಣ ಬ್ಲಾಕ್ ‘ಮೇಲ್’ ತಂತ್ರವಿದು. ಅದನ್ನು ಮೀರಿ ಹೊರಟನೋ ಪೋಲಿ ಅನ್ನೋ ಇಮೇಜ್ ಜತೆಗೆ ಹುಡುಗಿಯ ಸಂಪರ್ಕವೂ ತಪ್ಪಿ ಹೋಗುತ್ತೆ. ಇಂಥ ಸಂದರ್ಭದಲ್ಲಿ ಹುಡುಗನಿಗೆ ಉಳಿಯೋ ಆಯ್ಕೆ ಅಂದ್ರೆ ಈ ಮೊದಲು ಇದೇ ತಂತ್ರಕ್ಕೆ ಬಲಿಯಾದಾಗ(?!) ದೊರಕಿರುವ ಹತ್ತಾರು ತಂಗಿಯರ ಜತೆಗೆ ಹನ್ನೊಂದನೆಯದ್ದು ಸೇರಿಸಿ ತಮ್ಮ ಮುಂದಿನ ಬೇಟೆಗೆ ಹೊರಡುವುದು.

ಇನ್ನು ನಮ್ಮ ಹುಡುಗರೋ ಕಂಡ ಎಲ್ಲ ಹುಡುಗಿಯರನ್ನು ಲವ್ ಮಾಡುವಷ್ಟು ವಿಶಾಲ ಹೃದಯಿಗಳು. ಅದಕ್ಕಾಗಿಯೇ ‘ ಏನಮ್ಮಾ/ ಏನ್ ಮಗ (?) ನಿನ್ನ ತಂಗಿಯರೆಲ್ಲ ಹೇಂಗಿದ್ದಾರೆ’ (ಇದು ಅವನ ಕ್ಲಾಸ್ನಲ್ಲಿರುವ ಹುಡುಗಿಯರ ಬಗ್ಗೆ ಕೇಳೊ ಸ್ಟೈಲು. ನಿಜ ತಂಗಿಯ ಬಗ್ಗೆ ಕೇಳಿದರೆ ತನ್ನ ಬೆನ್ನಿಗೆ ಮೂಲ ಅನ್ನೊವ ವಿಷಯ ಆತನಿಗೆ ತಿಳಿಯದೆ?) ಆಂತ ಮಾತು ಪ್ರಾರಂಭಿಸುವ ಮೂಲಕ ಸ್ನೇಹಿತನಲ್ಲಿ ಸೋದರ ಭಾವನೆ ಬಿತ್ತುವ ಮತ್ತು ತನ್ನ ಆಯ್ಕೆಯನ್ನು ಸ್ವತಂತ್ರವಾಗಿಡುವ ತಂತ್ರವಿದು. ಬಹುಶ: ಬೆಂದಕಾಳೂರಿನ ಹುಡುಗರ ಬಾಯಲ್ಲಿ ಯಾವಾಗಲೂ ಕೇಳಿ ಬರುವ ‘ಮಚ್ಚ’ (ಬಾವ) ಎಂಬ ಶಬ್ದ ಇದೇ ಹಿನ್ನೆಲೆಯಿಂದ ಬಂದಿರಬಹುದೇ ಎಂಬುದನ್ನು ನಮ್ಮ ಸಂಶೋಧಕರು ದೃಢಪಡಿಸಿಲ್ಲ. ಮತ್ತಷ್ಟು ಓದು »