ವಿಷಯದ ವಿವರಗಳಿಗೆ ದಾಟಿರಿ

ಏಪ್ರಿಲ್ 24, 2020

2

ಜಾಗತಿಕ ಕಚ್ಚಾ ತೈಲದ ಬೆಲೆ ಮೈನಸ್ ಆಗಿರುವುದೇಕೆ? ಅದರ ಅರ್ಥವೇನು?

‍ನಿಲುಮೆ ಮೂಲಕ
– ಪ್ರಶಾಂತ್
ಇಂಟರ್ನ್ಯಾಶನಲ್ ಕ್ರೂಡ್ ಆಯಿಲ್‌ (WTI)  ಬೆಲೆ ಪ್ರತಿ ಬ್ಯಾರೆಲ್ ಗೆ ಮೈನೆಸ್ 40 ಡಾಲರ್ ಆಗಿದ್ದರ ಬಗ್ಗೆ ಕೆಲವು ಮಾಹಿತಿಗಳು ಹಂಚಿಕೊಳ್ಳಲು ಹಾಗೂ ಇದರ ವಿಷಯ ಎಲ್ಲರಿಗು ಸುಲಭವಾಗಿ ಅರ್ಥವಾಗಲಿ ಅನ್ನೋದು ಈ ಪೋಷ್ಟನ ಉದ್ದೇಶ.
ಆಯಿಲ್ ಬೆಲೆ‌ ಅಷ್ಟುಂದು ಕಮ್ಮಿಯಾಗಿದೆಯಂತೆ, ಪಾತಳಕ್ಕೆ ಇಳಿದಿದೆಯಂತೆ, ಹಾಗಾದರೆ  ನಾನು ಕಾರ್ ತೆಗೆದುಕೊಂಡು ಪೆಟ್ರೋಲ್ ಹಾಕಿಸಲು ಹೋದರೆ, ಬಂಕ್ ನವರು ನನಗೇ ದುಡ್ಡು ಕೊಟ್ಟು ಪೆಟ್ರೋಲ್ ಹಾಕುತ್ತಾರೆಯೇ ಎಂದು‌‌‌ ನನ್ನ ಸ್ನೇಹಿತರು ಬಹಳಾ‌‌ ಸೀರಿಯಸ್ ಫೋನ್‌ ಮಾಡಿ ಕೇಳಿದರು..!! ಈ ಪ್ರಶ್ನೆಗೆ ಉತ್ತರ ಹುಡುಕುವ ಜೊತೆಗೆ,‌ ನಾನು ಪೆಟ್ರೋಲಿಯಂ ಕ್ಷೇತ್ರದಲ್ಲಿಯೇ ಕೆಲಸ ಮಾಡುವುದರಿಂದ ಸ್ವಲ್ಪ‌ ವಿವರಣೆಯನ್ನು‌ ಕೊಡುವ ಪ್ರಯತ್ನವನ್ನೂ ಮಾಡುತ್ತಿದ್ದೇನೆ.
ಎಲ್ಲಾದಕ್ಕೂ‌ ಮೊದಲು ಅರ್ಥವಾಗ ಬೇಕಾಗಿರುವುದು ಕ್ರೂಡ್ ಆಯಿಲ್‌‌ ಅಂದರೆ ಏನು ಹಾಗೂ ಅದರ ಗ್ರೇಡಿಂಗ್‌ ಹೇಗೆ‌ ಮಾಡುತ್ತಾರೆ ಎಂಬುದು.. ಸಾವಿರಾರು ವರ್ಷಗಳಿಂದ ಭೂಮಿಯ ‌ಹಾಗೂ ಸಮುದ್ರದ ತಳದಲ್ಲಿ ಪ್ರಾಣಿಗಳ ಮತ್ತು ಗಿಡಗಳ‌ ಪಳೆಯುಳಿಕೆಗಳು,‌ ಕ್ರೂಡ್ ಆಯಿಲ್‌ ಆಗಿ‌ ಪರಿವರ್ತನೆಯಾಗುತ್ತದೆ.. ಅದರಲ್ಲಿ ಇರುವ ಸಲ್ಫರ್ ಅಂಶದಿಂದ ಅದರ ಗ್ರೇಡಿಂಗ್ ನಿರ್ಧಾರವಾಗುತ್ತದೆ.. ಜಾಸ್ತಿ ಅಂಶ ಸಲ್ಫರ್ ಇದ್ದರೆ ಒಳ್ಳೆಯ ಕ್ರೂಡ್ ಆಯಿಲ್ ಯೆಂದು ಪರಿಗಣಿಸುತ್ತಾರೆ.. ಇನ್ನೂ ಸುಲಭವಾಗಿ ಹೇಳಬೇಕೆಂದರೆ ಸಮುದ್ರದಲ್ಲಿ ಸಿಗವ ಆಯಿಲ್ ನಲ್ಲಿ ಸಲ್ಫರ್ ಅಂಶ ಜಾಸ್ತಿ ಇರುತ್ತದೆ.. ಅದರ ಪ್ರಕಾರ ಗ್ರೇಡಿಂಗ್ ನಿರ್ಧಾರವಾಗುತ್ತದೆ.. ನಾನು ಕೆಲಸ ಮಾಡುವ ಯುಕೆಯ ನಾರ್ಥ್ ಸೀ (North sea) ಪ್ರದೇಶದಲ್ಲಿ ಸಿಗುವ ಆಯಿಲ್ಅನ್ನು ಬ್ರೆಂಟ್  ಯೆಂದು ಕರೆಯುತ್ತಾರೆ..ಇದು ಉತ್ಕೃಷ್ಟವಾಗಿರತ್ತದೆ.. ಹಾಗೆಯೇ ಅಮೇರಿಕಾದಲ್ಲಿ ಭೂಮಿಯಿಂದ ತೆಗೆಯುವ ಆಯಿಲ್ ಅನ್ನು WTI (West Texus Intermetiate) ಯೆಂದು ಕರೆಯುತ್ತಾರೆ.. ಹಾಗೂ ಅದು ಸಾಧಾರಣ ಕ್ವಾಲೆಟಿಯ ತೈಲ.. ಅರಬ್ ಪ್ರಾಂತ್ಯದ ಆಯಿಲ್ ಅನ್ನು ಓಪೇಕ್ ಬಾಸ್ಕೇಟ್ (OPEC Basket) ಎಂದು ಕರೆಯುತ್ತಾರೆ.
ಇನ್ನೂ ಆಯಿಲ್ (ತೈಲ) ವ್ಯವಹಾರದಲ್ಲಿ ಎರಡು ರೀತಿ ‌ಇದೆ.. ಶೇರು ಮಾರುಕಟ್ಟೆ ವ್ಯವಹಾರ ಹಾಗು ಕಮಾಡಿಟಿ ವ್ಯವಹಾರ (Commodity trading).  (ಚಿನ್ನದ ವ್ಯವಹಾರದ ರೀತಿಯಲ್ಲಿಯೇ ನಡೆಯವ ವ್ಯವಹಾರ). ಕಮೋಡಿಟಿ ವ್ಯವಹಾರದಲ್ಲಿ ಮತ್ತೊಂದು ವಿಧಾನವಿದೆ, ಅದನ್ನು ಫ್ಯೂಚರ್ ಟ್ರೇಡಿಂಗ್ ಏನ್ನುತ್ತಾರೆ.. ಅಂದರೆ, ಏಪ್ರಿಲ್ ಬೆಲೆಯನ್ನು ಜನವರಿಯಲ್ಲಿಯೇ ನಿರ್ಧರಿಸುವ ವಿಧಾನ.. ಉದಾಹರಣೆಗೆ, ಮಾರುವವರು (Seller) ( ಆಯಿಲ್ ಅನ್ನು ತಗೆಯುವ ಕಂಪನಿ) ಮತ್ತು ಕೊಂಡುಕೊಳ್ಳುವವರು ‌(Buyer) ( ಬಹುತೇಕ ಮಧ್ಯವರ್ತಿಗಳು) ಇಬ್ಬರು ಕುಳಿತುಕೊಂಡು,‌ ಬಹಳ ಸುಧೀರ್ಘವಾಗಿ ಸಮಾಲೋಚಿಸಿ ( ಬಿಗ್ ಡೇಟಾ ಹಾಗೂ‌ ಆರ್ಟಿಫಿಶಿಯಲ್ ಇಂಟಲಿಜೆನ್ಸ್ ‌- AI ಸಹಾಯದಿಂದ)  ಪ್ರತಿ ‌ಬ್ಯಾರೆಲ್ಗೇ  25 ಡಾಲರ್ ಎಂದು ಬೆಲೆ ನಿರ್ಧರಿಸುತ್ತಾರೆ.. ಅದಕ್ಕೆ ತಕ್ಕ ಹಾಗೆ ಆಯಿಲ್‌ ಪ್ರೂಡ್ಯೂಸ್ ಆಗುತ್ತದೆ ಹಾಗೂ ಅದನ್ನು‌ ಏಪ್ರಿಲ್‌ ನಲ್ಲಿ ದುಡ್ಡು ಕೊಟ್ಟು ತೆಗೆದುಕೊಂಡು ಹೋಗುವುದು ಆಯಿಲ್‌‌ಅನ್ನು‌ ಕೊಂಡುಕೊಳ್ಳವವನ ಜವಾಬ್ದಾರಿ.. ಆದರೆ ನೆನಪಿಡಿ ಈ ಕ್ರೂಡ್ ಆಯಿಲ್ಅನ್ನು ಸಂಸ್ಕರಿಸದೆ ಅದರಿಂದ ಯಾವ ಲಾಭವು ಆಗುವುದಿಲ್ಲ.. ಈ‌ ರೀತಿ ಕೊಂಡುಕೊಳ್ಳವವರು ಇದನ್ನು ಇನ್ನೂ ಕೆಲವು ದಿನ ಶೇಖರಿಸಿ, ಬೆಲೆ‌‌ ಜಾಸ್ತಿಯಾದಗ, ರಿಫೈನರಿ ಕಂಪನಿಗಳಿಗೆ ಇನ್ನು‌ ಹೆಚ್ಚಿನ ಬೆಲೆಗೆ ಮಾರಾಟ ಮಾಡಿ ‌ಲಾಭ ಮಾಡಿಕೊಳ್ಳುತ್ತಾರೆ.. ರಿಫೈನರಿಗಳು ಈ ಕ್ರೂಡ್ ಆಯಿಲ್ ಅನ್ನು‌ ಸಂಸ್ಕರಿಸಿ ಡೀಸೆಲ್,‌ ಪೆಟ್ರೋಲ್ ಇತ್ಯಾದಿಗಳನ್ನು‌ ಮಾಡಿ ನಮ್ಮಂಥ‌ ಗ್ರಾಹಕರಿಗೆ ಮಾರುತ್ತಾರೆ..

ನಾವು ಕೊಂಡು‌ಕೊಳ್ಳವ ಪೆಟ್ರೋಲ್, ಡೀಸೆಲ್‌ ಮೊತ್ತ,‌ ಕಂಪನಿಗಳ ಹಾಗೂ ಮಧ್ಯವರ್ತಿಗಳ‌‌ ಲಾಭ, ತೈಲ‌ ತೆಗೆಯಲು ಆಗು ಖರ್ಚು, ಅದರ ಸಾಗಾಣಿಕೆ, ಶೇಖರಣೆ, ಪರಿಷ್ಕರಣೆಗೆ‌ ತಗುಲುವ ವೆಚ್ಚ ಹಾಗೂ‌ ಟ್ಯಾಕ್ಸ್ ಸೇರಿಸಿ‌ ಆಗಿರುತ್ತದೆ.
ಈಗಿನ ಪರಿಸ್ಥಿತಿಯ ಕಥೆ ಶುರುವಾಗುವುದು ಇಲ್ಲಿಂದ ಹಾಗು ಈ ಸಮಸ್ಯೆಯ ಮೂಲ, ಆಯಿಲ್ ‌ಶೇಖರಣೆ ಅಥವ ಸ್ಟೋರೇಜ್.. ಅಮೇರಿಕಾದ ಓಕ್ಲಾಹೋಮದಲ್ಲಿ ಇರುವ ಕಶಿಂಗ್‌(Cushing) ಅನ್ನುವ ಊರು ಈ ಅಯಿಲ್ ಸ್ಟೋರೇಜ್ ನ ಹಬ್.. ಕೋವಿಡ್ ಸೆಚ್ಯುವೇಷನ್ ಇಂಪ್ಯಾಕ್ಟ್ ಅನ್ನು ಅಮೇರಿಕದಲ್ಲಿ ಯಾರು‌ ಊಹಿಸಿರಲಿಲ್ಲ ಹಾಗೂ‌ ಏಪ್ರಿಲ್ ಹೊತ್ತಿಗೆ ಬಹುತೇಕ ಎಲ್ಲಾ‌ ಸ್ಟೋರೇಜ್ ಯೂನಿಟ್ಗಳು‌ ಭರ್ತಿಯಾಗಿದ್ದವು.. ವಿಮಾನ ಹಾರಾಟಗಳು‌ ನಿಲ್ಲಿಸಿದ್ದರಿಂದ, ಕಾರ್ಖಾನೆಗಳು ತಾತ್ಕಾಲಿಕವಾಗಿ ‌ಮುಚ್ಚಿದ್ದರಂದ ನ್ಯಾಚುರಲ್ ಆಗಿ ಕ್ರೂಡ್ ಆಯಿಲ್‌ ಡಿಮಾಂಡ್ ಕಮ್ಮಿಯಾಗಿತ್ತು.
ಆದರೆ ಈಗ ಅಗ್ರಿಮೆಂಟ್ ಆಗಿರುವ ಮೊತ್ತಕ್ಕೆ WTI ಕ್ರೂಡ್ ಆಯಿಲ್ ಅನ್ನು ತೆಗೆದುಕೊಂಡು ಹೋಗುವ ಜವಾಬ್ದಾರಿ ಕೊಂಡುಕೊಳ್ಳುವವರದ್ದು (Buyers).. ಆದರೆ ಅವರ ಹಿಂದಿನ ತಿಂಗಳು‌ ಶೇಖರಣೆಯಾಗಿರುವ ಆಯಿಲ್ ಅನ್ನೇ ಇನ್ನೂ‌ ಅವರು ರಿಫೈನರಿಗಳಿಗೆ ಮಾರಲು‌ ಆಗಿಲ್ಲಾ‌ ಹಾಗೂ ಹೊಸ ಸ್ಟೋರೇಜ್ ಲಭ್ಯವಿಲ್ಲದಿರುವ ಕಾರಣ‌ ಅವರಿಗೆ ಆಯಿಲ್ ಶೇಖರಿಸಲೂ ಆಗುವುದಿಲ್ಲ.. ಆಯಿಲ್ ಬೇಡ ಎಂದರೆ ಆಯಿಲ್ ಮಾರಿರುವವರು ಕೋರ್ಟ್ ಎಳೆಯುತ್ತಾರೆ ಎಂಬ ಭಯ.. ಕ್ರೂಡ್ ಆಯಿಲ್ ಅನ್ನು‌ ಮನೆ ಹಿತ್ತಲಲ್ಲಿ ಇಡಲು‌‌ ಆಗುವುದಿಲ್ಲ.. ಹೆಚ್ಚು ಕಮ್ಮಿಯಾದರೆ ಇಡೀ ಊರೇ ಬೆಂಕಿಗೆ ಆಹುತಿಯಾಗುವ ಭಯವಿರುತ್ತದೆ.. ಅಥವ ನಮ್ಮ ಭಾರತದಲ್ಲಿ ಆಗುವ ತರಹ ಯಾವುದೋ ನದಿಗೆ ಆಯಿಲ್ ಚೆಲ್ಲಿ ಕೈ ತೋಳೆದುಕೊಳ್ಳಲು ಅಲ್ಲಿನ‌ ಕಾನೂನು‌‌ ಬಿಡುವುದಿಲ್ಲ..
ಇಂಥ ಪರಿಸ್ಥಿತಿಯಲ್ಲಿ ಆತ ಸ್ಟೋರೇಜ್‌ ಕೆಪಾಸಿಟಿ‌‌‌ ಇರುವ ಯಾರೋ ರಿಫೈನರಿಯವರನ್ನು‌ ಹಿಡಿದು,‌ ಅವರು‌ ಬೇಡ ಎಂದರೂ,‌ ಕೈ‌ಮುಗಿದು‌ ನಾನೇ ನಿಮಗೆ 40 ಡಾಲರ್ ಕೊಡುತ್ತೇನೆ, ದಯವಿಟ್ಟು ಆಯಿಲ್ ಅನ್ನು ತೆಗೆದು‌ಕೊಂಡು‌ ಹೋಗಿ‌ ಅನ್ನುತ್ತಾನೆ..ಆ ಪರಿಸ್ಥಿತಿಯೇ ಶೇರು‌ ಮಾರುಕಟ್ಟೆಯಲ್ಲಿ ತಲ್ಲಣ‌ ಉಂಟಾಗಿ ಪ್ರತಿ ಬ್ಯಾರೆಲ್ ಮೈನೆಸ್ 40 ಆಗಿದ್ದು.. ಹಾಗೂ ಅದು ತಾತ್ಕಾಲಿಕವಾಗಿ ಆದ ವಹಿವಾಟು ಬದಲಾವಣೆ ಹಾಗೂ‌ ಅಂದೇ‌ ಸಂಜೆ ಡೋನಾಲ್ಡ್ ಟ್ರಂಪ್, ಅಮೇರಿಕಾದ ಗವರ್ನಮೆಂಟಿನ ನ್ಯಾಷನಲ್ ರಿಸರ್ವ್ ಸ್ಟೋರೇಜ್ ಅನ್ನು ಆಯಿಲ್‌ ಕಂಪನಿಗಳಿಗೆ ಉಪಯೋಗಿಸಿ‌‌ಕೊಳ್ಳಲು‌‌ ತೆರೆದು ಸಮಸ್ಯೆಯನ್ನು ಅನ್ನು ಪರಿಹಾರ ಮಾಡಿದರು..‌‌ಇನ್ನೂ‌ ಒಂದು‌ ವಿಚಾರವೆಂದರೆ,‌ ಈ ಎಲ್ಲಾ ನಾಟಕೀಯ ‌ಸನ್ನಿವೇಶದಿಂದ ಯಾವ ಆಯಿಲ್ ಕಂಪೆನಿಗಳ ಶೇರು ಬೆಲೆ ಬೀಳಲೂ ಇಲ್ಲಾ ಹಾಗೂ WTI ಬಿಟ್ಟು‌ ಬೇರೆ (ಉದಾ:ಬ್ರೆಂಟ್) ಆಯಿಲ್‌ನ‌ ಬೆಲೆಯು ಕಮ್ಮಿಯೂ‌ ಆಗಲಿಲ್ಲ.. ಬೆಲೆ ಇಳಿದಿದ್ದು ಕೇವಲ ಮಧ್ಯವರ್ತಿಗಳು ತೆಗೆದುಕೊಳ್ಳಬೇಕಿದ್ದ WTI ಆಯಿಲ್ ನ ಬೆಲೆ ‌ಮಾತ್ರ.. ಹಾಗೇ ಗಂಟೆಗಳಲ್ಲಿ ‌ಅದರ‌ ಬೆಲೆ ಸುಧಾರಣೆಯನ್ನು ‌ಕಂಡಿತು..
ಈ ಯಾವ ಮಾಹಿತಿಯೂ ಇಲ್ಲದೆ, ಶಶಿ‌ ತರೂರ್ ಥರದವರು ಭಾರತದಲ್ಲಿಯೂ ಪೆಟ್ರೋಲ್ ಬೆಲೆ ಕಮ್ಮಿ‌ಮಾಡಿ ಎನ್ನುವ ಟ್ವೀಟ್ ಮಾಡಿದ್ದು‌ ಬಹಳ ಹಾಸ್ಯಾಸ್ಪದ ಏನಿಸಿತು..  ತಲೆಬುಡವೇ ಇಲ್ಲದೆ ಮೋದಿಯವರನ್ನು ಟಾರ್ಗೆಟ್ ‌ಮಾಡಲು ಒಂದು ಉಪಯೋಗವಿಲ್ಲದ ಅಸ್ತ್ರ‌ವಾಗಿ ಕಂಡಿತು.. ನಾನು‌ ಇಷ್ಟನ್ನು‌ ಬರೆದಿದ್ದು‌ ಸಾಮಾನ್ಯರಿಗೆ ಇದರ‌ ಬಗ್ಗೆ ಕ್ಲಾರಿಟಿ ಬರಲಿ‌ ಎಂಬ ಕಾರಣಕ್ಕಾಗಿ.. ಹಾಗೂ‌ ಭಾರತದ ಯಾವುದೇ ಆಯಿಲ್ ನ ವ್ಯವಾಹಾರ ಅಮೆರಿಕಾದೊಂದಿಗೆ ಇಲ್ಲಾ..
ಭಾರತದ ತೈಲವನ್ನು‌ ಬಹುತೇಕ ಆಮದು ಮಾಡಿಕೊಳ್ಳವುದು ಸೌದಿ ಅರೇಬಿಯಾ ‌ಹಾಗೂ ಇರಾಕ್ ನಿಂದ‌‌ ಹಾಗೂ‌‌ ಅಲ್ಲಿ ಯಾವ ತೈಲ ಬೆಲೆಯಲ್ಲಿ‌ ಯಾವ‌ ಏರಿಳಿತಗಳು ಆಗಲಿಲ್ಲಾ.. ಇನ್ನೊಂದು ‌ವಿಷಯ,‌ಈ‌ ಮೊದಲ ಇರಾನ್ ಜೊತೆಗಿನ ವ್ಯವಹಾರವೂ ಭಾರತಕ್ಕೆ ಬಹಳ‌ ಲಾಭದಾಯಕವಾಗಿತ್ತು.. ಅಮೇರಿಕಾ, ಇರಾನ್ ಅನ್ನು ತೈಲ‌ ಮಾರದ ಹಾಗೆ ಬಹಿಷ್ಕಾರಿಸಿದ‌ ಮೇಲೂ, ಭಾರತ ಅಮೇರಿಕಾಗೆ ಸೆಡ್ಡು ಹೊಡೆದು ಅಮೇರಿಕಾ ಭಾರತಕ್ಕೆ ಮಂಡಿಯೂರುವ ಹಾಗೆ‌ ಮಾಡಿತ್ತು.. ಇಂದಿಗೂ ಇರಾನ್, ಅಮೆರಿಕಾ ತನ್ನ ಬಹಿಷ್ಕಾರ ತೆಗೆಸಲು ಭಾರತದತ್ತ ನೋಡುತ್ತಾ‌ ನಿಂತಿದೆ..
ಅಂದ ಹಾಗೆ, ಇಡೀ ವಿಶ್ವ ತೈಲವನ್ನು‌‌ ಅಮೆರಿಕಾ ಡಾಲರ್ ಗಳಲ್ಲಿಯೇ ಕೊಂಡಕೊಳ್ಳಬೇಕು ಎಂಬುದು‌ ನಿಯಮ.. ಅದಕ್ಕೆ ಡಾಲರ್ ಅನ್ನು‌ “ಪೆಟ್ರೋ-ಡಾಲರ್” ಎಂದು‌ ಕರೆಯುತ್ತಾರೆ ಹಾಗು‌ ಅದೇ ಕಾರಣ ಡಾಲರ್ ಅಷ್ಟು ಬಲಾಢ್ಯ.. ಪೆಟ್ರೋ-ಡಾಲರ್ ಕಥೆ ಇನ್ನೂ‌ ರೋಚಕ, ಅದನ್ನು‌ ಬೇರೆ ಯಾವಾಗಲಾದರೂ ಬರೆಯುವ ಪ್ರಯತ್ನ ಮಾಡುತ್ತೇನೆ..
ಮುಗಿಸು‌‌‌ವ ಮೊದಲು‌ ಇನ್ನೊಂದು ‌ವಿಷಯ.. ಅಮೆರಿಕಾದ ಪ್ರಾಬಲ್ಯದ ಮಧ್ಯೆಯೂ,‌ ಮೋದಿಯವರು ಇರಾನ್ ಜೊತೆ ಭಾರತದ ರುಪಾಯಿಗಳಲ್ಲಿ ವ್ಯವಹಾರ ಮಾಡಿದ್ದು‌ ಕೂಡ ಇತಿಹಾಸ.
2 ಟಿಪ್ಪಣಿಗಳು Post a comment
  1. ಏಪ್ರಿಲ್ 27 2020

    ತೈಲ ಬೆಲೆಯ ಕುರಿತಾದ ಅತ್ಯಂತ ಸಮಯೋಚಿತವಾದ ವಿವರಗಳನ್ನು ಒಳಗೊಂಡ ಈ ಲೇಖನಕ್ಕಾಗಿ ನಿಮಗೆ ಹೃತ್ಪೂರ್ವಕ ಧನ್ಯವಾದಗಳು.

    ತನ್ನನ್ನೇ ತಾನು ಅತೀ ಬುದ್ಧಿವಂತ ಎಂದು ಭಾವಿಸಿರುವ ಸದಾ ಮೊಸರಿನಲ್ಲಿ ಕಲ್ಲು ಹುಡುಕುವ ಚಾಳಿಯಿರುವ, ಶಶೀ ತರೂರ್ ಮಾಡಿದ ಈ ಗೊಂದಲವನ್ನು ಅವರಂತೆಯೇ ತಾನೂ ಸಹಾ ಬುದ್ಧಿವಂತ ಎಂಬು ಭಾವಿಸಿರುವ ನಮ್ಮ ಶಾಸಕರಾದ ಕೃಷ್ಣ ಬೈರೇಗೌಡರೂ ಸಹಾ ರೀ ಟ್ವೀಟ್ ಮಾಡಿ ಅಳುದಿಳಿದ ಅಲ್ಪ ಸ್ವಲ್ಪ ಮಾನವನ್ನೂ ಕಳೆದುಕೊಂಡಿದ್ದು ಹಾಸ್ಯಾಸ್ಪದವಾಗಿತ್ತು.

    ಉತ್ತರ

Trackbacks & Pingbacks

  1. ಅಂತರರಾಷ್ಟ್ರೀಯ ತೈಲ‌ ಮಾರುಕಟ್ಟೆ, ಭಾರತ‌ ಮತ್ತು ಮೋದಿ – ಭಾಗ 2 | ನಿಲುಮೆ

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments