ಕನ್ನಡಮ್ಮನ ಹೆಮ್ಮೆಯ ಪುತ್ರನೂ ಅಣ್ಣಾವರ ಮಗನೂ
– ಜಿ.ವಿ ಜಯಶ್ರೀ
ಬಾನ ದಾರಿಯಲ್ಲಿ ಸೂರ್ಯ ಜಾರಿ ಹೋದ ಚಂದ್ರ ಮೇಲೆ ಬಂದ
ಮಿನುಗು ತಾರೆ ಅಂದ ನೋಡು ಎಂಥ ಚಂದ
ರಾತ್ರಿ ಆಯ್ತು ಮಲಗು ನನ್ನ ಪುಟ್ಟ ಕಂದ,
ಇದು ಎಂಬತ್ತರ ದಶಕದ ಹಾಡು. ತುಂಬಾ ಇಷ್ಟ ಪಟ್ಟು ಈಗಲೋ ಕೇಳುವಂತಹ ಸುಂದರ ಗೀತೆ.ಈ ಚಿತ್ರದಲ್ಲಿ ನಟಿಸಿದ ಪುನೀತ್ ರಾಜ್ ಕುಮಾರ್ ನಟನೆಯಷ್ಟೇ ಮನಸೆಳೆದ ಸಂಗತಿ ಅಂದ್ರೆ ಅವರು ಹಾಡಿದ ಈ ಹಾಡು .
ಮೊದಲಿನಿಂದ ವೀಕ್ಷಕ ದೇವರ ಮನ ಸೆಳೆದ ಕಲಾವಿದ ಪುನೀತ್. ಅವರ ಅಣ್ಣಂದಿರಾದ ಶಿವರಾಜ್ ಕುಮಾರ್, ರಾಘವೇಂದ್ರ ರಾಜ್ ಕುಮಾರ್ ಖುದ್ದು ಪುನೀತ್ ವಿಷಯದಲ್ಲಿ ತೋರುವ ಅಭಿಮಾನ ಅಪಾರ.
ಈತನ ಬಗ್ಗೆ ತಮಗೆ ತುಂಬಾ ಹೆಮ್ಮೆ ಇದೆ. ಅಪ್ಪಾಜಿಯ ನಂತರ ಬಣ್ಣ ಹಚ್ಚಿದ (ಪೂರ್ಣಿಮಾ ಸಹ ಹಚ್ಚಿದ್ದಾರೆ ) ಪುನೀತ್ ತಮಗೆ ಮಾದರಿ ಎನ್ನುವ ಮಾತು ಹೇಳಿರುವುದು ಅವರು ತಮ್ಮನ ಮೇಲೆ ಇಟ್ಟಿರುವ ಪ್ರೀತಿಯನ್ನು ಎತ್ತಿ ತೋರುತ್ತದೆ.
ಶಿವಣ್ಣ ಜೀ ಕನ್ನಡ ವಾಹಿನಿಯಲ್ಲಿ ಕಾರ್ಯಕ್ರಮ ನಡೆಸಿ ಕೊಟ್ಟಾಗ ಅಪಾರ ಸಂಖ್ಯೆಯ ವೀಕ್ಷಾಕಾಭಿಮಾನ ಹೊಂದಿದ್ದರು.ಆ ಕಾರ್ಯಕ್ರಮದ ಮೂಲಕ ಹೆಚ್ಚು ಗೊತ್ತಾದರೂ ಶಿವಣ್ಣ. ಕಾರಣ ಇಷ್ಟೇ ಸಿನಿಮಾದಲ್ಲಿ ಗಿಣಿಗೆ ಕಲಿಸಿದ ಪಾಠದಂತೆ ಡೈಲಾಗ್ ಹೇಳುವ ಶಿವಣ್ಣನಿಗಿಂತ ತನ್ನ ಹೃದಯದಿಂದ ಮಾತನಾಡಿದ ಶಿವಣ್ಣ ಇಷ್ಟ ಆಗಿತ್ತು.. ಮಾತಲ್ಲಿ ಯಾವುದೇ ರೀತಿಯ ನಾಟಕೀಯತೆ, ಕಲಿತ ಮಾತು ಇರದೇ ಸಾಮಾನ್ಯ ಮನೆಕನ್ನಡ ಮಾತಾಡಿ , ತಮ್ಮ ಸರಳತೆ, ವಿಶೇಷ ವ್ಯಕ್ತಿತ್ವ್ದದಿಂದ ಗೆದ್ದಿದ್ದರು.
ಕಾಲದ ಕನ್ನಡಿ: ನೈತಿಕತೆಗೆ ಇ೦ಬು ನೀಡದ,ಬುಧ್ಧಿ ಬಲಿತಿರದ ರಾಜಕಾರಣವೆ೦ದರೆ ಇದೇ!
– ಕೆ.ಎಸ್ ರಾಘವೇಂದ್ರ ನಾವಡ
ಸುಮಾರು ೩ ತಿ೦ಗಳಾಯಿತು.. ಅಮ್ಮನಿಗೆ ಆರೋಗ್ಯ ಸರಿಯಿರಲಿಲ್ಲವೆ೦ದು ೨ ತಿ೦ಗಳಿಗೂ ಹೆಚ್ಚು… ಅನ೦ತರ ಅಮ್ಮ ಸ್ವರ್ಗವಾಸಿಯಾದ ನ೦ತರ ಕಾರ್ಯಕ್ರಮಗಳಿಗೆ೦ದು ೧ ತಿ೦ಗಳಿಗೂ ಹೆಚ್ಚು.. ಸುಮಾರು ೩ ತಿ೦ಗಳಿನಿ೦ಧ ಕಾಲದ ಕನ್ನಡಿಯಲ್ಲಿ ಯಾವುದೇ ಪ್ರಚಲಿತದ ಬಿ೦ಬ ಕ೦ಡಿಲ್ಲ.. ಏನು ಬರೆಯೋದಪ್ಪಾ? ಅ೦ಥ ಯೋಚನೆ ಮಾಡ್ತಿದ್ದಾಗಲೇ ನಮ್ಮ ಯಡಿಯೂರಪ್ಪನವರ ರೆಸಾರ್ಟ್ ರಾಜಕೀಯ ಶುರು! ಒಳ್ಳೆಯ ವಿಷಯಕ್ಕಾಗಿ ಒದ್ದಾಡ್ತಿದ್ದ ನನಗೆ … ಈಗ ಈ ಲೇಖನ..
ಕಾಲದ ಕನ್ನಡಿಗೆ ಅನಿಸುವುದಿಷ್ಟೇ.. ಮು೦ದೆ೦ದೂ ಭಾ.ಜ.ಪಾ. ಕರ್ನಾಟಕದಲ್ಲಿ ತಲೆ ಎತ್ತದ೦ಥ ಸ್ಠಿತಿಯನ್ನು ಆ ಪಕ್ಷದವರೇ ಮಾಡುತ್ತಿದ್ದಾರೆ! ಬುಧ್ಧಿವ೦ತರ ಪಕ್ಷ.. ಎಲ್ಲರೂ ಆದರು.. ಇವರನ್ನೊಮ್ಮೆ ನೋಡೋಣ.. ಮಾಜಿ ಮುಖ್ಯಮ೦ತ್ರಿಯಿ೦ದ ಯಡಿಯೂರಪ್ಪನವರಿಗಾದ ಅನ್ಯಾಯವನ್ನು ಸರಿಪಡಿಸೋಣ ಎ೦ಬ ಅನಿಸಿಕೆಗಳಿ೦ಧ ಕರ್ನಾಟಕದ ಜನತೆ ಸಾರಾಸಗಟಾಗಿ ಯಡಿಯೂರಪ್ಪನವರ ನೇತೃತ್ವದ ಭಾ.ಜ.ಪಾ.ವನ್ನು ಆರಿಸಿ ಕಳುಹಿಸಿದ್ದಕ್ಕೆ ಒಳ್ಳೆಯ ಉಡುಗೊರೆಯನ್ನು ಕೊಟ್ಟಿದ್ದಾರೆ. ಹತ್ತಾರು ಉಪಚುನಾವಣೆಗಳು.. ಒ೦ದರ ಮೇಲೊ೦ದರ೦ತಿನ ಸಚಿವರ ಭಾನಗಡಿಗಳು.. ಯಡಿಯೂರಪ್ಪನವರ ಜೈಲು ವಾಸ.. ಮಾಡಿದ ಚೂರು ಪಾರು ಒಳ್ಳೆಯ ಕೆಲಸಗಳನ್ನೂ ಮುಚ್ಚಿ ಹಾಕುವಷ್ಟು ಹಗರಣಗಳ ಸರಮಾಲೆ..!
ಇನ್ನೇನೂ ಬಾಕಿ ಉಳಿದಿಲ್ಲ.. ತಾವೇ ಆರಿಸಿ, ಕೂರಿಸಿದ್ಧ ಸದಾನ೦ದ ಗೌಡರನ್ನು ಮುಖ್ಯಮ೦ತ್ರಿ ಪಟ್ಟದಿ೦ದ ಕೆಳಗಿಳಿಸಲು ಯಡಿಯೂರಪ್ಪನವರಿಗೆ ರೆಸಾರ್ಟ್ ರಾಜಕೀಯ ಮಾಡಬೇಕಾಗಿ ಬ೦ದಿದೆ! “ಸಮಯದ ಶಿಶು“ವಾಗಿ ಅಧಿಕಾರಕ್ಕೆ ಬ೦ಧ ಸದಾನ೦ದ ಗೌಡರು ಇ೦ದು ಆ ಸಮಯವನ್ನೇ ಹೈಜ್ಯಾಕ್ ಮಾಡ್ತಾರೇನೋ ಅನ್ನುವ ಸ೦ಶಯವೂ ಇದೆ! ಆದರೆ ತೀವ್ರ ಹಠವಾದಿಯಾಗಿರುವ ಯಡಿಯೂರಪ್ಪ ಇಷ್ಟಕ್ಕೆ ಸುಮ್ಮನಾಗುವ ಹಾಗೆ ಕಾಣುತ್ತಿಲ್ಲ. ಬಜೆಟ್ ಮ೦ಡನೆಯ ಒಳಗೇ ಸದಾನ೦ದರ ಆನ೦ದವನ್ನು ಚಿವುಟಿ ಹಾಕಲೇ ಬೇಕು ಎ೦ಬ ಹಠ ಹಾಗೂ ಯಾವ ಗಣಿ ಆರೋಪದ ಮೇಲೆ ತನ್ನ ರಾಜೀನಾಮೆ ಕೇಳಬೇಕಾಗಿ ಬ೦ದಿತೋ ಆದೇ ಆರೋಪದ ಪ್ರಾಥಮಿಕ ಮಾಹಿತಿ ವರದಿಯನ್ನೇ ನ್ಯಾಯಾಲಯ ರದ್ದುಗೊಳಿಸಿರುವುದು, ಆರೋಪ ಮುಕ್ತನನ್ನಾಗಿಸಿರುವುದು ಯಡಿಯೂರಪ್ಪನವರಿಗೆ ಆನೆ ಬಲ ತ೦ದಿರುವುದ೦ತೂ ಹೌದು.
ಕಹಾನಿ, ವಿದ್ಯಾಬಾಲನ್ ಮತ್ತೆ ಮಿಂಚಿಂಗ್
ಫಿಲ್ಮಿ ಪವನ್
ಈ ನಡುವೆ ಎಲ್ಲಾ ಕಡೆಯೂ ವಿದ್ಯಾಬಾಲನ್ ದೇ ದುನಿಯಾ, ಡರ್ಟಿ ಪಿಕ್ಚರ್ ಬಂದಮೇಲೇನೆ ವಿದ್ಯಾ ಬಾಲನ್ ಗೆ ಈ ಪಾಟಿ ಡಿಮ್ಯಾಂಡ್ ಬಂದಿದ್ದು. ಇತ್ತೀಚೆಗೆ ರಾಷ್ಟ್ರ ಪ್ರಶಸ್ತಿ ಸಹ ಬಾಚಿಕೊಂಡಿದ್ದರು ವಿದ್ಯಾ, ಅವರಿಗೆ ನಿಲುಮೆ ತಂಡದಿಂದ ಶುಭಾಶಯಗಳು. ಶನಿವಾರ ಭಾನುವಾರ ಐ.ಟಿ ಹುಡುಗರಿಗೆ ಹಬ್ಬ ಇದ್ದ ಹಾಗೆ, ಗುರುವಾರವೇ ಎಲ್ಲ ಪ್ಲಾನ್ ಆಗಿ ಬಿಡುತ್ತೆ ಶುಕ್ರವಾರ ಮತ್ತು ಶನಿವಾರದ ಪ್ರೋಗ್ರಾಮ್. ಹಾಗೇ ಪ್ಲಾನ್ ಮಾಡಿ ಶನಿವಾರ ಕಹಾನಿ ಚಿತ್ರ ನೋಡಲು ಹೋಗಿದ್ದೆವು, ಮೊದಲ ಬಾರಿ ನನ್ನ ಸಹೋದ್ಯೋಗಿಗಳೊಂದಿಗೆ ಸಿನಿಮಾ ಪಯಣ.
ಕೊಲ್ಕತ್ತಾದಂತಹ ಮಹಾನಗರದಲ್ಲಿ ತೆಗೆದುಕೊಳ್ಳುವ ಸಿನಿಮಾ ಕೊಲ್ಕತ್ತಾದ ದೈನಂದಿನ ಬದುಕನ್ನು ತೆರೆದುಕೊಳ್ಳುತ್ತಾ ನಾಯಕಿಯ ಎಂಟ್ರಿ ಕೊಡಿಸುತ್ತೆ. ನಾಯಕಿ ಕೊಲ್ಕತ್ತಾ ಬಂದೊಡನೆ ಪೋಲೀಸ್ ಠಾಣೆಗೆ ತೆರಳಿ ತನ್ನ ಗಂಡ ನಾಪತ್ತೆಯಾದ ಬಗ್ಗೆ ದೂರು ನೀಡುತ್ತಾಳೆ. ಆಗ ಪ್ರೇಕ್ಷಕನಿಗೂ ಸಹ ಟ್ಯಾಕ್ಸಿ ಚಾಲಕನಿಗೆ ಬಂದ ಅನುಮಾನವೆ ಬರುತ್ತೆ, ಯಾಕೆ ನೇರ ಪೋಲೀಸ್ ಠಾಣೆ ಅಂತ. ನಾಯಕಿ ತುಂಬು ಗರ್ಭಿಣಿ, ಲಂಡನ್ ಅಲ್ಲಿದ್ದ ಪತಿ ಕೊಲ್ಕತ್ತಾಗೆಂದು ಹೊರಟು ಬಂದವರು ಮತ್ತೆ ಕರೆ ಮಾಡಿಲ್ಲ, ಸಂದೇಶ ಕಳುಹಿಸಿಲ್ಲ, ಕಾಣೆಯಾಗಿದ್ದಾರೆ ಎಂದು ನೀಡುವ ದೂರನ್ನು ಪೋಲೀಸರು ಯುವ ಆಫೀಸರ್ ರಾಣಾಗೆ ವಹಿಸುತ್ತಾರೆ. ರಾಣಾ ಮತ್ತು ಪೋಲೀಸ್ ಅಲ್ಲದಿದ್ದರು ಪೋಲೀಸರಂತೆ ತನಿಖೆಯ ಎಲ್ಲ ಕಡೆಗಳಲ್ಲು ತನ್ನನ್ನು ತಾನು ತೊಡಗಿಸಿಕೊಳ್ಳುವ ವಿದ್ಯಾಬಾಲನ್ ಜೊತೆಯಾಗಿ ನಡೆಸುವ ಸಸ್ಪನ್ಸ್ ಥ್ರಿಲ್ಲರ್ ಕಹಾನಿ.
ವಿದ್ಯಾ ಬಾಲನ್ ಗೆ ಸಿನಿಮಾದಲ್ಲಿ ಸಹ ವಿದ್ಯಾ ಎಂಬ ಹೆಸರು, ತಮ್ಮ ಪತಿ ಕಳೆದು ಹೋದ ಎಂದು ದೂರು ನೀಡಿದ ದಿನದಿಂದ ಸಂಪೂರ್ಣ ತನಿಖೆ ಮುಗಿಯುವವರೆಗೂ ಪೋಲೋಸರೊಂದಿಗೇ ಇರುತ್ತಾರೆ. ವಿದ್ಯಾ ವೃತ್ತಿಯಲ್ಲಿ ನೆಟ್ವರ್ಕ್ ಸೆಕ್ಯೂರಿಟಿ ಇಂಜಿನಿಯರ್, ಈ ತನಿಖೆ ನಡೆಯುವಾಗ ಅವರ ಕಂಪ್ಯೂಟರ್ ತಲೆ ಬಹಳವಾಗಿ ಉಪಯೋಗವಾಗುತ್ತದೆ, ಅದೇ ಭರದಲ್ಲಿ ನಿರ್ದೇಶಕರು ಪೋಲೀಸರಿಗೆ ಕಂಪ್ಯೂಟರ್ ಬಗೆಗಿನ ಅಲ್ಪ ತಿಳುವಳಿಕೆಯನ್ನೂ ಸಹ ತೋರಿಸಿದ್ದಾರೆ. ಬರೀ ಫೋನಿನಲ್ಲಿ ಮಾತನಾಡಿದ್ದನ್ನೆ ಅರ್ಥ ಮಾಡಿಕೊಂಡು ನನ್ನ ಗಂಡ ಇದೇ ಲಾಡ್ಜಿನಲ್ಲಿ ಇರುತಿದ್ದರು, ಇದೇ ಅಂಗಡಿಯಲ್ಲಿ ಟೀ ಕುಡಿಯುತಿದ್ದರು ಎಂದೆಲ್ಲ ಗೆಸ್ ಮಾಡುವ ವಿದ್ಯಾ ಬುದ್ದಿವಂತಿಕೆ ನಂಬಲು ಸಾಧ್ಯವಾಗದಿದ್ದರು ಸಿನಿಮಾ ಆದ್ದರಿಂದ ನಂಬಿ ಬಿಡಬೇಕಾಗುತ್ತದೆ. ಮತ್ತಷ್ಟು ಓದು 
ಬೆಟ್ಟದಾ ಬುಡದಲ್ಲಿ ಹುಟ್ಟಿರುವ ವೃಕ್ಷಕ್ಕೆ…
ಸೋಮಾಲಿಯಾದ ಕಳ್ಳರು ಸೆರೆಹಿಡಿದು ಆತನನ್ನೂ ಆತನ ಜೊತೆಗಾರರನ್ನೂ ಹಡಗಿನಲ್ಲೇ ಬಂಧಿಸಿದ್ದರು. ಅನ್ನ-ನೀರು ಸರಿಯಾಗಿ ಇಲ್ಲದೇ ಮೂರುಹಗಲು ಮೂರು ರಾತ್ರಿ ಕಳೆದುಹೋಗಿತ್ತು. ಶರೀರ ನಿತ್ರಾಣವಾಗಿತ್ತು. ಸಿರಿವಂತ ವ್ಯಾಪಾರಿಯ ಉದ್ಯೋಗಿಯಾಗಿ ಯಾಕಾದರೂ ಸೇರಿಕೊಂಡೆನೋ ಎನ್ನಿಸಿಬಿಟ್ಟಿತ್ತು. ಆತ ಮಲಗೇ ಇದ್ದ. ಜೊತೆಗಾರರನ್ನೂ ಅದೇ ಹಡಗಿನಲ್ಲಿ ಎಲ್ಲೆಲ್ಲೋ ಬಂಧಿಸಲಾಗಿತ್ತು. ನಾಳೆ ಬೆಳಗಾದರೆ ತಮ್ಮೆಲ್ಲರನ್ನೂ ಕೊಲ್ಲುವುದಾಗಿ ಹೇಳಿದ್ದನ್ನು ಆತ ಕೇಳಿದ್ದ. ಭಾರತ ಸರಕಾರದ ಸಂಬಂಧಪಟ್ಟ ಅಧಿಕಾರಿಗಳಿಗೆ ತಮ್ಮನ್ನು ಕಳ್ಳರು ಹೈಜಾಕ್ ಮಾಡಿ ಬಂಧಿಸಿದ ವರದಿ ತಲ್ಪಿದೆಯೋ ಇಲ್ಲವೋ ತಿಳಿದಿರಲಿಲ್ಲ. ಭಾರತೀಯ ನೌಕಾಪಡೆಯ ತುಕಡಿಗಳನ್ನಾದರೂ ಕಳಿಸಿ ತಮ್ಮನ್ನೆಲ್ಲಾ ರಕ್ಷಿಸಿ ಕರೆದೊಯ್ಯಬಹುದಿತ್ತಲ್ಲ ಎಂದು ಆತ ಯೋಚಿಸುತ್ತಿದ್ದ.
ಕಳ್ಳರು ಸಾಮಾನ್ಯ ಕ್ರೂರಿಗಳಾಗಿರಲಿಲ್ಲ; ಹಿಡಿದ ಜನರನ್ನು ಏನೂ ಮಾಡಲು ಹೇಸದ ಜನ ಅವರಾಗಿದ್ದರು. ಮನುಷ್ಯರನ್ನೇ ಕೊಂದು ತಿಂದು ಬದುಕಬಹುದಾದ ಮಾನವರೇ ಅಲ್ಲದ ರಕ್ಕಸರು ಅವರು. ಒಬ್ಬೊಬ್ಬರೂ ಯಮದೂತರಂತೇ ಕಾಣುತ್ತಿದ್ದರು. ಅವರ ಕೆಂಗಣ್ಣುಗಳನ್ನು ನೆಟ್ಟಗೆ ನೋಡಲು ಹೆದರಿಕೆಯಾಗುತ್ತಿತ್ತು. ಉದ್ದುದ್ದ ಬೆಳೆದ ಉಗುರುಗಳು ಬಾಕುಗಳಂತೇ ಕೆಲಸಮಾಡುತ್ತಿದ್ದವು. ಮೊಂಡುತಲೆಯ ಕುರುಚಲು ಕೂದಲು, ಚಿತ್ರವಿಚಿತ್ರ ಗತಿಯ ಗಡ್ಡ-ಮೀಸೆಗಳು, ನಾರುವ ಜೀನ್ಸು ದಿರಿಸುಗಳು ಇವುಗಳನ್ನೆಲ್ಲಾ ನೋಡಿದಾಗ ಬಹಳ ಅಸಹ್ಯವಾಗುತ್ತಿತ್ತು. ಬದುಕಿನ ಕೊನೆಗಳಿಗೆ ಬಂದೇಬಿಡುತ್ತದೆಂದು ಕನಸಲ್ಲೂ ಎಣಿಸದ ಆತ ಪಶ್ಚಾತ್ತಾಪ ಪಡುತ್ತಿದ್ದ. ತಾನು ಸತ್ತರೆ ಹೆಂಡತಿ-ಮಕ್ಕಳ ಗತಿ ಮುಂದೇನು ಎಂಬ ಚಿಂತೆಯಲ್ಲಿ ಹೊಟ್ಟೆಯ ಹಸಿವೂ ಅಡಗಿಹೋಗಿತ್ತು! ನಿರ್ದಯಿಗಳ ಕೂಗು-ಘರ್ಜನೆ ಸದಾ ನಡೆದೇ ಇತ್ತು. ಆಗಾಗ ಪಿಸ್ತೂಲಿನಿಂದ ಸಿಡಿಯುವ ಗುಂಡುಗಳ ಸದ್ದು ಕೇಳಿಸುತ್ತಿತ್ತು. ಅದು ಯಾರು ಯಾರಿಗೆ ಹಾರಿಸಿದ್ದು ಎಂಬುದು ಮಾತ್ರ ಗೊತ್ತಾಗುತ್ತಿರಲಿಲ್ಲ.
ಉಪಚುನಾವಣೆ ಫಲಿತಾಂಶ: ಬಿಜೆಪಿಗೆ ಮತದಾರ ಪ್ರಭು ಕೊಟ್ಟ ಮೊದಲ ಮತ್ತು ಕಡೆಯ ಎಚ್ಚರಿಕೆ
ಸಾತ್ವಿಕ್ ಎನ್ ವಿ
ಕಳೆದ ವಿಧಾನಸಭಾ ಚುನಾವಣೆಯ ನಂತರ ನಡೆದ ಎಲ್ಲ ಚುನಾವಣೆಗಳಲ್ಲೂ ಕರ್ನಾಟಕದ ಮತದಾರರು ಬಿಜೆಪಿಯನ್ನು ಬೆಂಬಲಿಸುತ್ತಾ ಬಂದಿದ್ದರು. ಹಲವಾರು ವಿವಾದಗಳನ್ನು ಬಿಜೆಪಿ ಹುಟ್ಟುಹಾಕಿಕೊಂಡಿದ್ದರೂ ಜನತೆ ಪಕ್ಷಕ್ಕೆ ಆಶೀರ್ವದಿಸಿದ್ದರು. ಆದರೆ ಈ ಸರಣಿ ಉಡುಪಿ-ಚಿಕ್ಕಮಗಳೂರು ಲೋಕಸಭಾ ಉಪಚುನಾವಣೆಯಲ್ಲಿ ಮುಂದುವರೆದಿಲ್ಲ. ಸದಾನಂದ ಗೌಡರು ಮುಖ್ಯಮಂತ್ರಿಯಾಗಿ ಆಯ್ಕೆಯಾದ ನಂತರ ತೆರವಾಗಿ ಪ್ರತಿಷ್ಠೆಯ ಕಣವಾಗಿ ಮಾರ್ಪಾಡಾಗಿತ್ತು.
ಇಂದು ಉಪಚುನಾವಣೆಯ ಫಲಿತಾಂಶ ಹೊರಬಂದಿದ್ದು ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿದ್ದ ಜಯಪ್ರಕಾಶ ಹೆಗ್ಡೆಯವರು ಸರಿಸುಮಾರು ೫೦ ಸಾವಿರ ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ. ಈ ಫಲಿತಾಂಶವು ಆಡಳಿತಾರೂಢ ಬಿಜೆಪಿ ಸರ್ಕಾರಕ್ಕೆ ಬಿಸಿತುಪ್ಪವಾಗುವ ಸಾಧ್ಯತೆಗಳಿವೆ. ಇದು ಉಪಚುನಾವಣೆಯಾದುದರಿಂದ ಮುಂದಿನ ಸುಮಾರು ಎರಡು ವರ್ಷಗಳು ಹೆಗ್ಡೆಯವರು ಲೋಕಸಭಾಸದಸ್ಯರಾಗಿರುತ್ತಾರೆ. ಮತ್ತಷ್ಟು ಓದು 
ನಿಮ್ಮ ಬ್ಲಾಗ್ ಪೂರ್ತಿ ಕನ್ನಡದಲ್ಲಿ
ಆತ್ಮೀಯ ಕನ್ನಡಿಗರೆ,
ಈಗ ನೀವು ನಿಮ್ಮ ಬ್ಲಾಗ್ ಅನ್ನು ಆಂಗ್ಲ ಭಾಷೆಯಲ್ಲಿ ಮಾತ್ರವಲ್ಲದೆ ಪೂರ್ತಿ ಕನ್ನಡದಲ್ಲೇ ನೋಡಬಹುದು. ಈಗ ನಿಮಗೆ ಗೂಗಲ್ ಈ ರೀತಿಯ ಅವಕಾಶವನ್ನು ಕಲ್ಪಿಸಿದೆ.gs->Language and Formatting
ಅಲ್ಲಿ Language ಕಾಲಂನಲ್ಲಿ ಕನ್ನಡ ಭಾಷೆಯನ್ನು ಆರಿಸಿಕೊಳ್ಳಿ.
ನಂತರ Save ಮಾಡಿ
ಗ್ಯಾಡ್ಜೆಟ್ ಗಳು ಬ್ಲಾಗಿಗೆ ಹೊರಗಿನವುಗಳಾಗಿರುವುದರಿಂದ ಅಲ್ಲಿ ನಿಮಗೆ ಕನ್ನಡ ಸಿಗುವುದಿಲ್ಲ.

ಈಗ ನಿಮ್ಮ ಬ್ಲಾಗ್ ಕನ್ನಡದಲ್ಲಿ ತಯಾರಾಗಿರುತ್ತದೆ.
ಕನ್ನಡ ಭಾಷೆಯನ್ನು ಸೇರಿಸಿರುವುದಕ್ಕೆ ನನ್ನ ಕಡೆಯಿಂದ ಗೂಗಲ್ ಗೆ ಒಂದು ಅಭಿನಂದನೆ
ಈ ವಿಷಯವನ್ನು ಎಲ್ಲರೊಂದಿಗೂ ಹಂಚಿಕೊಳ್ಳಿ 🙂
***************************************************************************
ಚಿತ್ರ ಕೃಪೆ: hackuadi.blogspot.in
ಹಲವು ರಂಗಗಳ ‘ವೇಷ’
-ರಾಘವೇಂದ್ರ ರಾವ್
ಪ್ರಾದೇಶಿಕ ಕಥಾ ವಸ್ತುಗಳನ್ನು ಆಯ್ಕೆ ಮಾಡಿಕೊಂಡು ಕೃತಿಗಳನ್ನು ರಚಿಸುವ ಮಂಗಳೂರು ವಿಶ್ವವಿದ್ಯಾನಿಲಯದ ಉಪಕುಲಸಚಿವರಾದ ಪ್ರಭಾಕರ ನೀರ್‌ಮಾರ್ಗ ಅವರ ಹದಿನೇಳನೆಯ ಕೃತಿ ‘ವೇಷ’. ದಕ್ಷಿಣ ಕನ್ನಡದ ಸಾಂಸ್ಕೃತಿಕ, ಸಾಮಾಜಿಕ ಜನಜೀವನವನ್ನ ಬಹಳ ಮಾರ್ಮಿಕವಾಗಿ ಚಿತ್ರಿಸುವ ಇವರ ಕೃತಿಗಳಲ್ಲಿ ದಾಯಿತ್ವ, ತಿಲ್ಲಾನ, ಧೀಂಗಿಣ, ಮಂಗಳೂರು ಕ್ರಾಂತಿ, ಶಿಶಿರ, ಪ್ರತಿಶೋಧ, ಜಾತ್ರೆ ಮತ್ತು ತಂಬಿಲಗಳು ಒಂದಲ್ಲ ಒಂದು ರೀತಿಯಲ್ಲಿ ಪ್ರಾದೇಶಿಕ ಹಿನ್ನಲೆಯಲ್ಲಿಯೇ ಮೂಡಿಬಂದವುಗಳು. ಆದರೆ ‘ವೇಷ’ ಕಾದಂಬರಿ ಇವುಗಳ ನಡುವೆ ತುಸು ವಿಭಿನ್ನವಾಗಿ ರಚಿಸಿದ ಕಾದಂಬರಿಯಂತೆ ಕಂಡರೂ, ಇಲ್ಲಿಯ ಪಾತ್ರಗಳಿಗೆ ಯಾವುದೇ ಪ್ರಾಮುಖ್ಯತೆಯಿಲ್ಲದೆ ಕೇವಲ ಬಣ್ಣದ ‘ವೇಷ’ ಮತ್ತು ಬದುಕಿನ ವೇಷದ ಸುತ್ತಾ ಕಥೆ ಹೆಣೆದುಕೊಂಡಿದೆಯೇನೋ ಅನಿಸುತ್ತದೆ.
ಕಥೆಯ ಆರಂಭದಲ್ಲಿ ನವರಾತ್ರಿಯ ಸಮಯದಲ್ಲಿ ವಿಶೇಷವಾಗಿ ಕಾಣಿಸಿಕೊಳ್ಳುವ ವೇಷದ ಬಗ್ಗೆ ‘ಎಪಿಲೋಗ್’ನ ಹಾಗೆ ಪ್ರಸ್ತಾಪಿಸುತ್ತಾ ದಕ್ಷಿಣ ಕನ್ನಡದಲ್ಲಿ ನವರಾತ್ರಿಯಲ್ಲಿ ಕಾಣಿಸುವ ವೇಷಗಳ ಬಗ್ಗೆ ವಿವರಗಳನ್ನು ನೀಡುತ್ತಾ ಕೃತಿಕಾರರು ಕಥೆಯೊಳಗೆ ಇಳಿಯುತ್ತಾರೆ. ಇಲ್ಲಿ ಆ ಬಣ್ಣದ ವೇಷಗಳ ಬಗ್ಗೆ ಕುತೂಹಲ ಬೆಳೆಸಿಕೊಳ್ಳುವ ಓದುಗನ ನಿರೀಕ್ಷೆಯನ್ನು ಹುಸಿಯಾಗಿಸುತ್ತಾ ಕರಾವಳಿಯ ಸಂಸ್ಕೃತಿಯನ್ನು ಬಿಂಬಿಸುವ ಉಳಿದ ಬಣ್ಣದ ಲೋಕಗಳಾದ ಯಕ್ಷಗಾನ, ನಾಟಕರಂಗಗಳಿಗೂ ಪಾತ್ರಗಳ ಮೂಲಕ ಇಳಿಯುತ್ತಾ ಹೊಸದೇನೋ ಹೇಳುತ್ತಾ ಕಥೆ ಸಾಗುತ್ತದೆ. ಇಲ್ಲಿ ಮಾರ್ನಮಿಯ ಹುಲಿವೇಷದ ವಿವರಣೆಗಳನ್ನು ಬಿಟ್ಟರೆ ಮತ್ತೆಲ್ಲವೂ ನಾಟಕ ಮತ್ತು ಯಕ್ಷಗಾನದ ಬಗೆಯೇ ಹೆಚ್ಚು ಒತ್ತುಕೊಟ್ಟು ಬರೆದಂತೆ ಕಾಣಿಸುತ್ತದೆ. ‘ಧೀಂಗಿಣ’ ಯಕ್ಷಗಾನದ ಒಳಹೊರಗನ್ನು ತಿಳಿಸುವ ಸಮಾಜಮುಖಿಯಾದ ಕಾದಂಬರಿಯಾದರೂ ಅಲ್ಲಿ ನೀರ್‌ಮಾರ್ಗ ಅವರ ‘ಪೇಪರ್ ವರ್ಕ್’ ಎದ್ದು ಕಾಣಿಸುತ್ತದೆ. ‘ತಿಲ್ಲಾನ’ ಕಾದಂಬರಿಯಲ್ಲಿ ಭೂತದಕೋಲದ ವಿವರಗಳಿರುವಂತೆ ‘ವೇಷ’ದಲ್ಲಿಯೂ ಅಂತಹುದೊಂದನ್ನು ಹುಡುಕಿದರೆ ಸಿಗಲಾರದೆನ್ನುವುದು ನನ್ನ ಅನಿಸಿಕೆ. ಹಾಗಂತ ಕಾದಂಬರಿ ಏನನ್ನೂ ಹೇಳದೆ ಸುಮ್ಮನಿರುವುದಿಲ್ಲ.
ಭಕ್ತಿ ಆಂದೋಲನದ ಪರಿಪ್ರೇಕ್ಷ್ಯದಲ್ಲಿ ‘ನಳಚರಿತ್ರೆ’
-ಡಾ| ಜಿ. ಭಾಸ್ಕರ ಮಯ್ಯ
ಭಾಗ – 1
ಭಕ್ತಿ ಆಂದೋಲನವು ಶ್ರೀನಗರದಿಂದ ಕನ್ಯಾಕುಮಾರಿಯ ತನಕ ಹಾಗೂ ಗುಜರಾತಿನಿಂದ ಬಂಗಾಲದ ತನಕ ವ್ಯಾಪಿಸಿತ್ತು. ಇದು ಈ ದೇಶದ ಮಧ್ಯಯುಗದ ಅತೀ ದೊಡ್ಡ ಜನಾಂದೋಲನ.
ಸಂತರೆಂದರೆ ಯಾರು? ಕೆಲವರು ನಿರ್ಗುಣ ಪಂಥದ ಸಾಧುಗಳನ್ನು ಸಂತರೆನ್ನುತ್ತಾರೆ.ಸಂಸಾರ ತ್ಯಾಗ ಮಾಡಿದವರಿಗೆ ಮಾತ್ರ ಸಂತರೆನ್ನುವುದು ತಪ್ಪು ಕಲ್ಪನೆ. ಏಕೆಂದರೆ, ಎಷ್ಟೋ ಜನ ಸಂತರು ಗೃಹಸ್ಥರಿದ್ದರು. ಅಂತೆಯೇ ಸಂತರಲ್ಲಿ ಹಿಂದೂ-ಮುಸ್ಲಿಂ ಭೇದ ಕೂಡಾ ತಪ್ಪು. ಏಕೆಂದರೆ ಇಸ್ಲಾಂ ಮತದ ರೂಢಿವಾದದ ವಿರುದ್ಧ ಸಿಡಿದೆದ್ದ ಸಾವಿರಾರು ಮುಸ್ಲಿಂ ಸಂತರಿದ್ದರು. ಸಂತರೆಂದರೆ ಕೇವಲ ಗಂಡಸರೆಂದರೆ ಅದೂ ತಪ್ಪು. ಏಕೆಂದರೆ, ಮೀರಾ, ಅಕ್ಕಮಹಾದೇವಿ, ತಾಜ್, ಸಂಕವಿ ಯಂತವರು ಗಣನೀಯವಾಗಿ ಸಿಗುತ್ತಾರೆ.
ಅಂದರೆ ಸಂತರಲ್ಲಿ ಸನ್ಯಾಸಿ ಗೃಹಸ್ಥ, ಹಿಂದೂ, ಮುಸ್ಲಿಂ, ಗಂಡು-ಹೆಣ್ಣು, ನಿರ್ಗುಣವಾದಿ, ಸಗುಣವಾದಿ ಎಲ್ಲರೂ ಸೇರುತ್ತಾರೆ.
ಇವರು ಲೋಕಧರ್ಮ ಸಂಸ್ಥಾಪಕರು. ಪುರೋಹಿತರು ಮತ್ತು ಮೌಲ್ವಿಗಳ ಭಾಷೆ, ಸಂಸ್ಕೃತ ಮತ್ತು ಅರಬಿಯಾಗಿತ್ತು. ಆದರೆ, ಸಂತರು ಜನಭಾಷೆಯಲ್ಲಿ ಬರೆದರು.
ಇವರ ಸಾಮಾಜಿಕ ಆಧಾರ ಯಾವುದು?
ಅವರು ನೇಕಾರರು, ಬಡಗಿಗಳು, ಕೃಷಿಕರು, ಕೂಲಿಗಾರರು, ವ್ಯಾಪಾರಿಗಳು ಇತ್ಯಾದಿ ನಾನಾ ಶ್ರಮ ಆಧಾರಿತ ವೃತ್ತಿಯಲ್ಲಿರುವವರು.
ಇದು ಭಾರತೀಯ ಪರಿಪ್ರೇಕ್ಷ್ಯದ ಕೇವಲ ಒಂದು ಆಕಸ್ಮಿಕ ಘಟನೆ ಅಲ್ಲ, ಬದಲಿಗೆ ದೇಶದ ಆರ್ಥಿಕ,ಸಾಮಾಜಿಕ ಪರಿಸ್ಥಿತಿಗಳ ಅನಿವಾರ್ಯ ಉತ್ಪನ್ನ. ಆದ್ದರಿಂದಲೇ ಇದು ಒಂದು ಭಾಷೆಗಾಗಲೀ, ಒಂದು ಪ್ರದೇಶಕ್ಕಾಗಲೀ ಸೀಮಿತವಾಗಿರಲಿಲ್ಲ. ಅಂತೆಯೇ ಸಂತ ಸಾಹಿತ್ಯದ ಉಗಮವನ್ನು ಭಾರತೀಯ ಜೀವನದ ತನ್ನದೇ ಪರಿಸ್ಥಿತಿಗಳಲ್ಲಿ ಆರ್ಥಿಕ,ಸಾಮಾಜಿಕ ಪರಿಸ್ಥಿತಿಗಳಲ್ಲಿ ಹುಡುಕಬೇಕೇ ಹೊರತು ಬೌದ್ಧ ಅಥವಾ ಇಸ್ಲಾಂ ಮತಗಳ ಹಿನ್ನೆಲೆಯಲ್ಲಿ ಅಲ್ಲ.
ಸಂಸ್ಕೃತಿ ಸಂಕಥನ – 27 – ನಮಗೆ ನಾವೇ ಪರಕೀಯರು
-ರಮಾನಂದ ಐನಕೈ
1947 ಅಗಸ್ಟ್ 15ರಂದು ಭಾರತ ಪರಕೀಯರ ದಾಸ್ಯದಿಂದ ಮುಕ್ತವಾಯಿತು ಎಂದು ಭಾಷಣ ಬಿಗಿಯುತ್ತೇವೆ. ಇದು ನಿಜವೇ? ಕೇವಲ ಆಡಳಿತ ಮತ್ತು ಅಧಿಕಾರ ಹಸ್ತಾಂತರ ಮಾಡಿದಾಕ್ಷಣ ದಾಸ್ಯ ವಿಮೋಚನೆ ಆಯಿತು ಅಂತ ನಿರ್ಧರಿಸಿಬಿಡಬಹುದೇ? ವಸಾಹತು ಪ್ರಭಾವದಿಂದ ಮಲೀನವಾದ ಭಾರತೀಯ ಮನಸ್ಸುಗಳಿಗೆ ಮುಕ್ತಿ ಸಿಕ್ಕಿದೆಯೇ? ಒಂದೊಮ್ಮೆ ಸಿಗದಿದ್ದ ಪಕ್ಷದಲ್ಲಿ ಇದೂ ಒಂದು ರೀತಿಯ ಮಾನಸಿಕ ದಾಸ್ಯ ಅಲ್ಲವೇ? ಈ ಮಾಸಿಕ ಅವಲಂಬನೆಯಿಂದ ಹೊರ ಬರುವುದು ಹೇಗೆ?
ಮೊದಲು ಭಾರತದಲ್ಲಿ ಮುಸ್ಲಿಂ ವಸಾಹತುಶಾಹಿ ಆಡಳಿತ ನಡೆಯಿತು. ನಂತರ ಸುದೀರ್ಘ ಕಾಲ ಕ್ರಿಶ್ಚಿಯನ್ ವಸಾಹತುಶಾಹಿ ರಾಜ್ಯಭಾರ ನಡೆಯಿತು. ಇವರೆಲ್ಲರೂ ಸೇರಿ ಭಾರತೀಯ ಸಂಸ್ಕೃತಿಯ ಕುರಿತು ಬೇರೆಯದೇ ಆದ ಚಿತ್ರಣ ಕಟ್ಟಿಕೊಟ್ಟರು. ಭಾರತೀಯ ಚಿಂತಕರೂ ಕೂಡಾ ಅದನ್ನೇ ಪಠಿಸುತ್ತ ಬಂದರು. ಸದ್ಯ ಭಾರತವನ್ನು ಆಳುತ್ತಿರುವುದು ಇದೇ ವಸಾಹತುಶಾಹಿ ಪ್ರಜ್ಞೆ. ಈ ಕಾರಣಕ್ಕಾಗಿ ಭಾರತದಲ್ಲಿ ರಾಷ್ಟ್ರತತ್ವಗಳಿಗೂ ಜನಸಾಮಾನ್ಯರ ಅನುಭವಕ್ಕೂ ತಾಳೆಯಾಗಲಾರದು. ಅದರ ಫಲಿತಾಂಶಗಳೇ ಸಂಘರ್ಷಗಳು. ಆದ್ದರಿಂದ ನಿಜವಾದ ನಮ್ಮ ಸಂಸ್ಕೃತಿಯನ್ನು ಅರಿತು ಅದರ ಆಧಾರದ ಮೇಲೆ ನಮ್ಮ ದೇಶದ ಜನಜೀವನವನ್ನು ರೂಪಿಸುವ ತುತರ್ು ಇದೆ.
ಸಾವಿರಾರು ವರ್ಷಗಳಿಂದ ಬಾಳಿ ಬೆಳಗಿದ ಭಾರತೀಯ ಸಂಸ್ಕೃತಿ ಐರೋಪ್ಯರ ಆಗಮನದಿಂದಾಗಿ ತನ್ನ ಸ್ವರೂಪವನ್ನೇ ಬದಲಿಸಿಕೊಂಡದ್ದು ಈಗ ಇತಿಹಾಸ. ಭಾರತ ಐರೋಪ್ಯರಿಗೆ ಅರ್ಥವಾಗಲಿಲ್ಲ. ಇಲ್ಲಿನ ಸಂಸ್ಕೃತಿ ಅವರಿಗೆ ಒಗಟಾಯಿತು. ಅಷ್ಟರಲ್ಲಾಗಲೇ ಪ್ರತಿ ಸಂಸ್ಕೃತಿಗೆ ಇತಿಹಾಸ ಬರೆಯುವ ಕಲೆಯನ್ನು ಐರೋಪ್ಯರು ಕರಗತ ಮಾಡಿಕೊಂಡಿದ್ದರು. ಇತಿಹಾಸ ಮಾತ್ರ ಅವರಿಗೆ ಸತ್ಯ ದಾಖಲೆಯಾಗಿತ್ತು. ಏಕೆಂದರೆ ಸತ್ಯವೇದವಾದ ಬೈಬಲ್ಲೇ ಅವರಿಗೆ ನಿಜವಾದ ಇತಿಹಾಸ. ಭಾರತೀಯ ಇತಿಹಾಸವನ್ನು ಎಲ್ಲಿಂದ ಆರಂಭಿಸಬೇಕು? ಅವರಿಗಾದ ದೊಡ್ಡ ಸಮಸ್ಯೆ ಅದು. ಯಾವುದೇ ಭಾರತೀಯ ಪಂಡಿತರನ್ನು ಭಾರ ತೀಯ ಇತಿಹಾಸದ ಕುರಿತು ಕೇಳಿದರೆ ಅವರೆಲ್ಲ ಪುರಾಣದ ರೋಚಕ ಕಥೆಗಳನ್ನೇ ಹೇಳಿದರು. ಒಂದೇ ಕಥೆಯನ್ನು ಬೇರೆ ಬೇರೆ ಪಂಡಿತರು ಬೇರೆ ಬೇರೆ ರೀತಿಯಲ್ಲಿ ಹೇಳಿದರು. ಸಂಶಯ ಶುರುವಾಯಿತು. ಆಗ ಐರೋಪ್ಯರು ತಮ್ಮದೇ ಆದ ಕಲ್ಪನೆಯಲ್ಲಿ ಭಾರತವನ್ನು ಗ್ರಹಿಸತೊಡಗಿದರು.
ತುಂಬೆ ನಿನ್ನ ಮಹಿಮೆ ಏನೆಂಬೆ …
-ಅನಿತಾ ನರೇಶ್ ಮಂಚಿ
ವಾಮನನಲ್ಲಿ ಬಲಿ ಚಕ್ರವರ್ತಿ ‘ ನಾನಿನ್ನು ಭೂಮಿಗೆ ಬರುವ ದಿನ ಯಾವುದು ‘ಎಂದು ಕೇಳಿದಾಗ ವಾಮನನ ಉತ್ತರದಲ್ಲಿ’ ತುಂಬೆಯ ಮರದಡಿ ಮಕ್ಕಳು







