ವಿಷಯದ ವಿವರಗಳಿಗೆ ದಾಟಿರಿ

Archive for

30
ನವೆಂ

ಸ್ವದೇಶೀ ಆಂದೋಲನದ ಭಗೀರಥ: ರಾಜೀವ ದೀಕ್ಷಿತ!

– ತುರುವೇಕೆರೆ ಪ್ರಸಾದ್

ಕಂಪ್ಯೂಟರ್ ಇಂಜನಿಯರಿಂಗ್‍ನಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದ ಒಬ್ಬ ಪ್ರತಿಭಾವಂತ ಯುವಕ, ಇಲೆಕ್ಟ್ರಾನಿಕ್ ಹಾಗೂ ಟೆಲಿಕಮ್ಯುನಿಕೇಶನ್‍ನಲ್ಲಿ ಉನ್ನತ ಶಿಕ್ಷಣ ಪಡೆದಿದ್ದ ಒಬ್ಬ ಮೇಧಾವಿ,ಹೆಸರಾಂತ ಸಂಶೋಧನಾ ಸಂಸ್ಥೆ ಸಿ.ಎಸ್.ಐ.ಆರ್‍ನಲ್ಲಿ ಸೆಟೆಲೈಟ್ ಕಮ್ಯುನಿಕೇಶನ್‍ನಲ್ಲಿ ವಿಜ್ಞಾನಿಯಾಗಿ ದುಡಿದಿದ್ದವರು, ಮನಸ್ಸು ಮಾಡಿದ್ದರೆ ವಿದೇಶಗಳಲ್ಲಿ ವೈಭವದ ಐಶಾರಾಮಿ ಜೀವನ ನಡೆಸಬಹುದಾಗಿದ್ದ ಒಬ್ಬ ಯುವಕ ಈ ದೇಶದ ದುರ್ಘಟನೆಯೊಂದರ ಸಂತ್ರಸ್ತರಿಗಾಗಿ ತನ್ನ ಸುಖ, ಸಂತೋಷ ಎಲ್ಲಾ ತ್ಯಾಗ ಮಾಡುತ್ತಾರೆ. ಸಂತ್ರಸ್ತರಿಗೆ, ಅನ್ಯಾಯಕ್ಕೊಳಗಾದವರಿಗೆ ನ್ಯಾಯ ದೊರಕಿಸಿಕೊಡುವುದಕ್ಕಾಗಿ ಒಂದು ಅಂದೋಲನವನ್ನೇ ಆರಂಭಿಸಿ ತನ್ನ ಜೀವನವನ್ನೇ ಅದಕ್ಕಾಗಿ ಮೀಸಲಿಡುತ್ತಾರೆ. ಭಾರತ ಎದೆಂದಿಗೂ ಎದೆಯುಬ್ಬಿಸಿ, ತಲೆಎತ್ತಿ ಹೆಮ್ಮೆಯಿಂದ ಕೂಗಿ ಹೇಳಿಕೊಳ್ಳಬಹುದಾದ ಆ ಅದಮ್ಯ ಚೇತನವೇ ದೇಶಭಕ್ತ ರಾಜೀವ್ ದೀಕ್ಷಿತ್, ಅವರು ಪ್ರಾರಂಭಿಸಿದ ಆಂದೋಲನವೇ ‘ಆಜಾದಿ ಬಚಾವೋ’ ಆಂದೋಲನ. ಮತ್ತಷ್ಟು ಓದು »

27
ನವೆಂ

ನಮೋ “ಅರಿಹಂತಾಯ” : ವಿಕ್ಷಿಪ್ತ ಶಕ್ತಿಗಳ ಅಣ್ವಸ್ತ್ರ ಬೆದರಿಕೆಗೆ ಭಾರತದ ಸುರಕ್ಷಾ ಕವಚ.

– ಶ್ರೇಯಾಂಕ ಎಸ್ ರಾನಡೆ

arihant“ಅರಿಹಂತ” ಅಂದರೆ ಸಂಸ್ಕೃತ ಭಾಷೆಯಲ್ಲಿ “ಶತ್ರುಗಳ ವಿನಾಶಕ” ಎಂದರ್ಥ ( ಅರಿ=ಶತ್ರು. ಹಂತ = ವಿನಾಶಕ ). ‘ಐಎನ್‍ಎಸ್ ಅರಿಹಂತ್’ ಭಾರತದ ಮೊದಲ ಸ್ವದೇಶಿ ನಿರ್ಮಿತ ಅಣ್ವಸ್ತ್ರ ಜಲಾಂತರ್ಗಾಮಿ ನೌಕೆ. ನವೆಂಬರ್ 5 ಕ್ಕೆ ಅರಿಹಂತ ಹಿಂದೂ ಮಹಾಸಾಗರದಲ್ಲಿ ಸುಮಾರು 300 ಮೀಟರ್ ಆಳಕ್ಕೆ ಧುಮುಕಿ ಮೊದಲ ಹಂತದ ಗಸ್ತು ಪರೀಕ್ಷಣವನ್ನು ಯಶಸ್ವಿಯಾಗಿ ಪೂರೈಸಿದೆ. ಇದರ ಲೋಕಾರ್ಪಣೆಯೊಂದಿಗೆ ಭಾರತ ದೇಶ ಭೂ(ಪೃಥ್ವಿ, ಅಗ್ನಿ ಕ್ಷಿಪಣಿಗಳು), ವಾಯು ಹಾಗೂ ಜಲ ಹೀಗೆ ಮೂರೂ ಮಾಧ್ಯಮಗಳಲ್ಲಿಯೂ ನ್ಯೂಕ್ಲಿಯರ್ ಶಸ್ತ್ರ ಬಲವಿರುವ “ಅಣ್ವಸ್ತ್ರ ತ್ರಿವಳಿ” ಶಕ್ತಿಯಾಗಿದೆ. ರಷ್ಯ, ಅಮೆರಿಕ, ಫ್ರಾನ್ಸ್, ಇಂಗ್ಲೆಂಡ್, ಚೀನ ದೇಶಗಳನ್ನು ಹೊರತುಪಡಿಸಿ ಪರಮಾಣು ತಂತ್ರಜ್ಞಾನದ ಜಲಾಂತರ್ಗಾಮಿಯನ್ನು ಅಭಿವೃದ್ಧಿಪಡಿಸಿ ಬಳಸುತ್ತಿರುವ “ಅಣ್ವಸ್ತ್ರ ತ್ರಿವಳಿ” ಸಾಮಾರ್ಥ್ಯವಿರುವ ವಿಶ್ವದ ಆರನೇ ದೇಶ ಭಾರತ. ಏಷ್ಯಾದ ಖಂಡದ ಎರಡನೇ ದೇಶ. ಮತ್ತಷ್ಟು ಓದು »

25
ನವೆಂ

ಮನಸೇ..!

– ಸ್ನೇಹ

12ಬೇಕು ಬೇಡಗಳ ನಡುವಿನ ನಮ್ಮ ಜೀವನದ ಚಿಕ್ಕದೊಂದು ಒಳನೋಟವಿದು.

ಮನಸೇ ಹಾಗೆ ನಾವು ಎಷ್ಟೇ ಪ್ರಯತ್ನಿಸಿದರು ಅದನ್ನು ನಿಯಂತ್ರಿಸಲು ಅಸಾಧ್ಯ. ಯಾವುದು ಬೇಡವೋ ಅದನ್ನೇ ಬಯಸುತ್ತೆ, ನಿಜಕ್ಕೂ ನನ್ನನ್ನು ಕಾಡುವ ನಿರಂತರ ಪ್ರಶ್ನೆ ನೆಮ್ಮದಿಯ ಬದುಕು ಬೇಕಿರುವುದು ಮನಸ್ಸಿಗೋ ಅಥವಾ ನಮ್ಮ ಸುತ್ತಲಿನ ಸಮಾಜದ ಮೆಚ್ಚುಗೆಗೊ. ನಮ್ಮ ಜೀವನದಲ್ಲಿ ನಾವೆಷ್ಟು ಬಾರಿ ನಮಗಾಗಿ ಬದುಕುತ್ತೀವಿ ಎಂದು ಅರಿತರೆ ಜೀವನದ ನಿಜವಾದ ಅರ್ಥ ಬಹುಶಃ ತಿಳಿಯಬಹುದೇನೋ. ಬಾಲ್ಯದಿಂದ ಮುಪ್ಪಿನವರೆಗೆ ಯಾವುದೋ ಒಂದು ನಿರೀಕ್ಷೆಯಲ್ಲಿ ನಮ್ಮ ಜೀವನ ಸಾಗುತ್ತಿರುತ್ತದೆ. ಹಂತ ಹಂತವಾಗಿ ನಮ್ಮ ಅಭಿಪ್ರಾಯ ಬದಲಾಗುತ್ತ ಹೋಗುತ್ತದೆ. ಆದರೆ ಕಟುವಾದ ಸತ್ಯವೆಂದರೆ ಅದು ಯಾವುದು ನಮ್ಮ ಅಭಿಪ್ರಾಯವಾಗಿರುವುದಿಲ್ಲ.ನಾವು ನಮ್ಮ ಸುತ್ತಲಿನ ನೀರಿಕ್ಷೆಗಳಿಗೆ ನಮ್ಮನ್ನು ಹೊಂದಿಸಿಕೊಂಡು ಹೋಗುತ್ತಿರುತ್ತೇವೆಯೇ ಹೊರತು ನಮ್ಮ ಮನಸಿನ ಭಾವನೆಗಳೊಂದಿಗಲ್ಲ. ಮತ್ತಷ್ಟು ಓದು »

21
ನವೆಂ

ನಿಂದಕರಿಂದಲೇ ಸಂತೋಷ, ನಿಂದಕರಿದ್ದರೆ ಸಂತೋಷ

– ಬಿದರೆಪ್ರಕಾಶ್

“ನಿಂದಕರಿರಿಬೇಕು, ನಿಂದಕರಿರಬೇಕು
ದುಷ್ಟ ಜನರು ಸೃಷ್ಟಿಯೊಳಿದ್ದರೆ
ಶಿಷ್ಟ ಜನರಿಗೆಲ್ಲಾ ಕೀರ್ತಿಗಳು”

ಎಂದು ಅಂದು ಹಾಡಿದ ಪುರಂದರ ದಾಸರ ನುಡಿಗಳು ಎಂದಿಗೂ ಎಂದೆಂದಿಗೂ ಪ್ರಸ್ತುತವೆಂದು ಇತ್ತೀಚೆಗಿನ ಕೆಲವು ಹಿದ್ಯಮಾನಗಳಿಂದ ವೇದ್ಯವಾಗುತ್ತದೆ.. ಹೌದು, ಪುರಂದರದಾಸರ ವಾಣಿಯಂತೆ ದುಷ್ಟ ಜನರಿಂದಲೇ ಶಿಷ್ಟ ಜನರಿಗೆ ಕೀರ್ತಿಗಳು ಲಭ್ಯವಾಗಿವೆ. ಹಾಗೆಂದು ಈ ಶಿಷ್ಟ ಜನರು ಕೀರ್ತಿಗಾಗಿ ಆಸೆ ಪಟ್ಟವರಲ್ಲ, ಪರರ ತಂಟೆಗೆ ಹೋದವರಲ್ಲ, ಕರ್ತವ್ಯಮುಖಿಯಾಗಿ ತಮ್ಮ ಜವಾಬ್ದಾರಿಯನ್ನು ನಿರ್ವಹಿಸುತ್ತಿದ್ದ ಈ ಇಬ್ಬರು ವ್ಯಕ್ತಿಗಳು ಇಂದು ಖ್ಯಾತಿಗೆ, ಕೀರ್ತಿಗೆ ಭಾಜನರಾಗುತ್ತಿದ್ದಾರೆಂದರೆ ಅದಕ್ಕೆ ಕಾರಣ ಈ ನಿಂದಕರೇ. ಬಹುಷಃ ಈ ನಿಂದಕರಿರದಿದ್ದರೆ ಈ ಇಬ್ಬರು ವ್ಯಕ್ತಿಗಳು ಇಂದಿಗೂ ತೆರೆಮರೆಯಲ್ಲಿಯೇ ಇರುತ್ತಿದ್ದರೇನೋ. ಹಿನ್ನೆಲೆಯಲ್ಲೇ ತಮ್ಮ ಜವಾಬ್ದಾರಿಯನ್ನು ನಿರ್ವಹಿಸುತ್ತಿದ್ದ ಈ ಇಬ್ಬರನ್ನು ಮುನ್ನಲೆಗೆ ತಂದು ನಿಲ್ಲಿಸಿರುವುದು ಈ ನಿಂದಕರೇ. ಅದಕ್ಕಾಗಿಯೇ ಈ ನಿಂದಕರಿಗೆ ಧನ್ಯವಾದ ಹೇಳಲೇಬೇಕು.

ಸಮಾಜಕ್ಕೋಸ್ಕರ ತಮ್ಮ ಜೀವನವನ್ನು ಕೊಟ್ಟು ಪ್ರಚಾರಕರಾಗಿ,ರಾಜ್ಯ ಬಿಜೆಪಿಯಲ್ಲಿ ಕೇಂದ್ರ ಬಿಂದುವಿನಂತೆ ಕಳೆದ ಹತ್ತು ವರ್ಷಗಳಿಂದ ತಮಗೆ ಕೊಟ್ಟ ಜವಾಬ್ದಾರಿಯನ್ನು ನಿರ್ವಹಿಸುತ್ತಿರುವ ಬಿ.ಎಲ್.ಸಂತೋಷ್(ಸಂತೋಷ್‌ಜೀ)ರವರು ಒಬ್ಬರಾದರೆ,ಪತ್ರಕರ್ತರಾಗಿ ಅಂಕಣಕಾರರಾಗಿ ರಾಷ್ಟ್ರೀಯ ವಿಚಾರಗಳನ್ನು ಪ್ರತಿಪಾದಿಸುತ್ತಾ, ಜೀವನಕ್ಕಿಂತ ಅಧ್ಯಯನಕ್ಕೇ ಆದ್ಯತೆ ಕೊಟ್ಟು, ಕಾರ್ಯನಿರ್ವಹಿಸುತ್ತಿರುವ ಸಂತೋಷ್ ತಮ್ಮಯ್ಯ ಮತ್ತೋರ್ವರು. ಸಂತೋಷ್‌ಜೀರವರು ರಾಜಕೀಯ ಕ್ಷೇತ್ರದಲ್ಲಿದ್ದರೂ ಎಂದಿಗೂ ಪ್ರಚಾರ ಪ್ರಿಯರಾಗಲಿಲ್ಲ. ತಮ್ಮಲ್ಲಿರುವ ಅಗಾಧ ಸಂಘಟನಾ ಸಾಮರ್ಥ್ಯವನ್ನು ಕಳೆದ ಹತ್ತು ವರ್ಷಗಳಿಂದ ಬಿಜೆಪಿಯನ್ನು ಕಟ್ಟುವುದಕ್ಕಾಗಿಯೇ ಧಾರೆ ಎರೆಯುತ್ತಿರುವ ಇವರು ಮತ್ತು ಇವರ ಸಾಮರ್ಥ್ಯ ಬಿಜೆಪಿಯ ಒಳಗಿರುವವರಿಗೆ ಮತ್ತು ಪರಿವಾರದ ಕಾರ್ಯಕರ್ತರುಗಳಿಗೆ ಮಾತ್ರ ಪರಿಚಯವಿತ್ತು.ಅದೇ ರೀತಿ ಅಸೀಮ ಪತ್ರಿಕೆಯ ಸಂಪಾದಕರಾಗಿ,ಹೊಸದಿಗಂತ ಪತ್ರಿಕೆಯ ಅಂಕಣಕಾರರಾಗಿ ಓದು ಮತ್ತು ಬರಹಗಳನ್ನು ಮಾತ್ರ ಅಂಟಿಸಿಕೊಂಡು, ಅಧ್ಯಯನದ ಮೂಲಕ ಅಗಾಧ ಬರವಣಿಗೆಯ ಸಾಮರ್ಥ್ಯವನ್ನು ಹೊಂದಿದ್ದ, ಸಂಕೋಚ ಸ್ವಭಾವದ ಸಂತೋಷ್ ತಮ್ಮಯ್ಯ ಸಹ ಎಂದೂ ಮುನ್ನಲೆಗೆ ಬಂದವರಲ್ಲ. ತಮ್ಮ ತಮ್ಮ ಕ್ಷೇತ್ರಗಳಲ್ಲಿ ತಮಗಿರುವ ಶಕ್ತಿಯನ್ನು ವಿನಿಯೋಗಿಸಿ ತೆರೆಮರೆಯಲ್ಲಿಯೇ ಕಾರ್ಯ ನಿರ್ವಹಿಸುತ್ತಿದ್ದ ಈ ಇಬ್ಬರನ್ನೂ ನಿಂದಕರುಗಳು ಜನರ ಮುಂದೆ ತಂದು ನಿಲ್ಲಿಸಿಬಿಟ್ಟಿದ್ದಾರೆ. ಈ ಕಾರಣದಿಂದಾಗಿಯೇ ಸಂತೋಷ್‌ಜೀ ಮತ್ತು ಸಂತೋಷ್ ತಮ್ಮಯ್ಯ ಇಬ್ಬರ ಹೆಸರು ಜನಜನಿತಾಗುತ್ತಿದೆ. ಇವರಿಬ್ಬರ ಸಾಮರ್ಥ್ಯದ ಅರಿವು ಜನರಿಗೆ ಆಗತೊಡಗಿದೆ. ಅದಕ್ಕೇ ಅಂದು ಪುರಂದರ ದಾಸರು ಹೇಳಿದ ’ಶಿಷ್ಟ ಜನರ ಕೀರ್ತಿಗಳಿಗೆ ನಿಂದಕರಿರಬೇಕು, ನಿಂದಕರಿರಿಬೇಕು’ ಎಂಬ ನುಡಿ ಇಂದೂ ಪ್ರಸ್ತುತವೆಂಬುದು ರುಜುವಾತಾಗಿಬಿಟ್ಟಿದೆ.

ಬಿ.ಎಲ್.ಸೋತೋಷ್, ಬಹಳಷ್ಟು ಜನರು ಸಂತೋಷ್‌ಜೀ ಎಂದು ಆತ್ಮೀಯವಾಗಿ, ಗೌರವಪೂರ್ವಕವಾಗಿ ಕರೆಸಿಕೊಳ್ಳುವ ಇವರು ಬಿಜೆಪಿಯಲ್ಲಿ ’ಸಂಘಟನಾ ಕಾರ್ಯದರ್ಶಿ’ ಎಂದರೆ ಹೇಗಿರಬೇಕು ಎಂಬುದಕ್ಕೆ ಮಾದರಿಯಾಗಿ ಬಿಜೆಪಿಯ ಸಂಘಟನೆಗಾಗಿ ತಮ್ಮ ಜೀವನವನ್ನು ಸಮರ್ಪಿಸಿ ಕಾರ್ಯನಿರ್ವಹಿಸುತ್ತಿರುವವರು.ಬಿಜೆಪಿಯನ್ನು ಸಂಘಟನಾತ್ಮಕವಾಗಿ ಶಕ್ತವಾಗಿಸುವಲ್ಲಿ ಸಂತೋಷ್‌ಜೀಯವರ ಪಾತ್ರ ಅಸದಳವಾದುದು ಎಂಬುದನ್ನು ಬಿಜೆಪಿಯಲ್ಲಿ ಅವರನ್ನು ಸಹಿಸಿಕೊಳ್ಳದವರೂ ಒಪ್ಪಿಕೊಳ್ಳುತ್ತಾರೆ.

ಮತ್ತಷ್ಟು ಓದು »

13
ನವೆಂ

ಇಸ್ಲಾಮ್ ವಿಮರ್ಶೆ ಮಾಡಬಾರದಮ್ಮ,ಹಿಂದೂಗಳನ್ನು ಟೀಕಿಸುವುದು ಕರ್ಮ: ಮೈತ್ರಿ ಸರ್ಕಾರದ್ದು ಧೃತರಾಷ್ಟ್ರ ಪ್ರೇಮ!

– ಶ್ರೀನಿವಾಸ್ ರಾವ್

ಘಟನೆ-1
ಬ್ರಿಟೀಶ್ ವಿರುದ್ಧದ ಹೋರಾಟದಲ್ಲಿ ಕೆಂಪೇಗೌಡರ ಪಾತ್ರವೇನು? ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಟಿಪ್ಪು ಹೆಸರು ಮರುನಾಮಕರಣ ಮಾಡಬೇಕು – ಗಿರೀಶ್ ಕಾರ್ನಾಡ್
ಗಿರೀಶ್ ಕಾರ್ನಾಡ್ ಗೆ ಇತಿಹಾಸ ಗೊತ್ತಿಲ್ಲ, ಸರ್ಕಾರಿ ಪ್ರಾಯೋಜಿತ ಸಾಹಿತಿ- ಹೆಚ್ ಡಿ ಕುಮಾರಸ್ವಾಮಿ

2015 ರ ಟಿಪ್ಪು ಜಯಂತಿ ಕಾರ್ಯಕ್ರಮ, ರಕ್ತಪಾತವಾದರೂ ಸರಿಯೇ ಟಿಪ್ಪು ಜಯಂತಿಯನ್ನು ನಡೆಸಲೇಬೇಕೆಂಬ ಜಿದ್ದಿಗೆ ಬಿದ್ದಿದ್ದ ಸಿದ್ದರಾಮಯ್ಯ ಸರ್ಕಾರ, ಟಿಪ್ಪು ಸುಲ್ತಾನನನ್ನು ಬಣ್ಣಿಸಲು “ಟಿಪ್ಪುವಿನ ಕನಸುಗಳು”ನ್ನು ಕಟ್ಟಿಕೊಟ್ಟಿದ್ದ ಸಾಹಿತಿ ಗಿರೀಶ್ ಕಾರ್ನಾಡ್ ಅವರನ್ನು ಆಹ್ವಾನಿಸಿತ್ತು. ತಮ್ಮ ಧಣಿಯ ಎದುರು ಅವರ ಕುಲದೈವವನ್ನು ಹೊಗಳಲು ನಿಂತ ಸರ್ಕಾರಿ ಪ್ರಾಯೋಜಿತ ಸಾಹಿತಿ ಗಿರೀಶ್ ಕಾರ್ನಾಡ್ ಮಾತಿನ ಓಘದಲ್ಲಿ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಕೆಂಪೇಗೌಡರ ಹೆಸರೇಕೆಬೇಕು? ಟಿಪ್ಪು ಹೆಸರಿಡಬೇಕು, ಟಿಪ್ಪು ಬ್ರಿಟೀಷರ ವಿರುದ್ಧ ಹೋರಾಡಿದ್ದ, ಆದರೆ ಸ್ವಾತಂತ್ರ್ಯ ಹೋರಾಟದಲ್ಲಿ ಕೆಂಪೇಗೌಡರ ಪಾತ್ರ ಇರಲಿಲ್ಲ ಎಂದುಬಿಟ್ಟಿದ್ದರು.

ಬ್ರಿಟೀಷರ ವಿರುದ್ಧದ ಹೋರಾಟದಲ್ಲಿ ಕೆಂಪೇಗೌಡರ ಪಾತ್ರ ಏನು? ಮಹಾಭಾರತದ ಯುದ್ಧದಲ್ಲಿ ಅರ್ಜುನ ಕೌರವರ ವಿರುದ್ಧ ಏಕೆ ಬ್ಯಾಲಿಸ್ಟಿಕ್ ಮಿಸೈಲ್ ಪ್ರಯೋಗ ಮಾಡಲಿಲ್ಲ? ದನ್ಯಾಂಗ್-ಕುನ್ಶಾನ್ ಗ್ರ್ಯಾಂಡ್ ಬ್ರಿಡ್ಜ್ ನಿರ್ಮಾಣಕ್ಕೆ ಶ್ರೀರಾಮನ ಕೊಡುಗೆ ಏನು
ಎಂಬಂಥಹ ಸೆನ್ಸಿಬಲ್ ಪ್ರಶ್ನೆಗಳು ಸೆಕ್ಯುಲರ್ ಸರ್ಕಾರಿ ಪ್ರಾಯೋಜಿತ ಬುದ್ಧಿಜೀವಿಗಳಿಗಷ್ಟೇ ಹೊಳೆಯುವುದಕ್ಕೆ ಸಾಧ್ಯ. ಇರಲಿ…

ಮತ್ತಷ್ಟು ಓದು »

1
ನವೆಂ

#MeToo, ಒಂದೆರಡು ಪ್ರಶ್ನೆಗಳು from Me Too…!

– ಸುಜಿತ್ ಕುಮಾರ್

timthumbಸ್ಥಳ ವರ್ಲಿ, ಮುಂಬೈ. ಅದು ಕಡುಕಪ್ಪು ಕೋಟುಗಳು ಹಾಗು ಎಲ್ಲೆಂದರಲ್ಲಿ ಸೀಳಿಕೊಂಡು ಗಾಳಿಗೆ ಹಾರಾಡುತ್ತಿರುವ ಡ್ರೆಸ್ಸುಗಳೇ ತುಂಬಿ ತುಳುಕುತ್ತಿರುವ ಸ್ಟೇಡಿಯಂ. ಸೇರಿರುವರೆಲ್ಲ ಸಿನಿಮಾರಂಗದಲ್ಲಿ ಒಂದಿಲ್ಲೊಂದು ಬಗೆಯಲ್ಲಿ ಗುರುತಿಸಿಕೊಂಡಿರುವ ದೊಡ್ಡ ದೊಡ್ಡ ಹಸ್ತಿಗಳು. ಘಾಡ ಮೌನದ ಸೀರಿಯಸ್ನೆಸ್ ಅನ್ನು ಒಳಗೊಂಡ ಆ ಮುಖಗಳನ್ನು ಗಮನಿಸಿದಾಗ ಮುಂದಿದ್ದ ಸ್ಟೇಜಿನ ಮೇಲೆ ಇಂದು ತೀರಾ ಸಾಮನ್ಯವೆನಿಸಿಕೊಂಡಿರುವಂತೆ ಕೇಂದ್ರ ಸರ್ಕಾರಗಳ ನಡೆಯ ವಿರುದ್ಧವೋ, ದೇವಸ್ಥಾನಗಳಿಗೆ ಮಹಿಳೆಯ ಪ್ರವೇಶ ಬೇಕೆಂಬುದರ ಬಗ್ಗೆಯೂ ಅಥವಾ ಜೀವ ಪಣವಿಟ್ಟು ಕಾದಾಡುವ ಸೈನಿಕರ ನಡೆಗಳ ಬಗ್ಗೆಯೂ ಜನತೆಗೆ ಅರ್ಥವಾಗದ ದುಬಾರಿ ಭಾಷೆಯಲ್ಲಿ ಅವರವರೇ ಚರ್ಚಿಸಿ, ಮಧ್ಯದಲ್ಲಿ ಒಂದೆರೆಡು ಮದ್ಯಗಳನ್ನು ಏರಿಸಿ, ಕೊನೆಗೆ ತೂರಾಡುತ್ತಾ ಮನೆಗೆ ತೆರಳುವ ಹೈ ಪ್ರೊಫೈಲ್ ಪ್ರಗತಿಪರರ ಕಾರ್ಯಕ್ರಮವೇನೋ ಎಂದೆನಿಸುತ್ತಿತ್ತು. ಮತ್ತಷ್ಟು ಓದು »