ವಿಷಯದ ವಿವರಗಳಿಗೆ ದಾಟಿರಿ

Archive for

15
ಜನ

ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಈ ತಾಂತ್ರಿಕ ಗೋಷ್ಠಿಗಳನ್ನ ಸೇರಿಸುವಂತೆ ಆಗ್ರಹ

– ಗಣೇಶ್ ದಾವಣಗೆರೆ

Kannada Sahitya Sammelanaಫೆಬ್ರವರಿಯಲ್ಲಿ ನಡೆಯಲಿರುವ ಬಿಜಾಪುರ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಈ ಕೆಳಕಂಡ ಕನ್ನಡ ತಾಂತ್ರಿಕ ಗೋಷ್ಠಿಗಳನ್ನ ಸೇರಿಸಿ. ಕನ್ನಡದ ಅಭಿವೃದ್ಧಿಯ ದೃಷ್ಟಿಯಿಂದ ಇದು ಅತ್ಯವಶ್ಯಕ.

ಸಧ್ಯದ ಮಾಹಿತಿಯ ಪ್ರಕಾರ ಈ ಬಾರಿಯ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಒಂದೇ ಒಂದು ತಾಂತ್ರಿಕ ಗೋಷ್ಟಿಯನ್ನ ಹಾಕಿಲ್ಲ. ಕನ್ನಡವೆಂದರೆ ಬರೀ ಹಳೆಗನ್ನಡ, ನಡುಗನ್ನಡ, ಆಧುನಿಕ ಕನ್ನಡ, ನವೋದಯ, ನವ್ಯ, ನವ್ಯೋತ್ತಗಳಷ್ಟೇನಾ? ನಿಮ್ಮ ಮೊಬೈಲುಗಳಲ್ಲಿ ಕನ್ನಡ ಸಾಹಿತ್ಯವನ್ನ ಓದಲಿಕ್ಕೆ, ಬರೆಯಲಿಕ್ಕೆ ಕನ್ನಡದ ಸಾಫ್ಟ್‌ವೇರುಗಳು, ಆಂಡ್ರಾಯ್ಡ್ App ಗಳು, ಕಂಪ್ಯೂಟರಿನಲ್ಲಿ, ಲ್ಯಾಪ್‌ಟಾಪಿನಲ್ಲಿ , ಟ್ಯಾಬ್ಲೆಟ್‌ನಲ್ಲಿ ಕನ್ನಡ ಬೇಡವಾ? ಕಂಪ್ಯೂಟರ್‌ನಲ್ಲಿ ಕನ್ನಡ ಬರೆಯುವ ಬಗ್ಗೆ ಜಾಗೃತಿ ಬೇಡವಾ? ಸ್ವತಃ ಕ.ಸಾ.ಪ ವೆಬ್ ಸೈಟೇ ಅಸ್ತಿತ್ವದಲ್ಲಿಲ್ಲ. ಯಾವುದೇ ಮಾಹಿತಿಯೂ ಇಲ್ಲ. ಕಂಪ್ಯೂಟರ್ ಯುಗದಲ್ಲಿರುವ ನಾವು ನಮ್ಮ ಭಾಷೆಗೆ ತಂತ್ರಜ್ಞಾನದ ನೆರವು ಪಡೆಯಬೇಕು.

ಕಸಾಪ ಅಧ್ಯಕ್ಷರಿಗೆ ಕೇಳಿದರೆ, ಈ ಬಾರಿ ಎಲ್ಲವೂ ಸಭೆಯಲ್ಲಿ ನಿರ್ಣಯಿಸಲಾಗಿದೆ ಸೇರಿಸಲಿಕ್ಕೆ ಸಾಧ್ಯವಿಲ್ಲ ಎಂದಿದ್ದಾರೆ. ಇನ್ನೂ ಬಹಳ ದಿನಗಳ ಸಮಯವಿದೆ. ಕನ್ನಡದ, ಕನ್ನಡಿಗರ ಶ್ರೇಯೋಭಿವೃದ್ಧಿಗಾಗಿ ಆಸಕ್ತಿವಹಿಸಬೇಕಾದ ಕ.ಸಾ.ಪ.ಗೇಕೆ ತಂತ್ರಾಂಶ, ತಂತ್ರಜ್ಞಾನದ ಬಗ್ಗೆ ಇಷ್ಟು ಅಸಡ್ಡೇ?

ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷರಾದ ಪುಂಡಲೀಕ ಹಾಲಂಬಿಯವರಿಗೆ ಒಂದು ಸವಿನಯ ಮನವಿ. ಕನ್ನಡದ ಅಂತರ್ಜಾಲ ಪ್ರಪಂಚದಲ್ಲಿ ಸಕ್ರಿಯವಾಗಿರುವ ಸಾವಿರಾರು ಬ್ಲಾಗಿಗರು,ಕನ್ನಡ ವೆಬ್ ಡೆವಲಪರ್‌ಗಳು,ಓಪನ್ ಸೋರ್ಸ್ ಆಸಕ್ತರು, ಸಾಫ್ಟ್‌ವೇರ್ ಎಂಜಿನಿಯರುಗಳು, ಎಂಜಿನಿಯರಿಂಗ್ ಕಾಲೇಜಿನ ಪ್ರಾಧ್ಯಾಪಕರುಗಳು, ವಿದ್ಯಾರ್ಥಿಗಳನ್ನ ಸೇರಿಸುವ ಪ್ರಯತ್ನವಾಗಿ ಕೆಳಕಂಡ ಗೋಷ್ಟಿಗಳನ್ನ ಸೇರಿಸಿ. ಕನ್ನಡದ ತಾಂತ್ರಿಕ ಅಭಿವೃದ್ಧಿಯ ದೃಷ್ಟಿಯಿಂದ ಇದು ಅತ್ಯಾವಶ್ಯಕ.

 

ಮತ್ತಷ್ಟು ಓದು »

15
ಜನ

‘ಅನ್ ಎಥಿಕಲ್ ’ ಸಂಸ್ಥೆಗಳು

-ಬಿಂದು ಮಾಧವಿ,ಹೈದರಾಬಾದ್

FUN_ITS-ONLY-UNETHICALನನಗೆ ethical ಎಂಬ ಪದಕ್ಕೆ ನೀತಿ, ಸಿದ್ಧಾಂತ ಎಂಬ ಅರ್ಥಗಳು ಕನ್ನಡಕಸ್ತೂರಿ.ಕಾಮ್ ನಲ್ಲಿ ಸಿಕ್ಕವು. ಆದರೆ ಏಕೋ Ethics ಅಂದರೆ ಅಷ್ಟೇ ಅಲ್ಲ ಎನ್ನಿಸಿತು, ಹಾಗಾಗಿ ಈ ಬರಹಕ್ಕೆ ಆಂಗ್ಲ ನಾಮಧೇಯವನ್ನೇ ಇಟ್ಟಿದ್ದೇನೆ.

ಮೊನ್ನೆ ಮೊನ್ನೆ ಓಸ್ಮಾನಿಯ ವಿಶ್ವವಿದ್ಯಾನಿಲಯದಲ್ಲಿ ವಿದ್ಯಾರ್ಥಿಗಳು ಅನ್ಯಾಯದ ವಿರುದ್ದ ಪ್ರತಿಭಟಿಸಿ ಅಧಿಕಾರಿಗಳ ಮೇಲೆ ಹಲ್ಲೆ ಮಾಡಿದರು ಎಂದು ಓದಿದ್ದೆ. ಹೀಗೇ ಅನೇಕ ವಿಷಯಗಳನ್ನು ಓದಿದಾಗ, ಏಕೆ ಹಾಗೆ ಅನಾಗರೀಕರಂತೆ ವರ್ತಿಸಬೇಕು? ಅನ್ಯಾಯದ ವಿರುದ್ದ ಪ್ರತಿಭಟಿಸುವುದೇ ಆದರೆ ಸರಿಯಾದ ಮಾರ್ಗವಿಲ್ಲವೇ ಎಂದೆನಿಸುತ್ತದೆ. ಆದರೆ ನಾವುಗಳೇ ಅನ್ಯಾಯದ ಬಲಿಪಶುಗಳಾದಾಗ, ನಾವುಗಳೇ ’ಕುರಿ ಕುರಿ’ ಆದೆವು ಎಂದು ತಿಳಿದಾಗ, ಸಂಯಮದಿಂದಿರುವುದು ಎಷ್ಟು ಕಷ್ಟ ಎಂದು ತಿಳಿಯುತ್ತದೆ. ಇಲ್ಲೇ ಇವರಿಗೆ ಕೆನ್ನೆಗೆ ಬಾರಿಸಿದರೆ ಏನು ತಪ್ಪು ಎಂದು ಎನಿಸುತ್ತದೆ.

ಮತ್ತಷ್ಟು ಓದು »