ನಾವು ಸ್ವತಂತ್ರರೇ..?
ಮಮತ ಕಂಡ್ಲೂರು
ಅಂದು ಸಿಕ್ಕಿತ್ತು ಮುಕ್ತಿ
ಕಳಚಿತ್ತು ಆ ಪರರ ಕಪಿಮುಷ್ಟಿ
ಅಂತೂ ಇಂತೂ ಸ್ವಾತಂತ್ರ್ಯ ಬಂತೆಂದರು ಹಿರಿಯರು
ತನ್ನ ಕರುಳಕುಡಿಗಳಿವರೆಲ್ಲ ಒಂದೆಂಬ ಭಾವದಿ
ಇಹರೆಂದು ‘ಭರತಮಾತೆ’ಯ ಎದೆಯು ಮಿಡಿದಿತ್ತು.
ಆಹಾ, ಎಂಥಾ ಪರಮಾನಂದವಾಗುತ್ತಿದೆ.
ನಮ್ಮದೇ ನೆಲ,ಜಲ,ಗಾಳಿ ಕೊನೆಗೆ ನಮ್ಮದೇ ‘ಸರಕಾರ’.
ನೆಮ್ಮದಿಯ ಉಸಿರು ಬಿಡುತ್ತಿದ್ದಂತೆ,
ಆರಂಭವಾಯ್ತು ಪ್ರಗತಿಯ ಅರಸುವಿಕೆ!
ಜನ್ಮತಾಳಿದುವು ಕಟ್ಟಡಗಳು ಗೆದ್ದಲಗೂಡಿನ ತೆರದಿ.
ಬಲಿಯಾಗಿ ಪಕ್ಷಪಕ್ಷಗಳ ಸ್ವಾರ್ಥರಾಜಕೀಯಕ್ಕೆ
ಅನಾಥಭಾವದಿ ನರಳುವಂತಾಯ್ತು ಬಡಜನತೆ.
ಬೆಳೆದವು ಸರಕಾರದ ಯೋಜನೆಗಳು ಹನುಮಂತನ ಬಾಲದಂತೆ…… ಮತ್ತಷ್ಟು ಓದು 
ಆಧುನಿಕ ವಿಕ್ರಮನೂ ಬೇತಾಳನೂ
ಸಾತ್ವಿಕ್ ಎನ್. ವಿ
ಹೆಗಲಲ್ಲಿದ್ದ ಬೇತಾಳವು ಹಾರಿ ಮರ ಸೇರಿದಾಗ ವಿಕ್ರಮನು ಪರೀಕ್ಷೆ ಸಮಯಕ್ಕೆ ನೋಟ್ಸ್ ನ ಝೆರಾಕ್ಸ್ ಗಾಗಿ ಪರದಾಡುವ ವಿದ್ಯಾರ್ಥಿಗಳಂತೆ ಮತ್ತೆ ಬೇತಾಳವನ್ನು ಹಿಡಿದು ತರಲು ಹೊರಟನು. ನಿಲುಮೆವನ್ನು ಒಮ್ಮೆ ಓದಿದ ವ್ಯಕ್ತಿಯು ಮತ್ತೆ ಮತ್ತೆ ನಿಲುಮೆವನ್ನು ಓದಲು ಹವಣಿಸುವಂತೆ ವಿಕ್ರಮನ ಈ ಕಾರ್ಯವು ಬೇತಾಳನಿಗೆ ಸೋಜಿಗವನ್ನುಂಟು ಮಾಡಿತು. ಹಿಡಿದ ಕೆಲಸ ಮಾಡೇ ತೀರುವ ವ್ಯಕ್ತಿಯನ್ನು ನೋಡಿ ಬೇತಾಳವು ರಾಜನಿಗೆ ‘ಅಯ್ಯ ವಿಕ್ರಮ ರಾಜ ನೀನು ಸಾಹಸಿಯೆಂದು ನಾನು ಬಲ್ಲೆ. ಆದರೆ ನಾನು ಮಾತಾಡದಿದ್ದರೆ ಆಗಾಗ ಗುಟ್ಕಾ ಅಗಿಯುವವರಂತೆ ನನ್ನ ಬಾಯಿಯು ನವನವ ಎನ್ನುತ್ತದೆ. ಆದುದರಿಂದ ನನ್ನಷ್ಟಕ್ಕೆ ನಾನು ಕಥೆ ಹೇಳುತ್ತಾ ಹೋಗುತ್ತೇನೆ. ಬೇಕಿದ್ದರೆ ಕೇಳು, ಇಲ್ಲದಿದ್ದರೆ ಎಂಜಿನಿಯರಿಂಗ್ ವಿದ್ಯಾರ್ಥಿಗಳಿಗಿರುವ ಕನ್ನಡ ಪಠ್ಯದಂತೆ ಬಿಟ್ಟುಬಿಡು. ನಾನು ಆ ಕನ್ನಡ ಉಪನ್ಯಾಸಕನಂತೆ ನನ್ನ ಕೆಲಸ ಮಾಡುತ್ತೇನೆ’ ಎಂದು ಹೇಳಿ ಅವನ ಒಪ್ಪಿಗೆಯನ್ನು ಕೇಳದೇ ತನ್ನ ಪಾಡಿಗೆ ತಾನು ಕಥೆ ಹೇಳಲು ಪ್ರಾರಂಭಿಸಿತು.
ಕಂಡೆಯಾ ಎಂಬ ದೇಶದಲ್ಲಿ ಅಲ್ಲಿನ ರಾಣಿಯು ತನ್ನ ಮಂತ್ರಿಯೊಡಗೂಡಿ ರಾಜ್ಯವಾಳುತ್ತಿದ್ದಳು. ಅಲ್ಲಿನ ರಾಜನ ಬಗೆಗಿನ ಅನುಕಂಪೆ ಮತ್ತು ತನ್ನ ದೇಶಕ್ಕೆ ಸೊಸೆಯಾಗಿ ಬಂದ ವ್ಯಕ್ತಿಯ ಕುರಿತು ಪ್ರೀತಿ ವಿಶ್ವಾಸಗಳಿದ್ದವು. ಆದರೆ ಕೆಲವು ಪ್ರಜೆಗಳಿಗೆ ಆಕೆಯು ತಮ್ಮ ರಾಜ್ಯವಾಳುವುದು ಇಷ್ಟವಿರಲಿಲ್ಲ. ಇಂಥ ರಾಣಿಗೆ ರೇಣುಕಾಂಬೆ ಎಂಬ ಸ್ನೇಹಿತೆಯಿದ್ದಳು. ರಾಣಿಯ ಅತ್ಮೀಯಳಾದ ಕಾರಣ ಅರಮನೆಯ ರಾಜಕೀಯದಲ್ಲಿ ರೇಣುಕಾಂಬೆಯ ಮಾತಿಗೆ ಬೆಲೆಯಿತ್ತು.
ಹೀಗೆ ಕಾಲ ಕಳೆಯುತ್ತಿರುವಾಗ ರೇಣುಕಾಂಬೆಗೆ ಅನ್ಯದೇಶದಲ್ಲಿರುವ ಪ್ರಗತಿಯುಳ್ಳ ಸ್ತ್ರೀಯರನ್ನು ನೋಡಿ ತನ್ನ ದೇಶದಲ್ಲಿಯು ಇಂಥ ವ್ಯವಸ್ಥೆ ಜಾರಿಗೆ ತಂದರೆ ಹೇಗೆ ಎಂಬ ಯೋಚನೆ ಬಂದದ್ದೇ ತಡ ಈ ಕಾರ್ಯಕ್ರಮದ ಮೊದಲ ಭಾಗವಾಗಿ ಯಾವ ಯೋಜನೆಯನ್ನು ತರವುದು ಎಂದು ಬಾಲ ಸುಟ್ಟ ಬೆಕ್ಕಿನ ಹಾಗೇ ಅತ್ತಂದಿತ್ತ ತಿರುಗಹತ್ತಿದಳು. ಹಿಂದೆ ತನ್ನ ಪಕ್ಕದ ಮನೆಯ ಹೆಂಗಸು ಬಟ್ಟಿ ಸೇಂದಿ ಕುಡಿದು ತನ್ನ ನಿರ್ಲಜ್ಜ ಮತ್ತು ಅವಿವೇಕಿ ಗಂಡನಿಗೆ ತದುಕುತ್ತಿದ್ದುದು ನೆನಪು ಬಂತು. ಹೆಣ್ಣಿಗೆ ಧೈರ್ಯ ಕೊಡುವ ಮದ್ದು ಇದುವೇ ಎಂದು ಬಗೆದಳು. ‘ಒಳಗೆ ಸೇರಿದರೆ ಗುಂಡು ಹುಡುಗಿ ಆಗುವಳು ಗಂಡು’ ಎಂಬುದು ಆ ಯೋಜನೆಯ ಧ್ಯೇಯ ವಾಕ್ಯವಾಗಿತ್ತು. ಯೋಜನೆ ಬಂದದ್ದೇ ವೇಗದಲ್ಲಿ ಅದಕ್ಕೆ ವಿರೋಧವು ಕಂಡು ಬಂತು. ಕಂಡಿಯಾ ದೇಶದಲ್ಲಿ ಏನೇ ಬಂದರೂ ಅದಕ್ಕೆ ವಿರೋಧ ಮಾಮೂಲಾದರೂ ಈ ಪ್ರತಿಭಟನೆಯು ಮಾಮೂಲಾಗಿರಲ್ಲಿಲ್ಲ. ಈ ಪ್ರತಿಭಟನೆಯು ನಾಯಕತ್ವವನ್ನು ಆಮೋದ ಮುತ್ತಪ್ಪನೆಂಬ ಅವಿವಾಹಿತನು ವಹಿಸಿದ್ದನು. ತದುಕುವುದೇ ತನ್ನ ಸಂಸಾರ ಮತ್ತು ದೇಶಕ್ಕೆ ಮಾಡುವ ಉಪಕಾರವೆಂದು ಭಾವಿಸಿದ್ದನು. ಮತ್ತಷ್ಟು ಓದು 




