ವಿಷಯದ ವಿವರಗಳಿಗೆ ದಾಟಿರಿ

Archive for

15
ಫೆಬ್ರ

‘ಭಾರತದ ಬಳಿಯಿದೆ ನಿಂಬೆಯ ಶಕ್ತಿ’ !

ಪಾಕಿಸ್ತಾನದ ಬಳಿ ಭಾರತಕ್ಕಿಂತ ೧೦೦ಕ್ಕೊ ಹೆಚ್ಚು  ಅಣ್ವಸ್ತ್ರಗಳಿವೆ ಅನ್ನೋ ಸುದ್ದಿ ಮೊನ್ನೆ ಪತ್ರಿಕೆಗಳಲ್ಲಿ ಬಂದಿದೆ.ಆದರೆ ಭಾರತೀಯರು ಈ ಸುದ್ದಿಗೆ ಗಲಿಬಿಲಿಯಾಗಬೇಕಿಲ್ರಿ! ಯಾಕೆ ಅಂತಿರಾ? ಯಾಕಂದ್ರೆ ‘ಭಾರತದ ಬಳಿಯಿದೆ ನಿಂಬೆಯ ಶಕ್ತಿ’ !

ಇದೇನಿದು ಯಾವ್ದೋ ಬಟ್ಟೆ ತೊಳ್ಯೋ ಸೋಪ್ ಜಾಹಿರಾತಿನ ಡೈಲಾಗ್ ತರ ಇದ್ಯಲ್ಲಪ್ಪ ಅಂತಿರಾ?ರೀ,ಇದು ಆ ತರ ನಿಂಬೆ ಅಲ್ಲ.ನಾನ್ ಹೇಳೋಕ್ ಹೊರಟಿದ್ದು,ಕಳೆದ ಬಾರಿ ಒಂದಿಷ್ಟು ಜನ ಎಂ.ಎಲ್.ಎಗಳು ಹೋಗಿ ಗೋವಾದಲ್ಲಿ ಕೂತು,ಅಲ್ಲಿಗೆ ಕುಮ್ಮಿನು ಹೋದ್ಮೇಲೆ,ಈ ಕಡೆ ಯಡ್ಡಿ ಕುರ್ಚಿ ಗಡ-ಗಡ ನಡುಗಲು ಶುರು ಮಾಡಿದಾಗ.ವಿಧಾನ ಸೌಧದ ಎದುರು ಕಾಣಿಸಿತ್ತಿಲ್ಲ ಹರಿಶಿನ ಕುಂಕುಮ ಹಚ್ಚಿದ ನಿಂಬೆಹಣ್ಣು ಅದರ ಬಗ್ಗೆ. ಮತ್ತೀಗ ವಿಧಾನಸೌಧದ ಪಶ್ಚಿಮ ದ್ವಾರದ ಬಳಿ ಕಾಣಿಸಿಕೊಂಡ ಪವರ್ಫುಲ್ ನಿಂಬೆಯ ಬಗ್ಗೆ! (ಆ ಪರಿ ಕಾಡ್ತಾ ಇರೋ ರಾಜಭವನದ ಬಳಿ ಯಾಕೆ ಇನ್ನ ನಿಂಬೆ ಬಿದ್ದಿಲ್ಲ ಅಂತ ನಾನ್ ಕೇಳೋಲಪ್ಪ 😉 ).ಇದೇ,ಈ ಮಂತ್ರಿಸಿದ ನಿಂಬೆಹಣ್ಣು ಕಣ್ರೀ ಭಾರತದ ಶಕ್ತಿಯಾಗಬೇಕು.ಅದ್ಹೆಂಗೆ ಸಿವಾ ಅಂತಿರ? ಹೇಳ್ತೀನಿ ಕೇಳಿ…

ಈಗಾಗ್ಲೇ ಚೀನಾ ಅನ್ನೋ ನಂಬಿಕೆಗೆ ಅರ್ಹವಲ್ಲದ ದೇಶ ಭಾರತವನ್ನ ಇರೋ ಬರೋ ದಿಕ್ಕುಗಳಿಂದ ಎಲ್ಲೆಲ್ಲಿ ಸಾಧ್ಯವೋ ಅಲ್ಲೆಲ್ಲ ಕಡೆಯಿಂದ ಸುತ್ತಿ ಕುಳಿತಿದೆ.ಹೀಗೆ ಪಾಕಿಸ್ತಾನ,ಶ್ರೀಲಂಕ,ಬಾಂಗ್ಲ,ನೇಪಾಳ,ಬರ್ಮಾ ಕಡೆ ಹರಡಿಕೊಂಡಿರೋ ಚೀನಿಗಳು ವಾಪಸ್ ಚೈನಗೆ ಹೋಗೋ ಹಾಗೆ ಮಾಡ್ಬೇಕು.ಹೇಗ್ ಮಾಡೋದು?

ಹೆಗಂದ್ರೆ,ಹೇಗಿದ್ರು ಅಲ್ಲಿ ಪ್ರಜಾಪ್ರಭುತ್ವಕ್ಕಾಗಿ ಚಿಕ್ಕದಾಗಿ ಕೂಗೆದ್ದಿದೆ.ಅಲ್ಲಿನ ಜನರಿಗೆ ದೈತ್ಯ ಶಕ್ತಿ ಆವಹನೆಯಾಗುವಂತೆ ಭಾರತ ನಿಂಬೆ ಶಕ್ತಿಯನ್ನ ಪ್ರಯೋಗಿಸ್ಬೇಕು ರೀ,ಆಗ ಅಲ್ಲಿ ರೊಚ್ಚಿಗೆಳೋ ಚೀನೀ ಜನರನ್ನ ಕಂಟ್ರೋಲ್ ಮಾಡೋಕೆ ಅಂತ ಚೀನಿಗಳೆಲ್ಲ ವಾಪಸ್ ಅವ್ರ ದೇಶಕ್ಕೆ ಹೋಗ್ತಾರೆ.ಅವರೆಲ್ಲ ಕಾಲ್ಕಿತ್ತ ಮೇಲೆ ಭಾರತ ಸೋಯ್ಯಿ-ಟಪಕ್ ಅಂತ ಮತ್ತಿನ್ನೊಂದು ಕೆಲ್ಸ ಮಾಡ್ಬೇಕಪ್ಪ.ಗಡಿಯುದ್ದಕ್ಕೂ ನಿಂಬೆ ಬೆಳೆಯೋದು ಕಡ್ಡಾಯ ಮಾಡಿ, ಗಡಿ ಬೇಲಿ ತರ ಮಂತ್ರಿಸಿದ ನಿಂಬೆ ಬೇಲಿ ಮಾಡಿಬಿಡ್ಬೇಕು.ಅಲ್ಲಿಗೆ ದೇಶ ಫುಲ್ ಸೆಕ್ಯೂರ್ ಆಗಿಬಿಡುತ್ತೆ! (ಹಿಂಗ್ ಮಾಡೋಕೆ ನಮ್ ದೇಸದ ಸಿಕ್ಯುಲರ್ಗಳು ಬಿಡೋಲ್ಲ ಅಂತಿರ, ಅವ್ರು ಯಾವ್ ಒಳ್ಳೆ ಕೆಲ್ಸ ತಾನೇ ಮಾಡೋಕ್ ಬಿಡ್ತಾರೆ ನೀವೇ ಹೇಳಿಪ್ಪ ;))

ಇಷ್ಟು ಮಾಡಿದ್ರೆ ಪಾಕಿಸ್ತಾನದ ಸದ್ದು ಸಹ ಅಡಗಿಬಿಡುತ್ತೆ,ಇಲ್ಲ ಅಂದ್ರೆ ಭಾರತದಲ್ಲಿಡಿ ಕಡ್ಡಾಯ ನಿಂಬೆ ಬೆಳೆಯುವಂತೆ ಮಾಡಿ ಅದೇ ನಿಂಬೆ ಹಣ್ಣು ಪಾಕಿಸ್ತಾನಕ್ಕೆ ಎಸೆಯುವಂತೆ ಮಾಡಿದ್ರೂ ಆ ದೇಶ ನಿಂಬೆಯಲ್ಲಿ ಮುಚ್ಚಿ ಹೋಗುತ್ತೆ! ಹೇಗಿದೆ ‘ನಿಂಬೆಯ ಶಕ್ತಿ’, ಸಕ್ಕತ್ತ್ ಅಲ್ವಾ?  ಮತ್ತಷ್ಟು ಓದು »

15
ಫೆಬ್ರ

ಹಾರೋ ಬೂದಿಯ ನೋಡಿದಿರಾ?

ಪವನ್ ಎಂ ಟಿ

ಒಂದು ದಿನ ಮನೆಯಲ್ಲಿ ಬಿದ್ದಿರುವ ಧೂಳನ್ನು ಗುಡಿಸದೇ ಇದ್ದರೇನೆ ಕಿರಿಕಿರಿ ಆಗ್ತಾ ಇರುತ್ತೆ. ಹಾಗಿರುವಾಗ ಹೇಗೆ ಇದ್ರೂ ಧೂಳಿನ ಒಳಗೆ ಇರಬೇಕಂದ್ರೆ ಹೇಗಾಗಬಹುದು?

ದಿನನಿತ್ಯದ ಸಣ್ಣ ಸಂಗತಿಯೇ ಹೀಗಾದರೆ  ಉಡುಪಿ ಜಿಲ್ಲೆಯ ಪಡುಬಿದ್ರೆಯ ನಂದಿಕೂರು ಗ್ರಾಮದ ಸುತ್ತಮುತ್ತಲಿನ ಜನರ ಸ್ಥಿತಿ ನೆನಪಿಸಿಕೊಂಡರೇ ಮೈ ಜುಮ್ ಎನ್ನುತ್ತದೆ. ಕಾರಣವಿಷ್ಟೆ. ಪಡುಬಿದ್ರಿ ಸಮೀಪದಲ್ಲಿ ಇತ್ತೀಚೆಗೆ ಬೃಹತ್ ಕಂಪೆನಿಯೊಂದು ತನ್ನ ಕಾರ್ಯಾರಂಭ ಮಾಡಿದೆ. ಅದರ ಆರಂಭದ ಸಂದರ್ಭದಲ್ಲೇ ತೀವ್ರ ಪ್ರತಿರೋಧ ಇತ್ತಾದರೂ ಹಣವಂತರ ಮುಂದೆ ಈ ಚಳುವಳಿ ಸೋತು ಸುಣ್ಣವಾಯಿತು. ಸಮಾಜ ಸೇವೆ ಮಾಡುತ್ತೇವೆಂದು ಹೇಳಿ ಮತ ಪಡೆದ ಜನಪ್ರತಿನಿಧಿಗಳು ಈ ಕಂಪೆನಿಯ ರಕ್ಷಣೆಗೆ ನಿಂತರು. ಇದೀಗ ಕಂಪೆನಿಯು ತನ್ನ ಹತ್ತು ಶೇಕಡಾ ಕೆಲಸ ಆರಂಭ ಮಾಡಿದೆ ಅಷ್ಟೇ. ಆದರೆ ಅದು ಕೊಟ್ಟ ಹೊಡತಕ್ಕೆ ಇಲ್ಲಿನ ಸ್ಥಳೀಯ ಜನತೆ ತತ್ತರಿಸುತ್ತಿದೆ. ಇಲ್ಲಿನ ಕಾರ್ಖಾನೆಯು ಉಗುಳುತ್ತಿರುವ  ತ್ಯಾಜ್ಯದ ಧೂಳಿನಿಂದ ಅನೇಕ ರೀತಿಯ ಶಾರೀರಿಕ ತೊಂದರೆಗಳನ್ನು ಇಲ್ಲಿನ ಪ್ರಜೆಗಳು ಅನುಭವಿಸುತ್ತಿದ್ದಾರೆ. ತನ್ನದಲ್ಲದ ತಪ್ಪಿಗೆ ಮಕ್ಕಳು ಮಹಿಳೆಯರು ಸೇರಿದಂತೆ ಚರ್ಮ, ಶ್ವಾಸಕೋಶ ಸಂಬಂಧಿ ರೋಗಗಳಿಂದ ಬಳಲುತ್ತಿದ್ದಾರೆ. ಮತ್ತಷ್ಟು ಓದು »