ಕುಮಾರರಾಮ
– ವರುಣ್ ಕುಮಾರ್
(ವಾರಕ್ಕೊಂದು ವೀರರು)
ಭಾರತದ ಹಿಂದೂ ಸಾಮ್ರಾಟ ಎಂದ ಕೂಡಲೇ ನಮ್ಮ ಸ್ಮೃತಿಪಟಲದಲ್ಲಿ ಶಿವಾಜಿ ಮಹಾರಾಜರ ಹೆಸರು ಬರುತ್ತದೆ. ಶಿವಾಜಿ ಮಹಾರಾಜರ ಆಡಳಿತ ವೈಖರಿ, ಮೊಘಲರ ದಾಳಿಯನ್ನು ಹಿಮ್ಮೆಟ್ಟಿಸಿದ ರೀತಿ, ಅವರ ರಾಜಕೀಯ ತಂತ್ರಗಾರಿಕೆಗಳು, ಎಂಥವರಿಗೂ ರೋಮಾಂಚನವನ್ನು ಉಂಟು ಮಾಡುತ್ತದೆ. ತನ್ನ ಅಲ್ಪಾವಧಿಯಲ್ಲಿ ಮೊಘಲರ ಸಾಮ್ರಾಜ್ಯವನ್ನು ಕೇವಲ ಉತ್ತರ ಭಾರತಕ್ಕೆ ಸೀಮಿತಗೊಳಿಸುವಲ್ಲಿ ಶಿವಾಜಿಯ ಪಾತ್ರ ಅಪಾರವಾದುದು. ಆದರೆ ಶಿವಾಜಿಯ ಪೂರ್ವ ಕಾಲದಲ್ಲಿ ದಕ್ಷಿಣ ಪ್ರಾಂತ್ಯಕ್ಕೆ ಮೊಘಲರ ದಾಳಿಯನ್ನು ಹಿಮ್ಮಟ್ಟಿಸುವಲ್ಲಿ ಯುವ ಅರಸ ಕುಮಾರರಾಮನ ಪಾತ್ರ ಮಹತ್ವದ್ದು. ಹಿಂದೂ ಸಾಮ್ರಾಜ್ಯಕ್ಕೆ ಭದ್ರವಾದ ಬುನಾದಿಯನ್ನು ಕೊಟ್ಟು ಮುಂದಿನ ೨೦೦ ವರ್ಷಗಳ ಕಾಲ ಅವರ ವಂಶಜರು ದಕ್ಷಿಣ ಪ್ರಾಂತ್ಯದಲ್ಲಿ ಹಿಂದೂ ಸಾಮ್ರಾಜ್ಯವನ್ನು ಪುನರುತ್ಥಾನಗೊಳಿಸಿದರು. ಮತ್ತಷ್ಟು ಓದು
ಪುಸ್ತಕ ಪರಿಚಯ – “ಪ್ರಜ್ಞೆ ಮತ್ತು ಪರಿಸರ”
– ಚಂದ್ರಹಾಸ
“ಪ್ರಜ್ಞೆ ಮತ್ತು ಪರಿಸರ” – ಯು. ಆರ್. ಅನಂತಮೂರ್ತಿಯವರ ವಿಮರ್ಶಾ ಲೇಖನಗಳ ಸಂಕಲನ. ಪ್ರಸ್ತುತ ಪುಸ್ತಕ ಯಾವುದೋ ಕೆಲವು ಕೃತಿಗಳ ವಿಮರ್ಶೆಗಳಲ್ಲ, ಬದಲಾಗಿ ಕೃತಿಗಳನ್ನು ಸೃಷ್ಟಿಸಿದ ಕೃತಿಕಾರರ ದೃಷ್ಟಿಕೋನಗಳದ್ದು. ಸುತ್ತಲಿನ ಸಮಾಜ, ವಾಸ್ತವ ಅನುಭವಗಳು ಮತ್ತು ಲೋಕವ್ಯಾಪರ, ಹೇಗೆ ಸಾಹಿತಿಗಳ ಮನೋಭೂಮಿಕೆಯಲ್ಲಿ ವಿಶ್ಲೇಷಣೆಗೊಂಡು, ಶೋಧನೆಗೆ ಪ್ರೇರೇಪಿಸಿ ಕೃತಿಗಳಲ್ಲಿ ಮೂರ್ತಗೊಂಡಿರಬಹುದೆಂಬುದನ್ನು ತಮ್ಮ ಲೇಖನಗಳಾ ಮೂಲಕ ವಿವೇಶಿಸಿದ್ದಾರೆ. ಮುನ್ನುಡಿಯಲ್ಲಿ ಅವರೇ ಈ ಲೇಖನಗಳಾ ಹಿಂದಿನ ಪ್ರೇರಣೆಯನ್ನು ಹೀಗೆ ಹೇಳಿಕೊಂಡಿದ್ದಾರೆ – “ಸಾಹಿತ್ಯದಿಂದ ರಾಜಕೀಯದವರೆಗೆ ಸ್ನೇಹಿತರೊಡನೆ ನಡೆಸಿದ ಚರ್ಚೆಗಳಿಂದ,ಮಾರ್ಕ್ಸ್ ವಾದದ,ಲೋಹಿಯಾವಾದಗಳ ಬಗ್ಗೆ ಇದ್ದ ಅನುಮಾನ ಅಭಿಮಾನಗಳಿಂದ ಪ್ರಭಾವಗೊಂಡ ಅಲೋಚನ ಲಹರಿಗಳೇ, ಈ ಸಂಕಲನದಲ್ಲಿ ಲೇಖನಗಳಾಗಿ ಮೂಡಿವೆ.” ಮತ್ತಷ್ಟು ಓದು
ನಂಬಿಕೆ
– ಪ್ರಶಾಂತ್ ಭಟ್
‘ಇದು ಹೀಗಾಗುತ್ತದೆ ಅಂತ ನನಗೆ ಗೊತ್ತಿತ್ತು’ ಪಕ್ಕದ ಸೀಟಿನವನ ಮಾತು ಕೇಳಿ ಮೊಬೈಲಿಂದ ತಲೆ ಎತ್ತಿ ನೋಡಿದಾಗ ಬಸ್ಸು ನಿಂತದ್ದು ಅರಿವಿಗೆ ಬಂತು. ಇವ ಯಾರು ಮಾರಾಯ, ಬಸ್ಸು ಹೊರಟಾಗಿಂದ ತನ್ನೊಳಗೇ ಏನೋ ಗುನುಗುತ್ತಾ ಕೈ ಸನ್ನೆ ಮಾಡ್ತಾ ಕಿರಿಕಿರಿ ಉಂಟುಮಾಡಿದ್ದ. ನಮ್ಮದೇ ಸಾವಿರ ಇರಬೇಕಾದರೆ ಈ ತರಹದ ಆಸಾಮಿ ಸಿಕ್ಕರೆ ಪ್ರಯಾಣವೂ ಪ್ರಯಾಸವೇ! ಅವಳ ಮೆಸೇಜು ಬಂತಾ ಅಂತ ನೋಡುವಾ ಅಂದರೆ ಹಾಳಾದ ನೆಟ್ವರ್ಕ್ ಕೂಡಾ ಇಲ್ಲ. ಅದು ಸರಿ ಈ ಬಸ್ಸು ನಿಂತದ್ದಾದರೂ ಯಾಕೆ? ಓಹ್, ಎದುರೆಲ್ಲ ವಾಹನಗಳ ಸಾಲೇ ಸಾಲು! ಅಲ್ಲದೆ ಈ ಘಾಟಿಯಲ್ಲಿ ಇದೊಂದು ಗೋಳು. ಒಂದು ಗುಡ್ಡ ಕುಸಿದರೆ, ಜೋರು ಮಳೆಗೆ ಮರ ಉರುಳಿಬಿದ್ದರೆ, ನಿದ್ದೆಯ ಮತ್ತಲ್ಲಿ ಯಾವನಾದರು ಟ್ಯಾಂಕರ್ನವ ಮಗುಚಿಕೊಂಡರೆ ಮುಗಿಯಿತು. ಅದರ ನಡುವೆ ಜೀವ ಬಿಟ್ಟು ರಾಂಗ್ ವೇನಲ್ಲಿ ಮುನ್ನುಗ್ಗಿ ಬರುವ ಹುಚ್ಚು ಚಾಲಕರು. ತಾವೂ ಸಿಲುಕಿ ಉಳಿದವರನ್ನೂ ಸಿಕ್ಕಿಸಿ ರಂಪ ರಾದ್ಧಾಂತ. ಓಹ್, ನಂದೂ ಇದೇ ಕತೆಯಲ್ವಾ? ಮತ್ತಷ್ಟು ಓದು
‘ಆರ್ ಅಂಕುಸ(ರ?)ವಿಟ್ಟೊಡಂ’: ಒಂದು ಪರಿಶೀಲನೆ
– ಡಾ.ಶ್ರೀಪಾದ ಭಟ್
ಸಹಾಯಕ ಪ್ರಾಧ್ಯಾಪಕರು,
ಡಾ. ಡಿ ವಿ ಗುಂಡಪ್ಪ ಕನ್ನಡ ಅಧ್ಯಯನ ಕೇಂದ್ರ,
ತುಮಕೂರು ವಿಶ್ವವಿದ್ಯಾನಿಲಯ, ತುಮಕೂರು
ಪಂಪ ವಿರಚಿತ ವಿಕ್ರಮಾರ್ಜುನ ವಿಜಯ (ಕ್ರಿ.ಶ.942) ಕೃತಿಯಲ್ಲಿನ ಬನವಾಸಿ ವರ್ಣನೆಯನ್ನು ಮಾಡುವ ಚತುರ್ಥಾಶ್ವಾಸದ 28 ರಿಂದ 32ನೆಯ ಪದ್ಯಗಳು ಸಾಕಷ್ಟು ಚರ್ಚಿತವಾದವು. ಇಂದಿಗೂ ಈ ಪದ್ಯಗಳನ್ನು ಕುರಿತು ಚರ್ಚೆ ನಡೆಯುತ್ತಲೇ ಇದೆ. ಇವುಗಳಲ್ಲಿ ಒಂದು ಪದ್ಯ:
ತೆಂಕಣಗಾಳಿ ಸೋಂಕಿದೊಡಮೊಳ್ನುಡಿಗೇಳ್ದೊಡಮಿಂಪನಾಳ್ದ ಗೇ
ಯಂ ಕಿವಿವೊಕ್ಕಡಂ ಬಿರಿದಮಲ್ಲಿಗೆಗಂಡೊಡಮಾದ ಕೆಂದಲಂ
ಪಂ ಗೆಡೆಗೊಂಡೊಡಂ ಮಧುಮಹೋತ್ಸವಮಾದೊಡಮೇನನೆಂಬೆನಾ
ರಂಕುಸವಿಟ್ಟೊಡಂ ನೆನೆವುದೆನ್ನ ಮನಂ ವನವಾಸಿದೇಶಮಂ1 (4-32) ಮತ್ತಷ್ಟು ಓದು
“ಪಟ್ಟಭದ್ರಹಿತಾಸಕ್ತಿಗಳ ಕೈಗಳಲ್ಲಿ ಸಿಕ್ಕಿ ಒದ್ದಾಡುತ್ತಿದೆ ಕನ್ನಡ ಚಿತ್ರರಂಗ”
– ಸುರೇಶ್ ಮುಗಬಾಳ್
ಗೆಳೆಯನೊಬ್ಬ ತಮಿಳು ನಟ ವಿಜಯ್ ನಟಿಸಿರುವ ‘ಕತ್ತಿ’ ಸಿನೆಮಾವನ್ನು ವೀಕ್ಷಿಸುವಂತೆ ಹೇಳಿದ, ಆ ಸಿನೆಮಾದಲ್ಲೇನಿದೆ ಅಂತಹ ವಿಶೇಷತೆ? ಎಂದು ಕೇಳಿದಾಗ, ‘ಸಾಮಾಜಿಕ ಕಳಕಳಿಯುಳ್ಳ ಅತ್ಯುತ್ತಮ ನಿನೆಮಾ, ಸಾಧ್ಯವಾದರೆ ವೀಕ್ಷಿಸು’ ಎಂದ, ಸರಿ ನಾನೂ Hotstar ನಲ್ಲಿ ಚಿತ್ರಕ್ಕಾಗಿ ತಡಕಾಡಿದೆ, ಸಿನೆಮಾವೇನೋ ವೀಕ್ಷಿಸಲು ಸಿಕ್ಕಿತು, ಆದರೆ ಚಿತ್ರವನ್ನು ಮಲೆಯಾಳಂ ಭಾಷೆಯಲ್ಲಿ ಡಬ್ಬ್ ಮಾಡಲಾಗಿತ್ತು. ಭಾಷೆ ಬಾರದವನಿಗೆ ತಮಿಳು ಭಾಷೆಯಾದರೇನು? ಮಲೆಯಾಳಂ ಭಾಷೆಯಾದರೇನು? ಅದು ಒತ್ತಟ್ಟಿಗಿರಲಿ, ಭಾಷೆಯ ಗಂಧವೇ ಗೊತ್ತಿರದ ಅರೇಬಿಕ್ ಭಾಷೆಯ ಅಲ್ ಲೈಲ್, ಕೋರಿಯನ್ ಭಾಷೆಯ Miracle in cell No. 7 ಸಿನೆಮಾಗಳನ್ನೂ ವೀಕ್ಷಿಸಿದ್ದೇನೆ, ಈ ಚಿತ್ರಗಳಲ್ಲಿ ನನಗೆ ಅರ್ಥವಾಗುತ್ತಿದ್ದದ್ದು ಕೇವಲ ಮುಖಭಾವ, ಆಂಗಿಕ ಚಲನೆ, ಚಿತ್ರದ ನಿರೂಪಣೆಗಳು ಮಾತ್ರ. ಇವುಗಳ ಸಹಾಯದಿಂದಲೇ ಚಿತ್ರಕಥೆಯನ್ನು ಅರ್ಥಮಾಡಿಕೊಳ್ಳು ಪ್ರಯತ್ನಿಸುತ್ತಿದ್ದೆ. ಒಂದು ವೇಳೆ English ಅಡಿಬರಹಗಳಿಲ್ಲದಿದ್ದರೆ ಸಿನೆಮಾ ಅರ್ಥವೇ ಆಗುತ್ತಿರಲಿಲ್ಲ. Miracle in cell No. 7 ಚಿತ್ರವನ್ನು ಇತ್ತೀಚೆಗೆ ರಮೇಶ್ ಅರವಿಂದ್ ಮುಖ್ಯಭೂಮಿಕೆಯಲ್ಲಿ ಕನ್ನಡಕ್ಕೆ ‘ಪುಷ್ಫಕ ವಿಮಾನ’ ಎಂಬ ಹೆಸರಿನಲ್ಲಿ ರಿಮೇಕ್ ಕೂಡ ಮಾಡಲಾಯಿತು. ನಾಯಕನ ನಟನೆ ಅದ್ಭುತವಾಗಿದ್ದರೂ ಚಿತ್ರವು ನಿರೀಕ್ಷೆಯನ್ನು ಹುಸಿಗೊಳಿಸಿತು. ಕೊರಿಯನ್ ಭಾಷೆಯಲ್ಲಿ ನಿರ್ಮಾಣವಾದ ಚಿತ್ರ ನನ್ನ ಅಂತರಂಗವನ್ನು ಕಲುಕಿದಷ್ಟೂ ಕನ್ನಡದಲ್ಲಿ ರಿಮೇಕ್ ಮಾಡಿದ ಚಿತ್ರ ಅಂತರಂಗಕ್ಕಿಳಿಯಲಿಲ್ಲ. ಪ್ರಾಯಶಃ ಕೊರಿಯನ್ ಭಾಷೆಯ ಚಿತ್ರವನ್ನೇ ಕನ್ನಡದಲ್ಲಿ ಡಬ್ಬಿಂಗ್ ಮಾಡಿದ್ದರೆ ಚಿತ್ರ ಇನ್ನಷ್ಟು ಅರ್ಥಗಳನ್ನು ಮೂಡಿಸುತ್ತಿತ್ತೇನೋ. ಮತ್ತಷ್ಟು ಓದು
ನಿಜವಾಗಿ ಭಾಷೆ ಅಂದರೆ ಇಷ್ಟೇಯಾ..?
– ಮಲ್ಲಿ ಶರ್ಮ
ಭಾಷೆ. ಭಾಷೆ ಅಂದ್ರೆ ಸಾಕಷ್ಟು ಜನ ಹೇಳೋದೊಂದೇ, “ನಮ್ಮ ಹಿರಿಯರಿಂದಲೇ ಬಂತು, ನಾವು ಅದನ್ನೇ ಬಳಸ್ತಾ ಇದ್ದೇವೆ” ಅಂತಷ್ಟೇ ಹೇಳ್ತಾರೆ.. ಆದರೆ ಅದರ ಮೂಲ, ಅದೆಷ್ಟು ಬದಲಾವಣೆ ಪಡೆದಿದೆ, ಈಗ ಯಾವ ಸ್ಥಿತಿಯಲ್ಲಿದೆ? ಅಂತೆಲ್ಲ ತಿಳಿದೂ ಇರಲ್ಲ, ಅದರ ಕುರಿತು ತಲೆ ಕೆಡಿಸಿಕೊಂಡಂತು ಖಂಡಿತಾ ಇರಲ್ಲ. ಅದರ ಅಗತ್ಯವೂ ಅವರ್ಯಾರಿಗೂ ಇಲ್ಲ. ಭಾಷೆ ಅನ್ನೋದು “ಸಂವಹನ ನಡೆಸಲು ಉಪಯೋಗಿಸುವ ಒಂದಷ್ಟು ಪದಗಳ ಪುಂಜ” ಅಷ್ಟೇ ಎಂದು ಎಲ್ಲರೂ ಡಿಸ್ಕ್ರೈಬ್ ಮಾಡಿ ಡೆಫಿನಿಷನ್ ಕೊಟ್ಟುಬಿಟ್ಟಾರು. ನಿಜವಾಗಿ ಭಾಷೆ ಅಂದರೆ ಅಷ್ಟೇಯಾ!!? ಮತ್ತಷ್ಟು ಓದು
ಗುಂಗು..!
– ಡಾ.ಸುದರ್ಶನ ಗುರುರಾಜರಾವ್
ಗುಂಗಿನ ಹಂಗದು ನಿನಗಿರೆ ಗೆಳೆಯ
ಬೇಸರವಿಲ್ಲದೆ ಕಳೆವುದು ಸಮಯ
ಜೀವನಕೊಂದು ಸಿಗುವುದು ಧ್ಯೇಯ
ಬದುಕಿದ ಬಾಳಿಗೆ ದೊರೆವುದು ನ್ಯಾಯ
ಪಿತೃ ವಾಕ್ಯವೆ ರಾಮನ ಗುಂಗು
ಭ್ರಾತೃ ಪ್ರೇಮವೆ ಭರತನ ಗುಂಗು
ಸೀತಾಪತಿ ಜಪ ಮಾರುತಿ ಗುಂಗು ಮತ್ತಷ್ಟು ಓದು
ಸಾಹಿತಿ, ಬುದ್ಧಿಜೀವಿಗಳ ಆತ್ಮ ಸಾಕ್ಷಿ ಯಾರ ಪಾದಾರುವಿಂದವನ್ನು ಸೇರಿದೆ?
ಕಿರಣ್ ಕಿಜೋ
ಸಂಶೋಧನಾ ವಿದ್ಯಾರ್ಥಿ
ದ್ರಾವಿಡ ವಿಶ್ವವಿದ್ಯಾಲಯ, ಕುಪ್ಪಂ
ಆಂಧ್ರ ಪ್ರದೇಶ
ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ಅರೆನಗ್ನ ಚಿತ್ರ ನೋಡಿ, ಸಾಕಷ್ಟು ಛೀಮಾರಿಗೆ ಒಳಗಾಗಿರುವ ಶಿಕ್ಷಣ ಸಚಿವ ತನ್ವೀರ್ ಸೇಠ್, “ಮೂರೂ ಬಿಟ್ಟವರು ಊರಿಗೆ ದೊಡ್ಡವರು” ಎನ್ನುವ ಹಾಗೇ ಓಡಾಡಿಕೊಂಡಿರುವುದನ್ನು ನೋಡಿದರೆ ನಿಜಕ್ಕೂ ಖೇದವೆನಿಸುತ್ತದೆ. ಈ ನಡುವೆ ಸರ್ಕಾರವು ಸಚಿವ ಮಹಾಶಯರ ಬೆನ್ನಿಗೆ ನಿಂತು, ಸಿ.ಐ.ಡಿ.ಯಿಂದ ತನಿಖೆಯ ನಾಟಕವಾಡಿಸಿ ಕ್ಲೀನ್‍ಚೀಟ್ ನೀಡುವ ಉಮ್ಮೇದಿಯಲ್ಲಿದೆ. ನಿಷ್ಠ ಪೋಲಿಸ್ ಅಧಿಕಾರಿ ಗಣಪತಿ ಸಾವಿನ ವಿಚಾರದಲ್ಲೇ ಜಾರ್ಜ್‍ಗೆ ಕ್ಲೀನ್‍ಚೀಟ್ ನೀಡಿದವರಿಗೆ, ಈ ಪ್ರಕರಣ ಹೂವೆತ್ತಿದಷ್ಟೇ ಸಲೀಸು ಬಿಡಿ! ಇರಲಿ, ಇದೆಲ್ಲಾ ರಾಜಕಾರಣದ ಕೇಡಿನ ಭಾಗ. ನನ್ನ ಪ್ರಶ್ನೆ ಆ ಕುರಿತದ್ದಲ್ಲ, ಆ ಉದ್ದೇಶವೂ ನನ್ನಲ್ಲಿಲ್ಲ. ಆದರೆ ಸಭ್ಯ, ಪ್ರಜ್ಞಾವಂತ ಸಮಾಜವನ್ನು ಕಾಡುತ್ತಿರುವುದು ಹಾಗೂ ಸಂಕಟಕ್ಕೆ ದೂಡಿರುವುದು, ಈ ಮನುಷ್ಯ ನಾಡಿದ್ದು ರಾಯಚೂರಿನಲ್ಲಿ ನಡೆಯುತ್ತಿರುವ 82 ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸ್ವಾಗತ ಸಮಿತಿಯ ಅಧ್ಯಕ್ಷನೆಂಬುದು! ಮತ್ತಷ್ಟು ಓದು
ಶಿಕ್ಷಣ: ಗುರಿ ಭೀಮ, ಸಾಧಕ ಕುಚೇಲ!
– ಕಲ್ಗುಂಡಿ ನವೀನ್
ಇಂದು ಶಿಕ್ಷಣ ಕ್ಷೇತ್ರದಲ್ಲಿ ನಡೆಯುತ್ತಿರುವ ಚರ್ಚೆಗಳು, ಪ್ರಯೋಗಗಳು ಇನ್ಯಾವುದೇ ಕ್ಷೇತ್ರದಲ್ಲಿ ನಡೆಯುತ್ತಿಲ್ಲ. ತೀರಾ ವಿರಳವಾಗಿದ್ದ ಓಪನ್ ಮಾದರಿ ಶಾಲೆಗಳು ಇಂದು ವಿಪುಲವಾಗಿವೆ. ಸರ್ಕಾರಿ ಶಾಲೆಗಳೂ ಅದರ ಕೆಲವು ಆಂಶಗಳನ್ನು “ಕಾಪಿ” ಮಾಡುತ್ತಿವೆ. ಇನ್ನು ಮಾಂಟೆಸ್ಸೊರಿ ಎಂಬ ಪದ್ಧತಿ (ಮಾರಿಯಾ ಮಾಂಟೆಸ್ಸೊರಿ ಎಂಬಾಕೆ ಚಾಲ್ತಿಗೆ ತಂದ ಶಿಕ್ಷಣ ಪದ್ಧತಿ) ಹೆಚ್ಚುಕಡಿಮೆ ಮನೆ ಮಾತಾಗಿದೆ. ಇದಲ್ಲದೆ, ಖಾಸಗಿ ನೆಲೆಯಲ್ಲಿ ಅನೇಕರು ತಾವೇ ಕಂಡರಿಸಿದ ಪದ್ಥತಿಯನ್ನು ಯಶಸ್ವಿಯಾಗಿ ಜಾರಿಗೆ ತಂದಿದ್ದಾರೆ. ಶಾಲೆ ಹೀಗೂ ಇರಬಲ್ಲುದೇ ಎಂದು ತಜ್ಞರೂ ಹುಬ್ಬೇರಿಸುವಂತೆ ಮಾಡಿದ್ದಾರೆ. “ಒಂದು ಇಡೀ ವರ್ಷ ನೀನು ಏನು ಬೇಕೋ ಮಾಡಿಕೋ, ನಿನಗಿಷ್ಟವಾದದ್ದನ್ನು ಕಲಿತುಕೋ” ಎಂದು ಶಾಲೆಯಲ್ಲಿ ಹೇಳುತ್ತಾರೆ ಎಂದರೆ ನಂಬುತ್ತೀರಾ? ಅದು ಆರೋಹಿ ಎಂಬ ಶಾಲೆ. ಶಿಕ್ಷಣದಲ್ಲಿ ಆಸಕ್ತಿ ಇರುವ ಎಲ್ಲರೂ ಒಮ್ಮೆ ಹೋಗಿ ನೋಡಿಯಾದರೂ ಬರಬೇಕಾದ ಶಾಲೆಯಿದು ( http://www.aarohilife.org ). ಪೂರ್ಣಪ್ರಮತಿ ಎಂಬ ವಿಶಿಷ್ಟ ಶಾಲೆಯಲ್ಲಿ ಪ್ರತಿ ವರ್ಷ ಶಿಕ್ಷಣ ಪದ್ಧತಿಗಳು ಹಾಗೂ ಕಲಿಕೆ ಹೇಗೆ ನಡೆಯುತ್ತದೆ ಎಂದು ವಿಶ್ಲೇಷಿಸಿ ಹೊಸ ಮಾರ್ಗಗಳನ್ನು ಕಂಡುಕೊಳ್ಳಲೆಂದೇ ಪೂರ್ಣಪ್ರಮತಿ ವ್ಯಾಖ್ಯಾ ಎಂಬ ಹೆಸರಿನಲ್ಲಿ ವಿಚಾರ ಸಂಕಿರಣಗಳನ್ನು ನಡೆಸುತ್ತಾರೆ. ಅನೇಕ ದೃಷ್ಟಿಕೋನಗಳಿಂದ ಹಾಗೂ ಪ್ರಯೋಗಗಳಿಂದಾಗಿ ಗಮನಿಸುತ್ತಿರಬೇಕಾದ ಶಾಲೆ, ಪೂರ್ಣಪ್ರಮತಿ (http://purnapramati.in/) ಹ್ಞಾ ಹಾಗೆ “ನೀವು ನೋಡಲೆಂದು ಬರಲೇಬೇಡಿ. ಮಕ್ಕಳು ತಮಗಿಷ್ಟವಾದದ್ದನ್ನು ಮಾಡುತ್ತಿರುತ್ತಾರೆ. ನಿಮ್ಮ ಭೇಟಿ ಅವರನ್ನು ಡಿಸ್ಟರ್ಬ್ ಮಾಡುತ್ತದೆ” ಎನ್ನುವ ಮಣಿವೆಣ್ಣನ್ ಅವರ ಶಾಲೆಯೂ ಇದೆ! ಅಷ್ಟೇ ಅಲ್ಲ ಅಲ್ಲಿನ ಪದ್ಧತಿಗಳು ನಿರಂತರ ಚರ್ಚೆ, ಮಂಥನದ ಆಧಾರದಿಂದ ಬದಲಾಗುತ್ತಿದೆ. ದೇಶದ ಶಿಕ್ಷಣ ವ್ಯವಸ್ಥೆ ನೀಡಿರುವ ಸ್ವಾತಂತ್ರ್ಯವನ್ನು ಚೆನ್ನಾಗಿಯೇ ಬಳಸಿಕೊಂಡು ಮೆಚ್ಚಿ ತಲೆದೂಗುವಂತಹ ಪ್ರಯತ್ನಗಳು ಖಾಸಗಿ ನೆಲೆಯಲ್ಲಿ ನಡೆದಿದೆ. ಇದರ ನಡುವೆ ನಮ್ಮ ಶಿಷ್ಟ ಪದ್ಧತಿಯನ್ನೇ ಮುಂದುವರೆಸುತ್ತಿರುವ, ಆದರೆ ಆದರ್ಶ ಪ್ರಾಯವಾದ ಖಾಸಗಿ ಶಾಲೆಗಳಿವೆ. ಇಲ್ಲಿಯೂ “ಅಂಕವಲ್ಲ, ಗುಣ ಮುಖ್ಯ” ಎಂದು ಯೋಚಿಸುತ್ತ ಹೊಸ ಮಾರ್ಗಗಳನ್ನು ಕಂಡುಕೊಳ್ಳುತ್ತಿರುವ ಶಾಲೆಗಳಿವೆ. ಇದರ ಜೊತೆ ತನ್ನಷ್ಟಕ್ಕೆ ತಾನು ಬೇರೆ ಯಾವ ಗೊಡವೆಗೂ ಹೋಗದೆ ಮುಂದುವರೆಯುತ್ತಿರುವ ಸಿ ಬಿ ಎಸ್ ಇ ಇತ್ಯಾದಿ ಕೇಂದ್ರದ ಪಠ್ಯಕ್ರಮವನ್ನು ಅಳವಡಿಸಿಕೊಂಡಿರುವ ಖಾಸಗಿ ಶಾಲೆಗಳಿವೆ. ಈ ಎಲ್ಲಕ್ಕಿಂತ ದೊಡ್ಡ, ಕೊರತೆ ಎಂಬ ಪದದ ಅರ್ಥವೇ ತಿಳಿಯದ ರಾಜವೈಭೋಗದ ಅಂತಾರಾಷ್ಟ್ರೀಯ ಶಾಲೆಗಳನ್ನು ಸದ್ಯದ ಚರ್ಚೆಯಿಂದ ದೂರ ಇಡೋಣ. ಮತ್ತಷ್ಟು ಓದು
ಕನ್ನಡದ ಮೊದಲ ಕೋಮುವಾದಿ ಈ ಮುಮ್ಮಡಿ ಬಲ್ಲಾಳ ವೀರ!
– ಸಂತೋಷ್ ತಮ್ಮಯ್ಯ
ಕ್ರಿ.ಶ ೧೩೧೦. ಅದು ಮುಸಲ್ಮಾನರ ರಂಜಾನ್ ತಿಂಗಳಿನ ೨೨ನೇ ದಿನ, ಭಾನುವಾರ. ಆ ಪವಿತ್ರ ತಿಂಗಳಿನ ೨೧ ದಿನಗಳೂ ಮುಸಲ್ಮಾನರು ದಕ್ಷಿಣ ಭಾರತದಲ್ಲಿ ನಿರಂತರ ಲೂಟಿ ನಡೆಸಿದ್ದರು. ಕಾಫಿರರ ಕೊಲೆ ಮಾಡಿದ್ದರು, ವಿಗ್ರಹ ಭಂಜನೆ ನಡೆಸಿದ್ದರು, ಮತಾಂತರಗಳು ನಡೆದಿದ್ದವು.
ರಂಜಾನಿನ ೨೨ನೇ ದಿನದಂದು ಅವರು ಲೂಟಿಗೆ ಆರಿಸಿಕೊಂಡದ್ದು ಶ್ರೀಮಂತ ದ್ವಾರಸಮುದ್ರವನ್ನು. ಮಲ್ಲಿಕಾಫರ್ ಎಂಬ ಒಂದು ಕಾಲದ ಬ್ರಾಹ್ಮಣ ಮತಾಂತರವಾದೊಡನೆಯೇ ವಿಪರೀತ ಕ್ರೂರಿಯೂ, ಮಾತೃ ಧರ್ಮದ ದ್ವೇಷಿಯೂ ಆಗಿ ಬದಲಾಗಿದ್ದ. ಹಿಂದೂ ಧರ್ಮದ ಯಾವ ನರವನ್ನು ಮೀಟಿದರೆ ಲಾಭ ಎಂಬುದನ್ನು ಉಳಿದ ದಾಳಿಕೋರರಿಗಿಂತ ಆತ ಚೆನ್ನಾಗಿ ಬಲ್ಲವನಾಗಿದ್ದ. ಅಲ್ಲಾವುದ್ದೀನ್ ಖಿಲ್ಜಿಯ ಕೂಲಿ ಮಾಡುತ್ತಿದ್ದ ಆತ ದಣಿಯನ್ನು ಮೆಚ್ಚಿಸಲು ಏನು ಮಾಡಲೂ ಹಿಂಜರಿಯುತ್ತಿರಲಿಲ್ಲ. ದ್ವಾರಸಮುದ್ರವನ್ನು ಲೂಟಿಮಾಡಬೇಕು ಎಂದು ಆತನೇ ಮುಹೂರ್ತ ನಿಗದಿಪಡಿಸಿದ್ದ. ಏಕೆಂದರೆ ಆ ಹೊತ್ತಲ್ಲಿ ದ್ವಾರಸಮುದ್ರದ ರಾಜ ರಾಜಧಾನಿಯಲ್ಲಿರಲಿಲ್ಲ. ನಿಶ್ಚಯವಾದಂತೆ ದ್ವಾರಸಮುದ್ರದ ಮೇಲೆ ದಾಳಿಯಾಯಿತು. ನಿರಂತರ ೧೩ ದಿನ ಲೂಟಿ ನಡೆಯಿತು. ದೇವಸ್ಥಾನಗಳು ಧ್ವಂಸವಾದವು. ಅತ್ತ ರಾಜ ರಾಜಧಾನಿಗೆ ದೌಢಾಯಿಸಿ ಬಂದಾಗ ಕಾಲ ಮಿಂಚಿಹೋಗಿತ್ತು. ಮಲ್ಲಿಕಾಫರನಿಗೆ ಶರಣಾಗದೆ ಆತನಿಗೆ ಬೇರೆ ದಾರಿಯಿರಲಿಲ್ಲ. ದುಷ್ಟ ಮಲ್ಲಿಕಾಫರ್ ಆತನಿಗೆ ಎರಡು ಆಯ್ಕೆಗಳನ್ನು ನೀಡಿದ. ಒಂದೋ ಇಸ್ಲಾಮಿಗೆ ಮತಾಂತರವಾಗಬೇಕು. ಇಲ್ಲವೇ ತಮಿಳು ಪಾಂಡ್ಯರನ್ನು ಗೆಲ್ಲಲು ಸಹಾಯ ಮಾಡಬೇಕು ಮತ್ತು ದ್ವಾರಸಮುದ್ರದಲ್ಲಿ ಮುಸಲ್ಮಾನ ಸೈನ್ಯವನ್ನು ಇರಿಸಿಕೊಳ್ಳಬೇಕು. ರಾಜ ಮತಾಂತರಕ್ಕೆ ಒಪ್ಪಿಗೆ ನೀಡಲಿಲ್ಲ. ಉಳಿದ ಷರತ್ತುಗಳಿಗೆ ಒಪ್ಪಿದ. ಮಲ್ಲಿಕಾಫರ್ ದ್ವಾರಸಮುದ್ರದ ಸೈನ್ಯದ ಬಲದಿಂದ ತಮಿಳು ಪಾಂಡ್ಯರನ್ನು ಗೆದ್ದು ಲೂಟಿಗೈದು ದೆಹಲಿಗೆ ಹೊರಟುಹೋದ. ಮತ್ತಷ್ಟು ಓದು