ಚಂದ್ರಮನ ಚಂದ್ರಿಕೆ
– ರಂಜಿತಾ ಅಂಜು
ಅದು ಸುಂದರದ ಆ ಕ್ಷಣ , ಸೂರ್ಯನು ತನ್ನ ಕೋಪವನ್ನು ಇಂಗಿಸುತ್ತಾ , ನೆಮ್ಮದಿಯ ನಿಟ್ಟಿಸಿರು ಬಿಡುತ್ತಾ , ವನ್ಯ ಸಂಕುಲಗಳ ಮೇಲೆ ಪ್ರೀತಿ ತೋರುತ್ತಾ , ಆಗಸದಲ್ಲಿ ಮರೆಯಾಗುತಿದ್ದನು. ಹಕ್ಕಿಗಳು ಚಿಲಿಪಿಲಿ ಸದ್ದಿನೊಂದಿಗೆ , ತಮ್ಮ ಜೊತೆಗಾರರನ್ನು ಸೇರಲು ಗುಂಪಿನೊಂದಿಗೆ ತಮ್ಮ ತಮ್ಮ ಗೂಡನ್ನು ತಾವು ಸೇರಿಕೊಳ್ಳುತ್ತಿದ್ದವು…. ತಂಪನೆಯ ತಂಗಾಳಿ ಇಡೀ ಪ್ರಕೃತಿಗೆ ಉಲ್ಲಾಸದ ಅನುಭವ ನೀಡುತಲಿತ್ತು…
ಆ ರವಿಯ ಶಾಂತತೆಗೆ ಆಗಸವು ನಾಚಿ ತನ್ನ ಹೊಂಬೆಳಕಿನ ಮುಡಿಯಲ್ಲಿ ಕೆಂಪನೆಯ ಗುಲಾಬಿಯನ್ನು ಮುಡಿದಂತೆ , ಇಡೀ ಆಗಸದಲ್ಲಿ ಹಲವು ಬಣ್ಣಗಳ ರಂಗಿನಾಟದಲ್ಲಿ ಮುಳುಗಿತ್ತು. ನಿಸರ್ಗವು ತನ್ನ ನಲ್ಲನು ಅವಳನ್ನು ನೋಡಲು ಬರುತಿಹನೆಂದು ಖಾತರಿ ಪಡಿಸಿ , ತನ್ನನ್ನು ತಾನು ಸಿಂಗರಿಸಿಕೊಳ್ಳಲು ನಿರತಳಾದಳು….
ಹಚ್ಚ ಹಸಿರಿನ ರೇಶಿಮೆ ಸೀರೆಯ ಉಟ್ಟು , ಮುಡಿಯಲ್ಲಿ ಸುಗಂಧ ಬರಿತ ಮಲ್ಲಿಗೆಯ ಮುಡಿದು , ಪಳಪಳನೆ ಹೊಳೆಯುವ ಬಿಂದಿಯನ್ನು ಹಣೆಯಲ್ಲಿ ಇರಿಸಿ , ಘಳಘಳನೆ ಸದ್ದನು ಮಾಡುವ ಬಲೆಯನ್ನು ಧರಿಸಿ,ಗಲ್ ಗಲ್ ಎನ್ನುವ ಕಾಲ್ಗೆಜ್ಜೆಯನ್ನು ತನ್ನ ಪಾದಗಳಿಗೆ ಅಲಂಕರಿಸಿ,ನಾಚಿಕೆಯೆಂಬ ಆಭರಣವನ್ನು ತನ್ನ ಮೊಗದಲ್ಲಿ ಸಿಂಗರಿಸಿ , ತನ್ನ ನಲ್ಲನ ಆಗಮನಕ್ಕಾಗಿ ಬಾಗಿಲ ಬಳಿಯಲ್ಲಿಯೇ ಕಾಯುತ್ತ ನಿಂತಿದ್ದಳು.ಅವಳ ಸಡಗರದ ಸಂಭ್ರಮಕ್ಕೆ ಎಲ್ಲೆಯೇ ಇರದಂತಾಗಿತ್ತು. ಅವಳ ಮುಗುಳ್ನಗೆಯ ಸದ್ದಿನಲ್ಲಿ ಇಂಪಾದ ಹಾಡೊಂದು ತೇಲಿ ಬಂತು.ಅವಳ ಮನದಲ್ಲಿ,ಅವನ ನೆನಪುಗಳ ಪುಳಕಗಳೇ ತುಂಬಿ ತುಳುಕುತ್ತಿತ್ತು.. ಅವಳ ಕಣ್ಣಂಚಿನಲ್ಲಿ ಕಾತುರತೆಯು ಎದ್ದು ತೋರುತಿತ್ತು….
ಇವಳ ಈ ಎಲ್ಲಾ ಆವಭಾವಗಳನ್ನು ದೂರದಿಂದಲೇ ಗಮನಿಸುತ್ತಾ,ನಿಸರ್ಗದ ನಲ್ಲನು ಮುಗುಳ್ನಗೆಯೊಂದಿಗೆ ಬರುತಿದ್ದನು. ಇವರಿಬ್ಬರ ಈ ಸಂಗಮವನ್ನು ನೋಡಲು ಇಡೀ ಪ್ರಕೃತಿಯೇ ನಿಶಬ್ಧವಾಗಿತ್ತು.
ನಲ್ಲನು ಇನ್ನೇನು ನಿಸರ್ಗವನ್ನು ಸೇರುವ ಹೊತ್ತಿಗೆ,ನಿಸರ್ಗಳಿಗೆ ಆತಂಕದ ಭಯವು ಕಾಡಿತು. ಅವಳ ಹೃದಯದ ಬಡಿತ ಏರಿಳಿತಗಳೊಂದಿಗೆ ಕೂಡಿತ್ತು. ಅವಳ ದುಂಡನೆಯ ಮೊಗದಲ್ಲಿ , ಭಯವು ಇಣುಕಿ ನೋಡುತ್ತಿತ್ತು .ಅವಳ ತುಟಿಗಳಿಂದ ಮಾತೇ ಹೊರಡದಂತಾಗಿತ್ತು.ಅವಳು ನೆಲವನ್ನೇ ನೋಡುತ್ತಾ ಗಂಭೀರವಾಗಿ ಬಿಟ್ಟಳು. ಇವೆಲ್ಲಾವನ್ನು ಗಮನಿಸಿದ ನಲ್ಲನು ಮೆಲ್ಲನೆ ನಿಸರ್ಗದ ಬಳಿ ಬಂದು ಅವನ ಕೈಯ ಬೆರಳುಗಳಿಂದ ನೆಲವನ್ನೇ ದಿಟ್ಟಿಸಿ ನೋಡುತ್ತಾ ಇದ್ದ ಅವಳ ಸುಕೋಮಲ ಮೊಗವನ್ನು ಎತ್ತಿ ಇಡಿದನು… ಭಯದಲ್ಲಿ ಅವಳ ಗಲ್ಲವು ಕೆಂಪನೆಯ ರಂಗು ಹಚ್ಚಿದಂತೆ ಕೆಂಪಾಗಿ ಇದ್ದವು.
ನಲ್ಲನು ಅವಳನ್ನು ಸಮಾಧಾನಿಸುವ ನಿಟ್ಟಿನಲ್ಲಿ,ಅವನ ರಸಿಕತೆಯನ್ನು ತೋರಿದನು.ಅವಳು ಅವನಿಂದ ದೂರ ಸರಿದು ಹೋಗುತಿದ್ದಳು,ಇವನು ಇನ್ನು ಹತ್ತಿರ ಹತ್ತಿರಕ್ಕೆ ಹೋಗುತಿದ್ದನು.ಒಮ್ಮೆಗೆ ಅವಳು ದಿಕ್ಕೇ ತೋರದೆ ನಿಂತುಬಿಟ್ಟಳು.ಹಿಂದೆ ಇನ್ನು ಸರಿದು ಹೋಗಲು ದಾರಿಯೇ ಇರಲಿಲ್ಲ. ಆ ಹೊತ್ತಲ್ಲಿ ನಲ್ಲನು ಮುಗುಳ್ನಕ್ಕಿ, ಅವಳನ್ನು ಬಿಗಿದಪ್ಪಿ ತೆನ್ನಡೆಗೆ ಸೆಳೆದು ಕೊಂಡನು. ಅವನು, ಭಯವೇಕೆ ? ಓ ಚೆಲುವೆ .. ನಾನು ನಿನ್ನ ನಲ್ಲನಲ್ಲವೇ…?? ನಾಚಿಕೆಯ ಬಿಡು ನನ್ನೋಲವೇ , ನಾನು ನಿನ್ನ ಇನಿಯ ನಲ್ಲವೇ … ಎಂದು ಅವಳನ್ನು ತನ್ನ ಇಂಪಾದ ಮಾತುಗಳಲ್ಲಿ ಹಾಗೂ ಮೋಹಕ ನಗೆಯೊಂದಿಗೆ ಸಂತೈಸಿದನು. ನಿಸರ್ಗಳು ಅವನ ಮಾದಕ ಮಂದಹಾಸಕ್ಕೆ ನಿರ್ಭಯ ದಿಂದ ಶರಣಾದಳು. ಅವನ ತೋಳಲ್ಲಿ ತನ್ಮಯತೆಯಿಂದ ನಿಟ್ಟಿಸುರು ಬಿಟ್ಟಳು.ಅವನ ಎದೆಯ ಕವಚದ ಮೇಲೆ,ತನ್ನ ಶಿರವನ್ನು ಇತ್ತು ಆತ್ಮೀಯ ಆನುರಾಗದಲ್ಲಿ ಸೇರಿದ್ದಳು.
ಆ ಕ್ಷಣದಲ್ಲಿ ಅವಳ ಮುಂಗುರುಳು ತಂಗಾಳಿಯ ಸಂಗೀತಕ್ಕೆ,ನೃತ್ಯ ಮಾಡುತಲಿತ್ತು.ಅವಳ ಪಾದದ ಬೆರಳುಗಳು ನೆಲದ ಮೇಲೆ ಸುಂದರವಾದ ಚಿತ್ತಾರವನ್ನು ರಚಿಸುತಲಿತ್ತು. ಅವಳ ಕೈಯ ಬೆರಳುಗಳು ಸೀರೆಯ ಅಂಚಿನೊಂದಿಗೆ ತುಂಟಾಟ ಆಡುತಲಿತ್ತು. ನಿಸರ್ಗಳು ತನ್ನ ಅಂಜಿಕೆಯನ್ನು ಸರಿಸಿ ಅವನ ನೋಟದಲ್ಲಿ,ತನ್ನ ನೋಟವನ್ನು ಜೊತೆಗೂಡಿಸಿದಳು.ನಲ್ಲನು ನಿಸರ್ಗಳ ಸೌಂದರ್ಯವನ್ನು ಸವಿಯುತ್ತಾ,ಅವಳ ಮುಗ್ದತೆಯನ್ನು ಅರಿಯುತ್ತಾ,ಅವಳ ಹಣೆಯ ಮೇಲೆ ಆಪ್ತ ಸ್ನೇಹಿತನಂತೆ ಚುಂಬಿಸಿ,ಅವಳ ಮನದಲ್ಲಿ ಪ್ರೀತಿಯೆಂಬ ಚಿಗುರನ್ನು ಬೆಳೆಸಿದನು.ನಲ್ಲನು ಅವಳನ್ನು ಚೇಡಿಸುವಲ್ಲಿ ಸಂತಸ ಪಡುತಿದ್ದನು.ಅವರಿಬ್ಬರೂ ಎಲ್ಲವನ್ನು ಮರೆತು ತುಂಟಾಟ ಮಾಡುತ್ತಾ ಮೈ ಮರೆತಿದ್ದರು. ಕೆಲವು ಸಮಯದ ನಂತರ ನಲ್ಲನು ಹೇಳಿದನು , ಪ್ರಿಯೆ ನಾನಿನ್ನು ಹೊರಡಬೇಕಾಗಿದೆ ಎಂದು. ಆಗ ನಿಸರ್ಗಳ ಮನದಲ್ಲಿ ಬಿಟ್ಟು ಹೋರಡುವನಲ್ಲ ಎಂಬ ನೋವು ಕಾಡುತಿತ್ತು. ನಲ್ಲನು ಸಹ ಅವಳನ್ನು ಬಿಟ್ಟು ಹೊರಡಲು ಮನಸಿಲ್ಲದ ಮನಸ್ಸಿನಿಂದ ತಯಾರಾದನು.
ಮತ್ತೆ ಶಾಂತವಾಗಿದ್ದ ಪ್ರಕೃತಿಯಲ್ಲಿ ನವ ಚೈತನ್ಯ ತುಂಬಿದಂತೆ ಹಕ್ಕಿಗಳ ಕಲರವ ಸದ್ದಿನೊಂದಿಗೆ,ರವಿಯು ಆಗಸದಲ್ಲಿ ಮತ್ತೆ ಮರು ಹುಟ್ಟಿನೊಂದಿಗೆ,ನಿಧಾನಗತಿಯಲ್ಲಿ ಮರಳುತಿದ್ದನು.ನಿಸರ್ಗಳ ನಲ್ಲನು ನಿಸರ್ಗಳನ್ನು ಬಿಟ್ಟು ಅವಳಿಂದ ದೂರ ಸರಿದು ಹೋಗುತ್ತಾ ಹೋಗುತ್ತಾ ಕಣ್ಮರೆಯಾದನು. ನಿಸರ್ಗಳು ಅವನ ವಿರಹದಲ್ಲಿಯೇ ಮತ್ತೆ ಅವನ ಆಗಮನಕ್ಕಾಗಿ ಕಾಯುತ್ತಾ,ತವಕದಲ್ಲಿಯೇ ತನ್ನ ನಿತ್ಯ ದಿನಚರಿಯ ಪ್ರಾರಂಭದಲ್ಲಿ ಒಲ್ಲದ ಮನಸ್ಸಿನಿಂದ ನಿರತಲಾದಳು….
ಓದುಗರೇ ಇಲ್ಲಿ ನಿಮಗೊಂದು ಪ್ರಶ್ನೆ :
ಈ ಲೇಖನದಲ್ಲಿ ನಿಸರ್ಗ ಹಾಗೂ ನಲ್ಲನ ಪಾತ್ರದಲ್ಲಿ ಮೂಡಿ ಬಂದವರು ಯಾರು ಯಾರು ಎಂದು ನೀವು ಉಹಿಸಬಲ್ಲಿರ….????
ಇಂತಿ ನಿಮ್ಮ ನಲ್ಮೆಯ
ನೆನಪಿನ ನಲ್ಲೆ ಸ್ವಪ್ನ.
ಚಿತ್ರ ಕೃಪೆ : ಫ಼್ರಿವೆಬ್ಸ್.ಕಾಂ





super ranju keep it up………..
Dhanyavaadagalu Vidhya.
Nice writing ranju,,,,, the answer is ” the moon ” right..?
Thanks manju. ya ur answer is correct.
supperrrr kano
Thanks yashu.
ಲೇಖನ ತುಂಬಾ ಚೆನಾಗಿದೆ ,,,,
ನಿಮ್ಮ ಅನಿಸಿಕೆ ನಿಜಕ್ಕೂ ಚೆಂದವಾಗಿದೆ.
ಧನ್ಯವಾದಗಳು.
ಧನ್ಯವಾದಗಳು. Avin
Ranju really so nice of u..
Nimma e kadambari nanna manasina savira nenapugalanna nenapisitu, nisargada olanatavannu nivu bahala sundaravagi, odugara mana seliyuvanthe varnisiddira..
Nimma prasege uttara CHANDRA hagu AKASHA irabahudendu nanna anisike..
Nimma e prayathna sada hege irali..
ALL THE BEST NALMEYA SWAPNA..
I’m expecting more from YOU..
By Naresh.G.R (NGR)
ಧನ್ಯವಾದಗಳು ನರೇಶ್. ನಿಮ್ಮ ಈ ಮೆಚ್ಚುಗೆ ಹಾಗೂ ಪ್ರೋತ್ಸಾಹ ಕಂಡು ತುಂಬಾ ಸಂತೋಷ ವಾಯಿತು.
Padagala joodane tumba chennagide kanda keep it up
Thanks venu chikku.
hi
nimma ee article nange thumba andhre thumba ishta aythu fnd…………….
adhesht kalpanegalna thumbi padhagalna bardhidhira really so sweet of u 🙂
innashtu heege barithiri wish u good luck…………
niv bareyo matthashtu article na odhoke naa kaythirthini…………