ಬೇಕಾಗಿದ್ದಾರೆ!
ಹೇಮ ಪವಾರ್
ಮದುವೆ ಆಗೋದು ಅಂತ ತೀರ್ಮಾನಿಸಿ ಬಿಟ್ಟಿದೀನಿ! ಬಂದ ’ಗಂಡು’ (ಗುಂಡು?) ಗಳನ್ನೆಲ್ಲ,
ಸ್ಟೀಲ್ ಬಿಂದಿಗೆ, ಹಿತ್ತಾಳೆ ಹಂಡೆ, ತೊಳೆದ ಕೆಂಡ, ನರಸಿಂಹರಾಜು ಮುಖ, ಅಂಬರೀಷ್
ಸೊಂಟ ಅಂತೆಲ್ಲ ಹೆಸರಿಟ್ಟು ರಿಜೆಕ್ಟ್ ಮಾಡ್ತಿದ್ದವಳು ಈಗ ಇದ್ದಕ್ಕಿದ್ದಂತೆ ಮದುವೆ
ಆಗೋದು ಅಂತ ತೀರ್ಮಾನಿಸಿ ಬಿಟ್ಟಿದ್ದೀನಿ. ಬುದ್ದನಿಗೆ ಬೋಧಿವೃಕ್ಷದ ಕೆಳಗಡೆ ಆದ ಹಾಗೆ
ನನಗೂ ನಮ್ಮ ಅಡುಗೆಮನೆಲಿ ಗ್ನಾನೋದಯ ಆಗಿ ಹೋಗಿದೆ. ನನ್ನಮ್ಮ ತನ್ನ ಪುಣ್ಯದ
ಅಕೌಂಟನ್ನು ಕ್ರೆಡಿಟ್ ಮಾಡಿಕೊಳ್ಳಲು ದೇವಸ್ಥಾನಗಳಿಗೆ ಹೊರಟು ಇಂದಿಗೆ ವಾರವಾಯಿತು.
ನಂಬುವ ಮಾತೇ ಅಲ್ಲ ಆದರೂ ನನ್ನಂತ ನಾನೇ ಈ ಒಂದು ವಾರವೂ ನನ್ನ ಬೆಳಗಿನ ತಿಂಡಿಯನ್ನು
ಬಲಿಕೊಟ್ಟಿದ್ದೇನೆ. ಈಗೊಂದು ವಾರದಿಂದ ಎದ್ದು ತಿಂಡಿ ಮಾಡಿಕೊಂಡು ತಿನ್ನುವುದಿರಲಿ,
ಯಾರಾದರೂ ಮಾಡಿಟ್ಟಿದ್ದರೂ ತಿನ್ನಲು ಸಮಯವಿಲ್ಲದಷ್ಟು ಲೇಟಾಗಿ ಹೋಗಿ, ಅರ್ಧಗಂಟೆ
ತಡವಾಗಿ ಆಫೀಸ್ ಸೇರಿ ಕಂಪ್ಯೂಟರ್ ನೊಳಗೆ ಕಳೆದು ಹೋದರೆ, ಮತ್ತೆ ತಿಂಡಿ
ತಿಂದಿಲ್ಲವೆಂದು ನೆನಪಾಗುವುದು ಊಟದ ಸಮಯಕ್ಕೆ. ಯಾವುದೇ ಡಯಟ್ಟಿನ ಸಹಾಯವಿಲ್ಲದೆ
ಅನಾಮತ್ತು ೨ ಕೆಜಿ ತೂಕ ಇಳಿಸಿಬಿಟ್ಟಿದ್ದೇನೆ.ಮುಂದೆ ಹೀಗಾಗಬಾರೆದೆಂಬ
ಮುನ್ನೆಚ್ಚರಿಕೆಗಾಗಿಯೇ ಚೆನ್ನಾಗಿ ಅಡುಗೆ ಬಲ್ಲ ಹುಡುಗನನ್ನು ಹುಡುಕಿ
ಮದುವೆಯಾಗಿಬಿಡಬೇಕೆಂದಿದ್ದೇನೆ. ಹೀಗೆಂದ ತಕ್ಷಣ ನನ್ನನ್ನು ಸಮಾನತೆ, ಸ್ತ್ರೀವಾದಿ
ಎಂದೆಲ್ಲ ಬ್ರಾಂಡ್ ಮಾಡಿಬಿಡಬೇಡಿ. ಚೆನ್ನಾಗಿ ಅಡುಗೆ ಬರುವ ಯಾವ ಹುಡುಗನೂ ನನ್ನ ಕೈಯ
ಅಡಿಗೆಯನ್ನು ತುಂಬಾ ದಿನ ಸಹಿಸಿಕೊಳ್ಳಲಾರನೆಂಬ ಕಾನ್ಫಿಡೆನ್ಸ್ ನಿಂದ ಈ
ಮಾತನ್ನು ಹೇಳುತ್ತಿದ್ದೇನೆ.
ಅಡುಗೆಮನೆ ಅನ್ನೋದು ಹುಡುಗಿಯರಿಗೆ ಅದೇಕೆ ಬ್ರಾಂಡ್ ಮಾಡಿದ್ದಾರೋ, ಏನೇ ಇದ್ದರೂ ನಾನು
ಮತ್ತು ಅಡುಗೆ ಎರೆಡೂ ವಿರುದ್ದ ಪದಗಳು. ಕಷ್ಟಪಟ್ಟು ವಾಂಗಿಭಾತ್ ಮಾಡುವುದನ್ನು
ಕಲಿತು, ಮನೆಗೆ ಬಂದ ಅತಿಥಿಗಳಿಗೆ ಒಮ್ಮೆ ಕೊಟ್ಟರೆ, ಪುಳಿಯೋಗರೆಗೆ ಸ್ವಲ್ಪ ಹುಳಿ
ಕಡಿಮೆ ಹಾಕಬೇಕಿತ್ತು ಎಂದಾಗ, ಅವರನ್ನೇ ಹುಣಸೇಹಣ್ಣಿನಂತೆ ಕಿವುಚಿಬಿಡುವ
ಮನಸ್ಸಾಗಿತ್ತು. ಅಪ್ಪನಿಗೆ ಅಮ್ಮ ಮನೆಯಲ್ಲಿ ಇಲ್ಲದಾಗ ಕಾಫಿ ಮಾಡಿಕೊಡಲೋ ಅಥವಾ ಟೀ
ಕುಡೀತೀರ ಎಂದು ಕೇಳಿದರೆ, ಯಾವುದನ್ನಾದರೂ ಮಾಡು ಮಗಳೇ ನೀ ಮಾಡಿದರೆ ಎರೆಡು ಒಂದೇ ತರ
ಇರುತ್ತೆ ಎಂದಂದು ನಗುತ್ತಾರೆ. ನಾನು ಮಾಡಿದ ಚಪಾತಿ ಯಾವಾಗಲೂ ಆಸ್ಟ್ರೇಲಿಯ ಮ್ಯಾಪ್
ತರಹ ಇರುತ್ತದೆಂದು ಅಕ್ಕನ ಪುಟ್ಟ ಮಗಳು ಹಿಯ್ಯಾಳಿಸುತ್ತಾಳೆ. ಅಲ್ಲರೀ ಆಸ್ಟ್ರೇಲಿಯ
ಮ್ಯಾಪ್ ಆದರೇನು ಇಂಡಿಯಾ ಮ್ಯಾಪ್ ಆದರೇನು ಮುರಿದೇ ತಾನೆ ತಿನ್ನುವುದು. ಹೊಟ್ಟೆ ಒಳಗೆ
ಏನು ಶೇಪ್ ಸಮೇತ ಹೋಗತ್ತ? ಬುದ್ದಿಇಲ್ಲ ಜನಕ್ಕೆ. ನನ್ನ ಹೊಸ ಪ್ರಯತ್ನವನ್ನು ಯಾರ
ಕೈಲದಾರೂ ಹೊಗಳಿಸಬೇಕೆಂದು ಮೊನ್ನೆ ಪಕ್ಕದ ಮನೆಯ ಹುಡುಗನಿಗೆ ನಾನು ಮಾಡಿದ್ದ
ತಿಂಡಿಯನ್ನು ಕಪ್ ನಲ್ಲಿ ಹಾಕಿಕೊಟ್ಟೆ, ’ಚೂರು ಸಪ್ಪೆ ಇತ್ತು ಅಕ್ಕ, ಪಾಯಸದಲ್ಲೆಲ್ಲೂ
ಬೇಳೆ ಕಾಣಲಿಲ್ಲ, ಆದರೂ ಚೆನ್ನಾಗಿದೆ’ ಎಂದುಬಿಟ್ಟ, ನನಗೆ ನಖಶಿಖ ಅಂತ ಉರಿದು
ಹೋಯಿತು, ನಾನು ಮಾಡಿದ್ದಿದ್ದು ಜಾಮೂನು, ಅದು ಗುಂಡಗೆ ಉಳಿಯದೇ ತನ್ನ ಶೇಪ್
ಕಳೆದುಕೊಂಡು ಪಾಕದಲ್ಲಿ ಕರಗಿ ಹೋಗಿತ್ತಷ್ಟೇ!! ಮತ್ತಷ್ಟು ಓದು 
ಹಿಂದಿ ಜ್ವರಕ್ಕೆ ತುತ್ತಾದ ವಿಜಯ ಕರ್ನಾಟಕ
ಪ್ರಿಯಾಂಕ್ ಬೆಂಗಳೂರು
೧೭ನೇ ಜನವರಿ ೨೦೧೧ ವಿಜಯ ಕರ್ನಾಟಕದಲ್ಲಿ “ವಿದೇಶೀಯರ ಹಿಂದಿ ಮೋಹ” ಎಂಬ ಹೆಸರಿನಡಿ ಒಂದು ಅಂಕಣ ಮೂಡಿ ಬಂದಿದೆ. ವಿದೇಶೀಯರು ಹಿಂದಿ ಕಲಿಯಲು ಆಸಕ್ತಿ ತೋರುತ್ತಿರುವುದು, ಕೇಂದ್ರ ಸರಕಾರವು ಜನವರಿ ಹತ್ತರಂದು ಹಿಂದಿ ದಿವಸ್ ಆಚರಿಸುವುದು, ಇತ್ಯಾದಿ ವಿಷಯಗಳನ್ನು ಮುಂದಿಟ್ಟು, ಕನ್ನಡಿಗರಲ್ಲಿ ಹಿಂದಿ ಕಲಿಕೆ ಬಗ್ಗೆ ಒಲವು ಮೂಡಿಸುವ ಒಂದು ಪ್ರಯತ್ನದಂತೆ ಈ ಅಂಕಣ ಕಾಣುತ್ತದೆ. ಹಿಂದಿಗೆ ಎಲ್ಲಿಲ್ಲದ ಬೇಡಿಕೆಯಿದೆ ಎಂದು ಹೇಳುವ ಅವಸರದಲ್ಲಿ, ವ್ಯವಸ್ಥಿತ ಹಿಂದಿ ಹೇರಿಕೆಯಿಂದ ಕನ್ನಡಕ್ಕಾಗುತ್ತಿರೋ ತೊಂದರೆಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಬೇಕಾದ ಕೆಲಸವನ್ನು ವಿಜಯ ಕರ್ನಾಟಕ ಮರೆತಂತಿದೆ. ಈ ಅಂಕಣ ಓದಿದ ಕನ್ನಡಿಗರಲ್ಲಿ “ವಿಜಯ ಕರ್ನಾಟಕ ಹಿಂದಿ ಹೇರಿಕೆಯ ಪರ ಇದೆಯೇ?” ಎಂಬ ಪ್ರಶ್ನೆ ಹುಟ್ಟಿರುವುದಂತೂ ಹೌದು.
ಅಂಕಣದಲ್ಲಿ ಹೇಳಲಾಗಿರುವ ಕೆಲವು ವಿಷಯಗಳಲ್ಲಿ ಎರಡನ್ನು ಇಲ್ಲಿ ಹೆಸರಿಸಿ, ಆ ವಿಷಯಗಳು ಕನ್ನಡಕ್ಕೆ ಹೇಗೆ ಕುತ್ತು ಎಂಬುದನ್ನು ವಿವರಿಸಲಾಗಿದೆ. ಮತ್ತಷ್ಟು ಓದು 
ಹುಡುಗರೇ ಹುಶಾರ್…!!!
ಹುಡುಗಿಯರ ಹಿಂದೆ ಲವ್ ಲವ್ ಅಂತ ಗಂಟು ಬೀಳೋ ಮಜ್ನುಗಳಿಂದ ತಪ್ಪಿಸಿ ಕೊಳ್ಳಲು ಹುಡುಗಿಯರ ಹತ್ರ ಹಲವಾರು ಅಸ್ತ್ರಗಳಿರುತ್ತವೆ. ಒಂದೋ ರಾಖಿ ಕಟ್ಟಿ ಬಿಡುವುದು ಇಲ್ಲವೇ ಮೊದಲ ಪರಿಚಯದಲ್ಲೇ ಅಣ್ಣ ಅಂದು ಬಿಡುವುದು!… ರಾಖಿ ಕಟ್ಟುವ ಪ್ರಯೋಗ ಎಲ್ಲ ಟೈಮಲ್ಲೂ ಯೂಸ್ ಅಗುತ್ತೆ ಅಂತ ಏನೂ ಇಲ್ಲ. ಯಾಕೆಂದರೆ ರಾಖಿ ಕಟ್ಟಲು ಹೋದ ಮೂಮೆಂಟನ್ನೇ ಪ್ರಪೋಸ್ ಮಾಡೋ ಅವಕಾಶವಾಗಿ ಪರಿವರ್ತಿಸಿಕೊಂಡ ಹೈಕಳ ಪಟ್ಟಿ ದೊಡ್ಡದಿದೆ. ಹೀಗಾಗಿ ರಾಖಿ ಕಟ್ಟೊ ವಿಷಯ ಬಿಟ್ಟು ಹುಡುಗಿಯರು ಅಯ್ದುಕೊಂಡ ಮತ್ತೊಂದು ಹಾದಿಯೇ ಮೊದಲ ಪರಿಚಯದಿಂದ ಕಂಡ ಕಂಡಲ್ಲಿ ಆತನನ್ನು ಅಣ್ಣನೆಂದು ಕರೆದು ಪ್ರತಿಷ್ಠಾಪಿಸಿ ಬಿಡುವುದು. ಹೀಗೆ ಹೇಳಿದ ಮೇಲೆ ಹುಡುಗ ಬಾಯಿ ಬಿಡೊ ಹಾಗಿಲ್ಲ. ಅಂತಹ ಅಣ್ಣ ಬ್ಲಾಕ್ ‘ಮೇಲ್’ ತಂತ್ರವಿದು. ಅದನ್ನು ಮೀರಿ ಹೊರಟನೋ ಪೋಲಿ ಅನ್ನೋ ಇಮೇಜ್ ಜತೆಗೆ ಹುಡುಗಿಯ ಸಂಪರ್ಕವೂ ತಪ್ಪಿ ಹೋಗುತ್ತೆ. ಇಂಥ ಸಂದರ್ಭದಲ್ಲಿ ಹುಡುಗನಿಗೆ ಉಳಿಯೋ ಆಯ್ಕೆ ಅಂದ್ರೆ ಈ ಮೊದಲು ಇದೇ ತಂತ್ರಕ್ಕೆ ಬಲಿಯಾದಾಗ(?!) ದೊರಕಿರುವ ಹತ್ತಾರು ತಂಗಿಯರ ಜತೆಗೆ ಹನ್ನೊಂದನೆಯದ್ದು ಸೇರಿಸಿ ತಮ್ಮ ಮುಂದಿನ ಬೇಟೆಗೆ ಹೊರಡುವುದು.
ಇನ್ನು ನಮ್ಮ ಹುಡುಗರೋ ಕಂಡ ಎಲ್ಲ ಹುಡುಗಿಯರನ್ನು ಲವ್ ಮಾಡುವಷ್ಟು ವಿಶಾಲ ಹೃದಯಿಗಳು. ಅದಕ್ಕಾಗಿಯೇ ‘ ಏನಮ್ಮಾ/ ಏನ್ ಮಗ (?) ನಿನ್ನ ತಂಗಿಯರೆಲ್ಲ ಹೇಂಗಿದ್ದಾರೆ’ (ಇದು ಅವನ ಕ್ಲಾಸ್ನಲ್ಲಿರುವ ಹುಡುಗಿಯರ ಬಗ್ಗೆ ಕೇಳೊ ಸ್ಟೈಲು. ನಿಜ ತಂಗಿಯ ಬಗ್ಗೆ ಕೇಳಿದರೆ ತನ್ನ ಬೆನ್ನಿಗೆ ಮೂಲ ಅನ್ನೊವ ವಿಷಯ ಆತನಿಗೆ ತಿಳಿಯದೆ?) ಆಂತ ಮಾತು ಪ್ರಾರಂಭಿಸುವ ಮೂಲಕ ಸ್ನೇಹಿತನಲ್ಲಿ ಸೋದರ ಭಾವನೆ ಬಿತ್ತುವ ಮತ್ತು ತನ್ನ ಆಯ್ಕೆಯನ್ನು ಸ್ವತಂತ್ರವಾಗಿಡುವ ತಂತ್ರವಿದು. ಬಹುಶ: ಬೆಂದಕಾಳೂರಿನ ಹುಡುಗರ ಬಾಯಲ್ಲಿ ಯಾವಾಗಲೂ ಕೇಳಿ ಬರುವ ‘ಮಚ್ಚ’ (ಬಾವ) ಎಂಬ ಶಬ್ದ ಇದೇ ಹಿನ್ನೆಲೆಯಿಂದ ಬಂದಿರಬಹುದೇ ಎಂಬುದನ್ನು ನಮ್ಮ ಸಂಶೋಧಕರು ದೃಢಪಡಿಸಿಲ್ಲ. ಮತ್ತಷ್ಟು ಓದು 
ನಮ್ಮ ರಾಷ್ಟ್ರಧ್ವಜ ಅಲ್ಲಿ ಹಾರಬಾರದಾ?
ರಾಕೇಶ್ ಶೆಟ್ಟಿ
ವಿಶ್ವಸಂಸ್ಥೆಯಲ್ಲಿ ಭಾರತೀಯ ರಾಯಭಾರಿ ಭಾಷಣ ಶುರು ಮಾಡುತ್ತಾ,
“ನಾನು ಕಾಶ್ಮೀರ ಸಮಸ್ಯೆಯ ಬಗ್ಗೆ ಮಾತನಾಡುವುದಕ್ಕಿಂತ ಮೊದಲು ‘ಋಷಿ ಕಶ್ಯಪ’ರ ಬಗ್ಗೆ ಹೇಳಲಿಚ್ಛಿಸುತ್ತೇನೆ. ಅವರಿಂದಾಗಿಯೇ ಕಣಿವೆಗೆ ‘ಕಾಶ್ಮೀರ’ ಎಂಬ ಹೆಸರು ಬಂತು. ಒಮ್ಮೆ ಅವರು ಹೀಗೆ ಕಾಶ್ಮೀರ ಕಣಿವೆಯಲ್ಲಿ ಸಾಗುವಾಗ ‘ಕಲ್ಲು ಬಂಡೆ’ಗಳ ನಡುವೆ ಹರಿಯುತಿದ್ದ ಜಲಧಾರೆಯನ್ನು ನೋಡಿ, ಸ್ನಾನ ಮಾಡುವ ಮನಸ್ಸಾಯಿತು. ಬಟ್ಟೆಯನ್ನು ಕಳಚಿ ಬಂಡೆಗಳ ಮೇಲಿಟ್ಟು ‘ಕಶ್ಯಪ’ರು ಸ್ನಾನ ಮುಗಿಸಿ ನೋಡಿದರೆ, ಅವರು ಬಂಡೆಯ ಮೇಲಿಟ್ಟಿದ್ದ ‘ಬಟ್ಟೆ’ಯನ್ನು ‘ಪಾಕಿಸ್ತಾನಿ’ಯೊಬ್ಬ ಕದ್ದೊಯ್ದಿದ್ದ!”
ಅವರು ಇಷ್ಟು ಹೇಳಿ ಮುಗಿಸುವಷ್ಟರಲ್ಲಿ ‘ಪಾಕಿಸ್ತಾನಿ ರಾಯಭಾರಿ’ ಕುಳಿತಲ್ಲಿಂದ ಚಂಗನೆ ಜಿಗಿದೆದ್ದು,
“ನೀವ್ ಏನ್ ಮಾತಾಡ್ತಾ ಇದ್ದೀರಾ? ಆ ಕಾಲದಲ್ಲಿ ‘ಪಾಕಿಸ್ತಾನಿ’ಗಳು ‘ಕಾಶ್ಮೀರ’ದಲ್ಲಿ ಇರಲೇ ಇಲ್ಲ!! ”
ನಸು ನಕ್ಕ ಭಾರತೀಯ ರಾಯಭಾರಿ, “ಕಾಶ್ಮೀರ ಯಾರಿಗೆ ಸೇರಿದ್ದು ಅನ್ನೋ ವಿಷಯವನ್ನ ಸ್ಪಷ್ಟಪಡಿಸಿರುವುದರಿಂದ ನಾನು ನನ್ನ ಮಾತನ್ನು ಮುಂದುವರೆಸುತ್ತೇನೆ” 🙂
(‘ಕಾಶ್ಮೀರ’ಕ್ಕೆ ಸಂಬಂಧಿಸಿದಂತೆ ‘ವಿಶ್ವ ಸಂಸ್ಥೆ’ಯಲ್ಲಿ ನಡೆದ ಘಟನೆಯಿದು ಅನ್ನೋ ಮಿಂಚೆಯಲ್ಲಿ ಬಂದ ಜೋಕ್ ಇದು)
Jokes Apart…
ಬೆಂಕಿಯಲ್ಲಿ ಅರಳುವ ಹೂವುಗಳು…
ಇರ್ಷಾದ್ ವೇಣೂರು
ಫಿಟ್ಟಿಂಗ್ ನಲ್ಲಿದೆ ಬದುಕು…
ಎಲ್ಲಿಗೋ ಹೊರಟಿದ್ದಾಗ ವಾಹನ ಇದ್ದಕ್ಕಿದ್ದಂತೆ ಕೈಕೊಡುತ್ತದೆ. ಅದುವರೆಗೂ ಲೀಟರಿಗೆ ಸರಿಯಾಗಿ 55-60 ಮೈಲೇಜ್ ಕೊಡುತ್ತಿದ್ದ ಬೈಕ್ ಅಂದು ಮಾತ್ರ 35 ಮೈಲೇಜ್ ಕೊಟ್ಟು ಅರ್ಧ ದಾರಿಯಲ್ಲಿ ಇಂಗು ತಿಂದ ಮಂಗನ ಸ್ಥಿತಿ ತರಿಸುತ್ತದೆ. ನಿನ್ನೆಯಷ್ಟೇ ಗಾಳಿ ಎಷ್ಟಿದೆ ಎಂದು ಚೆಕ್ ಮಾಡಿ ಮನೆಗೆ ಬಂದು ಶೆಡ್ ನಲ್ಲಿ ನಿಲ್ಲಿಸಿದ್ದ ಕಾರು ಬೆಳಿಗ್ಗೆ ಆಫೀಸಿಗೆ ಹೋಗಬೇಕು ಎಂದು ನೋಡಿದರೆ ಟಯರ್ ಠುಸ್ಸಾಗಿರುತ್ತದೆ. ಯಾವತ್ತೂ ಒಂದೇ ನಿಮಿಷದಲ್ಲಿ ಸ್ಟಾರ್ಟ್ ಆಗುತ್ತಿದ್ದ ಸ್ಕೂಟರ್ ಇಂದು ಜಪ್ಪಯ್ಯಾ ಎಂದರೂ ಸ್ಟಾರ್ಟ್ ಆಗುತ್ತಿಲ್ಲ. ಇಂತಹ ಸಮಸ್ಯೆಗಳು ಎದುರಾದಾಗ ನೆನಪಾಗುವುದೇ ನಮ್ಮೂರಿನ ಫಿಟ್ಟರ್.
ಎಷ್ಟೊತ್ತು ನಿನ್ನ ಅಲಂಕಾರ ?
ಮೊನ್ನೆ ಬಸವನಗುಡಿಯ ದೊಡ್ಡ ಗಣಪತಿ ದೇವಸ್ಥಾನಕ್ಕೆ ನಾನು ನನ್ನ ಹೆಂಡತಿ ಹೋಗುವ ತಯಾರಿ ನಡೆಯುತ್ತಿತ್ತು. ಸಂಜೆ ನಾಲ್ಕಕ್ಕೆ ಹೊರಡುವ ನನ್ನ ತರಾತುರಿಗೂ ಅವಳ ಅಲಂಕಾರ ಪರಾಕಾಷ್ಟೆಗೂ ಸಮಯ ಐದುವರೆಯಾಗಿತ್ತು. ಅಂತು ಹೊರಡುವ ಭಾಗ್ಯ ಜೊತೆಗೆ ದೊಡ್ಡ ಗಣಪನಿಗೆ ನಮ್ಮ ದರ್ಶನದ ಭಾಗ್ಯ ನೆನೆದು ಕಿರುನಗೆ ಬೀರುತ್ತಾ, ಬೆಂಗಳೂರಿಗೆ ಹೊಸಬಳಾದ ನನ್ನಾಕೆ ರಸ್ತೆಯಲ್ಲಿ ಸಿಗುವ ಅಷ್ಟು ಕಟ್ಟಡಗಳು, ಪಾರ್ಕುಗಳು, ಸಿನಿಮಾ ಥಿಯೇಟರ್ಗಳು, ಅಂಗಡಿ, ಶಾಪಿಂಗ್ ಮಾಲ್ ಎಲ್ಲವನ್ನು ಕುತೂಹಲದಿಂದ ನೋಡುತ್ತಾ, ಪ್ರತಿಯೊಂದಕ್ಕೂ ವಿವರಣೆ ಕೇಳುತ್ತಾ, ಮತ್ತದನ್ನು ತನ್ನ ಊರುಗಳಿಗೆ ಹೊಲಿಸುತಾ ಸಾಗಿತು, ಸಂಜೆ ಆರಕ್ಕೆ ತಲುಪಿದ್ದಾಯಿತು.
ಅವಳ ಮನಸ್ಸಿನಲ್ಲಿ ಬೆಂಗಳೂರು ಏನು ಅಲ್ಲ, ನ್ಯೆಸರ್ಗಿಕ ಸೌಂದರ್ಯವಿಲ್ಲ, ಅಲ್ಲೆಲ್ಲೂ ಬೆಟ್ಟ ಗುಡ್ಡವಿಲ್ಲ, ನದಿ ತೊರೆಗಳಿಲ್ಲ, ನೇಗಿಲಿಲ್ಲ, ಉಳುವ ಯೋಗಿಯಿಲ್ಲ, ಹಸಿರು ಉಹೂ ಅದ ವಾಸನೆಯೇ ಇಲ್ಲ, ಪ್ರಾಣಿ ಪಕ್ಷಿಗಳಿಲ್ಲ, ಇದ್ದದ್ದು ಒಂದಷ್ಟು ಕಾಗೆಗಳಷ್ಟೇ, ಅದು ಎಲ್ಲೋ ದೂರಕ್ಕೆ ಅಕಸ್ಮಾತಾಗಿ ಬೆಳಯಲು ಬಿಟ್ಟಿದ್ದ ಮರಗಳಲ್ಲಿ, ಆಕಾಶದಲ್ಲಿ, ಮತ್ತೆಲ್ಲೋ ಹೊಟ್ಟೆಹೊರೆಯುವ ಕಾಯಕದಲ್ಲಿ, ಮಲ್ಲೇಶ್ವರಂ ದಾಟಿ ಆನಂದ್ ರಾವ್ ಸರ್ಕಲ್ಲಿಗೆ ಬರುವಾಗ ಇವಳನ್ನು ಫ್ಲ್ಯೆಓವರ್ ಮೇಲೆ ಕರೆದುಕೊಂಡು ಹೋಗುವ ಮನಸ್ಸಾಗಿ ಕೃಷ್ಣ ಪ್ಲೋರ್ ಮಿಲ್ ಕಡೆಗೆ ಗಾಡಿ ತಿರುಗಿಸಿದ್ದಾಯಿತು, ನೋಡೇ ಈಗ ಪ್ಹ್ಲ್ಯೇಓವರ್ ಬರುತ್ತೆ ಅದು ಮುಗಿಯುವ ವೇಳೆಗೆ ಪಕ್ಕದಲ್ಲೇ ರೇಸ್ ಕೋರ್ಸ್ ಸಿಗುತ್ತೆ ಅಂದೇ, ಯಾಕೋ ಏನು ಮಾತಾಡಲಿಲ್ಲ, ನನ್ನ ಹೆಮ್ಮೆಯ ಬೆಂಗಳೂರು ನೋಡ್ತಿದ್ದಾಳೆ ಅನಿಸಿ, ಸುಮ್ಮನೆ ಗಾಡಿ ಚಲಾಯಿಸುತ್ತಿದ್ದೆ, ಪ್ಹ್ಲ್ಯೇ ಓವರ್ ಇಳಿಯುವಾಗ ಕಾಣುವ ರೇಸ್ ಕೋರ್ಸ್ ತೋರಿಸಲು ಗಾಡಿ ಬಾಡಿಗೆ ಹಾಕಿ ನಿಲ್ಲಿಸಿದೆ, ಇದೆ ಕಣೆ ರೇಸ್ ಕೋರ್ಸ್ ಅಂದೇ, ಥೂ!!! ಇದೆನಾ ನಿಮ್ಮ ಬೆಂಗಳೂರು ಒಂದು ಗಿಡ ಮರ ಇಲ್ವೆಲ್ಲಲ್ರಿ, ಬರ ಬಂದ ಬಯಲುಸೀಮೆಯಾಗಿದೆ ನಿಮ್ಮೂರು, 🙂 ನಾನು ಅವಳಿಗೆ ರೇಸ್ ಕೋರ್ಸ್ ಬಗ್ಗೆ ಹೇಳೋಕೆ ಹೊರಟೆ, ಸುಮ್ನಿರಿ ಸಾಕು ಕೆಲಸಕ್ಕೆ ಬರದ ಕುದುರೆ ಜೂಜಿಗೆ ಇಷ್ಟು ಜಾಗವಿದೆ, ಒಂದಷ್ಟು ಕೆರೆ ಹೊಲ ಇರೋಕೆ ಜಾಗ ಇಲ್ಲ ಅಂದದ್ದಾಯಿತು. ಮತ್ತಷ್ಟು ಓದು 
ಆಂಗ್ ಸಾನ್ ಸೂಕಿ ಎಂಬ ಹೆಣ್ಣುಮಗಳಿಂದ ನಾವು ಕಲಿಯಬೇಕಾದದ್ದು !
ಬರ್ಮಾದ ಪ್ರಜಾಪ್ರಭುತ್ವ ಮತ್ತು ಮಾನವ ಹಕ್ಕುಗಳ ಹೋರಾಟಗಾರ್ತಿ ಆಂಗ್ ಸಾನ್ ಸೂ ಕಿಯ ಬಗ್ಗೆ ಚಿಕ್ಕಂದಿನಿಂದಲೂ ಬೇರೆ ಬೇರೆ ಪತ್ರಿಕೆಗಳಲ್ಲಿ ಓದುತ್ತಲೇ ಇದ್ದೆ. ತನ್ನ ನಾಡಿನ ಜನರ ಸ್ವಾತಂತ್ರ್ಯಕ್ಕಾಗಿ, ಅವರ ಹಕ್ಕುಗಳಿಗಾಗಿ ಹೋರಾಡುತ್ತ ಹೆಚ್ಚು ಕಡಿಮೆ ಬದುಕಿನ ಮುಕ್ಕಾಲು ಭಾಗ ಗೃಹ ಬಂಧನದಲ್ಲೇ ಕಳೆದ ಛಲಗಾರ್ತಿ ಈಕೆ. ಇತ್ತೀಚೆಗಷ್ಟೇ ಬಿಡುಗಡೆಗೊಂಡು ಆಚೆ ಬಂದ ಆಕೆಯ ಈ ಕೆಳಗಿನ ಮಾತುಗಳು ಏಳಿಗೆಗೆ ಕನ್ನಡವೊಂದನ್ನೇ ನೆಚ್ಚಿಕೊಂಡಿರುವ ಕೋಟ್ಯಾಂತರ ಅವಕಾಶವಂಚಿತ ಕನ್ನಡಿಗರ ನಡುವೆ “ಇಂಗ್ಲಿಷ್ ಮಾಧ್ಯಮದ ಶಿಕ್ಷಣ ಮತ್ತು ಅದು ಕೊಡ ಮಾಡುವ ಉದ್ಯೋಗ, ಜೀವನವಕಾಶದ ಪ್ರಯೋಜನ” ಪಡೆದುಕೊಂಡಿರುವ ಕೆಲವೇ ಕೆಲವು ಕನ್ನಡಿಗರ ಮನಸಿನಲ್ಲಿ ರಿಂಗಣಿಸಬೇಕಿದೆ. ಅಷ್ಟೇ ಅಲ್ಲ, ಸಂವಿಧಾನದ ಪ್ರಕಾರವೇ ಇಡೀ ಭಾರತದೆಲ್ಲೆಡೆ ಹಿಂದಿಯೇತರ ಜನರಿಗಿಂತ ಹೆಚ್ಚಿನ ಸವಲತ್ತು, ಸೌಕರ್ಯ ಪಡೆಯುತ್ತಿರುವ ಹಿಂದಿ ಭಾಷಿಕ ಭಾರತೀಯರ ಮನಸಲ್ಲೂ ಅವರ ಈ ಮಾತುಗಳು ಪ್ರತಿಧ್ವನಿಸಬೇಕಿದೆ:
The value systems of those with access to power and of those far removed from such access cannot be the same. The viewpoint of the privileged is unlike that of the underprivileged.
ಅಧಿಕಾರ, ಸವಲತ್ತು ಅನುಭವಿಸುತ್ತಿರುವ ಜನರು ನಂಬುವ ಮೌಲ್ಯ ವ್ಯವಸ್ಥೆ ಮತ್ತು ಅಧಿಕಾರ, ಸವಲತ್ತಿದಿಂದ ವಂಚಿತರಾಗಿರುವ ಜನರ ಮೌಲ್ಯ ವ್ಯವಸ್ಥೆ ಒಂದೇ ಆಗಿರುವುದಿಲ್ಲ. ಸವಲತ್ತು, ಹಕ್ಕು ಅನುಭವಿಸುತ್ತಿರುವ ಜನರ ನಿಲುವು ವಂಚಿತರಾದವರ ನಿಲುವಿಗಿಂತ ಯಾವತ್ತಿಗೂ ಬೇರೆಯೇ ಆಗಿರುತ್ತದೆ.
ನೆನಪುಗಳ ಮಾತೆ ಮಧುರ.. ನಿಮಗೂ ಹಾಗೇನಾ?
ಅಂತೂ ಇಂಜಿನಿಯರಿಂಗ್ ಮುಗಿಸಿ ಬೆಂಗಳೂರಿಗೆ ಬಂದು ಹುಡುಗರೆಲ್ಲ ಸೇರಿ ಬಾಡಿಗೆ ಮನೆ ಮಾಡಿ ಆಮೇಲೆ ಒಂದು ಕೆಲಸ ಹುಡ್ಕಿದ್ದಾಯ್ತು. ಇನ್ನೇನು ಆರಾಮು ಅಂದ್ಕೊಂಡ್ರೆ ಸಮಸ್ಯೆ ಶುರುವಾಗಿದ್ದೆ ಆಗ. ಬೆಳಗ್ಗೆ ಎದ್ರೆ ಏನು ತಿಂಡಿ ಮಾಡೋದು ಅನ್ನೋ ಯೋಚನೆ, ಏನೋ ಮಾಡೋಣ ಅಂದ್ಕೊಂಡು ಶುರು ಮಾಡಿದ್ರೆ, ಇಲ್ಲ ಈರುಳ್ಳಿ ಅಥವಾ ಟೊಮೇಟೊ ಅಥವಾ ಮೆಣಸಿನಕಾಯಿ ಅಥವಾ ಹೆಸರುಬೇಳೆ ಹೀಗೆ ಏನಾದರೂ ಒಂದು ಮಿಸ್. ಅಂತೂ ತಿಂಡಿ ಮಾಡಿ ಆಫೀಸಿಗೆ ರೆಡಿ ಆಗಿ ಬಸ್ ಹಿಡಿಯೋಕೆ ಹೋದ್ರೆ, ನಮ್ಮ ಹಳ್ಳಿ ಬಸ್ಸಾದ್ರೂ ಆಗಬಹುದು ಉಹುಂ ಬಿ.ಎಂ.ಟಿ.ಸಿ ಬಸ್ ಸಹವಾಸ ಅಲ್ಲ. ಮಕ್ಕಳನ್ನು ಕಂಡ್ರೆ ಬೆಂಗ್ಳೂರಿನ ಬೀದಿ ನಾಯಿಗಳು ಅಟ್ಟಿಸಿಕೊಂಡು ಹೋಗಿ ಕಚ್ಹೋ ಹಾಗೆ ಜನಗಳು ಸೀಟ್ ಹಿಡ್ಕೊಳ್ಳೋಕೆ ನುಗ್ತಿರ್ತಾರೆ. ಆ ಟ್ರಾಫಿಕ್ನಲ್ಲಿ ಆ ರಶ್ನಲ್ಲಿ ಆಫೀಸ್ ತಲ್ಪೋಹೊತ್ತಿಗೆ ಹೈರಾಣಾಗಿ ಹೋಗಿರ್ತೇವೆ.
ಆಫೀಸಲ್ಲಿ ಆ ಡೆಡ್ ಲೈನ್ಗಳು, ಮೀಟಿಂಗ್ಗಳು, ಟ್ಯೂಬ್ ಲೈಟ್ಗಳು, ಕಣ್ಣು ಕುಕ್ಕುವ ಮಾನಿಟರ್ಗಳು, ಟೇಸ್ಟ್ ಇಲ್ಲದ ಟೀ, ಕಾಫೀಗಳು, ಬೇಡದೆ ಇರೋ ಗಾಸಿಪ್ಗಳು. ಅಬ್ಬ ಸಾಕಪ್ಪಾ ಇದೇನು ಜೀವನ ಅನ್ಸಿಬಿಡತ್ತೆ ಆದ್ರೆ ಏನು ಮಾಡೋ ಹಾಗಿಲ್ಲ, ಹೊಟ್ಟೆಪಾಡು.
ಕೆಲಸ ಮುಗಿಸಿ ಮತ್ತೆ ಮನೆ ಕಡೆ ಹೊರಟ್ರೆ ಮತ್ತೆ ಅದೇ ಬಿ.ಎಂ.ಟಿ.ಸಿ ಬಸ್, ಸಂತೆಯಂತೆ ಜನ, ಟ್ರಾಫಿಕ್ ಜಾಮ್. ಮನೆ ತಲುಪೋ ಹೊತ್ತಿಗೆ ನಮ್ಮ ಪಾಡು ಹೇಗಾಗಿರತ್ತೆ ಅಂದ್ರೆ ನೀರಿನಲ್ಲಿ ಅದ್ದಿಟ್ಟ ಬಟ್ಟೆಯನ್ನು ತೆಗೆದು ಹಿಂಡಿಹಾಕ್ತಾರಲ್ಲ ಹಾಗೆ ಆಗಿರ್ತೀವಿ. ರಾತ್ರಿ ಮತ್ತದೇ ಕಥೆ, ಬೆಳಗ್ಗೆ ನಡೆದ ಘಟನೆಗಳ ಪುನರಾವರ್ತನೆ. ಮತ್ತಷ್ಟು ಓದು 
ಓಶೋ ಕಂಡಂತೆ ಗಾಂಧಿ!
ಓಶೋ ರಜನೀಶ್ ಜಗತ್ತು ಕಂಡ ಅತ್ಯಂತ ವಿವಾದಾಸ್ಪದ ವ್ಯಕ್ತಿ. ಮಧ್ಯಪ್ರದೇಶದ ಜೈನ ಕುಟುಂಬವೊಂದರಲ್ಲಿ ಹುಟ್ಟಿದ ರಜನೀಶ್ ಬಾಲ್ಯದಿಂದಲೇ ಸ್ವತಂತ್ರ ಚಿಂತನೆಯೆಡೆಗೆ ಒಲವು ಹೊಂದಿದ್ದ. ತನ್ನ ಇಪ್ಪತ್ಮೂರನೆಯ ವಯಸ್ಸಿನಲ್ಲಿ ತನಗೆ ಜ್ಞಾನೋದಯವಾಯಿತು ಎಂದು ಹೇಳಿಕೊಳ್ಳುವ ಈತ ಜಗತ್ತಿನ ಎಲ್ಲಾ ಧರ್ಮಗಳ ಬಗ್ಗೆ ಅತ್ಯಂತ ವಸ್ತುನಿಷ್ಠವಾದ, ಹಿಂದೆ ಯಾರೂ ಹೇಳಿರದಿದ್ದ ಸಂಗತಿಗಳನ್ನು ಹೇಳಿದ. ನಂಬಿಕೆಗಳನ್ನು ಬಿತ್ತುವ, ಆ ಮೂಲಕ ಸ್ವತಂತ್ರ ಚಿಂತನೆಯನ್ನು ನಾಶ ಮಾಡುವ ಎಲ್ಲಾ ವ್ಯವಸ್ಥೆಗಳನ್ನೂ ಖಂಡಿಸಿದ. ಮನುಷ್ಯ ತತ್‌ಕ್ಷಣಕ್ಕೆ ಮಾತ್ರ ಸ್ಪಂದಿಸಬೇಕು. ಯಾವ ಪೂರ್ವಾಗ್ರಹವಿಲ್ಲದೆ, ಭವಿಷ್ಯತ್ತಿನ ಬಗ್ಗೆ ಯೋಜನೆಯಿಲ್ಲದೆ ಈ ಕ್ಷಣದಲ್ಲಿ ಬದುಕಬೇಕು ಎಂದು ಹೇಳಿದ. ಜಗತ್ತಿನ ಯಾವ ವ್ಯಕ್ತಿಯನ್ನೂ, ನಂಬಿಕೆಗಳನ್ನೂ ಬಿಡದೆ ಜಾಲಾಡಿದವ ಈತ. ೧೯೯೦ರಂದು ಹೃದಯಾಘಾತದಿಂದ ನಿಧನನಾದ.
ಇಡೀ ಜಗತ್ತೇ ಮಹಾತ್ಮಾ ಗಾಂಧಿಯನ್ನು ಅಹಿಂಸಾ ಮಾರ್ಗದ ಅನ್ವೇಷಕ ಎಂದು ಕೊಂಡಾಡಿದರೆ ಈತ ಗಾಂಧಿಯನ್ನು ಕುಟಿಲ ರಾಜಕಾರಣಿ ಎಂದು ಕರೆದ. ಗಾಂಧೀಜಿ ಪ್ರತಿಪಾದಿಸಿದ ಅಹಿಂಸೆ, ಸತ್ಯಾಗ್ರಹವೆಲ್ಲವೂ ಕೇವಲ ರಾಜಕೀಯ ತಂತ್ರಗಳು ಎಂದು ವಾದಿಸಿದ. ಗಾಂಧೀಜಿಯ ಸರಳತೆ ಢೋಂಗಿಯದು ಎಂದು ಜರೆದ. ಅವರ ಆಧ್ಯಾತ್ಮ, ಶಿಸ್ತು, ಬ್ರಹ್ಮಚರ್ಯ, ದೇವರ ಕಲ್ಪನೆ ಎಲ್ಲವನ್ನೂ ಲೇವಡಿ ಮಾಡಿದ.
ನಿಜವಾದ ಚಿನ್ನವನ್ನು ಯಾವ ಒರಗೆ ಹಚ್ಚಿದರೂ ತನ್ನ ಹೊಳಪನ್ನು ಹೆಚ್ಚಿಸಿಕೊಳ್ಳುತ್ತದೆಯೇ ಹೊರತು ಕಳೆಗುಂದುವುದಿಲ್ಲ. ಹೀಗಾಗಿ ಓಶೋ ರಜನೀಶ್ ಗಾಂಧಿಯ ಬಗ್ಗೆ ಮಾತಾಡಿರುವ ಬಗ್ಗೆ ಸ್ವಲ್ಪ ತಿಳಿಯೋಣ. ಇದರಲ್ಲಿ ನಮಗೆ ಗಾಂಧೀಜಿಯ ವ್ಯಕ್ತಿತ್ವದ ಬಗ್ಗೆ, ಘನತೆಯ ಬಗ್ಗೆ ಹೊಸತೊಂದು ಆಯಾಮ ಸಿಕ್ಕಬಹುದು. ಯಾರನ್ನೂ ಕಣ್ಣು ಮುಚ್ಚಿ ಒಪ್ಪಬಾರದು ಎಂಬ ಎಚ್ಚರಿಕೆಯಿದ್ದರೆ ನಮ್ಮ ಪ್ರಯತ್ನ ಹೆಚ್ಚು ಪ್ರಯೋಜನಕಾರಿಯಾಗಬಲ್ಲದು.
***
… ನನ್ನ ಪ್ರಕಾರ ಮಹಾತ್ಮ ಗಾಂಧಿ ಒಬ್ಬ ಕಪಟ ರಾಜಕಾರಣಿ. ಅಹಿಂಸೆಯನ್ನು ಅಳವಡಿಸಿಕೊಳ್ಳುವ ಮೂಲಕ ಆತ ಎಷ್ಟೋ ಸಂಗತಿಗಳನ್ನು ತನಗೆ ಹಿತವಾಗುವಂತೆ ನಿರ್ವಹಿಸಿದ. ಎಲ್ಲಾ ಜೈನರು ಆತನ ಅನುಯಾಯಿಗಳಾದರು. ತಾವು ನಂಬಿದ ಅಂಹಿಸೆಯ ತತ್ವವನ್ನು ಬೆಂಬಲಿಸುವ ಒಬ್ಬ ವ್ಯಕ್ತಿಯನ್ನು ಅವರು ಆತನಲ್ಲಿ ಕಂಡಿದ್ದರು. ಗಾಂಧಿ ಜೈನನಾಗಿರಲಿಲ್ಲ. ಆತ ಕೇವಲ ಶೇ ೯ರಷ್ಟು ಜೈನನಾಗಿದ್ದ. ನಾನು ಗಾಂಧಿಯನ್ನು ಹೀಗೆ ವರ್ಣಿಸಲು ಇಚ್ಚಿಸುತ್ತೇನೆ: ಆತ ಹುಟ್ಟಿನಿಂದ ಹಿಂದು ಆದರೆ ಆತ ಕೇವಲ ಶೇ ೧ರಷ್ಟು ಹಿಂದು. ಆತ ಹುಟ್ಟಿದ್ದು ಜೈನರು ಹೆಚ್ಚು ಸಂಖ್ಯೆಯಲ್ಲಿದ್ದ ಗುಜರಾತಿನಲ್ಲಿ ಹೀಗಾಗಿ ಆತ ಶೇ ೯ರಷ್ಟು ಜೈನ. ಉಳಿದ ಶೇ ೯೦ರಷ್ಟು ಆತ ಕ್ರಿಶ್ಚಿಯನ್ ಆಗಿದ್ದ. ಮೂರು ಬಾರಿ ಆತ ಕ್ರೈಸ್ತನಾಗಿ ಮತಾಂತರವಾಗುವ ಹಂತದಲ್ಲಿದ್ದ. ಮತ್ತಷ್ಟು ಓದು 
ಹವ್ಯಕರೇ ಉದಾಹರಣೆಯಾದರೇಕೆ??
ಇಂದು ಬೆಳಗ್ಗೆ ಹಾಸ್ಟೆಲ್ ತಿಂಡಿ ಮುಗಿಸಿ ಪೇಪರ್ ಓದುತ್ತಿದ್ದೆ. ಪಕ್ಕದಲ್ಲೇ ಕುಳಿತವಳು ಸಂಯುಕ್ತ ಕರ್ನಾಟಕ ಓದುತ್ತಿದ್ದಳು. ನಿನ್ನದು ಓದಿ ಆದ ನಂತರ ನನಗೆ ಕೊಡು ಎಂದು ಬುಕ್ ಮಾಡಿದೆ. ಒಮ್ಮೆಲೇ ಅವಳು ನೀವು ಹವ್ಯಕರೇ ಅಲ್ವಾ ಅಂತ ಕೇಳ್ಬೇಕಾ.. ಹ್ಮ್ಮ್ ಅಂದೆ. ಏನು ಹೀಗೆ ಕೇಳಿದಳಲ್ಲ, ಎಂದು ಅವಳನ್ನೊಮ್ಮೆ ದಿಟ್ಟಿಸಿ ನೋಡಿದೆ. ಆಗ ಅವಳು”ಅಲ್ಲ ನಿಮ್ಮಲ್ಲಿ ಪೇಪರ್ ಅಲ್ಲೆಲ್ಲ ಬರೋವಷ್ಟರ ಮಟ್ಟಿಗೆ ಹುಡುಗಿಯರು ಕಡಿಮೆಯಾಗಿದಾರಾ ಅಂದಳು. ಏನು ಉತ್ತರಿಸದೆ ಪ್ರಶ್ನಾರ್ಥಕವಾಗಿ ಅವಳನ್ನೇ ನೋಡಿದೆ. ಪೇಪರ್ ಕೈಗಿತ್ತು ಹೋದಳು.
ಓಹ್!! ನೋಡಿದರೆ,” ವಧು ಬೇಕಾಗಿದ್ದಾರೆ” ಎಂದು ದೊಡ್ಡದಾಗಿ ಬರೆದಿತ್ತು ಶ್ರೀಮತಿ ಕೆ.ಎಚ್.ಸಾವಿತ್ರಿಯವರ ಜೀವನ್ಮುಖಿ ಕಾಲಂನಲ್ಲಿ!! ಅಲ್ಲಿ ಹವ್ಯಕರಲ್ಲಿ ವಧುಗಳಿಗೆ ಕೊರತೆ ಎನ್ನೋ ಉದಾಹರಣೆಗಳು. ಹವ್ಯಕರೇ ಏಕೆ ಉದಾಹರಣೆಯಾಗುತ್ತಿದ್ದಾರೆ? ಬೇರೆಯವರಲ್ಲಿ ಉದಾಹರಣೆಗಳಿಲ್ಲವೇ?ಕಾರಣಗಳು ಕಾಣುತ್ತಿರುವುದೆಲ್ಲ ಹವ್ಯಕರಲ್ಲೇ ಜಾಸ್ತಿಯಾಗಿದೆಯೇ? ಎನ್ನೋ ಪ್ರಶ್ನೆಗಳು. ೨ ವರುಷಗಳ ಹಿಂದೆಯೇ ಈ ಟಿವಿ ಹೆಡ್ಲೈನ್ ಅಲ್ಲಿ “ಹವ್ಯಕರಲ್ಲಿ ವಧುಗಳ ಕೊರತೆ, ವರರಿಗೆ ಮದುವೆಯ ಚಿಂತೆ” ಎಂದು ದೊಡ್ಡದಾಗಿ ಕೊಟ್ಟಿದ್ದರು. ಮತ್ತೊಮ್ಮೆ ಸಾಪ್ತಾಹಿಕ ವಿಜಯದಲ್ಲೂ ಪುಟವೆಲ್ಲ ಇದೇ ವಿಷ್ಯ!ಹೀಗೆ ಮನೆ ಮಾತಾಗುವ ಮಟ್ಟಕ್ಕಿಳಿಯಿತೇ? ಮತ್ತಷ್ಟು ಓದು 











