ಮ್ಯೂಟ್ ಮೋಡ್ ನಲ್ಲಿ ಭಾರತ, ಫೈಟ್ ಮೋಡ್ ನಲ್ಲಿ ಚೀನಾ!!
– ವಿಕಾಸ್ ಪುತ್ತೂರು
‘ಒಂದು ಕೆನ್ನೆಗೆ ಹೊಡೆದರೆ ಮತ್ತೊಂದು ಕೆನ್ನೆ ತೋರಿಸು’ ಎಂದು ಸಾರುತ್ತಲೇ “ಶಾಂತಿಧೂತ”ನೆಂದು ಖ್ಯಾತಿಗಳಿಸಿದ ಆ ಗಾಂಧಿಯೂ ಕೂಡ, ಇಂದಿದ್ದಿದ್ದರೆ, ಪ್ರಸ್ತುತ ಚೀನಾದ ತಕರಾರುಗಳಿಗೆ ಬೇಸತ್ತು ಕೆನ್ನೆ ತೋರಿಸುವುದನ್ನು ನಿಲ್ಲಿಸಿ, ಒಂದು ಬಾರಿಸಿ ಬಿಡುತ್ತಿದ್ದರೇನೋ! ಅದೇನೆ ಇರಲಿ, ನಮ್ಮ ಪ್ರಧಾನಿಗಳು ಮಾತ್ರ, ಚೀನಾ ವಿಷಯದಲ್ಲಿ ಆ ಗಾಂಧಿಯ ಮೂರು ಮಂಗಗಳ ಗುಣಗಳನ್ನು ಯತಾವತ್ತಾಗಿ ಅನುಸರಿಸಿರುವಂತೆ ಕಾಣುತ್ತಿದೆ, ಚೀನಾದ ಅತಿಕ್ರಮಣಗಳನ್ನು ಕಂಡೂ ಕಾಣದಂತೆ ಕುರುಡರಾಗಿಬಿಟ್ಟಿದ್ದಾರೆ, ಅವರ ಆಕ್ರಮಣಗಳ ಬಗ್ಗೆ ತುಟಿಬಿಚ್ಚದೆ ಚಕಾರವೆತ್ತದೆ ಮೂಕರಾಗಿಬಿಟ್ಟಿದ್ದಾರೆ, ಚಿಂಗಿಯರ ಕುತಂತ್ರಗಳನ್ನಂತೂ ಬೇಕೆಂದೇ ಕೇಳಿಸಿಕೊಳ್ಳದೆ ಕಿವುಡನೂ ಆಗಿಬಿಟ್ಟಿದ್ದಾರೆ! ಅವರೇ ಹೇಳುವಂತೆ, ಗಾಂಧಿಯ ಹಾದಿಯಲ್ಲಿ ಸಾಗುವುದೆಂದರೆ ಇದೇ ಇರಬೇಕೇನೋ! ಕಳೆದ ಹತ್ತು ವರ್ಷಗಳಲ್ಲಿ ಮನಮೋಹನರು ಸದನ ಪ್ರವೇಶಿಸಿರುವುದಕ್ಕಿಂತ ಹೆಚ್ಚು ಬಾರಿ ಚೀನಿಯರು ಭಾರತವನ್ನು ಅತಿಕ್ರಮವಾಗಿ ಪ್ರವೇಶಿಸಿದ್ದಾರೆ. ಆರ್ಥಿಕವಾಗಿ ಹಾಗು ಸಾಂಸ್ಕೃತಿಕವಾಗಿ ಭಾರತವನ್ನು ಮುಗಿಸಲು ತುದಿಗಾಲಲ್ಲಿ ನಿಂತು ಅತ್ಯಂತ ವ್ಯವಸ್ತಿತವಾಗಿ ಷಡ್ಯಂತ್ರ ರಚಿಸಿರುವ, ರಚಿಸುತ್ತಿರುವ ಚೀನಾಗೆ ಸಮರ್ಥವಾಗಿ ಉತ್ತರ ಕೊಡಲು ಸಾಧ್ಯವಾಗದೆ, ಪ್ರಶ್ನೆಯ ಹುಡುಕಾಟದಲ್ಲಿಯೇ ಕಪಟ ನಾಟಕವಾಡುತ್ತಿದೆ ನಮ್ಮ ಕೇಂದ್ರ ಸರಕಾರ.
ಭಾರತದ ಅತಿದೊಡ್ಡ ಶತ್ರು ಪಾಕಿಸ್ತಾನ, ಬೇರೆಲ್ಲಾ ರಾಷ್ಟ್ರಗಳು ಬಹುತೇಕ ಭಾರತದ ಮಿತ್ರರಾಷ್ಟ್ರಗಳೇ ಎಂದು ವಿಶ್ವಾವ್ಯಾಪಿ ಬಿಂಬಿತವಾಗಿರುವುದು ಭಾರತದ ಅತಿದೊಡ್ಡ ದುರಂತ. ರಾಷ್ಟ್ರೀಯ ಭದ್ರತೆಯ ವಾಸ್ತವಕ್ಕಿಳಿದು ನೋಡಿದಾಗ ಭಾರತಕ್ಕೆ, ಪಾಕಿಸ್ತಾನಕ್ಕಿಂತಲೂ ಚೀನಾದಿಂದ ನೂರು ಪಟ್ಟು ಹೆಚ್ಚು ಆತಂಕ ಸೃಷ್ಟಿಯಾಗಿದೆ. ಭಾರತದ ಭೂ ಹಾಗು ಸಾಗರಕ್ಕೆ, ಇತರೆ ಒಟ್ಟು 9ರಾಷ್ಟ್ರಗಳು ಅಂಟಿಕೊಂಡಿವೆ, ದಕ್ಷಿಣಕ್ಕೆ ಶ್ರೀಲಂಕಾ ಹಾಗು ಮಾಲ್ಡೀವ್ಸ್. ಪಶ್ಚಿಮಕ್ಕೆ ಪಾಕಿಸ್ತಾನ ಹಾಗು ಅಫಗಾನಿಸ್ತಾನ, ಪೂರ್ವಕ್ಕೆ ನೇಪಾಳ, ಭೂತಾನ್, ಬಾಂಗ್ಲಾದೇಶ ಹಾಗು ಬರ್ಮಾ ಮತ್ತು ಉತ್ತರದಿಂದ ಪೂರ್ವದವರೆಗೂ ಮಹಾಕಂಟಕ ಚೀನಾ. ಈ 9ನೆರೆರಾಷ್ಟ್ರಗಳ ಪೈಕಿ ಭೂತಾನ್ ಎಂಬ ಪುಟ್ಟ ದೇಶವೊಂದನ್ನು ಬಿಟ್ಟರೆ, ಉಳಿದ 8 ದೇಶಗಳೊಡನೆಯೂ ಭಾರತದ ಸಂಬಂಧ ಹಳಸಿದೆ! ಅತ್ಯಂತ ಆತಂಕಕಾರಿ ಸಂಗತಿ ಎಂದರೆ, ಭಾರತವನ್ನು ಮಣಿಸಲು ಹಾತೊರೆಯುತ್ತಿರುವ ಚೀನಾ, ಉಳಿದ 7 ರಾಷ್ಟ್ರಗಳನ್ನೂ ಒಟ್ಟುಗೂಡಿಸಿ ಬಿಲಿಯನ್ ಡಾಲರ್ಗಟ್ಟಲೆ ಬಂಡವಾಳ ಹೂಡುತ್ತಾ, ತನ್ನ ಸಂಗಡ ಶಿಶ್ಯವೃಂದದಂತೆ ಇರಿಸಿಕೊಂಡಿದೆ.
ರಮಾನಂದ ಐನಕೈ ಅವರ “ನಮಗೆ ನಾವೇ ಪರಕೀಯರು” ಪುಸ್ತಕದ ಕುರಿತು
– ಮು . ಅ . ಶ್ರೀರಂಗ ಯಲಹಂಕ ಬೆಂಗಳೂರು
ರಮಾನಂದ ಐನಕೈ ಅವರ “ನಮಗೆ ನಾವೇ ಪರಕೀಯರು ” (ನ. ನಾ. ಪ) (ಪ್ರಕಾಶಕರು : ರಾಷ್ಟ್ರೋತ್ಹಾನ ಸಾಹಿತ್ಯ ಬೆಂಗಳೂರು -೧೯ )ಪುಸ್ತಕ ಓದುವ ಮುನ್ನ ನಾನು ಪ್ರೊ .ಎಸ್ .ಎನ್. ಬಾಲಗಂಗಾಧರ (ಬಾಲು)ಅವರ ವಿಚಾರಗಳನ್ನು ಆಧರಿಸಿದ ಕನ್ನಡಕ್ಕೆ ಅನುವಾದವಾಗಿರುವ ಮೂರುಪುಸ್ತಕಗಳನ್ನು ಓದಿದ್ದೆ (ಪೂರ್ವಾವಲೋಕನ ,ಭಾರತದಲ್ಲಿ ಜಾತಿ ವ್ಯವಸ್ಥೆ ಇದೆಯೆ? ಮತ್ತು ಹುಡುಕಾಟವನ್ನು ನಿಲ್ಲಿಸದಿರೊಣ). ಸ್ಮೃತಿ-ವಿಸ್ಮೃತಿ ;ಭಾರತೀಯ ಸಂಸ್ಕೃತಿ ತನ್ನ ವಿಚಾರ ಮತ್ತು ಗಾತ್ರದಲ್ಲಿ ತುಂಬಾ ಘನವಾಗಿದೆ ಹೀಗಾಗಿ ನಿಧಾನವಾಗಿ ಓದಿ ಅರ್ಥಮಾಡಿಕೊಳ್ಳಬೇಕಾಗಿದೆ. ಇದುವರೆಗೆ ಸುಮಾರು ಇನ್ನೂರು ಪುಟಗಳನ್ನು ಓದಿದ್ದೆನೆ. ರಮಾನಂದರ ಪ್ರಸ್ತುತ ಪುಸ್ತಕ ಮೇಲೆ ಹೇಳಿದ ಬಾಲು ಅವರ ನಾಲ್ಕು ಪುಸ್ತಕಗಳ ಅದರಲ್ಲೂ ಮುಖ್ಯವಾಗಿ ಸ್ಮೃತಿ-ವಿಸ್ಮೃತಿ ಪುಸ್ತಕದಲ್ಲಿರುವ ವಿಷಯಗಳನ್ನು ನೇರವಾಗಿ ಭಟ್ಟಿ ಇಳಿಸಿರುವುದರ ಪ್ರತಿಫಲ! ಇದಕ್ಕೆ ಪುರಾವೆಗಳು ರಮಾನಂದರ ನ.ನಾ.ಪ.. ಪುಸ್ತಕದಲ್ಲೇ ಇವೆ.
, ೧. ಬಾಲು ಅವರೇ ತಮ್ಮ ಮುನ್ನುಡಿಯಲ್ಲಿ—ರಮಾನಂದರ ಎಲ್ಲಾ ಲೇಖನಗಳು ಈ ವಿಷಯಗಳ ಕುರಿತಾಗಿ ಬೆಲ್ಜಿಯಂ ಹಾಗೂ ಭಾರತದಲ್ಲಿ ಕುವೆಂಪು ವಿ. ವಿ. ಸ್ಥಳೀಯ ಸಂಸ್ಕೃತಿಗಳ ಅಧ್ಯಯನ ಕೇಂದ್ರದಲ್ಲಿ ನಡೆಯುತ್ತಿರುವ ಸಂಶೋಧನೆಗಳಿಂದ ಪ್ರಭಾವಿತವಾಗಿವೆ ಎಂದ್ದಿದ್ದಾರೆ (ಪುಟxii)
೨. ಲೇಖಕರ ಮಾತಿನಲ್ಲಿ ಸ್ವತಃ ರಮಾನಂದ ಐನಕೈ ಅವರೇ ಮೇಲೆ ಹೇಳಿದ ಬಾಲು ಅವರ ಮಾತುಗಳನ್ನೇ ಅನುಮೋದಿಸಿದ್ದಾರೆ—ಬಾಲು ಅವರ ಮೂಲ ಸಿದ್ಧಾಂತಕ್ಕೆ ಚ್ಯುತಿ ಬಾರದ ಹಾಗೆ ಅವರ ವಿಚಾರಗಳನ್ನು ನನ್ನ ಅನುಭವಗಳ ಮೂಲಕ ಸರಳವಾಗಿ ನಿರೂಪಿಸುವ ಕೆಲಸ ಮಾಡಿದ್ದೇನೆ (ಪುಟ xvi )(ರಮಾನಂದರ ಅನುಭವಗಳ ಪ್ರಮಾಣ ಈ ಪುಸ್ತಕದ ವಿಚಾರದಲ್ಲಿ ತೀರಾ ಕಡಿಮೆ ಎಂಬುದು ಓದುಗರಿಗೆ ಮನವರಿಕೆಯಾಗುತ್ತದೆ!)
೩. ರಮಾನಂದರ ಪ್ರಸ್ತುತ ಪುಸ್ತಕ್ಕಕ್ಕೆ (ನ.ನಾ.ಪ) ಹಿನ್ನೆಲೆ ಬರೆದಿರುವ ದಾ॥ ರಾಜಾರಾಮ ಹೆಗಡೆಯವರು ಸಹ ರಮಾನಂದರದು ಸ್ವತಂತ್ರ ಲೇಖನಗಳಾದರೂ ಕೂಡ ಭಾರತೀಯ ಸಂಸ್ಕೃತಿಯ ಕುರಿತು ಎಸ್ . ಎನ್ . ಬಾಲಗಂಗಧರ ಅವರ ಹೊಸ ವಾದಗಳಿಂದ ಪ್ರಭಾವಿತವಾಗಿವೆ. (ಪುಟ xviii)





