ಪ್ರೀತಿಗೆ ಕಣ್ಣು ಬೇಡ ಒಂದಿಷ್ಟು ಮಣ್ಣಾದರೂ ಬೇಡವೇ?
ಪ್ರೇಮಿಗಳ ದಿನಾಚರಣೆಗೆ ಧಿಕ್ಕಾರ…..! ಇದು ಭಾರತದಲ್ಲಿ ಈ ದಿನಾಚರಣೆಯ ಒಟ್ಟೊಟ್ಟಿಗೆ ಬೆಳೆದು ಬಂದ ಒಂದು ಘೋಷಣೆ ಮತ್ತು ಕ್ರಿಯೆ. ಇಲ್ಲಿ ವಿರೋಧ ಮತ್ತು ಪರ ಒಟ್ಟೊಟ್ಟಿಗೆಯೇ ಸಾಗಿದೆ, ಸಾಗುತ್ತಿದೆ ಮತ್ತು ಮುಂದೆಯೂ ಸಾಗಬಹುದು.ವಿಪರ್ಯಾಸವೆಂದರೆ ಧಿಕ್ಕಾರದ ಕೂಗು ಜೋರಾದಂತೆ ಸ್ವೀಕಾರದ ಬಯಕೆ ಕೂಡ ಏರುತ್ತಿದೆ. ಅದು ಹಾಗೆಯೇ, ಮುಚ್ಚಿಟ್ಟಿರುವುದರ ಬಗೆಗೆ ಹೆಚ್ಚು ಕುತೂಹಲ. ಇದು ಮಾನವನ ಸಹಜ ಸಂಸ್ಕ್ರತಿ. ಕಾಲದ ಹರಿವು ಮುಂದೆ ಮುಂದೆ…. ಹಿಂದೆಯಲ್ಲ, ಅನ್ನುವುದು ’ಹೀಗೂ ಒಂದು ದಿನ’ ಬೇಕು ಎಂಬುವವರ ಅಂಬೋಣ. ಆದರೆ ಯಾವುದು ಮುಂದೆ, ಯಾವುದು ಹಿಂದೆ ಎಂಬುದು ನಿರ್ದಿಷ್ಟ ವ್ಯಾಖ್ಯೆಯಿಲ್ಲದ ’ಕಾಲಗುಣ’. ಒಟ್ಟಿನಲ್ಲಿ ನನ್ನಂಥವರ ಸದ್ಯದ ಸ್ಥಿತಿ, ಮೂರು ಮಾರ್ಗದ ಮಧ್ಯೆ ಮದ್ಯ ಕುಡಿದು ತೂರಾಡುವವನಂತಾಗಿದೆ!
***
ಪ್ರವೀಣ್ ಗೊಡ್ಕಿಂಡಿಯ ಕೊಳಲನಾದ ಅಲೆ ಅಲೆಯಾಗಿ ತೇಲಿ ವಾಲಿ ನನ್ನ ಸುತ್ತ ಮತ್ತು ನನ್ನೊಳಗೊಂದು ಭಾವವಲಯ ಸ್ರೃಷ್ಟಿಸಿ ಬಿಡುತ್ತದೆ. ಹೌದು, ನಾನು ಕೊಳಲನ್ನು ಪ್ರೀತಿಸುತ್ತೇನೆ. ನುಡಿಸುವವನನಲ್ಲ! ಅದನ್ನು ಯಾರು ನುಡಿಸಿದರೂ ನನಗಷ್ಟೆ! ನಾ ಝಾಕೀರ್ ಹುಸೇನ್‌ನನ್ನು ಪ್ರೀತಿಸುತ್ತೇನೆ. ತಬಲವನ್ನಲ್ಲ! ಮತ್ತಷ್ಟು ಓದು 
ಒಲುಮೆ
ಪದ್ಮಾವತಿ ಎನ್
ವಯ್ಯಾರದಾ ಛಾಪಿಲ್ಲ . . . ಗೊಂದಲದ ಮುಸುಕಿಲ್ಲ
ರೆಪ್ಪೆಯಂಚಲಿ ಮೂಡಿದಾ ಕಳೆ
ಆವರಿಸಿತ್ತು ನನ್ನ ಮನ ಪಟಲವ . . . . .
ಸಂಕೋಚದಲೆ ಬಾಚಿದೆ ಆ ಕಿರಣವ
ಪುಳಕಗೊಂಡಿತಾಗ ಮೈಮನಸು
ನನ್ನಿರವ ಮರೆತಿದ್ದೆ
ನೋಟವನೇ ಗೆದ್ದಿದ್ದೆ
ಕನಸಿನರಮನೆಯ ಅರಸುತ್ತಾ ಸಾಗಿದ್ದೆ. . . . .
ನನ್ನೊಡಲ ದಣಿಸಿದವನು ನನ್ನುಸಿರ ತಣಿಸಿದವನು
ನಂಬಿದ್ದೆ ನಾನಾಗ ಆ ಕಣ್ಣಂಚ ಕಿರಣವನು
ಆದರತೆಯು ಚಿಗುರಿ ನಿಂತಾಗ
ಕ್ಷಣ ಕಳೆದು ಕಾಲ ಮಗುಚಿದರೂ
ನಿಂತಿದೆ ನನ್ನುಸಿರು ಅವನಾಳದಲಿ
ತಂಪೆರೆದಿಹಾ ಪ್ರೀತಿಯಾಮೃತಕೆ . . . . . . ಮತ್ತಷ್ಟು ಓದು 






