ಸಂಶೋಧನೆಯ ಸತ್ಯಕ್ಕೆ ಸಂದ ಜಯ: ಚಿಮೂ.ಗೆ ಗೌರವ ಡಾಕ್ಟರೇಟ್ ನೀಡಲು ಒಪ್ಪಿಗೆ
ಕನ್ನಡದ ಹಿರಿಯ ಸಂಶೋಧಕರಾದ ಡಾ.ಎಂ. ಚಿದಾನಂದ ಮೂರ್ತಿಯವರಿಗೆ ಬೆಂಗಳೂರು ವಿಶ್ವವಿದ್ಯಾನಿಲಯದ ಗೌರವ ಡಾಕ್ಟರೇಟ್ ನೀಡಲು ನಿರಾಕರಿಸಿದ್ದ ಕುಲಾಧಿಪತಿಗಳೂ ಆಗಿರುವ ರಾಜ್ಯಪಾಲ ಹಂಸರಾಜ್ ಭಾರದ್ವಾಜ್ ಕೊನೆಗೂ ಗೌರವ ಡಾಕ್ಟರೇಟ್ ನೀಡಲು ಸಮ್ಮತಿಸಿದ್ದಾರೆ. ಕನ್ನಡಿಗರ, ಸಾಹಿತಿಗಳ, ಸಂಘಟನೆಗಳ ಒತ್ತಾಯಕ್ಕೆ ಒಪ್ಪಿಗೆ ನೀಡುವ ಮೂಲಕ ವಿವಾದಕ್ಕೆ ತೆರೆ ಎಳೆದಿದ್ದಾರೆ.
ಚರ್ಚ್ ಮೇಲಿನ ದಾಳಿಯ ಕುರಿತು ನ್ಯಾಯಮೂರ್ತಿ ಸೋಮಶೇಖರ್ ಆಯೋಗವು ನೀಡಿದ ವರದಿಯನ್ನು ಚಿದಾನಂದಮೂರ್ತಿಯವರು ಸಮರ್ಥಿಸಿದ್ದಾರೆ. ಅಲ್ಲದೇ ಡಾಕ್ಟರೇಟ್ ನೀಡಲು ಸಾಹಿತ್ಯಿಕ ಸಾಧನೆಗಳ ಜೊತೆಗೆ ಸಾಮಾಜಿಕ ಕಾಳಜಿಯೂ ಮಾನದಂಡ ಎಂದು ಹೇಳುವ ಮೂಲಕ ಗೌರವ ಡಾಕ್ಟರೇಟ್ ಗೆ ಹೊಸ ಮಾನದಂಡವೊಂದನ್ನು ಸೇರ್ಪಡೆಗೊಳಿಸಿದ್ದರು.
ರಾಜ್ಯಪಾಲರ ಈ ನಿರ್ಧಾರವನ್ನು ಸಾಹಿತಿಗಳು, ಹಲವು ಕನ್ನಡಪರ ಸಂಘಟನೆಗಳು, ಕನ್ನಡ ಪ್ರೇಮಿಗಳು ವಿರೋಧಿಸಿದ್ದರು. ಚಿದಾನಂದಮೂರ್ತಿಯವರನ್ನು ಕೋಮುವಾದಿಯೆಂದು ಸಹ ಹೇಳುವಲ್ಲಿ ರಾಜ್ಯಪಾಲರು ಹಿಂದೆ ಬಿದ್ದಿರಲಿಲ್ಲ. ಇದನ್ನು ತೀವ್ರವಾಗಿ ವಿರೋಧಿಸಿದ್ದ ಸಾಹಿತ್ಯ ಪ್ರೇಮಿಗಳು, ಸಂಶೋಧನಾ ಆಸಕ್ತರು ಇಂದು ರಾಜಭವನದ ಮುಂದೆ ಪ್ರತಿಭಟನೆ ನಡೆಸಿದ್ದರು.
ನಿನ್ನೆ ಮುಕ್ತಾಯಗೊಂಡ 77ನೇ ಅಖಿಲ ಭಾರತ ಸಾಹಿತ್ಯ ಸಮ್ಮೇಳನದಲ್ಲಿಯೂ ರಾಜ್ಯಪಾಲರ ವಿರುದ್ಧ ಖಂಡನಾ ನಿರ್ಣಯವನ್ನು ಕೈಗೊಳ್ಳಲಾಗಿತ್ತು. ತಮ್ಮ ನಡುವಿನ ವೈಚಾರಿಕ ಭಿನ್ನತೆಗಳನ್ನು ಮರೆತು ಕನ್ನಡ ಸಂಶೋಧಕನಿಗೆ ಸಲ್ಲಬೇಕಿದ್ದ ಸ್ಥಾನಮಾನಗಳನ್ನು ಕೊಡಿಸುವಲ್ಲಿ ಎಲ್ಲ ಕನ್ನಡ ಸಾಹಿತಿಗಳು ಒಂದಾದದ್ದು ಮತ್ತು ಒಕ್ಕೊರಲಿನಲ್ಲಿ ಆಗ್ರಹಪಡಿಸಿದ್ದು ವಿಶೇಷವಾಗಿತ್ತು. ಮತ್ತಷ್ಟು ಓದು 
ಗಝಲ್ ಗುಂಗಿನಲ್ಲಿ…
ಒಪ್ಪಿದೆ ನಿನ್ನ ಕಣ್ಣಲಿ ನನ್ನೆಡೆಗೆ ಪ್ರೀತಿಯಿಲ್ಲ,
ನಿನ್ನ ದೃಷ್ಟಿಯಲ್ಲಿ ನಾನಿರೋದು ಆ ರೀತಿಯಲ್ಲ/
ಆದರೂ ಹೇಗೆ ಮುಚ್ಚಿಡಲಿ ಈ ವ್ಯಸನ?….ಆಗಿರೋವಾಗ ನಿನ್ನೋಲವಲ್ಲಿ ತಲ್ಲೀನ,
ಚಿಂತೆಯಿಲ್ಲ…ಯಾರು ನನ್ನನಂದರೇನು ಮತಿಹೀನ!//
ಈ ಇರುಳು ಜಾರುವ ಮೊದಲು ಬಾ…ಕ್ಷಣ ಕಾಲ ನನ್ನನಪ್ಪು,
ಯಾರಿಗೆ ಗೊತ್ತು ಹೇಳು? ಇನ್ನೆಂದೋ ನಮ್ಮ ಭೇಟಿ/
ನೋವ ಮಡುವಿನ ಸುಳಿಗೆ ಸಿಲುಕಿ ಬಾಳುವ ಹಾಳು ಹಣೆಬರಹ,
ಅದೊಂದು ಬೆಚ್ಚನ್ನೇ ಆಲಿಂಗನದ ಆಸರೆ ಸಾಕು ಸಹಿಸೋಕೆ ಇನ್ನೆಲ್ಲ ವಿಷಾದದೀಟಿ//
ನೀ ಜೊತೆಗಿದ್ದರೆ ಗುರಿಗಳಿಗೆಲ್ಲಿ ಬರ?,
ಹುಮ್ಮಸ್ಸಿನ ಗಣಿಗೆ ನಾನೊಡೆಯ ಬೀಳುತಿರೆ ಕಿವಿಮೇಲೆ ನಿನ್ನ ಸ್ವರ/
ನಿನ್ನುಸಿರು ನನ್ನೆದೆಯ ಸೋಕುತಿರೊ ತನಕ ನೋವೆ ನನಗಿಲ್ಲ,
ನಿನ್ನೊಂದು ಮೆಚ್ಚುಗೆ ನಗುವಿಗಾಗಿ ತಹತಹಿಸಲು ತಯಾರ್ ನಾನು ಬಾಳೆಲ್ಲ//
– ಅಂಗನ ಕಿರಣ
ಮತ್ತೊಮ್ಮೆ ನಿಷ್ಠೆ ತೋರಿಸಿದ ರಾಜ್ಯಪಾಲರು
ಈ ನಾಡಿನ ಹೆಸರಾಂತ, ಸಾಹಿತಿ, ಸಂಶೋಧಕ ಡಾ.ಚಿದಾನಂದ ಮೂರ್ತಿಯವರಿಗೆ ಬೆಂಗಳೂರು ವಿಶ್ವವಿದ್ಯಾನಿಲಯ ಗೌರವ ಡಾಕ್ಟರೇಟ್ ನೀಡಲು ತನ್ನ ವಿಶ್ವವಿದ್ಯಾನಿಲಯದ ಸೆನೆಟ್ ಸಭೆಯಲ್ಲಿ ಚರ್ಚಿಸಿ ಶಿಪಾರಸ್ಸು ಮಾಡಲಾಗಿದ್ದ ಹೆಸರನ್ನು ರಾಜ್ಯಪಾಲರು ತೆಗೆದು ಹಾಕುವ ಮುಖಾಂತರ ದೊಡ್ಡ ಅಪಮಾನ ಮಾಡಿದ್ದಾರೆ.ಸದಾ ಸುದ್ದಿಯಲ್ಲಿರುವ ನಮ್ಮ ರಾಜ್ಯಪಾಲರಾದ ಹೆಚ್. ಆರ್. ಭಾರಧ್ವಾಜ್ ತನ್ನ ಹಳೆ ಚಾಳಿಯನ್ನು ಮತ್ತೊಮ್ಮೆ ತನ್ನ ಅಧಿಕಾರದ ಮೂಲಕ ತೋರಿಸಿ ಪಕ್ಷನಿಷ್ಠೆ ಎಂಬ ಮುಖವಾಡವನ್ನು ಇಡಿ ದೇಶಕ್ಕೆ ತೋರಿಸಿ ಕೊಟ್ಟಿದ್ದಾರೆ.ಆ ಮೂಲಕ ತನ್ನ ಪಕ್ಷಕಾಗದವರು, ತನ್ನ ಸಿದ್ಧಾಂತ ವಿರೋಧಿಗಳನ್ನು ಮಟ್ಟ ಹಾಕುವ ಪ್ರಯತ್ನ ಮುಂದುವರೆಸುತ್ತಾ ರಾಜ್ಯಪಾಲ ಎಂಬ ಉನ್ನತ ಸ್ಥಾನದ ಮರ‍್ಯಾದೆಯನ್ನು ಕಳಚಿ ಬಿಟ್ಟಿದ್ದಾರೆ.ರಾಜ್ಯಪಾಲ ಎಂಬ ಪದವಿ ನಾಮಕವಸ್ಥೆಯಾದರೂ ವಿಶ್ವವಿದ್ಯಾನಿಲಯಗಳ ವಿಷಯಕ್ಕೆ ಸಂಬಂಧಿಸಿದಂತೆ ಕೊಟ್ಟ ಅಧಿಕಾರವನ್ನು ಇಂತಹ ನೀತಿಗೆಟ್ಟ ರಾಜಕೀಕರಣಕ್ಕೆ ತಂದುದು ವಿಪರ‍್ಯಾಸವಾದುದು.
ಮೈಸೂರು ವಿಶ್ವವಿದ್ಯಾನಿಲಯದ ಕುಲಪತಿ ವಿಚಾರದಲ್ಲೂ ನಿರಂಕುಶ ಅಧಿಕಾರವನ್ನು ತೋರ್ಪಡಿಸಿ ಆ ಮೂಲಕ ಉಪಕುಲಪತಿ ಸ್ಥಾನಕ್ಕೆ ಅಗೌರವ ತೋರಿಸಿ ಬೀದಿ ಬದಿಯಲ್ಲಿ ನೀತಿ ಪಾಠ ಮಾಡಲು ಹೊರಟಿದ್ದ ರಾಜ್ಯಪಾಲರು ತನ್ನ ಪಕ್ಷವಾತ್ಸಲ್ಯಕ್ಕೆ ಚಿದಾನಂದ ಮೂರ್ತಿಯಂತವರೂ ಸಿಕ್ಕಿದ್ದು, ಹೆಚ್. ಆರ್. ಭಾರಧ್ವಾಜ್ ‘ರಾಜ್ಯಪಾಲ’ ಸ್ಥಾನಕ್ಕೆ ಅನರ್ಹವೆಂಬುದನ್ನು ಈ ರಾಜ್ಯದ ಜನರು ಸಾಹಿತಿ, ಸಂಶೋಧಕರು ಮತ್ತೊಮ್ಮೆ ಸಾರಿ ಹೇಳುವಂತಾಗಿದೆ.
ಅಂದ ಹಾಗೆ, ಇತರ ವಿಶ್ವವಿದ್ಯಾನಿಲಯಗಳಲ್ಲಿ ಡಾಕ್ಟರೇಟ್ ಪದವಿ ಪ್ರಧಾನ ಮಾಡಿದ ರಾಜ್ಯಪಾಲರಿಗೆ ಇಂತಹ ಸೈದಾಂತಿಕತೆ ಯಾಕೆ ಕಂಡಿಲ್ಲ. ಅಷ್ಟಕ್ಕೂ ಚಿದಾನಂದ ಮೂರ್ತಿಯವರು ಗೌರವ ಡಾಕ್ಟರೇಟ್‌ಗೆ ಯಾಕೆ ಅನರ್ಹರು ? ಯಡಿಯೂರಪ್ಪರವರ ವಿರುದ್ಧ ಮಾತಾಡಿಲ್ಲವೆಂದ ! ಅಥವಾ ಕಾಂಗ್ರೇಸ್ ಪಕ್ಷದ ಸದಸ್ಯ ಅಲ್ಲವೆಂದ ? ಇತಿಹಾಸದ ಸತ್ಯ ವಿಚಾರಗಳನ್ನು ಹೇಳ ಹೊರಟರೆ ಆತ ಬಲಪಂಥೀಯನಾಗಿ ಬಿಡುತ್ತಾನೆ. ಅಲ್ಪಸಂಖ್ಯಾತರ ಪರ ಮಾತಾಡಿದರೆ ಆತ ಜಾತ್ಯಾತೀತ ? ಈ ರೀತಿಯ ಮಾನಸಿಕತೆ ಎಲ್ಲಿಯವರೆಗೆ ಈ ವರ್ಗದ ಜನರಲ್ಲಿ, ರಾಜಕಾರಣಿ, ಸಾಹಿತಿಗಳಲ್ಲಿ ಇರುತ್ತದೊ ಅಲ್ಲಿಯವರೆಗೆ ಅವರು ಉದ್ಧಾರವಾಗೋದಿಲ್ಲ. ಮತ್ತಷ್ಟು ಓದು 
ಮಾಜಿ ಸೈನಿಕರ ಅಳಲು : ಸ್ವಲ್ಪ ಕನ್ಸರ್ನ್ ತೋರಿಸಿಯಪ್ಪಾ..
– ಹರ್ಷ ಕುಗ್ವೆ
ನಾವು ಭಯೋತ್ಪಾದಕ ದಾಳಿಯಾದಾಗ ಸೈನ್ಯವನ್ನು, ಸೈನಿಕರನ್ನು ಹಾಡಿ ಹೊಗಳುತ್ತೇವೆ, ಕಾರ್ಗಿಲ್ ನಂತ ಯುದ್ಧವಾದಾಗ ಸಿಯಾಚಿನ್ ಹಿಮದಲ್ಲಿ ಕುಳಿತ ಸೈನಿಕರು ನಮಗೆ ನೆನಪಾಗುತ್ತಾರೆ. ಆದರೆ ಉಳಿದ ಸಮಯದಲ್ಲಿ?. ಒಬ್ಬ ಸೈನಿಕನ ಸೇವೆಯನ್ನು ಸ್ಮರಿಸಲು ನಮಗೆ ಆತನ ಶವವೇ ಸಿಗಬೇಕೇ ಎಂಬ ಪ್ರಶ್ನೆಯನ್ನು ಹಾಕಿಕೊಳ್ಳೋಣ. ಒಂದಷ್ಟು ವರ್ಷ ಯಾವುದೂ ಯುದ್ಧವೇ ನಡೆಯದಿದ್ದಲ್ಲಿ ಅವರನ್ನು ನೆನೆಸಿಕೊಳ್ಳುವ ಮಾತು ದೂರವೇ ಸರಿ. ನಮ್ಮನ್ನು ಇಲ್ಲಿ ನಮ್ಮ ನಮ್ಮ ಬಂಗಲೆ, ಮನೆಗಳಲ್ಲಿ ಬೆಚ್ಚಗಿಡಲು ಸೈನಿಕರು ಗಡಿಗಳಲ್ಲಿ, ಪರ್ವತಗಳ ಹಿಮದಲ್ಲ್ಲಿ, ಸಮುದ್ರಗಳ ಅಲೆಗಳಲ್ಲಿ ದಿನನಿತ್ಯ ಪಡುತ್ತಿರುವ ಶ್ರಮ ನಮಗೆಂದೂ ಅರಿವಾಗುದೇ ಇಲ್ಲ.
‘ಸಮಾನ ಶ್ರೇಣಿಗೆ ಸಮಾನ ಪೆನ್ಶನ್’ ನೀತಿಯನ್ನು ನಿವೃತ್ತ ಸೈನಿಕರಿಗೆ ಅಳವಡಿಸಿ ಎಂಬ ಬೇಡಿಕೆಯನ್ನಿಟ್ಟು ಸಾವಿರಾರು ಸೈನಿಕರು ಬೀದಿಗಿಳಿಯುವವರೆಗೂ ನಮ್ಮ ಸರ್ಕಾರಗಳು ಒಪ್ಪಿಕೊಂಡಿರಲೇ ಇಲ್ಲ. ಬದಲಿಗೆ ಹಾಗೆ ಮಾಡಲು ಸಕರ್ಾರಕ್ಕೆ ಹಣದ ಕೊರತೆಯಾಗುತ್ತದೆ ಎಂಬ ಸಬೂಬು ಹೇಳುತ್ತಾ ಬಂದಿದ್ದರು. ಆದರೆ ಸಂಸತ್ತಿನ, ಅಥವಾ ವಿಧಾನಸೌಧದ ಅಧಿವೇಶನಗಳಲ್ಲಿ ಒಂದು ಸಣ್ಣ ಚರ್ಚೆಯೂ ಇಲ್ಲದೇ ತಮ್ಮ ವೇತನಗಳನ್ನು ಬರೋಬ್ಬರಿ ಏರಿಸಿಕೊಂಡು ಬಿಟ್ಟಿದ್ದರು. ಅದು ಸರ್ಕಾರಕ್ಕೆ ಯಾವ ಹೊರೆಯನ್ನೂ ಉಂಟು ಮಾಡಲಿಲ್ಲ.






