ವಿಷಯದ ವಿವರಗಳಿಗೆ ದಾಟಿರಿ

Archive for

25
ಫೆಬ್ರ

ಜೋತಿಷ್ಯ ಎಂಬ ಹಗಲು ದರೋಡೆ!

– ಸುಪ್ರೀತ್ ಕೆ.ಎಸ್

ಒಂದಕ್ಕೆ ಎರಡು ಪಟ್ಟು ಹಣ ಕೊಡುತ್ತೇವೆ ಎಂದು ನಂಬಿಸಿ ಹಣ ಪಡೆದು ಮೋಸ ಮಾಡಿ ಓಡಿ ಹೋಗುವ ವಂಚಕರನೇಕರ ಬಗೆಗೆ ಜನರು ಮಾಧ್ಯಮಗಳಲ್ಲಿ ದಿನವೂ ನೋಡುತ್ತಾರೆ. ಕಣ್ಣೆದುರೇ ಹಣ ಕಳೆದುಕೊಂಡು ಬೆಪ್ಪರಾಗಿ, ಅಸಹಾಯಕರಾಗಿ ನಿಂತ ಗ್ರಾಹಕರನ್ನೂ ಕಂಡಿರುತ್ತಾರೆ. ಹಣ ದ್ವಿಗುಣ, ಲಾಟರಿಯಂತಹ ಪ್ರಲೋಭನೆಗಳಿಗೆ ಒಳಗಾಗದೆ, ವಂಚನೆಯಿಂದ ದೂರ ಉಳಿದವರು ಕೆಲವು ರೀತಿಯ ಪ್ರಶ್ನೆಗಳನ್ನು ತಮ್ಮಲ್ಲೇ ಕೇಳಿಕೊಂಡಿರುತ್ತಾರೆ. ಅವೆಂದರೆ: ನ್ಯಾಯಯುತವಾಗಿ ಈ ಮನುಷ್ಯ ಅತೀ ಕಡಿಮೆ ಸಮಯದಲ್ಲಿ ಹಣವನ್ನು ದ್ವಿಗುಣಗೊಳಿಸುವುದಕ್ಕೆ ಹೇಗೆ ಸಾಧ್ಯ? ಹಾಗೆ ಹಣ ದ್ವಿಗುಣಗೊಳಿಸುವ ಯಾವ ವ್ಯಾಪಾರ, ತಂತ್ರಗಾರಿಕೆ ಈತನಿಗೆ ಗೊತ್ತು? ನಮಗೆ ಎರಡು ಪಟ್ಟು ಹಣ ಹಿಂದಿರುಗಿಸುವುದಕ್ಕೆ ಈತನಿಗೆ ಅಥವಾ ಈತನ ಸಂಸ್ಥೆಗೆ ಎಲ್ಲಿಂದ ಸಂಪತ್ತಿನ ಮೂಲವಿದೆ? ನಾನು ಬೆವರು ಸುರಿಸಿ ದುಡಿಯದೆ, ನನ್ನ ಪರಿಶ್ರಮ ಇಲ್ಲದೆ, ನನ್ನ ಪ್ರತಿಭೆಯ ವಿನಿಯೋಗವಿಲ್ಲದೆ ಸುಲಭವಾಗಿ ಹಣವನ್ನು ಪಡೆಯುವುದು ನೈತಿಕವಾಗಿ ನನಗೆ ಸಮ್ಮತವೇ? ಪ್ರತಿಯೊಬ್ಬರೂ ಹೀಗೇ ಹಣ ಮಾಡುವ ವಿಧಾನ ಕಂಡುಕೊಂಡರೆ ನಿಜವಾದ ಪರಿಶ್ರಮ, ಪ್ರತಿಭೆ, ಬದ್ಧತೆ, ತಾಂತ್ರಿಕ ಕೌಶಲ್ಯ ಬೇಡುವ ಕೆಲಸಗಳನ್ನು ಮಾಡುವವರು ಯಾರು?

ಇಂತಹ ಪ್ರಶ್ನೆಗಳನ್ನು ಕೇಳಿಕೊಳ್ಳುವ ಮನುಷ್ಯನಿಗೆ ಸಹಜವಾಗಿ ತನ್ನ ಮೇಲೆ ಆತ್ಮವಿಶ್ವಾಸವಿರುತ್ತದೆ. ತನ್ನ ದುಡಿಮೆಯ ಮೇಲೆ ನಂಬಿಕೆಯಿರುತ್ತದೆ. ನೈತಿಕವಾಗಿ ಈತ ಸದೃಢನಾಗಿರುತ್ತಾನೆ. ಯಾವನಾದರೂ ವಂಚಕ, “ಈ ನಮ್ಮ ಯೋಜನೆಯಲ್ಲಿ ಹಣ ತೊಡಗಿಸಿ ನಿಮಗೆ ಒಂದೇ ತಿಂಗಳಲ್ಲಿ ಹಣ ದ್ವಿಗುಣಗೊಳಿಸಿ ಕೊಡುತ್ತೇವೆ.”, “ನಿಮ್ಮ ಹಣವನ್ನು ನಾವು ಟೀಕ್ ಮರ ಮೊದಲಾದ ಬೆಲೆಬಾಳುವ ಸಂಪತ್ತಿನಲ್ಲಿ ಹೂಡುತ್ತೇವೆ, ಐದು ವರ್ಷದಲ್ಲಿ ಕೋಟ್ಯಾಧಿಪತಿಯಾಗುವಿರಿ” ಎಂಬ ಪ್ರಲೋಭನೆಗಳನ್ನು ಒಡ್ಡಿದರೆ, ಆತನಿಗೆ ಎಂಥದ್ದೇ ಆರ್ಥಿಕ ಮುಗ್ಗಟ್ಟಿದ್ದರೂ, ಸ್ಪಷ್ಟವಾದ ಪ್ರಶ್ನೆಗಳು ಹಾಗೂ ಸಂಶಯಿಸಿ ಪರೀಕ್ಷಿಸುವ ಬುದ್ಧಿಯಿರುವ ಆತ ಮೋಸ ಹೋಗುವುದಿಲ್ಲ. ಇಂತಹ ವಂಚಕರಿಂದ ಪ್ರಾರಂಭದ ಮಟ್ಟಿಗೆ ಒಂದಷ್ಟು ಮಂದಿ ನಿಜವಾಗಿ ಹಣ ದ್ವಿಗುಣಗೊಳಿಸಿಕೊಂಡರೂ, ಹಡಗು ಸುಭದ್ರವಾಗಿ ತೇಲುತ್ತಿರುವಂತೆ ಕಂಡರೂ ಆತ ಸಂಯಮದಿಂದ ತನ್ನನ್ನು ತಾನು ನಿಯಂತ್ರಿಸಿಕೊಳ್ಳುತ್ತಾನೆ. ಇವೆಲ್ಲ ಹುಲಿಯನ್ನು ಬೇಟೆಯಾಡಲಿಕ್ಕೆ ಬೇಟೆಗಾರ ಒಡ್ಡುವ ಕುರಿ, ಮೇಕೆ, ಆಕಳು ಮೊದಲಾದ ಪ್ರಲೋಭನೆಗಳಿದ್ದ ಹಾಗೆ ಎಂಬುದು ಆತನಿಗೆ ಸ್ಪಷ್ಟವಾಗುತ್ತದೆ. ತನ್ನಲ್ಲಿರುವ ಹಣದಲ್ಲಿ ಇಂತಹ ವಂಚಕ ಏಜೆನ್ಸಿಗಳಲ್ಲಿ ಇನ್ವೆಸ್ಟ್ ಮಾಡುವುದಕ್ಕೆ ಹೊರೆ ಆಗಲಾರದು ಅನ್ನಿಸಿದರೂ, ಹೋದರೆ ಹೋದರೆ ಅಡಿಕೆ, ಬಂದರೆ ಆನೆ ಎಂಬಂತೆ ಕಣ್ಣು ಮುಚ್ಚಿ ಆತ ಮೋಸ ಹೋಗುವುದಕ್ಕೆ ಸಿದ್ಧನಾಗುವುದಿಲ್ಲ. ಮತ್ತಷ್ಟು ಓದು »

25
ಫೆಬ್ರ

ಉತ್ಸಾಹದ ಚಿಲುಮೆಗಳ ನಡುವೆ ಕ್ಯಾಂಪಸ್ ಕಪ್‌ಗಾಗಿ ಕಾದಾಟ

ಪವನ್ ಎಂ ಟಿ

ವಿಶ್ವದೆಲ್ಲೆಡೆ ವಿಶ್ವಕಪ್ ಜ್ವರದಲ್ಲಿದ್ದರೆ, ವಿಶ್ವವಿದ್ಯಾನಿಲಯದ ಕ್ಯಾಂಪಸ್‌ನಲ್ಲೂ ಕ್ರೀಡಾ ಜ್ವರ ಏರತೊಡಗಿದೆ. ಕಳೆದ ಆರು ದಿನಗಳಿಂದ ಮಂಗಳೂರು ವಿವಿಯ ಮಂಗಳಗಂಗೋತ್ರಿ ಕ್ಯಾಂಪಸ್‌ನಲ್ಲಿ ಅಂತರ್‌ವಿಭಾಗ ಮಟ್ಟದ ಈ ಕ್ರೀಡಾ ಕೂಟದಲ್ಲಿ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಆರದ ಉತ್ಸಾಹ. ಇಲ್ಲಿ ಒಂದಲ್ಲ ಎರಡಲ್ಲ ಹತ್ತು ಹನ್ನೆರಡಕ್ಕಿಂತ ಹೆಚ್ಚು ಆಟಗಳನ್ನು ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿಯರಿಗೆ ಪ್ರತ್ಯೇಕವಾಗಿ ಆಯೋಜಿಸಲಾಗಿದೆ. ಕೆಲವು ಸಲ ಆಟಗಾರರ ಸಂಖ್ಯೆ ಕಡಿಮೆ ಇದ್ದಲ್ಲಿ ಹುಡುಗರು, ಹುಡುಗಿಯರು ಒಟ್ಟಿಗೆ ಒಂದು ತಂಡವಾಗಿ ಆಡುವುದುಂಟು. ವಿಶೇಷವೆಂದರೆ ನಮ್ಮ ಕ್ಯಾಂಪಸ್ ನಲ್ಲಿ ವಿದ್ಯಾರ್ಥಿನಿಯರೇ ಜಾಸ್ತಿ. ಸುಮಾರು ಒಂದು ತಿಂಗಳ ಕಾಲ ನಡೆಯುವ ಈ ಕ್ರೀಡಾಕೂಟ ಈಗಾಗಲೇ ಒಂದು ಸುತ್ತಿನ ಪಂದ್ಯಾಟಗಳು ಮುಗಿದಿವೆ. ಸೋತ ತಂಡಗಳು ತಮ್ಮ ದಿನನಿತ್ಯದ ಓದಿನ ಬಗ್ಗೆ ಗಮನವನ್ನರಿಸಿದರೆ, ಗೆದ್ದ ತಂಡಗಳು ಎರಡನೇ ಸುತ್ತಿನ ಸ್ಪರ್ಧೆಗೆ ಸಿದ್ಧತೆಯನ್ನು ನಡೆಸಿದೆ.

ಈ ಕ್ರೀಡಾಕೂಟದಲ್ಲಿ ಸ್ನಾತಕೋತ್ತರ ವಿದ್ಯಾರ್ಥಿಗಳಲ್ಲದೆ ಸಂಶೋಧನಾ ವಿದ್ಯಾರ್ಥಿಗಳೂ ಒಂದಾಗಿ ತಮ್ಮದೇ ಆದ ತಂಡವನ್ನು ಕಟ್ಟಿಕೊಂಡು ಈ ಕ್ರೀಡಾಕೂಟದಲ್ಲಿ ಭಾಗಿಯಾಗಿರೋದು ಒಂದು ವಿಶೇಷ. ಇಲ್ಲಿಯ ಕೆಲವು ವಿಭಾಗದ ವಿದ್ಯಾರ್ಥಿಗಳಿಗೆ ಈ ಗೇಮ್ಸ್‌ನ ಬಗ್ಗೆ ಇರೋ ಪ್ರೀತಿ ನೋಡಿದ್ರೇ ತುಂಬಾ ಸಂತೋಷವಾಗುತ್ತೆ. ಯಾಕಂದ್ರೇ ಇವರು ತಮ್ಮ ತಮ್ಮ ಕೈಯಿಂದಲೇ ಹಣವನ್ನು ಹಾಕೊಂಡು ಬಣ್ಣ ಬಣ್ಣದ ಕಲರ್ಸ್‌ನ್ನು ತರಿಸಿಕೊಂಡು, ಆಯಾ ದಿನದ ಗೇಮ್ಸಗೆ ಎಲ್ಲಾ ಸಿದ್ಧತೆಗಳನ್ನು ಮಾಡಿಕೊಂಡು ಸಮಯಕ್ಕೆ ಮುಂಚೆಯೇ ಮೈದಾನದಲ್ಲಿ ಹಾಜರ್. ಈ ವಾತಾವರಣವನ್ನು, ಆಟವನ್ನು ನೋಡೋದಕ್ಕೆ ನೀವು ಈ ತಿಂಗಳಿನಲ್ಲಿ ಒಮ್ಮೆ ಮಂಗಳಗಂಗೋತ್ರಿಯ ಆಟದ ಮೈದಾನಕ್ಕೆ ಬನ್ನಿ. ಮತ್ತಷ್ಟು ಓದು »

25
ಫೆಬ್ರ

ಅಭಿಮಾನಿಯ ಹರಕೆ ಫಲಿಸಿದಾಗ !

ರಶ್ಮಿ ಕಾಸರಗೋಡು

 

ಸಚಿನ್ ತೆಂಡೂಲ್ಕರ್ ಅಬ್ಬರದ ಆಟ ಮತ್ತು ದಾಖಲೆಗಳ ಬಗ್ಗೆ ಪತ್ರಿಕೆಗಳಲ್ಲಿ, ಬ್ಲಾಗ್್ಗಳಲ್ಲಿ ಸಾಕಷ್ಟುಜನ ಈಗಾಗಲೇ ಬರೆದಿದ್ದಾರೆ. ಆದರೆ ಸಚಿನ್ ಬಗ್ಗೆ ಪ್ರತಿಯೊಬ್ಬರಿಗೂ ಹೇಳಲು ಒಂದೊಂದು ವಿಷಯ ಇದ್ದೇ ಇರುತ್ತದೆ. ಇಂದು ಮುಂಜಾನೆ ರಾತ್ರಿ ಪಾಳಿ ಮುಗಿಸಿ ಆಫೀಸಿನಿಂದ ಹೊರಡಬೇಕು ಅನ್ನುವಷ್ಟು ಹೊತ್ತಿಗೆ ಅಂದ್ರೆ 3.30ಕ್ಕೆ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆಯ 15ನೇ ಪುಟದಲ್ಲಿ 20 years ago…ಅಂತಾ ಒಂದು ಸುದ್ದಿ ಓದಿದೆ. ಅದೂ 20 ವರ್ಷಗಳ ಹಿಂದೆ ಸಚಿನ್ ಬರೆದ ಒಂದು ಪತ್ರದ ಸುದ್ದಿ. ಆಗಲೇ ನನಗೆ ಸಚಿನ್ ಬರೆದ ಪತ್ರದ ಬಗ್ಗೆ ಬರೆಯೋಣ ಅಂತಾ ಅನಿಸಿದ್ದು. ಸಚಿನ್ ತೆಂಡೂಲ್ಕರ್್ನ್ನು ಈವರೆಗೆ ಟಿವಿಯಲ್ಲಿಯೇ ನೋಡಿದ್ದು. ಕಾಲೇಜು ಮುಗಿಸಿ ಕೆಲಸಕ್ಕೆ ಸೇರುವ ವರೆಗೂ ಸಚಿನ್ ಆಟಗಳನ್ನು ತಪ್ಪದೆ ನೋಡುತ್ತಿದ್ದೆ. ಕೆಲಸಕ್ಕೆ ಸೇರಿದ ಮೇಲೆ ಮ್ಯಾಚ್ ನೋಡೋಕೆ ಸಮಯ ಸಿಕ್ತಾ ಇಲ್ಲ. ಬರೀ ಸುದ್ದಿ ಮಾಡುವುದೇ ಆಯ್ತು.

ಮತ್ತಷ್ಟು ಓದು »