ಮದರ್ ತೆರೇಸಾ ಸೋಗುಗಾತಿ ಎಂದವನು ಓಶೋ!!!
ದೂರದ ಅಲ್ಬೇನಿಯಾದಲ್ಲಿ ಹುಟ್ಟಿದ ಅಗ್ನೆಜ್ ಗಾಂಡ್ಜೆ ಬೊಜಾಕ್ಜಿಯು ಎಂಬ ಬಾಲಕಿ ಭಾರತದ ಕೊಳಚೆ ಪ್ರದೇಶಗಳ ರಾಜಧಾನಿ ಎಂದು ಹೆಸರುವಾಸಿಯಾಗಿದ್ದ ಕೊಲ್ಕತ್ತಾಗೆ ಕ್ರೈಸ್ತ ನನ್ ಆಗಿ ಆಗಮಿಸಿ ಕುಷ್ಠರೋಗಿಗಳ, ಅನಾಥ ಮಕ್ಕಳ ಪಾಲಿಗಷ್ಟೇ ಅಲ್ಲದೆ ಇಡೀ ಜಗತ್ತಿಗೆ ಮದರ್ ತೆರೆಸಾ ಎಂದು ಪರಿಚಿತಳಾದಳು. ಭಾರತದ ಕೊಳಚೆ ಪ್ರದೇಶಗಳ ವಾಸಿಗಳ ಏಳ್ಗೆಗಾಗಿ ಶ್ರಮಿಸಿದ್ದಕ್ಕಾಗಿ ನೊಬೆಲ್ ಬಹುಮಾನವನ್ನೂ ಪಡೆದಳು – ಇದಿಷ್ಟು ನಾವು ಆಕೆಯ ಬಗ್ಗೆ ತಿಳಿದ ವಿಚಾರಗಳು. ಆದರೆ ಗಾಂಧಿ ಇಂದ ಬುದ್ದನವರೆಗೂ, ಆಧ್ಯಾತ್ಮದಿಂದ ಲೈಂಗಿಕತೆಯವರೆವಿಗೂ ಎಲ್ಲವನ್ನೂ, ಎಲ್ಲವನ್ನೂ ತನ್ನ ಮಾತುಗಳಲ್ಲಿ ಹಿಡಿದು ಹೊಸ ಅರ್ಥ ಕೊಡುವ ಓಶೋ ರಜನೀಶ್ ಮದರ್ ತೆರೆಸಾ ಬಗ್ಗೆ ಬೇರೆಯದೇ ರೀತಿಯಾದ ಅಭಿಪ್ರಾಯ ವ್ಯಕ್ತಪಡಿಸುತ್ತಾನೆ. ನೊಬೆಲ್ ಪ್ರಶಸ್ತಿಯಿಂದ ಪ್ರಖ್ಯಾತಿಯನ್ನು ಪಡೆದ ತೆರೆಸಾರನ್ನು, ಸೋಗುಗಾರ್ತಿ, ಕಪಟಿ ಹಾಗೂ ಹಿಪೋಕ್ರಿಟ್ ಎಂದು ಕರೆಯುತ್ತಾನೆ. ತನ್ನ ಅಭಿಪ್ರಾಯಗಳು ವಿಪರೀತವಾಗಿರುವಂತೆ ನೋಡಿಕೊಳ್ಳುತ್ತಿದ್ದ ರಜನೀಶನ ಅಭಿಪ್ರಾಯವನ್ನು ಅಕ್ಷರಶಃ ಒಪ್ಪುವುದು ಯಾರಿಗೂ ಸಾಧ್ಯವಿಲ್ಲವಾದರೂ ಆತನ ದೃಷ್ಟಿಕೋನದ ಬೆಳಕಿನಲ್ಲಿ ನಮ್ಮ ತಿಳುವಳಿಕೆಯನ್ನು, ಅಭಿಪ್ರಾಯಗಳನ್ನು ಪುನರ್ವಿಮರ್ಶಿಸಿಕೊಳ್ಳುವುದು ನಮಗೆ ಉಪಯುಕ್ತವಾಗಬಹುದು. ತನ್ನ ಪ್ರವಚನವೊಂದರಲ್ಲಿ ರಜನೀಶ್ ತೆರೆಸಾರನ್ನು ಅವಲೋಕಿಸಿದ ಪರಿ ಇಂತಿದೆ:
ವಂಚಕಿ ಎಂದು ನಾನು ಆಕೆಯನ್ನು ಕರೆದದ್ದು ಕೇವಲ ಆಕೆ ಬೇರೆಯವರನ್ನು ವಂಚಿಸುತ್ತಾಳೆಂದಲ್ಲ. ವಂಚನೆಯು ಮೊದಲು ತನ್ನಿಂದಲೇಶುರುವಾಗುತ್ತದೆ. ನೀವು ಇತರರನ್ನು ವಂಚಿಸಬೇಕೆಂದುಕೊಂಡರೆ, ಮೊದಲು ನಿಮ್ಮನ್ನು ನೀವು ವಂಚಿಸಿಕೊಳ್ಳಬೇಕಾಗುತ್ತದೆ. ಇದು ಎರಡು ಕಡೆ ಹರಿತವಿರುವ ಖಡ್ಗದ ಹಾಗೆ. ಮದರ್ ತೆರೆಸಾ ಬಡವರ, ಅನಾಥರ, ವಿಧವೆಯರ ಮತ್ತು ವೃದ್ದರ ಸೇವೆಯನ್ನು ಒಳ್ಳೆಯ ಉದ್ದೇಶವಿಟ್ಟುಕೊಂಡೇ ಮಾಡುತ್ತಿರಬಹುದು. ಆಕೆಯ ಪ್ರಾಮಾಣಿಕತೆಯ ಬಗ್ಗೆ ನನಗೆ ಎಳ್ಳಷ್ಟೂ ಸಂಶಯವಿಲ್ಲ. ಆಕೆಯ ಉದ್ದೇಶಗಳು ತಪ್ಪೆಂದೂ ನಾನು ಹೇಳುತ್ತಿಲ್ಲ. ಆದರೆ ಒಳ್ಳೆಯ ಉದ್ದೇಶವಿದ್ದ ಮಾತ್ರಕ್ಕೆ ಫಲಿತಾಂಶವೂ ಒಳ್ಳೆಯದೇ ಆಗಿರಬೇಕೆಂಬ ನಿಯಮವಿಲ್ಲ. ನೀವು ಹೂಗಳೇ ಅರಳದ ಒಂದು ಮುಳ್ಳಿನ ಮರದ ಬೀಜವನ್ನು ಬಿತ್ತಿ ಅದರಿಂದ ಸುಂದರ ಹೂಗಳು ಬೆಳೆಯಬೇಕೆಂದು ನಿರೀಕ್ಷಿಸಿದರೆ ನಿಮಗೆ ಮುಳ್ಳುಗಳಲ್ಲದೇ ಬೇರೇನು ಸಿಗುವುದಿಲ್ಲ. ಏಕೆಂದರೆ ನೀವು ನೆಟ್ಟಿದ್ದು ಹೂವಿನ ಗಿಡವಲ್ಲ. ಇಲ್ಲಿ ಹೂವನ್ನು ಬೆಳೆಯುವ ನಿಮ್ಮ ಉದ್ದೇಶ ಒಳ್ಳೆಯದೇ ಇರಬಹುದು ಆದರೆ ಫಲಿತಾಂಶವು ಯಾವಾಗಲೂ ನಿಮ್ಮ ಕ್ರಿಯೆಯನ್ನವಲಂಬಿಸಿರುತ್ತದೆ ಹೊರತು ನಿಮ್ಮ ಉದ್ದೇಶಗಳನ್ನಲ್ಲ.
ತೆರೆಸಾ ಬಡವರ ಸೇವೆ ಮಾಡುತ್ತಿರುವುದು ನಿಜ, ಆದರೆ ಬಡವರು ನೂರಾರು ವರ್ಷಗಳಿಂದ ಸೇವೆ ಪಡೆಯುತ್ತಿದ್ದಾರೆ. ಅದರಿಂದ ಬಡತನವನ್ನಂತೂ ನಾಶಮಾಡಲಾಗಿಲ್ಲ. ಬಡವರ ಸೇವೆ ಮಾಡುವುದರಿಂದ ಬಡತನ ನಾಶವಾಗುವುದಿಲ್ಲ. ತೆರೆಸಾರಂತವರು ಬಡವರ ಸೇವೆ ಮಾಡಿ, ಅವರನ್ನು ಸಮಾಜ ತಿರಸ್ಕರಿಸುತ್ತಿಲ್ಲ ಎಂಬ ಭಾವನೆ ಮೂಡಿಸುತ್ತಾರಷ್ಟೇ. ಇಲ್ಲವಾದಲ್ಲಿ ಬಡವರಿಗೆ ತಾವು ತಿರಸ್ಕೃತರು ಎನ್ನಿಸಿ, ಅವರ ಅಸಹಾಯಕತೆ ಕೋಪಕ್ಕೆ ತಿರುಗಿ ಅವರು ಕ್ರೂರಿಗಳಾಗುತ್ತಾರೆ. ಸಮಾಜದ ವಿರುದ್ದ ಬಂಡೇಳುತ್ತಾರೆ. ಬಡವರ, ಅನಾಥರ ಮತ್ತು ವಿಧವೆಯರ ಸೇವೆ ಮಾಡುವಂತೆ ಸೋಗು ಹಾಕುವ ಈ ಮಿಶನರಿಗಳು ನಿಜದಲ್ಲಿ ಅವರನ್ನು ಶೋಷಿಸುತ್ತಿರುತ್ತವೆ. ಮದರ್ ತೆರೆಸಾ ನಡೆಸುವ ಮಿಶನರಿ ಆಫ್ ಚಾರಿಟಿಯಲ್ಲಿ ೭೦೦೦ ಅನಾಥರು ಬಡವರಿಗೆ ನಿತ್ಯ ಊಟ ಹಾಕಲಾಗುತ್ತದೆ. ಅಷ್ಟು ದುಡ್ಡು ಈ ಮಿಶನರಿಗಳಿಗೆ ಎಲ್ಲಿಂದ ಬರುತ್ತದೆ?
೧೯೭೪ ರಲ್ಲಿ ಪೋಪ್ ಮದರ್ ತೆರೆಸಾಗೆ ಒಂದು ಕಾಡಿಲ್ಯಾಕ್ ಕಾರನ್ನು ಉಡುಗೊರೆಯಾಗಿ ಕೊಟ್ಟರು. ಆಕೆ ತಕ್ಷಣ ಅದನ್ನು ಮಾರಿ, ಅದರಿಂದ ಬಂದ ಹಣವನ್ನು ಬಡವರಿಗಾಗಿ ಖರ್ಚು ಮಾಡಿದರು. ಎಲ್ಲರೂ ಅದನ್ನು ಹೊಗಳಿದರು. ಆದರೆ ನನ್ನ ಪ್ರಶ್ನೆ ಆ ಕಾರು ಕೊಳ್ಳಲು ಹಣ ಬಂದಿದ್ದಾದರೂ ಎಲ್ಲಿಂದ? ಪೋಪ್ ಹಣವನ್ನು ಧಿಡೀರ್ ಎಂದು ಉತ್ಪತ್ತಿ ಮಾಡಿರಲಿಕ್ಕಿಲ್ಲ. ಆತನು ಅದನ್ನು ಶೇಖರಿಸಿಟ್ಟಿದ್ದ. ಒಂದು ಕಾರನ್ನು ಉಡುಗೊರೆಯಾಗಿ ನೀಡುವಷ್ಟು ದುಡ್ಡು ಪೋಪನ ಬಳಿ ಇತ್ತು. ಮತ್ತು ಆತನ ಹತ್ತಿರ ಜಗತ್ತಿನ ಎಲ್ಲ ಶ್ರೀಮಂತರ ಬಳಿ ಇರುವಷ್ಟೇ ಹಣವಿದೆ. ಆ ದುಡ್ಡು ಎಲ್ಲಿಂದ ಬಂತು? ಆತ ಕೂಡಿಟ್ಟ ದುಡ್ಡಿನ ಶೇಕಡ ೧ ರಷ್ಟೂ ಅಲ್ಲದ ದುಡ್ಡು ಬಡವರ ಸೇವೆಗೆಂದು ಮೀಸಲು. ಈ ಮಿಶನರಿ ಆಫ್ ಚಾರಿಟಿಗಳು ನಿಜದಲ್ಲಿ ಬಂಡವಾಳಶಾಹಿಗಳ ಸೇವೆ ಮಾಡುತ್ತವೆ. ಆದರೆ ಬಡವರ ಸೇವೆ ಮಾಡುತ್ತಿರುವಂತೆ ಸೋಗು ಹಾಕುತ್ತವೆ. ಇದರಿಂದ ಬಡವರ ಮನದಲ್ಲಿ ಇದೊಂದು ಉತ್ತಮ ಸಮಾಜ ಹಾಗೂ ಇದರ ವಿರುದ್ದ ನಾವು ದನಿಯೆತ್ತಬಾರದೆಂಬ ಭಾವ ಗಾಢವಾಗುತ್ತದೆ. ಮಿಶನರಿಗಳು ರೈಲ್ವೆ ಬೋಗಿಗಳೆರಡಕ್ಕೂ ಘರ್ಷಣೆಯಾಗದಂತೆ ಇರಲು ಬಳಸುವ ಕೀಲೆಣ್ಣೆಗಳ ತರಹ ಕೆಲಸ ಮಾಡುತ್ತವೆ. ಬಡವರ ಮನದಲ್ಲಿ ಆಶೆ ಹುಟ್ಟಿಸಿ ಅವರು ಸಮಾಜದ ವಿರುದ್ದ ಹೋರಾಡದೆ ಅದರ ಗುಲಾಮನಾಗುವಂತೆ ಮಾಡುವುದೇ ಇವರ ಮೂಲ ಉದ್ದೇಶವಾಗಿರುತ್ತದೆ.
ಮದರ್ ತೆರೆಸಾಗೆ ನೊಬೆಲ್ ಪ್ರಶಸ್ತಿ ನೀಡಬಾರದಿತ್ತೆಂದು ನಾನು ಹೇಳಿದ್ದೇನೆ. ಇದರಿಂದ ಆಕೆ ಕೋಪಗೊಂಡಂತಿದೆ. ಆದರೆ ಈ ನೊಬೆಲ್ ಎನ್ನುವ ಮನುಷ್ಯ ಜಗತ್ತಿನ ಅತಿ ದೊಡ್ಡ ಪಾತಕಿಗಳಲ್ಲೊಬ್ಬ. ಮೊದಲನೇ ಮಹಾಯುದ್ದವು ಈತನಿಂದ ಖರೀದಿಸಿದ ಶಸ್ತ್ರಾಸ್ತ್ರಗಳಿಂದಲೇ ನಡೆದದ್ದು. ಈತನು ಮೊದಲನೆ ಮಹಾಯುದ್ದದಿಂದ ಸಾಕಷ್ಟು ಹಣ ಸಂಗ್ರಹಿಸಿದ. ಅಮಾಯಕ ಜನರನ್ನು ಕೊಂದ. ಸಾವಿನ ಸರದಾರನಾಗಿದ್ದ. ಈತ ಸಂಗ್ರಹಿಸಿಟ್ಟಿದ್ದ ಹಣದ ಬಡ್ಡಿಯನ್ನೇ ಈಗ ಪ್ರತಿ ವರ್ಷವೂ ಡಜನುಗಟ್ಟಲೇ ನೊಬೆಲ್ ಬಹುಮಾನಗಳಾಗಿ, ಇಪ್ಪತ್ತು ಲಕ್ಷದವರೆಗಿನ ಪುರಸ್ಕಾರವಾಗಿ ಹಂಚಲಾಗುತ್ತಿದೆ. ಈ ಹಣ ಆತನಿಗೆ ಎಲ್ಲಿಂದ ಬಂತು? ಹೀಗೆ ಸಹಸ್ರಾರು ಜನರ ರಕ್ತದಿಂದ ಬಂದ ಹಣ ಮಿಶನರಿಯಾದ ಮದರ್ ತೆರೆಸಾಗೆ ಕೊಡಲಾಗುತ್ತದೆ ಮತ್ತು ಅದನ್ನು ಆಕೆ ೭೦೦೦ ಜನ ಬಡವರ ಶುಶ್ರೂಶೆಗೆ ಬಳಸುತ್ತಾರೆ. ಮೊದಲು ಸಹಸ್ರಾರು ಜನರನ್ನು ಕೊಂದು ಲಕ್ಷಾಂತರ ಜನರನ್ನು ಅನಾಥರಾಗಿಸಿ ಬಂದ ದುಡ್ಡಿನಿಂದ ೭೦೦೦ ಅನಾಥರ, ಬಡವರ ವೃದ್ಧರ ವಿಧವೆಯರ ಶುಶ್ರೂಷೆ ಮಾಡುವುದು ಯಾವ ನ್ಯಾಯ?
ಇಷ್ಟೆಲ್ಲಾ ಗೊತ್ತಿದ್ದು ಮದರ್ ತೆರೆಸಾ ನೊಬೆಲ್ ಪ್ರಶಸ್ತಿಯನ್ನು ತಿರಸ್ಕರಿಸಲಿಲ್ಲ. ಗೌರವ ಪ್ರತಿಷ್ಠೆ ಪಡೆಯುವ ಹಂಬಲ ಆಕೆಯಲ್ಲಿ ಯಾವತ್ತೂ ಇದೆ. ಹಾಗಾಗಿ ಆಕೆ ನೊಬೆಲ್ ಬಹುಮಾನವನ್ನು ಒಪ್ಪಿಕೊಂಡರು.
ಒಬ್ಬ ಧರ್ಮನಿಷ್ಠ ವ್ಯಕ್ತಿಯು ಸಮಾಜದ ಕಟ್ಟುಪಾಡುಗಳನ್ನು ಉಲ್ಲಂಘಿಸಿಯಾದರೂ ಧರ್ಮದ ಪ್ರತಿಷ್ಠಾಪನೆ ಮಾಡುತ್ತಾನೆ. ಸಮಾಜವು ಆತನನ್ನು ತಿರಸ್ಕರಿಸುತ್ತದೆ, ಅಲ್ಲಗೆಳೆಯುತ್ತದೆ. ಆದರೆ ಮದರ್ ತೆರೆಸಾರನ್ನು ಸನ್ಯಾಸಿನಿ ಎಂದು ಉಪ್ಪರಿಗೆ ಮೇಲೆ ಕೂರಿಸಲಾಗುತ್ತಿದೆ. ಮದರ್ ತೆರೆಸಾ ಸರಿಯೆಂದಾದರೆ ಜೀಸಸ್‌ನನ್ನು ಅಲ್ಲಗೆಳೆಯಬೇಕಾಗುತ್ತದೆ. ಜೀಸಸ್ ಸರಿ ಎಂದಾದಲ್ಲಿ ಮದರ್ ತೆರೆಸಾ ಸೋಗುಗಾರ್ತಿ ಅಲ್ಲದೆ ಮತ್ತೇನು ಅಲ್ಲ. ಕಪಟಿಗಳು ಸೋಗು ಹಾಕುವವರು ಯಾವಾಗಲೂ ಜನರಿಂದ ಸಮಾಜದಿಂದ ಗೌರವ ಪಡೆಯುತ್ತಾರೆ. ಏಕೆಂದರೆ ಅವರು ಸಮಾಜಕ್ಕೆ ಜನರಿಗೆ ಬೇಕಾದ ರೀತಿಯಲ್ಲಿ ಬದಲಾಗಬಲ್ಲರು.
***
ಪ್ರೊಟೆಸ್ಟನ್ಟ್ ಕ್ರಿಶ್ಚಿಯನ್ ದಂಪತಿಗಳಿಗೆ ತನ್ನ ಅನಾಥಾಲಯದಿಂದ ಮಗುವನ್ನು ದತ್ತು ಕೊಡಲು ನಿರಾಕರಿಸಿದ ಮದರ್ ತೆರೆಸಾ ನೀಡಿದ ಕಾರಣ, ಆ ಸಮಯದಲ್ಲಿ ಆಕೆಯ ಆಶ್ರಮದಲ್ಲಿ ಅನಾಥ ಮಕ್ಕಳು ಇರಲಿಲ್ಲ ಎಂದು! ೭೦೦೦ ಜನರ ಅನಾಥಾಶ್ರಮ ನಡೆಸುತ್ತಿರುವ ಆಕೆ ಚಾರಿಟಿ ಮಿಶನರಿನಲ್ಲಿ ದತ್ತು ಕೊಡಲು ಒಂದೇ ಒಂದು ಅನಾಥ ಮಗುವಿಲ್ಲ! ಅದು ಭಾರತದಂತಹ ದೇಶದಲ್ಲಿ ಅನಾಥ ಮಗುವಿಗೆ ಕೊರತೆಯೇ? ಭಾರತೀಯರಂತು ಅಗತ್ಯಕ್ಕಿಂತ ಹೆಚ್ಚಾಗಿ ಅನಾಥರನ್ನು ಹುಟ್ಟುಹಾಕುವಲ್ಲಿ ನಿಷ್ಣಾತರು. ಆದರೆ ನಿಜ ವಿಷಯ ಬೇರೆಯದೆ ಇತ್ತು. ಆ ಪ್ರೊಟೆಸ್ಟಂಟ್ ದಂಪತಿಗಳು ಅದಾಗಲೇ ಮಗುವನ್ನು ನೋಡಿ ದತ್ತಕಕ್ಕೆ ಒಪ್ಪಿಯಾಗಿತ್ತು. ಮದರ್ ತೆರೆಸಾಗೆ ಕುಟುಕಿದ್ದು ಅವರು ಆಕೆ ನೀಡಿದ
ಫಾರಂನಲ್ಲಿ ತಾವು ಪ್ರೊಟೆಸ್ಟಂಟ್ ಚರ್ಚಿಗೆ ಸಂಬಂಧಿಸಿದವರೆಂದು ದಾಖಲು ಮಾಡಿದುದು. ಮಗುವನ್ನು ಕೊಡದೆ ಇರಲು ಆಕೆ ನೀಡಿದ ನೇರ ಕಾರಣ ’ಇಲ್ಲಿನ ಮಕ್ಕಳು ರೋಮನ್ ಕ್ಯಾಥೋಲಿಕ್ ಜೀವನ ಶೈಲಿಗೆ ಒಗ್ಗಿ ಹೋಗಿದ್ದಾರೆ, ಅವರನ್ನು ಪ್ರೊಟೆಸ್ಟಂಟ್ ಗಳಾಗಿಸುವುದು ಅವರ
ಮಾನಸಿಕ ವಿಕಾಸಕ್ಕೆ ಧಕ್ಕೆ ತರಬಹುದು. ಹಾಗಾಗಿ ನಿಮಗೆ ಮಗುವನ್ನು ಕೊಡಲು ಆಗುವುದಿಲ್ಲ’. ಇದರಿಂದ ದತ್ತು ತೆಗೆದುಕೊಳ್ಳಲು ಬಂದ ದಂಪತಿಗಳಿಗೆ ಆದ ಆಘಾತ ಅಷ್ಟಿಷ್ಟಲ್ಲ. ಅವರೇನು ಏನೂ ತಿಳಿಯದವರಲ್ಲ, ಅವರಲ್ಲಿ ಗಂಡನು ಯುರೋಪಿಯನ್ ವಿಶ್ವವಿದ್ಯಾಲಯದಲ್ಲಿ ಪ್ರೊಫೆಸರರಾಗಿದ್ದಾರೆ.
ನಿಮಗೆ ಒಂದು ವಿಷಯ ತಿಳಿದಿರಲಿ ಆ ಅನಾಥ ಮಕ್ಕಳೆಲ್ಲ ಮೂಲ ಹಿಂದುಗಳಾಗಿದ್ದವರು. ಮದರ್ ತೆರೆಸಾಗೆ ಆ ಮಕ್ಕಳ ಮಾನಸಿಕ ವಿಕಾಸದ ಬಗ್ಗೆ ಆಷ್ಟು ಕಾಳಜಿ ಇದ್ದಿದ್ದೇ ಆಗಿದ್ದರೆ ಆಕೆ ಹಿಂದುಗಳಾಗಿದ್ದ ಅವರನ್ನು ಹಿಂದುಗಳಾಗಿಯೇ ಬೆಳೆಸಬೇಕಿತ್ತು. ಅವರನ್ನು ರೋಮನ್ ಕ್ಯಾಥೋಲಿಕ್ ಗಳಾಗಿ ಮತಾಂತರಿಸಿದ್ದೇಕೆ? ಈಗ ಅವರನ್ನು ಪ್ರೊಟೆಸ್ಟೆಂಟ್ ಗಳಾಗಿ ಮಾಡಿದರೆ ಆಗುವ ಹಾನಿಯೇನು? ಪ್ರೊಟೆಸ್ಟೆಂಟ್ ಮತ್ತು ಕ್ಯಾಥೋಲಿಕ್ ಎರಡೂ ಒಂದೇ ಸಿಗರೇಟಿನ ಎರೆಡು ಬ್ರಾಂಡ್ ಗಳಿದ್ದಂತೆ. ಅದೇ ಪೇಪರ್, ಅದೇ ತಂಬಾಕು, ತಯಾರಕನೂ ಒಬ್ಬನೇ ಹೆಸರುಗಳು ಬೇರೆ ಅಷ್ಟೇ!
ಕೆಲವೇ ದಿನಗಳ ಹಿಂದೆ ಪಾರ್ಲಿಮೆಂಟಿನಲ್ಲಿ ಧಾರ್ಮಿಕ ಸ್ವಾತಂತ್ರ್ಯದ ಬಗ್ಗೆ ಚರ್ಚೆಯಾಯಿತು. ಅದರ ಉದ್ದೇಶ ಹೀಗಿತ್ತು: ಯಾರೊಬ್ಬರಿಗೂ ಒಬ್ಬ ವ್ಯಕ್ತಿಯನ್ನು ಒಂದು ಧರ್ಮ ಅಥವಾ ಮತಕ್ಕೆ ಮತಾಂತರವಾಗುವಂತೆ ಬಲವಂತಪಡಿಸಕೂಡದು ಎಂದು. ಇದಕ್ಕೆ ತಕ್ಷಣ ಪ್ರತಿಕ್ರಿಯಿಸಿದ ಮದರ್ ತೆರೆಸಾ ಪ್ರೈಮ್ ಮಿನಿಸ್ಟರ್ ಗೆ ಪತ್ರ ಬರೆದು ವಿರೋಧಿಸಿದರು. ಕ್ರಿಶ್ಚಿಯನ್ ಓಟುಗಳ ಹಿಂದೆ ಬಿದ್ದಿದ್ದ ರಾಜಕಾರಣಿಗಳು ಆಕೆಯ ಪತ್ರವನ್ನು ಮನ್ನಿಸಿ ಧಾರ್ಮಿಕ ಸ್ವಾತಂತ್ರ್ಯದ ವಿಷಯ ಕೈಬಿಟ್ಟರು.
ಮದರ್ ತೆರೆಸಾ ನಿಜವಾಗಿಯೂ ಮತಾಂತರ ಮಾನಸಿಕ ವಿಕಾಸವನ್ನು ತಡೆಯುತ್ತದೆ ಎಂದು ನಂಬಿದ್ದರೆ ಆಕೆ ಧಾರ್ಮಿಕ ಸ್ವಾತಂತ್ರ್ಯದ ಪರವಾಗಿರಬೇಕಿತ್ತು. ಒಬ್ಬ ವ್ಯಕ್ತಿಯನ್ನು ಬಲವಂತದಿಂದ ಮತಾಂತರಿಸುವುದಕ್ಕೆ ವಿರೋಧಪಡಿಸಬೇಕಿತ್ತು. ಮದರ್ ತೆರೆಸಾ ಶುದ್ದ ಕಪಟಿ,
ಆಕೆ ಹೇಳುವುದು ಒಂದು ಮಾಡುವುದು ಒಂದು ಎಂದು ಇದರಿಂದ ತಿಳಿಯುತ್ತದೆ.
ನಾನು ಕಪಟಿ, ವಂಚಕಿ, ಸೋಗುಗಾರ್ತಿ ಎಂದಿದ್ದಕ್ಕೆ ಪ್ರತಿಕ್ರಿಯಿಸಿರುವ ಮದರ್ ತೆರೆಸಾ, ನಾನು ನಿಮ್ಮನ್ನು ಅಪಾರ ಪ್ರೀತಿಯಿಂದ ಕ್ಷಮಿಸಿದ್ದೇನೆ ಎಂದಿದ್ದಾರೆ. ಪ್ರೀತಿಯಿದ್ದಲ್ಲಿ ಕ್ಷಮಿಸಬೇಕಾಗಿ ಬರುವುದಿಲ್ಲ, ಕೋಪವಿದ್ದರಷ್ಟೇ ಕ್ಷಮೆಯಿರುವುದು. ಕೋಪವನ್ನು ಮೀರಲೆಂದೇ ನಾನು ಧ್ಯಾನ ಮಾಡಬೇಕೆನ್ನುವುದು. ನಾನು ಮದರ್ ತೆರೆಸಾಳನ್ನು ಕ್ಷಮಿಸುವುದಿಲ್ಲ ಏಕೆಂದರೆ ನಾನು ಆಕೆಯ ಬಗ್ಗೆ ಕೋಪಗೊಂಡಿಲ್ಲ.
ಇಷ್ಠಕ್ಕೂ ನಾನು ಯಾವ ಪಾಪ ಮಾಡಿದ್ದೇನೆಂದು ಆಕೆ ನನ್ನನ್ನು ಕ್ಷಮಿಸಬೇಕು? ಎಲ್ಲವೂ ಈ ಕ್ಯಾಥೋಲಿಕ್ಕರ ಮೂರ್ಖತನ. ಅವರು ಎಲ್ಲರನ್ನೂ ಎಲ್ಲವನ್ನು ಕ್ಷಮಿಸುತ್ತಾ ತಿರುಗುತ್ತಾರೆ. ಮದರ್ ತೆರೆಸಾರನ್ನು ಕಪಟಿ ವಂಚಕಿ ಸೋಗುಗಾತಿ ಎಂದು ಕರೆದದ್ದಕ್ಕೆ ನನಗೆ ಚೂರೂ ಪಶ್ಚಾತ್ತಾಪವಿಲ್ಲ ಹಾಗೂ ಮುಂದುವರೆದು ನಾನು ಆಕೆಯನ್ನು ಮೂರ್ಖಳು, ಮಧ್ಯವರ್ತಿ ಹಾಗೂ ತಿಳಿಗೇಡಿಯೆಂದೂ ಕರೆಯಲು ಇಚ್ಚಿಸುತ್ತೇನೆ. ಮತ್ತು ಅಪಾರ ಪ್ರೀತಿಯಿಂದ ನನ್ನನ್ನು ಕ್ಷಮಿಸಿದ ಆಕೆಗೆ ಸ್ಪಷ್ಠವಾಗಿ ತಿಳಿಯಪಡಿಸುವುದೇನೆಂದರೆ ಕ್ಷಮಿಸಬೇಕಾಗಿರುವುದು ಆಕೆಯನ್ನು ಮತ್ತು ಆಕೆಯಂತಹ ಮಿಶನರಿಗಳನ್ನಲ್ಲದೇ ನನ್ನನ್ನಲ್ಲ. ಏಕೆಂದರೆ ಆಕೆ ಮತ್ತು ಇತರ ಮಿಶನರಿಗಳು ಕ್ಷಮಿಸಲಾರದಂತಹ ಪಾಪವನ್ನು ಮಾಡುತ್ತಿರುವರು.
ಗರ್ಭಪಾತವೆಂಬ ಪಾಪದ ವಿರುದ್ದ ನಾನು ದತ್ತು ತೆಗೆದುಕೊಳ್ಳುವುದರ ಮೂಲಕ ಹೋರಾಡುತ್ತೇನೆ ಎಂದಿದ್ದಾರೆ. ಗರ್ಭಪಾತವು ಪಾಪವಲ್ಲವೇ ಅಲ್ಲ. ಅದೂ ಭಾರತದಂತಹ ಅತಿ ಜನಸಂಖ್ಯೆಯ ರಾಷ್ಟ್ರದಲ್ಲಿ ಅದೊಂದು ಪವಿತ್ರ ಕೆಲಸ. ಒಂದು ವೇಳೆ ಗರ್ಭಪಾತವು ಪಾಪವೆಂದಾದರೆ ಅದಕ್ಕೆ ಕಾರಣ ಈ ಪೋಲಾಕ್ ಪೋಪ್, ಮದರ್ ತೆರೆಸಾ ಮತ್ತು ಸಂಗಡಿಗರು. ಏಕೆಂದರೆ ಇವರು ಮತ್ತು ಇವರ ಸಂಘವು ಗರ್ಭನಿರೋಧಕಗಳಿಗೆ ವಿರೋಧ ಒಡ್ಡುತ್ತದೆ. ಅತಿ ಜನಸಂಖ್ಯೆಯಿಂದ ತುಂಬಿ ತುಳುಕುತ್ತಿರುವ ಪ್ರಪಂಚದಲ್ಲಿ ಗರ್ಭನಿರೋಧಕವು ಆಧುನಿಕ ವಿಜ್ಞಾನದ ವರವಾಗಿದೆ ಮತ್ತು ಇದನ್ನು ತಪ್ಪು ಎಂದು ಹೇಳುವವರು ಕ್ಷಮಿಸಲು ಅನರ್ಹವಾದ ಅಪರಾಧ ಮಾಡುತ್ತಿದ್ದಾರೆ. ಜನಸಂಖ್ಯೆ ಕಡಿಮೆಯಾಗಿ ಜನರೆಲ್ಲಾ ನೆಮ್ಮದಿಯಿಂದ ಬಾಳುವಂತಾದರೆ, ಭೂಮಿಯ ಮೇಲೆ ಸ್ವರ್ಗ ಉಂಟಾಗಲಿದೆ, ಹಾಗದಲ್ಲಿ ಮದರ್ ತೆರೆಸಾರ ಮತ್ತು ಮಿಶನರಿ ಆಫ್ ಚಾರಿಟಿಗಳಿಗೆ ಬಡವರು ಅನಾಥರು ಇಲ್ಲದಂತಾಗಿ ಅವರು ಸ್ವರ್ಗದ ದಾರಿಯನ್ನು ತೋರುವುದಾದರು ಯಾರಿಗೆ? ನಿಜ ಹೇಳಬೇಕೆಂದರೆ ಗರ್ಭಪಾತಗ ಮತ್ತು ಗರ್ಭ ನಿರೋಧಕಗಳನ್ನು ವಿರೋಧಿಸುವ ಈ ಜನರೇ ಅನಾಥರ ಸೃಷ್ಠಿಗೆ ಕಾರಣ. ಇವರೇ ಅನಾಥರನ್ನು ಸೃಷ್ಟಿಸುತ್ತಾರೆ ನಂತರ ಅವರ ಸೇವೆ ಮಾಡುತ್ತಾರೆ. ಆಹಾ! ಎಂಥ ಸುಂದರ ಕೆಲಸ ಇವರದು.
ನಾನು ಇಬ್ಬರು ಸಹೋದರರ ಬಗ್ಗೆ ಕೇಳಿದ್ದೆ. ಇಬ್ಬರಲ್ಲಿ ಒಬ್ಬ ದಿನವೂ ರಾತ್ರಿ ಹಳ್ಳಿಯ ಮನೆಗಳ ಮುಂದೆಲ್ಲಾ ಸಾಕಷ್ಟು ಕಸ ಹರಡಿ ಬರುತ್ತಿದ್ದ. ಮಾರನೆಯ ಬೆಳಿಗ್ಗೆ ಇನ್ನೊಬ್ಬ ಸಹೋದರನು ತಾನು ಕಸ ತೆಗೆದು ಶುಚಿ ಮಾಡಿಕೊಡುವುದಾಗಿ ಹಳ್ಳಿಯ ಬೀದಿಗಳಲ್ಲಿ ಕೂಗುತ್ತಾ ಸಾಗುತ್ತಿದ್ದ. ಮನೆಯ ಮುಂದೆ ಆಗಲೇ ಸಾಕಷ್ಟು ಕಸ ಇರುತ್ತದಾದ್ದರಿಂದ ಜನ ಶುಚಿ ಮಾಡಿಸಲು ಮುಗಿಬೀಳುತ್ತಿದ್ದರು. ಒಬ್ಬನು ಇಲ್ಲಿ ಕೆಲಸ ಮುಗಿಸುವಷ್ಟರಲ್ಲೇ ಇನ್ನೊಬ್ಬ ಸಹೋದರ ಮತ್ತೊಂದು ಹಳ್ಳಿಯಲ್ಲಿ ಕಸ ಚೆಲ್ಲಿರುತ್ತಿದ್ದ ಹೀಗೆ ಅವರಿಬ್ಬರೂ ಸಾಕಷ್ಟು ಹಣ ಮಾಡುತ್ತಿದ್ದರು.
ಮದರ್ ತೆರೆಸಾ ಮತ್ತು ಆಕೆಯ ಸಂಗಡಿಗರು ಮಾಡುತ್ತಿರುವುದೂ ಇದನ್ನೇ! ಗರ್ಭನಿರೋಧಕವನ್ನು ವಿರೋಧಿಸುವುದು, ಗರ್ಭಪಾತವನ್ನು ವಿರೋಧಿಸುವುದು, ಜನಸಂಖ್ಯೆ ನಿಯಂತ್ರಣದ ಎಲ್ಲ ಸೂತ್ರಗಳನ್ನೂ ವಿರೋಧಿಸುವುದು ಆಗ ಬಡವರ ದೀನರ ಅನಾಥರ ಸಂಖ್ಯೆ ತಂತಾನೆ ಹೆಚ್ಚುತ್ತದೆ. ಇವರು ಅವರಿಗೆ ಸೇವೆ ಮಾಡುತ್ತಾರೆ! ಸೇವೆಯಿಂದ ಸ್ವರ್ಗ ಸಿಗುತ್ತದೆ! ಬಡವರು ಅನಾಥರು ಸ್ವರ್ಗದ ದಾರಿಗೆ ಮೆಟ್ಟಿಲುಗಳು!
ನಾನು ಬಡತನವನ್ನು ನಾಶ ಮಾಡಲು ಬಯಸುತ್ತೇನೆಯೆ ವಿನಹ ಬಡವರ ಸೇವೆ ಮಾಡಲು ತಯಾರಿಲ್ಲ. ಎಲ್ಲರೂ ಸಾಕಷ್ಟು ಮಾಡಿಯಾಯಿತು. ೧೦೦೦೦ ವರ್ಷದಿಂದ ಬಡವರ ಸೇವೆ ನಡೆಯುತ್ತಲೇ ಇದೆ. ಆದರೆ ಬಡತನ ಇನ್ನೂ ಹೋಗಿಲ್ಲ. ನಮ್ಮಲ್ಲೀಗ ಅಭಿವೃದ್ಧಿಗೊಳ್ಳುತ್ತಿರುವ ತಂತ್ರಜ್ಞಾನದಿಂದ ಬಡತನವನ್ನು ನಾಶ ಮಾಡಲು ಸಾಧ್ಯ. ಮದರ್ ತೆರೆಸಾ ಒಬ್ಬ ಮೂರ್ಖ ಸಂಪ್ರಯದಾಯವಾದಿಯಲ್ಲದೇ ಮತ್ತೇನು ಅಲ್ಲ. ನಾನಿಷ್ಟು ಹೊತ್ತು ಆಕೆಯನ್ನು ಮದರ್ ಎಂದು ಕರೆದೆ. ಇನ್ನು ಮುಂದೆ ಹಾಗೆ ಕರೆಯುವುದನ್ನು ನಿಲ್ಲಿಸಬೇಕೆಂದಿದ್ದೇನೆ. ಆಕೆ ನನ್ನನ್ನು ಡಿಯರ್ ಮಿಸ್ಟರ್ ರಜನೀಶ್ ಎಂದಿದ್ದಾಳೆ ನಾನು ಆಕೆಯನ್ನು ಗೌರವಯುತವಾಗಿ ಡಿಯರ್ ಮಿಸ್ ತೆರೆಸಾ ಎನ್ನಬೇಕೆಂದಿದ್ದೇನೆ!






ಓಶೋ ಚಿಂತನೆಗಳು ಊಹೆಗೂ ನಿಲುಕದ್ದು. ಪುಣ್ಯಾತ್ಮ, ಯಾವ್ಯಾವುದೋ ಕೋನಗಳಲ್ಲಿ ಕೂತು ಯೋಚಿಸ್ತಾನೆ. ನೀವು ಹೇಳಿದ ಹಾಗೆ, ಅದನ್ನ ತಗೋಳೋದು ಬಿಡೋದು ನಮಗೆ ಬಿಟ್ಟಿದ್ದು. ಆದರೆ ನಮ್ಮ ಮನಸ್ಸನ್ನು ಇವು ಹರಿತಗೊಳಿಸುತ್ತವೆ. ಇನ್ನೊಂದು ಯೋಚನೆ: ಮಿಶನರಿಗಳು ಸೇವಾ ಮನೋಭಾವದ ತೆರೇಸಾರನ್ನ ಕೈ ಗೊಂಬೆ ಮಾಡಿರಬಹುದೇ? ಅವರಿಗೆ ಬೇಕಾದ ಸ್ಥಾನ-ಮಾನಗಳನ್ನೂ ನೀಡಿ ಸೇವೆ ಮಾಡಲು ಕುಳ್ಳಿರಿಸಿ ಸಮಾಜದ ಉದ್ದಾರ ಮಾಡಿದರು – ಬಡವರನ್ನು ಬಂಡೇಳದ ಹಾಗೆ ನೋಡಿಕೊಂಡ ಥರ.
ಉತ್ತಮ ಲೇಖನ.
ಓಶೋ ಅವರು ನುಡಿದ ಮಾತುಗಳೂ ನಿಜ.
ಯಾವನೇ ವ್ಯಕ್ತಿ ತಾನು ಮಾಡುವ ಸಮಾಜಸೇವಾ ಕಾರ್ಯಗಳಿಗೆ ಬದಲಾಗಿ ಪ್ರಶಸ್ತಿ, ಪುರಸ್ಕಾರಗಳನ್ನು ಸ್ವೀಕರಿಸುತ್ತಾನಾದರೆ ಆವ್ಯಕ್ತಿಯ ನಿಸ್ವಾರ್ಥ ಧೋರಣೆಗಳ ಬಗ್ಗೆ ಅನುಮಾನ ಮೂಡುವುದು ಸಹಜ.
ಮದರ್ ಥೆರೆಸಾ ಒಬ್ಬರೇ ಅಲ್ಲ. ಸಮಾಜಸೇವೆಯ ಸೋಗಿನಲ್ಲಿ ಜೀವಿಸುತ್ತಿರುವ ಅಂಥವರು ನಮ್ಮ ನಾಡಿನಲ್ಲಿ ಇನ್ನೂ ನೂರಾರು ಜನರಿದ್ದಾರೆ.
ತಮಿಳುನಾಡಿನಲ್ಲಿ ಮತಾಂತರ ನಿಷೇಧ ಕಾಯ್ದೆ ಜಾರಿಗೆ ತರುವ ಕುರಿತು ಅಲ್ಲಿನ ವಿಧಾನ ಸಭೆಯಲ್ಲಿ ಚರ್ಚೆಯಾಯಿತು.
ಆ ಕೂಡಲೇ, ಎಲ್ಲಾ ಕ್ರೈಸ್ತ ಮಿಷನರೀ ಸಂಸ್ಥೆಗಳೂ ರಸ್ತೆಗಿಳಿದವು.
ಆ ಕಾಯ್ದೆ ಜಾರಿಗೆ ಬಂದರೆ ತಮ್ಮೆಲ್ಲಾ ಸೇವಾ ಕೇಂದ್ರಗಳನ್ನು ಮುಚ್ಚಿಬಿಡುತ್ತೇವೆ ಎಂದು ಸರಕಾರಕ್ಕೆ ಧಮಕಿ ಹಾಕಿದರು!
ಸೇವಾ ಕಾರ್ಯಗಳಿಗೂ ಮತಾಂತರಕ್ಕೂ ಸಂಬಂಧವೇನು?
ಮತಾಂತರ ನಿಷೇಧದಿಂದ ಸೇವೆ ಮಾಡುವ ಮಿಷನರಿಗಳಿಗೆ ಆಗುವ ತೊಂದರೆಯಾದರೂ ಏನು?
ಸೇವೆ ಮತ್ತು ಇನ್ನಿತರ ಆಮಿಷಗಳನ್ನು ತೋರಿಸಿ ಮತಾಂತರ ಮಾಡುವುದು ಸರಿ ಎಂದಾದರೆ,
ಚುನಾವಣೆಗಳಲ್ಲಿ ಹಣ ಮತ್ತು ಇನ್ನಿತರ ಆಮಿಷ ತೋರಿಸಿ ಮತ ಪಡೆಯುವುದೂ ತಪ್ಪಲ್ಲ.
ಮತಾಂತರದಿಂದ ವ್ಯಕ್ತಿಯ ಪೂಜಾಪದ್ಧತಿ ಮಾತ್ರ ಬದಲಾಗುವುದಿಲ್ಲ, ಆತನ ರಾಷ್ಟ್ರನಿಷ್ಠೆಯೂ ಬದಲಾಗುತ್ತದೆ.
ಮತಾಂತರವೆಂದರೆ ರಾಷ್ಟ್ರಾಂತರವೇ!
ಹೀಗಾಗಿಯೇ ಸ್ವಾಮಿ ವಿವೇಕಾನಂದರು ಹೇಳಿದ್ದು: “ಒಬ್ಬ ಹಿಂದು ಮತಾಂತರಗೊಂಡನೆಂದರೆ, ಅದರಿಂದ ಒಬ್ಬ ಹಿಂದುವಿನ ಸಂಖ್ಯೆ ಕಡಿಮೆಯಾಯಿತಷ್ಟೇ ಅಲ್ಲ, ಒಬ್ಬ ಶತೃವಿನ ಸಂಖ್ಯೆ ಹೆಚ್ಚಾಯಿತು”.
ಮಹಾತ್ಮಾ ಗಾಂಧಿಯವರೂ ಮತಾಂತರಕ್ಕೆ ಕಡು ವಿರೋಧಿಯಾಗಿದ್ದರು.
ನಮ್ಮ ದೇಶದಲ್ಲಿ ಮತಾಂತರ ನಿಷೇಧಗೊಳ್ಳಲಿ.
ಆ ನಂತರವೂ ಸೇವೆ ಮಾಡುವ ಆಸಕ್ತಿಯಿದ್ದರೆ ಮಿಷನರಿಗಳು ಸೇವೆ ಮಾಡಲಿ.
ಅದೇ ಅವರ ಸೇವಾಸಕ್ತಿಗೆ ನಿಜವಾದ ಪರೀಕ್ಷೆ.
“ಒಬ್ಬ ಹಿಂದು ಮತಾಂತರಗೊಂಡನೆಂದರೆ, ಅದರಿಂದ ಒಬ್ಬ ಹಿಂದುವಿನ ಸಂಖ್ಯೆ ಕಡಿಮೆಯಾಯಿತಷ್ಟೇ ಅಲ್ಲ, ಒಬ್ಬ ಶತೃವಿನ ಸಂಖ್ಯೆ ಹೆಚ್ಚಾಯಿತು” ಎಂದು ವಿವೇಕಾನಂದರು ಹೇಳಿದರೆ? ನಂಬಲು ಕಷ್ಟವಪ್ಪ.. ಅವರು ಸ್ವಧರ್ಮಾಭಿಮಾನಿ ಸರಿ. ಆದರೆ ಅನ್ಯ ಧರ್ಮೀಯರನ್ನು ಅವರು ಶತ್ರುಗಳೆಂದು ಭಾವಿಸಿರಲು ಸಾಧ್ಯವೇ ಇಲ್ಲ.
@ravi,
ಸರಿಯಾಗಿ ಅರ್ಥೈಸಿ ಕೊಳ್ಳಬೇಕಷ್ಟೇ,,ಏನೆಂದರೆ ಬೇರೆಯವರ ಚಿತಾವಣೆಯಿಂದ(ಅಥವಾ ಪ್ರಲೋಭನೆಯಿಂದ) ಮತಾಂತರ ಗೊಂಡ ಒಬ್ಬ, ತಾನು ಬಿಟ್ಟು ಬಂದಿದ್ದಕ್ಕೆ ಕಾರಣ ಹುಡುಕುತ್ತಿರುತ್ತಾನೆ( ಪ್ರಲೋಭನೆಗೆ ಒಳಗಾಗಿ ಮತಾಂತರ ಗೊಂಡೆ ಅನ್ನುವ ಹಾಗಿಲ್ಲವಲ್ಲ?) ಹಾಗು ಹಿಂದೂ ಧರ್ಮವನ್ನು ವಿನಾಕಾರಣ ದ್ವೇಷಿಸುತ್ತಾನೆ ಅಂದರೆ ಅವನೂ ಶತ್ರುವಿನಂತೆ ಅಲ್ಲವೇ?. ವಿನಾಕಾರಣ ದ್ವೇಷಿಸುವವನೂ ಶತ್ರುವೇ ಅಲ್ಲವೇ?
ಪಾಕಿಸ್ತಾನ ಹುಟ್ಟಿದ್ದು ಅಲ್ಲಿ ಹಿಂದೂಗಳು ಅಲ್ಪ ಸಂಖ್ಯಾತರಾದ್ದರಿಂದ. ಈಗ ಅದು ನಮ್ಮ ದೇಶದಲ್ಲಿ ಭಯೋತ್ಪಾದನೆಯನ್ನು ನಡೆಸುತ್ತಿದೆ. ನಮ್ಮ ಮೇಲೆ ೩ ಯುದ್ಧಗಳನ್ನು ಸಾರಿದೆ. ಈಗಲೂ ಅಲ್ಲಿ ಹಿಂದೂಗಳ ಕೊಲೆ, ಮತಾಂತರ ನಡೆಯುತ್ತಿದೆ. ಇತ್ತೀಚಿಗೆ ಅಲ್ಲಿನ ಶಾಸಕರು ಆ ದೇಶವನ್ನು ತೊರೆದು ಭಾರತಕ್ಕೆ ಬಂದಿದ್ದಾರೆ. ಇದು ಹಿಂದೂ ಮುಸಲ್ಮಾನರಾದ ಕತೆಯಾದರೆ.. ನಾಗಲ್ಯಾಂಡ ಮತ್ತು ಅರುನಾಚಲ್ ಪ್ರದೇಶದಲ್ಲಿ ಕ್ರೈಸ್ತರಾಗಿರುವ ಪರಿಣಾಮ ಅಲ್ಲ್ಲಿ ಭಾರತದ ಇತರ ಕಡೆಯಿಂದ ಉದ್ಯೋಗದ ನಿಮಿತ್ತ ಹೋದ ಭಾರತ ಬೇರೆ ರಾಜ್ಯದವರನ್ನು ‘ಭಾರತೀಯ ನಾಯಿಗಳೇ ಹೊರಗೆ ಹೋಗಿ’ ಎನ್ನುತ್ತಾರೆ. ನಾಗಲ್ಯಂಡ್ ಮುಂತಾದ ಕ್ರೈಸ್ತ ಬಾಹುಳ್ಯ ಇರುವ ಪ್ರದೇಶದಿಂದ ಯಾರಾದರು ಉದಾಹರಣೆಗೆ ದೆಹಲಿಗೆ ಹೋದರೆ ಅವರು ‘ನಾನು ಭಾರತಕ್ಕೆ ಹೋಗುತ್ತಿದ್ದೇನೆ’ ಎನ್ನುತ್ತಾನೆ. ಇದೆಲ್ಲಾ ಮತಾಂತರದ ಪರಿಣಾಮವೇ. ಮತಾಂತರ ವಾದವನ ಮನಸ್ಸಿನಲ್ಲಿ ಮೂಲ ಧರ್ಮದ ಮಾತು ದೇಶದ ಹಾಗು ಸಂಸ್ಕೃತಿಯ ಬಗ್ಗೆ ತಿರಸ್ಕಾರದ ಭಾವನೆಯನ್ನು ಮೂಡಿಸಲಾಗುತ್ತದೆ.
ಭಾರತ ಪಾಕಿಸ್ತಾನದ ನಡುವೆ ಕ್ರಿಕೆಟ್ ಪಂದ್ಯಾವಳಿ ನಡೆಯುವ ಸಂಧರ್ಬದಲ್ಲಿ ಮುಸಲ್ಮಾನರು ಪಾಕಿಸ್ತಾನದ ಪರ ಘೋಷಣೆ ಕೂಗುವುದು, ಪಟಾಕಿ ಸಿಡಿಸುವುದು ತಮಗೆ ಗೊತ್ತಿದೆ ಎಂದುಕೊಂಡಿದ್ದೇನೆ.
ನಾವು ಯಾವುದೇ ಮತೀಯರನ್ನು ಶತ್ರುಗಳೆಂದು ಭಾವಿಸುದಿಲ್ಲ ಆದರೆ ಅನ್ಯ ಮತೀಯರು ಹಾಗೆ ನಮ್ಮನ್ನು ಭಾವಿಸುತ್ತಾರೆ ಎಂದು ನನಗೆ ಅನಿಸುವುದಿಲ್ಲ. ವಿವೇಕಾನಂದರು ಹೇಳಿದ್ದು ಅದನ್ನೇ ಎಂದು ನನ್ನ ಅನಿಸಿಕೆ.
ಇದೇ ವಿಷಯದಲ್ಲಿ ಹೆಚ್ಚಿನ ಮಾಹಿತಿಗೆ ಈ ವಿಡಿಯೋ ವನ್ನು (ಅದರಲ್ಲೂ ಕೊನೆಯ ಭಾಗವನ್ನು) ನೋಡಿ.
http://vhtv.in/index.asp?fl=swamy-bank
14 ನೇ ಶತಮಾನದಲ್ಲಿ ಪ್ರಿ೦ಟಿ೦ಗ್ ಪ್ರೆಸ್ ಸ೦ಶೋಧನೆ ಮಾಡಿದ್ದು ಬೈಬಲ್ ಪ್ರಿ೦ಟ್ ಮಾಡೋದಿಕ್ಕೆ. ಕೊಲ೦ಬಸ್ ಹಾಗೂ ವಾಸ್ಕೋ ಡಿ ಗಾಮ ಪ್ರಪ೦ಚ ಪರ್ಯಟನೆ ಮಾಡಿದ್ದು ಮತಾ೦ತರ ಮಾಡೋದಿಕ್ಕೆ. ಭಾರತಕ್ಕೆ ದ೦ಡೆತ್ತಿ ಬ೦ದವರಲ್ಲಿ ಹೆಚ್ಚಿನವರು ಇದೇ ಕೆಲಸ ಮಾಡಿದ್ದು.
ಈಗ ಗೊತ್ತಾಯಿತು ಅಮೆರಿಕದ ಆಗಿನ ಸರಕಾರ ಓಶೋ ಅವರನ್ನು ಯಾಕೆ ವಿಷಪ್ರಾಶನ ಮಾಡಿಸಿ ಕೊಂದಿದ್ದು ಎಂದು! ಹೆಚ್ಚಿನ ಮಾಹಿತಿಗೆ ಓದಿ :
http://www.otoons.de/politics/osho_on_his_death.htm
ಹೇಮಾ ಪವಾರ್, ಧನ್ಯವಾದ ಉತ್ತಮ ವಿಷಯ ಪ್ರಕಟಿಸಿದ್ದಕ್ಕೆ ,
>>>ಕಪಟಿಗಳು ಸೋಗು ಹಾಕುವವರು ಯಾವಾಗಲೂ ಜನರಿಂದ ಸಮಾಜದಿಂದ ಗೌರವ ಪಡೆಯುತ್ತಾರೆ. ಏಕೆಂದರೆ ಅವರು ಸಮಾಜಕ್ಕೆ ಜನರಿಗೆ ಬೇಕಾದ ರೀತಿಯಲ್ಲಿ ಬದಲಾಗಬಲ್ಲರು.
>>>ಕೆಲವೇ ದಿನಗಳ ಹಿಂದೆ ಪಾರ್ಲಿಮೆಂಟಿನಲ್ಲಿ ಧಾರ್ಮಿಕ ಸ್ವಾತಂತ್ರ್ಯದ ಬಗ್ಗೆ ಚರ್ಚೆಯಾಯಿತು. ಅದರ ಉದ್ದೇಶ ಹೀಗಿತ್ತು: ಯಾರೊಬ್ಬರಿಗೂ ಒಬ್ಬ ವ್ಯಕ್ತಿಯನ್ನು ಒಂದು ಧರ್ಮ ಅಥವಾ ಮತಕ್ಕೆ ಮತಾಂತರವಾಗುವಂತೆ ಬಲವಂತಪಡಿಸಕೂಡದು ಎಂದು. ಇದಕ್ಕೆ ತಕ್ಷಣ ಪ್ರತಿಕ್ರಿಯಿಸಿದ ಮದರ್ ತೆರೆಸಾ ಪ್ರೈಮ್ ಮಿನಿಸ್ಟರ್ ಗೆ ಪತ್ರ ಬರೆದು ವಿರೋಧಿಸಿದರು. ಕ್ರಿಶ್ಚಿಯನ್ ಓಟುಗಳ ಹಿಂದೆ ಬಿದ್ದಿದ್ದ ರಾಜಕಾರಣಿಗಳು ಆಕೆಯ ಪತ್ರವನ್ನು ಮನ್ನಿಸಿ ಧಾರ್ಮಿಕ ಸ್ವಾತಂತ್ರ್ಯದ ವಿಷಯ ಕೈಬಿಟ್ಟರು.
ಎಷ್ಟೊಂದು ಅರ್ಥಪೂರ್ಣ ಅಲ್ಲವೇ? ಓಶೋ ಹೇಳಿದಂತೆ ಥೆರೆಸ ರವರ ಸೇವೆ ಒಳ್ಳೆಯದೇ ಎರಡು ಮಾತಿಲ್ಲ , ಆದರೆ ಅದರಲ್ಲಿ ಮತಾಂತರದ ಉದ್ದೇಶ ಕೂಡ ಇದ್ದದ್ದು ದುರದೃಷ್ಟಕರ ….
ಇದಕ್ಕೆ ಮೂಲ ಕಾರಣ ಹುಡುಕ ಹೊರಟರೆ ಸಿಗೋದು ಒಗ್ಗಟ್ಟಿನ ಕೊರತೆ…. ಹೇಗೆ ಬೇಕಾದರೂ ಒಗ್ಗಟ್ಟಾ ಗಿರುವವರು,ಜನಬಲ(?) ಮತ್ತು ಹಣಬಲ ಇರುವವರು ಯಾರಮೇಲೆ ಬೇಕಾದರೂ ಪ್ರಭಾವ ಬೀರಬಲ್ಲರು ಎಂಬುದಕ್ಕೆ ಥೆರೆಸ ಪ್ರದಾನಿ ಮೇಲೆ ಪ್ರಭಾವ ಬೀರಿರೋದೆ ಸಾಕ್ಷಿ !!!!
ವರ್ತಮಾನಕ್ಕೆ ಬಂದರೆ ” ಚಿ ಮೂ ಅವರಿಗೆ ನಿರಾಕರಿಸಲ್ಪಟ್ಟ ಡಾಕ್ಟರೇಟ್ , ಸಾಹಿತಿಗಳ ಮತ್ತು ಜನರ ಒಗ್ಗಟ್ಟಿ ನಿಂದಾಗಿ ಪುನಃ ಕೊಡಲ್ಪಡು ವಂಥಾಯಿತು “.ಅದರಿಂದ ದುಷ್ಟರು ಪ್ರಭಾವ ಬೀರಿದರೂ ಅದಕ್ಕೆ ಕಿವಿಕೊಡುವವರು ಇದ್ದರೂ(ಉನ್ನತ ಸ್ಥಾನವನ್ನು ಅಲಂಕರಿಸಿದ್ದರೂ ಕೂಡ ) , ಅದು ವಿಫಲವಾಯಿತು.
ಆದರಿಂದ ನಾವು ಒಗ್ಗಟ್ಟಾ ಗದಿದ್ದರೆ , ನಾವು ನಾವೇ ವಿರೋಧಿಸುತ್ತಾ, ಒಂದೊಂದು ಪಕ್ಷ ,ಜಾತಿ ಹಿಡಿದುಕೊಂಡು ಒಬ್ಬರನ್ನೊಬ್ಬರು ಹೀಗಳೆಯುತ್ತಿದ್ದರೆ, ದುಷ್ಟರು ಲಾಭ ಮಾಡಿಕೊಳ್ಳುತ್ತಾರೆ ಅಸ್ಟೇ.
@ಅಶು ಹೆಗ್ಡೆ >>>>”ಓಶೋ ಅವರು ನುಡಿದ ಮಾತುಗಳೂ ನಿಜ.
ಯಾವನೇ ವ್ಯಕ್ತಿ ತಾನು ಮಾಡುವ ಸಮಾಜಸೇವಾ ಕಾರ್ಯಗಳಿಗೆ ಬದಲಾಗಿ ಪ್ರಶಸ್ತಿ, ಪುರಸ್ಕಾರಗಳನ್ನು ಸ್ವೀಕರಿಸುತ್ತಾನಾದರೆ ಆವ್ಯಕ್ತಿಯ ನಿಸ್ವಾರ್ಥ ಧೋರಣೆಗಳ ಬಗ್ಗೆ ಅನುಮಾನ ಮೂಡುವುದು ಸಹಜ.
ಮದರ್ ಥೆರೆಸಾ ಒಬ್ಬರೇ ಅಲ್ಲ. ಸಮಾಜಸೇವೆಯ ಸೋಗಿನಲ್ಲಿ ಜೀವಿಸುತ್ತಿರುವ ಅಂಥವರು ನಮ್ಮ ನಾಡಿನಲ್ಲಿ ಇನ್ನೂ ನೂರಾರು ಜನರಿದ್ದಾರೆ”.
==> ಖಂಡಿತ ಒಪ್ಪಬೇಕಾದುದೆ, ನಿಜವು ಕೂಡ .
ಸೋಗುಗಾತಿಯರನ್ನೆ ಪೀಠದಲ್ಲಿ ಕೂರಿಸುವ ಈ ದೇಶದಲ್ಲಿ ಏನ್ಬೇಕಾದ್ರೂ ಆಗುತ್ತೆ. ಶ್ರದ್ದಾನಂದ ಮಾಡುತ್ತಿದ್ದ ಗಿರಿಜನ ಸೇವೆಗೆ ಸಿಕ್ಕದ್ದು ಸಾವಿನ ಬಳುವಳಿ. ಸೇವೆಯ ಹೆಸರಿನಲ್ಲಿ ಮತಾಂತರ ಮಾಡುತ್ತಿದ್ದವರಿಗೆ ಸಿಕ್ಕದ್ದು ಶಾಂತಿ ಪ್ರಶಸ್ತಿ. ಜೈ ಹೋ
ರವಿ> ಆದರೆ ಅನ್ಯ ಧರ್ಮೀಯರನ್ನು ಅವರು ಶತ್ರುಗಳೆಂದು ಭಾವಿಸಿರಲು ಸಾಧ್ಯವೇ ಇಲ್ಲ.
ಇದು ನಿಮ್ಮ ಭಾವನೆ ಇರಬಹುದಷ್ಟೇ. ಸ್ವಾಮಿ ವಿವೇಕಾನಂದರುಕಠ್ಠರ್ ರಾಷ್ಟ್ರೀಯವಾದಿಗಳಾಗಿದ್ದರು.
ಸ್ವಾಮಿ ವಿವೇಕಾನಂದರು ಮತಾಂತರದ ಕಡು ವಿರೋಧಿಯಾಗಿದ್ದರು.
ಬ್ರಿಟಿಷರಿಗೆ ಅರ್ಜಿ ಗುಜರಾಯಿಸಿ ಭಿಕ್ಷೆ ಬೇಡುತ್ತಿದ್ದ ಕಾಂಗ್ರೆಸ್ಸನ್ನು ಅವರು ಇಷ್ಟ ಪಡಲಿಲ್ಲ.
ತಮ್ಮ ಬಳಿ ಬಂದಿದ್ದ ಯುವಕರಿಗೆ “ಬಾಂಬ್ ತಯಾರಿಸಿ; ಸಶಸ್ತ್ರ ಕ್ರಾಂತಿ ನಡೆಸಿ ಬ್ರಿಟಿಷರನ್ನು ಹೊಡೆದೋಡಿಸಿ” ಎಂದು ಕರೆಯನ್ನೂ ನೀಡಿದ್ದರು.
ಸ್ವಾಮಿ ವಿವೇಕಾನಂದರ ಶಿಷ್ಯೆ ಭಗಿನಿ ನಿವೇದಿತಾ ಕ್ರಾಂತಿಕಾರಿಗಳ ನಾಯಕಿಯಾದಳು.
ಬಂಗಾಲದ ಎಲ್ಲಾ ಕ್ರಾಂತಿಕಾರಿಗಳು ನಿವೇದಿತಾ ಹತ್ತಿರ ಮಾರ್ಗದರ್ಶನಕ್ಕಾಗಿ ಬರುತ್ತಿದ್ದರು.
ಸ್ವಾಮಿ ವಿವೇಕಾನಂದರ ಮಾತುಗಳು ಮೂಲ ಇಂಗ್ಲಿಷಿನಲ್ಲಿ ಹೀಗಿದ್ದವು:
” Every man going out of the Hindu pale is not only a man less but also an enemy the more.”
ಈ ಕೊಂಡಿಯಲ್ಲಿ ಈ ಮೇಲಿನ ಮಾತುಗಳನ್ನು ನೋಡಬಹುದು: http://www.hinduwisdom.info/Conversion.htm
ಅದೇ ಮಾತುಗಳನ್ನು “The complete Works of Swamy Vivekananda/Volume 5” ಅಲ್ಲೂ ಓದಬಹುದು. ಅದರ ಕೊಂಡಿ ಇಲ್ಲಿದೆ: http://en.wikisource.org/wiki/The_Complete_Works_of_Swami_Vivekananda/Volume_5/Interviews/On_The_Bounds_Of_Hinduism
ಮೇಲಿನ ಕೊಂಡಿಯಲ್ಲಿ ಕಾಣಿಸಿರುವ ಪುಟದ ೫ನೇ paragraph ನೋಡಿ.
“A Hindu Critic of Christianity” ಪುಸ್ತಕದಲ್ಲೂ ನಾನು ಹೇಳಿದ ಮಾತುಗಳ ಉಲ್ಲೇಖವಿದೆ. ಈ ಕೆಳಗಿನ ಕೊಂಡಿಯಲ್ಲಿ ಪುಸ್ತಕದ pdf ಪ್ರತಿ ಇದೆ. ಅದರ ೬ನೇ ಪುಟದಲ್ಲಿ ನಾನು ಹೇಳಿದ ಸಂಗತಿ ಇದೆ:
http://www.haindavakeralam.com/HKPage.aspx?PageID=9065&SKIN=C
ಈ ಕೊಂಡಿಯ ಕಡೆಯ paragraph ನೋಡಿ: http://www.stephen-knapp.com/are_hindus_destined_to_become_extinct.htm
ಬಂಗಾಳದ ಸುಪ್ರಸಿದ್ಧ ಪತ್ರಕರ್ತ ಸ್ವಪನ್ ದಾಸ್‍ಗುಪ್ತಾ ಅವರ ಈ ಲೇಖನದಲ್ಲೂ ಸ್ವಾಮಿ ವಿವೇಕಾನಂದರ ಅದೇ ಮಾತುಗಳ ಉಲ್ಲೇಖವಿದೆ: http://www.outlookindia.com/article.aspx?235285
ಮಹಾತ್ಮಾ ಗಾಂಧಿಯವರೂ “ಮತಾಂತರವೆಂದರೆ ರಾಷ್ಟ್ರಾಂತರ” ಎನ್ನುವ ಅಭಿಪ್ರಾಯ ಹೊಂದಿದ್ದರು ಎನ್ನುವ ಉಲ್ಲೇಖವನ್ನೂ ಮೇಲಿನ ಲೇಖನದಲ್ಲಿ ಕಾಣಬಹುದು.
ಈ ಕೊಂಡಿಯಲ್ಲೂ ಅದೇ ಮಾತಿನ ಉಲ್ಲೇಖವಿದೆ: http://www.vigilonline.com/index.php?option=com_content&task=view&id=553&Itemid=103
ಈ ಕೆಳಗಿನ ಕೊಂಡಿಯಲ್ಲಿ ವಿವೇಕಾನಂದ, ರಾಧಾಕೃಷ್ಣನ್, ಗಾಂಧೀಜಿ ಮತ್ತು ಇನ್ನಿತರ ಮಹನೀಯರು ಮತಾಂತರದ ಕುರಿತಾಗಿ ತಿಳಿಸಿರುವ ಮಾತುಗಳ ಉಲ್ಲೇಖವಿದೆ:
Click to access SocialPoliticsofConversion.pdf
ಸ್ವಾಮಿ ವಿವೇಕಾನಂದ ಮತ್ತು ಗಾಂಧೀಜಿಯವರ ಮತಾಂತರದ ಕುರಿತಾದ ಅಭಿಪ್ರಾಯಗಳನ್ನು ತಿಳಿಯುವುದಕ್ಕಾಗಿ ಈ ಕೊಂಡಿಗಳನ್ನೂ ನೋಡಿರಿ:
http://www.hvk.org/articles/1002/217.html
http://varnam.org/blog/2008/10/the_conversion_agenda/
Thanks. Its really good article.