ವಿಷಯದ ವಿವರಗಳಿಗೆ ದಾಟಿರಿ

Archive for

5
ಆಗಸ್ಟ್

ರಾಮಜನ್ಮ ಭೂಮಿ ಚಳವಳಿ – ನನ್ನ ಬಾಲ್ಯದ ನೆನಪಿನಲ್ಲಿ

– ಅಜಿತ್ ಶೆಟ್ಟಿ ಹೆರಂಜೆ

ಚಿತ್ರ ಕೃಪೆ: ಕಲಾವಿದರದ್ದು. ಕೇರಳದ ಕಲಾವಿದರೊಬ್ಬರ ಕುಂಚದಲ್ಲಿ ಅರಳಿದ ಅಯೋಧ್ಯೆ ಭೂಮಿಪೂಜೆ

ಅಯೋದ್ಯೆಯ ರಾಮ ಜನ್ಮ ಭೂಮಿಯ ಹೋರಾಟ ನನ್ನ ವಯೋಮಾನದವರಿಗೆ ನಮ್ಮ ಕಣ್ಣ ಮುಂದೆಯೇ ನಿರ್ಮಾಣವಾದ ಇತಿಹಾಸ.ಮಹರ್ಷಿ ವಾಲ್ಮೀಕಿಯವರು ಬರೆದ ರಾಮಾಯಣ ಒಂದು ಕಡೆಯಾದರೆ ಇನ್ನೊಂದು ಕಡೆ ಆಯೋಧ್ಯೆಯಲ್ಲಿ ಪ್ರಭು ಶ್ರೀರಾಮಚಂದ್ರನ ಮಂದಿರ ಕಟ್ಟಲು ಭಾರತದ ಹಿಂದೂ ಸಮಾಜ ಮಾಡಿದ ಸುಮಾರು 500 ವರ್ಷಗಳ ಸುಧೀರ್ಘ ಹೋರಾಟ. ಈ ಹೋರಾಟದ ಇತಿಹಾಸ ಕೂಡ ವಾಲ್ಮೀಕಿಯವರು ರಾಮಾಯಣಕ್ಕಿಂತ ಭಿನ್ನವಾಗಿರಲಿಲ್ಲ. ತ್ರೇತಾ ಯುಗದಲ್ಲಿ ವನವಾಸ ಮುಗಿಸಿ, ರಾವಣ ಸಂಹಾರ ಮಾಡಿ ಅಯೋಧ್ಯೆಗೆ ಮರಳಿದ ಪ್ರಭು ಶ್ರೀರಾಮಚಂದ್ರನ ಪಟ್ಟಾಭಿಷೇಕವಾಗಿ ರಾಮ ರಾಜ್ಯದ ಸ್ಥಾಪನೆ ಆದದ್ದು ಒಂದು ಭಾಗವಾದರೆ,ಈ ಕಲಿಯುಗದಲ್ಲಿ ಅಯೋಧ್ಯೆಯಲ್ಲಿ ಇದ್ದ ಪ್ರಭು ಶ್ರೀರಾಮಚಂದ್ರನ ಮಂದಿರವನ್ನು ಬಾಬರನ ಸೈನ್ಯ ಕೆಡವಿ ಮಸೀದಿ ಮಾಡಿದ್ದಲ್ಲಿನಿಂದ, ಆ ಮಸೀದಿಯನ್ನ ಕೆಡವಿ ಅಲ್ಲಿ ಪುನಃ ಒಂದು ಭವ್ಯ ಮಂದಿರ ನಿರ್ಮಾಣ ಮಾಡಲು ಆಯಾ ಕಾಲದ ಆಡಳಿತ ವ್ಯವಸ್ಥೆ ವಿರುದ್ಧ ಸುಧೀರ್ಘ ಹೊರಾಟ ಮಾಡಿ ಇಂದು ನೆರವೇರುತ್ತಿರುವ ಶಿಲಾನ್ಯಾಸದವರೆಗಿನ ಅಧ್ಯಾಯ ಇನ್ನೊಂದು ಭಾಗ. ಅಲ್ಲಿ ರಾವಣನ ಸಂಹಾರ ಆಯಿತು, ಇಲ್ಲಿ ಕಾಂಗ್ರೆಸ್ ಪಕ್ಷ ಎಂಬ ಸೆಕ್ಯುಲರ್ ಮಾರೀಚನ ಅಧಃಪತನ ಆಯಿತು. ಈ ಘಟನೆಗಳ ಸರಪಳಿಯಲ್ಲಿ ನನ್ನ ಊರಾದ ಹೆರಂಜೆ ಮತ್ತು ಸುತ್ತಮುತ್ತಲಿನ ಇನ್ನೂ ಐವತ್ತನಾಲಕ್ಕು ಗ್ರಾಮಗಳ ಒಂದು ಅಳಿಲು ಸೇವೆಯ ಕೊಂಡಿ ಕೂಡ ಇತ್ತು.

ಇದು ನನ್ನ ಸೌಭಾಗ್ಯವೇ ಹೌದು, ನನ್ನ ಬಾಲ್ಯದ ತೀರಾ ಮೊದಲಿನ ನೆನಪುಗಳಲ್ಲಿ ನನ್ನ ಮನಸ್ಸಿನಲ್ಲಿ ಇನ್ನು ಅಚ್ಚೊತ್ತಿದಂತೆ ಉಳಿದಿರುವುದು “ರಾಮ ಶಿಲಾ ರಥ ಯಾತ್ರ.” ಇದು ನಡೆದದ್ದು 1990-91 ರ ಸಮುಯದಲ್ಲಿ. ಆಗ ನನಗೆ ಸುಮಾರು 8-9 ರ ವಯಸ್ಸು. ಅದು ‌ಸುಮಾರು ರಾತ್ರಿ‌ ಎಂಟು‌ ಗಂಟೆಯ ಸಮಯ.ದೂರದ ಬಯಲಿನ ಅಂಚಿನಲ್ಲಿ ‌ಒಂದು ಗುಂಪು‌ ಪೆಟ್ರೊ ಮ್ಯಾಕ್ಸ್ ಲೈಟ್, ತೆಂಗಿನ ಗರಿಯ ಬೆಂಕಿ‌ಸೂಡಿ ಹಿಡಿದು ಜೋರಾಗಿ ರಾಮ ಭಜನೆ ಮಾಡುತ್ತಾ ತಾಳ ತಟ್ಟುತ್ತ ನಮ್ಮ‌ ಮನೆಯತ್ತ ಬರವುದನ್ನ‌ ಕಂಡೊಡನೆ, ಓಡಿ ಹೋಗಿ ಅಜ್ಜಿಗೆ ಹೇಳಿದೆ. ಅಜ್ಜಿ ಕೂಡಲೇ ಹೊರ ಬಂದು ಅಂಗಳಕ್ಕೆಲ್ಲಾ ನೀರು ಹಾಕಿ ಶೇಡಿ‌ ಮಣ್ಣಿನಲ್ಲಿ‌‌ ರಂಗೋಲಿ ‌ಬಿಡಿಸಿ, ತುಳಸಿಗೆ ದೀಪ ಹಚ್ಚಿ, ಮನೆಯ ಒಳಗಿದ್ದ ಒಂದು ತಾಮ್ರದ ಬಿಂದಿಗೆ, ಒಂದು ಚೆಂಬು,ಒಂದು ಬಟ್ಟಲು ಗಟ್ಟಿ ಬೆಲ್ಲ ತಗೆದು ಬಾವಿಕಟ್ಟಯಲ್ಲಿ‌ ಇಟ್ಟು ಅವರು ಬರುವುದನ್ನೆ ಎದುರು‌ ನೋಡುತ್ತಿದ್ದರು.ನನಗೆ ಆಶ್ಚರ್ಯ ಇದೇನಿದು ಇವರು ಮಾರಿಗೆ, ಕಂಬಳಕ್ಕೆ ಊರೂರು ತಿರುಗಿ ಡೋಲು ಹೊಡೆಯುವವರಲ್ಲ, ಜೊತಗೆ ಭಜನೆ ಬೇರೆ ಕೇಳಿಸುತ್ತಿದೆ, ಅಜ್ಜಿ ನೋಡಿದರೆ ಇಷ್ಟೆಲ್ಲಾ ವ್ಯವಸ್ಥೆ ಮಾಡಿ ಕಾದು ಕುಳಿತಿದ್ದಾರೆ. ಅವರು ನಮ್ಮ ಅಂಗಳಕ್ಕೆ ಬರುವ ತನಕ. ನನಗೆ ಕಾಯದೆ ಬೇರೆ ಉಪಾಯ ಇರಲಿಲ್ಲ.

ಮತ್ತಷ್ಟು ಓದು »

3
ಆಗಸ್ಟ್

ಅಳಿದ ಮೇಲೆ

ದೇವು ಹನೆಹಳ್ಳಿ,
ಬಂಡೀಮಠ, ಹನೆಹಳ್ಳಿ ಗ್ರಾಮ ಮತ್ತು ಅಂಚೆ,
ವಯಾ ಬಾರಕೂರು, ಉಡುಪಿ ಜಿಲ್ಲೆ – 576 210.

ಕೋವಿಡ್-19 ಸಂಕಷ್ಟದ ಹೊತ್ತಲ್ಲಿ ಬಹುಚರ್ಚಿತ ವಿಷಯಗಳಲ್ಲಿ ಒಂದು ಶವಸಂಸ್ಕಾರ. ಶವಕ್ಕೆ ಇರುವುದು ಒಂದೇ ಮುಖವಾದರೆ ಪಾರ್ಥಿವ ಶರೀರದ ನಿವೃತ್ತಿಗೆ ಮತ್ತು ಸಮಸ್ಯೆಗೆ ಹಲವು ಮುಖಗಳು. ಒಮ್ಮೆಲೇ ಹೆಚ್ಚಾದ ಶವಗಳ ಸಂಖ್ಯೆ ಒಂದು ಸಮಸ್ಯೆಯಾದರೆ ಕೋವಿಡ್-19 ರೋಗಿಗಳ ಶವವು `ಭಯಾನಕ ರೋಗಗಳ ಕೂಪ’ ಎಂದು ತಿಳಿದದ್ದು ಇನ್ನೊಂದು ಸಮಸ್ಯೆ. ಈ ವಿದ್ಯಮಾನ ನಾವು ತಿಳಿದ ಮತ್ತು ಇದುವರೆಗೆ ಪಾಲಿಸಿಕೊಂಡ ಬಂದ ಶವಗಳ ಅಂತಿಮ ವಿಲೇವಾರಿ ಮತ್ತು ಸಂಸ್ಕಾರಗಳ ರೀತಿ-ನೀತಿ-ನಿಯಮಗಳನ್ನು ಮಣ್ಣುಪಾಲು ಮಾಡಿತು. ಈ ಹೊತ್ತಿನಲ್ಲಿ ಜಗತ್ತಿನಾದ್ಯಂತ ಕೋವಿಡ್-19 ಶವ ವಿಲೇವಾರಿಯ ನೂತನ ವಿಲೇವಾರಿ ರೀತಿ, ಕ್ರಮ, ಸಿದ್ಧತೆ, ಕಾಮಗಾರಿಗಳ ಕುರಿತಂತೆ ಬರಹ, ಚಿತ್ರ, ಚರ್ಚೆ, ವೀಡಿಯೋಗಳು ನಡೆದವು, ಹರಿದಾಡಿದವು. ಸ್ಪೈನ್ ದೇಶದಲ್ಲಿ ಹೊಸ ವಿನ್ಯಾಸ, ಕಚ್ಚಾವಸ್ತುಗಳ ಶವಪೆಟ್ಟಿಗೆ ತಯಾರಿಯ ಅರ್ಧ ಗಂಟೆಯ ಟಿ.ವಿ ರೂಪಕ, ಬ್ರೆಜಿಲ್‍ನಲ್ಲಿ ಹತ್ತಾರು ಎಕರೆ ಕಾಡನ್ನು ಸವರಿ ಮಾಡಿದ ನೂರಾರು-ಸಾವಿರಾರು ಶವಗುಂಡಿಗಳ ಡ್ರೋನ್ ನೋಟದ ವೀಡಿಯೋಗಳಿಂದ ತೊಡಗಿ ಇಲ್ಲಿಯೇ ಸಮೀಪದ ಬಳ್ಳಾರಿಯಲ್ಲಿ ಶವವನ್ನು ಎಳೆದು ದೂಡಿ ಗುಂಡಿಗೆ ನೂಕಿ `ಎದ್ದೆವೋ ಬಿದ್ದೆವೋ ಕೆಟ್ಟೆವೋ’ ಎಂದು ಭಯದಿಂದ ಓಡಿದ (ಹೆಗಲ ಮೇಲೆ ಚಟ್ಟವಿರದ) ನಾಲ್ವರು ಚಟ್ಟೋಪಾಧ್ಯಾಯರ ವೀಡಿಯೋದ ತನಕ ನೂರಾರು ಸಾವಿರಾರು ಬಂದವು.

ಈ ಹೊತ್ತಲ್ಲಿ ಶವಸಂಸ್ಕಾರ ಹೇಗೆ ನಡೆದರೆ ಉತ್ತಮ ಎಂಬ ಚರ್ಚೆಗಳೂ ವ್ಯಾಪಕವಾಗಿ ನಡೆದವು. ಶವದ ಘನತೆಯಿಂದ ತೊಡಗಿ ಶವಹೊರುವವರ ಆರೋಗ್ಯದ ತನಕ ಎಲ್ಲ ವಿಷಯಗಳು ಕೂಲಂಕಷವಾಗಿ ಚರ್ಚಿತವಾದವು. (ದೇಹವನ್ನು ಕಡೆದು ವಿದೇಹ ಹುಟ್ಟಿಕೊಳ್ಳಲಿಲ್ಲ!) ಅಂತಹ ಹೊತ್ತಲ್ಲಿ ನನ್ನೋರ್ವ ಕಿರಿಯ ಮಿತ್ರ ಕಳುಹಿಸಿದ ಬರಹ ಹೀಗಿತ್ತು: ಮತ್ತಷ್ಟು ಓದು »

3
ಆಗಸ್ಟ್

ಆನ್‌ಲೈನ್ ಗೇಮುಗಳೆಂಬ ಜೂಜಾಟಕ್ಕೆ ನಿಷೇಧ ಯಾವಾಗ ?

– ಅಜಿತ್ ಶೆಟ್ಟಿ ಹೆರಂಜೆ
ಗೊಡಾ ಹೈ ಮೈದಾನ್ ಹೈ ಅನ್ನುವುದು ಹಿಂದಿಯ ಒಂದು ಅತ್ಯಂತ ಪ್ರಚಲಿತ ನಾಣ್ಣುಡಿ. ಭಾರತದ ಡಿಜಿಟಲ್ ಜಗತ್ತಿಗೆ ಇದು ಇವತ್ತು ಅಕ್ಷರಶಃ ಹೇಳಿ ಮಾಡಿಸಿದ ಹಾಗಿದೆ. ಭಾರತ ೨೦೧೪ರ ನಂತರ ಕ್ಷಿಪ್ರಗತಿಯ ಡಿಜಿಟಲ್ ಕ್ರಾಂತಿಯೊಂದನ್ನು ಕಂಡಿತು. ಕೇಂದ್ರ ಸರ್ಕಾರ ಎಲ್ಲಾ  ಕ್ಷೇತ್ರದಲ್ಲಿ ಡಿಜಿಟಲ್ ಕ್ರಾಂತಿಗೆ ಇಂಬು ಕೊಟ್ಟಿತು. ಅದೇ ಕಾರಣಕ್ಕೆ ಇವತ್ತು ವಿತ್ತೀಯ ಕ್ಷೇತ್ರದಲ್ಲಿ ಜನಸಾಮಾನ್ಯರ ಕೈಯಲ್ಲಿ ಸುಮಾರು ೫ ವರ್ಷಗಳ ಹಿಂದೆ ಯಾರೂ ಕೂಡ ಊಹಿಸಲೂ ಸಾಧ್ಯವಾಗದ ಅತ್ಯಂತ ಪ್ರಭಾವಿ ತಂತ್ರಜ್ಞಾನವೊಂದು ಸಿಕ್ಕಿದೆ. ಜನಸಾಮನ್ಯರು UPI ಮೂಲಕ ಮೆಸೇಜ್ ಕಳಿಸಿದಷ್ಟೆ ಸುಲಭವಾಗಿ ಮೊಬೈಲುಗಳಿಂದ ಹಣ ಕಳುಹಿಸಬಹುದು. ಇದು ಡಿಜಿಟಲ್ ಕ್ರಾಂತಿಯ ಒಂದು ಮುಖವಾದರೆ ಇದರ ಇನ್ನೊಂದು ಮುಖ ಕರಾಳವಾಗಿದೆ. ಅದಕ್ಕೆ ಕಡಿವಾಣ ಹಾಕುವವರು ಯಾರು? ಗೋಡಾ, ಮೈದಾನ್, ಮತ್ತದರ ನಾಗಾಲೋಟ!

ಮತ್ತಷ್ಟು ಓದು »

3
ಆಗಸ್ಟ್

ಸ್ವ ರಕ್ಷಣೆಯಿಂದ ರಾಷ್ಟ್ರರಕ್ಷಣೆ: ರಕ್ಷಾಬಂಧನ ಸಂದೇಶ

– ರಾಜೇಶ್ ನರಿಂಗಾನ
ಶ್ರಾವಣ ಹುಣ್ಣಿಮೆ ಮತ್ತೆ ಬಂದಿದೆ. ಶ್ರಾವಣ ಹುಣ್ಣಿಮೆಯಂದು ಆಚರಿಸುವ ರಕ್ಷಾಬಂಧನ ಹಬ್ಬಕ್ಕೆ ಅದರದೇ ಆದ ಪೌರಾಣಿಕ, ಐತಿಹಾಸಿಕ ಹಿನ್ನೆಲೆಯಿದೆ. ಓರ್ವ ಜವಾಬ್ದಾರಿಯುತ ಸಹೋದರ ತನ್ನ ಸಹೋದರಿಯನ್ನು ರಕ್ಷಣೆ ಮಾಡಬೇಕು ಎನ್ನುವ ಆಶಯದಿಂದ ಹಿಡಿದು ಸ್ವಯಂಸೇವಕರು ಪರಸ್ಪರ ರಕ್ಷೆಯನ್ನು ಕಟ್ಟಿಕೊಂಡು ರಾಷ್ಟ್ರ ರಕ್ಷಣೆಗೈಯುವ ಸಂಕಲ್ಪದ ಉದಾತ್ತ ಧ್ಯೇಯ ಆಶಯದವರೆಗೆ ರಕ್ಷಾಬಂಧನವನ್ನು ವಿವಿಧ ರೀತಿಯಲ್ಲಿ ವಿಶ್ವದಾದ್ಯಂತ ಆಚರಿಸುತ್ತೇವೆ. ಇಂತಿಪ್ಪ ರಕ್ಷಾಬಂಧನ ಮತ್ತೆ ಬಂದಿದೆ. ಕಟ್ಟಲು ಬಗೆಬಗೆಯ ರಕ್ಷೆಗಳು ಮಾರುಕಟ್ಟೆಗೆ ಮಿತವಾಗಿ ಬಂದಿದೆ.
ಸಹೋದರ ಸಹೋದರಿಯರ ನಡುವೆ ನಂಬಿಕೆ, ಭರವಸೆಯನ್ನು ಉದ್ದೀಪನಗೊಳಿಸುವ, ಸಹೋದರನಿಗೆ ಸಹೋದರಿಯ ಮೇಲೆ ಇರುವ ಕಾಳಜಿ, ಸಹೋದರಿಗೆ ಸಹೋದರನ ಮೇಲೆ ಇರುವ ಅಕ್ಕರೆ, ನವಿರಾದ ಬಾಂಧವ್ಯವನ್ನು ಉಜ್ವಲಗೊಳಿಸುವ ಹಬ್ಬವೇ ರಕ್ಷಾಬಂಧನ. ಸಹೋದರನ ಶ್ರೇಯಸ್ಸಿಗಾಗಿ ಪ್ರಾರ್ಥಿಸಿ, ನಿನ್ನ ಸುಖ-ದುಃಖಗಳಲ್ಲಿ ಸಮಾನ ಭಾಗಿಯಾಗುತ್ತೇನೆ; ನನ್ನ ಯೋಗಕ್ಷೇಮ, ರಕ್ಷಣೆಯ ಭಾರ ನಿನ್ನ ಹೆಗಲಿಗೆ ಎಂದು ದೇವರ ಮುಂದೆ ಪ್ರಾರ್ಥಿಸಿ ರಕ್ಷೆಯನ್ನು ಕಟ್ಟುವುದು ತಲೆತಲಾಂತರದಿಂದ ಬಂದಿರುವ ಪದ್ಧತಿ, ಸಂಪ್ರದಾಯ.

ಮತ್ತಷ್ಟು ಓದು »