ಈಗ ರೈತನಿಗೂ ಅನಿಸುತ್ತಿದೆ, ಇದು ೨೦೨೦ರ ಭಾರತ ಎಂದು
– ಅಜಿತ್ ಶೆಟ್ಟಿ ಹೆರಂಜೆ
ಪ್ರಧಾನಿ ಮೋದಿಯವರು ೨೦೨೨ರ ಹೊತ್ತಿಗೆ ದೇಶದ ರೈತರ ಆದಾಯ ದ್ವಿಗುಣ ಮಾಡುವ ಬಗ್ಗೆ ಮಾತನಾಡಿದ್ದರು. ಇದೇ ನಿಟ್ಟಿನಲ್ಲಿ ಮೋದಿ ಸರ್ಕಾರ ಕಳೆದ ಆರು ವರ್ಷಗಳಿಂದ ದೇಶದ ಬಡವರ ಮತ್ತು ಕೃಷಿಕರ ಶ್ರೇಯೋಭಿವೃದ್ಧಿಯತ್ತ ಕೆಲಸಮಾಡಿದೆ. ಆ ಕಾರಣಕ್ಕೆ ಮೋದಿಯವರು ಜಾರಿಗೆ ತಂದ ಯೋಜನೆಗಳಾದ ಯೂರಿಯಾಕ್ಕೆ ಬೇವಿನ ಲೇಪನ ಮಾಡಿದ್ದು, ಜನ್‌ಧನ ಯೋಜನೆ, ಕಿಸಾನ್ ಸಮ್ಮಾನ್ ಯೋಜನೆ, ಕಿಸಾನ್ ಸಿಂಚಾಯಿ ಯೋಜನೆ, ಒಂದು ರಾಷ್ಟ್ರ ಒಂದು ಪಡಿತರ ಚೀಟಿ, ಆಯುಷ್ಮಾನ್ ಭಾರತ್ ಯೋಜನೆ, ಫಸಲ್ ಭೀಮಾ ಯೋಜನೆ, ಸೋಯ್ಲ್ ಹೆಲ್ತ್ ಕಾರ್ಡ್ ಯೋಜನೆ, ಪಾರಂಪರಿಕ ಕೃಷಿ ಯೋಜನೆ ಅಥವಾ ಇತ್ತೀಚೆಗೆ ಜಾರಿಗೆ ತಂದಿರುವ ಕೃಷಿ ಸುಧಾರಣಾ ಮಸೂದೆ ೨೦೨೦ ಇವೆಲ್ಲವೂ ಮೋದಿಯವರು ರೈತರಿಗೆ ಕೊಟ್ಟ ಮಾತಿಗೆ ಪೂರಕವಾಗಿ ಬಂದ ಯೋಜನೆಗಳು. ಚೀನಿಯರು ಭಾರತದ ಗಡಿಯಲ್ಲಿ ನಿಂತು ನಾವು ನಿಮ್ಮನ್ನು ೬೨ರಂತೆ ಹೊಸಕಿ ಹಾಕುತ್ತೇವೆ ಅಂದಾಗ ಅದಕ್ಕೆ ಅಂದಿನ ರಕ್ಷಣಾ ಮಂತ್ರಿಗಳಾದ ದಿವಂಗತ ಅರುಣ್ ಜೇಟ್ಲಿಯವರು ಮಾರ್ಮಿಕವಾಗಿ ಇದು ೬೨ರ ಭಾರತ ಅಲ್ಲ, ೨೦೨೦ರ ಭಾರತ ಅಂದಿದ್ದರು. ಅವರು ಹೇಳಿದ್ದು ದೇಶದ ಸೈನ್ಯ ಶಕ್ತಿಯ ಮಟ್ಟಿಗೆ ಸರಿಯಾಗೆ ಇತ್ತು. ಆದರೆ ಅಂದು ದೇಶದ ರೈತನಿಗೆ ಬಹುಶಃ ಇದು ೨೦೨೦ರ ಭಾರತ ಅನ್ನಿಸಿರಲಿಕ್ಕಿಲ್ಲ. ಕಾರಣ ಅವನು ಮೋದಿಯವರು ಕೃಷಿ ಸುಧಾರಣಾ ಕಾನೂನು ೨೦೨೦ ತರುವ ತನಕ ಬ್ರಿಟೀಷರ ಕಾಲೋನಿಯಲ್ ಕಾನೂನುಗಳ ಸಂತ್ರಸ್ತನಾಗಿಯೆ ಇದ್ದ. ರೈತ ತನಗೆ ಇಷ್ಟ ಬಂದ ಬೆಳೆಯನ್ನೇನೋ ಬೆಳೆಯುತ್ತಿದ್ದ. ಆದರೆ ಆತ ಅದನ್ನು ತನಗೆ ಇಷ್ಟ ಬಂದ ಜಾಗದಲ್ಲಿ ಇಷ್ಟ ಬಂದ ಬೆಲೆಗೆ, ತನಗೆ ಇಷ್ಟ ಬಂದ ವ್ಯಕ್ತಿಗೆ ಮಾರುವ ಅವಕಾಶದಿಂದ ವಂಚಿತನಾಗಿದ್ದ. ಇವನನ್ನು ದಾಸ್ಯದ ಸಂಕೋಲೆಯಿಂದ ಬಿಡುಗಡೆ ಮಾಡಿದ್ದು ಕೃಷಿ ಮಸೂದೆ-೨೦೨೦. ಮತ್ತಷ್ಟು ಓದು
ಬಿಚ್ಚಿಟ್ಟ ದಲಿತ ಚರಿತ್ರೆ
– ಶಿವರಾಮ್ ಕಾನ್ಸೇನ್
ಐತಿಹಾಸಿಕ ವ್ಯಕ್ತಿಗಳಾದ ಬುದ್ಧ, ಬಸವ, ಗಾಂಧಿ, ಅಂಬೇಡ್ಕರ್, ಪುಲೆ ಮುಂತಾದವರ ಸಾಲಿನಲ್ಲಿ ಸದಾ ನೆನಪಿಸಿಕೊಳ್ಳಬೇಕಾದ ಮತ್ತೊಬ್ಬ ಸುಧಾರಣಾವಾದಿಯ ಹೆಸರು “ಮಹಾಪ್ರಾಣ್ ಜೋಗೇಂದ್ರನಾಥ್ ಮಂಡಲ್”. ಸಾಮಾಜಿಕ-ಆರ್ಥಿಕ-ರಾಜಕೀಯ ಸ್ಥಿತ್ಯಂತರದಲ್ಲಿ ಮಹಾನ್ ವ್ಯಕ್ತಿಗಳ ಹೆಸರುಗಳು ಅನುಕೂಲಸಿಂಧು ಅನುಯಾಯಿ-ಅಭಿಮಾನಿಗಳಿಂದಾಗಿ ಹಾಗೂ ಮತರಾಜಕಾರಣದಿಂದಾಗಿ ಸದ್ಬಳಕೆಯಾದ್ದಕ್ಕಿಂತಲೂ ದುರ್ಬಳಕೆಯಾದದ್ದೇ ಹೆಚ್ಚು.!
ಬಹುಶಃ ಜೋಗೇಂದ್ರನಾಥ್ ಮಂಡಲ್ ಹೆಸರನ್ನು ಉಲ್ಲೇಖಿಸಿದರೆ ಅಥವಾ ಸ್ಮರಿಸಿದರೆ ಯಾವುದೇ ಸವಲತ್ತು-ಪದವಿ-ಪುರಸ್ಕಾರ-ಪ್ರಶಸ್ತಿಯೂ ಸಿಗದೆಂಬ ಖಾತರಿಯಿಂದಾಗಿ ಇವರನ್ನು ಇತಿಹಾಸಕಾರರು ಮರೆಮಾಚಿರಬಹುದು ! ಯಾರು ಮರೆತರೇನು? ನಿಲುಮೆಯ ರಾಕೇಶ್ ಶೆಟ್ಟಿಯವರು ಇತಿಹಾಸದ ಗರ್ಭದಿಂದ ಜೋಗೇಂದ್ರನಾಥ್ ಎಂಬ ಮಹಾಶಕ್ತಿಮಂಡಲವನ್ನು ಹೊರತೆಗೆದು ಪ್ರಾಣ ತುಂಬಿದ್ದಾರೆ. “ಮುಚ್ಚಿಟ್ಟ ದಲಿತ ಚರಿತ್ರೆಯನ್ನು ಬಿಚ್ಚಿಟ್ಟ” ಗೆಳೆಯ ರಾಕೇಶ್ ಶೆಟ್ಟಿಯವರಿಗೆ ಹಾಗೂ ನಿಲುಮೆ ಬಳಗಕ್ಕೆ ಅಭಿನಂದನೆಗಳು. ಮತ್ತಷ್ಟು ಓದು