ವಿಷಯದ ವಿವರಗಳಿಗೆ ದಾಟಿರಿ

Archive for

30
ನವೆಂ

ಸ್ವದೇಶಿ ಚಿಂತನೆಯ ಹರಿಕಾರ ರಾಜೀವ್ ದೀಕ್ಷಿತ್

– ಶ್ರೀವಿದ್ಯಾ,ಮೈಸೂರು

rajiv-dixitಭಾರತದಲ್ಲಿ ಸ್ವಾತಂತ್ರ್ಯ ನಂತರ ಗುಲಾಮಿ ಮಾನಸಿಕತೆ ಬೆಳೆಯುತ್ತಿದ್ದ ಕಾಲಘಟ್ಟದಲ್ಲಿ ಸ್ವದೇಶಿ ಚಿಂತನೆಯ ಮೂಲಕ ಭಾರತೀಯರಲ್ಲಿ ಸ್ವಾಭಿಮಾನವನ್ನು ಬಡಿದೆಬ್ಬಿಸಿದ ಧೀರ ನಾಯಕ ರಾಜೀವ್ ದೀಕ್ಷಿತ್

“ವಿದೇಶಿ ಬಹುರಾಷ್ಟ್ರೀಯ ಕಂಪೆನಿಗಳು ಬಂಡವಾಳವನ್ನು ತರುತ್ತದೆ. ಉದ್ಯೋಗವನ್ನು ಸೃಷ್ಟಿಸುತ್ತದೆ. ಅದರಿಂದ ದೇಶದ ರಫ್ತು ಭಾರೀ ಪ್ರಮಾಣದಲ್ಲಿ ಹೆಚ್ಚಾಗುತ್ತದೆ.ಅಷ್ಟೇ ಅಲ್ಲ, ನಮ್ಮ ದೇಶಕ್ಕೆ ಅತ್ಯಾಧುನಿಕ ತಂತ್ರಜ್ಞಾನ ತರುತ್ತಾರೆ. ನಮ್ಮ ದೇಶದಲ್ಲಿ ಬಂಡವಾಳ ತೊಡಗಿಸುವಂತೆ ಬಹುರಾಷ್ಟ್ರೀಯ ಕಂಪನಿಗಳನ್ನು ಆಹ್ವಾನಿಸುತ್ತಿರುವ ಸರಕಾರ ಈ ರೀತಿಯ ಕಾರಣ, ನೆಪಗಳನ್ನು ಕೊಟ್ಟು ನಿಮ್ಮನ್ನು ಸಮಾಧಾನಪಡಿಸುತ್ತಿದೆ. ಆದರೆ ವಾಸ್ತವದಲ್ಲಿ ವಿದೇಶಿ ಕಂಪನಿಗಳ ಆಗಮನದಿಂದಾಗಿ ನಮ್ಮ ದೇಶದ ಸಂಪತ್ತು ಹೊರಕ್ಕೆ ಹರಿದುಹೋಗುತ್ತಿದೆ, ಲೂಟಿಯಾಗುತ್ತಿದೆ. ಬಹುರಾಷ್ಟ್ರೀಯ ಕಂಪನಿಗಳ ಆಗಮನದಿಂದ ಉದ್ಯೋಗ ಸೃಷ್ಟಿಯಾಗುತ್ತದೆ ಎಂಬ ಮಾತೂ ಶುದ್ಧ ಸುಳ್ಳು. ಖಾಸಗಿ ಕಂಪನಿಗಳಿಂದಾಗಿ ಸ್ಥಳೀಯ ಸಣ್ಣಉದ್ದಿಮೆಗಳು ನಾಶಗೊಂಡು ಭಾರೀ ಪ್ರಮಾಣದ ನಿರುದ್ಯೋಗ ಸೃಷ್ಟಿಯಾಗುತ್ತದೆ ಹಾಗೂ ಆರ್ಥಿಕ ಅಸಮಾನತೆಯುಂಟಾಗುತ್ತದೆ.­ ರಫ್ತು ಪ್ರಮಾಣ ಹೆಚ್ಚಾಗುತ್ತದೆ ಎಂಬ ಮಾತೂ ಕೂಡ ಸತ್ಯಕ್ಕೆ ದೂರವಾದುದು. ವಾಸ್ತವದಲ್ಲಿ ವಿದೇಶಿ ಕಂಪನಿಗಳಿಂದಾಗಿ ಆಮದು ಪ್ರಮಾಣಹೆಚ್ಚಾಗುತ್ತಿದೆ. ಅವು ತಮ್ಮ ದೇಶದ ಸರಕುಗಳನ್ನು ಭಾರತಕ್ಕೆ ತಂದು ಮಾರಾಟ ಮಾಡುತ್ತಿವೆಯಷ್ಟೇ. ಅಂದರೆ ತಮ್ಮ ದೇಶದ ಕಚ್ಚಾವಸ್ತು ಗಳನ್ನು ಇಲ್ಲಿಗೆ ತಂದು, ಸರಕನ್ನಾಗಿ ಪರಿವರ್ತಿಸಿ ಭಾರೀ ಲಾಭವನ್ನಿಟ್ಟು ಮಾರಾಟ ಮಾಡುತ್ತಿವೆಯಷ್ಟೇ. Read more »

30
ನವೆಂ

ಓ ಗಂಡಸರೇ…ನೀವೆಷ್ಟು ಒಳ್ಳೆಯವರು!

-ರಶ್ಮಿ ಕಾಸರಗೋಡು

ನೀನು ಹುಡುಗ ನಮ್ಮ ಜತೆ ಬರಬಾರದು… ನಾವು ಆವಾಗ ಮೂರನೇ ಕ್ಲಾಸು. ನಮ್ಮ ಜತೆಯಲ್ಲೇ ಆಟವಾಡುತ್ತಿದ್ದ ನಮ್ಮ ಸಹಪಾಠಿಯಾಗಿದ್ದ ಆ ಹುಡುಗ ನಾವೆಲ್ಲಾ ಹುಡುಗಿಯರು ಕೈ ಕೈ ಹಿಡಿದು “ಒಂದಕ್ಕೆ” ಹೋಗುವಾಗ ಆತ “ನಾನೂ ಬರ್ತೇನೆ”ಎಂದು ರಾಗ ಎಳೆದಿದ್ದ…ಆವಾಗ ನಾವೆಲ್ಲರೂ ನೀನು ಹುಡುಗ ನಮ್ಮ ಜತೆ ಬರಬಾರದು…ಎಂದು ಒಕ್ಕೊರಲಿನಿಂದ ಹೇಳಿದ್ದೆವು.
ನಮ್ಮ ಉತ್ತರ ಅವನಿಗೆ ಬೇಸರ ತರಿಸಿತ್ತು ಎಂದು ಅವನ ಮುಖ ನೋಡಿದಾಗಲೇ ಗೊತ್ತಾಗಿತ್ತು. ಕ್ರಮೇಣ ನಾವು ಬೆಳೆಯುತ್ತಾ ಬಂದಂತೆ ಹುಡುಗರು-ಹುಡುಗಿಯರ ಅಂತರ ಹೆಚ್ಚುತ್ತಾ ಹೋಯ್ತು. ಹೈಸ್ಕೂಲ್ ಮೆಟ್ಟಲು ಹತ್ತಿದಾಗಲಂತೂ ಅವರು ‘ಹುಡುಗರು’..ನಾವು ದೊಡ್ಡ ಹುಡುಗೀರು. ನಮ್ಮೂರು ಹಳ್ಳಿಯಾಗಿರುವುದರಿಂದ ಹುಡುಗರು ಹುಡುಗಿಯರು ನಡುವೆ ಅಂತರ ಕಾಯ್ದುಕೊಳ್ಳಲೇ ಬೇಕಿತ್ತು. ಸಂಬಂಧಿಕರಾಗಿರಲಿ, ಗೆಳೆಯರಾಗಿರಲಿ ಅಲ್ಲೊಂದು ಲಿಂಗಬೇಧದ ಗೆರೆಯಿರುತ್ತಿತ್ತು. ಹುಡುಗರ ಮುಂದೆ ಹೇಗೆ ಮಾತನಾಡಬೇಕು, ಅವರ ಮುಂದೆ ಹೇಗೆ ನಿಲ್ಲಬೇಕು, ನಮ್ಮ ಡ್ರೆಸ್…ಕೂದಲು..ಕಣ್ಣು, ಹಾವಭಾವ ಎಲ್ಲದಕ್ಕೂ ‘ನೀನು ಹುಡುಗಿ’ ‘ಅವನು ಹುಡುಗ’ ಹಾಗೆಲ್ಲಾ ಮಾಡಬಾರದೆಂಬ ಉಪದೇಶದ ಲೇಪ ಇದ್ದೇ ಇರುತ್ತಿತ್ತು.

Read more »

28
ನವೆಂ

ಭಾಷಣ ಮಾಡುವ ಕ(ಕೊ)ಲೆ

– ಅರೆಹೊಳೆ ಸದಾಶಿವ ರಾವ್

ಇದೇನು ಹೊಸ ರೀತಿಯ ಕೊಲೆ ಎಂದು ಹುಬ್ಬೇರಿಸಬೇಡಿ. ಶೀರ್ಷಿಕೆ ಹೇಳುವಂತೆ ಈ ಭಾಷಣ ಎನ್ನುವುದು ಒಂದು ಕಲೆಯೂ ಹೌದು, ಸ್ವಲ್ಪ ವ್ಯಾಕರಣ ದೋಷ ಕಾಣಿಸಿಕೊಂಡರೆ ಅದು ಕೊಲೆಯೂ ಹೌದು.

ಉತ್ತಮವಾದ ಮಾತುಗಾರಿಕೆ, ಮಾತುಗಾರಿಕೆಯಲ್ಲಿ ವ್ಯಾಕರಣ ಬದ್ಧ, ತೂಕಸಹಿತ ಮಾತು, ಸಿಹಿಯಾದ ನುಡಿಮುತ್ತು, ಸಾಹಿತ್ಯದ ಸಾಂಗತ್ಯ, ಹದಕ್ಕೆ ಬೇಕಾದಷ್ಟು ಏರಿಳಿತ ಮತ್ತು ನಿರರ್ಗಳತೆ, ಇವು ಮೇಳೈವಿಸಿದರೆ ಅದು ಭಾಷಣ ಮಾಡುವ ‘ಕಲೆ’ ಎನಿಸಿಕೊಳ್ಳುತ್ತದೆ. ಇದರಲ್ಲಿ ಯಾವುದಾದರೂ ಒಂದು ಕೈ ಕೊಟ್ಟರೆ ಅದು ಭಾಷಣ ಮಾಡುವ ‘ಕೊಲೆ’ ಆಗುತ್ತದೆ.

ಭಾಷಣ ಮಾಡುವ ‘ಕೊಲೆ’ಯಲ್ಲಿ ಮೊದಲ ಬಲಿಪಶುವಾಗುವುತು ಭಾಷೆ. ನಮ್ಮ ಕರುನಾಡ ಮಾತೃ ಭಾಷೆಯ ಪರಿಸ್ಥಿತಿಯಂತೂ ಇಂದು ಹೇಳತೀರದಷ್ಟು ಹದಗೆಟ್ಟಿದೆ. ಮೊದಲೇ ತಮಿಳು, ಮಲಯಾಳಿ, ಮರಾಠಿ, ತೆಲುಗರಿಂದಾಗಿ ಕನ್ನಡವನ್ನು ಹುಡುಕಿದರೂ, ಹುಡುಕಿದಾತನೇ ಹಾಸ್ಯಾಸ್ಪದವಾಗುತ್ತಿದ್ದಾನೆ. ದುರಂತವೆಂದರೆ ಈ ಭಾಷೆಗಳ ಹೊಡೆತದ ನಡುವೆಯೂ ಅಲ್ಲಲ್ಲಿ ಉಳಿದಿರುವ ಕನ್ನಡಕ್ಕೆ ಇಂಗ್ಲೀಷ್‍ನ ಬೆರಕೆಯಾದ ನಂತರ ಕನ್ನಡವೆನ್ನುವುದು ಕಲಬೆರಕೆ ಆಗಿಬಿಟ್ಟಿದೆ.

ಅದಿರಲಿ ಬಿಡಿ. ನಾವಿಲ್ಲಿ ಭಾಷಾ ಸಮಸ್ಯೆಗಿಂತ ಭಾಷಣದ ಸಮಸ್ಯೆಯ ಬಗ್ಗೆ ಮಾತಾಡ ಹೊರಟಿದ್ದೇವೆ. ಅಳಿದುಳಿದ ಕನ್ನಡದ ಭಾಷೆಯನ್ನು ತನ್ನ ಹರಿಬಿಟ್ಟ ನಾಲಿಗೆಯಿಂದ ಭಾಷಣಕಾರ ಕೊಲ್ಲುತ್ತಲೇ ಇದ್ದರೆ ಹರಿಯೂ ಅದನ್ನು ರಕ್ಷಿಸಲಾರ. ಹಾಗೆಂದಾಗ ಅದು ಭಾಷಣ ಮಾಡುವ ಕೊಲೆಯಾಗುತ್ತದೆ.

Read more »

26
ನವೆಂ

ಅಪರೂಪದ ಪರಿಸರವಾದಿ ಕಲಾವಿದೆ ಕೆನಡಾ ದೇಶದ ಪ್ರಾಂಕೆ ಜೇಮ್ಸ್

– ಗೋವಿಂದಭಟ್,ನೆಲ್ಯಾರು
ಇತ್ತೀಚಿನ  ದಿನಗಳಲ್ಲಿ ನನ್ನ ಮೇಲೆ ಬಹಳ  ಪ್ರಬಾವ  ಬಿದ್ದಿರುವ   ವ್ಯಕ್ತಿಯೊಬ್ಬರು    ಎಂದರೆ   ಕಲಾವಿದೆ ಹಾಗೂ  ಪರಿಸರ ಹೋರಾಟಗಾರ್ತಿ  ಕೆನಡಾ ದೇಶದ ಫ್ರಾಂಕೆ  ಜೇಮ್ಸ್.    ಅವರ ಚಿತ್ರ  ಪ್ರಬಂದಗಳು  ಪರಿಸರಾಂದೋಲನಗಳು  ಅಧ್ಬುತ ಎನ್ನಬೇಕು.     ಸುಮಾರು  ಎರಡು ವರ್ಷಗಳಿಂದ  ಇವರ  ಚಟುವಟಿಕೆ  ಮೇಲೆ  ಗಮನವಿಟ್ಟಿರುವ  ನಾನು ಈಗ  ಅನಿಸಿಕೆ  ಹಂಚಿಕೊಳ್ಳುತ್ತಿದ್ದೇನೆ.

ಕಾರು ಹೊಂದಿದ  ಕುಟುಂಬದಿಂದ  ಬದಲಾವಣೆಯಾಗುವಾಗ   ಏನೆಲ್ಲ  ಎದುರಿಸಬೇಕು  ಅನ್ನುವುದನ್ನು ಅವರ ಮಾತುಗಳಲ್ಲಿಯೇ  ಕೇಳಬೇಕು, ಅಲ್ಲ ಚಿತ್ರಕಥೆ  ಓದಬೇಕು. ದೊಡ್ಡ  ಹಡಗಿನಂತಹ  ಕಾರು  ಅವರಲ್ಲಿತ್ತು. ಡೆವಿಡ್  ಸುಜುಕಿ  ಎಂಬ  ಪರಿಸರವಾದಿಯ  ಬಾಷಣ  ಕೇಳಿ ಮಾರಿಯೇ ಬಿಟ್ಟರು. ಹತ್ತಿರದಲ್ಲಿ  ದಿನಸಿ ಅಂಗಡಿ ಇತ್ತು. ನಡೆಯುವ  ಆಸಕ್ತಿ ಇತ್ತು.  ಒಬ್ಬೊಬ್ಬ  ಸಂಬಂದಿಕರ  ಪ್ರತಿಕ್ರಿಯೆಯೂ  ಬಿನ್ನವಾಗಿತ್ತು.  ಕಾರು ಇಲ್ಲವಾದ  ನಂತರ  ಮನೆ ಎದುರು ಕಾರು – ದಾರಿ  ಬೇಕಾ ?  ಬೇಡ.    ಆದರೆ  ಪಟ್ಟಣದ  ಕಾನೂನು ಪ್ರಕಾರ ಒಂದು ನಿವೇಶನದಲ್ಲಿ    ಒಂದು ಮರ ನೆಡಲು  ಮಾತ್ರ ಅವಕಾಶ.     ಹಲವು ಸಮಸ್ಯೆಗಳ  ಎದುರಿಸಿ   ಕೊನೆಗೂ   ಅಲ್ಲಿ ಹೂಗಿಡಗಳನ್ನು    ನೆಟ್ಟರು. ಕಾಂಕ್ರೀಟು  ಅಗೆದು ಹಾಕಿ  ನೀರು ಇಂಗುವಂತೆ  ಮಾಡಿದರು.   ಅವರ, ಅಂದರೆ   ಆ ದೇಶದವರ   ಕಾರು ಸಹಿತ ಜೀವನ  ನಮಗೆ  ಆಕರ್ಷಕವಾಗಿ ಕಂಡರೆ   ಕಾರು ರಹಿತ  ಜೀವನವೂ  ಮಾರ್ಗದರ್ಶಕ ಏಕಾಗಬಾರದು ?
ಯಾವ  ವಿಚಾರವನ್ನೇ  ಆಗಲಿ  ತಮ್ಮ  ಕಲೆಯ  ಮೂಲಕ   ಪ್ರಚಾರಾಂದೋಲನ  ನಡೆಸುವ ಫ್ರಾಂಕೆ  ಕೆನಡಾ ದೇಶಕ್ಕೆ  ಅಪಾರ  ತಲೆನೋವು ತರಿಸುವ  ವ್ಯಕ್ತಿಯಾಗಿ  ಹೊರಹೊಮ್ಮಿದ್ದಾರೆ. ಹೌದಾ  ಪ್ರದಾನ ಮಂತ್ರಿಗಳೇ, ಮಲೀನತೆ  ತೇರಿಗೆ ನಿಜಕ್ಕೂ  ದೇಶಕ್ಕೆ  ಹಾನಿಮಾಡುವುದೇ   ಎಂದು ಮುಗ್ದವಾಗಿ  ಪ್ರಶ್ನಿಸುತ್ತಾರೆ.  ನೀವು ಮಾತಾಡುತ್ತಿರುವ  ವಿಚಾರ  ಪರಿಣಾಮ ನಿಮಗೆ ಚೆನ್ನಾಗಿ  ಗೊತ್ತಾ? ಮುಂದೆ  ಹಿಮ ಕರಡಿ ಕಾಣೋದು  ಎರಡು ಡಾಲರ್ ನಾಣ್ಯದಲ್ಲಿ  ಮಾತ್ರವಾದರೆ   ನಮ್ಮ  ನಿಮ್ಮ  ಮಕ್ಕಳು  ಮೊಮ್ಮಕ್ಕಳು  ಏನು ಹೇಳಬಹುದು.  ಎಂದೂ  ಕೇಳುತ್ತಾರೆ. ಈ  ಹಾರ್ಪರ್ ಮಹರಾಯ ಬೆಂಗಳೂರಿಗೆ ಬಂದಾಗ  ಇದನ್ನು  ಹಂಚಿಕೊಳ್ಳುವ  ಆಲೋಚನೆ ಬಂದರೂ  ತಕ್ಷಣ ಇವೆಲ್ಲ ಬರೆಯಲು  ಸಾದ್ಯವಾಗಲಿಲ್ಲ.
25
ನವೆಂ

ಪ್ರಶಾಂತ ಹಿಮಾಲಯದ ಅಶಾಂತ ಗಡಿ….

-ಪ್ರೇಮ ಶೇಖರ್

(ಶನಿವಾರ, ಡಿಸೆಂಬರ್ ೧, ೨೦೧೨ರಂದು ಭಾರತ – ಚೀನಾ ಗಡಿಸಮಸ್ಯೆಯ ಬಗೆಗಿನ ನನ್ನ “ಪ್ರಶಾಂತ ಹಿಮಾಲಯದ ಅಶಾಂತ ಗಡಿ” ಕೃತಿ ಮೈಸೂರಿನ ಕಲಾಮಂದಿರದ ಮನೆಯಂಗಳದಲ್ಲಿ ಲೋಕಾರ್ಪಣೆಗೊಳ್ಳಲಿದೆ. ಆ ಪುಸ್ತಕದ ಮೊದಲ  ಅಧಯಾಯ ಇಲ್ಲಿದೆ )

ಮೂವತ್ತೆರಡು ಲಕ್ಷ ಚದರ ಕಿಲೋಮೀಟರ್ ವಿಸ್ತೀರ್ಣದ ನೆಲದೊಂದಿಗೆ ವಿಶ್ವದಲ್ಲಿ ಭೌಗೋಳಿಕವಾಗಿ ಏಳನೆಯ ದೊಡ್ಡ ದೇಶವಾದ ಭಾರತ ಸುಮಾರು ಹದಿನಾಲ್ಕು ಸಾವಿರ ಕಿಲೋಮೀಟರ್ ಉದ್ದದ ನೆಲಗಡಿಯನ್ನೂ, ಐದುಸಾವಿರದ ಐನೂರು ಕಿಲೋಮೀಟರ್ ಉದ್ದದ ಜಲಗಡಿಯನ್ನೂ ಹೊಂದಿದೆ. ಬಹುತೇಕ ಈ ಎಲ್ಲಾ ನೆಲಗಡಿಗಳು ಹಿಂದಿನ ಬ್ರಿಟಿಷ್ ವಸಾಹತುಶಾಹಿ ಆಡಳಿತದಿಂದ ಸ್ವತಂತ್ರ ಭಾರತಕ್ಕೆ ಬಂದ ಬಳುವಳಿಗಳಾಗಿವೆ.

ನೇಪಾಲ ಜತೆಗಿನ ೧,೬೯೦ ಕಿಲೋಮೀಟರ್ ಗಡಿಯನ್ನು ಬ್ರಿಟಿಷರು ರೂಪಿಸಿದ್ದಂತೇ ಸ್ವತಂತ್ರ ಭಾರತ ಉಳಿಸಿಕೊಂಡರೆ ಭೂತಾನದ ಜತೆಗಿನ ೬೦೫ ಕಿಲೋಮೀಟರ್ ಗಡಿಯಲ್ಲಿ ಮಾತ್ರ ಸ್ವಲ್ಪ ಬದಲಾವಣೆಯನ್ನು ಮಾಡಲಾಯಿತು. ಹತ್ತೊಂಬತ್ತನೇ ಶತಮಾನದ ಮಧ್ಯದಲ್ಲಿ ಬ್ರಿಟಿಷರು ಆಕ್ರಮಿಸಿಕೊಂಡಿದ್ದ ದಕ್ಷಿಣ ಭೂತಾನದ ಕೆಲವು ಪ್ರದೇಶಗಳನ್ನು ಆ ದೇಶಕ್ಕೆ ಮರಳಿಸುವ ನಿರ್ಧಾರವನ್ನು ಸ್ವತಂತ್ರ ಭಾರತ ಮಾಡಿದ್ದು ಆ ಬದಲಾವಣೆಗೆ ಕಾರಣ. ಮಿಯಾನ್ಮಾರ್(ಹಿಂದಿನ ಬರ್ಮಾ) ಜತೆಗಿನ ಗಡಿಯ ಬಗ್ಗೆ ಹೇಳುವುದಾದರೆ ೧೯೩೭ರಲ್ಲಿ ಬ್ರಿಟಿಷರು ಆ ದೇಶವನ್ನು ಭಾರತದಿಂದ ಬೇರ್ಪಡಿಸಿದಾಗ ರೂಪಿಸಿದ ಗಡಿಯಲ್ಲಿದ್ದ ಕೆಲವು ಗೊಂದಲಗಳನ್ನು, ಮುಖ್ಯವಾಗಿ ಅರುಣಾಚಲ ಪ್ರದೇಶ ಮತ್ತು ಉತ್ತರ ಬರ್ಮಾದ ನಡುವಿನ ತಿರಾಪ್ ಕಣಿವೆ ಮತ್ತು ಮಣಿಪುರದ ಗಡಿಯ ಬಗ್ಗೆ ಇದ್ದ ಅಸಮರ್ಪಕತೆಗಳನ್ನು ಸ್ವಾತಂತ್ರಾನಂತರ ದ್ವಿಪಕ್ಷೀಯ ಮಾತುಕತೆಗಳು ಮತ್ತು ಒಪ್ಪಂದದ ಮೂಲಕ ಸ್ನೇಹಯುತವಾಗಿ ಸರಿಪಡಿಸಿಕೊಳ್ಳಲಾಯಿತು. ಬಾಂಗ್ಲಾದೇಶದ ಜತೆಗಿನ ೪,೦೫೩ ಕಿಲೋಮೀಟರ್ ಉದ್ದದ ಗಡಿ ನಲವತ್ತೇಳರಲ್ಲಿ ಸರ್ ಸಿರಿಲ್ ರ‍್ಯಾಡ್‌ಕ್ಲಿಫ್ ನೇತೃತ್ವದ “ಗಡಿ ಸಮಿತಿ” (Boundary Commission) ಭಾರತ ಮತ್ತು ಪೂರ್ವ ಪಾಕಿಸ್ತಾನಗಳ ನಡುವೆ ಎಳೆದ ಗಡಿಯಾಗಿದೆ. ಈ ಗಡಿಯ ಐತಿಹಾಸಿಕ ಹಿನ್ನೆಲೆಯನ್ನು ಅನ್ವೇಷಿಸಿದರೆ ಇದು ೧೯೦೫ರಲ್ಲಿ ವೈಸ್‌ರಾಯ್ ಲಾರ್ಡ್ ಕರ್ಜನ್ ಬಂಗಾಲವನ್ನು ವಿಭಜಿಸಿದಾಗ ಎಳೆದ ರೇಖೆ ಮತ್ತು ೧೯೪೩ರಲ್ಲಿ ವೈಸ್‌ರಾಯ್ ಲಾರ್ಡ್ ವೇವಲ್ ದೇಶವಿಭಜನೆಗಾಗಿ ಸೂಚಿಸಿದ ರೇಖೆಗಳ ಆಧಾರದ ಮೇಲೆ ರಚಿತವಾದದ್ದು ಎಂಬ ಅಂಶ ಸ್ಪಷ್ಟವಾಗುತ್ತದೆ. ಈ ಧೀರ್ಘ ಗಡಿ ಬಹುತೇಕ ವಿವಾದಾತೀತವಾಗಿದ್ದರೂ ಅದರ ಕೆಲವು ಪುಟ್ಟ ತುಣುಕುಗಳು ಢಾಕಾದಲ್ಲಿ ಅಧಿಕಾರ ಹಿಡಿಯುವ ರಾಜಕೀಯ ಪಕ್ಷಗಳ ಮರ್ಜಿಗನುಗುಣವಾಗಿ ಆಗಾಗ ಸುದ್ಧಿಯಾಗುತ್ತದೆ. Read more »

23
ನವೆಂ

ಕರ್ನಾಟಕದಲ್ಲಿ ಈ ಬಾರಿ ಪ್ರಾದೇಶಿಕ ಪಕ್ಷಗಳಿಗೆ ಕಾಲ ಕೂಡಿ ಬಂದಿದೆಯೇ?

-ವಸಂತ್  ಶೆಟ್ಟಿ
ಕರ್ನಾಟಕದಲ್ಲಿ ಬರುವ ವಿಧಾನಸಭೆ ಚುನಾವಣೆ ಹೊತ್ತಿಗೆ ಒಂದಕ್ಕಿಂತ ಹೆಚ್ಚು ಪ್ರಾದೇಶಿಕ ಪಕ್ಷಗಳು ಅಸ್ತಿತ್ವಕ್ಕೆ ಬರುವುದು ಖಚಿತವಾಗುತ್ತಿದ್ದಂತೆಯೇ ಕರ್ನಾಟಕದಲ್ಲಿ ಈ ಹಿಂದೆಯೂ ಪ್ರಾದೇಶಿಕ ಪಕ್ಷ ಗೆಲುವು ಕಂಡಿಲ್ಲ, ಈಗಲೂ ಕಾಣಲ್ಲ ಅಂತೆಲ್ಲ ಅಲ್ಲಲ್ಲಿ ದನಿ ಎಬ್ಬಿಸುವವರ ಸಂಖ್ಯೆ ಹೆಚ್ಚಾಗುತ್ತಿದೆ. ಚುನಾವಣೆ ಹತ್ತಿರ ಬಂದಂತೆ ಅದು ತಾರಕಕ್ಕೆರಲಿದೆ. ಈ ಪಕ್ಷಗಳ ಭವಿಷ್ಯ ಜನತಾ ನ್ಯಾಯಲಯದಲ್ಲಿ ನಿರ್ಧಾರವಾಗುತ್ತೆ ಮತ್ತು ಆ ತೀರ್ಪೇ ಅಂತಿಮ ಅನ್ನುತ್ತಲೇ ಕರ್ನಾಟಕದಲ್ಲಿ ಪ್ರಾದೇಶಿಕ ಪಕ್ಷಗಳಿಗೆ ನೆಲೆ ಸಿಗುವ ಸಾಧ್ಯತೆ ಯಾಕೆ ಹೆಚ್ಚಿದೆ ಅನ್ನುವುದರ ಬಗ್ಗೆ ನನ್ನ ಅನಿಸಿಕೆ ಓದುಗ ಗೆಳೆಯರೊಡನೆ ಹಂಚಿಕೊಳ್ಳಲು ಈ ಬರಹ.

ಭಾರತ ಒಕ್ಕೂಟದ ಮೇಲೊಂದು ಹಿನ್ನೋಟ
ಭಾರತ ಒಕ್ಕೂಟ ಅಸ್ತಿತ್ವಕ್ಕೆ ಬಂದ ದಿನಗಳನ್ನು ಒಮ್ಮೆ ಸುಮ್ಮನೆ ನೆನೆಸಿಕೊಳ್ಳಿ. ವಿವಿಧ ನುಡಿಯಾಡುವ, ವಿವಿಧ ಆಚರಣೆ, ಆಹಾರ, ಜೀವನವಿಧಾನವನ್ನೇ ಹೊಂದಿರುವ ಭಾರತ ಒಕ್ಕೂಟದ ಜನರನ್ನು ಭಾವನಾತ್ಮಕವಾಗಿ ಬೆಸೆದಿದ್ದು ನಮ್ಮೆಲ್ಲಗಿಂತಲೂ ಆರ್ಥಿಕವಾಗಿ, ತಾಂತ್ರಿಕವಾಗಿ ಮುಂದುವರೆದಿದ್ದ ಬ್ರಿಟಿಷ್ ಎಂಬ ಸಾಮಾನ್ಯ ಶತ್ರು. ಈ ಶತ್ರುವಿನ ವಿರುದ್ದ ಭಾರತ ಒಕ್ಕೂಟದ ಜನರನ್ನು ಸಂಘಟಿತರನ್ನಾಗಿಸಿ ಹೋರಾಟಕ್ಕೆ ಮೊನಚು ತಂದ ನಾಯಕರಿದ್ದದ್ದು ಕಾಂಗ್ರೆಸ್ ಅನ್ನುವ ಅಂದಿನ ಪಕ್ಷದಲ್ಲಿ. ಬ್ರಿಟಿಷರು ಭಾರತ ಬಿಟ್ಟು ಹೋದಾಗ ಜನರ ಮನದಲ್ಲಿದ್ದ “ಕಾಂಗ್ರೆಸ್ಸಿನವರು ಸ್ವಾತಂತ್ರಕ್ಕೆ ಕಾರಣರಾದರು” ಅನ್ನುವ ಭಾವನೆಯನ್ನೇ ಬಂಡವಾಳವಾಗಿಸಿಕೊಂಡು ದೇಶಾದ್ಯಂತ ಕಾಂಗ್ರೆಸ್ ಪಕ್ಷ ರಾಜಕೀಯ ನೆಲೆ ಕಂಡುಕೊಂಡಿತು. ಈ ಭಾವನಾತ್ಮಕ ಬಂಡವಾಳ ಗಟ್ಟಿಯಾಗಿದ್ದರಿಂದ ಸ್ವಾತಂತ್ರ್ಯ ನಂತರದ ಮೊದಲೆರಡು ದಶಕ ದೇಶಕ್ಕೆ ಒಂದೇ ಪಕ್ಷ ಅನ್ನುವಂತೆ ಕಾಂಗ್ರೆಸಿನ ಪಾರುಪತ್ಯ ನಡೆದಿತ್ತು.

ಒಂದು ಪಕ್ಷ, ಒಬ್ಬ ವ್ಯಕ್ತಿ ಒಕ್ಕೂಟವನ್ನಾಳುವುದು ಅಸಹಜ !
ಹೀಗೆ ಬ್ರಿಟಿಷರನ್ನು ಹೊಡೆದೊಡಿಸಲು ರೂಪುಗೊಂಡಿದ್ದ ಹೋರಾಟದಿಂದಾಗಿ ನೆಲೆ ಕಂಡಿದ್ದ ಭಾವನಾತ್ಮಕ ಒಗ್ಗಟ್ಟು ಅನ್ನುವ ತೆಳು ಅಂಟು ಕೆಲ ಸಮಯದಲ್ಲಿ ಖಾಲಿಯಾಗುತ್ತಲೇ ನಮ್ಮ ನಮ್ಮಲ್ಲಿನ ಆಸೆ, ಆಶೋತ್ತರಗಳು, ಏಳಿಗೆಯ ಕಲ್ಪನೆಗಳಲ್ಲಿನ ವೈವಿಧ್ಯತೆಗಳು ಹಂತ ಹಂತವಾಗಿ ಹೊರ ಹೊಮ್ಮತೊಡಗಿದವು. ಇಷ್ಟು ವ್ಯಾಪಕವೂ, ವೈವಿಧ್ಯಮಯವೂ ಆದ ಒಕ್ಕೂಟವೊಂದನ್ನು ಒಂದು ಪಕ್ಷ, ಒಬ್ಬ ವ್ಯಕ್ತಿ ದೆಹಲಿಯಿಂದ ಆಳುವುದು ಅತ್ಯಂತ ಅಸಹಜವೂ, ಆಳಲಸಾಧ್ಯವಾದದ್ದು (unwieldy) ಅನ್ನುವುದು ಅರ್ಥವಾಗತೊಡಗಿತು. ನೂರು ಕೋಟಿಗೂ ಮಿಗಿಲಾದ ಜನರ ಆಶೋತ್ತರಗಳನ್ನು ಒಂದು ಪಕ್ಷ, ಒಬ್ಬ ವ್ಯಕ್ತಿಯಿಂದ ಎಂದಿಗೂ ಈಡೇರಿಸಲಾಗದು ಅನ್ನುವ ಪ್ರಾಕ್ಟಿಕಲ್ ಆದ ತಿಳಿವೇ ಮುಂದಿನ ದಿನಗಳಲ್ಲಿ ಕಾಂಗ್ರೆಸಿನ ಪಾರಮ್ಯವನ್ನು ಮುರಿದು ದೇಶದ ಹಲವೆಡೆ ಪ್ರಾದೇಶಿಕ ಶಕ್ತಿಗಳು ಉದಯಿಸುವಂತೆ ಮಾಡಿದ್ದು ಅನ್ನುವುದನ್ನು ಗಮನಿಸಬೇಕಿದೆ. 1990ರ ಈಚೆಗೆ ಆರ್ಥಿಕ, ಸಾಮಾಜಿಕ ನೆಲೆಗಟ್ಟಿನಲ್ಲಾದ ತುರ್ತಿನ ಬದಲಾವಣೆಗಳು ಈ ಪ್ರಕ್ರಿಯೆಗೆ ಇನ್ನಷ್ಟು ವೇಗ ಒದಗಿಸಿದೆ ಅಂದರೆ ತಪ್ಪಾಗಲಾರದು.  Read more »

22
ನವೆಂ

ಸ್ವಾಭಿಮಾನದ ಬದುಕು ಕಟ್ಟಿಕೊಟ್ಟ “ಸರ್ಕಾರ್ “

-ಅಜಿತ್ ಎಸ್ ಶೆಟ್ಟಿ

ಕೇಸರಿ ಅಂಗಿ, ಕೇಸರಿ ಶಾಲು, ಕೇಸರಿ ಟೋಪಿ , ಕೇಸರಿ ಶೂಗಳು , ಕೇಸರಿ ಬಣ್ಣದ ಸೈಕಲ್ , ಅದಕ್ಕೆ ಕೇಸರಿ ಬಣ್ಣದ ಚಕ್ರಗಳು ,ಕೇಸರಿ ಪೆನ್ ಯಿಂದ ಹಿಡಿದು ಕೇಸರಿ ಬಣ್ಣದ ಮೊಬೈಲ್ ತನಕ ಎಲ್ಲವೂ ಕೆಸರಿನೇ.  ಹಿಂದುತ್ವವಾದಿ ಯಾದರೂ  ಮನೆಯಲ್ಲಿ ಯಾವದೇ ದೇವರ ಫೋಟೋ ಇಲ್ಲ.  ಇರುವದು ಎರಡೇ ಎರಡು ಫೋಟೋಗಳು ಅವರುಗಳೇ ಇವನ ಪಾಲಿಗೆ ದೇವರು. ಆ ಫೋಟೋ ಗಳು ಬೇರೆ ಯಾರದ್ದು ಅಲ್ಲಾ ಮರಾಠ ಸೇನಾಧಿಪತಿ , ಹಿಂದೂ ಹೃದಯ ಸಾಮ್ರಾಟ್ , ಹುಲಿ, ಬಾಳಾ ಸಾಹೇಬ್  ಠಾಕ್ರೆ ಮತ್ತು ಅವರ ಪತ್ನಿ ಮೀನಾ ಅವರದ್ದು . ಅವರನ್ನು ಅರಾಧಿಸುತಿರುವವರು 52 ರ ಹರೆಯದ ಪೂನಾ ಜಿಲ್ಲೆಯ  ನಂಗೋನ್ ಎಂಬಲ್ಲಿನ ಮಹಾದೇವ್ ಯಾದವ್. ನಾವು ಇಂಥ ಸಾವಿರಾರು   ಠಾಕ್ರೆ ಅಭಿಮಾನಿಗಳನ್ನು ಮಹಾರಾಷ್ಟ್ರದಲ್ಲಿ ನೋಡಬಹುದು . 

ಇಂದು ಬಾಳಾ ಸಾಹೇಬ್ ಯನ್ನು “ತಮಿಳು ವಿರೋಧಿ” “ಕನ್ನಡಿಗರ ಪಾಲಿನ ಶತ್ರು ” ಉತ್ತರ ಭಾರತೀಯರು ಮತ್ತು ಗುಜರಾತಿಗಳ ಪಾಲಿಗೆ ಕಂಟಕರಾಗಿದ್ದವರೆಂದು ಬೆರಳೆಣಿಕೆ ಎಷ್ಟು ಇರುವ ಅವರ ವಿರೋಧಿಗಳು ಕರೆಯಬಹುದು . ಆದರೆ ಅದು ಬಾಳಾ ಸಾಹೇಬ್  ಠಾಕ್ರೆ ಯವರ   ವ್ಯಕ್ತಿತ್ವದ ಮುಂದೆ ಗೌಣವಾಗುತದೆ . ಠಾಕ್ರೆ ವ್ಯಕ್ತಿತ್ವ ಅಂತಹುದು ತನ್ನ ನಿಲುವನ್ನು ಸ್ಪಷ್ಟವಾಗಿ ಹೇಳುತಿದ್ದ . ಎಲ್ಲಿಯೂ ಎಡಬಿಡಂಗಿ ತರ ವರ್ತಿಸುತಿರಲಿಲ್ಲ.  ಉದಾಹರಣೆ ಸಮೇತ ಸಮರ್ಥಿಸಿಕೊಳ್ಳುತಿದ್ದರು. ಅದು ಇಂದಿರೆ ಹೇರಿದ ತುರ್ತು ಪರಿಸ್ಥಿತಿಯಿಂದ ಹಿಡಿದು ಹಿಟ್ಲರ್ ಬಗೆಗಿನ ಠಾಕ್ರೆ  ಅಭಿಮಾನದವರೆಗೆ. ದೇಶಕ್ಕೆ ಕಳಂಕದಂತಿದ್ದ , ಗುಲಾಮತೆಯ ಪ್ರತೀಕದಂತೆ ಭಾಸವಾಗುತಿದ್ದ ಬಾಬ್ರಿ ಮಸೀದಿ ದ್ವಂಸದಿಂದ, ಭಾರತ-ಪಾಕ್ ಕ್ರಿಕೆಟ್ ಪಂದ್ಯದ ತನಕ. ಎಲ್ಲಿಯೂ ರಾಜಿ ಇರಲಿಲ್ಲ. ಬಾಳಾ ಸಾಹೇಬ್ ಠಾಕ್ರೆ ಒಬ್ಬ ಭಾಷಾಪ್ರೇಮಿಯಾಗಿದ್ದರು ಅಪ್ರತಿಮ ದೇಶಭಕ್ತ, ಒಬ್ಬ ಹುಟ್ಟು ಹೋರಾಟಗಾರ, ಅಂಜದೇ ಅಳುಕದೇ ಯಾರಿಗೂ ತಲೆಬಾಗದೆ ತಾನು ನಂಬಿಕೊಂಡು ಬಂದಿರುವ ತತ್ವ ಸಿದ್ದಾಂತವನ್ನು  ಪ್ರತಿಪಾದಿಸುವವ. ತಮ್ಮವರ ಹಕ್ಕಿಗಾಗಿ ಹೋರಾಡಿದ ಧೀಮಂತ ನಾಯಕ. ತನ್ನ ಶಕ್ತಿಯ ಮೇಲೆ, ತನ್ನ ಜನರ ನಂಬಿಕೆ ಮೇಲೆ ಅಪಾರ ಭರವಸೆ ಇಟ್ಟುಕೊಂಡಿದ್ದ ಅದ್ಬುತ ಮಾತುಗಾರ. ತನ್ನ ನಂಬಿರುವ ತನ್ನ ಜನರ ಭರವಸೆ ಎಂದು ಹುಸಿಗೊಳಿಸದ, ಅವರಿಗೆ ಸ್ವಾವಲಂಬಿ ಬದುಕು ಕಟ್ಟಿಸಿಕೊಟ್ಟ “ಸರ್ಕಾರ್” . ಉಳಿದವರಿಗೆ ಸ್ಪೂರ್ತಿಯ ಚಿಲುಮೆ . ಒಬ್ಬ ವ್ಯಂಗ್ಯ ಚಿತ್ರಗಾರ ನಾಗಿ ಬದುಕು ಪ್ರಾರಂಭಿಸಿದ ಬಾಳಾ ಸಾಹೇಬ್ ಠಾಕ್ರೆ  ಬೆಳೆದು ಬಂದ ಅವನ ವಿರೋಧಿಗಳು ಮೆಚ್ಚುವಂಥಹುದು . ಅದಕ್ಕೊಂದು ಸಲಾಂ ಹೇಳಲೇ ಬೇಕು. ವಿವಾದಾತ್ಮಕ ವಾಗಿದ್ದರೂ ವರ್ಣರಂಜಿತ ಬದುಕು.
Read more »

21
ನವೆಂ

ಹುಚ್ಚರ ಮದುವೆಯಲ್ಲಿ ಉ೦ಡವನೇ ಜಾಣ!!

– ಕೆ ಎಸ್ ರಾಘವೇಂದ್ರ ನಾವಡ

ಅ೦ತೂ ಇ೦ತೂ ಕೆಜಿಪಿ. ಯಡಿಯೂರಪ್ಪ ನವರ ತೆಕ್ಕೆಗೆ ಬಿದ್ದಿದೆ. ಧನ೦ಜಯ ಕುಮಾರ್ ಅಧ್ಯಕ್ಷರಾಗಿಯೂ ಕೆಜಿಪಿಯ ಹಳೇ ಮಾಲೀಕರಾಗಿದ್ದ ಪ್ರಸನ್ನಕುಮಾರ್ ಉಪಾಧ್ಯಕ್ಷರಾಗಿಯೂ ಆಯ್ಕೆಯಾಗಿದ್ದಾರೆ. ಕಾರ್ಯದರ್ಶಿಗಳು ಮತ್ತು ಇತರೆ ಪದಾಧಿಕಾರಿಗಳ ನೇಮಕವೂ ಆಗಿದೆ.. ಎಲ್ಲರಿಗೂ ಗೊತ್ತಿದೆ.. ಧನ೦ಜಯ ಕುಮಾರ್ ಹೆಸರಿಗೆ ಮಾತ್ರ ಅಧ್ಯಕ್ಷರಾಗಿರುವುದು.. ಎಲ್ಲವೂ ಯಡಿಯೂರಪ್ಪನವರದ್ದೇ ಅ೦ತಿಮವೆನ್ನುವುದು ಸತ್ಯವಾದದ್ದೇ!

ಯಡಿಯೂರಪ್ಪನವರ ಹಟವೇ ಅ೦ಥಾದ್ದು! ಚೆಡ್ಡಿ ದೋಸ್ತಿಯಾಗಿದ್ದ ಈಶ್ವರಪ್ಪನವರ ವೈರವನ್ನೂ ಅವರೀಗ ಕಟ್ಟಿಕೊ೦ಡಿದ್ದಾರೆ. ಮು೦ದಿನ ಚುನಾವಣೆಯಲ್ಲಿ  ತನ್ನ ಆ ದೋಸ್ತಿಯ ಎದುರೇ ಸ್ಪರ್ಧಿಸಲೂ ಹಿ೦ದೇಟು ಹಾಕರು ಯಡಿಯೂರಪ್ಪ! ತಾನಿಲ್ಲದ ಬಿ.ಜೆ.ಪಿಯನ್ನು ಯಡಿಯೂರಪ್ಪ ಈಗಾಗಲೇ ಕಲ್ಪಿಸಿಕೊ೦ಡಿದ್ದಾರೆ! ಅದಕ್ಕೆ ತಕ್ಕ೦ತೆ ಅವರ ಈಗಿನ ನಡೆಗಳೂ ಕೂಡಾ! ಅವರನ್ನು ಬಿ.ಜೆ.ಪಿಯಲ್ಲಿಯೇ ಉಳಿಸಿಕೊಳ್ಳಲು ವರಿಷ್ಟರು ಹರಸಾಹಸ ಪಡುತ್ತಿದ್ದಾರೆ! ಸ೦ಧಾನಕ್ಕಾಗಿ ಒಬ್ಬರ ಮೇಲೊಬ್ಬರನ್ನು ಕಳುಹಿಸಿದರೂ ಮುಗುಮ್ಮಾಗಿರುವ ಯಡಿಯೂರಪ್ಪನವರ್ ಮುಖ ಅರಳುತ್ತಿಲ್ಲ. ಅವರಾಗಲೇ ಮಾನಸಿಕವಾಗಿ ಬಿ.ಜೆ,ಪಿ.ಯನ್ನು ಬಿಟ್ಟು ಬಹಳ ದೂರ ಹೋಗಿಯಾಗಿದೆ! ಹಿ೦ದೆ ಬಿ.ಬಿ.ಶಿವಪ್ಪನವರಿಗಾದ ಗತಿಯೇ ಇ೦ದು ಯಡಿಯೂರಪ್ಪನವರಿಗೂ ಆಗಿದೆ. ಬಿ.ಬಿ.ಶಿವಪ್ಪ ಹೊಸ ಪಕ್ಷ ಕಟ್ಟಲಿಲ್ಲ.. ಅದರೆ  ಯಡಿಯೂರಪ್ಪ ಅನಾಥವಾಗಿದ್ದ ಕೆ,ಜಿ.ಪಿ.ಗೆ ಬಲ ತು೦ಬಿದ್ದಾರಷ್ಟೇ!

Read more »

19
ನವೆಂ

ಬ್ರಿಟಿಷರ ನಿದ್ದೆ ಕೆಡಿಸಿದ ಭಾರತದ ಸಿಂಹಿಣಿ ಝಾನ್ಸಿ ರಾಣಿ ಲಕ್ಷ್ಮೀಬಾಯಿ

– ಶ್ರೀವಿದ್ಯಾ,ಮೈಸೂರು

ನಮ್ಮ ಭಾರತದ ವೀರ ಮಹಿಳೆ ರಾಣಿ ಲಕ್ಷ್ಮೀಬಾಯಿ ಅವರಂತಹ ಮಹಿಳೆ ಯಾರಾದರೂ ಇದ್ದಾರಾ ಎಂದು ಹೆಮ್ಮೆ ಪಟ್ಟವರು ನಮ್ಮ ಗುರು ಸ್ವಾಮಿ ವಿವೇಕಾನಂದ !!

ಅವಳ ಸೌಂದರ್ಯ, ಶೌರ್ಯ, ನಡವಳಿಕೆ, ಜನರ ಮೇಲೆ ಪ್ರೀತಿ, ದೇಶದ ಪ್ರೇಮ, ಹೋರಾಟ, ನೋವು-ನಲಿವು ಇವೆಲ್ಲವೂ ಯಾರಿಗೂ ಸಮಾನವಿಲ್ಲ. ಅವಳೇ ಭಾರತದ ಏಕಮಾತ್ರ ವೀರಮಹಿಳೆ. ಬ್ರಿಟಿಷರ ವಿರುದ್ಧ ಹೋರಾಡಿದ ಸಿಂಹಿಣಿ ! ಕೊನೆಯಲ್ಲಿ ಅವಳ ಸಾವು ಹೇಗಿತ್ತು ಅಂದರೆ ನಮ್ಮ ಕಣ್ಣೀರು ಸುರಿಸುವಂತೆ ಅಲ್ಲದೇ ಬ್ರಿಟಿಷರ ಮೇಲೆ ರೋಷವೂ ಉಕ್ಕಿ ಬರುತ್ತದೆ ! ಅವಳ ಕೊನೆಯ ಹೋರಾಟ ಹಾಗೂ ಸಾವು ಓದಿದರೆ ಅದು ನಮ್ಮ ಕಣ್ಣ್ಮುಂದೆ ನಡೆಯೋ ಹಾಗೆ ಅನ್ನಿಸುತ್ತೆ !!!

ಅವಳ ಜೀವನ ಹೇಗಿತ್ತು ?? ಓದೋಣ –

ಕಾರ್ತಿಕ ಮಾಸದ ಬಿದಿಗೆಯ ದಿನ ೧೮೩೫ ನೇ ಇಸವಿ ನವೆಂಬರ್ ೧೯ ರಂದು ಮನೂಬಾಯಿ ಜನಿಸಿದಳು. ಅವಳ ತಂದೆ ಮೋರೋಪಂತ್, ತಾಯಿ ಭಾಗೀರಥಿಬಾಯಿ. ಮನೂಬಾಯಿಗೆ ನಾಲ್ಕು ವರ್ಷದವಳಾಗಿದ್ದಾಗ ತಾಯಿ ತೀರಿಕೊಂಡಳು. ಅವಳ ಪೂರ್ಣ ಜವಾಬ್ದಾರಿ ತಂದೆಯದಾಯಿತು. ಅವಳು ನಾನಾಸಾಹೇಬ್, ರಾವ್ ಸಾಹೇಬರ ಜೊತೆಗೆ ಆಪ್ತಳಾಗಿದ್ದಳು. ಅವಳು ಅವರ ಜೊತೆ ಹುಡುಗಾಟ, ಕುದುರೆಸವಾರಿ ಮಾಡುತ್ತಿದ್ದಳು. ಅವಳು ತಂದೆಯವರಿಂದ ಸಾಧ್ವಿಸೀತೆ, ವೀರಮಾತೆ ಜೀಜಾಬಾಯಿ, ವೀರಾಂಗನೆ ತಾರಾಬಾಯಿಯವರ ಜೀವನ – ಆದರ್ಶಗಳನ್ನು ರೂಢಿಸಿಕೊಂಡಿದ್ದಳು. ಕತ್ತಿವರಸೆ, ಕುದುರೆಸವಾರಿ, ಬಂದೂಕುಗುರಿ ಸಾಧನೆಗಳ ಜೊತೆಯಲ್ಲೇ ವಿದ್ಯಾಭ್ಯಾಸವೂ ದೊರಕಿತು.ಅವಳಿಗೆ ಏಳು ವರ್ಷ ಆಗಿದ್ದಾಗ ನಲವತ್ತೈದು ವರ್ಷದ ಝಾನ್ಸಿ ಮಹಾರಾಜ ಗಂಗಾಧರರಾಯರ ಗೃಹಲಕ್ಷ್ಮಿಯಾದಳು. ಝಾನ್ಸಿ ರಾಜ್ಯದ ರಾಣಿ ಲಕ್ಷ್ಮೀಬಾಯಿಯಾದಳು.

Read more »

19
ನವೆಂ

ಡಾ ಅಂಬೇಡ್ಕರ್, ಸಾಮರಸ್ಯ ಮತ್ತು ಆರೆಸ್ಸೆಸ್

-ರಾಜೇಶ್  ಪದ್ಮಾರ

ಮಲೆನಾಡಿನ ಪೂರ್ಣಚಂದ್ರ ತೇಜಸ್ವಿ ಇರಲಿ ಕರಾವಳಿಯ  ಪ್ರೊ|| ಅಮೃತ ಸೋಮೇಶ್ವರ ಇರಲಿ ಅಥವಾ ಕೋಲಾರದ ಗುಡಿಬಂಡೆಯ ಡಾ|| ಎಂ.ಟಿ.ಕಾಂಬೈ ಇರಲಿ ‘ಸಾಮರಸ್ಯ’ ನನಗದು ಅತ್ಯಂತ ಪ್ರಿಯವಾದ ಶಬ್ದ ಎನ್ನುವುದುಂಟು. ಅದು ಮನೆಯಲಿರಲಿ, ವ್ಯಾಪಾರವಿರಲಿ ಕೊನೆಗೆ ರಾಜಕಾರಣವೇ ಇರಲಿ ಸಾಮರಸ್ಯಬೇಕು.

ಈ ಸಾಮರಸ್ಯ ಮನುಷ್ಯನಲ್ಲೇ ಇದೆ. ಕಾಲಿರಲಿ, ಕೈಯಿರಲಿ, ತಲೆಯಿರಲಿ ಒಂದಕ್ಕೊಂದು ಪೂರಕವೇ. ಕಾಲಿಗೆ ಮುಳ್ಳು ಚುಚ್ಚಿದಾಗ ಕೈ ‘ತನಗೇನೂ ಆಗಿಲ್ವಲ್ಲ’ ಎಂದು ಸುಮ್ಮನಿರುವುದಿಲ್ಲ. ಹೀಗೆ ಒಂದಕ್ಕೊಂದು, ಒಬ್ಬರಿಗೊಬ್ಬರು ಪೂರಕವಾಗಿ ಯೋಚಿಸುವುದು, ನೆರವಿಗೆ ಮುಂದಾಗುವುದೇ ಸಾಮರಸ್ಯ. ಶರೀರದಲ್ಲಿರುವ ಈ ಸಮರಸತೆ, ಸಮಾಜದಲ್ಲೂ ಬರಬೇಕಷ್ಟೆ.

ಹಾಗೇ ಸಮಾಜ ಸಾಮರಸ್ಯದಿಂದಿರಲು ತೊಡಕುಗಳೂ ಇವೆ. ವಿದ್ಯೆ, ಆಸ್ತಿ, ಅಂತಸ್ತು, ಜಾತಿ, ಭಾಷೆ ತೊಡಕು ತಂದುಹಾಕುತ್ತೇವೆ. ವಿದ್ಯೆ, ಸಿರಿವಂತಿಕೆ ಇದೆಯಲ್ಲ ಅದು ಅವರವರು ಗಳಿಸಿದ್ದು, ಆದರೆ ಜಾತಿ- ಅದು ಗಳಿಸಿದ್ದಲ್ಲ. ಅದು ಹುಟ್ಟಿದಾಗ ಅಂಟಿಕೊಂಡಿದ್ದು.

‘ಮಂಡಲ್ ವರದಿ’ ಖ್ಯಾತಿಯ ಆ ಬಿಂದೇಶ್ವರ ಪ್ರಸಾದ್ ಮಂಡಲ್ ಪ್ರಕಾರ ಭಾರತದಲ್ಲಿ 5600 ಜಾತಿಗಳು. ಜಾತಿ ಇರೋದೆ ತಪ್ಪಾ? ಹಾಗೆ ಹೇಳೋರು ಇದಾರೆ. ಅವರೊಂದಿಗೆ ಹೊಸ ಜಾತಿನೇ ಆಗಿದ್ದಾರೆ. ಯಾವುದರಲ್ಲಿ ಜಾತಿ ಇಲ್ಲ? ಭತ್ತದಲ್ಲಿ ಅದೆಷ್ಟು ನಮೂನೆ? ಮಾವಿನಹಣ್ಣಿನಲ್ಲಿ ಅದೆಷ್ಟು ಥರಾ? ಬದನೆಕಾಯಿಯಲ್ಲೂ ಅದೆಷ್ಟು ರೀತಿ? ಹೋಗಲಿ ನಮ್ಮ ದೇಶದ ಮಣ್ಣಿದೆಯಲ್ಲ ಅದೆಷ್ಟು ಬಗೆ? ಈ ನಮೂನೆ, ಥರ, ಬಗೆ, ರೀತಿಗಳೇ ಜಾತಿಗಳಾಗೋದು. ಬಣ್ಣವೋ, ರುಚಿಯೋ, ಗುಣ ಸ್ವಭಾವವೋ  ಜಾತಿ ಆಗಿಬಿಡುತ್ತದೆ ಸರಿ. ಆದರೆ ‘ನಾನೇ ಮೇಲು’ ಎಂಬ ಈ ‘ಶ್ರೇಷ್ಠತೆಯ ವ್ಯಸನ’ ಇದೆಯಲ್ಲ ಇದು; ವಿವೇಕ’ ಇರೋ ಮನುಷ್ಯ ಸಂಕುಲದಲ್ಲಿ ಮಾತ್ರ. ಅದು ಯಾವುದೇ, ಯಾರದೇ ಭಾಷಣವಿರಲಿ ಸಾಮಾನ್ಯವಾಗಿ ಶುರುವಾಗುವುದು ‘ಅಣ್ಣತಮ್ಮಂದಿರೇ’ ಎಂದಲ್ಲವೇ? ಆಸ್ತಿ ಹಂಚಿಕೊಳ್ಳುವುದು ಬೇಡ ಸ್ವಾಮಿ, ಒಟ್ಟಿಗೆ ಕೂತು ಒಂದೇ ಸಾಲಿನಲ್ಲಿ ಊಟ ಮಾಡಲೇನು ಅಡ್ಡಿ? ಹೆಗಲ ಮೇಲೆ ಕೈಹಾಕಿ ಪ್ರೀತಿಯಿಂದ ಮಾತನಾಡಿಸಲೇನು ಸಂಕಟ? ನಮ್ಮೂರ ದೇವಸ್ಥಾನಕ್ಕೆ ಇದೇ ಅಣ್ಣತಮ್ಮಂದಿರೆಲ್ಲ ಬಂದರೇಕೆ ಕಿರಿಕಿರಿ?

ಸಮಸ್ಯೆ ಇರುವುದೇ ಈ ನಡೆನುಡಿಯ ನಡುವಿನ ಅಂತರದಲ್ಲಿ. ಅಸಲಿಗೆ ನಮ್ಮ ವೇದಗಳು, ಉಪನಿಷತ್ತುಗಳು ಜಗತ್ತಿನ ಹಿತವನ್ನೇ ಮಾತನಾಡುತ್ತವೆ. ಆದರೆ ವೇದದ ವಕ್ತಾರಿಕೆ ಹಿಡಿದೋರು ಜಗತ್ತಿನಲ್ಲಿ ಪಕ್ಕದ ಕೇರಿಯವನನ್ನೂ ಹತ್ತಿರ ಸೇರಿಸುವುದಿಲ್ಲ, ಶರಣರನ್ನು, ವಚನಕಾರರನ್ನು ಕಂಠಪಾಠ ಮಾಡಿರೋರು ಇದಾರೆ, ಅರ್ಥ ತಿಳಿದು ಆಚರಿಸುವವರನ್ನು ಹುಡುಕಬೇಕಷ್ಟೆ. ಕೋಲಾರ ಜಿಲ್ಲೆಯಲ್ಲಿ ಬಸ್ಸಿನಲ್ಲೊಮ್ಮೆ ಪ್ರಯಾಣಸಾಗಿತ್ತು. ಹಳ್ಳಿಯೊಂದರಲ್ಲಿ ಬಸ್ಸು ನಿಂತಾಗ ಕೆಲವು ಕಾಲೇಜು ಹುಡುಗರು ಹತ್ತಿದರು. ಹಾಗೆ ಬಂದು ಪಕ್ಕದಲ್ಲಿ ಕೂತವನ ಹತ್ತಿರ ಮಾತಿಗಿಳಿದಿದ್ದೆ. ಹೆಸರು, ಊರು, ಕಾಲೇಜು, ಕೋರ್ಸು, ಕಾಂಬಿನೇಶನ್ ಕೇಳುತ್ತಲೇ ‘ನಿಮ್ಮ ಊರಲ್ಲೊಂದು ಚರ್ಚ್ ಆಗಿದೆಯಂತಲ್ಲ, ಹೌದಾ?’ ಎಂದೆ. Read more »