ವಿಷಯದ ವಿವರಗಳಿಗೆ ದಾಟಿರಿ

Archive for

28
ಆಗಸ್ಟ್

ಸ್ವಾತಂತ್ರ್ಯ ಇನ್ನೆಷ್ಟು ದಿನ !!!

– ಮಧುಚಂದ್ರ , ಭದ್ರಾವತಿ                      

೨೯ ಮೇ ೧೪೫೩, ಅಟ್ಟೋಮನ್ ತುರ್ಕರು ಕಾಂಸ್ಟನ್ಟಿನೋಪಾಲ್ ನಗರವನ್ನು ಆಕ್ರಮಿಸಿ (ಇಂದಿನ ಇಸ್ತಾಂಬುಲ್) ತಮ್ಮ ವಶಕ್ಕೆ ತಗೆದುಕೊಂಡ ದಿನ. ಈ ದಿನಕ್ಕೂ ಮುಂಚೆ ಪೂರ್ವ ಮತ್ತು ಪಶ್ಚಿಮಗಳ ವ್ಯಾಪಾರ ಮತ್ತು ಭಾಂದವ್ಯ ಸಮುದ್ರ ಮಾರ್ಗವಾಗಿ ಈ ನಗರದ ಮೂಲಕವೇ ನಡೆಯುತ್ತಿತ್ತು. ತುರ್ಕರ ಆಕ್ರಮಣದೊಂದಿಗೆ ಪಶ್ಚಿಮದವರ ವ್ಯಾಪಾರದ ಬಾಗಿಲು ಸಂಪೂರ್ಣವಾಗಿ ಮುಚ್ಚಲ್ಪಟ್ಟಿತು. ಹೊಸ ಮಾರ್ಗದ ಅನ್ವೇಷಣೆ ಪಶ್ಸಿಮದವರಿಗೆ ಅನಿವಾರ್ಯವಾಯಿತು.

ಮೊದಲಿಗೆ ಸ್ಪೇನ್ ದೇಶದ ನಾವಿಕ ಕೊಲಂಬಸ್ ಮುಂದಾದ, ಭಾರತವನ್ನು ಕಂಡುಹಿಡಿಯುವ ಬದಲಿಗೆ ಅಮೇರಿಕ ಖಂಡವನ್ನು ಅನ್ವೇಷಿಸಿದ. ನಂತರ ಪೋರ್ಚುಗಲ್ನ ನಾವಿಕ ಬರ್ತ ಲೋಮಿಯ ಡಯಾಜ್ , ಪೋರ್ಚುಗಲ್ ದೇಶದ ದಕ್ಷಿಣದಿಂದ ಆರಂಭಿಸಿ ಆಫ್ರಿಕಾ ಖಂಡದ ತುದಿಯನ್ನು ಮುಟ್ಟಿದ ಆದರೆ ಸಮುದ್ರದಲ್ಲಿ ಉಂಟಾದ ಭಾರಿ ಅನಾಹುತಗಳಿಂದ ಅವನ ಸಹ ನಾವಿಕರು ಮುಂದೆ ಸಾಗಲು ನಿರಾಕರಿಸಿದರು. ಆಫ್ರಿಕದ ತುಟ್ಟ ತುದಿ ಕೇಪ್ ಆಫ್ ಗುಡ್ ಹೋಪ್ ಕಂಡು ಹಿಡಿದು ಪೋರ್ಚುಗಲ್ಗೆ ಹಿಂದಿರುಗಿದ. ಮತ್ತೆ ಅದೇ ಯತ್ನವನ್ನು ಪೋರ್ಚುಗಲ್ಲಿನ ವಾಸ್ಕೋ ಡ ಗಾಮ ಬರ್ತ ಲೋಮಿಯ ಡಯಾಜ್ ಬಳಸಿದ ಮಾರ್ಗದಲ್ಲೇ ಹೋಗಿ ಆಫ್ರಿಕಾ ಖಂಡವನ್ನು ಒಂದು ಸುತ್ತು ಹಾಕಿ ಕಡೆಗೆ ಕೇರಳದ ಕಲ್ಲಿ ಕೋಟೆಯಲ್ಲಿ ೨೦ ಮೇ ೧೪೯೮ ಕಾಲಿಟ್ಟ. ಕಲ್ಲಿಕೋಟೆಯ ದೊರೆ ಜಮೂರಿನ ವಾಸ್ಕೋ ಡ ಗಾಮನನ್ನು ಆತ್ಮೀಯವಾಗಿ ಸ್ವಾಗತಿಸಿ ಪೂರ್ವ ಪಶ್ಚಿಮಗಳ ವ್ಯಾಪಾರಕ್ಕೆ ಮುನ್ನುಡಿ ಬರೆದ.

ಸತತ ನೂರು ವರ್ಷಗಳ ಕಾಲ ಯಾವುದೇ ಅಡೆತಡೆ ಇಲ್ಲದೆ ಭಾರತದ ಪಶ್ಚಿಮ ಸಮುದ್ರ ತೀರದ ಎಲ್ಲಾ ಪ್ರಮುಖ ನಗರದಲ್ಲಿ ಒಂದು ಒಂದು ಶಾಖೆಗಳನ್ನು ಸ್ಥಾಪಿಸಿ ಪೋರ್ಚುಗೀಸರು ತಮ್ಮ ವ್ಯಾಪಾರ ಮುಂದುವರೆಸಿದರು. ೧೬೦೦ ಬ್ರಿಟೀಷರು, ೧೬೦೨ ರಲ್ಲಿ ಡಚ್ಚರು, ೧೬೬೪ ರಲ್ಲಿ ಫ್ರೆಂಚರು ಈಸ್ಟ್ ಇಂಡಿಯಾ ಕಂಪನಿ ಹೆಸರಿನಲ್ಲಿ ಭಾರತ ಖಂಡದಲ್ಲಿ ನಿಧಾನವಾಗಿ ತಮ್ಮ ಖಾತೆ ತೆರೆದರು.

Read more »

28
ಆಗಸ್ಟ್

ನಮೋ ಅಭಿವೃದ್ಧಿ ಮಂತ್ರಕ್ಕೆ ಅನುಸರಿಸಬೇಕಾದ ಪ್ರಚಾರತಂತ್ರ ಯಾವುದು?

– ನವೀನ್ ನಾಯಕ್

NaModi       ನರೇಂದ್ರ ಮೋದಿ ಇತ್ತೀಚೆಗೆ ಅತಿ ಹೆಚ್ಚಾಗಿ ಚರ್ಚೆಗೆ ತುತ್ತಾಗುತಿದ್ದಾರೆ. ಮೋದಿಯವರೇ ಮುಂದಿನ ಪ್ರಧಾನಿಯಾಗಬೇಕೆಂದು ಹಲವಾರು ರೀತಿಯಲ್ಲಿ ಉತ್ಸಾಹಿ ಯುವಕರು ಸ್ವಯಂಪ್ರೇರಣೆಯಿಂದ ಕೆಲಸ ನಿರ್ವಹಿಸುತಿದ್ದಾರೆ. ಅಭಿಮಾನಿಗಳ ಗುಂಪುಗಳಿರಬಹುದು, ಸಾಮಾಜಿಕ ತಾಣದಲ್ಲಿರುವ ಪೇಜ್, ಗ್ರೂಪ್ ಯಾವುದೇ ಆಗಬಹುದು. ರಾಜಕೀಯ ವಿಷಯದಲ್ಲಿ ಮಲಗಿದ್ದ ಯುವಪಡೆ ಎದ್ದು ನಿಂತಿರುವುದು ಸ್ವಾಗತಾರ್ಹ. ಪ್ರಸಕ್ತ ರಾಜಕೀಯ ದೊಂಬರಾಟದಲ್ಲಿ ಕಡಿವಾಣ ಹಾಕಬೇಕೆಂದರೆ ಯುವಕರ ಪಾತ್ರ ಬೇಕೆಬೇಕು. ಇತಿಹಾಸವೂ ಅದನ್ನೇ ಸಾರಿ ಸಾರಿ ಹೇಳಿದೆ. ನಮೋ ವಿಷಯದಲ್ಲಿ ಗಂಭೀರವಾದ ವಿಚಾರವೆಂದರೆ ಈ ಯುವಕರ ಕೆಲಸ ನೀರಿಕ್ಷಿತ ಮಟ್ಟವನ್ನು ತಲುಪುತ್ತದೆಯಾ. ಇವರ ಉತ್ಸಾಹಕ್ಕೆ 2014 ತಣ್ಣೀರೆರಚಬಹುದೇ ಎಂಬ ಅನುಮಾನ ನನಗೆ. ನನ್ನ ಅನುಮಾನಕ್ಕೆ ಕಾರಣವಿಲ್ಲದೆಯಿಲ್ಲ.

ಮೋದಿಯವರನ್ನು ಪ್ರಚಾರ ಮಾಡುತ್ತಿರುವ ಶೈಲಿ ಸ್ವತಃ ನಮೋ ಅಭಿವೃದ್ದಿ ಕನಸ್ಸಿನ ವಿರೋಧವಾಗಿದೆ. ಮುನ್ನುಗುತ್ತಿರುವ ವೇಗದಲ್ಲಿ ಗುರಿಯನ್ನೇ ಮರೆಯಲಾಗಿದೆ. ಮೋದಿ ನಾಯಕತ್ವದಲ್ಲಿ ಸರಕಾರ ರಚಿಸಬೇಕಾದರೆ ಆ ಸರಕಾರ ನಮ್ಮ ಕನಸ್ಸಿನ ಭಾರತ ಕಟ್ಟಬೇಕಾದರೆ ಮೋದಿ ಹೆಸರಲ್ಲಿ ಅಥವಾ ಬಿಜೆಪಿ ಹೆಸರಲ್ಲಿ ಗೆಲ್ಲುವ ಅಭ್ಯರ್ಥಿ ಹೇಗಿರಬೇಕು, ಅವನ ಕನಸುಗಳೇನಾಗಿರಬೇಕು, ಸಮಾಜ ಪರಿವರ್ತನೆಯಲ್ಲಿ ಆತನ ಸ್ಪಷ್ಟ ನಿರ್ಧಾರವೇನು. ಈ ಅಂಶಗಳು ಮುಖ್ಯವಾಗುವುದಿಲ್ಲವೇ? ಈ ಮಹತ್ತರ ಅಂಶಗಳನ್ನು ಮರೆತು ಅವರ ಹೆಸರಲ್ಲಿ ಅಯೋಗ್ಯರನ್ನು ಗೆಲ್ಲಿಸಿಬಿಟ್ಟರೆ. ಕಂಡ ಕನಸು ತಿರುಗಿ ಬೆಂಕಿ ಕೆಂಡವಾಗುತ್ತದೆಯಲ್ವಾ? ಕರ್ನಾಟಕದಲ್ಲಿ ಬದಲಾವಣೆ ಭರದಲ್ಲಿ ಬಿಜೆಪಿ ಬೆಂಬಲಿಸಿದಾಗ ಯಡವಟ್ಟಾಗಿದ್ದು ಈ ಅಂಶಗಳೇ. ಅಪಾತ್ರರೆಲ್ಲ ಗೆದ್ದು ಉಂಡಾಡಿ ಗುಂಡನ ಹಾಗೆ ಆಡಿದ್ದ ಉದಹಾರಣೆ ಕಣ್ಣ ಮುಂದಿರುವಾಗ ಮತ್ತದೇ ಹೆಜ್ಜೆಯನ್ನಿಟ್ಟರೆ ಏನು ಪ್ರಯೋಜನ ?.. ಬದಲಾವಣೆ ಎಲ್ಲರಿಗೂ ಬೇಕು ಅದೇ ಭರದಲ್ಲಿ ಯೋಗ್ಯರು ಮತ್ತು ಅಯೋಗ್ಯರ ನಡುವಿನ ವ್ಯತ್ಯಾಸ ಮರೆಯಬಾರದು.
Read more »