ವಿಷಯದ ವಿವರಗಳಿಗೆ ದಾಟಿರಿ

Archive for

13
ಆಕ್ಟೋ

ಆಜಬ್ಬ

 – ಅಬ್ದುಲ್ ಸತ್ತಾರ್ ಕೊಡಗು

ಅದು ರಸ್ತೆ ಬದಿ. ಹೇಳ್ಕೊಳ್ಳೋಕೆ ಜಿಲ್ಲಾ ಹೆದ್ದಾರಿ ಆಗಿದ್ರೂ ಯಾರು ಈ ಸ್ಥಾನ ಕೊಟ್ರೋ ಗೊತ್ತಿಲ್ಲ. ದಿನಕ್ಕೆ ಮೂವತ್ತು ಗಾಡಿ ಓಡಾಡೋದೇ ಹೆಚ್ಚು. ಬರೀ ಗುಂಡಿಗಳಲ್ದೆ ರಸ್ತೆ ಏನೂ ಕಾನ್ತಿರ್ಲಿಲ್ಲ. ಒಂದು ಮಳೆಗಾಲಕ್ಕೆ ರಸ್ತೆ ಬದೀಲಿದ್ದ ಮರಗಳೆಲ್ಲಾ ಕೆಯೀಬಿಯೋರ ಇದ್ದ ಬದ್ದ ಕರೆಂಟು ಕಂಬದ ಮೇಲೆ ಬಿದ್ದಿದ್ದ್ರಿಂದ ಅವ್ರು ಆ ಮರಕ್ಕೆಲ್ಲಾ  ಮೋಕ್ಷಾ ಕೊಟ್ಟಿದ್ರು. ವರ್ಷದ ಹಿಂದೆ ಕಡ್ದು ಹಾಕಿದ್ದ ಆ ಮರಗಳ ಬುಡ ಹಾಗೆ ಇದ್ದು ಈಗ ಸಂಪೂರ್ಣ ಒಣಗಿ ಹೋಗಿತ್ತು. ಮಾಗೊಡಪ್ಪನ ಅಂಗ್ಡಿಯಿಂದ ಹತ್ತಿಪ್ಪತ್ತು ಮೀಟರು ದೂರದಲ್ಲಿರೋ, ಕೆಯೀಬಿಯೋರ ಗರಗಸಾಕ್ಕೆ ಪ್ರಾಣ ಕೊಟ್ಟಿದ್ದ ಆ ಮರಗಳ ಬುಡ ನೆಲದಿಂದ ಎರಡಡಿ ಮೇಲೆ ನಿಂತಿದ್ವು. ಅವಕ್ಕೂ ಈಗ ಮೋಕ್ಷ ಸಿಕ್ಕಿತ್ತು.

ಆಜಬ್ಬನ ವಯ್ಸು ಸುಮಾರು ಅರವತ್ತು ದಾಟಿದೆ. ಬರೀ ಮೂಳೆ ಸ್ತಿತೀಗೆ ತಲುಪಿರೋ ಆಜಬ್ಬ ಹೊಟ್ಟೆ ಪಾಡಿಗೆ ರಸ್ತೆ ಬದೀಲಿದ್ದ, ಇಲ್ಲಾ ಇನ್ನೆಲ್ಲೇ ಸೌದೆ, ಕುಂಟೆ ಕಂಡರೆ ಅವನ್ನೆಲ್ಲಾ ಅವನ ಸೈಕಲ್ ಚಕ್ರದ ತಳ್ಳೋ ಗಾಡೀಲಿ ತುಂಬಿಸ್ಕೊಂಡು ಅಡ್ವಾನ್ಸಾಗಿ ಹೇಳಿದ್ದವ್ರ ಮನೆಗೆ ಸಾಗಿಸ್ತಿದ್ದ. ಒಂದು ಹೊರೆಗೆ ಹತ್ತಿಪ್ಪತ್ತು ರೂಪಾಯಿ ಜೊತೆಗೆ ಆಯಾ ಹೊತ್ತಿನೂಟ ಕೂಡ ಸಿಗ್ತಿತ್ತು. ಇತ್ತೀಚಿಗೆ ಸೌದೆ ಅಭಾವ ಉಂಟಾಗ್ತಾ ಬಂದಿದ್ರಿಂದ ರಸ್ತೆ ಬದೀಲಿದ್ದ ಒಂದೊಂದೇ ಬೊಡ್ಡೆ ಆಜಬ್ಬಂಗೆ ಸ್ವಾಹ ಆಗಿತ್ತು. ಮಾಗೊಡಪ್ಪನ ಅಂಗ್ಡಿ ಸಮೀಪ ಇರೋ ಆ ಬುಡಾನ ಕಡಿಯೋಕೆ ಆವತ್ತು ಗಾಡೀಲಿ ಗುದ್ಲಿ ಕೊಡಲಿ ಹಾಕ್ಕೊಂಡು ಬಂದಿದ್ದ ಆಜಬ್ಬ.

ಜಯಶಂಕ್ರ ಬಸ್ಸು ಆ ರಸ್ತೇಲಿ ಅದರ ಚಕ್ರಾನ ಪ್ರಾಯಾಸ ಪಟ್ಕೊಂಡು ಇಳಿಸ್ತಾ ಯೇರಿಸ್ತಾ ಬರ್ತಿದ್ದನ್ನ ಕಂಡ ಆಜಬ್ಬ ಸೌದೆ ಒಡಿಯೋದನ್ನ ನಿಲ್ಸಿ ಕೊಡಲೀನ ಗಾಡಿಗೆ ಆನಿಸಿ ಮದ್ಯಾನ ಆಗ್ತಿದೆ ಅಂತಾ ಅಂದಾಜು ಮಾಡ್ದ. ಹಟಾ ಹಿಡ್ದು ಸೌದೆ ಹೊಡಿತಿದ್ರಿಂದ ಆಜಬ್ಬಂಗೆ ಸುಸ್ತಾಗಿ ಉಸ್ರಾಟ ಹೆಚ್ಚಾಗಿತ್ತು. ಗಾಡೀಲಿ ಹಕ್ಕೊಂದ್ಬಂದಿದ್ದ ಬಾಟಲಿ ತೆರದು ನೀರು ಕುಡ್ದು ಸ್ವಲ್ಪ ಮುಖಕ್ಕೂ ಯೆರಚ್ಕೊಂಡ. ಹೊಟ್ಟೆ ಚುರುಗುಟ್ತಾ ಬೆನ್ನಿಗೆ ಅಂಟಿತ್ತು. ಉದ್ದುದ್ದ ಕೈ ಕಾಲು ಸುಕ್ಕು ಹಿಡ್ದು ಕೆನ್ನೆ, ಕಣ್ಣು ಗುಳೀ ಸೇರಿ ಸುಮಾರು ವರ್ಷ ಆದಂಗಿತ್ತು. ಸುಸ್ತು ಸ್ವಲ್ಪ ಕಡಮೆ ಆದ್ರಿಂದ ಪಂಚೆನ ಬಿಚ್ಚಿ ಮೇಲಕ್ಕೆ ಕಟ್ಕೊಂಡು ಅಮರು ಬೀಡಿ ಹಚ್ಚಿ ಕೊಡ್ಲೀನ ಕೈಗೆ ತಗೊಂಡ. ಗಾಡೀಲಿ ಈಗಾಗ್ಲೆ ಎರಡು ಹೊರೆಷ್ಟು ಸೌದೆ ತುಂಬಿತ್ತು. ಎರಡಡಿ ಇದ್ದ ಆ ಬುಡ ಈಗ ನೆಲಾ ಮಟ್ಟವಾಗಿತ್ತು. ಕೊಡ್ಲಿಯಿಂದಿನ್ನು ಆಗೋದಿಲ್ಲ ಅಂತ ಗಾಡೀಲಿದ್ದ ಗುದ್ಲಿ ತಗೊಂಡು ಬೇರ ಮಣ್ಣ ಬಿದ್ಸೋಕೆ ಶುರುವಾದ. ಮಣ್ಣ ಕೆಬರೀ ಕೆಬರೀ ಅವರ ಸುತ್ತ ಹೊಂಡಾನೇ ಸೃಷ್ಟಿ ಮಾಡ್ದ. ಇನ್ನೊಂದು ಹೊರೆ ಸೌದೆ ಆಗುತ್ತೆ ಅಂತ ಅಂದಾಜು ಮಾಡ್ತಿರೋವಾಗ ಹೊಟ್ಟೆ ಏನಾದ್ರೂ ಬೇಕು ಅಂತಿತ್ತು. ಕೊಡ್ಲಿ ಗುದ್ಲೀನ ಅಲ್ಲಿತ್ತು ಸೀದಾ ಮಾಗೊಡಪ್ಪನ ಅಂಗ್ಡಿ ಕಡೆ ಹೋದ.

ಮತ್ತಷ್ಟು ಓದು »