ಕಾವೇರಿ ನದಿನೀರು ಹಂಚಿಕೆಯಲ್ಲಿ ನಾಡಿಗಾದ ಅನ್ಯಾಯ – ಕಿರು ವರದಿ
– ಜಯಪ್ರಕಾಶ್ ಪಿ., ಕರುನಾಡ ದನಿ
ಕಾವೇರಿ ನದಿಯು ಕರ್ನಾಟಕದ ಕೊಡಗು ಜಿಲ್ಲೆಯಲ್ಲಿರುವ ಬ್ರಹ್ಮಗಿರಿ ತಪ್ಪಲಿನ ’ತಲಕಾವೇರಿ’ ಯಲ್ಲಿ ಹುಟ್ಟಿ ಕರ್ನಾಟಕದ ಬಹುತೇಕ ಭಾಗದಲ್ಲಿ ಹರಿದು ತಮಿಳುನಾಡು ಮತ್ತು ಕೇರಳದ ಕೆಲ ಭಾಗಗಳಲ್ಲಿ ಹರಿದು ಹೋಗುತ್ತದೆ. 1883 ರಲ್ಲಿ ಅಂದಿನ ಮೈಸೂರು ಪ್ರಾಂತ್ಯದ ದಿವಾನರು ಕಾವೇರಿ ನದಿನೀರನ್ನು ನೀರಾವರಿ ಯೋಜನೆಗೆ ಬಳಸಿಕೊಳ್ಳಲು ಮುಂದಾದಾಗ, ಅಂದಿನ ಬ್ರಿಟಿಷ್ ಆಳ್ವಿಕೆಯಲ್ಲಿದ್ದ ಮದರಾಸು ಪ್ರಾಂತ್ಯ ಅದನ್ನು ಸಹಿಸದೆ, ಮದರಾಸಿಗೆ ಅನುಕೂಲವಾಗುವಂತ ಅನೇಕ ಕಟ್ಟಳೆಗಳನ್ನು ಮಾಡುವ ಮೂಲಕ ತಾರತಮ್ಯ ನೀತಿ ಆರಂಭಿಸಿತು. ಅಂದು ಆರಂಭವಾದ ಕಾವೇರಿ ನದಿನೀರಿನ ಸಮಸ್ಯೆ ಸುಮಾರು 120ವರ್ಷಗಳೇ ಕಳೆದಿದ್ದರೂ,ಸರಿಯಾದ ಒಂದು ನಿಷ್ಪಕ್ಷಪಾತ ಜಲನೀತಿ ಇಲ್ಲದ ಪರಿಣಾಮವಾಗಿ ಇಂದು ಬಗೆಹರಿಯದ ಕಗ್ಗಂಟಾಗಿ ಬೆಳೆದು ನಿಂತಿದೆ.ವೇಗವಾಗಿ ಟೊರೆಂಟ್ ಕಡತವನ್ನು ಡೌನ್ಲೋಡ್ ಮಾಡಿಕೊಳ್ಳಲು
– ಆದೇಶ್ ಕುಮಾರ್
ನಿಮಗೆ ಟೊರೆಂಟ್ ಕಡತಗಳನ್ನು ಡೌನ್ಲೋಡ್ ಮಾಡಿಕೊಳ್ಳಲು ತೊಂದರೆಯಾಗುತ್ತಿರಬೇಕು ಅಥವಾ ತುಂಬಾ ನಿಧಾನವಿರಬಹುದು. ಈಗ ಈ ನಿಧಾನ ಪ್ರಕ್ರಿಯೆಯನ್ನು ತ್ವರಿತಗೊಳಿಸಲು ಇಲ್ಲೊಂದು ಚಿಕ್ಕ ಉಪಾಯವಿದೆ.
ಈ ಕೆಳಗಿನವುಗಳನ್ನು ಅಲ್ಲಿರುವಂತೆಯೇ ಪಾಲಿಸಿ
೧.ಮೊದಲು ನಿಮಗೆ ಬೇಕಾದ ಟೊರೆಂಟ್ ಅನ್ನು ನಿಮ್ಮ ಗಣಕಕ್ಕೆ ಡೌನ್ಲೋಡ್ ಮಾಡಿಕೊಳ್ಳಿ ಅಥವಾ ಅದರ ವೆಬ್ ಅಡ್ರೆಸ್ ಅನ್ನು ಕಾಪಿ ಮಾಡಿಕೊಳ್ಳಿ.
೨.ನಂತರ www.bitlet.org ವೆಬ್ಸೈಟಿಗೆ ಭೇಟಿ ನೀಡಿ.
೩. ಅಲ್ಲಿ ನಿಮ್ಮ ಗಣಕದಲ್ಲಿರುವ ಟೊರೆಂಟ್ ಅನ್ನು ಡೌನ್ಲೋಡ್ ಮಾಡಲು “Select Local Torrent” ಬಟನ್ ಒತ್ತಿ ಅಥವಾ ನಿಮ್ಮ ಬಳಿ ಆ ಟೊರೆಂಟಿನ ವೆಬ್ ಅಡ್ರೆಸ್ ಇದ್ದಲ್ಲಿ ಕೆಳಗೆ ನೀಡಿರುವ ಚಿತ್ರದಲ್ಲಿರುವಂತೆ ಅಲ್ಲಿರುವ ಬಾಕ್ಸಿನಲ್ಲಿ ಅಂಟಿಸಿ ಮತ್ತು “Download Torrent” ಬಟನ್ ಮೇಲೆ ಒತ್ತಿ.






