‘ಅನ್ ಎಥಿಕಲ್ ’ ಸಂಸ್ಥೆಗಳು
-ಬಿಂದು ಮಾಧವಿ,ಹೈದರಾಬಾದ್
ನನಗೆ ethical ಎಂಬ ಪದಕ್ಕೆ ನೀತಿ, ಸಿದ್ಧಾಂತ ಎಂಬ ಅರ್ಥಗಳು ಕನ್ನಡಕಸ್ತೂರಿ.ಕಾಮ್ ನಲ್ಲಿ ಸಿಕ್ಕವು. ಆದರೆ ಏಕೋ Ethics ಅಂದರೆ ಅಷ್ಟೇ ಅಲ್ಲ ಎನ್ನಿಸಿತು, ಹಾಗಾಗಿ ಈ ಬರಹಕ್ಕೆ ಆಂಗ್ಲ ನಾಮಧೇಯವನ್ನೇ ಇಟ್ಟಿದ್ದೇನೆ.
ಮೊನ್ನೆ ಮೊನ್ನೆ ಓಸ್ಮಾನಿಯ ವಿಶ್ವವಿದ್ಯಾನಿಲಯದಲ್ಲಿ ವಿದ್ಯಾರ್ಥಿಗಳು ಅನ್ಯಾಯದ ವಿರುದ್ದ ಪ್ರತಿಭಟಿಸಿ ಅಧಿಕಾರಿಗಳ ಮೇಲೆ ಹಲ್ಲೆ ಮಾಡಿದರು ಎಂದು ಓದಿದ್ದೆ. ಹೀಗೇ ಅನೇಕ ವಿಷಯಗಳನ್ನು ಓದಿದಾಗ, ಏಕೆ ಹಾಗೆ ಅನಾಗರೀಕರಂತೆ ವರ್ತಿಸಬೇಕು? ಅನ್ಯಾಯದ ವಿರುದ್ದ ಪ್ರತಿಭಟಿಸುವುದೇ ಆದರೆ ಸರಿಯಾದ ಮಾರ್ಗವಿಲ್ಲವೇ ಎಂದೆನಿಸುತ್ತದೆ. ಆದರೆ ನಾವುಗಳೇ ಅನ್ಯಾಯದ ಬಲಿಪಶುಗಳಾದಾಗ, ನಾವುಗಳೇ ’ಕುರಿ ಕುರಿ’ ಆದೆವು ಎಂದು ತಿಳಿದಾಗ, ಸಂಯಮದಿಂದಿರುವುದು ಎಷ್ಟು ಕಷ್ಟ ಎಂದು ತಿಳಿಯುತ್ತದೆ. ಇಲ್ಲೇ ಇವರಿಗೆ ಕೆನ್ನೆಗೆ ಬಾರಿಸಿದರೆ ಏನು ತಪ್ಪು ಎಂದು ಎನಿಸುತ್ತದೆ.
ನಾನು ಕಳೆದ ತಿಂಗಳು ಒಂದು ಪ್ರತಿಷ್ಟಿತ ಸಂಸ್ಥೆಯಲ್ಲಿ ಅಧ್ಯಾಪಕ ಹುದ್ದೆಗೆ ಸಂದರ್ಶನಕ್ಕೆಂದು ಹೋಗಿದ್ದೆ. ಹೋಗುವ ಮೊದಲೇ ನಾನು ನಿರೀಕ್ಷಿಸುವ ಸಂಬಳ, ತಿಳಿಸಿದ್ದೆ. ಕೇವಲ ಸಂದರ್ಶನವೋ ಅಥವಾ ಒಂದು ಮಾದರಿ ಪಾಠ ಮಾಡಲು ರೆಡಿಯಾಗಿ ಬರಬೇಕೋ ಎಂದು ಕೇಳಿದ್ದೆ. ಹೌದು, ಡೆಮೋ ಕ್ಲಾಸ್ ಗೆ ರೆಡಿಯಾಗಿ ಬನ್ನಿ ಎಂದಿದ್ದರು. ಸರಿ ನಾನು ಡೆಮೋ ಕ್ಲಾಸ್ ಗೆ ರೆಡಿಯಾಗಿ ಹೋದೆ. ಆ ಸಂಸ್ಥೆ ಊರ ಹೊರಗೆ ಇದ್ದುದರಿಂದ ನಾನು taxi ಯಲ್ಲಿ ಹೋಗಿ ಬಂದೆ. ಸಂದರ್ಶನ, ಡೆಮೋ ಕ್ಲಾಸ್ ಎಲ್ಲವೂ ಆಯಿತು. ಆ Director, ಮತ್ತೆ ನಿಮ್ಮ ಮುಂದಿನ Demo class ಯಾವಾಗ ಎಂದು ಕೇಳಿದರು!!. ನನಗೆ ವಿಚಿತ್ರ ಎನ್ನಿಸಿತು. ಸರಿ ಗುರುವಾರ ಮಾಡುತ್ತೇನೆ ಎಂದೆ. ನೋಡಿ ನೀವು Demo class ಮಾಡಿದಷ್ಟು ನಿಮಗೆ ನಮ್ಮ ಸಂಸ್ಥೆಯನ್ನು ತಿಳಿಯುವ ಅವಕಾಶ ಸಿಗುತ್ತದೆ, ನಮಗೂ ನಿಮ್ಮನ್ನು ಅರ್ಥಮಾಡಿಕೊಳ್ಳುವ ಅವಕಾಶ ಸಿಗುತ್ತದೆ ಎಂದರು. ಮತ್ತೊಂದು demo class ಕೂಡ ಆಯಿತು.
ಅವರು ಸಂಬಳದ ವಿಷಯವನ್ನು ಮಾತೇ ಆಡಿಲ್ಲ ಆಗಲೇ ಆ director, ‘congratulations, you can go get offer letter’ ಎಂದರು. ಇನ್ನೊಬ್ಬ ಅಧ್ಯಾಪಕಿ ಕೂಡ congratulations ಎಂದಳು. ಆಗ ನಾನು pay scale ತಿಳಿಯದೇ ಅದು ಹೇಗೆ ನಾನು offer letter ತೆಗೆದುಕೊಳ್ಳಲಿ ಎಂದೆ. ಸರಿ ನಂತರ ನನ್ನನ್ನು accountant ಬಳಿ ಕಳುಹಿಸಿದಳು, ಅವರು ನೋಡಿ ನಿಮಗೆ ನಾವು ನೀವು ಕಳೆದ ಬಾರಿ ತೆಗೆದುಕೊಳ್ಳುತ್ತಿದ್ದ ಸಂಬಳವನ್ನೇ ಕೊಡುತ್ತೀವಿ, ಎಂದರು. ನಾನು ಅದಕ್ಕೆ, ಅದು ಹೇಗೆ ಸಾಧ್ಯ, ನಾನು ನನ್ನ cv ಯಲ್ಲಿ ನನ್ನ ನಿರೀಕ್ಷಿತ ಸಂಬಳವನ್ನು ತಿಳಿಸಿದ್ದೇನಲ್ಲ ಎಂದೆ. ಅದಕ್ಕೆ ಅವರು ಅದು ಸರಿ, ಆದರೆ ಇದು ವಿದ್ಯಾ ಸಂಸ್ಥೆ, ಎಲ್ಲೂ ಅಧ್ಯಾಪಕರಿಗೆ ಇಷ್ಟು ಸಂಬಳವನ್ನು ಕೋಡುವುದಿಲ್ಲ. ನಿಮಗೇ ಅತ್ಯಧಿಕ ಸಂಬಳ ನೀಡುತ್ತಿದ್ದೇವೆ, ನೀವು ಇದನ್ನು ಬೇರೆಯವರಿಗೂ ತಿಳಿಸಬಾರದು ಎಂದರು. ನೋಡಿ ನನ್ನ qualification and experience ಗೆ ಇದು ಕಡಿಮೆ ಎಂದೆ. ನಿಮ್ಮ qualification IIT ಮತ್ತು ಇಷ್ಟೆಲ್ಲಾ experience ಇರುವುದಕ್ಕೇ ಈ ಸಂಬಳ ಇಲ್ಲದಿದ್ದರೆ ನಾವು ಅಧ್ಯಾಪಕರಿಗೆ ಅದೂ ನಿಮ್ಮ ವಯಸ್ಸಿನ ಅಧ್ಯಾಪಕರಿಗೆ ೨೦ಸಾವಿರಕ್ಕೆ ಹೆಚ್ಚು ಸಂಬಳ ನೀಡುವುದಿಲ್ಲ ಎಂದರು. ಯೋಚಿಸಿ ನೋಡಿ ಎಂದರು.
ನಾನು ಮನೆಗೆ ಬಂದು, ನನ್ನ ಯಜಮಾನರೊಂದಿಗೆ ಚರ್ಚಿಸಿ ನನ್ನ miminum expectations ಅನ್ನು ಅವರಿಗೆ ಫೋನ್ ಮಾಡಿ ತಿಳಿಸಿದೆ, ಅವರು ಮರಳಿ ಫೋನ್ ಮಾಡಲಿಲ್ಲ. ಆದರೆ ಸುಕಾಸುಮ್ಮನೆ ನಾನು taxiಯಲ್ಲಿ ಹೋಗಿ ಬಂದದ್ದು. ಆ ದಿನ ನನ್ನ ಯಜಮಾನರು ನನ್ನೊಂದಿಗೆ ಬಂದದ್ದು. ಮಗಳನ್ನು ನೋಡಿಕೊಳ್ಳಲು ಅಕ್ಕಪಕ್ಕದವರಿಗೆ ಹೇಳಿದ್ದು, ಇಷ್ಟೆಲ್ಲಾ ವ್ಯರ್ಥ. ನಂತರ ನನ್ನ ಗೆಳೆಯರೊಬ್ಬರು, ಈ ಸಂಸ್ಥೆಗಳೇ ಹೀಗೆ, demo class ಎಂದು ಹೇಳಿ ತಮ್ಮ syllubus ಮುಗಿಸುತ್ತಾರೆ ಎಂದು. ನನಗೆ ಆಗ ತಿಳಿಯಿತು, ನಾನು ತರಗತಿಗೆ ಹೋಗುವ ಮುನ್ನ ಆ ಇನ್ನೊಬ್ಬ ಅಧ್ಯಾಪಕಿ, ಇದು demo class ಎಂದು ಹೇಳಬೇಡಿ, ಸುಮ್ಮನೆ ಪಾಠ ಮಾಡಿ, ನಾವು guest lecture ಎಂದು ಹೇಳುತ್ತೇವೆ ಎಂದು.
ಅಂದರೆ ಅವರು ನನ್ನಿಂದ ಪುಕ್ಸಟ್ಟೆ guest lecture ಮಾಡಿಸಿದ್ದರು. ಒಂದು ವೇಳೆ ನಾನು ಅವರು ಕೊಡುವ ಸಂಬಳಕ್ಕೆ ಒಪ್ಪಿದ್ದರೆ they had nothing to lose. ಅಲ್ಲದೇ ನಾನು ಒಂದು ವೇಳೆ ಒಪ್ಪಿದ್ದರೂ ಆಮೆಲೆ ಅವರು, ಇಲ್ಲ ಬೇರೆ candidate ಸಿಕ್ಕಿದರು ಎಂದು ಹೇಳುವುದಿಲ್ಲ ಎಂಬುದು ಯಾವ ಗ್ಯಾರಂಟಿ?
ಸರಿ ಇದರ ಕಥೆ ಮುಗಿಯಿತು. ನಾನು ಈ ಉದ್ಯೋಗ ಅನ್ವೇಷಣೆಯನ್ನು ಬಿಟ್ಟು ನನ್ನ freelance training ಮುಂದುವರಿಸೋಣ ಎಂದುಕೊಂಡಿದ್ದೆ. ಆಗ ಮತ್ತೊಂದು ಹೆಸರಾಂತ ಸಂಸ್ಥೆ thehindu ಪತ್ರಿಕೆಯಲ್ಲಿ ತನ್ನ ಹೊಸ business school ಗೆ ಅಧ್ಯಾಪಕರು ಬೇಕೆಂದು ಜಾಹೀರಾತು ನೀಡಿತು. ಏನೇ ಹೇಳಿ freelance training ಗಿಂತ ಒಂದು ಸಂಸ್ಥೆಯಲ್ಲಿ ಕೆಲಸ ಮಾಡುವುದು ಹೆಚ್ಚು ಆಸಕ್ತಿ ದಾಯಕ ಎಂದು ಎನಿಸುತ್ತದೆ. ಸರಿ ಎಂದು apply ಮಾಡಿದೆ. ಎಲ್ಲಾ ಸಂಸ್ಥೆಗಳೂ ಒಂದರಂತಲ್ಲ ಎಂಬ ಮೊಂಡು ವಾದದೊಂದಿಗೆ. ಮತ್ತೆ ಪೆಗ್ಗಿ ಬೀಳುವುದಿಲ್ಲ ಎಂಬ ಭರವಸೆಯಿಂದ. ಒಂದು ತಿಂಗಳ ನಂತರ ಅವರಿಂದ ನೀವು shortlist ಆಗಿದ್ದೀರ ಎಂದು ಇ ಮೇಲ್ ಬಂತು. ಹಾಗೆಯೇ ಸಂದರ್ಶನದ ವಿಧಾನ, Demo class ಇತ್ಯಾದಿಗಳ ಬಗ್ಗೆ ನಿರ್ದಿಷ್ಟ ವಿವರವಿತ್ತು. ಸರಿ ಇವರು more professional and honest ಎಂದು ನನಗೆ ಅನ್ನಿಸಿತು. ನನ್ನ ಮನೆಯವರಿಗೆ, ನೋಡಿ ಇದು ಕಾಚಿಗುಡದಲ್ಲಿದೆ, ಮತ್ತೆ taxi charge ದಂಡ ಎಂದೆ. ಪರವಾಗಿಲ್ಲ ೩೫೦ ರೂಪಾಯಿ ಆಗತ್ತೆ ಹೋಗು, ಎಂದರು. ಸರಿ ಸಂದರ್ಶನಕ್ಕೆ, demo class ಗೆ ತಯಾರಿ ಮಾಡಿಕೊಂಡು ಹೋದೆ. ಆ director and chariman ಇಬ್ಬರೂ foreign returned. ನಮಗೆ ಹಣದ ಆಸೆಯಿಲ್ಲ, ಸೇವೆ ಮಾಡಬೇಕೆಂದು ಬಂದಿದ್ದೇವೆ ಎಂದರು. ವಿದ್ಯಾರ್ಥಿಗಳಿಂದ ಅವರು ತೆಗೆದುಕೋಳ್ಳುವ ಫೀಸ್ ೧೫ ಲಕ್ಷವಂತೆ. preliminary talk was too good. ಭಾರತ, ನಮ್ಮ ಸಂಸ್ಕೃತಿ, ಧ್ಯೇಯ ಅದು ಇದು ಬಗ್ಗೆ ಮಾತಾಡಿದರು. ನನಗೂ ಇಂತಹವರೊಂದಿಗೆ ಕೆಲಸ ಮಾಡುವುದು ಚೆನ್ನಾಗಿರುತ್ತದೆ ಎಂದು ಎನಿಸಿತು. ಒಬ್ಬೊಬ್ಬೊರಾಗಿ ಹೋಗಿ demo class ಮಾಡಿ ಬಂದೆವು. ಅಲ್ಲಿ ಒಸ್ಮಾನಿಯ university representative, subject matter expert, director, chairman ಹಾಗೂ ಸಂಸ್ಥೆಯ ಸಂಸ್ಥಾಪಕರ ಮಗನೋ ಮೊಮ್ಮಗನೋ, ಒಟ್ಟಿನಲ್ಲಿ ಪ್ರಸ್ತುತ ಸಂಸ್ಥೆಯ ರೂವಾರಿ ಇದ್ದರು. ನಾನು ಪಾಠ ಮಾಡುತ್ತಿದ್ದಾಗ ಅವರುಗಳು ಅಷ್ಟಾಗಿ ಗಮನವಿಟ್ಟು ಕೇಳಲಿಲ್ಲ. ಪ್ರಶ್ನೋತ್ತರವೂ ಆಯಿತು. ಎಲ್ಲರ ಸಂದರ್ಶನವೂ ಆಯಿತು.
ಇನ್ನೊಬ್ಬ ಅಭ್ಯರ್ಥಿ ಪುಣೆಯಿಂದ ಹೈದರಾಬದ್ ಗೆ ಬಂದಿದ್ದರು, ಈ ಸಂದರ್ಶನಕ್ಕಾಗಿ. ಮತ್ತಿಬ್ಬರು ವಿಶಾಕಪಟ್ಟಣಂ ನಿಂದ. ಮತ್ತೊಬ್ಬರು ವಿಜಯವಾಡವಿರಬೇಕು. ಆಗ ಒಬ್ಬರು ಅಯ್ಯೋ ಇದೆಲ್ಲಾ ಬರೀ ನಾಮಕಾವಾಸ್ತೆ ಅಷ್ಟೆ, ಅವರಿಗೆ ಬೇಕಾದವರನ್ನು ಅವರು ತೆಗೆದುಕೊಳ್ಳುತ್ತಾರೆ. ಹೊಸ ಕಾಲೇಜು, ಅದಕ್ಕೆ AICTE ಮನ್ನಣೆ ಬೇಕು ಅದಕ್ಕೆ ಕಾನೂನಿನ ಪ್ರಕಾರ ಜಾಹೀರಾತು, ಸಂದರ್ಶನ ಎಲ್ಲಾ, ಎಂದು ಹೇಳಿದರು. ನನ್ನ ಯೋಗ್ಯತೆಯ ಬಗ್ಗೆ ಭರವಸೆಯಿದ್ದ ನನಗೆ ಇದನ್ನು ನಂಬಲಿಲ್ಲ. ಆದರೆ ಎಲ್ಲರ ಸಂದರ್ಶನದ ನಂತರ Director ಬಂದು ಸಾರಿ, ನೀವು ಯಾರೂ ನಮ್ಮ ನಿರೀಕ್ಷೆಗೆ ತಕ್ಕಂತೆ ಇಲ್ಲ, ಎಂದು ಹೇಳಿದರು. ನಾವು ಮತ್ತೊಮ್ಮೆ ಜಾಹೀರಾತು ನೀಡಿ, ಮಗದೊಮ್ಮೆ ಸಂದರ್ಶನವನ್ನು ಮಾಡಬೇಕಾಗಬಹುದು ಎಂದರು. ನಮಗೆ ತಲೆ ಹಣ್ಣಾದವರು ಬೇಕು, ನಾವು ಅತ್ಯಂತ senior positions ತುಂಬಲು ನೋಡುತ್ತಿದ್ದೇವೆ ಎಂದರು. ಹಾಗಿದ್ದಲ್ಲಿ ಒಂದು ವರ್ಷ, ಎರಡು ವರ್ಷ ಅನುಭವ ಇದ್ದವರನ್ನು, phd ಮಾಡದವರನ್ನು ಸಂದರ್ಷನಕ್ಕೆ ಕರೆದದ್ದಾದರೂ ಏಕೆ? ನನಗೆ ಚೇತನ್ ಭಗತ್ ರ Revolution 2020 ನೆನಪಾಯಿತು. ಅದರಲ್ಲಿ theory ಓದಿದ್ದೆ, ಇಲ್ಲಿ practical experience ಆಯಿತು.
ಈ ಅನುಭವಗಳು ಒಂದು ರೀತಿ ಮುಗಿಯದ ಕಥೆ, ಹೇಳುತ್ತಾ ಹೋದರೆ ಇನ್ನೂ ಹಲವು ಉದಾಹರಣೆಗಳು ಇವೆ. ಇದನ್ನು ವಿರೋಧಿಸೋಣವೆಂದರೆ, ಯಾರನ್ನು ಕಾಣಬೇಕು? ಏನು ಮಾಡಬೇಕು ತಿಳಿದಿಲ್ಲ. ಹಣವಂತರ ಮುಂದೆ ನಮ್ಮ ಹೋರಾಟ ಎಷ್ಟು ತಾನೇ ನಡೆದೀತು? ಈ ರೀತಿ ಸುಳ್ಳು ಸಂದರ್ಶನಗಳು ನಡೆಯದಂತೆ ಮಾಡುವ ದಾರಿಯಿಲ್ಲವೇ ಸರ್ಕಾರಕ್ಕೆ?




