ವಿಷಯದ ವಿವರಗಳಿಗೆ ದಾಟಿರಿ

ಫೆಬ್ರವರಿ 23, 2011

9

ವೋಟ್ ಬ್ಯಾಂಕ್ ಜಪ – ಕಾನೂನು ಸುವ್ಯವಸ್ಥೆ ನೆಪ !

‍ರಾಕೇಶ್ ಶೆಟ್ಟಿ ಮೂಲಕ

– ರಾಕೇಶ್ ಶೆಟ್ಟಿ
ಈ ಲೇಖನವನ್ನ ಬರೆದಿದ್ದು ಕಳೆದ ವರ್ಷ ರಾಜೀವ್ ಗಾಂಧೀಯವ್ರ ಹುತಾತ್ಮರಾದ ದಿನದಂದು,ಆದರೆ ಇಂದಿಗೂ ಇದು ಪ್ರಸ್ತುತವೇ,ಬಹುಶಃ ಈ ಕಾಂಗ್ರೆಸ್ಸ್ ಸರ್ಕಾರ ಈ ಅವಧಿ ಮುಗಿದ ಮೇಲೂ ಮತ್ತೆ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ್ರೆ ಇನ್ನ ೬-೭ ವರ್ಷ ಈ ಲೇಖನ ಪ್ರಸ್ತುತವೇ! ಯಾವ್ದಪ್ಪ ಇದು ಅಂತ ವಿಷ್ಯಾ ಅಂತೀರಾ,ಅದೇ ಸ್ವಾಮಿ ಅಫ಼್ಜಲ್ ಗುರು ಅನ್ನೋ ಉಗ್ರಗಾಮಿಯನ್ನ ಗಲ್ಲಿಗೇರಿಸೊದು.ಮೊನ್ನೆ ಕಸಬ್ಗೆ ಹೈ-ಕೊರ್ಟ್ ಗಲ್ಲು ಶಿಕ್ಷೆ ನೀಡಿದೆ ಅಂದಾಗ ನನಗೆ ಮತ್ತೆ ಮತ್ತೆ ನೆನಪಾಗಿದ್ದು ಅಫ಼್ಜಲ್! (ಹಳೇ ಲೇಖನದಲ್ಲಿ ಕಸಬ್ ಇರಲಿಲ್ಲ ಈಗ ಅವನು ಸೇರಿಕೊಂಡಿದ್ದಾನೆ.ಮತ್ತೆ ಇದೇ ಲೇಖನವನ್ನ ಪ್ರಕಟಿಸುವ ದಿನ ಬಾರದಿರಲಿ 😦 )

ಇಂದು ರಾಜೀವ್ ಗಾಂಧೀ ಹುತಾತ್ಮರಾದ ದಿನ.ಆದರೆ ನನಗೆ ಈಗ ನೆನಪಾಗುತ್ತಿರುವವರು ಅವರಮ್ಮ ಇಂದಿರಾ.’ಇಂದಿರಾ ಗಾಂಧಿ!’ ಬಹುಷಃ ಸ್ವತಂತ್ರ ಭಾರತದ ಇತಿಹಾಸದಲ್ಲಿ ದೇಶದ ರಕ್ಷಣೆಯ ವಿಷಯದಲ್ಲಿ ಯಾವ ರಾಜಿ ಮಾಡಿಕೊಳ್ಳದೆ ಮುನ್ನುಗ್ಗುತಿದ್ದ ಅವರಂತ ಇನ್ನೊಬ್ಬ ಪ್ರಧಾನಿ ಈ ದೇಶಕ್ಕೆ ಮತ್ತಿನ್ಯಾರು ಸಿಕ್ಕಿಲ್ಲ ಅಂದರೆ ಅದು ಉತ್ಪ್ರೇಕ್ಷೆಯಾಗಲಾರದು!

ಅವನು ಮಕ್ಬೂಲ್ ಭಟ್!, JKLF ಸ್ಥಾಪಕರಲ್ಲೊಬ್ಬ.ಮರಣದಂಡನೆ ಶಿಕ್ಷೆಗೆ ಗುರಿಯಾಗಿ ಜೈಲಿನಲ್ಲಿದ್ದ ಈ ಕಾಶ್ಮೀರಿ ಮುಸಲ್ಮಾನನ್ನ ಬಿಡಿಸಿಕೊಳ್ಳಲು, ಇಂಗ್ಲೆಂಡಿನಲ್ಲಿ ಭಾರತದ ರಾಜತಾಂತ್ರಿಕ ಅಧಿಕಾರಿಯಾಗಿದ್ದ ರವೀಂದ್ರ ಮ್ಹಾತ್ರೆಯವರನ್ನ ಅಪಹರಿಸಿದ ಉಗ್ರಗಾಮಿಗಳು, ಅವನ ಬಿಡುಗಡೆಯ ಷರತ್ತನ್ನ ಮುಂದಿಟ್ಟರು.ಇಂದಿರಮ್ಮ ಅಲ್ಲದೆ ಬೇರೆ ಯಾರಾದರು ಇದ್ದಿದ್ದರೆ ಬಿಡುತಿದ್ದರೆನೋ!?, ಆದ್ರೆ ಆಕೆ ಬಗ್ಗಲಿಲ್ಲ,ಕ್ಷಮಾಪಣೆ ನೀಡುವಂತೆ ಕೋರಿ ರಾಷ್ಟ್ರಪತಿ ಗ್ಯಾನಿ ಜೈಲ್ ಸಿಂಗ್ ಬಳಿ ಹೋಗಿದ್ದ ಅರ್ಜಿ ತಿರಸ್ಕ್ರುತವಾಗುವಂತೆ ನೋಡಿಕೊಂಡರು,ಅವನನ್ನ ಗಲ್ಲಿಗೇರಿಸಿ ಇಂತವಕ್ಕೆಲ್ಲ ಭಾರತ ಬಗ್ಗುವುದಿಲ್ಲ ಅನ್ನುವ ಸ್ಪಷ್ಟ ಸಂದೇಶ ನೀಡಿದ್ದರು ಇಂದಿರಮ್ಮ.

ಇದು ನಡೆದಿದ್ದು ೧೯೮೪ ರಲ್ಲಿ,ನೇಣಿಗೆರಿಸಲ್ಪಟ್ಟವನು ಒಬ್ಬ ಕಾಶ್ಮೀರಿ ಮುಸಲ್ಮಾನ,ಕಾಶ್ಮೀರ ಹೊತ್ತಿ ಉರಿಯುತಿದ್ದ ಆ ದಿನಗಳಲ್ಲೇ ಯಾವ ಕಾನೂನು ಸುವ್ಯವಸ್ಥೆಯ ನೆಪ ಹೇಳಿ ಅವನಿಗೆ ಶಿಕ್ಷೆ ಜಾರಿ ಮಾಡುವಲ್ಲಿ ಕೇಂದ್ರ ಸರ್ಕಾರ ಹಿಂದೆ ಮುಂದೆ ನೋಡಲಿಲ್ಲ.ಆದರೆ ಈಗ ಅಫ್ಜಲ್ ಗುರುವಿನ ವಿಷಯದಲ್ಲಿ ಮಾತ್ರ ಕಾನೂನು ಸುವ್ಯವಸ್ಥೆಯ ನೆಪ ಬಂದು ಕೂತಿದೆ!

ಗಲ್ಲು ಶಿಕ್ಷೆಗೆ ಗುರಿಯಾಗಿ ೯ವರ್ಷವಾದ್ರು ಇನ್ನ ಜಾರಿಯಾಗದಿರುವಾಗ ಇನ್ನ ಈ ಕಸಬ್ ಇನ್ನೆಷ್ಟು ದಿನ ಕಬಾಬ್ ತಿಂತ ಕೂತಿರ್ತಾನೋ? ನಿನ್ನೆ ಕಸಬ್ಗೆ ಗಲ್ಲು ಪ್ರಕಟವಾಗುತಿದ್ದಂತೆ ಮಾಧ್ಯಮಗಳು ಮುಂಬೈ ಮಾರಣಹೋಮಕ್ಕೆ ಬಲಿಯಾದವರ ಕುಟುಂಬದವರ ಪ್ರತಿಕ್ರಿಯೆಯನ್ನ ಕೇಳುತ್ತಲಿದ್ರಲ್ಲ, ಅದ್ರಲ್ಲಿ ಮಂಗಳೂರಿನ ಒಂದು ಕ್ರೈಸ್ತ ಕುಟುಂಬವಿತ್ತು (ಕ್ರೈಸ್ತ  ಅಂತೇಕೆ ಬೋಲ್ಡ್ ಮಾಡಿ ಅಂದ್ರೆ, ಅಫಜಲ್ಜಲ್ಗೆ ನೇಣು ಹಾಕಿ ಅಂದಾಗ ಅದಕ್ಕೊಂದು ಬಣ್ಣ ಕೊಡೋ ಗೋಸಂಬಿ ಸಿಕ್ಯುಲರ್ ಮನಸುಗಳಿಗೆ ನೋವುಂಡ ಮತ್ತು ನ್ಯಾಯಕ್ಕಾಗಿ ಬೇಡುತ್ತಿರುವ ಜೀವಗಳಿಗೆ ಬಣ್ಣವಿಲ್ಲ ಅಂತೇಳುವ ಉದ್ದೇಶದಿಂದಷ್ಟೆ!)

ಆ ತಾಯಿ ಗದ್ಗದಿತರಾಗಿ ಮಾತಾಡುತಿದ್ದರು “ಮನೆಗೆ ಆಧಾರವಾಗಿದ್ದವನು ಅವನೊಬ್ಬನೇ,ಅವನ ಮಗುವಿಗೆ ಈಗ ಅಪ್ಪನಿಲ್ಲ,ಹೆಂಡತಿಗೆ ಗಂಡನಿಲ್ಲ, ನಮಗೆ ಈ ಮುಪ್ಪಿನಲ್ಲಿ ಮಗನಿಲ್ಲ!, ಆ ಕಸಬ್ನನ್ನ ಬೇಗ ಗಲ್ಲಿಗೇರಿಸಿ ನನ್ನ ಮಗನ ಆತ್ಮಕ್ಕೆ ಶಾಂತಿ ದೊರಕುವಂತೆ ಮಾಡಿ!”.ಆಕೆ ಹೇಳುವುದ ನೋಡಿದ್ರೆ ಇದಿನ್ನೆಂತ ದೇಶ,ನಾವೇಷ್ಟು ಕೈಲಾಗದವರಂತಾಗಿದ್ದೇವೆ ಅನ್ನಿಸುವುದಿಲ್ಲವೇ?ಯುದ್ಧ ವಿಮಾನದಲ್ಲಿ ಕೂರೋದಿಕ್ಕೆ-ಸಭೆ ಸಮಾರಂಭಗಳಿಗೆ ಹೋಗೊಕೆ ಸಮಯದ ಅಭಾವವಿಲ್ಲದ ಪ್ರತಿಭಾ ಪಾಟೀಲ್ ಅನ್ನೊ ರಾಷ್ಟ್ರಪತಿಗೆ ಆ ಕ್ರಿಮಿಯ ಕ್ಷಮಾದಾನದ ಅರ್ಜಿಯನ್ನ ಕಸದ ಬುಟ್ಟಿಗೆಸೆಯಲು ಇನ್ನೇಷ್ಟು ದಿನ ಬೇಕು? ಒಂದೆಡೆ ರಾಷ್ಟ್ರಪತಿಗಳ ಮುಂದೆ ಅವನ ಕ್ಷಮಾಪಣ ಅರ್ಜಿ ಇದೆ ಅನ್ನೋ ಕೇಂದ್ರ ಸರ್ಕಾರ ಮತ್ತೊಂದೆಡೆ,”ಅಫ಼್ಜಲ್ ಸಲ್ಲಿಸಿದ ಕ್ಷಮಾಪಣ ಅರ್ಜಿಯು ತಮ್ಮ ಬಳಿ ಬಂದಿಲ್ಲ” ಅಂತ ರಾಷ್ಟ್ರಪತಿಗಳ ಕಾರ್ಯಲಯ ಮೊನ್ನೆ ಮಾಹಿತಿ ಹಕ್ಕುದಾರನ ಅರ್ಜಿಯಲ್ಲಿ ಹೇಳಿದೆ,ಹಾಗಿದ್ದರೆ ಆ ಅರ್ಜಿ ಎಲ್ಲಿ ಹೋಯಿತು? ಮತ್ತು ಈ ಗಡವನನ್ನ ಸಾಕಲು ಇನ್ನ ಎಷ್ಟು ದಿನ ನಾವು ನಮ್ಮ ತೆರಿಗೆ ಹಣ ಪೋಲು ಮಾಡಬೇಕು ಅನ್ನುವುದು ಸದ್ಯ ಚಿದಂಬರ ರಹಸ್ಯ!

ಯಾರ ಕಿವಿಗೆ ಹೂ ಇಡಲು ಹೊರಟಿದ್ದಾರೆ ಈ ಜನ.ಕಾನೂನು ಸುವ್ಯವಸ್ಥೆಯನ್ನು ಕಾಪಡಲಾಗದ ಸರ್ಕಾರವಾದರು ಏಕಿರಬೇಕು ಅಧಿಕಾರದಲ್ಲಿ?,ಅವನನ್ನ ಜೀವಂತವಿಟ್ಟು ಮತ್ತಿನ್ಯಾವ ಅಪಹರಣದ ನಾಟಕ ಶುರುವಾಗಿ ಇದೆ ‘ಕಾನೂನು ಸುವ್ಯವಸ್ಥೆಯ’ ನೆಪ ಹೇಳಿ ಬಿಡುಗಡೆ ಮಾಡಲು ಕಾದಿದ್ದಾರೆ ಇವರು.ನಂಗೆ ಒಮ್ಮೊಮ್ಮೆ ಅನ್ನಿಸುವುದು ಈಗ ಇಷ್ಟೆಲ್ಲಾ logic ಮಾತಾಡೋ ರಾಜಕಾರಣಿಗಳಲ್ಲಿ ಒಂದಿಬ್ಬರು ಯಾರಾದರು ಅವತ್ತಿನ ದಾಳಿಯಲ್ಲಿ ಬಲಿಯಾಗಿದ್ದರೆ ಆಗ ಇವರಿಗೆ ಬಲಿದಾನಗೈದವರ ಕುಟುಂಬದ ಅಳಲು ಅರ್ಥವಾಗುತ್ತಿತ್ತು,ಆದರೆ ನಮ್ಮ ಭದ್ರತಾ ಪಡೆಯ ಜವಾನರು ಯಾವ ಜನ ಸೇವಕರನ್ನ ಉಳಿಸಲು ತಮ್ಮ ಎದೆಯೊಡ್ಡಿ ನಿಂತರೋ ಅಂತ ಜವಾನರ ಬಲಿದಾನಕ್ಕೆ ಅವಮಾನ ಮಾಡುತ್ತಿರುವ ಈ ಜನಸೇವಕರನ್ನ ಏನು ಮಾಡೋಣ?

ಅಂದು ಮುಂಬೈ ದಾಳಿಯಾದಾಗ ಒಂದು ಸಂದೇಶ ಹರಿದಾಡಿತ್ತು ನೆನಪಿದೆಯಾ?

‘ಬೋಟಿನಲ್ಲಿ ಬಂದವರ ಬಿಡಿ,ವೋಟಿನಲ್ಲಿ ಬಂದವರ ನೋಡಿ’

ಮುಂಬೈ ಮಾರಣಹೋಮದ ನಂತರ ತೋರಿಸಿದ ಒಗ್ಗಟ್ಟನ್ನೇ ಈ ಪ್ರಕರಣದಲ್ಲೂ ಮುಸಲ್ಮಾನ ನಾಯಕರು ತೋರಿಸಬೇಕಿದೆ.ಯಾರು ಸಿಟ್ಟಿಗೇಳುತ್ತಾರೆ ಅನ್ನೋ ಭ್ರಮೆ ಸೃಷ್ಟಿಸಿಲಾಗುತ್ತಿದೆಯೋ ಆ ಸಮುದಾಯದ ಒಬ್ಬನೇ ನಾಯಕ ದೇಶ ದ್ರೋಹಿಗೆ ಶಿಕ್ಷೆಯಾದರೆ ನಮಗೆ ಸಂತೋಷ,ನಮ್ಮ ಹೆಸರಲ್ಲಿ ನೀವು ನಾಟಕ ಮಾಡುವುದನ್ನ ನಿಲ್ಲಿಸಿ ಅಂತ ಹೇಳುತ್ತಿಲ್ಲ ಅನ್ನುವುದೇ ನೋವಿನ ಸಂಗತಿ.

‘ಕಾನೂನು ಸುವ್ಯವಸ್ಥೆಯ ನೆಪ’ದಲ್ಲಿ ನಿಜವಾಗಿ ಈ ರಾಜಕಾರಣಿಗಳು,ಕೇಂದ್ರ ಸರಕಾರ ಮಾಡುತ್ತಿರುವುದು ‘ವೋಟ್ ಬ್ಯಾಂಕ್ ಜಪ’ ಅಷ್ಟೇ!

(ಚಿತ್ರ ಕೃಪೆ :vvietmysore.blogspot.com,sify.com)

9 ಟಿಪ್ಪಣಿಗಳು Post a comment
  1. ರವಿ ಕುಮಾರ್ ಜಿ ಬಿ's avatar
    ರವಿ ಕುಮಾರ್ ಜಿ ಬಿ
    ಫೆಬ್ರ 23 2011

    ಶೆಟ್ಟಿಯವರೇ, ಲೇಖನ ಓದಿ ಮನಸ್ಸು ಭಾರವಾಯಿತು.
    ನಮ್ಮ ನಾಯಕರೆನಿಸಿಕೊಂಡವರು ಕೇವಲ ಬೊಗಳೆ ಬಿಡೋದಕ್ಕೆ ಲಾಯಕ್ಕು ಅನಿಸಿತು. ಕಾನೂನು ತನ್ನದೇ ಕ್ರಮ ತೆಗೆದು ಕೊಳ್ಳುತ್ತದೆ, ತಪ್ಪಿತಸ್ತರಿಗೆ ಶಿಕ್ಷೆ ಆಗಿಯೇ ಆಗುತ್ತದೆ ಎನ್ನುತ್ತಾರೆ ,ಆದರೆ? ಕಸಬ್ ಆಗಲಿ, ಅಪ್ಜಲ್ ಆಗಲಿ ದೇಶ ದ್ರೋಹಿಗಳು ಅವರ ಸಮುದಾಯ ಅಥವಾ ಜಾತಿ ಮತ ನೋಡೋ ಅಗತ್ಯವಿಲ್ಲ ಅಲ್ಲವೇ? ಕೋರ್ಟ್(ಕೂಡ) ಯಾಕೆ ಮಾತಾಡುತ್ತಿಲ್ಲ? ಗೊತ್ತಿಲ್ಲ . ತಥಾಕಥಿತ ಸಂಘ ಸಂಸ್ಥೆ ಗಳಾಗಲಿ ಬುದ್ದಿಜೀವಿಗಳಾಗಲಿ, ಜಾತ್ಯಾತೀತ ವಾದಿಗಳಾಗಲಿ,…ಕೊನೆಪಕ್ಷ ನಮ್ಮ ದೇಶಪ್ರೇಮಿ ವಿರೋಧ ಪಕ್ಷದವರಾಗಲಿ ಈ ಬಗ್ಗೆ ಚಕಾರ ಎತ್ತ ದಿರುವುದು ಆಶ್ಚರ್ಯ !!!!

    ಇನ್ನು ನಮ್ಮ ನಿಮ್ಮಂತಹ ಜನಸಾಮಾನ್ಯರೋ ಮೈಮರೆತು ನಿದ್ರಿಸುತ್ತಿದ್ದೇವೆ !!!! ಜನರ ನೆನಪಿನ ಶಕ್ತಿ ಕ್ಷಣಿಕ ಅನ್ನೋದು ಎಲ್ಲರಿಗೂ ಗೊತ್ತು .. ಛೆ !!
    ಇನ್ನು ನಿನ್ನೆ ಗೋಧ್ರ ಹತ್ಯಾಕಾಂಡದ ಬಗ್ಗೆ ಕೋರ್ಟು ನೀಡಿದ ತೀರ್ಮಾನದ ಬಗ್ಗೆ ಟಿವಿ ಗಳಲ್ಲಿ (ndtv ,ibn ಇತ್ಯಾದಿ) ಚರ್ಚೆಯಾಗುತ್ತಿದ್ದದ್ದರನ್ನು ನೋಡಿದರೆ ಹೇಸಿಗೆ ಆಗುತ್ತಿತ್ತು. ಸತ್ತ 58 ಕರಸೇವಕರ ಜೀವಕ್ಕೆ ಬೆಲೆಯೇ ಇಲ್ಲ ಹಾಗೂ ಮತ್ತೆ ಕೊಮುದಲ್ಲುರಿಯಲ್ಲಿ ಸತ್ತ 1200 ಜನರ ಪ್ರಾಣ ಲೆಕ್ಕವೇ ಅಲ್ಲ ಇವರಿಗೆ…ಇವರ ಪ್ರಮುಖತೆ ನಿರ್ದೊಶಿಗಳಾಗಿ ಬಿಡುಗಡೆ ಯಾದ 63 ಜನರ ಬಗ್ಗೆ, ಖಂಡಿತ 63 ಜನರಬಗ್ಗೆ ಯೋಚಿಸಲಿ ಅಂತರಾಳದಿಂದ …ಆದರೆ ಖಂಡಿತ ಅವರು ಹೇಳುತ್ತಿದ್ದುದು ಅಂತರಾಳದಿಂದ ಅಂತೂ ಅಲ್ಲ, ಯಾಕೆಂದರೆ ಅದು ಬಿ ಜೆ ಪಿ ಯೋಡಗೂಡಿ ಇತರರನ್ನು ಕೆಣಕುವ ಮತ್ತು ತೀರ್ಪಿನ ಬಗ್ಗೆ ಜನರ ದಾರಿ ತಪ್ಪಿಸುವ ಕುತಂತ್ರದ ಒಂದು ಭಾಗವೇ ಹೊರತು ಬೇರೇನಲ್ಲ..

    ಖಂಡಿತಾ ಅವರು ಜನರ ದಾರಿ ತಪ್ಪಿಸಲೋಸುಗವೇ ಇಂತಹ ಕೆಲ್ಲಸ ಮಾಡಿದವು ಇನ್ನೂ ಕೂಡ ಮಾಡುತ್ತವೆ ………ಜನಪರ ಕಾಳಜಿ ಬೇಕಾಗಿಲ್ಲ!!!
    ಇಂಥಹವರಿಂದ ನಾವು ಕಸಬ್ ಮತ್ತು ಅಪ್ಜಲ್ ಗೆ ಗಲ್ಲಾಗುತ್ತದೆ ಎಂದು ಊಹಿಸುವುದು ಮತ್ತು ಆಶಿಸುವುದು ಸಾದ್ಯವೇ? ಜನ ದಂಗೆ ಎದ್ದು ದುಷ್ಟ ಸಂಹಾರ ಮಾಡಬೇಕಸ್ತೆ!!! ಬೇರೆ ದಾರಿ ಇಲ್ಲ ಅನಿಸುತ್ತಿದೆ ,ಅಲ್ಲವೇ?

    ಉತ್ತರ
    • ರಾಕೇಶ್ ಶೆಟ್ಟಿ's avatar
      ಫೆಬ್ರ 23 2011

      >> ಜನ ದಂಗೆ ಎದ್ದು ದುಷ್ಟ ಸಂಹಾರ ಮಾಡಬೇಕಸ್ತೆ!!! ಬೇರೆ ದಾರಿ ಇಲ್ಲ ಅನಿಸುತ್ತಿದೆ ,ಅಲ್ಲವೇ?
      ಭಾರತದ ಮಟ್ಟಿಗೆ ದಂಗೆ,ಕ್ರಾಂತಿ ಅನ್ನೋದೆಲ್ಲ ಸದ್ಯಕ್ಕೆ ಸಾಧ್ಯವೇ ಇಲ್ಲ… ಇದು ನಿತ್ರಾಣವಾಗಿರೋ ನೂರು ಕೋಟಿ ಜನರ ದೇಶ!

      ಉತ್ತರ
      • Indian's avatar
        ಫೆಬ್ರ 23 2011

        Afzal Guru arrest agiddu yara kaladalli.? NDA adikaravidda kala dalli allave.? Bariya congress ge yaake ketta hesaru.??

        ಉತ್ತರ
        • ರಾಕೇಶ್ ಶೆಟ್ಟಿ's avatar
          ಫೆಬ್ರ 23 2011

          ಇಂಡಿಯನ್,
          ನಿಜ ಬಂಧನವಾಗಿದ್ದು ಬಿ.ಜೆ.ಪಿಯ ಕಾಲದಲ್ಲೆ.ಶಿಕ್ಷೆ ಪ್ರಕಟವಾಗಿದ್ದು ಯಾರ ಕಾಲದಲ್ಲಿ?
          ಕಾಂಗ್ರೆಸ್ಸಿನ ಮೇಲೆ ನನಗೇನು ವಿಷೇಶವಾದ ಕೋಪವಿಲ್ಲ ಹಾಗೆ ಬಿಜೆಪಿಯ ಮೇಲೆ ಮಮಕಾರವೂ ಇಲ್ಲ.ಒಬ್ಬ ಭಾರತೀಯನಾಗಿ ನನಗನ್ನಿಸಿದ್ದನ್ನು ಹೇಳಿದ್ದೆನಷ್ಟೆ!

          ಉತ್ತರ
        • ರವಿ ಕುಮಾರ್ ಜಿ ಬಿ's avatar
          ರವಿ ಕುಮಾರ್ ಜಿ ಬಿ
          ಫೆಬ್ರ 24 2011

          ಇದನ್ನೇ ನಾವು ಹೇಳ್ತಿರೋದು ಸ್ವಾಮೀ ….ಎಲ್ಲದರಲ್ಲೂ ನಾವು ರಾಜಕೀಯ ತರುತ್ತೇವೆ ….ನಿಮ್ಮ ಅವಗಾಹನೆಗೆ ಅಪ್ಜಲ್ ದಾಳಿ ಮಾಡಿಸಿದ್ದು/ಮಾಡಿದ್ದು ಬಿ ಜೆ ಪಿ ಕಾರ್ಯಾಲಯಕ್ಕಲ್ಲ ಸ್ವಾಮೀ ಅವನು ದಾಳಿ ಮಾಡಿದ್ದು ಭಾರತದ ಸಂಸತ್ತಿನ ಮೇಲೆ ಅರಿತರೆ ಉತ್ತಮ !!!! ಹೀಗೆ ಆದರೆ ಮುಂದೆ ನಾವು ಪಾಕಿಸ್ತಾನ ದಾಳಿ ಮಾಡಿದಾಗಲೂ ಆ ಪಕ್ಷ ಈ ಪಕ್ಷ ಅಂತ ಕೂತರೂ ಆಶ್ಚರ್ಯವಿಲ್ಲ ಅನಿಸುತ್ತಿದೆ!!! ಏನಂತೀರಿ?

          ಉತ್ತರ
  2. bhadravathi's avatar
    bhadravathi
    ಫೆಬ್ರ 23 2011

    “ಆ ಸಮುದಾಯದ ಒಬ್ಬನೇ ನಾಯಕ ದೇಶ ದ್ರೋಹಿಗೆ ಶಿಕ್ಷೆಯಾದರೆ ನಮಗೆ ಸಂತೋಷ,ನಮ್ಮ ಹೆಸರಲ್ಲಿ ನೀವು ನಾಟಕ ಮಾಡುವುದನ್ನ ನಿಲ್ಲಿಸಿ ಅಂತ ಹೇಳುತ್ತಿಲ್ಲ ಅನ್ನುವುದೇ ನೋವಿನ ಸಂಗತಿ”.
    ರಾಕೇಶ್, ಮೇಲಿನ ಮಾತನ್ನು ಮುಸ್ಲಿಂ ನೇತಾರರು ಹೇಳುತ್ತಿದ್ದಾರೆ ಸ್ವಾಮೀ, ಆದರೆ ಪತ್ರಿಕೆಗಳು ಅವುಗಳನ್ನ ಪ್ರಕಟಿಸಲೊಲ್ಲವು.ಅವುಗಳಿಗೆ ಇಂಥ ವಿಷಯಗಳು uninteresting. ಭಯೋತ್ಪಾದನೆಯ ವಿರುದ್ಧ ೫೦೦೦ ಕ್ಕೂ ಹೆಚ್ಚು ಮೌಲ್ವಿಗಳು ಹೈದರಾಬಾದಿನ ಸಮ್ಮೇಳನವೊಂದರಲ್ಲಿ ಒಕ್ಕೊರಲಿನಿಂದ ಖಂಡಿಸಿದ್ದರು. ಓದಿದ ನೆನಪಿದೆಯೇ ತಮಗೆ? ಪ್ರಕಟವಾದರೆ ತಾನೇ ಓದೋದು? ಇನ್ನು ಮುಸ್ಲಿಂ ನಾಯಕರು ಮನೆ ಮನೆಗೆ ತೆರಳಿ ಹೇಳಬೇಕಷ್ಟೆ.

    ಉತ್ತರ
    • ರಾಕೇಶ್ ಶೆಟ್ಟಿ's avatar
      ಫೆಬ್ರ 23 2011

      ಅಬ್ದುಲ್,
      ಖಂಡಿತ ಎಲ್ಲೂ ಓದಿದ ನೆನಪಿಲ್ಲ ಆ ಬಗ್ಗೆ..! ಕೊಂಡಿಯೆನಾದರೂ ಇದ್ದರೆ ಕೊಡಿ.ಎಲ್ಲ ಮಾಧ್ಯಮಗಳಿಗೂ ಅದು uninteresting ಅನ್ನುವುದನ್ನ ಒಪ್ಪಬಹುದಾ?
      ನೀವೆಳಿದ್ದು ಭಯೋತ್ಪಾದನೆಯ ವಿರುದ್ಧ ನಾನು ಹೇಳಿದ್ದು ’ಅಫ಼್ಜಲ್ ಗುರು’ವನ್ನ ನೇಣು ಹಾಕುವ ವಿಷಯದ ಬಗ್ಗೆ… ಆತ್ಮವಾಲೋಕನ ಮಾಡಿಕೊಳ್ಳಬೇಕಾದ ಮನಸುಗಳು ಮಾಡಿಕೊಳ್ಳಲಿ ಅನ್ನುವ ಆಶಯ.

      ಉತ್ತರ
  3. bhaskara's avatar
    bhaskara
    ಫೆಬ್ರ 24 2011

    ರಾಕೇಶ್,
    ನಿನ್ನೆ ಪತ್ರಿಕೆಯಲ್ಲಿ ಗೃಹ ಮಂತ್ರಿಗಳ ಹೇಳಿಕೆ ಕೆಳಿದ್ದಿರ? ಆಗ ೧೪ ಇತ್ತಂತೆ, ಅದಕ್ಕೆ ಇನ್ನು ೧೪ ಸೇರಿ, !! ಒಬ್ಬ ಜವಾಬ್ದಾರಿಯುತವಾದ ಮಂತ್ರಿಯಿಂದ ಬರುವ ಹೇಳಿಕೆಗಳೆ ಹೀಗಿರುವಾಗ, ಇನ್ನು, ಎಲ್ಲೋ ಯಾರೋ ಹೇಳಿದ (?) ಅದು ಪತ್ರಿಕೆಯಲ್ಲಿ ಬಂದಿಲ್ಲ ಅದು ಅವರ ತಪಲ್ಲ ಅಂದರೆ ಅದು ಬರೆದವರ ತಪಲ್ಲ ಬಿಡೀ 🙂
    ಈಗ ಕಸಬ್ ಕೂಡ ಇವನ ಸಾಲಿಗೆ ಸೇರಿ ಕೊಳ್ಳುತ್ತಾನೆ!! ನಾವು ಕಟ್ಟುವ ತೆರಿಗೆ ಹಣ , ಇಂತವರ ರಕ್ಷಣೆಗೆ, ಕೆಲವರ ಪ್ರವಾಸಗಳಿಗೆ ಉಡಾಯಿಸುತ್ತಿದೆ ಘನ ಸರ್ಕಾರ..

    ಉತ್ತರ
  4. ರಾಕೇಶ್, ನಿಜಕ್ಕೂ ಸ೦ದರ್ಭೋಚಿತವಾಗಿದೆ ನಿಮ್ಮ ಲೇಖನ, ಆ ಇ೦ದಿರಮ್ಮನೇನಾದರೂ ಇ೦ದು ಅಧಿಕಾರದಲ್ಲಿದ್ದಿದ್ದರೆ ಖ೦ಡಿತ ಕಸಬ್ ಎ೦ದೋ ಗಲ್ಲಿಗೇರಿರುತ್ತಿದ್ದ ಅನ್ನಿಸುತ್ತದೆ. ನಿರ್ವೀರ್ಯವಾಗಿರುವ ಇ೦ದಿನ ಕೇ೦ದ್ರ ಸರ್ಕಾರ ಇಲ್ಲಿಯೂ ವೋಟ್ ಬ್ಯಾ೦ಕ್ ರಾಜಕೀಯ ಮಾಡುತ್ತಿದೆ. ಜನ ಕಾ೦ಗ್ರೆಸ್ ಪಕ್ಷಕ್ಕೆ ತಕ್ಕ ಪಾಠ ಕಲಿಸಬೇಕು. ಮು೦ದೆ ಬರಲಿರುವ ಚುನಾವಣೆಯಲ್ಲಿ ಹೀನಾಯವಾಗಿ ಸೋಲಿಸಬೇಕು.

    ಉತ್ತರ

ನಿಮ್ಮ ಅನಿಸಿಕೆ...

Note: HTML is allowed. Your email address will never be published.

Subscribe to comments