ನಮೋ “ಅರಿಹಂತಾಯ” : ವಿಕ್ಷಿಪ್ತ ಶಕ್ತಿಗಳ ಅಣ್ವಸ್ತ್ರ ಬೆದರಿಕೆಗೆ ಭಾರತದ ಸುರಕ್ಷಾ ಕವಚ.
– ಶ್ರೇಯಾಂಕ ಎಸ್ ರಾನಡೆ
“ಅರಿಹಂತ” ಅಂದರೆ ಸಂಸ್ಕೃತ ಭಾಷೆಯಲ್ಲಿ “ಶತ್ರುಗಳ ವಿನಾಶಕ” ಎಂದರ್ಥ ( ಅರಿ=ಶತ್ರು. ಹಂತ = ವಿನಾಶಕ ). ‘ಐಎನ್‍ಎಸ್ ಅರಿಹಂತ್’ ಭಾರತದ ಮೊದಲ ಸ್ವದೇಶಿ ನಿರ್ಮಿತ ಅಣ್ವಸ್ತ್ರ ಜಲಾಂತರ್ಗಾಮಿ ನೌಕೆ. ನವೆಂಬರ್ 5 ಕ್ಕೆ ಅರಿಹಂತ ಹಿಂದೂ ಮಹಾಸಾಗರದಲ್ಲಿ ಸುಮಾರು 300 ಮೀಟರ್ ಆಳಕ್ಕೆ ಧುಮುಕಿ ಮೊದಲ ಹಂತದ ಗಸ್ತು ಪರೀಕ್ಷಣವನ್ನು ಯಶಸ್ವಿಯಾಗಿ ಪೂರೈಸಿದೆ. ಇದರ ಲೋಕಾರ್ಪಣೆಯೊಂದಿಗೆ ಭಾರತ ದೇಶ ಭೂ(ಪೃಥ್ವಿ, ಅಗ್ನಿ ಕ್ಷಿಪಣಿಗಳು), ವಾಯು ಹಾಗೂ ಜಲ ಹೀಗೆ ಮೂರೂ ಮಾಧ್ಯಮಗಳಲ್ಲಿಯೂ ನ್ಯೂಕ್ಲಿಯರ್ ಶಸ್ತ್ರ ಬಲವಿರುವ “ಅಣ್ವಸ್ತ್ರ ತ್ರಿವಳಿ” ಶಕ್ತಿಯಾಗಿದೆ. ರಷ್ಯ, ಅಮೆರಿಕ, ಫ್ರಾನ್ಸ್, ಇಂಗ್ಲೆಂಡ್, ಚೀನ ದೇಶಗಳನ್ನು ಹೊರತುಪಡಿಸಿ ಪರಮಾಣು ತಂತ್ರಜ್ಞಾನದ ಜಲಾಂತರ್ಗಾಮಿಯನ್ನು ಅಭಿವೃದ್ಧಿಪಡಿಸಿ ಬಳಸುತ್ತಿರುವ “ಅಣ್ವಸ್ತ್ರ ತ್ರಿವಳಿ” ಸಾಮಾರ್ಥ್ಯವಿರುವ ವಿಶ್ವದ ಆರನೇ ದೇಶ ಭಾರತ. ಏಷ್ಯಾದ ಖಂಡದ ಎರಡನೇ ದೇಶ. ಮತ್ತಷ್ಟು ಓದು