ವಿಷಯದ ವಿವರಗಳಿಗೆ ದಾಟಿರಿ

ಸೆಪ್ಟೆಂಬರ್ 26, 2012

7

ಅತಿರೇಕದ ಅವೆರಡರ ನಡುವೆ ಒಂದು ಮಧ್ಯ ಮಾರ್ಗವಿದ್ದೇ ಇದೆ!

‍ನಿಲುಮೆ ಮೂಲಕ

ಬೇರೆ ಬೇರೆ ಕಾರಣಗಳಿಗೆ ಅವರನ್ನು ವಿರೋಧಿಸುವವರು ಕೂಡ ತಮ್ಮೊಳಗೆ ಒಮ್ಮೆ ‘ಎಷ್ಟು ಚಂದ ಬರಿತಾನ್ರಿ’ ಅನ್ನುವಂತೆ ಬರೆದು ಸೈ ಅನ್ನಿಸಿಕೊಳ್ಳುವುದು ರವಿ ಬೆಳಗೆರೆ ಅವರ ಬರವಣಿಗೆಯ ಶೈಲಿ ಮತ್ತು ಶಕ್ತಿ.

“ಯಾವುದೇ ಜಾತಿ,ಮತ,ತತ್ವಗಳಿಗೆ ಗಂಟು ಬೀಳದೆ, ಎಡ-ಬಲ ಪಂಥೀಯರ ನಡುವೆ ಸಿಕ್ಕಿಕೊಳ್ಳದೆ,ಯಾವುದೇ ಮತ್ತು ಯಾರದೇ ಮರ್ಜಿಗೇ ಬೀಳದೆ ಅನ್ನಿಸಿದ್ದನ್ನು ನೇರವಾಗಿ ಹೇಳುವ ಆ ಮೂಲಕ ಯಾವ ಗುಂಪಿಗೂ ಸೇರದೆಯೆ ಸ್ವತಂತ್ರವಾಗಿ ಯೋಚಿಸುವ ಬಯಕೆ ನಮ್ಮದು. ಅಷ್ಟಕ್ಕೂ ’ಸತ್ಯ’ ಅನ್ನುವುದು ಎಡ-ಬಲ ಪಂಥದ ಆಸ್ತಿಯೇನು ಅಲ್ಲವಲ್ಲ.ಅದು ಈ ಇಬ್ಬರ ನಡುವೆಯು ಸಿಲುಕದೆ ತನ್ನ ಪಾಡಿಗದು ಯಾವುದೋ ಮೂಲೆಯಲ್ಲಿ ನಿರ್ಲಿಪ್ತವಾಗಿರುತ್ತದೆ” ಅನ್ನುವ ನಿಲುಮೆಯ ನಿಲುವಿಗೆ ಪೂರಕವಾಗಿರುವಂತ ಬೆಳಗೆರೆ ಅವರ ಈ ಬರಹ ನಿಲುಮೆಯ ಓದುಗರಿಗಾಗಿ – ನಿಲುಮೆ

=================================================================================

ರವಿ ಬೆಳಗೆರೆ

ಆಟ ಗೆದ್ದಿತಾ?
ನಾವು ಆಡೋಕೆ ಬಂದಿದ್ವಿ ಅನ್ನುತ್ತಾರೆ.
ಆಟ ಸೋತಿತಾ?

ಏಹ್, ಸುಮ್ನೆ ನಾವು ನೋಡೋಕೆ ಬಂದಿದ್ವಿ ಅಂತಾರೆ ಚನ್ನವೀರ ಕಣವಿ ಮತ್ತು ಶಿವರುದ್ರಪ್ಪ ಎಂದು ತಮಾಷೆ ಮಾಡುತ್ತಿದ್ದರು ಚಂದ್ರಶೇಖರ ಪಾಟೀಲರು. ಅವತ್ತಿಗೆ ಕಣವಿ ಮತ್ತು ಶಿವರುದ್ರಪ್ಪನವರನ್ನು ಸಮನ್ವಯ ಕವಿಗಳು ಎಂದೇ ಕರೆಯುತ್ತಿದ್ದರು. ಒಂದು ಕಡೆ ಸಂಪ್ರದಾಯಬದ್ಧವಾದ ನವೋದಯ, ರಮ್ಯ, ನವ್ಯ ಕಾವ್ಯಗಳಿದ್ದವು. ಇನ್ನೊಂದು ಕಡೆ ಕೈಯಲ್ಲಿ ಕಲ್ಲು ಹಿಡಿದು ನಿಂತ ದಲಿತ-ಬಂಡಾಯ ಕಾವ್ಯವಿತ್ತು. ಸಹಜವಾಗಿಯೇ ಎರಡರ ಮಧ್ಯೆ ಹಾಕ್ಯಾಟ. ಈ ಹಂತದಲ್ಲಿ “ಸಮನ್ವಯ”ವೆಂಬ ಮಾತಾಡಿದವರು ಕಣವಿ ಮತ್ತು ಶಿವರುದ್ರಪ್ಪ.

ಈ ಕೆಲಸ ಕೇವಲ ಇತ್ತೀಚಿನದಲ್ಲ. ಕಾಲಾಂತರದಿಂದ ಜಗತ್ತಿನ ಎಲ್ಲ ಕ್ಷೇತ್ರಗಳಲ್ಲೂ ನಡೆಯುತ್ತ ಬಂದಿದೆ. ಬಹುಶಃ ಇದಕ್ಕೆ ‘ಮಧ್ಯಪಥ‘ ಎಂಬ ಅಧಿಕೃತ ಹೆಸರಿಟ್ಟವನು ಬುದ್ಧ.
ನಿಮ್ಮ ಪಕ್ಕದ ಮನೆಯವರು ನಿಮ್ಮ ಮನೆಯ ಅಂಗಳದೊಳಕ್ಕೆ ದಿನನಿತ್ಯ ಕಸ ಹಾಕುತ್ತಿರುತ್ತಾರೆ. ನೀವು ಕಂಪೋಂಡಿನ ಆಚೀಚೆಗೆ ನಿಂತು ಶರಂಪರ ಜಗಳವಾಡುತ್ತೀರಿ. ನಿಮಗೂ ಅವರಿಗೂ ಬೇರೆ ತಕರಾರುಗಳೇ ಇಲ್ಲ. ಅವರ ಮಕ್ಕಳು ಸಂಭಾವಿತರು. ಗೃಹಿಣಿ ಸಭ್ಯೆ. ಬೇರೆ ಯಾವ ತಕರಾರೂ ಇಲ್ಲ. ಆದರೂ ಕಸ ಹಾಕುತ್ತಾರೆ. ನೀವು ಸಿಟ್ಟಿಗೇಳುತ್ತೀರಿ.

One fine day, ಅವರಿಗೆಂದೇ ಒಂದು ಕಸದ ಬುಟ್ಟಿ ನೀವೇ ತಂದು ಇಟ್ಟುಬಿಡಿ. ಜಗಳ ತಂತಾನೆ ನಿಂತುಹೋಗುತ್ತದೆ. ಇಷ್ಟೇ ಸರಳವಾದ ವಿಷಯವನ್ನು ಬುದ್ಧ ಇಡೀ ಬದುಕಿನ ಪ್ರತಿಭಟನೆ, ಘಟನೆ, ಸಂಘಟನೆಗಳಿಗೆ ಬೋಧಿಸುತ್ತ ಬಂದ. Follow the middle path.

ಕೆಲವೊಮ್ಮೆ extreme ನಿಲುವುಗಳನ್ನು ತಳೆಯಬೇಕಾಗುತ್ತದೆ. ಅದು ಅನಿವಾರ್ಯ. ಅದರಲ್ಲೂ ನಮ್ಮ ಮೇಲೆ ಅವಮಾನವಾದಾಗ, ವಿನಾಕಾರಣದ ಹಲ್ಲೆಗಳಾದಾಗ, ಚಾರಿತ್ರ್ಯವಧೆಯಾದಾಗ ಎದ್ದುನಿಂತು ಎದುರಾಳಿಯ ಭಾಷೆಯಲ್ಲಿಯೇ-ಉತ್ತರ ಹೇಳಬೇಕಾಗುತ್ತದೆ. ಆ ಕೆಲಸವನ್ನು ನಾನು ಕಾಲ ಕಾಲದಿಂದ ಮಾಡುತ್ತ ಬಂದಿದ್ದೇನೆ.

ಆದರೆ “ತುಮ್ಹೀ ಅಪನೆ ರಾಹ್ ಚಲ್ ಸಕೋ ತೋ ಚಲೋ” ಎಂಬ ಕವಿಯೊಬ್ಬರ ಮಾತು ಓದಿ ಮನನ ಮಾಡಿಕೂಂಡ ಮೇಲೆ ನಾನು ನನ್ನ ನಿಲುವು ಬದಲಿಸಿಕೊಂಡಿದ್ದೇನೆ.

ರಸ್ತೆಗಳಲ್ಲಿ ನಡೆಯುವ ಜಗಳಗಳನ್ನು ಗಮನಿಸಿ. ಇಬ್ಬರೂ ವಿಪರೀತ ವೇಗದಲ್ಲಿ ಬಂದಿರುತ್ತಾರೆ. ಇನ್ನೇನು ಡಿಕ್ಕಿ ಸಂಭವಿಸುವ ಘಳಿಗೆ. ಆದರೆ ಅಪಘಾತವೇನೂ ಆಗಿರುವುದಿಲ್ಲ. ಎರಡೂ ಗಾಡಿಯವರು ಇಳಿದು ಪರಸ್ಪರರನ್ನು ಬಯ್ಯತೊಡಗಿರುತ್ತಾರೆ. ಆರಂಭವಾಗುವ ಮಾತೇ “ನಿನ್ನಮ್ಮನ್…ಅಕ್ಕನ್‌”” ಅಂತ. ಅವರ ಅಮ್ಮ-ಅಕ್ಕಂದಿರನ್ನು ಇವರು ನೋಡಿರುವುದಿಲ್ಲ. ಇವರ ಅಮ್ಮ-ಅಕ್ಕನನ್ನು ಅವರು ನೋಡಿರುವುದಿಲ್ಲ. ಅವರನ್ನು ಬಯ್ಯಬೇಕೆಂಬ ಉದ್ದೇಶವೂ ಇರುವುದಿಲ್ಲ. ಬಯ್ಯುವುದು ಅವರ cultureಕೂಡ ಆಗಿರುವುದಿಲ್ಲ.

ಅಷ್ಟೆಲ್ಲ ರಗಳೆಯ ಬದಲು ಎರಡೂ ಗಾಡಿ ಪಕ್ಕಕ್ಕೆ ನಿಲ್ಲಿಸಿ ಪರಸ್ಪರರಿಗೆ sorry ಹೇಳಿ, ಒಬ್ಬರ ಪೈಕಿ ಇನ್ನೊಬ್ಬರು ಚಿಕ್ಕವರಿದ್ದರೆ ಎರಡು ಮಾತಿನ advice ಹೇಳಿ, ವಿಸಿಟಿಂಗ್ ಕಾರ್ಡ್ ಇದ್ದರೆ ಒಬ್ಬರಿಗೊಬ್ಬರು ಕೊಟ್ಟು ಕೈಕುಲುಕಿ ಹೊರಟುಬಿಟ್ಟರೆ ಅಲ್ಲಿಗೆ ಮುಗಿದೇ ಹೋಗುತ್ತದೆ ಬೀದಿಜಗಳ. ಆದರೆ ಹೆಚ್ಚಿನ ಸಲ ಈ ತರಹದ ಕ್ಷುಲ್ಲಕ ಜಗಳಗಳು road rageಗೆ, ಅನವಶ್ಯಕ ಕೊಲೆಗಳಿಗೆ ಕಾರಣವಾಗಿಬಿಡುತ್ತವೆ.

ಹಿಂದೆಯೂ ಹೇಳಿದ್ದೇನೆ: ನಾನು ಥೇಟರಿನಲ್ಲಿ ಟಿಕೀಟು ಕೊಂಡು ನೋಡಿದ ಕೊನೆಯ ಸಿನೆಮಾ ಅಂದರೆ Titanic. ಹತ್ತು ವರ್ಷಗಳ ಮೇಲಾಯಿತು. ಆಗ “ಪತ್ರಿಕೆ” ಭಯಂಕರ ಉಗ್ರವಾಗಿ ನಡೆಯುತ್ತಿತ್ತು. ಶತ್ರುಗಳಿದ್ದರು. ಬಲಿಷ್ಠರಿದ್ದರು. ಥೇಟರಿಗೆ ಹೋಗಿ, ಗಾಡಿ ಇಳಿದು, ಟಿಕೀಟು ತೆಗೆದುಕೊಂಡು ಒಳ ಹೊಕ್ಕರೆ ಬರೋಬ್ಬರಿ ಮೂರು ತಾಸು. ನನಗೆ ಆಗದವನು ನನ್ನ ಮೇಲೆ ಹಲ್ಲೆ ಮಾಡಲು ಸಿದ್ಧತೆ ಮಾಡಿಕೊಳ್ಳಲು ಅಷ್ಟು ಹೊತ್ತು ಸಾಕು. ಅರಿ ವೀರ ಭಯಂಕರನಂತೆ ಬದುಕುವುದೊಂದೇ ಅಲ್ಲ; ನಮ್ಮ ಪ್ರಾಣದ ಬಗ್ಗೆ ನಾವು ಎಚ್ಚರ ವಹಿಸಬೇಕು. ಹೀಗಾಗಿ ಥೇಟರುಗಳಿಗೆ ಹೋಗುವುದು ಬಿಟ್ಟೆ. ಅದಕ್ಕಿಂತ ಹೆಚ್ಚಾಗಿ, ಮೂರು ತಾಸು ಏನೂ ಮಾಡದೆ ಒಂದು ಕಡೆ ಕೂತು ಸಿನೆಮಾ ನೋಡುವುದು ನನಗೆ ಆಗದ ಮಾತು. ಬದಲಿಗೆ ತುಂಬ ಒಳ್ಳೆಯ ಸಿನೆಮಾ ಅಂದರೆ ಅದರ ಸಿಡಿ ತರಿಸಿ, ಬಿಡಿ ಬಿಡಿಯಾಗಿ ನನಗೆ ಬಿಡುವಿದ್ದಾಗ ನೋಡಿ ಮುಗಿಸಿಬಿಡುತ್ತೇನೆ.

ನಿಜ, ನನಗೆ ಹಣ ಬಂತು. ಪತ್ರಿಕೋದ್ಯಮದ್ದು ಯಾವ ನೆಚ್ಚಿಗೆ. ಬೇರೆ ಯಾವುದಕ್ಕಾದರೂ invest ಮಾಡು ಅಂದರು ಗೆಳೆಯರು. ಏನು ಮಾಡಲಿ? ಏನು ಮಾಡಿದರೂ ಅದಕ್ಕೆ ನೆರವಾಗಬಲ್ಲ ಗೆಳೆಯರಿದ್ದರು: ಹಣವೂ ಸೇರಿದಂತೆ. ಮೈನಿಂಗ್ ಇತ್ತು. ಸಾವಿರಾರು ಕೋಟಿ ವ್ಯವಹಾರ. ಬೆಳೆದ ಮಗ ಇದ್ದಾನೆ. ಅಳಿಯಂದಿರಿದ್ದಾರೆ. ಕುಳಿತಲ್ಲೇ real estate ಮಾಡಬಹುದಿತ್ತು. ಹೀಗೆ ಸಾವಿರ ದಾರಿ ಇದ್ದವು. ಆದರೆ ಅಂತಿಮವಾಗಿ ಆಯ್ಕೆ ಮಾಡಿಕೊಂಡದ್ದು middle path: ಪ್ರಾರ್ಥನಾ. ಅದನ್ನೇ residential ಮಾಡು. ಕಾಫಿ ಪ್ಲಾಂಟರುಗಳಿರುವ ಕಡೆ ಮಾಡು. ಹೇರಳ ಲಾಭದ ದಾರಿ ಇದೆ.

No, ನನ್ನದು middle path. ಫೀಜು ಬರಲಿ, ಸಂಬಳಗಳಿಗೆ ಹೋಗಲಿ, ಡೊನೇಷನ್ ಬಂತೆಂದರೆ ಸಂಸ್ಥೆಯೊಳಕ್ಕೆ bad blood ಬಂದಂತೆ. ಒಂದು ಬಡ ಮಗುವಿಗೆ ಡೊನೇಷನ್ ಕೊಟ್ಟು ಓದಿಸುತ್ತೇನೆ ಅಂತ ಯಾರಾದರೂ ಅಂದರೆ ನಾನು ಮೊದಲು ಕೇಳುವ ಪ್ರಶ್ನೆ: ನೀವು ಏನು ಮಾಡ್ತೀರಿ? ಮೈನಿಂಗ್, ರಿಯಲ್ ಎಸ್ಟೇಟ್ ಇತ್ಯಾದಿಗಳ ಮಂದಿಯಾದರೆ ನಿಮ್ಮ ಉದ್ದೇಶ ಎಷ್ಟೇ ಒಳ್ಳೆಯದಾದರೂ ಆ ಹಣ ಬೇಡ.

ಸಂಘರ್ಷಗಳಿದ್ದಾಗ ನಿಮ್ಮ ತಾಕತ್ತಿನ gun powder ಎಲ್ಲ ಬಳಸಿ ಶತ್ರುವಿನೊಂದಿಗೆ ಬಡಿದಾಡಿಬಿಡಿ. ಬಡಿದಾಡುವುದನ್ನು avoid ಮಾಡಲು ಸಾಧ್ಯವೇ? ಮೊದಲು ಆ ಪ್ರಯತ್ನ ಮಾಡಿ. ಅದು ಸಾಧ್ಯವೇ ಆಗದಿದ್ದಾಗ ಸಂಘರ್ಷಕ್ಕೆ ಇಳಿಯಿರಿ. ನಿಮ್ಮ ಪ್ರತಿ ಹತ್ಯಾರ ಬಳಸಿಕೊಳ್ಳಿ. ಶತ್ರುವನ್ನು ಸದೆ ಬಡಿದುಬಿಡಿ. ಅಲ್ಲೂ ಅಷ್ಟೆ ನಿರ್ನಾಮ ಮಾಡುತ್ತೇನೆಂದು ಹೊರಡಬೇಡಿ. ಇಲ್ಲ, ಇಸ್ರೇಲಿನ ಪದ್ಧತಿ ಅಳವಡಿಸಿಕೊಳ್ಳಿ: ನೀನು ಕೆನ್ನೆಗೆ ಹೊಡೆದೆಯಾ? ನಾನು ನೀನಿರುವ ಜಾಗಕ್ಕೆ ಬಂದು “ಕೆನ್ನೆಗೆ”, ಕೆನ್ನೆಗಷ್ಟೆ ಬಡಿಯುತ್ತೇನೆ. Nothing more nothing less.

ಇಸ್ರೇಲ್‌ನ ಅಧ್ಯಕ್ಷರದೊಂದು ಭಾಷಣ ಕೇಳುವ ಸಂದರ್ಭ ಬಂದಿತ್ತು. ”ಈ ಪ್ರಪಂಚಕ್ಕೆ ಭಾರತ ನೀಡಿದ ಅತಿ ದೊಡ್ಡ ಕೊಡುಗೆಯೆಂದರೆ ಮಹಾತ್ಮಾ ಗಾಂಧಿ. A great theoretician. ಅದನ್ನು ಜಾರಿಗೆ ತಂದದ್ದು ಜವಾಹರಲಾಲ್ ನೆಹರೂ. ಏಕೆಂದರೆ ಅವರು middle path ಅನುಸರಿಸಿದರು. ಆದರೆ ಮನುಕುಲಕ್ಕೆ ಶಾಪದಂತೆ ಹುಟ್ಟಿದ್ದು ಪ್ರವಾದಿ ಪೈಗಂಬರ್!” ಅಂದರು.

ಕೊನೆಯ ಮಾತು ನಾನು ಒಪ್ಪಲಿಕ್ಕಿಲ್ಲ. ಆದರೆ middle path ಯಾವತ್ತೂ ಮನುಕುಲಕ್ಕೆ ಸಂತೋಷ ಕೊಟ್ಟಿದೆ.

* * * * * * *

 

 

 

ಕೃಪೆ : ಹಾಯ್ ಬೆಂಗಳೂರು

ಚಿತ್ರ ಕೃಪೆ : http://www.shivuphotography.com

Read more from ಲೇಖನಗಳು
7 ಟಿಪ್ಪಣಿಗಳು Post a comment
  1. gurunath boragi's avatar
    gurunath boragi
    ಸೆಪ್ಟೆಂ 26 2012

    naanu avara barahagala kattaa abhimaani..ee munche idannu odiddene.mottomme oduvanthe madiddakke dhanyavaadagalu..

    ಉತ್ತರ
  2. PRAVEEN ( PRAKUM )'s avatar
    PRAVEEN ( PRAKUM )
    ಸೆಪ್ಟೆಂ 26 2012

    ನಾನು ಬುಧನ ಬಕ್ತ್ಹನಾಗಿಧು ನೀವು ಮಧ್ಯಪಥಧ ಬಗ್ಗೆ ತುಂಬಾ ಸುಂದರವಾಗಿ ವರ್ನಿಸಿರೋಧು ತುಂಬಾ ಮನಸಿಗೆ ಕುಶಿ ತಂಧು ಕೊಟ್ಹಿಧೆ …… ಈಗೆ ಸಧಾ ಬರಿತಿರಿ

    ಉತ್ತರ
  3. ಸಂತೋಷ್ ಕುಮಾರ್'s avatar
    ಸಂತೋಷ್ ಕುಮಾರ್
    ಸೆಪ್ಟೆಂ 26 2012

    ಮತ್ತೆ ಅದೇ ಕಥೆ!. ನಾನು, ನನ್ನ ಅಳಿಯ, ನನ್ನ ಮಗ. ಈ ಸಾಹೇಬರ ಲೋಕಚಿಂತನೆ ಈಗೀಗ ಸುತ್ತುವುದೇ ಇವುಗಳ ಸುತ್ತ. ಅಲ್ಲಲ್ಲಿ ಒಂದು ಇಸ್ರೇಲ್,ಇನ್ನೊಂದು ಅಫಘಾನಿಸ್ಥಾನ, ಮತ್ತೊಂದು ಪ್ರಾನ್ನ್ ನ್ನು ತುರುಕುವುದು..ಜನ ತಪ್ಪು ತಿಳಿಯದಿರಲೆಂದು!!. :).

    ಲೋಕಕ್ಕೆ ಬುದ್ಧಿ ಹೇಳುವ ಕನ್ನಡ ಪತ್ರಿಕೋದ್ಯಮದ ಇಬ್ಬರು ‘ದೊಡ್ಡ’ ಜನ ಇತ್ತೀಚಿನ ವರುಷಗಳಲ್ಲಿ ವರ್ತಿಸಿದ್ದು ಎಲ್ಲರಿಗೂ ಗೊತ್ತೆ ಇದೆ. ಆಗ ಇವರಿಗೆ ಮಧ್ಯಪಥ ಮರೆತು ಹೋಗಿತ್ತೆ? ಅಥವಾ ಹೀಗೆ ಬಿಟ್ಟರೆ..ತನ್ನದೆಲ್ಲವನ್ನು ಬಿಚ್ಚುತ್ತಾರೆಂಬ ಹೆದರಿಕೆಯಾಗಿ, ‘ಶರಂಪರ’ ಕಿತ್ತಾಡಲು ಸುರುಮಾಡಿದರಾ?

    ಬೋಧನೆ..ಬೋಧನೆ..ಬೋಧನೆ.. ಬೆಕ್ಕು ಕಣ್ಣು ಮುಚ್ಚಿಕೊಂಡು ಹಾಲು ಕುಡಿದಂತೆ. ಇನ್ನೂ ಜನ ತನ್ನ ಮಾತನ್ನು ಕೇಳಿ, ಮೆಚ್ಚಿ, ಪಾಲಿಸುತ್ತಿದ್ದಾರೆಂಬ ಭ್ರಮೆ.

    ಉತ್ತರ
    • Balachandra Bhat's avatar
      ಸೆಪ್ಟೆಂ 29 2012

      ವಿಪರ್ಯಾಸ ಅಂದರೆ ಅದೇ. ಇನ್ನು ಇವರ ಬೋಧನೆಯನ್ನು ನಂಬುವ ಜನರಿದ್ದಾರಲ್ಲ; ಅದಿಕ್ಕೆ ಬೋಧನೆ.

      ಉತ್ತರ
  4. Harish's avatar
    Harish
    ಸೆಪ್ಟೆಂ 26 2012

    Ree en dabba ending ree…. Article super but ending sappe….

    ಉತ್ತರ
  5. Dileep's avatar
    Dileep
    ಸೆಪ್ಟೆಂ 29 2012

    Bare Bogale bidtane ..

    ಉತ್ತರ
  6. raju's avatar
    raju
    ನವೆಂ 10 2012

    ಬರಿಯೋದು ಸುಲಭ ನಂಬಿಸೋದೂ ಸುಲಭ, ಅದನ್ನು ರವಿ ಬೆಳಗೆರೆ ಚೆನ್ನಾಗಿ ಕರಗತ ಮಾಡಿಕೊಂಡಿದ್ದಾರೆ. ಅದರ ಫಲವೇ? ಅವರ ಆಸ್ತಿ ಗಳಿಕೆ.
    ನೂರಾರು ಪತ್ರಗಳನ್ನು ಬರೆದಿದ್ದರೂ, ಬರೆಯುತ್ತಿದ್ದರೂ. ಉತ್ತರವಾಗಲೀ, ಪ್ರತಿಕ್ರಿಯೆಯಾಗಲೀ ನೀಡದೇ ಇದ್ದರೂ ಸಹ “ಅವರ ಸ್ಲೋಗನ್” * ಓದುಗ ನನ್ನ ದೊರೆ* ಓದುಗನಿಗೆ ಇಷ್ಟೆಲ್ಲಾ ಗಳಿಸಿದ್ದರೂ, ಓದುಗ ದೊರೆಯ ಪ್ರಶ್ನೆಗಳಿಗೆ ಉತ್ತರಿಸಲಾಗದ ಸ್ಥಿತಿಯಲ್ಲಿ ಅವರಿದ್ದಾರೆ.

    ರಾಜು ವಿನಯ್ ದಾವಣಗೆರೆ

    ಉತ್ತರ

Leave a reply to PRAVEEN ( PRAKUM ) ಪ್ರತ್ಯುತ್ತರವನ್ನು ರದ್ದುಮಾಡಿ

Note: HTML is allowed. Your email address will never be published.

Subscribe to comments