ವಿಷಯದ ವಿವರಗಳಿಗೆ ದಾಟಿರಿ

Archive for

11
ಆಕ್ಟೋ

ವಾಕ್ಪಥ ಹಾಗು ಪುಳಿಯೋಗರೆ ಪಾಯಿಂಟ್

    ೨೨ ಸೆಪ್ಟೆಂಬರ್, ೨೦೧೧ ನನ್ನ ಸ್ನೇಹಿತನಿಂದ ಒಂದು ವಾಣಿಜ್ಯ-ಸಮಾಲೋಚನೆಗಾಗಿ ಕರೆಬಂದಾಗ, ಅದು ೨೪ರ ಸೆಪ್ಟೆಂಬರ‍್ಗೆ ನಿಗದಿಯಾಯಿತು. ೨೫ನೇ ಭಾನುವಾರವಾಕ್ಪಥ ಚುಂಚನಗಿರಿಯಲ್ಲಿ ನಡೆಯಲಿರೋ ಕಾರ್ಯಕ್ರಮಕ್ಕೆ ಇನ್ನೊಬ್ಬ ಸ್ನೇಹಿತನಿಂದ ಬಂದ ಕರೆಗೆ ತುಂಬು ಆಸಕ್ತಿಯಿಂದಲೇ ಒಪ್ಪಿಗೆ ಇತ್ತಾಗಿತ್ತು. ೨೪ರ ಬೆಳಿಗ್ಗೆ ನಾ ಬೆಂಗಳೂರಿಗೆ ಬಂದಿಳಿದು, ಮಧ್ಯಾಹ್ನದ ಸಮಾಲೋಚನೆಯ ತಯ್ಯಾರಿಯಲ್ಲಿದ್ದಾಗ, ತಲೆ ಇನ್ನೇನೋ ಯೋಚಿಸಲಾರಂಭಿಸಿತ್ತು. ಮನಸ್ಸು ಹೊಯ್ದಾಡುತ್ತಾ, ಗೊಣಗುತಿತ್ತು.. ಸದ್ಯದಲ್ಲೆಲ್ಲೋ, ವಾಕ್ಪಥ ಕಾರ್ಯಕ್ರಮ ಇದೆ, ಎಂಬುದಾಗಿ. ಮನಸ್ಸಿನೊತ್ತಡ ತಡೆಯಲಾರದೇ, ಫೇಸ್‌ಬುಕ್‌ನ “ಇವೆಂಟ್ಸ್” ತೆರೆದು ನೋಡಿದಾಗ, ಆಶ್ಚರ್ಯ, ಆಘಾತ, ಸಂತೋಷ, ಎಲ್ಲಾ ಒಟ್ಟೊಟ್ಟಿಗೆ..! ನನ್ನ ಮನಸ್ಸಿನ ಹೊಳಹಿನಂತೆ ನಂತರದ ದಿನವೇ (೨೫/೦೯/೨೦೧೧) ವಾಕ್ಪಥದ “ಏಳನೇ ಹೆಜ್ಜೆ”. ಈ ವಿಚಾರ ಆಶ್ಚರ್ಯಕ್ಕೆ ಕಾರಣವಾಗಿತ್ತು. ಯಾವಾಗಲೂ ಕಾಯುತ್ತಿದ್ದ ಈ ವಿಶೇಷ ಕಾರ್ಯಕ್ರಮ ಅಚಾನಕ್ಕಾಗಿ ನನ್ನ ಮುಂದೆ ತೆರೆದುಕೊಂಡಿದ್ದು, ನಿಜಕ್ಕೂ ನನಗೆ ಸಂತೋಷದೊಂದಿಗೆ ಅಚ್ಚರಿಗೊಳಿಸಿತ್ತು. ಆದರೆ ನನ್ನ ಸ್ನೇಹಿತನಿಗೆ ಚುಂಚನಗಿರಿಯ ಕಾರ್ಯಕ್ರಮಕ್ಕೆ ಬರುವೆ ಅಂದದ್ದು, ವಾಕ್ಪಥದಲ್ಲಿ ಭಾಗವಹಿಸಲು ಅಡ್ಡಿಮಾಡುತ್ತಲ್ಲಾ ಎಂಬ ಆಘಾತಕ್ಕೆ ಕಾರಣವಾಯಿತು.

ಮತ್ತಷ್ಟು ಓದು »