ಮತ್ತೊಮ್ಮೆ ನಿಷ್ಠೆ ತೋರಿಸಿದ ರಾಜ್ಯಪಾಲರು
ಈ ನಾಡಿನ ಹೆಸರಾಂತ, ಸಾಹಿತಿ, ಸಂಶೋಧಕ ಡಾ.ಚಿದಾನಂದ ಮೂರ್ತಿಯವರಿಗೆ ಬೆಂಗಳೂರು ವಿಶ್ವವಿದ್ಯಾನಿಲಯ ಗೌರವ ಡಾಕ್ಟರೇಟ್ ನೀಡಲು ತನ್ನ ವಿಶ್ವವಿದ್ಯಾನಿಲಯದ ಸೆನೆಟ್ ಸಭೆಯಲ್ಲಿ ಚರ್ಚಿಸಿ ಶಿಪಾರಸ್ಸು ಮಾಡಲಾಗಿದ್ದ ಹೆಸರನ್ನು ರಾಜ್ಯಪಾಲರು ತೆಗೆದು ಹಾಕುವ ಮುಖಾಂತರ ದೊಡ್ಡ ಅಪಮಾನ ಮಾಡಿದ್ದಾರೆ.ಸದಾ ಸುದ್ದಿಯಲ್ಲಿರುವ ನಮ್ಮ ರಾಜ್ಯಪಾಲರಾದ ಹೆಚ್. ಆರ್. ಭಾರಧ್ವಾಜ್ ತನ್ನ ಹಳೆ ಚಾಳಿಯನ್ನು ಮತ್ತೊಮ್ಮೆ ತನ್ನ ಅಧಿಕಾರದ ಮೂಲಕ ತೋರಿಸಿ ಪಕ್ಷನಿಷ್ಠೆ ಎಂಬ ಮುಖವಾಡವನ್ನು ಇಡಿ ದೇಶಕ್ಕೆ ತೋರಿಸಿ ಕೊಟ್ಟಿದ್ದಾರೆ.ಆ ಮೂಲಕ ತನ್ನ ಪಕ್ಷಕಾಗದವರು, ತನ್ನ ಸಿದ್ಧಾಂತ ವಿರೋಧಿಗಳನ್ನು ಮಟ್ಟ ಹಾಕುವ ಪ್ರಯತ್ನ ಮುಂದುವರೆಸುತ್ತಾ ರಾಜ್ಯಪಾಲ ಎಂಬ ಉನ್ನತ ಸ್ಥಾನದ ಮರ‍್ಯಾದೆಯನ್ನು ಕಳಚಿ ಬಿಟ್ಟಿದ್ದಾರೆ.ರಾಜ್ಯಪಾಲ ಎಂಬ ಪದವಿ ನಾಮಕವಸ್ಥೆಯಾದರೂ ವಿಶ್ವವಿದ್ಯಾನಿಲಯಗಳ ವಿಷಯಕ್ಕೆ ಸಂಬಂಧಿಸಿದಂತೆ ಕೊಟ್ಟ ಅಧಿಕಾರವನ್ನು ಇಂತಹ ನೀತಿಗೆಟ್ಟ ರಾಜಕೀಕರಣಕ್ಕೆ ತಂದುದು ವಿಪರ‍್ಯಾಸವಾದುದು.
ಮೈಸೂರು ವಿಶ್ವವಿದ್ಯಾನಿಲಯದ ಕುಲಪತಿ ವಿಚಾರದಲ್ಲೂ ನಿರಂಕುಶ ಅಧಿಕಾರವನ್ನು ತೋರ್ಪಡಿಸಿ ಆ ಮೂಲಕ ಉಪಕುಲಪತಿ ಸ್ಥಾನಕ್ಕೆ ಅಗೌರವ ತೋರಿಸಿ ಬೀದಿ ಬದಿಯಲ್ಲಿ ನೀತಿ ಪಾಠ ಮಾಡಲು ಹೊರಟಿದ್ದ ರಾಜ್ಯಪಾಲರು ತನ್ನ ಪಕ್ಷವಾತ್ಸಲ್ಯಕ್ಕೆ ಚಿದಾನಂದ ಮೂರ್ತಿಯಂತವರೂ ಸಿಕ್ಕಿದ್ದು, ಹೆಚ್. ಆರ್. ಭಾರಧ್ವಾಜ್ ‘ರಾಜ್ಯಪಾಲ’ ಸ್ಥಾನಕ್ಕೆ ಅನರ್ಹವೆಂಬುದನ್ನು ಈ ರಾಜ್ಯದ ಜನರು ಸಾಹಿತಿ, ಸಂಶೋಧಕರು ಮತ್ತೊಮ್ಮೆ ಸಾರಿ ಹೇಳುವಂತಾಗಿದೆ.
ಅಂದ ಹಾಗೆ, ಇತರ ವಿಶ್ವವಿದ್ಯಾನಿಲಯಗಳಲ್ಲಿ ಡಾಕ್ಟರೇಟ್ ಪದವಿ ಪ್ರಧಾನ ಮಾಡಿದ ರಾಜ್ಯಪಾಲರಿಗೆ ಇಂತಹ ಸೈದಾಂತಿಕತೆ ಯಾಕೆ ಕಂಡಿಲ್ಲ. ಅಷ್ಟಕ್ಕೂ ಚಿದಾನಂದ ಮೂರ್ತಿಯವರು ಗೌರವ ಡಾಕ್ಟರೇಟ್‌ಗೆ ಯಾಕೆ ಅನರ್ಹರು ? ಯಡಿಯೂರಪ್ಪರವರ ವಿರುದ್ಧ ಮಾತಾಡಿಲ್ಲವೆಂದ ! ಅಥವಾ ಕಾಂಗ್ರೇಸ್ ಪಕ್ಷದ ಸದಸ್ಯ ಅಲ್ಲವೆಂದ ? ಇತಿಹಾಸದ ಸತ್ಯ ವಿಚಾರಗಳನ್ನು ಹೇಳ ಹೊರಟರೆ ಆತ ಬಲಪಂಥೀಯನಾಗಿ ಬಿಡುತ್ತಾನೆ. ಅಲ್ಪಸಂಖ್ಯಾತರ ಪರ ಮಾತಾಡಿದರೆ ಆತ ಜಾತ್ಯಾತೀತ ? ಈ ರೀತಿಯ ಮಾನಸಿಕತೆ ಎಲ್ಲಿಯವರೆಗೆ ಈ ವರ್ಗದ ಜನರಲ್ಲಿ, ರಾಜಕಾರಣಿ, ಸಾಹಿತಿಗಳಲ್ಲಿ ಇರುತ್ತದೊ ಅಲ್ಲಿಯವರೆಗೆ ಅವರು ಉದ್ಧಾರವಾಗೋದಿಲ್ಲ.
ಚಿ.ಮೂರ್ತಿಯವರು ವಿಚಾರದಲ್ಲಿ ಏನೇ ಪ್ರತಿಪಾದಿಸಲಿ, ಆದರೆ ಅವರ ಜ್ನಾನ ಸಾಧನೆ, ಕನ್ನಡ ಸಾಹಿತ್ಯಕ್ಕೆ ಕೊಟ್ಟ ಕೃತಿಗಳನ್ನು ನೋಡಿ ವಿದ್ವಾಂಸರ ನೆಲೆಯಲ್ಲಿ ಅವರನ್ನು ಗೌರವಿಸುವುದು ಕರ್ತವ್ಯ ಹೌದು.ಅಷ್ಟಕ್ಕೂ ರಾಜ್ಯಪಾಲರು ಚಿ.ಮೂರ್ತಿಯವರ ಹೆಸರನ್ನು ತೆಗೆದು ಹಾಕಲು ಕಾರಣವಾದರೂ ಏನು ? ಎಂಬುದನ್ನು ಈ ನಾಡಿನ ಜನರ ಮುಂದೆ ಇಡುವುದು ಸೂಕ್ತ? ಆ ಮೂಲಕ ತನ್ನ ಪಕ್ಷ ನಿಷ್ಠೆಯನ್ನು? ತನ್ನ ಅಧಿಕಾರ, ವಿವೇಚನಾಧಿಕಾರ, ಸಂವಿಧಾನ, ಎಂಬ ಪದೇ ಪದೇ ಉಪಯೋಗಿಸುವ ಮಾತಿಗೆ ಗೌರವ ನೀಡುವುದು, ಸಾಧ್ಯವಿಲ್ಲವಾದರೆ ಸ್ಥಾನ ತ್ಯಜಿಸಿ ರಾಜ್ಯಪಾಲ ಎಂಬ ಕುರ್ಚಿಗೆ ಮರ‍್ಯಾದೆ ಕೊಡುವುದು ಒಳಿತು.
ಚಿತ್ರಕೃಪೆ: http://www.hindu.com/2005/12/12/stories/2005121207940400.htm






ಚರ್ಚ್ ಮೇಳಿನ ದಾಳಿಯ ಬಗ್ಗೆ ತನಿಖೆ ನಡೆಸಿದ ನ್ಯಾಯಾಧೀಶರ ವಿಚಾರಣಾ ಅಯೋಗ ಸಲ್ಲಿಸಿದ ವರದಿಯನ್ನು ಸಮರ್ಥಿಸಿಕೊಂಡುದೇ ಡಾ. ಚಿದಾನಂದ ಮೂರ್ತಿಯವರ ಅನರ್ಹತೆಗೆ ಕಾರಣ ಎಂದು ರಾಜ್ಯಪಾಲರು ನುಡಿದಿದ್ದಾರೆ.
ಆ ವರದಿಯನ್ನು ಸಮರ್ಥಿಸಿದವರು ಡಾಕ್ಟರೇಟ್ ಗೌರವ ಪಡೆಯಲು ಅನರ್ಹರಾದರೆ, ಆ ವರದಿಯನ್ನು ಅದೇ ರೀತಿ ಸಮರ್ಥಿಸಿಕೊಂಡ ಮುಖ್ಯಮಂತ್ರಿಯವರು ತಮ್ಮ ಹುದ್ದೆಯಲ್ಲಿ ಮುಂದುವರಿಯಲು ಅರ್ಹರೇ ಅನ್ನುವುದಕ್ಕೆರಾಜ್ಯಪಾಲರೇ ಉತ್ತರಿಸಬೇಕು. ಆ ಮಾನದಂಡದಿಂದ ಮುಖ್ಯಮಂತ್ರಿಯವರೂ ಅನರ್ಹರಾಗುತ್ತಾರಾದರೆ, ಮುಖ್ಯಮಂತ್ರಿಯವರನ್ನು ಮತ್ತು ಸರ್ಕಾರವನ್ನು ವಜಾ ಮಾಡಲು ಶಿಫಾರಸು ಮಾಡೋದಿಲ್ಲ ಯಾಕೆ?
ನಡೆದ ಸಾಹಿತ್ಯ ಸಮ್ಮೇಳನದಲ್ಲಿ ಇದರ ಬಗ್ಗೆ ಖಂಡನಾ ನಿರ್ಣಯ ಪಾಸ್ ಮಾಡಿರೋದು, ತುಸು ಸಮಾಧಾನಕರ ವಿಷಯ ,ಆದರೆ ಇಷ್ಟು ಸಾಲದು ಎಲ್ಲಾ ಕನ್ನಡಪರ ಸಂಘಟನೆಗಳು , ಸಾಹಿತಿಗಳು,(ಈಗಾಗಲೇ ಖಂಡಿಸಿದ್ದಾರೆ) ನಮ್ಮ ನಿಮ್ಮಂತ ಜನರು, ಒಕ್ಕೊರಲಿನಿಂದ ಖಂಡಿಸಬೇಕಾಗಿದೆ.
ಈ ರಾಜ್ಯಪಾಲರು ಕೇವಲ ಆಡಳಿತದಲ್ಲಿ ಮಾತ್ರ ರಾಜಕೀಯ ಮಾಡುತ್ತಾರೆ ಅಂದುಕೊಂಡಿದ್ದೆ ಆದರೆ ಭಾರದ್ವಾಜ ಎಲ್ಲಾ ಕಡೆ ಬೆರಳು ಬಿಡೋ ನೀಚಕೆಲಸ ಮಾಡುತ್ತಿದ್ದಾರೆ, ಧಿಕ್ಕಾರವಿರಲಿ ಅವರಿಗೆ. ಅವರಿಗೆ 60 ರ ಅರಳುಮರಳು ಅರಂಬವಾದಂತಿದೆ, ದಯವಿಟ್ಟು ಭಾರದ್ವಾಜರೆ ಕನ್ನಡದ ಜನ ಕ್ಯಾಕರಿಸಿ ಉಗಿದು ಹೊರದಬ್ಬುವ ಮುನ್ನ ನೀವೇ ಮಾನವನ್ತರಾಗಿ ದೂರ ವುಳಿಯಿರಿ, ಪ್ಲೀಸ್ ಪ್ಲೀಸ್ ಯಾಕಂದ್ರೆ ನಮಗೆ ನಿಮ್ಮ ಬಗ್ಗೆ ಗೌರವ ಇಲ್ಲದಿದ್ರೂ ನೀವು ಕುಳಿತಿರೋ ಕುರ್ಚಿ(ಸ್ಥಾನ) ಮೇಲೆ ಅಪಾರ ಗೌರವವಿದೆ. ದಯವಿಟ್ಟು ರಾಜ್ಯಪಾಲ ಹುದ್ದೆ ಬಿಟ್ಟು ಹುದ್ದೆಯ ಘನತೆ ಕಾಪಾಡಿ.ನೀವು ಸೇವೆ ಮಾಡಿದ್ದು ಅರಗಿಸಿ ಕೊಳ್ಳಲಾರದಷ್ಟು ಆಯಿತು.
ಇ೦ತಹದ್ದೇ ಕಾರಣಕ್ಕಾಗಿ ಎಸ್ ಎಲ್ ಭೈರಪ್ಪ ಅವರಿಗೆ ಜ್ನಾನಪೀಠ ಪ್ರಶಸ್ತಿ ಇನ್ನೂ ಕೊಟ್ಟಿಲ್ಲ
ಕ್ಷಮಿಸಿ ಜ್ನಾನಪೀಠ ಅಲ್ಲ, ಅದು ಜ್ಞಾನಪೀಠ