ವಿಷಯದ ವಿವರಗಳಿಗೆ ದಾಟಿರಿ

Archive for

28
ಡಿಸೆ

ಭಗತ್ ಸಿಂಗ್ – ಮತೀಯವಾದ ಮರೆ ಮಾಡುತ್ತಿರುವ ಇತಿಹಾಸ

– ಕ.ವೆಂ.ನಾಗರಾಜ್

ScreenShot       ದೇಶದ ಸ್ವಾತಂತ್ರ್ಯಕ್ಕಾಗಿ ನಗುನಗುತ್ತಾ ಭಗತ್ ಸಿಂಗ್ ಗಲ್ಲಿಗೇರಿದಾಗ ಅವನ ವಯಸ್ಸು ಕೇವಲ 23 ವರ್ಷಗಳು. ಬ್ರಿಟಿಷರ ಕುತಂತ್ರ, ಮುಸಲ್ಮಾನರ ಪ್ರತ್ಯೇಕ ರಾಷ್ಟ್ರಕ್ಕಾಗಿ ಮಹಮದಾಲಿ ಜಿನ್ನಾ ಒತ್ತಾಯ, ಒತ್ತಡಕ್ಕೆ ಮಣಿದ ಗಾಂಧೀಜಿಯಂತಹ ನಾಯಕರುಗಳ ಕಾರಣದಿಂದ ಭಾರತದ ವಿಭಜನೆ ಮತ್ತು ಆ ತರುಣದಲ್ಲೇ ನಡೆದ ಭೀಕರ ಕೋಮು ದಳ್ಳುರಿ ದೇಶವನ್ನು ದಹಿಸಿತು, ಸ್ವಾತಂತ್ರ್ಯ ಪ್ರೇಮಿಗಳ ಅಸಹಾಯಕತೆಯ ಕಂಬನಿ ಸುರಿಯಿತು. ಭಗತ್ ಸಿಂಗನಂತಹ ವೀರರ ಬಲಿದಾನವಾಗದಿದ್ದರೆ, ಜಿನ್ನಾರಂತಹವರು ಪಾಕಿಸ್ತಾನದ ಬೇಡಿಕೆ ಮುಂದಿಡಲಾಗುತ್ತಿರಲಿಲ್ಲ. ದೇಶ ವಿಭಜನೆಯಾದಾಗ ಭಗತ್ ಸಿಂಗನ ತವರೂರು ಫೈಸಲಾಬಾದಿನ ಲಿಲ್ಲಾಪುರಬಾಂಗೆ ಪಾಕಿಸ್ತಾನದ ಭಾಗವಾಯಿತು. ಭಗತ್ ಸಿಂಗ್ ಭಾರತ ಮತ್ತು ಪಾಕಿಸ್ತಾನಗಳೆರಡರ ಸ್ವಾತಂತ್ರ್ಯ ಹೋರಾಟದ ಅವಿಭಾಜ್ಯ ಅಂಗ. ಆದರೆ ಅವನ ಹೆಸರನ್ನು, ನೆನಪನ್ನು ಮರೆ ಮಾಡುವ ವ್ಯವಸ್ಥಿತ ಷಡ್ಯಂತ್ರ ಪಾಕಿಸ್ತಾನದಲ್ಲಿ ಸಾಗಿದೆ. ದೇಶ ವಿಭಜನೆಯಾದಾಗ ಪಾಕಿಸ್ತಾನದ ಭಾಗದಲ್ಲಿದ್ದ ಹಿಂದೂಗಳ ಮೇಲೆ ನಡೆದ ದೌರ್ಜನ್ಯ, ಆ ಕಾರಣದಿಂದ ಪಾಕಿಸ್ತಾನದಿಂದ ಭಾರತದ ಭಾಗಕ್ಕೆ ವಲಸೆ ಬಂದ ಹಿಂದೂಗಳ ಸಂಖ್ಯೆ ಅಗಣಿತ. ಈಗ ಪಾಕಿಸ್ತಾನದಲ್ಲಿನ ಹಿಂದೂಗಳ ಸಂಖ್ಯೆ ವಿಭಜನಾಪೂರ್ವದಲ್ಲಿದ್ದವರ ಸಂಖ್ಯೆಯ ಶೇ. 10ಕ್ಕಿಂತಲೂ ಕಡಿಮೆ. ಅವರು ಎರಡನೆಯ ದರ್ಜೆಯ ನಾಗರಿಕರಂತೆ ಬಾಳಬೇಕಾಗಿದೆ. ಪಾಕಿಸ್ತಾನದಲ್ಲಿ ಕಟ್ಟರ್ ಮತೀಯವಾದ ಪರಧi ಸಹಿಷ್ಣುತೆಯನ್ನು ದೂರವಿರಿಸಿದ್ದರೆ, ಭಾರತದಲ್ಲಿ ಇಂತಹ ವಾಸ್ತವ ಸಂಗತಿಗಳನ್ನು ಮಾತನಾಡುವವರನ್ನು ಇಲ್ಲಿನ ಜಾತ್ಯಾತೀತವಾದಿಗಳೆನಿಸಿಕೊಂಡವರು ಹೀಯಾಳಿಸುವ ಪ್ರವೃತ್ತಿ ಹೊಂದಿದ್ದಾರೆ. ಕಟು ವಾಸ್ತವ ಇತಿಹಾಸದ ಮೇಲೆ ಪೊರೆ ಮುಸುಕುವುದಕ್ಕೆ, ಬರೆ ಎಳೆಯುವುದಕ್ಕೆ ಇದಕ್ಕಿಂತ ಉತ್ತಮ ವಾತಾವರಣ ಬೇರೆ ಬೇಕಿಲ್ಲ.
     ಭಗತ್ ಸಿಂಗ್ ಒಬ್ಬ ಮಾನವತಾವಾದಿ. ಮಾನವತೆಯನ್ನು ಗೌರವಿಸದ ಧರ್ಮ ಧರ್ಮವೆಂದೆನ್ನಬಹುದೇ? ಭಗತ್ ಸಿಂಗ್ ಸಾಯುವ ಮುನ್ನ ವ್ಯಕ್ತಪಡಿಸಿದ್ದ ಬಯಕೆಗಳಲ್ಲಿ ಒಂದು ತಾನು ಇದ್ದ ಜೈಲಿನ ಕೊಠಡಿಯ ಶೌಚಾಲಯದ ಸ್ವಚ್ಛತಾ ಕೆಲಸ ಮಾಡುತ್ತಿದ್ದ ಕೆಳವರ್ಗದ ಹೆಣ್ಣುಮಗಳ ಕೈಯಿಂದ ರೊಟ್ಟಿ ತಿನ್ನಬೇಕು ಅನ್ನುವುದು. ಅದಕ್ಕೆ ಅವನು ಕೊಟ್ಟಿದ್ದ ಕಾರಣವೆಂದರೆ ತಾನು ಚಿಕ್ಕ ಮಗುವಾಗಿದ್ದಾಗ ತನ್ನ ಹೇಸಿಗೆಯನ್ನು ತೊಳೆದು ಸ್ವಚ್ಛ ಮಾಡುತ್ತಿದ್ದವಳು ಹೆತ್ತ ತಾಯಿಯಾದರೆ, ಜೈಲಿನ ತನ್ನ ಕೊಠಡಿಯ ಶೌಚಾಲಯದ ಹೇಸಿಗೆ ತೊಳೆಯುತ್ತಿದ್ದವಳೂ ಅಮ್ಮನೇ ಆಗಬೇಕು ತಾನೇ! ಅವನು ಆಕೆಯನ್ನು ಸಂಬೋಧಿಸುತ್ತಿದ್ದುದೂ ಅಮ್ಮ ಎಂದೇ!
24
ಡಿಸೆ

ಕೌರವರ ನಾಶಕ್ಕೆ ಶ್ರೀಕಾರ ಹಾಕಿದ್ದು ದ್ರೌಪದಿಯೇ ತಾನೇ?

– ರಾಕೇಶ್ ಶೆಟ್ಟಿ

Dehli1ಬಹುಷಃ ಆಗಿನ ಕಾಲವೇ ಚೆನ್ನಾಗಿತ್ತೆನೋ.ಆಗಲಾದರು ಕುರು ಸಭೆಯಲ್ಲಿ ದ್ರೌಪದಿಯ ವಸ್ತ್ರಾಪಹರಣವಾಗುವಾಗ ಅವಳ ಸಹಾಯಕ್ಕೆ ಕರೆದೊಡನೆಯೇ ಶ್ರೀ ಕೃಷ್ಣ ಪರಮಾತ್ಮ ಬಂದಿದ್ದ.ಪಾಪ! ಈ ಕಾಲದ ಹೆಣ್ಣು ಮಕ್ಕಳ ಕೂಗು ಆ ಕಾಣದ ದೇವರಿಗೂ,ಕಾನೂನು ಪಾಲಕರಾದ ಮನುಷ್ಯ(?)ರಿಗೂ ಕೇಳುತ್ತಿಲ್ಲ.ಕುರುಕ್ಷೇತ್ರದ ಯುದ್ಧದ ಮುಗಿದರೂ ಕೌರವರು ಇನ್ನೂ ಸತ್ತಿಲ್ಲ.ದ್ರೌಪದಿಯರ ಗೋಳು ಮುಗಿಯೋಲ್ಲ…

ಕಳೆದ ಶನಿವಾರದ ಬೆಳಗ್ಗಿನಿಂದ ಇಂಡಿಯಾ ಗೇಟ್,ರಾಷ್ಟ್ರಪತಿ ಭವನದ ಮುಂದೆ ನಿಂತು ನ್ಯಾಯ ಕೇಳಿದ ಯುವಕ-ಯುವತಿಯರ ಮೇಲೆಯೇ ಲಾಠಿ ಚಾರ್ಜ್,ಜಲಫಿರಂಗಿ,ಅಶ್ರು ವಾಯು ಪ್ರಯೋಗ ನಡೆಯುತ್ತಿದ್ದರೂ.ಪ್ರಧಾನಿ ಮೌನ ಮೋಹನ್ ಸಿಂಗ್ ತಮ್ಮ ಮೌನ ಮುರಿದಿದ್ದು ಸೋಮವಾರ ಬೆಳಿಗ್ಗೆ.ಊರು ಕೊಳ್ಳೆ ಹೊಡೆದ ಮೇಲೆ ಕೋಟೆ ಬಾಗಿಲು ಹಾಕಿದಂತೆ!,ಅದೂ ಸಹ ತಮ್ಮ ಭಾಷಣದ ಕೊನೆಯಲ್ಲಿ “ಟೀಕ್  ಹೈ” ಅಂದರಂತೆ! ಕ್ಯಾಮೆರಾ ಹಿಂದೆ ನಿಂತಿದ್ದ ನಿರ್ದೇಶಕ(ಕಿ) ಯಾರಿದ್ದಿರಬಹುದು? So Called ಯುವನಾಯಕ ರಾಹುಲ್ ಗಾಂಧಿಗೂ ಯುವಕ-ಯುವತಿಯರ ಮೇಲೆ ಪೋಲಿಸ್ ದೌರ್ಜನ್ಯ ಕಾಣಿಸಿಲ್ಲ.ರಷ್ಯಾದಿಂದ ಪುಟಿನ್ ಬರುತಿದ್ದಾರೆ ಅವರೆದುರು ನೀವು ಗಲಾಟೆ ಮಾಡಿದರೆ ಭಾರತದ ಬಗ್ಗೆ ಅವರೇನು ತಿಳಿದುಕೊಂಡಾರು ಅಂತ ಬುದ್ದಿ ಹೇಳುವ ಗೃಹ ಮಂತ್ರಿ ಶಿಂಧೆಗೇ,ವೃದ್ಧರು ,ಮಹಿಳೆಯರು,ಮಕ್ಕಳ ಮೇಲೆ ದೌರ್ಜನ್ಯವೆಸಗಿದ ಪೋಲಿಸರನ್ನು ಮನೆಗೆ ಕಳಿಸಲಾಗದಿದ್ದ ಮೇಲೆ ತಾನು ಕುಳಿತಿರುವ ಕುರ್ಚಿಯಿಂದ ಎದ್ದೋಗಬೇಕು ಅನ್ನುವ ನೈತಿಕತೆ  ಕೂಡ ಉಳಿದಿಲ್ಲವೇ? ಎದ್ದೋಗುವುದನ್ನು ಪಕ್ಕಕ್ಕಿಡಿ,ತನ್ನ  ಪೋಲಿಸ್ ಪಡೆ ಮಾಡಿದ ಘನಂದಾರಿ ಕೆಲಸಕ್ಕಾಗಿ ದೇಶದ ಜನರ ಕ್ಷಮೆ ಕೇಳಲು ಸಹ ಆತ ಸಿದ್ಧನಿಲ್ಲ. ಹಾಳು ಬಿದ್ದು ಹೋಗಲಿ ಕ್ಷಮೆಯೂ ಬೇಡ.ನ್ಯಾಯ ಕೇಳಲು ನಿಂತ ವಿದ್ಯಾರ್ಥಿಗಳನ್ನು ಭೇಟಿಯಾಗುವ ಕುರಿತು ಪ್ರಶ್ನೆ ಕೇಳಿದರೆ, “ಇವತ್ತು ವಿದ್ಯಾರ್ಥಿಗಳು ಪ್ರತಿಭಟಿಸುತ್ತಾರೆ.ನಾಳೆ ಮಾವೋವಾದಿಗಳು ಪ್ರತಿಭಟಿಸುತ್ತಾರೆ.ಹಾಗಂತ ಮಾವೋವಾದಿಗಳು ಭೇಟಿಯಾಗಲು ಸಾಧ್ಯವೇ?” ಅನ್ನುತ್ತಾನಲ್ಲ ಇದೆಂತ ಉಡಾಫೆ ತನದ ಮಾತು? ಎಲ್ಲಿಗೆ ಬಂದು ನಿಂತಿದೆ ನಮ್ಮ ವ್ಯವಸ್ಥೆ?

ಮತ್ತಷ್ಟು ಓದು »

24
ಡಿಸೆ

‘ಈಗ ಮದುವೆ ಆಗಿದೆ, ಆದರೆ ಕೆಲವು ಗಂಡಸರಿಗೆ ತಾಳಿಯೂ ಕಾಣೋದಿಲ್ಲ

-ರೂಪಾರಾವ್

ಒಂದು ಹುಡುಗಿ ಹೆಣ್ಣಾಗುವ ಘಳಿಗೆ ಅತಿ ಸಂಭ್ರಮದ ಘಳಿಗೆ. ಆದರೆ ಅ ಘಳಿಗೆ ಸುಮಾರು ಎಲ್ಲಾರ ಅಮ್ಮಂದಿರು ಅಳುತ್ತಾರೆ. ಮಗಳು ಹೆಣ್ಣಾದಳಲ್ಲ ಎಂಬ ಕಾರಣಕ್ಕಲ್ಲ. ತಾನು ಅನುಭವಿಸಿದ ನೋವು ನರಕಗಳನ್ನು ಮಗಳೂ ಅನುಭವಿಸಬೇಕಾಗುತ್ತಲ್ಲ ಎಂದು.

ಅಂತಹ ಘಳಿಗೆ ಬರುವುದಕ್ಕೂ ಮುಂಚೆಯೇ ಆ ಭಯ ನನಗೆ ಕಾಡಿತ್ತು. ಆಗಿನ್ನೂ ಒಂಬತ್ತನೇ ತರಗತಿಗೆ ಕಾಲಿಟ್ಟಿದ್ದೆ. ಯಾವುದೋ ಅಂಗಡಿಗೆ ಹೋಗುವ ಕಾರಣಕ್ಕಾಗಿ ಹೋದಾಗ , ಯಾವುದೋ ಗಂಡಸು ಏನೇನೋ ಅಸಭ್ಯವಾಗಿ ಹೇಳುತ್ತಾ ನನ್ನ ಹಿಂದೆಯೇ ಬರತೊಡಗಿದ.ಎಂಥ ವಿಷಮ ಘಳಿಗೆ ಎಂದರೆ ಅವನ್ಯಾಕೆ ಹಾಗೆಲ್ಲಾ ಹೇಳ್ತಿದಾನೆ ಅಂತಲೂ ನನಗೆ ಅರ್ಥ ಆಗಿರಲಿಲ್ಲ. ಮನೆಗೆ ಬಂದು ಯಾರಿಗೂ ಹೇಳದೆ ಅತ್ತಿದ್ದೆ.

ಅಲ್ಲಿಂದ ಮುಂದೆ ನಾನು ಹೇಗಿರಬೇಕೆಂಬ ಪಾಠ ಅಮ್ಮನಿಂದ ಬಂತು. ಆಗ ಹೆಣ್ಣಾಗಿದ್ದೆ…. ಒಳ್ಳೆಯ ಸ್ಪರ್ಷ ಕೆಟ್ಟ ಸ್ಪರ್ಷ ನೋಟಗಳ ವ್ಯತ್ಯಾಸ ತಿಳಿಯುತ್ತಿತ್ತು. ಆದರೂ ಬಸ್ ನಲ್ಲಿ ಸ್ಕೂಲಿಗೆ ಹೋಗುವಾಗ ಬೇಕಾಗಿಯೇ ಕೈ ಹಾಕಿ ನೂಕುವ ಕಂಡಕ್ಟರ್, ನನ್ನ ಹಿಂದೆ ಬಂದು ನಿಲ್ಲು ಎನ್ನುತ್ತಿದ್ದ ಡ್ರೈವರ್ ಇವರುಗಳನ್ನು ಎದುರಿಸಲಾಗಿರಲಿಲ್ಲ. ಸುಮ್ಮನೆ ಇವರುಗಳ ಸ್ಪರ್ಷ ತೀಟೆಗೆ ಮೂಕ ಪಶುಗಳಾಗುತ್ತಿದ್ದೆವು(ಅಕಸ್ಮಾತ್ ತಿರುಗಿಸಿ ಕೇಳಿದರೆ ಆ ಬಸ್ ನಮ್ಮ ಸ್ಟಾಪಿನಲ್ಲಿ ನಿಲ್ಲುತ್ತಿರಲಿಲ್ಲ. ನಿಂತರೂ ಒಂದಷ್ಟು ದೂರ ನಿಲ್ಲುತ್ತಿದ್ದೆವೆ. ನಾವುಗಳು ಓಡಿ ಹೋಗಿ ಹತ್ತಬೇಕಿತ್ತು.)

ಮತ್ತಷ್ಟು ಓದು »

22
ಡಿಸೆ

ದೈವಭಕ್ತಿಯ ಸಾಕಾರ ಮೂರ್ತಿ ವಿಶ್ವ ಮಾತೆ ಶ್ರೀಶಾರದಾದೇವಿ

-ಶ್ರೀವಿದ್ಯಾ,ಮೈಸೂರು

Sharada Maateನಮ್ಮ ತಾಯಿಯಂತೆ ಕಾಣುವ ಮಾತೆ ಶ್ರೀಶಾರದಾದೇವಿಯವರ ಜೀವನ ನಮ್ಮ ಲೌಕಿಕ ಜೀವನಕ್ಕೆ ಆದರ್ಶವಾಗಿದೆ. ಅವರು ನಮ್ಮ ತರಹ ಸಾಮಾನ್ಯ ಮಹಿಳೆ, ದೇವಿಭಕ್ತೆ, ಎಲ್ಲರನ್ನೂ ಸ್ವಂತ ಮಕ್ಕಳಂತೆ ಕಾಣುವ ತಾಯಿ, ಪತಿಗೆ ಸೇವೆ, ಸಹಾಯ ಮಾಡುವ ಪತ್ನಿ, ಪತಿ ಹೇಗೆ ನಡೆದುಕೊಂಡಿದ್ದರೋ ಹಾಗೆಯೇ ಇರುವ ಪತ್ನಿ, ತಪಸ್ವಿನಿ, ಪತಿಯಿಂದ ತನ್ನ ಪೂಜೆ ಮಾಡಿಸಿಕೊಂಡು ಜಗನ್ಮಾತೆ ದೇವಿಯ ದರ್ಶನ ಪಡೆದ ಪುಣ್ಯಾತ್ಮೆ. ಇವೆಲ್ಲ ನಮ್ಮ ಜೀವನಕ್ಕೆ ಆದರ್ಶವಾಗಲಿವೆ. ಆದರೂ ಪತಿ – ಪತ್ನಿ ಸಂಬಂಧ, ಲೌಕಿಕ ಆಸೆಗಳು, ಕಾಮ, ಪ್ರೇಮ ಇವೆಲ್ಲ ಶಾರದಾದೇವಿಯವರ ಮನಸ್ಸಿನಿಂದ ಸಂಪೂರ್ಣ ದೂರವಾಗಿದ್ದವು. ಅವರ ಮನಸ್ಸು ಯಾವಾಗಲೂ ದೇವಿಯ ಮೇಲೆ, ಪತಿಯ ಸೇವೆಗೆ, ಜನರ ಸುಧಾರಣೆಗೆ, ಬಡವರಿಗೆ ಊಟ ಹಾಕೋದು ಇವೆಲ್ಲ ಇತ್ತು. ನಾವು ಅವರನ್ನು ನೆನೆಸಿಕೊಂಡರೆ ಕೆಟ್ಟ ಮನಸ್ಸುಗಳೆಲ್ಲ ದೂರವಾಗುವುದು. ಇಂತಹ ನಮ್ಮ ಪವಿತ್ರ ತಾಯಿಯ ದೇಶದಲ್ಲಿ ನಾವು ಹುಟ್ಟಿದ್ದು ನಮ್ಮ ಪುಣ್ಯ …

೧೮೫೩ನೆಯ ಡಿಸೆಂಬರ್ ೨೨ರಂದು ಜಯರಾಮವಟಿ ಎಂಬ ಚಿಕ್ಕ ಹಳ್ಳಿಯಲ್ಲಿ ಶ್ರೀಶಾರದಾದೇವಿಯವರು ದೇವರ ಅನುಗ್ರಹದಿಂದ ರಾಮಚಂದ್ರ ಮುಖರ್ಜಿ, ಶ್ಯಾಮಸುಂದರಿದೇವಿಯವರಿಗೆ ಜನಿಸಿದಳು.ಈ ಕುಟುಂಬದವರು ಬ್ರಾಹ್ಮಣರಲ್ಲ ಆದರೂ ಶೀಲ ಹಾಗೂ ನಡೆ-ನುಡಿಗಳಲ್ಲಿ ಬ್ರಾಹ್ಮಣರೇ ಆಗಿದ್ದರು. “ಬ್ರಾಹ್ಮಣ” ಎಂಬ ಪದದ ಅರ್ಥವನ್ನು ಸಂಪೂರ್ಣವಾಗಿ ಗ್ರಹಿಸಿ, ಅನುಷ್ಠಾನ ರೀತಿಯಲ್ಲಿಯೂ ಅಳವಡಿಸಿಕೊಂಡಿದ್ದರು. ಬಡವರಾದರೂ ಸೌಜನ್ಯತೆಗೆ ಬಡತನ ಇರಲಿಲ್ಲ. ದೀನರೆನಿಸಿದ್ದರೂ ಧಾರಾಳಿ ಆಗಿದ್ದರು. ಒಂದಿಷ್ಟು ಗದ್ದೆ ಇತ್ತು, ಕಣಜ ತುಂಬುವಷ್ಟು ಭತ್ತ ಬರುತ್ತಿತ್ತು. ಪೌರೋಹಿತ್ಯ ಜನಿವಾರವನ್ನು ಮಾಡಿ, ಮಾರುವ ವೃತ್ತಿಯನ್ನೂ ಇಟ್ಟುಕೊಂಡಿದ್ದರು. ಹಳ್ಳಿಯ ಜನರಿಗೆ ಕಷ್ಟ ಕಾಲದಲ್ಲಿ ಉದಾರವಾಗಿ ದಾನ ಮಾಡುತ್ತಿದ್ದರು. ಪರರ ನೋವಿಗೆ ಅಯ್ಯೋ ಅನ್ನುವ ಆದರ್ಶ ಗುಣ ಇವರಲ್ಲಿ ಮನೆ ಮಾಡಿತ್ತು.

ಮತ್ತಷ್ಟು ಓದು »

18
ಡಿಸೆ

ಪ್ರತ್ಯೇಕ ಪಂಕ್ತಿ ಭೋಜನ ನಿಂತರೆ ಮಡೆ ಸ್ನಾನವೂ ನಿಂತೀತು

– ರಾಕೇಶ್ ಶೆಟ್ಟಿ

Pratyeka Ootaಉಡುಪಿಯ ಕೃಷ್ಣ ತಿರುಗಿ ನಿಂತಷ್ಟು ಸುಲಭವಲ್ಲ ’ಮಡೆ ಸ್ನಾನ’ ನಿಲ್ಲುವುದು…! ಅಂತ ವರ್ಷದ ಹಿಂದೆ ಮಡೆಸ್ನಾನ ಅನ್ನುವ ವಿಕೃತಿಯನ್ನು ವಿರೋಧಿಸಿ ಬರೆದಿದ್ದು ನಿಜವಾಗಿದೆ.ನಿನ್ನೆ ಮತ್ತೆ ಕುಕ್ಕೆಯಲ್ಲಿ ಮಡೆಸ್ನಾನ ಸಾಂಗೋಪಾಂಗವಾಗಿ ನೆರವೇರಿದೆ.ತಾವು ತಿಂದು ಬಿಡುವ ಎಂಜಲ ಮೇಲೆ ಮನುಷ್ಯರು ಹೊರಳಾಡುತ್ತಾರೆ ಅಂತ ಗೊತ್ತಿದ್ದು ಉಣ್ಣುವ ರೋಗಗ್ರಸ್ತ ಅಹಂ ಮನಸ್ಸುಗಳು ಮತ್ತು ಇನ್ನೊಬ್ಬರ ಎಂಜಲೆಲೆಯೇ ಪರಮ ಪವಿತ್ರ ಅನ್ನುವ ಮೂಢರು ಎಂಜಲೆಲೆಯ ಸ್ನಾನದಲ್ಲಿ ಮಿಂದು ಪುನೀತರಾಗಿದ್ದಾರೆ.

ಇನ್ನೊಂದೆಡೆ “ನಾವೆಲ್ಲ ಹಿಂದೂ,ನಾವೆಲ್ಲ ಒಂದು” ಅನ್ನುವವರೆಲ್ಲ ಸದ್ದಿಲ್ಲದೆ ಹಿಂದೆಯೇ ನಿಂತು ಎಂಜಲೆಲೆಯ ಮೇಲೆ ದೇವರ ಹೆಸರಿನ ನಂಬಿಕೆ(ಹೆದರಿಕೆ?)ಯಲ್ಲಿ ಜಾಗೃತರಲ್ಲದವರನ್ನು ಉರುಳಾಡಿಸಿ ಕೃತಾರ್ತರಾಗಿದ್ದಾರೆ.ಅಲ್ಲಿಗೆ “ನಾವೆಲ್ಲ ಹಿಂದೂ – ನಾವಿನ್ನೂ ಹಿಂದು” ಎನ್ನಲಡ್ಡಿಯಿಲ್ಲ ಅಲ್ಲವೇ?

ಮತ್ತಷ್ಟು ಓದು »

11
ಡಿಸೆ

ಹೊಸ ವರ್ಷಕ್ಕಿರಲಿ ಕನ್ನಡದ ಸ್ಪರ್ಶ – ಕನ್ನಡ ದಿನದರ್ಶಿ – ೨೦೧೩

– ಮಧುಚಂದ್ರ ಭದ್ರಾವತಿ 

Cal_poster1 copy_3ಇತ್ತೀಚೆಗೆ ಯುವಜನರಿಗೆ ಕನ್ನಡ ಭಾಷೆಯ ಮೇಲೆ ಒಲವು ಕಡಿಮೆ ಆಗುತ್ತಾ ಇದೆ. ಪಾಶ್ಚಾತ್ಯ ದೇಶದ ಸಾಧಕರ ಬಗ್ಗೆ ಇರುವ ಅರಿವು ನಮ್ಮ ಕನ್ನಡದ ಸಾಧಕರ ಮೇಲೆ ಇಲ್ಲ. ಅಂತರ್ಜಾಲದಲ್ಲಿ ಸಹ ಒಬ್ಬ ಪಶ್ಚಿಮ ದೇಶದ ಸಾಧಕರ ಬಗ್ಗೆ ಹುಡುಕಿದರೆ ಹೇರಳವಾದ ಮಾಹಿತಿ ಸಿಗುತ್ತದೆ. ನಮ್ಮವರಿಗೆ ಜಿ ಪಿ ರಾಜರತ್ನಂರವರ ಭಾವ ಚಿತ್ರ ತೋರಿಸಿ ಇವರಾರು? ಇವರ ಸಾಧನೆ ಏನು ? ಎಂದು ಕೇಳಿದರೆ ತಡಬಡಾಯಿಸುತ್ತಾರೆ. ಕಾರಣ ಇಷ್ಟೇ ಇವರಿಗೆಲ್ಲ ಅಭಿಮಾನ ಮತ್ತು ಮಾಹಿತಿಯ ಕೊರತೆ. ಇದನ್ನು ಹೋಗಲಾಡಿಸಲು ಕನ್ನಡ ಲರ್ನಿಂಗ್ ಸ್ಕೂಲ್ ನವರು ‘ ಹೊಸ ವರ್ಷಕ್ಕಿರಲಿ ಕನ್ನಡದ ಸ್ಪರ್ಶ ‘ ಎಂಬ ಧ್ಯೇಯ ವಾಕ್ಯದ ಅಡಿಯಲ್ಲಿ ತಂದಿರುವ ೨೦೧೩ ಕನ್ನಡದ ದಿನದರ್ಶಿ ಕನ್ನಡಿಗರಿಗೆ ಉಪಯುಕ್ತ ಮಾಹಿತಿಯನ್ನು ನೀಡಿ. ಕನ್ನಡಿಗರು ಕನ್ನಡದ ಸಾಧಕರ ಬಗ್ಗೆ ವರ್ಷ ಪೂರ್ತಿ ಸ್ಮರಿಸಲಿ ಎಂಬ ನಿಲುಮೆಯಿಂದ ಮಾರುಕಟ್ಟೆಗೆ ಬಿಡುಗಡೆ ಮಾಡಿದ್ದಾರೆ.
ಮತ್ತಷ್ಟು ಓದು »

5
ಡಿಸೆ

ಪದ ತಂತ್ರಾಂಶ – Pada Software (Indic word processor & IME)

– ವಿಕಾಸ್ ಹೆಗ್ಡೆ
padaಕಂಪ್ಯೂಟರಲ್ಲಿ ಕನ್ನಡದ ಬಳಕೆ ದಿನೇ ದಿನೇ ಹೆಚ್ಚಾಗುತ್ತಿದೆ. ಅಂತರಜಾಲದಲ್ಲಿ ಸದ್ಯಕ್ಕೆ ಕನ್ನಡ ವೆಬ್ ಸೈಟುಗಳ ಸಂಖ್ಯೆ ಕಡಿಮೆ ಇದ್ದರೂ ಕೂಡ ಓದುಗರ ಸಂಖ್ಯೆ ಕಡಿಮೆ ಇಲ್ಲ. ಬಹಳಷ್ಟು ಜನ ಕಂಪ್ಯೂಟರ್ನಲ್ಲಿ ಕನ್ನಡದಲ್ಲಿ ಬರೆಯಲು ಬಯಸುತ್ತಿದ್ದಾರೆ. ಕೆಲವರು ಒತ್ತಕ್ಷರ, ದೀರ್ಘ, ಮಹಾಪ್ರಾಣ ಮುಂತಾದ ಟೈಪಿಂಗ್ ಸ್ವಲ್ಪ ಸಮಸ್ಯೆಯಾಗಿ ಹಿಂಜರಿಯುತ್ತಿದ್ದಾರೆ. ಆದರೂ ಕೂಡ ಉತ್ಸಾಹಿಗಳಿಗೇನೂ ಕಡಿಮೆ ಇಲ್ಲ. ಬಹಳ ಸುಲಭವಾಗಿ ನೇರವಾಗಿ ಎಲ್ಲಿ ಬೇಕಾದರೂ ಕನ್ನಡದಲ್ಲಿ ಬರೆಯಲು ಗೂಗಲ್, ಮೈಕ್ರೋಸಾಫ್ಟ್, ಪ್ರಮುಖ್ ಮುಂತಾದ ಹಲವು IME ಟೂಲ್ ಗಳಿವೆ.  ನುಡಿ, ಪದ, ಬರಹದ IME ಜೊತೆಗೆ ಪದ ಸಂಸ್ಕಾರಕಗಳೂ (Word Processors) ಇವೆ. ಆನ್ ಲೈನ್ ನಲ್ಲಿ ಬರೆಯಲು ಹಲವು ಟೂಲ್ ಗಳಿವೆ. ಸಾಮಾನ್ಯ ಬಳಕೆದಾರರಿಗೆ ಈಗ ಯಾವ ತಾಂತ್ರಿಕ ಸಮಸ್ಯೆ ಇಲ್ಲ. ಬೇಕಾಗಿರುವುದು ಸ್ವಲ್ಪ ಆಸಕ್ತಿ, ಅಭ್ಯಾಸ ಅಷ್ಟೆ.  ಈ ಮೊದಲು ವ್ಯಾಪಕವಾಗಿ ಬಳಕೆಯಲ್ಲಿದ್ದ ‘ಬರಹ’ ತಂತ್ರಾಂಶ ಆವೃತ್ತಿ ಹತ್ತರ ಬಳಿಕ ಉಚಿತವಾಗಿ ಲಭ್ಯವಿಲ್ಲ. ಅದರಲ್ಲಿ ಹೆಚ್ಚಿನ ಅಭಿವೃದ್ಧಿ ಕಾರ್ಯಗಳಿಗಾಗಿ ಸಂಪನ್ಮೂಲ ಒಟ್ಟುಮಾಡಲು ಸದ್ಯಕ್ಕೆ ಬರಹ ತಂತ್ರಾಂಶಕ್ಕೆ ಶುಲ್ಕವಿಡಲಾಗಿದೆ ಎಂದು ಹೇಳಲಾಗಿದೆ. ಮತ್ತೊಂದು ಬಹುಬಳಕೆಯ ‘ನುಡಿ’ ತಂತ್ರಾಂಶದಲ್ಲಿ ಕೆಲವು ಸೌಲಭ್ಯಗಳಿಲ್ಲ. (ಕನ್ನಡ ಬರೆಯಲು ಇರುವ ಹಲವು ತಂತ್ರಾಂಶ ಹಾಗೂ ಟೂಲ್ ಗಳ ಬಗ್ಗೆ ಹಿಂದೊಮ್ಮೆ ಬರೆದಿದ್ದೆ.  ಅದು ಇಲ್ಲಿದೆ: Kannada Typing in Computers).
4
ಡಿಸೆ

ಮುಂದಿನ ಪೀಳಿಗೆಗೆ ನಾವು (ಕನ್ನಡ ಮಾಧ್ಯಮ) ಏನಂತ ಹೇಳಬಹುದು….

-ಅರವಿಂದ್

https://i0.wp.com/kannada.oneindia.in/img/2010/10/27-child-kannada-medium1.jpgಒಂದಾನೊಂದು ಕಾಲದಲ್ಲಿ ಕರ್ನಾಟಕದಲ್ಲಿ ಕನ್ನಡ ಮಾಧ್ಯಮ ಶಾಲೆಗಳು ಇತ್ತು. ಆಗ ನಾವುಗಳು ನಮ್ಮ ಗುರುಗಳನ್ನು ಬಹಳ ಗೌರವದಿಂದ, ಭಯಮಿಶ್ರಿತ ಪುಳಕದಿಂದ ಅವರು ನಮ್ಮೆದುರಿಗೆ ಬಂದರೆ ಭೂಮಿಯೇ ನಮ್ಮ ಮೇಲೆ ಬಿದ್ದಂತೆ ಭಾಸವಾಗಿ, ಅವರುಗಳು ಹೇಳಿದ ಪಾಠಗಳನ್ನು, ಪದ್ಯ-ಗದ್ಯಗಳನ್ನು, ಲೆಕ್ಕಗಳನ್ನು, ವ್ಯಾಕರಣವನ್ನು ಚಾಚೂ ತಪ್ಪದೆ ಓದಿಕೊಂಡು ಶಾಲೆಗೆ ಹೋಗುತ್ತಿದ್ದೆವು… ನಾವುಗಳೆಲ್ಲರೂ ಕನ್ನಡದಲ್ಲೇ ಪಾಠ ಕೇಳುತ್ತಿದ್ದೆವು ಮತ್ತು ನಾವುಗಳು ಅದ್ಯಾವುದೇ ಭಾಷೆಯವರಾಗಿದ್ರೂ ಕನ್ನಡದಲ್ಲೇ ಮಾತಾಡ್ತಿದ್ದೆವು.

ನಮ್ಮ ಗುರುಗಳು ತರಗತಿಗೆ ಬಂದ ಕೂಡಲೇ ಗೌರವ ಸೂಚಕವಾಗಿ ನಮಸ್ತೇ ಗುರುಗಳೇ… ಅಂತ ಒಕ್ಕೊರಲಾಗಿ ಹೇಳಿ, ಅವರೂ ಸೂಚಿಸಿದ ನಂತರವೇ ನಮ್ಮ ನಮ್ಮ ಜಾಗದಲ್ಲಿ ಕುಳಿತುಕೊಳ್ಳುತ್ತಿದ್ದೆವು. ನಮ್ಮ ಮಾತೃಭಾಷೆಯಲ್ಲೇ ಪಾಠ ಕೇಳುತ್ತಿದ್ದ ನಾವು, ಜಗತ್ತಿನ ಅದೆಷ್ಟು ವಿಷಯಗಳನ್ನು ಕನ್ನಡದಲ್ಲೇ ತಿಳಿದುಕೊಳ್ಳುತ್ತಿದ್ದೆವು ಗೊತ್ತಾ…

ಮತ್ತಷ್ಟು ಓದು »

3
ಡಿಸೆ

‘ಲೈಫ್ ಆಫ್ ಪೈ’ ಎಲ್ಲರಲ್ಲೂ ಕಾಡುವಂತಾಗಲಿ…

– ಚಕ್ರವರ್ತಿ ಸೂಲಿಬೆಲೆ

http://t1.gstatic.com/images?q=tbn:ANd9GcRSr4z5g6UJPHpBVGOSkOk7AaKUuIujEJJxVFIzpuP4A-RjH9wEOZycdZJwಒಂದು ನಾಟಕ, ಸಿನಿಮಾ, ಕೊನೆಗೆ ಸಂಗೀತವೂ ಕೂಡ.. ಮುಗಿಸಿ ಬಂದ ನಂತರವೂ ಎಷ್ಟು ಹೊತ್ತು ನಿಮ್ಮನ್ನು ಕಾಡುತ್ತಿರುತ್ತದೆ ಎಂಬುದರ ಮೇಲೆ ಅದರ ಸಫಲತೆಯನ್ನು ಅಂದಾಜಿಸಬಹುದು. ಕಾಕತಾಳೀಯ ಅಂತಾದರೂ ಹೇಳಿ, ವಿಶ್ವಪ್ರಜ್ಞೆಯ ಪ್ರೇರಣೆ ಅಂತಲಾದರೂ ಕರೀರಿ. ಓಹ್ ಮೈ ಗಾಡ್ ನೋಡಿದ ಮರುವಾರವೇ ಲೈಫ್ ಆಫ್ ಪೈ ನೋಡುವ ಅವಕಾಶ ದಕ್ಕಿದ್ದು ನನ್ನ ಪಾಲಿಗೆ ವಿಶೇಷವೇ ಸರಿ. ಚಿತ್ರ ರಾತ್ರಿಯಿಡೀ ಕಾಡಿದೆ. ಕೆಲವು ಮಾತುಗಳು ಮತ್ತೆ ಮತ್ತೆ ನೆನಪಾಗುತ್ತಿವೆ. ದೃಶ್ಯಗಳ ವೈಭವದ ಹಿಂದೆ ಅಡಗಿ ಕುಳಿತಿರುವ ಬದುಕಿನ ಸೂಕ್ಷ್ಮ ಅರ್ಥಗಳು ಒಂದೊಂದಾಗಿ ಅನಾವರಣಗೊಳ್ಳುತ್ತವೆ. ದೇವರ ಕುತರಿತಂತೆ, ಮತಗಳ ಕುರಿತಂತೆ ಕೊನೆಗೆ ಬದುಕಿನ ಕುರಿತಂತೆಯೂ ಪೈ ಹುಟ್ಟು ಹಾಕುವ ಪ್ರಶ್ನೆಗಳಿವೆಯಲ್ಲ, ಅವು ನಿಮ್ಮನ್ನು ಕಾಡದಿದ್ದರೆ ಹೇಳಿ.

ಹೀಗೆ ಕಾಡುತ್ತಾನೆಂದೇ ಅವನು ’ಪೈ’. ಫ್ರಾನ್ಸಿನ ಸ್ವಚ್ಛ ನೀರಿನ ಈಜುಕೊಳದಿಂದಾಗಿ ಬಂದ ಹೆಸರು ಅವನದ್ದು. ಪಿಸಿನ್ ಪಟೇಲ್. ಉಳಿಯೋದು ಪೈ. ಅದೆಷ್ಟು ಸಾಂಕೇತಿಕವೆಂದರೆ, ಪೈನ ಬದುಕು ಗಣಿತದ ಪೈನಂತೆಯೇ. ಅದೊಂದು ಇರ‍್ಯಾಷನಲ್ ನಂಬರ್. ಆದರೆ ಗಣಿತದ ಸಮಸ್ಯೆಗಳನ್ನು ಪರಿಹರಿಸಲು ರ‍್ಯಾಷನಲ್ ಆಗಿಯೇ ಬಳಸಲ್ಪಡುತ್ತದೆ. ಭಗವಂತನೂ ಹಾಗೆಯೇ. ಯಾರೂ ಕಾಣಲೇ ಇಲ್ಲ. ಆದರೆ ಎಲ್ಲರೂ ಕಂಡಿದ್ದೇವೆ ಎಂಬಂತೆ ಜೊತೆಯಲ್ಲಿಟ್ಟುಕೊಂಡೇ ಬದುಕು ನಡೆಯುತ್ತದೆ. ಪೈ ವೃತ್ತದ ಪರಿಧಿ ಮತ್ತು ವ್ಯಾಸಗಳ ಅನುಪಾತವನ್ನು ತೋರಿಸುವ ಸಂಖ್ಯೆ. ವ್ಯಾಸವನ್ನು ಬದುಕಿನ ಯಾತ್ರೆ ಅಂತ ಭಾವಿಸುವುದಾದರೆ ಪರಿಧಿ ಧರ್ಮ, ದೇವರು, ವಿಶ್ವಾಸಗಳು. ಬದುಕು ಯಾರದ್ದಾದರೂ ಆಗಿರಲಿ, ಆತ ಆಸ್ತಿಕನಾಗಿರಲಿ, ನಾಸ್ತಿಕನೇ ಆಗಲಿ. ಕೊನೆಗೆ ಅವಕಾಶವಾದಿ ಆಸ್ತಿಕನಾದರೂ ಸರಿ. ಈ ಪರಿಧಿಯೊಳಗಿನ ವ್ಯಾಸವಾಗಿಯೇ ಬದುಕಬೇಕು. ಅದು ಪೈನಂತೆ ಸ್ಥಿರಾಂಕ!

ಮತ್ತಷ್ಟು ಓದು »