(ಪರಮ್)ಆತ್ಮ ವಿಮರ್ಶೆ
– ಅಭಿನಂದನ್ ಎಸ್ ಡಿ
ಆ non-stop ಡೈಲಾಗ್ಸು, ಆ ಹಣೆ ಕೆರ್ಕೊಂಡು ನಗ್ತಾ ಮಾತೋಡೋ ಸ್ಟೈಲು(ಹೀರೋದು), ಸ್ಮೈಲು(ಹೀರೋದು), ಆ ಅನಂತ್ ನಾಗು, ಆ ಒಂದೇ ಟ್ಯೂನಿನ ಎರಡು ಹಾಡು(infact ಹಾಡಿನ ಬಿಟ್ಸು), ಹಳ್ಳೀನಲ್ಲೂ ಚಡ್ಡಿಯಲ್ಲಿ ಓಡಾಡೋ ಹೆಣ್ಮಕ್ಳು..ಎಲ್ಲಾ mix ಆಗಿ…………………………
ಕರೆಕ್ಟು!!ಮುಂಗಾರು ಮಳೆ ಹ್ಯಾಂಗೋವರ್ರು. ಅದ್ರಿಂದ ಹೊರಗೆ ನಾವೂ ಬಂದಿಲ್ಲ. ಒಂದೊಂದು ವಿಷಯದಲ್ಲಿ ಭಟ್ರೂ ಅದ್ರಿಂದ ಹೊರಗೆ ಬಂದಂಗಿಲ್ಲ.
ಹ್ಯಾಂಗೋವರ್ರಿಂದ ಹೊರಗೆ ಬಂದಿರುವ ವಿಷಯಗಳು ಯಾವ್ದಪ್ಪ ಅಂದ್ರೆ..ಹೀರೋ ಗಡ್ಡ ಶೇವ್ ಮಾಡ್ಕೊಂಡು ನೀಟಾಗಿ ಇರೋದು ( ಇಡೀ ಚಿತ್ರದಲ್ಲಿರದ ಭಟ್ಟ್ರ ಗಡ್ಡ-ಪ್ರೀತಿ ಒಂದೇ ಸೀನಲ್ಲಿ full scaleನಲ್ಲಿ ವ್ಯಕ್ತವಾಗಿದೆ), ಧಾರಳವಾಗಿ ಹೀರೋ ಕಣ್ಣಿಂದ ಸುರೀತಿದ್ದ ನೀರಿಗೆ ಇಲ್ಲಿ ಕಟ್ಟೆ ಕಟ್ಟಿರೋದು, ಹೀರೋನ imageಗೋಸ್ಕರ ಭಟ್ಟರು ಅವರ ಸ್ಟೈಲನ್ನ ಸ್ವಲ್ಪ compromise ಮಾಡ್ಕೊಂಡಿರೋದು, “ರೀ”ಕಾರಕ್ಕೆ ಬ್ರೇಕ್ ಕೊಟ್ಟಿರೋದು.
ಟೈಟಲ್ ಕಾರ್ಡಿಂದಾನೇ ಮಾತಿನ ಮಳೆ. ಪುನೀತ್ ಕಣ್ಣಾಡಿಸೋ ರೀತಿ, dialogue ಡೆಲಿವರಿ, ಮಾತಿನ ವೇಗ, ಧಾಟಿ ಎಲ್ಲದರಲ್ಲೂ ಭಟ್ಟ-ತನವಿದೆ. ಹಾಗಾಗಿ ಅವರು ಭಟ್ಟರ ಬೇರೆ ಚಿತ್ರದ ನಾಯಕರಂತೆ ನಟಿಸಿದ್ದಂತೆ ಕಂಡರೆ ಅದನ್ನ ಅನ್ಯಥಾ ಭಾವಿಸಬಾರ್ದು.
“ಅನ್ಯಾಯ”ವಾಗಿ “ಅನ್ಯಾಯ”ದ ಯತೇಚ್ಚ ಉಪಯೋಗ. ಗ್ಯಾಪಿನಲ್ಲಿ “ಗ್ಯಾಪಿನ” ವಿಷಯ, ಅಡ್ಡಾ-ದಿಡ್ಡಿ (ಅಡ್ಡ)ಹೆಸರುಗಳು..ಇವೆಲ್ಲವೂ ಎಷ್ಟು ಮುದ ನೀಡುತ್ತವೋ, ಅಷ್ಟೇ ಸಾಕಪ್ಪ ಅನ್ನಿಸದೇ ಇರದು…
ಹಾಗಂತ ಎಲ್ಲಾ “ಸಾಕಪ್ಪ” ಅನ್ಸೋ ಥರಾನೂ ಇಲ್ಲ.
ಪಾತಾಜೇ ಕ್ಯಾಮೆರಾ ಕೈಚಳಕ..ಸೂಪರ್.
ಹಾಡಿನ ಬಗ್ಗೆ ಎರಡು ಮಾತಾಡಿದರೆ ಇಡೀ ಕರ್ನಾಟಕದ ಕೈಲಿ “ಅನ್ಯಾಯ”ವಾಗಿ ಏಟು ತಿನ್ನೋದು ಗ್ಯಾರಂಟೀ. ಹಾಗಂತ ಚೆನ್ನಾಗಿರದ ಹಾಡುಗಳನ್ನ ಚೆನ್ನಾಗಿದೆ ಅಂತ ಹೇಳ್ತಿದೀನಿ ಅಂತ ಅಲ್ಲ. ಭಟ್ಟರ ಹಾಡಿನ ಮೇಲಿನ ನನ್ನ ಪ್ರೀತಿ ಬಗ್ಗೆ ಇನ್ನೊಂದು post ಹಾಕ್ಬೋದು. ಆದರೆ ಆ ಹಾಡುಗಳಲ್ಲಿನ ಕೆಲವು ಲೈನ್ಗಳನ್ನ ಸಂಭಾಷಣೆಯಲ್ಲಿ ಉಪಯೋಗಿಸಿರೋದು..ಬೇಕಿತ್ತಾ?
ಅನಂತ ನಾಗ್, ರಘು, ಅವಿನಾಶ್, ದತ್ತಣ್ಣ ಎಲ್ರೂ ಸೂಪರ್.
ಚಿತ್ರದುದ್ದಕ್ಕೂ ನಗುವಿಗೇನೂ ಬರವಿಲ್ಲ. ಬಿಂದಾಸಾಗಿ ನಗ್ಸ್ತಾರೆ. ಆದ್ರೆ ನಗುವಿಲ್ಲದ ಸಮಯದಲ್ಲಿ ಏನೂ ಇಲ್ಲ..ನಗ್ಸೋ ಸೀನಾದ್ರೂ ಬಂದ್ರೆ “ಸಾಕಪ್ಪ” ಅನ್ಸತ್ತೆ.(Especially ಹೀರೋಯಿನ್ ದುಖ ಪಡೋ ಸೀನುಗಳಲ್ಲಿ. ಆಯಮ್ಮನ ಕಷ್ಟ ನೋಡಕ್ಕೆ ಶಾನೆ ಕಷ್ಟ ಆಗತ್ತೆ ಶಿವ).
ಭಟ್ಟರು ಹೇಗೆ ಪುನಿತ್ ಗೋಸ್ಕರ ಅಲ್ಲಲ್ಲಿ compro ಮಾಡ್ಕೊಂಡಿದಾರೋ, ಪುನಿತ್ ಕೂಡ ಭಟ್ಟರ imageಗೋಸ್ಕರ ತಮ್ಮ ಸ್ಟೈಲ್ನಲ್ಲಿ compro ಮಾಡ್ಕೊಂಡಿರೋದು ನನಗಂತೂ ಕಾಣಿಸಿತು.
ಹೀಗೆ ಇಬ್ಬರ compromiseನಲ್ಲಿ ಬಡವಾಗಿರೋದು ಕೂಸು.
ಭಟ್ಟರೇ ಯಾವ್ದೋ interviewನಲ್ಲಿ ಹೇಳಿರೋ ಹಾಗೆ, ಇಲ್ಲೂ ಅವರು ಕಥೆಯ ಹಿಂದೆ ಬೀಳದೆ, ಕಥನದ ಹಿಂದೆ ಬಿದ್ದಿದ್ದಾರೆ.
ಹಾಗಂತ ಅನ್ನ ಇಲ್ಲದೇ ಬರೀ ಸಾರು ಎಷ್ಟು ಅಂತ ಕುಡಿಯೋದು.
ನಮಗೆ ಅನ್ನಾನೂ ಹಾಕಿ ಸಾರ್. ಇಲ್ದಿದ್ರೆ ಚಿತ್ರದಲ್ಲಿ ಬರೋ “ಕೊನೆ ಮಳೆ” ಸೀನ್ ಥರ ಯಾರದ್ರೂ “ಬಾಂಬ್” ಇಟ್ಟುಬಿಡ್ತಾರೆ. ಅಥವಾ..ಫಿಲ್ಮ್ ಸ್ಟೋರಿ ಆಡಿಯೋ ಸಿಡಿ ಮಾಡಿ ಕೊಡಿ ಸಾಕು, ಅದ್ರಲ್ಲೇ ನಿಮ್ಮ ಮಾತಿನ ಮಳೆಯಲ್ಲಿ ತೋಯ್ದು ತೊಪ್ಪೆಯಾಗ್ತೀವಿ ಅಂತಾರೆ.
ಚಿತ್ರದ ಒಂದು ಸೀನಲ್ಲಿ, ನಾಯಕಿ ಕಟ್ಟಿದ ಒಂದು ಸುಂದರ ಮನೆಯ modelನ ಪುನೀತ್ ಎತ್ತಿಕೊಂಡಾಗ, ಅದರ ಒಂದು ಕಡೆಯ ಹೆಂಚಿನ “ಜಾರು ತಾರಸಿ” almost ಜಾರಿ ಬೀಳೋ ಥರ ಇರತ್ತೆ(on the verge of collapse). ಇನ್ನೊಂದು angleನಲ್ಲಿ ನೆಟ್ಟಗೆ ಕೂತಿರತ್ತೆ.
ಇಂಥಾ ಎಡವಟ್ಟನ್ನ ನಾವು ಭಟ್ಟರಿಂದ ನಿರೀಕ್ಷಿಸಬಾರದಷ್ಟು ನಿರೀಕ್ಷೆಯನ್ನ ಭಟ್ಟರು ಹುಟ್ಟುಹಾಕಿದ್ದಾರೆ. ಅದನ್ನ ಅವರು ಮುಂದೆ ಉಳಿಸ್ಕೊತಾರೋ, ಬಿಡ್ತಾರೋ….ಆ “ಪರಮಾತ್ಮ”ನೇ ಬಲ್ಲ.
************
extratorrent.com





ಗೆಳೆಯರೆ ಇದು ಪರಮಾತ್ಮ ಚಿತ್ರದ ಮೂರನೆ ಲೇಖನ, ಬೇರೆ ಯಾವ ಚಿತ್ರದ ಬಗ್ಗೆ ಇಷ್ತೊ೦ದು ವಾದ ವಿವಾದ ನೋಡಿದ್ದಿರಾ? ಕಾರಣ ಇದರಲ್ಲೆ ಗೊತ್ತಾಗುತ್ತೆ ಭಟ್ರು ಪುನ್ಹ ಗೆದಿದ್ದಾರೆ ಅ೦ತ, ಆ ಹಾಡುಗಳ ನಿರೂಪಣೆ ನೋಡಲು ಇನ್ನೊಮ್ಮೆ ಹೊಗ್ತಾ ಇದ್ದೀನಿ ಅದು ಭಟ್ರು ಅಥವಾ ಪುನೀತ್ ಗಾಗಿ ಅಲ್ಲ ಅದು ನನಗಾಗಿ