ವಿಷಯದ ವಿವರಗಳಿಗೆ ದಾಟಿರಿ

Archive for

22
ಜನ

ರಾಜ್ಯಪಾಲರು…ಅತಿರೇಕ ಹಾಗೂ ಯಡಿಯೂರಪ್ಪ…..

  ‘ ನಂದನವನ’
                                        
ಭ್ರಷ್ಟಚಾರ, ಸ್ವಜನಪಕ್ಷಪಾತ, ಅಧಿಕಾರ ದುರಪಯೋಗ ಕಾರಣಗಳಿಂದಾಗಿ ಮುಖ್ಯಮಂತ್ರಿ ವಿರುದ್ಧವೇ ಕ್ರಿಮಿನಲ್ ಮೊಕದ್ದಮೆ ಹೂಡಲು ರಾಜ್ಯಪಾಲ ಹನ್ಸ್ರಾಜ್ ಭಾರದ್ವಾಜ್ ಅನುಮತಿ ನೀಡಿದ್ದಾರೆ. ಕಟ್ಟರ್ ಕಾರ್ಯಕರ್ತರ ಪಕ್ಷವಾದ ಬಿಜೆಪಿ, ಸಂಘಪರಿವಾರಿಗಳು ನಾಚುವ ಬದಲು ರಾಜ್ಯಪಾಲರ ವಿರುದ್ಧವೇ ತೊಡೆತಟ್ಟಿ ನಿಂತಿರುವುದು ನಾಚಿಕೇಡು. ಭ್ರಷ್ಟಚಾರದ ವಿರುದ್ಧ ಧ್ವನಿ ಎತ್ತುವ ಮೂಲಕ ಕಾನೂನಿನಲ್ಲಿ ಒಬ್ಬ ಸಾಮಾನ್ಯ ಮನುಷ್ಯನಿಂದ ಹಿಡಿದು ಮುಖ್ಯಮಂತ್ರಿಯವರಿಗೆ ಒಂದೇ ನ್ಯಾಯ ಎಂಬ ಘೋಷ ವ್ಯಾಕ್ಯವನ್ನು ವಕೀಲರಾದ ಸಿರಾಜ್ ಭಾಷಾ, ರಾಮಚಂದ್ರ ಸಿಎಂ ವಿರುದ್ದ ಮೊಕದ್ದಮೆಗೆ ಅವಕಾಶ ನೀಡುವಂತೆ ರಾಜ್ಯಪಾಲರ ಅನುಮತಿ ಕೋರುವ ಮೂಲಕ ಎತ್ತಿ ಹಿಡಿದಿದ್ದಾರೆ.
ಮೊದಲಿನಿಂದಲೂ ರಾಜ್ಯದಲ್ಲಿ ಒಂದು ರೀತಿ ವಿರೋಧ ಪಕ್ಷದಂತೆಯೇ ವತರ್ಿಸಿಕೊಂಡು ಬಂದ ರಾಜ್ಯಪಾಲರು ಸಿಎಂ  ವಿರುದ್ಧ ಮೊಕದ್ದಮೆ ಹೂಡಲು ಖಂಡಿತಾ ಅನುಮತಿ ಕೊಟ್ಟೆ ಕೊಡುತ್ತಾರೆ ಎಂಬುದರಲ್ಲಿ ಎರಡು ಮಾತು ಇರಲಿಲ್ಲ. ರಾಜ್ಯಪಾಲರು ಈ ಹಿಂದಿನ ಕೆಲವು ಪ್ರಕರಣಗಳಲ್ಲಿ ಸಿಎಂ ಹಾಗೂ ಬಿಜೆಪಿ ಸಕರ್ಾರದ ವಿರುದ್ಧದ ತೋರಿದ ಅಸಹಕಾರ ನಿಜಕ್ಕೂ ಅವರ ಹುದ್ದೆಗೆ  ಘನತೆ ತರುವಂಥದ್ದಲ್ಲ. ಆದರೂ ಭ್ರಷ್ಟಾಚಾರದ ವಿಷಯದಲ್ಲಿ ಅವರು ತೆಗೆದುಕೊಂಡಿರುವ ನಿಧರ್ಾರಕ್ಕೆ ಹ್ಯಾಸ್ಟ್ ಅಫ್ ಹೇಳಲೇಬೇಕು.
ರಾಜಕೀಯವಾಗಿ ರಾಜ್ಯಪಾಲರ ಕ್ರಮ ದುರುದ್ದೇಶಪೂರಿತ ವಿರಬಹುದು. ಆದರೆ ಸಾಂವಿಧಾನಿಕವಾಗಿ, ಈ ನೆಲದ ಕಾನೂನು, ಪ್ರಜಾಪ್ರಭುತ್ವವನ್ನು ಗೌರವಿಸುವ ಪ್ರತಿಯೊಬ್ಬ ವ್ಯಕ್ತಿಯು ರಾಜ್ಯಪಾಲರ ಈ ನಿರ್ಣಯವನ್ನು ಗೌರವಿಸುವಂಥದೇ ಆಗಿದೆ. ಮುಖ್ಯಮಂತ್ರಿ ವಿರುದ್ಧದದ ಭ್ರಷ್ಟಾಚಾರದ ಪ್ರಕರಣಗಳು ಪುಂಖಾನುಫುಂಖವಾಗಿ ಮಾಧ್ಯಮಗಳಲ್ಲಿ ಈ ಹಿಂದೆಯೇ ವರದಿಯಾಗಿದ್ದವು. ಒಮ್ಮೆ ಮುಖ್ಯಮಂತ್ರಿಗಳ ತವರು ಜಿಲ್ಲೆ ಶಿವಮೊಗ್ಗಕ್ಕೆ ಕಾಲಿಟ್ಟರೂ ಅಲ್ಲಿಯ ಸಾಮಾನ್ಯ ಜನರು ಕೂಡ ಸಿಎಂ ಅವರ ಪ್ರವರ ಹೇಳುತ್ತಾರೆ. ಅಷ್ಟೂ ಅಲ್ಲದೇ ರಾಜ್ಯಪಾಲರಿಗೆ ಆ ಇಬ್ಬರು ವಕೀಲರು ಕೇವಲ ಅನುಮತಿ ಕೋರಿ ಅಜರ್ಿ ಬರೆದಿಲ್ಲ, ಬದಲಿಗೆ 2000 ಸಾವಿರ ಪುಟಗಳಷ್ಟು ದಾಖಲೆ, ಇನ್ನೂರು ಪುಟಗಳ ವರದಿಯನ್ನು ನೀಡಿದ್ದಾರೆ.

ಮತ್ತಷ್ಟು ಓದು »

22
ಜನ

ಇವನು ಇನಿಯನಲ್ಲ… ತುಂಬ ಸನಿಹ ಬಂದಿಹನಲ್ಲ…

ಸುಪ್ರೀತ್.ಕೆ.ಎಸ್

ತನಗೆ ಹೆಂಡತಿಯಾಗುವವಳು ಹೇಗಿರಬೇಕು ಎನ್ನುವ ಕುರಿತು ಪ್ರಾಚೀನ ಗಂಡು ಹೀಗೆ ಹೇಳಿದ್ದಾನೆ:

ಕಾರ್ಯೇಶು ದಾಸಿ, ಕರುಣೇಶು ಮಂತ್ರಿ.
ರೂಪೇಶು ಲಕ್ಷ್ಮಿ, ಕ್ಷಮಯಾ ಧರಿತ್ರಿ.
ಬೋಜ್ಯೇಶು ಮಾತಾ, ಶಯನೇಶು ರಂಭ,
ಷಡ್ಗುಣ್ಯ ಭಾರ್ಯ, ಕುಲಮುದ್ಧರಿತ್ರಿ.

ಹೆಂಡತಿಯಾದವಳು ಕುಟುಂಬದ ಪರಿಸ್ಥಿತಿ, ಗಂಡನ ಆವಶ್ಯಕತೆಗೆ ಅನುಗುಣವಾಗಿ ದಾಸಿ,ಮಂತ್ರಿ, ತಾಯಿ, ವೇಶ್ಯೆ ಮೊದಲಾದ ಪಾತ್ರಗಳನ್ನು ವಹಿಸಬೇಕು. ಪ್ರಾಚೀನ ಕಾಲದ ಕುಟುಂಬ ವ್ಯವಸ್ಥೆ ಹಾಗೂ ದಾಂಪತ್ಯವನ್ನು ಗಮನದಲ್ಲಿಟ್ಟುಕೊಂಡು ಈ ಉಕ್ತಿಯನ್ನು ಓದಿಕೊಂಡರೆ ನಮಗೆ ಈ ಗಂಡಿನ ಬೇಡಿಕೆಗಳು ಕೊಂಚ ಆಸಕ್ತಿಕರವಾದವುಗಳೇ ಎಂದೆನ್ನಿಸುತ್ತದೆ.

ಹೆಣ್ಣನ್ನು ತೊತ್ತು, ತನ್ನ ಸಂಗ್ರಹದಲ್ಲಿರುವ ಬೆಲೆಬಾಳುವ, ಅಂತಸ್ಥನ್ನು ಪ್ರತಿಬಿಂಬಿಸುವ ವಸ್ತುಗಳಲ್ಲಿ ಒಂದು ಎಂದು ಕಾಣುವ ಅನಾಗರೀಕ ವರ್ತನೆಯಿಂದ ಈ ಗಂಡಸು ತುಂಬಾ ಮುಂದೆ ಬಂದಿದ್ದಾನೆ ಎನ್ನುವುದು ಕಾಣುತ್ತದೆ. ಈತನಿಗೆ ತಾನು ಮದುವೆಯಾದಾಕೆ ಕೇವಲ ಒಂದು ಪಶುವಿನ ಹಾಗೆ ತನ್ನ ನೆರಳನ್ನು ನೆಚ್ಚಿಕೊಂಡು ಬದುಕುವುದು ಬೇಕಿಲ್ಲ. ಹಾಗಂತ ಆಕೆಯನ್ನು ತನ್ನ ಸಮಾನಳೆಂದು ಪುರಸ್ಕರಿಸುವುದೂ ಇಲ್ಲ. ತನ್ನ ಕೆಲಸ ಕಾರ್ಯಗಳನ್ನು ದಾಸಿಯ ಹಾಗೆ ಮಾಡಬೇಕು ಎನ್ನುವುದು ಆತನ ಮೊದಲ ಬೇಡಿಕೆ. ಅನಂತರ ತನ್ನ ಬುದ್ಧಿವಂತಿಕೆಯಿಂದ ಆಕೆ ತನ್ನ ಜೀವನ ನಿರ್ವಹಣೆಗೆ ನೆರವಾಗಬೇಕು ಎಂದು ಬಯಸುತ್ತಾನೆ. ರೂಪವಿದ್ದರೆ ಯಾರಿಗೆ ತಾನೆ ಸಂತೋಷವಾಗುವುದಿಲ್ಲ? ತನ್ನ ತಪ್ಪುಗಳನ್ನೆಲ್ಲ ಕ್ಷಮಿಸಿ ಪೊರೆಯುವ ಭೂಮಿಯಾಗಿರಲಿ ಎಂದು ಅಪೇಕ್ಷಿಸುವುದರಲ್ಲಿ ಗಂಡು ಬದಲಾಗಿಯೇ ಇಲ್ಲ. ತಾಯಿಯಂತೆ ಪುಷ್ಕಳವಾಗಿ ಅಡುಗೆ ಮಾಡಿ ತನ್ನ ಹಸಿವನ್ನು ಇಂಗಿಸಬೇಕು. ದೈಹಿಕ ಕಾಮನೆಯನ್ನು ಸಹ ತೃಪ್ತಿ ಪಡಿಸಬೇಕು. ಇಷ್ಟೆಲ್ಲಾ ಗುಣಗಳು ಹೆಂಡತಿಯಲ್ಲಿದ್ದರೆ ತನ್ನ ಕುಲ ಉದ್ಧಾರವಾಗುವುದು ಎನ್ನುವುದು ಪ್ರಾಚೀನ ಗಂಡಿನ ನಂಬಿಕೆ.

ಮತ್ತಷ್ಟು ಓದು »