ರೈತ ಹೋರಾಟದ ಸೋಗಿನಲ್ಲಿ ಮಹಾಸಂಚು
– ರಾಕೇಶ್ ಶೆಟ್ಟಿ
ಕಳೆದ ಮೂರ್ನಾಲ್ಕು ತಿಂಗಳಿಂದ ದೆಹಲಿಯ ಬಾಗಿಲಿಗೆ ಬಂದು ನಿಂತಿರುವ ಪಂಜಾಬ್, ಹರ್ಯಾಣ ರೈತರ ಪ್ರತಿಭಟನೆ ದಿನ ಕಳೆದಂತೆ ತನ್ನ ಅಸಲಿ ರೂಪವನ್ನು ಅದು ತೋರಿಸಲಾರಂಭಿಸಿದೆ.

ರೈತರ ಪ್ರತಿಭಟನೆಯ ನಾಯಕತ್ವ ವಹಿಸಿರುವ “ಭಾರತೀಯ ಕಿಸಾನ್ ಯೂನಿಯನ್ (ಬಿಕೆಯು)” ಅಧ್ಯಕ್ಷ ರಾಕೇಶ್ ಟಿಕಾಯತ್ ಅವರು ಜೂನ್ 2020ರಲ್ಲಿ ನೀಡಿದ ಹೇಳಿಕೆಯಲ್ಲಿ, ಕೇಂದ್ರದ ನೂತನ ಕೃಷಿ ಕಾಯ್ದೆಗಳನ್ನು ಸ್ವಾಗತಿಸಿದ್ದರು. ನಮ್ಮ ಬಹುಕಾಲ ಬೇಡಿಕೆ ಈಡೇರಿತು ಎಂದಿದ್ದರು. ಆದರೆ, ಈಗ ಅದೇ ರಾಕೇಶ್ ಟಿಕಾಯತ್ ಕಾಯ್ದೆಗಳನ್ನು ಹಿಂಪಡೆಯಬೇಕು ಎಂದು ಕುಳಿತಿದ್ದಾರೆ.
ಮತ್ತೊಂದು ಕಡೆ, ತನ್ನ ಪ್ರಣಾಳಿಕೆಯಲ್ಲಿ APMC ಹಾಗೂ Essential Commodities Act ಅನ್ನು ತೆಗೆದು ಹಾಕುವುದಾಗಿ ಹೇಳಿಕೊಂಡಿತ್ತು. ಆದರೆ, ಈಗ ಅದೇ ಕಾಂಗ್ರೆಸ್ಸು ಪ್ರತಿಭಟನೆಗೆ ಬೇಕಾದ ಸಪ್ಲೈ ಮಾಡುತ್ತಿದೆ. ರೈತರನ್ನು ಎತ್ತಿಕಟ್ಟುತ್ತಿದೆ.
ಜನವರಿ 26ರ ಗಣತಂತ್ರ ದಿನದಂದು, ಈ ರೈತರ ವೇಷದ ಪ್ರತಿಭಟನಾಕಾರರು ದೆಹಲಿಯೊಗೆ ನುಗ್ಗಿ ನಡೆಸಿದ ದಾಂಧಲೆಯನ್ನೂ, ಕೆಂಪುಕೋಟೆಗೆ ಲಗ್ಗೆಯಿಟ್ಟು ರಾಷ್ಟ್ರಧ್ವಜಕ್ಕೆ ಅಪಮಾನ ಮಾಡಿದ್ದನ್ನು ಇಡೀ ಜಗತ್ತಿನ ಕಣ್ಣುಗಳು ನೋಡಿದವು. ಆವತ್ತಿನ ದಿನ ಇವರು ನಡೆಸಿದ ದಾಂಧಲೆಗೆ ಪ್ರತಿಯಾಗಿ ಪೋಲಿಸರು ಗೋಲಿಬಾರ್ ಮಾಡಬೇಕು ಮತ್ತು ಆ ಗುಂಡಿಗೆ ಒಂದಷ್ಟು ಹೆಣ್ಣು ಉರುಳಬೇಕು ಎಂದು ರೈತ ಹೋರಾಟದ ವೇಷ ತೊಟ್ಟ ತೋಳಗಳು ಬಯಸಿದ್ದವು. ಆದರೆ, ದೆಹಲಿ ಪೋಲಿಸರು ತಾವು ಪೆಟ್ಟು ತಿಂದರೆ ಹೊರತು ಪ್ರತಿದಾಳಿ ಮಾಡದೇ ಇವರ ಪ್ಲಾನ್ ಹಾಳುಗೆಡವಿದರು. ರೈತ ನಾಯಕನೆಂದು ಕಳೆದುಕೊಳ್ಳುವ ರಾಕೇಶ್ ಟಿಕಾಯತ್ ಅವರೇ, ಪೋಲಿಸರೇಕೆ ಗುಂಡು ಹಾರಿಸಲಿಲ್ಲ ಎಂದು ಕೇಳುತ್ತಾರೆ ಎಂದರೆ, ಇವರ ಉದ್ದೇಶ ಅರ್ಥವಾಗದೇ?
ಅವನೊಬ್ಬ ಪೋಲಿಸರ ಮೇಲೆ ಟ್ರ್ಯಾಕ್ಟರ್ ಹತ್ತಿಸಲು ಬಂದು ಪಲ್ಟಿಯಾಗಿ ಬಿದ್ದು ಸತ್ತಾಗ ಪತ್ರಕರ್ತ ರಾಜದೀಪ ಸರ್ದೇಸಾಯಿ, ಸಂಸದ ಶಶಿತರೂರ್ ಮತ್ತಿತ್ತರರು ಪೋಲಿಸರು ಗುಂಡು ಹಾರಿಸಿ ಕೊಂದರು ಎಂದು ಸುಳ್ಳು ಹರಡಲು ನೋಡಿದರು. ಅಂದರೆ ಇವರ ಇರಾದೆ ಪಕ್ಕಾ ಇತ್ತು. ಕೇಂದ್ರ ಸರ್ಕಾರ ರೈತರ ಮಾರಣ ಹೋಮ ನಡೆಸಿದೆ ಎಂದು ಅಂತರರಾಷ್ಟ್ರೀಯ ಮಟ್ಟದಲ್ಲಿ ಬಿಂಬಿಸುವ ಎಲ್ಲಾ ಪ್ಲಾನ್ ರೆಡಿಯಾಗಿತ್ತು.
ಅಂತಹ ದೊಡ್ಡ ಸಂಚಿನ ಸಣ್ಣ ಭಾಗವಾದ ಡಾಕ್ಯುಮೆಂಟ್ ಒಂದು ಅಪ್ಪಿತಪ್ಪಿ ಹೊರಬಿದ್ದಿದೆ.
ಸೋ ಕಾಲ್ಡ್ ರೈತ ಪ್ರತಿಭಟನೆಯೊಂದನ್ನು ಹೇಗೆ ವ್ಯವಸ್ಥಿತವಾಗಿ ನಿರ್ವಹಿಸಬೇಕು ಎನ್ನುವುದನ್ನು ನಗರನಕ್ಸಲರು + ಖಲಿಸ್ತಾನಿಗಳಿಂದ ಕಲಿಯಬೇಕು ನೋಡಿ. ಯಾವಾಗ ದೇಶದ ಮುಂದೆ ಜನವರಿ 26ರಂದು ಇವರು ಬೆತ್ತಲಾದರೋ, ಮುಂದಿನ ಹಾರಿಸಿದ ಮೊದಲೇ ನಿರ್ಧರಿಸಿದಂತೆ ವಿದೇಶಿ ಸೆಲೆಬ್ರಿಟಿಗಳನ್ನು ಮುಂದೆ ತಂದು ನಿಲ್ಲಿಸಿದರು. ಹಾಗೆ ಎದುರು ಬಂದು ನಿಂತ ಒಂದು ಪುಟ್ಟ ಹುಡುಗಿ ಗ್ರೇಟಾ ಥುನ್ಬರ್ಗ್. ಪರಿಸರ ಹೋರಾಟಗಾರ್ತಿ ಎಂದು ಈಕೆಯನ್ನು ಪಾಶ್ಚಿಮಾತ್ಯ ಮಾಫಿಯಾಗಳು ಬಿಂಬಿಸಿ ಸೆಲೆಬ್ರಿಟಿ ಪಟ್ಟ ಕಟ್ಟಿವೆ.
ಈ ಎಳಸು ಹುಡುಗಿ, ಫೆಬ್ರುವರಿ 3ರಂದು ರೈತ ಹೋರಾಟಕ್ಕೆ ಬೆಂಬಲ ಸೂಚಿಸಿ ಟ್ವೀಟ್ ಮಾಡಿ, ಅದರಲ್ಲಿ ಎಡವಟ್ಟಾಗಿ ಈ ಮಹಾ ಹಂಚಿನ Document ಹೊರಗೆ ಬಿಟ್ಟಿದ್ದಾಳೆ. (ಕಡೆಗೆ ಆ ಟ್ವೀಟನ್ನು ಅವಳಿಂದ ಡಿಲೀಟ್ ಮಾಡಿಸಿದ್ದಾರೆ)
ಆ ಡಾಕ್ಯುಮೆಂಟಿನಲ್ಲಿ ಹೇಗೆ ಟ್ವೀಟ್ ಮಾಡಬೇಕು, ಯಾರನ್ನು ಟ್ಯಾಗ್ ಮಾಡಬೇಕು ಎನ್ನುವ ಮಾಹಿತಿಗಳಿವೆ. ವಿಶ್ವಸಂಸ್ಥೆ, ಅಂತರರಾಷ್ಟ್ರೀಯ ಹಣಕಾಸು ಸಂಸ್ಥೆಗಳು, ಬ್ರಿಟನ್ ಪ್ರಧಾನಿಯನ್ನು ಭಾರತದ ಮೇಲೆ ಒತ್ತಡ ಹೇರಲು ಏನೆಲ್ಲಾ ಮಾಡಬೇಕು ಎಂದು ಅದರಲ್ಲಿ ಬರೆಯಲಾಗಿದೆ. ಭಾರತದಲ್ಲಿ ಪ್ರಜಾಪ್ರಭುತ್ವ ಅಪಾಯದಲ್ಲಿದೆ. ಪ್ರತಿಭಟನೆಯಲ್ಲಿ ನೂರಾರು ರೈತರು ಸತ್ತಿದ್ದಾರೆ, ನೂರಾರು ಜನರನ್ನು ಸರ್ಕಾರ ನಾಪತ್ತೆ ಮಾಡಿದೆ ಅಂತೆಲ್ಲಾ ಸುಳ್ಳೇ ಬರೆಯಲಾಗಿದೆ.
ದೇಶದ ವಿರುದ್ಧ ಹೇಗೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಕೆಟ್ಟ ಹೆಸರು ಮೂಡಿಸುವ ಪ್ರಯತ್ನ ನೋಡಿ. 26ನೇ ತಾರೀಖಿನಂದು ಇವರು ಗಲಭೆ ಎಬ್ಬಿಸಿದಾಗ ಅಪ್ಪಿ ತಪ್ಪಿ ಪೋಲಿಸರು ಒಂದೇ ಒಂದು ಗುಂಡು ಹಾರಿಸಿ ಯಾವನಾದರೂ ಸತ್ತಿದ್ದರೆ, #AskIndiaWhy ಎಂದು ದೊಡ್ಡ ಮಟ್ಟದ ಟ್ವಿಟರ್ ವಾರ್ ನಡೆಯಲಿಕ್ಕಿತ್ತು.
ಆ ಡಾಕ್ಯುಮೆಂಟಿನಲ್ಲಿ ಇರುವ ಮತ್ತೊಂದು ಅಂಶ ಅಂಬಾನಿ-ಅದಾನಿಯವರ ಜೊತೆ ಸೇರಿ ಮೋದಿ ರೈತರನ್ನು ಮುಗಿಸಲು ಹೊರಟಿದ್ದಾರೆ. ಅಂಬಾನಿ-ಅದಾನಿಗಳ ಕಂಪೆನಿಗಳ ಎದುರು ಪ್ರತಿಭಟಿಸಿ ಅವರ ವಸ್ತುಗಳನ್ನು ಬಹಿಷ್ಕರಿಸಿ ಎಂದು ಕರೆ ನೀಡಿದ್ದಾರೆ. ಆದರೆ, ವಿಚಿತ್ರವೆಂದರೆ ಈ ರೈತರ ಐಷಾರಾಮಿ ಪ್ರತಿಭಟನೆಗೆ ವಿದೇಶಿ ಕಾರ್ಪೋರೇಟ್ ಶಕ್ತಿಗಳ ನಿಗೂಢ ಬೆಂಬಲವಿದೆ. ಹೊಲದ ಕೆಲಸ ಬಿಟ್ಟು ಎರಡ್ಮೂರು ದಿನ ನಂಟರ ಮನೆಗೆ ಹೋಗಲಾಗದ ಸರಾಸರಿ ಭಾರತೀಯ ರೈತರು ಒಂದು ಕಡೆಯಿದ್ದರೆ, ಈ ಸೋಕಾಲ್ಡ್ ರೈತರು ತಿಂಗಳಾನುಗಟ್ಟಲೆ ಜಮೀನು ಬಿಟ್ಟು ಬಂದಿದ್ದಾರೆ. ಕೇಂದ್ರ ಸರ್ಕಾರ ಕಾಯ್ದೆಯನ್ನು ಎರಡರ ವರ್ಷ ತಡೆ ಹಿಡಿಯುತ್ತೇವೆ. ಪ್ರತಿಭಟನೆ ನಿಲ್ಲಿಸಿ ಎಂದರೂ ಇವರು ಕಲ್ಲು ತಯಾರಿಲ್ಲ. ಇವರ ಪ್ರತಿಭಟನೆಗೆ ದೊಡ್ಡ ದೊಡ್ಡ ಟೆಂಟುಗಳಿವೆ. ತರಹೇವಾರಿ ತಿಂಡಿ,ತಿನಿಸುಗಳಿವೆ. ಪಿಜ್ಜಾ ಪಾರ್ಟಿ, ಮದ್ಯದ ಪಾರ್ಟಿ, ಡಿಜೆ , ಸಿನಿಮಾ ಪ್ರದರ್ಶನ, ವಾಷಿಂಗ್ ಮಷೀನು, ರೊಟ್ಟಿ, ಚಪಾತಿ ಮಾಡುವ ಮಷೀನ್ ಎಲ್ಲವೂ ಇವೆ. ಇವಿಷ್ಟೇ ಅಲ್ಲ ಇವರ ಹಾರಾಟವನ್ನು ಬೆಂಬಲಿಸಿದ ಪಾಪ್ ಗಾಯಕಿ ರಿಹಾನಳ ಒಂದೇ ಒಂದು ಟ್ವೀಟಿಗೆ 2.5 ಮಿಲಿಯನ್ ಸಂದಾಯವಾಗಿದೆ ಎನ್ನುವ ಸುದ್ದಿ ಹೊರಬಿದ್ದಿದೆ. ಅಂಬಾನಿ,ಅದಾನಿಯನ್ನು ವಿರೋಧಿಸುವ ಈ ಹೋರಾಟಗಾರರಿಗೆ ಇಂತಹ ಐಷಾರಾಮಿ ಸವಲತ್ತುಗಳನ್ನು ಒದಗಿಸುತ್ತಿರುವ ಕೋಟ್ಯಾಧೀಪತಿಗಳು ಯಾರು?
ವಿಷಯ ಸ್ಪಷ್ಟವಿದೆ. ಇವರ ಹೋರಾಟ ರೈತ ಕಾಯ್ದೆಗಳ ಬಗ್ಗೆ ಅಲ್ಲವೇ ಅಲ್ಲ. ರೈತರನ್ನು ಮುಂದಿಟ್ಟುಕೊಂಡು ನರೇಂದ್ರ ಮೋದಿಯನ್ನು ಹಣಿಯುವ, ಹಿಂಸಾಚಾರದ ಮೂಲಕ ಸರ್ಕಾರವನ್ನು ಗೋಲಿಬಾರಿನಂತ ಕಡೆಯ ಅಸ್ತ್ರ ಪ್ರಯೋಗ ಮಾಡಿಸುವುದು ಮತ್ತು ಆ ಮೂಲಕ ದೇಶದಲ್ಲಿ ಮಿಲಿಟರಿ ಆಡಳಿತವಿದೆಯೆಂದು ಅಂತರರಾಷ್ಟ್ರೀಯ ಮಟ್ಟದಲ್ಲಿ ಬಿಂಬಿಸುವ ಮಹಾ ಸಂಚು ಇದು.
ಆದರೆ, ಈ ನೆಲದ ಅದೃಷ್ಟ ದೊಡ್ಡದು. ದೇಶವನ್ನು ಹಾಳು ಗೆಡವಲು ಸಾವಿರಾರು ಕಳ್ಳರು ಒಂದಾದರೂ, ಅಗೋಚರ ಶಕ್ತಿಯೊಂದು ಇಂದಿಗೂ ತಲೆ ಕಾಯುತ್ತಿದೆ.
ಆಟ ಇನ್ನೂ ಮುಗಿದಿಲ್ಲ. ಈ ಅಂತರರಾಷ್ಟ್ರೀಯ ಕಳ್ಳರ ಕೂಟವನ್ನು ಮೋದಿಯವರು ಹೇಗೆ ಎದುರಿಸುತ್ತಾರೆ ಕಾದು ನೋಡಬೇಕು.