ಅಳಿದ ಮೇಲೆ
ದೇವು ಹನೆಹಳ್ಳಿ,
ಬಂಡೀಮಠ, ಹನೆಹಳ್ಳಿ ಗ್ರಾಮ ಮತ್ತು ಅಂಚೆ,
ವಯಾ ಬಾರಕೂರು, ಉಡುಪಿ ಜಿಲ್ಲೆ – 576 210.
ಕೋವಿಡ್-19 ಸಂಕಷ್ಟದ ಹೊತ್ತಲ್ಲಿ ಬಹುಚರ್ಚಿತ ವಿಷಯಗಳಲ್ಲಿ ಒಂದು ಶವಸಂಸ್ಕಾರ. ಶವಕ್ಕೆ ಇರುವುದು ಒಂದೇ ಮುಖವಾದರೆ ಪಾರ್ಥಿವ ಶರೀರದ ನಿವೃತ್ತಿಗೆ ಮತ್ತು ಸಮಸ್ಯೆಗೆ ಹಲವು ಮುಖಗಳು. ಒಮ್ಮೆಲೇ ಹೆಚ್ಚಾದ ಶವಗಳ ಸಂಖ್ಯೆ ಒಂದು ಸಮಸ್ಯೆಯಾದರೆ ಕೋವಿಡ್-19 ರೋಗಿಗಳ ಶವವು `ಭಯಾನಕ ರೋಗಗಳ ಕೂಪ’ ಎಂದು ತಿಳಿದದ್ದು ಇನ್ನೊಂದು ಸಮಸ್ಯೆ. ಈ ವಿದ್ಯಮಾನ ನಾವು ತಿಳಿದ ಮತ್ತು ಇದುವರೆಗೆ ಪಾಲಿಸಿಕೊಂಡ ಬಂದ ಶವಗಳ ಅಂತಿಮ ವಿಲೇವಾರಿ ಮತ್ತು ಸಂಸ್ಕಾರಗಳ ರೀತಿ-ನೀತಿ-ನಿಯಮಗಳನ್ನು ಮಣ್ಣುಪಾಲು ಮಾಡಿತು. ಈ ಹೊತ್ತಿನಲ್ಲಿ ಜಗತ್ತಿನಾದ್ಯಂತ ಕೋವಿಡ್-19 ಶವ ವಿಲೇವಾರಿಯ ನೂತನ ವಿಲೇವಾರಿ ರೀತಿ, ಕ್ರಮ, ಸಿದ್ಧತೆ, ಕಾಮಗಾರಿಗಳ ಕುರಿತಂತೆ ಬರಹ, ಚಿತ್ರ, ಚರ್ಚೆ, ವೀಡಿಯೋಗಳು ನಡೆದವು, ಹರಿದಾಡಿದವು. ಸ್ಪೈನ್ ದೇಶದಲ್ಲಿ ಹೊಸ ವಿನ್ಯಾಸ, ಕಚ್ಚಾವಸ್ತುಗಳ ಶವಪೆಟ್ಟಿಗೆ ತಯಾರಿಯ ಅರ್ಧ ಗಂಟೆಯ ಟಿ.ವಿ ರೂಪಕ, ಬ್ರೆಜಿಲ್‍ನಲ್ಲಿ ಹತ್ತಾರು ಎಕರೆ ಕಾಡನ್ನು ಸವರಿ ಮಾಡಿದ ನೂರಾರು-ಸಾವಿರಾರು ಶವಗುಂಡಿಗಳ ಡ್ರೋನ್ ನೋಟದ ವೀಡಿಯೋಗಳಿಂದ ತೊಡಗಿ ಇಲ್ಲಿಯೇ ಸಮೀಪದ ಬಳ್ಳಾರಿಯಲ್ಲಿ ಶವವನ್ನು ಎಳೆದು ದೂಡಿ ಗುಂಡಿಗೆ ನೂಕಿ `ಎದ್ದೆವೋ ಬಿದ್ದೆವೋ ಕೆಟ್ಟೆವೋ’ ಎಂದು ಭಯದಿಂದ ಓಡಿದ (ಹೆಗಲ ಮೇಲೆ ಚಟ್ಟವಿರದ) ನಾಲ್ವರು ಚಟ್ಟೋಪಾಧ್ಯಾಯರ ವೀಡಿಯೋದ ತನಕ ನೂರಾರು ಸಾವಿರಾರು ಬಂದವು.
ಈ ಹೊತ್ತಲ್ಲಿ ಶವಸಂಸ್ಕಾರ ಹೇಗೆ ನಡೆದರೆ ಉತ್ತಮ ಎಂಬ ಚರ್ಚೆಗಳೂ ವ್ಯಾಪಕವಾಗಿ ನಡೆದವು. ಶವದ ಘನತೆಯಿಂದ ತೊಡಗಿ ಶವಹೊರುವವರ ಆರೋಗ್ಯದ ತನಕ ಎಲ್ಲ ವಿಷಯಗಳು ಕೂಲಂಕಷವಾಗಿ ಚರ್ಚಿತವಾದವು. (ದೇಹವನ್ನು ಕಡೆದು ವಿದೇಹ ಹುಟ್ಟಿಕೊಳ್ಳಲಿಲ್ಲ!) ಅಂತಹ ಹೊತ್ತಲ್ಲಿ ನನ್ನೋರ್ವ ಕಿರಿಯ ಮಿತ್ರ ಕಳುಹಿಸಿದ ಬರಹ ಹೀಗಿತ್ತು: ಮತ್ತಷ್ಟು ಓದು
ಆನ್‌ಲೈನ್ ಗೇಮುಗಳೆಂಬ ಜೂಜಾಟಕ್ಕೆ ನಿಷೇಧ ಯಾವಾಗ ?

ಸ್ವ ರಕ್ಷಣೆಯಿಂದ ರಾಷ್ಟ್ರರಕ್ಷಣೆ: ರಕ್ಷಾಬಂಧನ ಸಂದೇಶ
