ವಿಷಯದ ವಿವರಗಳಿಗೆ ದಾಟಿರಿ

ಸೆಪ್ಟೆಂಬರ್ 6, 2012

9

ಲಕ್ಷ್ಮೀ ಪುತ್ರರಾಗುವು​ದು ಹೇಗೆ?

‍ನಿಲುಮೆ ಮೂಲಕ

-ವೆಂಕಟೇಶ್ ಗುರುರಾಜ್

ಲಕ್ಷ್ಮೀ ಪುತ್ರರಾಗುವುದು ಹೇಗೆ? ಭಾಗ-೧

ವಿಶ್ವದ ಅತೀ ಶ್ರೀಮಂತರಲ್ಲಿ ಪ್ರಥಮ ಸ್ಥಾನದಲ್ಲಿರುವ ಮೆಕ್ಸಿಕೋದೇಶದ ಕಾರ್ಲೋಸ್, ದ್ವಿತೀಯ ಸ್ಥಾನದ ಅಮೇರಿಕಾದವರಾದ ಬಿಲ್ ಗೇಟ್ಸ್, ಮೂರನೇ ಸ್ಥಾನದ ಅಮೇರಿಕಾದವರೇಆದ ವಾರೆನ್ ಬಫೆಟ್ ಮುಂತಾದ ವಿಶ್ವದ ಅತೀ ಶ್ರೀಮಂತ ೧೦ ವ್ಯಕ್ತಿಗಳು ಹೇಗೆ ಲಕ್ಷ್ಮೀ ಪುತ್ರರಾದರುಎನ್ನುವ ಬಗ್ಗೆ ಒಂದು ಸೊಗಸಾದ ಕಾರ್ಯಕ್ರಮವನ್ನು ಟಿ.ವಿ.೯ ಇತ್ತೀಚೆಗೆ ಪ್ರಸಾರಮಾಡಿತ್ತು. ಚರ್ಚೆಯಲ್ಲಿಭಾಗವಹಿಸಿದ್ದ ವಿಶ್ವದ ಶ್ರೀಮಂತರಲ್ಲಿ ೧೦೫೧ನೇ ಸ್ಥಾನದ ಮತ್ತು ಕರ್ನಾಟಕದ ೬ನೇ ಶ್ರೀಮಂತರಾದ ರಾಜೇಶ್ಎಕ್ಸ್ ಪೋರ್ಟ್ ಸಿ.ಇ.ಒ.ರಾಜೀವ್ ಮೆಹ್ತಾ, ಐ.ಐ.ಎಂ.ನಿರ್ದೇಶಕರಾದ ಮುರಳೀಧರ್ ಮತ್ತು ಹಣಕಾಸು ಹೂಡಿಕೆತಜ್ಞರಾದ ರುದ್ರಮೂರ್ತಿಯವರು ಆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು ಶ್ರೀಮಂತರಾಗುವುದು ಹೇಗೆ? ಎಂಬ ಮೂಲಭೂತ ವಿಷಯವನ್ನು ಬಹಳ ಚೆನ್ನಾಗಿ ತಿಳಿಯಪಡಿಸಿದರು.

ಮೇಲೆ ತಿಳಿಸಿದ ಜಗತ್ತಿನ ಶ್ರೀಮಂತ ವ್ಯಕ್ತಿಗಳಲ್ಲಿ ಅನೇಕರುಸಾಮಾನ್ಯ ವ್ಯಕ್ತಿಗಳಾಗೇ ಜನ್ಮತಾಳಿದವರು, ಹೆಚ್ಚಿನವರಲ್ಲಿ ಯಾರೂ ಹುಟ್ಟುತ್ತಲೇ ಶ್ರೀಮಂತರಾದವರಲ್ಲ.ಕಠಿಣ ಪರಿಶ್ರಮ ಮತ್ತು ಪ್ರಾಮಾಣಿಕತೆ ಅವರನ್ನು ಶ್ರೀಮಂತ ವ್ಯಕ್ತಿಗಳನ್ನಾಗಿ ರೂಪಿಸಿದೆ. ಅವರಲ್ಲಿಎಲ್ಲರೂ ಸುಮಾರು ೧೮ ತಾಸುಗಳು ಕೆಲಸ ಮಾಡುವವರು. ಶ್ರದ್ದೆಯಿಂದ ಪ್ರಾಮಾಣಿಕತೆಯಿಂದ ಕೆಲಸ ಮಾಡುವವರು,ಹೀಗಾಗಿ ಅವರಿಗೆ ಶ್ರೀಮಂತಿಕೆ ಒಲಿದಿದೆ. ಯಾವುದೇ ವ್ಯಕ್ತಿಗೆ ಶ್ರೀಮಂತಿಕೆ ಒಲಿಯಲು ಅನೇಕ ವರ್ಷಗಳುಹಿಡಿಯುತ್ತವೆ.  ಯಾವುದೇ ವ್ಯಕ್ತಿ ರಾತ್ರೋರಾತ್ರಿಶ್ರೀಮಂತನಾಗಲು ಸಾಧ್ಯವಿಲ್ಲ. ವಾರೆನ್ ಬಫೆಟ್ ತಮ್ಮ ೧೨ನೇ ವರ್ಷದಿಂದ ಶೇರು ಮಾರುಕಟ್ಟೆಯಲ್ಲಿ ವ್ಯವಹಾರವನ್ನುಪ್ರಾರಂಭಿಸಿ ಈಗ ಅವರು ತಮ್ಮ ೮೫ನೇ ವರ್ಷದ ಹೊಸಲಿನಲ್ಲಿ ಜಗತ್ತಿನ ೩ನೇ ಅತಿ ದೊಡ್ಡ ಶ್ರೀಮಂತರಾಗಿದ್ದಾರೆ.ಅತಿ ಕಡಿಮೆ ವಯಸ್ಸಿನಲ್ಲಿ ವ್ಯಾಪಾರ ವಹಿವಾಟಿಗೆ ತಮ್ಮನ್ನು ತಾವು ತೊಡಗಿಸಿಕೊಂಡು ಕಠಿಣ ಪರಿಶ್ರಮಮತ್ತು ಪ್ರಾಮಾಣಿಕತೆಯಿಂದ ತೊಡಗಿಸಿಕೊಂಡರೆ, ಯಾರು ಬೇಕಾದರೂ ಶ್ರೀಮಂತರಾಗಬಹುದು ಎಂಬುದು ಚರ್ಚೆಯಲ್ಲಿಭಾಗವಹಿಸಿದ್ದ ಅತಿಥಿಗಳ ಒಟ್ಟು ಮಾತಿನ ತಾತ್ಪರ್ಯವಾಗಿತ್ತು.

ಲಕ್ಷ್ಮೀ ಪುತ್ರರಾಗುವುದು ಹೇಗೆ?  ಭಾಗ-೨

ಲಕ್ಷ್ಮೀ ಪುತ್ರರು ಎಂಬ ಕಾರ್ಯಕ್ರಮವನ್ನು ನೋಡುತ್ತಿದ್ದಾಗ,ನಾನು ಬಹಳ ಹಿಂದೆ ಓದಿದ ರಾಬರ್ಟ್ ಕಿಯೋಸಾಕಿಯವರ ಪುಸ್ತಕಗಳು ನನಗೆ ನೆನಪಾದವು. ರಾಬರ್ಟ್ ಕಿಯೋಸಾಕಿಯವರ“ರಿಚ್ ಡ್ಯಾಡ್, ಪೂರ್ ಡ್ಯಾಡ್” ಸರಣಿಯ ಪುಸ್ತಕಗಳು ಇಂತಹ ವಿಷಯಗಳ ಬಗ್ಗೆ ಸೊಗಸಾಗಿ ವಿವರಿಸಲ್ಪಟ್ಟಿದೆ.ಆ ಸರಣಿಯ ನಾಲ್ಕೈದು ಪುಸ್ತಕಗಳನ್ನು ನಾನು ಓದಿದ್ದೇನೆ. ಅ ಪುಸ್ತಕಗಳಲ್ಲಿ ಬರುವ ಒಂದು ವಿದ್ಯಾವಂತತಂದೆಯ ಪಾತ್ರ ತನ್ನ ಮಗನಿಗೆ “ಶಾಲೆಗೆ ಹೋಗು, ಹೆಚ್ಚಿನ ಅಂಕಗಳನ್ನು ಪಡೆ ಮತ್ತು ಒಳ್ಳೆಯ ಸುರಕ್ಷಿತಉದ್ಯೋಗ ಗಳಿಸು ಎಂದು ಹೇಳಿದರೆ, ಮತ್ತೊಂದು ಶ್ರೀಮಂತ ಅವಿದ್ಯಾವಂತ ತಂದೆಯ ಪಾತ್ರ “ಶಾಲೆಗೆ ಹೋಗು,ಪದವಿಧರನಾಗು, ದೊಡ್ಡ ಉದ್ದಿಮೆದಾರನಾಗು, ಮತ್ತು ಯಶಸ್ವಿ ಹೂಡಿಕೆದಾರನಾಗು ಎಂದು ತನ್ನ ಮಗನಿಗೆ ಹೇಳುತ್ತದೆ.

ಇದೇ ಲೇಖಕರಮತ್ತೊಂದು ಪುಸ್ತಕದಲ್ಲಿ “ನೀನು ಶ್ರೀಮಂತನಾಗಬೇಕು ಮತ್ತು ಸಂತೋಷದಿಂದ ಇರಬೇಕು ಎಂದಾದರೆ ಶಾಲೆಗೆಹೋಗಬೇಡ” ಎಂದು ಹೇಳುತ್ತದೆ. ಶಾಲೆಗಳಲ್ಲಿ ವಿದ್ಯೆ ಕಲಿಸುತ್ತಾರೆ, ಆದರೆ ಹಣ ಗಳಿಸುವುದು ಹೇಗೆ ಎಂಬುದನ್ನುಕಲಿಸುವುದಿಲ್ಲ.  ಹಣ ಹೇಗೆ ಗಳಿಸಬೇಕು ಎಂಬುದನ್ನುನಾವು ನಮ್ಮ ಸ್ವಪ್ರಯತ್ನದಿಂದ ಕಲಿಯಬೇಕು. ಈ ಪುಸ್ತಕಗಳು ಕನ್ನಡದಲ್ಲಿ ಅನುವಾದಗೊಂಡಿದೆಯೋ, ಇಲ್ಲವೋನನಗೆ ತಿಳಿಯದು. ಇದೇ ಲೇಖಕರ ಮತ್ತೊಂದು ಪುಸ್ತಕದಲ್ಲಿ (ಗೈಡ್ ಟು ಇನ್ವೆಸ್ಟಿಂಗ್) “ಶ್ರೀಮಂತರು ಯಾವುದರಲ್ಲಿಬಂಡವಾಳ ಹೂಡುತ್ತಾರೋ, ಅದರಲ್ಲಿ ಬಡವರು ಮತ್ತು ಮಧ್ಯಮವರ್ಗದವರು ಆಸಕ್ತಿ ವಹಿಸುವುದಿಲ್ಲ ಎಂದು ಲೇಖಕರುತಿಳಿಸುತ್ತಾರೆ. ಹೀಗೆ ಅನೇಕ ವಿಚಾರಧಾರೆಗಳು ಈ ಪುಸ್ತಕಗಳಲ್ಲಿ ಅಡಕವಾಗಿವೆ. ಇಂತಹ ಪುಸ್ತಕಗಳನ್ನುಓದುವ ಮೂಲಕ ಹೆಚ್ಚಿನ ಜ್ಞಾನವನ್ನು ಅಸಕ್ತರು ಪಡೆಯಬಹುದು.ಲೇಖಕರನ್ನು ಮತ್ತು ಅವರ ವಿಚಾರ ಧಾರೆಗಳನ್ನು ತಿಳಿಯಲು ಮತ್ತು ಅವರ ಪುಸ್ತಕಗಳಿಗಾಗಿ, ಆಸಕ್ತರು http://www.richdad.comನಲ್ಲಿ ನೊಂದಾಯಿಸಿಕೊಳ್ಳಬಹುದು.

ಲಕ್ಷ್ಮೀ ಪುತ್ರರಾಗುವುದು ಹೇಗೆ? ಭಾಗ-೩

ಬಡವನಾಗಿ ಹುಟ್ಟುವುದು ನಿನ್ನ ತಪ್ಪಲ್ಲ, ಆದರೆ ಬಡವನಾಗೇ ಸಾಯುವುದು ಖಂಡಿತಾ ನಿನ್ನದೇ ತಪ್ಪು ಎಂಬುದು ಬಿಲ್ ಗೇಟ್ಸ್ ಅವರ ಜನಪ್ರಿಯ ಹೇಳಿಕೆ. ಸಾಮಾನ್ಯರಾದ ನಾವುಗಳು ಅನೇಕ ತಪ್ಪುಗಳನ್ನು ಮಾಡುತ್ತಲೇ ಇರುತ್ತೇವೆ, ಹಾಗಾಗಿನಮಗೆ ಶ್ರೀಮಂತಿಕೆ ಸ್ವಲ್ಪ ದೂರ.  ಬಡವ/ಮಧ್ಯಮವರ್ಗದವನು ಶ್ರೀಮಂತನಂತೆ ಯೋಚಿಸಿ ಖರ್ಚು ಮಾಡಿದರೆ ಶ್ರೀಮಂತ, ಬಡವ/ಮಧ್ಯಮವರ್ಗದವನಂತೆ ಯೋಚಿಸಿ ಖರ್ಚು ಮಾಡುತ್ತಾನೆ. ಬಡವರಿಗೆ/ಮಧ್ಯಮವರ್ಗದವನರಿಗೆ ಹಣದ ಬೆಲೆ ಸರಿಯಾಗಿ ತಿಳಿದುಕೊಳ್ಳುವುದು ಕಷ್ಟಸಾಧ್ಯವಾದರೆ, ಶ್ರೀಮಂತನು ತಾನು ಸಂಪಾದಿಸುವ ಪ್ರತಿಯೊಂದು ಪೈಸೆಯೂ ಎಷ್ಟು ಅಮೂಲ್ಯವೆಂಬುದು ತಿಳಿದುಕೊಂಡಿರುತ್ತಾನೆ.ಬಡವರಿಗೆ/ಮಧ್ಯಮವರ್ಗದವರಿಗೆ ಒಂದೇ ಸಲ ದೊಡ್ಡ ಮೊತ್ತದ ಹಣಬಂದರೆ ಅವರಿಗೆ ಅದನ್ನು ಸರಿಯಾಗಿ ಕಾಪಾಡಿಕೊಳ್ಳುವುದೂ ಸಹ ಬರುವುದಿಲ್ಲ. ಬಂದ ಹಣವನ್ನು ಏನು ಮಾಡಬೇಕೆಂದು ಯೋಚಿಸಿದೆ ದೊಡ್ಡ ಮನೆ, ಕಾರು, ಕುಡಿತ ಹೀಗೆ ಎಲ್ಲದಕ್ಕೂ ಹಣವನು ವ್ಯಯಿಸಿ ಮುಂದೆ ಬಡವರಾಗೇ ಉಳಿದುಕೊಳ್ಳುವರು. ನೆಪೋಲಿಯನ ಹಿಲ್ ಅವರ “ಥಿಂಕ್ಅಂಡ್ ಗ್ರೊ ರಿಚ್” ಪುಸ್ತಕವನ್ನು ಆಸಕ್ತರು ಗಮನಿಸಬಹುದು. ಈ ಪುಸ್ತಕವು ಕನ್ನಡಕ್ಕೆ ಅನುವಾದ ಮಾಡಲ್ಪಟ್ಟಿದೆ.

ಶ್ರೀಮಂತನು ತನ್ನಲಿರುವ ಹಣವನ್ನು ಹೇಗೆ ಬೆಳೆಸಬಹುದೆಂದು ಯೋಚಿಸಿ ಸರಿಯಾದ ನಿರ್ಧಾರ ತೆಗೆದುಕೊಳ್ಳುತ್ತಾನೆ.ಬಡವರು/ಮಧ್ಯಮವರ್ಗದವರು ತಮ್ಮ ಹೆಚ್ಚಿನ ಸಮಯವನ್ನು ಕಾಡುಹರಟೆ, ಮನೋರಂಜನೆ ಹೀಗೆಸುಖಾಸುಮ್ಮನೆ ಕಳೆದರೆ, ಶ್ರೀಮಂತ ತನ್ನ ಹೆಚ್ಚಿನಸಮಯವನ್ನು ತನ್ನ ವ್ಯಾಪಾರ ವಹಿವಾಟಿನಲ್ಲಿ ಕಳೆಯುತ್ತಾನೆ. ಬಡವನಿಗೆ ಹೇಗೆ ಕೆಲಸ ಮಾಡಬೇಕೆಂದು ಮಾತ್ರಗೊತ್ತು, ಆದರೆ ಶ್ರೀಮಂತ ತನ್ನ ಕೆಲಸಗಾರರಿಂದ ಕೆಲಸವನ್ನು ಹೇಗೆ ಮಾಡಿಸಿಕೊಳ್ಳಬೇಕೆಂಬ ಚಾಕಚಕ್ಯತೆಯನ್ನುಅರಿತಿರುತ್ತಾನೆ. ಬಡವರು/ಮಧ್ಯಮವರ್ಗದವನರು ಶ್ರೀಮಂತರಂತೆ ಯೋಚಿಸಿ, ಸರಿಯಾದನಿರ್ಧಾರ ಕೈಗೊಂಡು ಕಠಿಣ ಪರಿಶ್ರಮದಿಂದ ಮತ್ತು ತಮ್ಮ ಪ್ರಾಮಾಣಿಕ ನಡೆನುಡಿಗಳಿಂದಮುಂದೆಬರಬಹುದು.

ಶ್ರೀಮಂತರೆಂದರೆ ಯಾರು? ಶ್ರೀಮಂತನೆನೆಸಿಕೊಳ್ಳಲುಎಷ್ಟು ಹಣವಿರಬೇಕು? ಈ ಪ್ರಶ್ನೆಗೆ ಉತ್ತರಿಸುವುದು ಬಹಳ ಕಷ್ಟ. ನಿಮ್ಮ ಎದುರಿಗೆ ಕಂಡ ಬಿಕ್ಷುಕನಿಗೆನೀವು ಹತ್ತು ರೂಪಾಯಿಯನ್ನು ಕೊಡುವಿರಾದರೆ, ಅವನ ಕಣ್ಣಲ್ಲಿ ನೀವು ಶ್ರೀಮಂತರು. ನಿಮ್ಮ ಮನೆ ಕೆಲಸಮಾಡುವವರಿಗೆನೀವು ತಿಂಗಳಿಗೆ ೧೦೦೦ ರೂಪಾಯಿ ಸಂಬಳ ಕೊಡುವಿರಾದರೆ ಅವರ ಕಣ್ಣಲ್ಲಿ ನೀವು ಅವರಿಗಿಂತ ಶ್ರೀಮಂತರು.ನಿಮಗೆ ೨೫,೦೦೦ ರೂಪಾಯಿ ಸಂಬಳ ಕೊಡುವ ನಿಮ್ಮ ಯಜಮಾನ ನಿಮ್ಮ ಕಣ್ಣಲ್ಲಿ ಶ್ರೀಮಂತ. ಅವರ ಕಣ್ಣಿಗೆ ಮತ್ಯಾರೋಶ್ರೀಮಂತರಂತೆ ಕಂಡಿರುತ್ತಾರೆ,  ಪಟ್ಟಿ ಹೀಗೆಯೇ ಮುಂದುವರೆಯುತ್ತದೆ.ನಮ್ಮ ಜೀವನ ಶೈಲಿಯನ್ನು ಸ್ವಲ್ಪವೂ ಕಡಿಮೆಮಾಡಿಕೊಳ್ಳದೆ, ನಾವು ಯಾವ ಕೆಲಸ ಕಾರ್ಯವನ್ನೂ ಮಾಡದೆ ಎಷ್ಟುತಿಂಗಳು/ವರ್ಷ ನಾವು ಕಳೆಯುತ್ತೇವೆ ಎಂಬುದರ ಮೇಲೆ ನಮ್ಮ ಶ್ರೀಮಂತಿಕೆ ಅಳೆಯಲ್ಪಡುವುದು. ಉದಾ: ನಮ್ಮಮನೆಯ ಖರ್ಚು ಸುಮಾರು ತಿಂಗಳಿಗೆ ೧೦,೦೦೦ ಇದ್ದು, ನಮ್ಮ ಹತ್ತಿರ ೧ ಲಕ್ಷ ರೂಪಾಯಿ ಇದ್ದರೆ ನಾವು ೧೦ತಿಂಗಳ ಶ್ರೀಮಂತನೆಂದುಕೊಂಡರೆ ಅಡ್ಡಿಯಿಲ್ಲ. ಅನೀರಿಕ್ಷಿತವಾಗಿ ಏನಾದರೂ ನಮ್ಮ ಜೀವನದಲ್ಲಿ ಒಳ್ಳೆಯ/ಕೆಟ್ಟಘಟನೆಗಳು ಜರುಗಿದಾಗ, ಅದರ ನಿರ್ವಹಣೆಯ ಖರ್ಚು ಪ್ರತ್ಯೇಕ.

ಲಕ್ಷ್ಮೀ ಪುತ್ರರಾಗುವುದು ಹೇಗೆ? ಭಾಗ-೪

ಶ್ರೀಮಂತ ವ್ಯಕ್ತಿಗಳ ಜೀವನ ಶೈಲಿ ಅತ್ಯಂತ ಅದ್ದೂರಿಯಿಂದಕೂಡಿರುತ್ತದೆ, ದೊಡ್ಡ ದೊಡ್ಡ ಕಾರುಗಳು, ದೊಡ್ಡ ಬಂಗಲೆಯಲ್ಲಿ ವಾಸ, ಅತೀ ಹೆಚ್ಚು ಹಣ ತಮಗಾಗಿ ಖರ್ಚುಮಾಡಿಕೊಳ್ಳುತ್ತಾರೆಎಂಬುದು ಸಾಮಾನ್ಯ ವ್ಯಕ್ತಿಗಳ ಅನಿಸಿಕೆ. ಆದರೆ ಹೆಚ್ಚಿನ ಶ್ರೀಮಂತ ವ್ಯಕ್ತಿಗಳ ದೈನಂದಿಕ ಜೀವನ ಶೈಲಿಯುಸಾಮಾನ್ಯವಾಗಿ ಅದ್ದೂರಿಯಿಂದೇನೂ ಕೂಡಿರುವುದಿಲ್ಲ. ಇನ್ಫೋಸಿಸ್ ನಾರಾಯಣ ಮೂರ್ತಿಯವರಾಗಲೀ, ವಾರೆನ್ಬಫೆಟ್ ಅವರಾಗಲೀ ೨/೩ ಮಲಗುವ ಕೊಠಡಿಗಳ ಮನೆಯಲ್ಲೇ ಇರುವುದು, ಉಪಯೋಗಿಸುವುದೂ ಸಹ ಸಾಮಾನ್ಯರು ಬಳಸುವಕಾರನ್ನೇ ಎಂಬುದನ್ನು ಗಮನಿಸಬಹುದು. ಶ್ರೀಮಂತರೇನೂ ಜಿಪುಣತನದಿಂದ ತಮ್ಮ ಜೀವನವನ್ನು ನಡೆಸುವುದಿಲ್ಲ.ಅವರ ಜೀವನ ಶೈಲಿ ಅದ್ದೂರಿಯಿಂದ ಕೂಡಿದ್ದರೂ ಸಹ, ಅದರ ಮೇಲೆ ಅವರಿಗೆ ಸಂಪೂರ್ಣ ನಿಯಂತ್ರಣವಿರುತ್ತದೆ.ತಮ್ಮಲ್ಲಿರುವ ಹಣವನ್ನು ಸೂಕ್ತ ರೀತಿಯಲ್ಲಿ ನಿರ್ವಹಣೆಮಾಡುವ ಕಲೆಯನ್ನು ಶ್ರೀಮಂತರು ಬೆಳೆಸಿಕೊಂಡಿರುತ್ತಾರೆ.ತಮ್ಮಲ್ಲಿ ಅತಿ ಹೆಚ್ಚಿನ ಹಣವಿದೆಯೆಂದು ದರ್ಪದಿಂದ ಅತಿ ದೊಡ್ಡ ಶ್ರೀಮಂತರಾರೂ ವ್ಯವಹರಿಸುವುದಿಲ್ಲ.ಹಾಗೆ ವ್ಯವಹರಿಸುವವರು ನಿಜವಾದ ಶ್ರೀಮಂತರೂ ಆಗಿರುವುದಿಲ್ಲ. ತಮ್ಮನ್ನು ತಾವು ಶ್ರೀಮಂತರೆಂಬ ಕಲ್ಪನೆಯಲ್ಲಿರುತ್ತಾರೆಅಷ್ಟೇ. ಕಲ್ಪನೆಯನ್ನು ಯಾರು ಬೇಕಾದರೂ ಮಾಡಿಕೊಳ್ಳಬಹುದು. ಆದರೆ ಅದಕ್ಕಾಗಿ ದುಡಿಯುವುದು ಬಹಳ ಮುಖ್ಯವಾಗುತ್ತದೆ.

ಕೆಲವರು ಹುಟ್ಟುವಾಗಲೇ ಶ್ರೀಮಂತರಾಗಿ ಜನ್ಮತಾಳಿರಬಹುದು.ನಾವು ಹುಟ್ಟಿನಿಂದಲೇ ಶ್ರೀಮಂತರೆಂದು, ಯಾವುದೇ ವ್ಯಾಪಾರ ವಹಿವಾಟು ನಡೆಸದೆ ತಮ್ಮಲ್ಲಿರುವ ಹಣವನ್ನುಮೋಜು ಮಸ್ತಿಯಲ್ಲಿ ಕಳೆದರೆ, ಬೀದಿಗೆ ಬೀಳುವುದು ಮಾತ್ರ ನಿಶ್ಚಿತ. ವಂಶ ಪಾರಂಪರ್ಯವಾಗಿ ಬಂದಿರುವಶ್ರೀಮಂತಿಕೆಯನ್ನು ಉಳಿಸಿಕೊಂದು ಮತ್ತು ಅದನ್ನು ಬೆಳೆಸಿಕೊಂಡು ಹೊಗುವುದು ಬಹಳ ಮುಖ್ಯ. ತಮ್ಮಲ್ಲಿರುವಹಣ ಮತ್ತು ಬುದ್ದಿಶಕ್ತಿಯನ್ನು ಯಾರು ಸೂಕ್ತ ರೀತಿಯಲ್ಲಿ ನಿರ್ವಹಣೆಮಾಡುವ ಕಲೆಯನ್ನು ಬೆಳೆಸಿಕೊಂಡುತಮ್ಮ ವ್ಯಾಪಾರ ವ್ಯವಹಾರವನ್ನು ಇನ್ನಷ್ಟು ಮತ್ತಷ್ಟು ಅಭಿವೃದ್ದಿಗೊಳಿಸುತ್ತಾರೊ, ಅವರ ಶ್ರೀಮಂತಿಕೆಗೆಯಾವುದೇ ತೊಂದರೆಯಾಗುವುದಿಲ್ಲ.

ನಾವು ಮಾಡುವ ಕೆಲಸದಿಂದ ಜೀವನ ನಡೆಸಲು ಆಡ್ಡಿಯಿಲ್ಲ, ಸುಖಜೀವನ ನಡೆಸಬಹುದು. ವಿಶ್ವದ ಶ್ರೀಮಂತರ ಪಟ್ಟಿಯಲ್ಲಿರಲು ವ್ಯಾಪಾರ, ವಹಿವಾಟುಗಳನ್ನು ದೇಶದ ಎಲ್ಲೆಡೆಮತ್ತು ಹೊರ ದೇಶಗಳಲ್ಲೂ ವಿಸ್ತರಿಸಬೇಕಾಗುತ್ತದೆ, ಹತ್ತು ಹಲವು ಕಂಪನಿಗಳನ್ನು ಸ್ಥಾಪಿಸಬೇಕಾಗುತ್ತದೆ.ಇದಕ್ಕೆಲ್ಲಾ ದೊಡ್ಡ ಕನಸು, ಕಠಿಣ ಪರಿಶ್ರಮ, ಪ್ರಾಮಾಣಿಕತೆ ಮುಖ್ಯವಾಗುತ್ತದೆ. ಇದೆಲ್ಲವನ್ನೂ ನೊಡಿದಾಗನಮ್ಮ ಹಿರಿಯರು ಹೇಳಿರುವ “ಆಳಾಗಿ ದುಡಿ ಅರಸನಾಗಿತಿನ್ನು “ಎಂಬ ಮಾತು ಎಷ್ಟು ಸತ್ಯವೆಂದು ಗೋಚರಿಸುತ್ತದೆ.

ಲಕ್ಷ್ಮೀ ಪುತ್ರರಾಗುವುದು ಹೇಗೆ? ಭಾಗ-೫

ವಿದ್ಯಾವಂತರಾದಮಾತ್ರಕ್ಕೆ ಲಕ್ಷ್ಮಿ ಒಲಿದು ಬರುವುದಿಲ್ಲವೆನೋ? ಹಾಗಿದ್ದರೆ ನಮಗೆ ಪಾಠ ಕಲಿಸಿದಪ್ರಾಥಮಿಕ/ಮಾಧ್ಯಮಿಕ/ ಶಾಲೆಯ ಗುರುಗಳು, ಕಾಲೇಜಿನ ಪ್ರಾಧ್ಯಾಪಕರು, ಅಷ್ಜೇ ಏಕೆ ನಮ್ಮ ರಾಜ್ಯದಹೆಮ್ಮೆಯ ವಾಸ್ತುಶಿಲ್ಪಿ ಸರ್.ಎಂ.ವಿಶ್ವೇಶ್ವರಯ್ಯನವರು, ಅಬ್ದುಲ್ ಕಲಾಂನಂತಹ ವಿಜ್ಞಾನಿಗಳು, ನಮ್ಮ ಸುತ್ತ ಮುತ್ತ ಇರುವವೈದ್ಯರು, ಇಂಜಿನಿಯರ್, ಸಿ.ಎ ಓದಿರುವವರು, ಸಾಪ್ಟ್ ವೇರ್ ಇಂಜಿನಿಯರ್, ಐ.ಎ.ಎಸ್, ಐ.ಪಿ.ಎಸ್ಓದಿರುವವರು, ನಮ್ಮ ಕವಿವರ್ಯರು ಯಾಕೆ ಶ್ರೀಮಂತರ ಪಟ್ಟಿಯಲ್ಲಿಲ್ಲ? ಆದರೆ ಸಾಮಾನ್ಯವಾಗಿ ಅದುಹಾಗೆ ಆಗುವುದಿಲ್ಲ. ಕೇವಲ ವಿದ್ಯೆ ಒಂದಿದ್ದರೆ ಮಾತ್ರ ಶ್ರೀಮಂತನಾಗಲು ಸಾಧ್ಯವಿಲ್ಲ. ಹೆಚ್ಚಿನವಿದ್ಯಾವಂತರು ಶ್ರೀಮಂತರ ಬಳಿ ಕೆಲಸ ಮಾಡುತ್ತಿರುತ್ತಾರೆ. ವಿಶ್ವದ ಅತಿ ಹೆಚ್ಚಿನ ಶ್ರೀಮಂತರಪಟ್ಟಿಯಲ್ಲಿರುವ ಹಲವರು ಹೆಚ್ಚಿನ ವಿದ್ಯಾಭ್ಯಾಸ ಮಾಡಿಲ್ಲವೆಂಬುದೂ ಸಹ ಅಷ್ಟೇ ಸತ್ಯ.

ನಮ್ಮದೇಶದಲ್ಲಿ ಹೆಚ್ಚಿನ ಪಾಲಕರು ತಮ್ಮ ತಮ್ಮ ಮಕ್ಕಳನ್ನು ಚೆನ್ನಾಗಿ ಓದಿಸಿ, ಅವರಿಗೆ ಒಳ್ಳೆಯ ಕೆಲಸಸಿಕ್ಕಿದರೆ ಸಾಕು ಅವರ ಜೀವನ ಸುಖವಾಗಿರುತ್ತದೆ ಎಂಬ ತಪ್ಪು ಕಲ್ಪನೆಯಿಂದ ಇರುತ್ತಾರೆ.  ಮಕ್ಕಳೂ ಸಹ ಚೆನ್ನಾಗಿ ಓದಿ ಅತಿ ಹೆಚ್ಚಿನ ಅಂಕಗಳನ್ನುಪಡೆದು ಮೈಕ್ರೋಸಾಫ್ಟ್, ಇನ್ಫೋಸಿಸ್, ವಿಪ್ಪ್ರೋ ಮುಂತಾದ ಸಂಸ್ಥೆಗಳಲ್ಲಿ ಕೆಲಸ ಸಿಕ್ಕಿದರೆ ಸಾಕುತಮ್ಮ ಜೀವನ ಪಾವನವಾಯಿತು, ನಮ್ಮ ಜೀವನ ಇನ್ನು ಸುರಕ್ಷಿತವಾಯಿತು ಎಂದು ಭಾವಿಸುತ್ತಾರೆ. ಇನ್ನುಕೆಲವರು ಸರ್ಕಾರಿ ಕೆಲಸದಲ್ಲಿ ತಮ್ಮ ಜೀವನವನ್ನು ಸಾರ್ಥಕಗೊಳಿಸಿಕೊಳ್ಳೂತ್ತಾರೆ. ಇದರಾಚೆಗೆಹೆಚ್ಚು ಜನ ಯೋಚಿಸುವುದಿಲ್ಲ. ನಾವು ಬುದ್ದಿವಂತರಿದ್ದೇವೆ, ವಿದ್ಯಾವಂತರಿದ್ದೇವೆ, ನಾವೂ ಸಹ ಹೊಸಸಂಸ್ಥೆಗಳನ್ನು ಪ್ರಾರಂಭಿಸಬಹುದು ಎಂದು ಹೆಚ್ಚಿನ ಜನರು ಯೋಚಿಸುವುದೇ ಇಲ್ಲ. ಇನ್ನು ವೈದ್ಯ,ವಾಸ್ತುಶಿಲ್ಪ, ಸಿ.ಎ ಮುಂತಾದ ವಿದ್ಯಾರ್ಥಿಗಳ ಯೋಚನೆಯೂ ಇದಕ್ಕಿಂತ ಭಿನ್ನವಾಗೇನೂ ಇರುವುದಿಲ್ಲ.ಪಾಲಕರು ಮಕ್ಕಳಿಗೆ ಅದರಾಚೆಗೆ ಯೋಚಿಸುವುದನ್ನು ತಿಳಿಹೇಳಬೇಕು. ಅದೇ, ಶ್ರೀಮಂತರ ತಂದೆ ತಾಯಿಯರುತಮ್ಮ ಮಕ್ಕಳಿಗೆ ಯಾವುದಾದರೂ ಹೊಸ ಉದ್ದಿಮೆಯನ್ನು ಸ್ಥಾಪಿಸಲು ಪ್ರೋತ್ಸಾಹಿಸುತ್ತಾರೆ.

ಲಕ್ಷ್ಮೀ ಪುತ್ರರಾಗುವುದು ಹೇಗೆ?  ಭಾಗ-೬

ಯಾವುದೇ ಸಂಸ್ಥೆಯನ್ನು ಸ್ಥಾಪಿಸುವುದಕ್ಕೆ ಹಣ ಬೇಕು ಎಂಬತಪ್ಪು ಕಲ್ಪನೆ ಅನೇಕರದ್ದು. ನಿಮ್ಮಲ್ಲಿ ಸಂಸ್ಥೆಯನ್ನು ಸ್ಥಾಪಿಸಲು ನಿಜವಾಗಿ ಯೋಚಿಸುವವರು ಹಣಕ್ಕಾಗಿಬೇರೆ ಬೇರೆ ಮೂಲಗಳನ್ನು ಹುಡುಕುತ್ತಿರುತ್ತಾರೆ. ಸಂಸ್ಥೆಯನ್ನು ಸ್ಥಾಪಿಸಲು ಹಣಕ್ಕಿಂತ ಮುಖ್ಯವಾಗಿಬೇಕಿರುವುದು ಒಂದು ಅತ್ಯದ್ಭುತವಾದ ಕಲ್ಪನೆ. ಉದಾ: ಇನ್ಫೋಸಿಸ್ ಸಂಸ್ಥೆಯನ್ನು ನಾರಾಯಣಮೂರ್ತಿಯವರುಅವರ ಹೆಂಡತಿಯ ಬಳಿ ಹತ್ತು ಸಾವಿರ ರೊಪಾಯಿಯ ಸಾಲ ಪಡೆದು ಒಂದು ಚಿಕ್ಕ ಜಾಗದಲ್ಲಿ ೧೯೮೦ನೆಯ ಇಸವಿಯಲ್ಲಿಸ್ಥಾಪಿಸಿದ್ದರು. ಈಗ ನೋಡಿ ಅದು ಬೆಳೆದು ಹೇಗೆ ಹೆಮ್ಮರವಾಗಿ ನಿಂತಿದೆ ಎಂದು, ಅಂದು ಅವರ ಬಳಿ ಇದ್ದದ್ದುಕೇವಲ ಒಂದು ಅದ್ಭುತವಾದ ಕಲ್ಪನೆ ಮತ್ತು ಅದು ಸಾಕಾರವಾಗುವ ಕನಸು. ನಿಮ್ಮಲ್ಲಿ ಹೊಸ ಕಲ್ಪನೆ ಇದ್ದರೆಯಾರು ಬೇಕಾದರೂ ಒದು ಸಂಸ್ಥೆಯನ್ನು ಸ್ಥಾಪಿಸಬಹುದು. ಹಣಕ್ಕಾಗು ನೀವು ಬ್ಯಾಂಕ್ ಮೊರೆ ಹೋಗಬಹುದು ಅಥವಾನಿಮ್ಮ ಕಲ್ಪನೆ ನಿಜವಾಗಿಯೂ ಚೆನ್ನಾಗಿದ್ದರೆ ಹಣ ಹೂಡುವವರು ಮುಂದೆ ಬರಬಹುದು, ಹೀಗೆ ಹಣ ಹೊಂದಿಸಲುಅನೇಕ ದಾರಿಗಳೆವೆ. ನಾವು ಕಣ್ಣು ಬಿಟ್ಟು ನೋಡಬೇಕಷ್ಟೇ.

ವಿದ್ಯಾವಂತರು ಬೇರೆಯವರಿಗಾಗಿಯೇ ಕೆಲಸ ಮಾಡುವುದು ಹೆಚ್ಚು.  ಶ್ರೀಮಂತ ವ್ಯಕ್ತಿ ಅಂತಹ ಬುದ್ದಿವಂತರನ್ನು ತನ್ನ ಕೆಲಸಕ್ಕೆಸಂಬಳ ಕೊಟ್ಟು ತನಗಾಗಿ ದುಡಿಯುವಂತೆ ಮಾಡುತ್ತಾನೆ. ಇದೇ ಅವನ ಶ್ರೀಮಂತಿಕೆಯ ಗುಟ್ಟಿರಬಹುದೇ? ಕಠಿಣಪರಿಶ್ರಮ, ಪ್ರಾಮಾಣಿಕತೆ, ಧೈರ್ಯ, ತಾಳ್ಮೆ, ಗುರಿ, ಕನಸು, ಸಾದಿಸಲೇ ಬೇಕೆಂಬ ಛಲ, ಸರಿಯಾದ ಸಮಯಕ್ಕೆಸೂಕ್ತವಾದ ಮತ್ತು ದೃಡವಾದ ನಿರ್ಧಾರ, ನಿರ್ಧಾರವನ್ನು ಪದೇಪದೇ ಬದಲಾಯಿಸದೆ ಇರುವುದು, ದೂರದೃಷ್ಟಿ,ಸಮಯದ ಮತ್ತು ಹಣಕಾಸಿನ ಸಾಕ್ತ ನಿರ್ವಹಣೆ, ಕೆಲಸಗಾರರ ಸೂಕ್ತ ನಿರ್ವಹಣೆ, ನಾಯಕತ್ವದ ಗುಣ, ನಿಖರ ಮಾಹಿತಿ,ಅಷ್ಟು ಸುಲಭವಾಗಿ ಸೋಲನ್ನು ಒಪ್ಪಿಕೊಳ್ಳದ ಗುಣ, ಎಂತಹ ಕಠಿಣ ಪರಿಸ್ಥಿತಿಯಲ್ಲಿಯೂ ಸಹ ಮಾನಸಿಕವಾಗಿದೃಡವಾಗಿರುವುದು, ಸಮಾಜದ ಬಗ್ಗೆ ಪ್ರೀತಿ, ವಿಶ್ವಾಸ, ಎಲ್ಲರೊಂದಿಗೂ ಹೊಂದಿಕೊಂಡುಹೋಗುವ ಗುಣ, ಇತರರಿಗಿಂತಭಿನ್ನವಾಗಿ ಯೋಚಿಸುವ ಗುಣ ಇವೆಲ್ಲವೂ ಇರುವವನು ಮಾತ್ರ ಶ್ರೀಮಂತನಾಗಲು ಅರ್ಹತೆಯನ್ನು ಹೊಂದಿರುತ್ತಾನೆ.

ಲಕ್ಷ್ಮೀ ಪುತ್ರರಾಗುವುದು ಹೇಗೆ?  ಭಾಗ-೭

ಒಂದು ಪ್ರಖ್ಯಾತವಾದ ಪಾದರಕ್ಷೆ ಸಂಸ್ಥೆಯು ತಮ್ಮ ಉತ್ಪನ್ನಗಳನ್ನುವಿವಿಧ ದೇಶಗಳಲ್ಲಿ ವಿಸ್ತರಿಸುವ ಬಯಕೆಯಿಂದಾಗಿ ತಮ್ಮಲ್ಲಿರುವ ಇಬ್ಬರು ಮಾರಾಟ ಪ್ರತಿನಿಧಿಗಳನ್ನುಆಫ್ರಿಕಾ ದೇಶಕ್ಕೆ ಕಳುಹಿಸಿದ್ದರು. ಮೊದಲು ಒಬ್ಬ ಪ್ರತಿನಿಧಿ ಆಫ್ರಿಕಾ ದೇಶದಲ್ಲಿ ಬಂದಿಳಿದಾಗ ಅವನಕಣ್ಣಿಗೆ ಕಂಡದ್ದು ಅವರಲ್ಲಿ ಯಾರೂ ಪಾದರಕ್ಷೆ ಅಥವಾ ಶೂ ಧರಿಸಿಲ್ಲದೆ ಇದ್ದದ್ದು. ಅವನಿಗೆ ಬಹಳ ಭ್ರಮನಿರಸನವಾಯಿತು. ಅವನು ತನ್ನ ಮಾಲೀಕನಿಗೆ ಇಲ್ಲಿಯ ಜನರಿಗೆ ಯಾರಿಗೂ ಪಾದರಕ್ಷೆ/ಶೂ ಧರಿಸುವ ಅಭ್ಯಾಸವಿಲ್ಲ.ಇವರೆಲ್ಲರೂ ಬರೀ ಕಾಲಿನಲ್ಲೇ ಓಡಾಡುವುದು. ಇಲ್ಲಿ ನಾವು ನಮ್ಮ ಕಾರ್ಖಾನೆಯನ್ನು ಸ್ಥಾಪಿಸಿದರೆ ನಮಗೆಬಹಳ ನಷ್ಟವುಂಟಾಗುವುದು. ಇಲ್ಲಿ ನಾವು ಯಾವುದೇ ಕಾರ್ಖಾನೆ ಅಥವಾ ಮಳಿಗೆಯನ್ನು ತೆಗೆಯುವುದು ಬೇಡ ಎಂಬವರದಿಯನ್ನು ಸಲ್ಲಿಸಿದನು.

ಮತ್ತೊಬ್ಬ ಪ್ರತಿನಿಧಿಯು ಆಫ್ರಿಕಾ ದೇಶಕ್ಕೆ ಕಾಲಿಟ್ಟಾಗಅವನಿಗೂ ಕಂಡಿದ್ದು ಅಲ್ಲಿನ ಜನ ಬರೀ ಕಾಲಿನಲ್ಲೇ ಓಡಾದುವುದು. ಇದನ್ನು ಕಂಡು ಅವನಿಗೆ ಅತ್ಯಾಶ್ಚರ್ಯವಾಯಿತು.ಅವನ ಸಂತೋಷಕ್ಕೆ ಪಾರವೇ ಇಲ್ಲದಂತಾಯಿತು. ಕೂಡಲೇ ತನ್ನ ಮುಖ್ಯಸ್ಥನಿಗೆ ಇಲ್ಲಿ ಎಲ್ಲರೂ ಬರೀ ಕಾಲಿನಲ್ಲೇಓಡಾಡುವುದು. ನಾವು ಇಲ್ಲಿ ನಮ್ಮ ಮಳಿಗೆ ಮತ್ತು ಕಾರ್ಖಾನೆಯನ್ನು ಸ್ಥಾಪಿಸೋಣ. ನಾವು ಇಲ್ಲಿಯ ಎಲ್ಲಾಮಕ್ಕಳು/ಗಂಡಸರು/ಹೆಂಗಸರು/ವೃದ್ದರು ಎಲ್ಲರಿಗೂ ಪಾದರಕ್ಷೆಯ ಮಹತ್ವವನ್ನು ತಿಳಿಸೋಣ, ಅವರಿಗೆ ಅದನ್ನುಧರಿಸದರೆ ಆಗುವ ಉಪಯೋಗವನ್ನು ತಿಳಿಯ ಪಡಿಸೋಣ. ನಮ್ಮ ಉತ್ಪನ್ನಗಳನ್ನು ನಾವು ಇಲ್ಲಿ ಅತೀ ಹೆಚ್ಚು ಮಾರಾಟಮಾಡಬಹುದು ಎಂಬ ವರದಿಯನ್ನು ಕಳುಹಿಸಿದನು. ಆ ಸಂಸ್ಥೆಯು ತನ್ನ ಎರಡನೇ ಪ್ರತಿನಿಧಿಯ ಮಾತಿನಂತೆ ಅಲ್ಲಿಒಂದು ದೊಡ್ಡ ಕಾರ್ಖಾನೆ/ದೊಡ್ಡ ಮಳಿಗೆಯನ್ನು ಸ್ಥಾಪಿಸಿ ತಮ್ಮ ವ್ಯಾಪಾರ ವಹಿವಾಟನ್ನು ಇನ್ನೂ ಉತ್ತಮಪಡಿಸಿಕೊಂಡರು ಎಂಬುದನ್ನು ಹೇಳಬೇಕಾಗಿಲ್ಲ ಅಲ್ಲವೇ?

ಹೀಗೆ, ಒಬ್ಬೊಬ್ಬರ ಕಲ್ಪನೆ ಒಂದೊಂದು ರೀತಿಯಲ್ಲಿ ಇರುತ್ತದೆ.ಅದನ್ನು ನಾವು ಹೇಗೆ ವ್ಯವಹಾರದ ದೃಷ್ಟಿಯಲ್ಲಿ ನೋಡುತ್ತೇವೆ ಎಂಬುದು ಮುಖ್ಯ. ಶ್ರೀಮಂತರು ಪ್ರತಿಯೊಂದುವಿಷಯವನ್ನು ಕೂಲಂಕುಷವಾಗಿ ಪರಿಶೀಲಿಸಿ ಎಲ್ಲಿ ತಮ್ಮ ವ್ಯಾಪಾರ ವಹಿವಾಟನ್ನು ವಿಸ್ತರಿಸಲು ಸಾಧ್ಯವೋ,ಅಲ್ಲೆಲ್ಲಾ ವಿಸ್ತರಿಸಲು ಸದಾ ಯೋಚಿಸುತ್ತಿರುತ್ತಾರೆ.  ತಮ್ಮ ಶ್ರೀಮಂತಿಕೆಯನ್ನು ಜತನದಿಂದ ಕಾಪಾಡಿಕೊಳ್ಳುತ್ತಾರೆಮತ್ತು ಅದನ್ನು ಇನ್ನಷ್ಟು ಮತ್ತಷ್ಟು ಬೆಳೆಸಲು ಹಾತೊರೆಯುತ್ತಿರುತ್ತಾರೆ. ಶ್ರೀಮಂತರಿಗೆ ಹಣ ಸಂಪಾದನೆನಿರಂತರ ಪ್ರಕ್ರಿಯೆಯಾಗಿರುತ್ತದೆ. ಹಾಗಾಗಿ ಅವರು ಯಾವಗಲೂ ಶ್ರೀಮಂತರಾಗೇ ಉಳಿಯುತ್ತಾರೆ, ಲಕ್ಷ್ಮೀಪುತ್ರರೆಂದೆನಿಸಿಕೊಳ್ಳುತ್ತಾರೆ.

ಎಲ್ಲಕ್ಕಿಂತ ಮುಖ್ಯವಾಗಿ ಕೇವಲ ಹಣವಿದ್ದರೆ ಮಾತ್ರ ಶ್ರೀಮಂತನೆಂದುಹೇಳಲಿಕ್ಕಾಗುವುದಿಲ್ಲ. ಶ್ರೀಮಂತಿಕೆಯನ್ನು ಅನುಭವಿಸುವುದಕ್ಕೆ ಸಮಯ, ಆರೋಗ್ಯ, ಸಂಸಾರದಲ್ಲಿ ಪ್ರೀತಿ,ವಿಶ್ವಾಸ, ಸುಖ, ನೆಮ್ಮದಿ ಎಲ್ಲವೂ ಜೊತೆಗೂಡಿದಾಗ ಶ್ರೀಮಂತಿಕೆಗೆ ನಿಜವಾದ ಅರ್ಥ ಬರುತ್ತದೆ. ತಾಯಿಲಕ್ಷಿ ದೇವಿಯ ಕೃಪಾಕಟಾಕ್ಷ ಎಲ್ಲರಿಗೂ ದೊರೆಯುವಂತಾಗಲಿ ಎಂಬು ಸದುದ್ದೇಶದಿಂದ…………(ಮುಗಿಯಿತು)

ಲಕ್ಷ್ಮೀ ಪುತ್ರರಾಗುವುದು ಹೇಗೆ? –ಹೇಳದೇ ಉಳಿದ ಮಾತು:

ನೀವು ಯಾವುದೇ ದೊಡ್ಡ ದೊಡ್ಡ ಶ್ರೀಮಂತರನ್ನು ನೋಡಿ, ಸಾಮಾನ್ಯವಾಗಿಅವರು ಕೇವಲ ಹಣಕಾಸಿನ ವಿಷಯದಲ್ಲಿ ಮಾತ್ರ ಶ್ರೀಮಂತರಾರಿರುವುದಿಲ್ಲ, ಅವರು ದೊಡ್ಡ ದಾನಿಗಳೂ ಸಹ ಆಗಿರುತ್ತಾರೆ.ಸಮಾಜಕ್ಕೆ ಅವರ ಕೊಡುಗೆ ಬಹಳಷ್ಟಿರುತ್ತದೆ. ಈ ಸಮಾಜದಿಂದ ನಾವು ಶ್ರೀಮಂತಿಕೆಯನ್ನು ಪಡೆದಿದ್ದೇವೆ,ಸಮಾಜಕ್ಕೆ ನಾವು ಏನಾದರೂ ಕೊಡಬೇಕೆಂಬ ಬಯಕೆ ಅವರಲ್ಲಿ ಸದಾ ಇರುತ್ತದೆ. ಕಾರ್ಲೋಸ್, ಬಿಲ್ ಗೇಟ್ಸ್,ವಾರನ್ ಬಫೇಟ್, ಲಕ್ಷ್ಮೀ ಮಿಟ್ಟಲ್ ಮುಂತಾದ ಶ್ರೀಮಂತರು, ಇನ್ಫೋಸಿಸ್, ವಿಪ್ರೋ, ಬಜಾಜ್, ಮುಂತಾದಸಂಸ್ಥೆಗಳು ಅವರ ಅದಾಯದಲ್ಲಿ ಇಂತಿಷ್ಟು ಭಾಗವನ್ನು ತೆಗೆದಿರಿಸಿ, ಅದನ್ನು ಸಮಾಜದ ಒಳಿತಿಗಾಗಿ ಬಳಸುತ್ತಿರುತ್ತಾರೆ,ದಾನ ಧರ್ಮಗಳನ್ನು ಮಾಡುತ್ತಿರುತ್ತಾರೆ.  ಬಿಲ್ ಗೇಟ್ಸ್ತಮ್ಮ ೮೦% ಹಣವನ್ನು ಸಮಾಜದ ಓಳಿತಿಗಾಗಿ ಬಳಸಲು ನಿರ್ಧರಿಸಿದ್ದಾರೆ. ಇನ್ನೊಂದು ಮುಖ್ಯವಾದ ವಿಚಾರವೇನೆಂದರೆನಿಮಗೆ ಬೇರೆಯವರಿಗೆ/ಕಷ್ಟದಲ್ಲಿರುವವರಿಗೆ ಸಹಾಯ/ದಾನ/ಧರ್ಮ ಮಾಡುವ ಗುಣವಿದ್ದರೆ ಮಾತ್ರ ನಿಮ್ಮ ಸಂಪತ್ತುವೃದ್ದಿಯಾಗುವುದು.  ನಿಜವಾದ ಶ್ರೀಮಂತನಿಗೆ ಇದರ ಗುಟ್ಟುಗೊತ್ತು.

* * * * * * * *

ಚಿತ್ರಕೃಪೆ : http://www.mumbailocal.net/

 

9 ಟಿಪ್ಪಣಿಗಳು Post a comment
  1. NARASIMHA MURTHY.GT's avatar
    NARASIMHA MURTHY.GT
    ಸೆಪ್ಟೆಂ 7 2012

    tumba chennagidea konegea olleya sandesh iddea e tharada prabhanda vannu ennu prakatisi.

    ಉತ್ತರ
  2. ಎಚ್. ಸುಂದರ ರಾವ್'s avatar
    ಎಚ್. ಸುಂದರ ರಾವ್
    ಸೆಪ್ಟೆಂ 8 2012

    ಶ್ರೀಮಂತರಾಗುವುದು ಯಾಕೆ?

    ಉತ್ತರ
  3. ನಾಗಭೂಷಣ's avatar
    ನಾಗಭೂಷಣ
    ಫೆಬ್ರ 23 2014

    ಲೇಖನ ತುಂಬಾ ಚೆನ್ನಾಗಿ ಬಂದಿದೆ. ಇದೇ ರೀತಿ ಇನ್ನೂ ಅನೇಕ ವಿಷಯಗಳ ಬಗ್ಗೆ ಬರೆಯಿರಿ.

    ಉತ್ತರ
  4. shivakumar's avatar
    shivakumar
    ಜೂನ್ 12 2014

    nice nange thumbane ista aythu . pl idde thara storys na update madi

    ಉತ್ತರ
  5. laxminarayana's avatar
    laxminarayana
    ಮೇ 16 2015

    ಲೇಖನ ತುಂಬಾ ಚೆನ್ನಾಗಿ ಬಂದಿದೆ. ನನಗು ಏನಾದರೂ ಮಾಡಬೇಕೆಂಬ ಚಲ ಬಂದಿದೆ

    ಉತ್ತರ
  6. Manjunathdk's avatar
    Manjunathdk
    ಜನ 27 2016

    Nanu tumba ista patte
    Thank u

    ಉತ್ತರ
  7. devi's avatar
    devi
    ಮಾರ್ಚ್ 12 2016

    ಖಂಡಿತ ನಾನು ಕೂಡ ಈ ಲೇಖನದಲ್ಲಿ ಹೇಳಿರುವ ರೀತಿಯನ್ನ ಅನುಸರಿಸುತ್ತೇನೆ. ಈ ಲೇಖನದಿಂದ ನಾನು ತುಂಬಾ ತಿಳಿದು ಕೊಂಡೆ ದನ್ಯವಾದಗಳು.

    ಉತ್ತರ
  8. ಸಹನ's avatar
    ಸಹನ
    ಸೆಪ್ಟೆಂ 29 2016

    ಇದೊಂದು ಅಧ್ಬುತ ಲೇಖನ ವಿವರಣೆ ತುಂಬಾ ಚೆನ್ನಾಗಿದೆ.

    ಉತ್ತರ
  9. ಮಂಜು's avatar
    ಮಂಜು
    ನವೆಂ 11 2016

    ಅದ್ಭುತ ವಾಗಿದೆ. ಮತ್ತಷ್ಟು ಟಿಪ್ಸ್ ತಿಳಿಸಿ. ಧನ್ಯವಾದಗಳು

    ಉತ್ತರ

Leave a reply to NARASIMHA MURTHY.GT ಪ್ರತ್ಯುತ್ತರವನ್ನು ರದ್ದುಮಾಡಿ

Note: HTML is allowed. Your email address will never be published.

Subscribe to comments