ಉಸಿರಾಟದಿಂದ ವಿದ್ಯುತ್
-ಪ್ರಶಸ್ತಿ.ಪಿ
ಉಫ್, ಉಫ್ ಅಂತ ಗುಂಡ ಊದುತಾ ಇದ್ದ.. ಏನೋ ಬರ್ತಡೇ ಬತ್ತಿ ಊದಕ್ಕೆ ಅಂತ ಈ ಮಕ್ಳಾಟದ ಕೊಳವೇಲಿ ಪ್ರಾಕ್ಟೀಸ್ ಮಾಡ್ತಿದೀಯ ಅಂತ ಅಲ್ಲಿಗೆ ಬಂದ ಟಾಂಗ್ ತಿಪ್ಪ ಅಲಿಯಾಸ್ ತಿಪ್ಪೇಶಿ. ಹೇ, ಊರಲ್ಲಿ ಅಮ್ಮ ಒಲೆಗೆ ಕೊಳವೇಲೆ ಊದೋದು ನೆನಪಾಯ್ತಾ ಮಾರ್ರೆ.. ಎಷ್ಟು ಪ್ರೀತಿ ಅಮ್ಮನ ಮೇಲೆ ಅಂತ ಬಂದ ಮಂಗಳೂರು ಮಂಜ ಅಲಿಯಾಸ್ ಮಂಜುನಾಥ. ಇಳಾ ಬಂದು ನೋಡ್ತಾಳೆ, ಗುಂಡನ ಬಾಯಲ್ಲಿ ಒಂದು ಪ್ಲಾಸ್ಟಿಕ್ ಕೊಳವೆ, ಸ್ಟ್ರಾ ಅರ್ಧಕ್ಕೆ ಕತ್ತರಿಸಿದಂಗೆ, ಅದರ ತುದಿಗೆ ಸಣ್ಣ ಪ್ಲಾಸ್ಟಿಕ್ ಬುಟ್ಟಿ. ಅದರ ಮೇಲೆ ಅಲ್ಲಲ್ಲ ಗಾಳೀಲಿ ಪ್ಲಾಸ್ಟಿಕ್ ಚೆಂಡು..ವಾ! ಬರ್ನೋಲಿ ನಿಯಮ ಅಂತ ಕೂಗಿದ್ಲು.. ಹಾಂ.. ಎಲ್ಲಿ ಗರ್ನಲ್?..ಅಂತ ತಿಪ್ಪ ಒಂದ್ರೌಂಡು ಕೂತಲ್ಲಿಂದ ಹಾರಿದ.. ಎಲ್ಲ ನಕ್ರು..ಓಯ್ ಗರ್ನಲ್ಲಲ್ಲ ಮಾರ್ರೆ.. ಅವ್ಳು ಹೇಳಿದ್ದು ಗಾಳೀಲಿ ತೇಲಾಡೋ ಬಗೆಗಿನ ಬರ್ನೋಲಿ ನಿಯಮದ ಬಗ್ಗೆ ಅಂದ ಮಂಜ..
ಹೌದು.. ಉಸಿರಾಟದಿಂದ ವಿದ್ಯುತ್ತು ತಯಾರು ಮಾಡ್ಬೋದಂತೆ. ಅದ್ನ ಓದಿದ ಮ್ಯಾಲಿಂದ ನಂಗೆ ಇದ್ರ ಮ್ಯಾಲೆ ಸ್ಯಾನೆ ಪಿರುತಿ ಹುಟ್ಟೈತೆ ಅಂದ ಗುಂಡ.. ತನ್ನ ಪ್ಲಾಷ್ ಬ್ಯಾಕ್ ಆಟಿಕೆ ತೋರಿಸುತ್ತಾ..ಹೌದೆನ್ಲಾ? ಕೆಲವರ ಬಾಯಿಂದ ವಿಚಿತ್ರ ವಾಸ್ನೆ ಬರ್ತಾ ಇರ್ತೈತೆ. ಹತ್ರಕ್ಕೆ ಹೋದವ್ರು ದೂರ ಓಡೋಗಂಗೆ.. ನಾನೂ ಕಂಡಿವ್ನಿ ಅಂದ ತಿಪ್ಪ.. ಮಂಜಂಗೆ ಮೀನು ಸಂತೆ ದಿನ ಬೆಳಿಗ್ಗೆ ಬಸ್ಸಿಗೆ ಹೋಗಿದ್ದು ನೆನ್ಪಾತು. ಇಳಾಗೆ ಪಕ್ಕದ್ಮನೆ ಆಂಟಿಯ ಬೆಳ್ಳುಳ್ಳಿ ಎಫೆಕ್ಟು ನೆನ್ಪಾತು. ಆದ್ರೆ ಅದ್ರಿಂದ ಕರೆಂಟು ತಯಾರು ಮಾಡದು ಹೆಂಗೆ ಅಂತ ಮಾತ್ರ ಅವ್ರಿಗೆ ಹೊಳಿಲೇ ಇಲ್ಲ. ಕೊನೆಗೆ ಗುಂಡಂಗೇ ಕೇಳಿದ್ರು ಅದು ಹೆಂಗೆ ಅಂತ. ಇದು ನೋಡ್ರಾ ಅಮೇರಿಕದ ವಿನಕಂನ್ಸಿನ್ ವಿಶ್ವವಿದ್ಯಾಲಯದವ್ರು ಕಂಡು ಹಿಡ್ದಿದ್ದು ಅಂತ ತನ್ನತ್ರ ಇದ್ದ ಚಿತ್ರ ತೆಗ್ದು ತೋರ್ಸಿದ. ಮತ್ತಷ್ಟು ಓದು 
(ಪರಮ್)ಆತ್ಮ ವಿಮರ್ಶೆ
– ಅಭಿನಂದನ್ ಎಸ್ ಡಿ
ಆ non-stop ಡೈಲಾಗ್ಸು, ಆ ಹಣೆ ಕೆರ್ಕೊಂಡು ನಗ್ತಾ ಮಾತೋಡೋ ಸ್ಟೈಲು(ಹೀರೋದು), ಸ್ಮೈಲು(ಹೀರೋದು), ಆ ಅನಂತ್ ನಾಗು, ಆ ಒಂದೇ ಟ್ಯೂನಿನ ಎರಡು ಹಾಡು(infact ಹಾಡಿನ ಬಿಟ್ಸು), ಹಳ್ಳೀನಲ್ಲೂ ಚಡ್ಡಿಯಲ್ಲಿ ಓಡಾಡೋ ಹೆಣ್ಮಕ್ಳು..ಎಲ್ಲಾ mix ಆಗಿ…………………………
ಕರೆಕ್ಟು!!ಮುಂಗಾರು ಮಳೆ ಹ್ಯಾಂಗೋವರ್ರು. ಅದ್ರಿಂದ ಹೊರಗೆ ನಾವೂ ಬಂದಿಲ್ಲ. ಒಂದೊಂದು ವಿಷಯದಲ್ಲಿ ಭಟ್ರೂ ಅದ್ರಿಂದ ಹೊರಗೆ ಬಂದಂಗಿಲ್ಲ.
ಹ್ಯಾಂಗೋವರ್ರಿಂದ ಹೊರಗೆ ಬಂದಿರುವ ವಿಷಯಗಳು ಯಾವ್ದಪ್ಪ ಅಂದ್ರೆ..ಹೀರೋ ಗಡ್ಡ ಶೇವ್ ಮಾಡ್ಕೊಂಡು ನೀಟಾಗಿ ಇರೋದು ( ಇಡೀ ಚಿತ್ರದಲ್ಲಿರದ ಭಟ್ಟ್ರ ಗಡ್ಡ-ಪ್ರೀತಿ ಒಂದೇ ಸೀನಲ್ಲಿ full scaleನಲ್ಲಿ ವ್ಯಕ್ತವಾಗಿದೆ), ಧಾರಳವಾಗಿ ಹೀರೋ ಕಣ್ಣಿಂದ ಸುರೀತಿದ್ದ ನೀರಿಗೆ ಇಲ್ಲಿ ಕಟ್ಟೆ ಕಟ್ಟಿರೋದು, ಹೀರೋನ imageಗೋಸ್ಕರ ಭಟ್ಟರು ಅವರ ಸ್ಟೈಲನ್ನ ಸ್ವಲ್ಪ compromise ಮಾಡ್ಕೊಂಡಿರೋದು, “ರೀ”ಕಾರಕ್ಕೆ ಬ್ರೇಕ್ ಕೊಟ್ಟಿರೋದು.
ಟೈಟಲ್ ಕಾರ್ಡಿಂದಾನೇ ಮಾತಿನ ಮಳೆ. ಪುನೀತ್ ಕಣ್ಣಾಡಿಸೋ ರೀತಿ, dialogue ಡೆಲಿವರಿ, ಮಾತಿನ ವೇಗ, ಧಾಟಿ ಎಲ್ಲದರಲ್ಲೂ ಭಟ್ಟ-ತನವಿದೆ. ಹಾಗಾಗಿ ಅವರು ಭಟ್ಟರ ಬೇರೆ ಚಿತ್ರದ ನಾಯಕರಂತೆ ನಟಿಸಿದ್ದಂತೆ ಕಂಡರೆ ಅದನ್ನ ಅನ್ಯಥಾ ಭಾವಿಸಬಾರ್ದು. ಮತ್ತಷ್ಟು ಓದು 
ಕರ್ ನಾಟಕ – ಘಟನಾವಳಿಗಳ ವೈಭವೀಕರಣ
ಜನ ಲೋಕಪಾಲ್ ಬಿಲ್ ಗಾಗಿ ಒತ್ತಾಯಿಸಿ ನಡೆದ ಭ್ರಷ್ಟಾಚಾರ ವಿರೋಧಿ ಚಳುವಳಿಯನ್ನ ಸಮೂಹ “ಸನ್ನಿ” ಅಂತ ಕೆಲ ಜನ ಕರೆದರು. ಆದರೆ ರಾಜ್ಯದಲ್ಲಿ ಕಳೆದೊಂದು ತಿಂಗಳಿಂದ ನಡೆಯುತ್ತಿರುವ ಪ್ರಹಸನ ಗಳನ್ನು ಯಾವ ಸನ್ನಿ ಅಂತಾರೆ? ನಟ ದರ್ಶನ್ ಪ್ರಹಸನದಿಂದ ಹಿಡಿದು ಯಡಿಯೂರಪ್ಪ ಕೋರ್ಟ್ ಗೆ ಅಲೆದಾಡಲು ಶುರುವಾದ ದಿನದಿಂದ ಇಂದಿನವರೆಗೆ ಬಿಟ್ಟು ಬಿಡದೆ ಹಿಂಬಾಲಿಸುತ್ತಿರುವುದು ಯಾರು? ಯಾಕೆ ಈ ವೈಭವೀಕರಣ?ನಿನ್ನೆ ಬಿಜೆಪಿಯ ಧನಂಜಯಕುಮಾರ್ ಸಿಎನ್ ಎನ್ ಐಬಿಎನ್ ವಾಹಿನಿಯಲ್ಲಿ ನಡೆದ ಚರ್ಚೆಯ ವೇಳೆ ರಾಜ್ ದೀಪ್ ಸರ್ದೇಸಾಯಿ ಅವರಿಗೆ ನೇರವಾಗಿ ಪ್ರಶ್ನೆ ಕೇಳಿದರು. ಯಡ್ಯೂರಪ್ಪನವರನ್ನು ಕವರೇಜ್ ಮಾಡಿದ ರೀತಿಯಲ್ಲಿ ನೀವು ಸೋನಿಯಾಗಾಂಧಿ ಯವರನ್ನು ಯಾಕೆ ಕವರೇಜ್ ಮಾಡಲಿಲ್ಲ
ಸೋನಿಯಾಗಾಂಧಿ ಚಿಕಿತ್ಸೆ ಗಾಗಿ ಅಮೇರಿಕದ ಒಂದು ಆಸ್ಪತ್ರೆಗೆ ದಾಖಲಾಗಿದ್ದ ಸಂಧರ್ಭದಲ್ಲಿ ಇಂತಹ ಆಸಕ್ತಿ ಯಾರು ವಹಿಸಿರಲಿಲ್ಲ. ಅವರಿಗೆ ಯಾವ ಕಾಯಿಲೆ ಇತ್ತು, ಯಾವ ಆಸ್ಪತ್ರೆ ಯಲ್ಲಿ ಚಿಕಿತ್ಸೆ ಪಡೆದರು ಈಗ ಹೇಗಿದ್ದಾರೆ ಅಂತ ಯಾವುದೇ ವಿಷಯಗಳಬಗ್ಗೆ ಚರ್ಚಿಸಲೇ ಇಲ್ಲ ಮತ್ತು ಜನರಿಗೆ ಅದರ ಬಗ್ಗೆ ಹೆಚ್ಚಿನ ಮಾಹಿತಿ ಕೊಡುವ ಪ್ರಯತ್ನ ಮಾಡಲೇ ಇಲ್ಲ. ದೇಶದ ಮಹಾನ್ನಾಯಕಿಯ ಬಗ್ಗೆ ಪ್ರಜೆಗಳಿಗೆ ತಿಳಿದುಕೊಳ್ಳುವ ಅಗತ್ಯವಿಲ್ಲ ಎಂದು ಸುಮ್ಮನಾಗಿದ್ದೀರ? ಮತ್ತಷ್ಟು ಓದು 
ಸಂತಸ…ಸಂಕಟ…ಸಂತಾಪ ಆಗುತ್ತೆ ಪರಮಾತ್ಮ….!
– ಕುಮಾರ ರೈತ
ಯೋಗರಾಜ ಭಟ್ಟರೆ ನಿಮ್ಮಗೊಂದು ಬಹಿರಂಗ ಪತ್ರ……..‘ಪರಮಾತ್ಮ’ ಚಿತ್ರದ ಬಗ್ಗೆ ನನ್ನ ಅನೇಕ ಸ್ನೇಹಿತರು ನನ್ನೊಂದಿಗೆ ಮಾತನಾಡುತ್ತಿದ್ದರು. ಈ ಪ್ರತಿಯೊಬ್ಬರು ಹೇಳುತ್ತಿದ್ದ ಮಾತು ‘ ಚಿತ್ರ, ನಿರೀಕ್ಷೆಯನ್ನು ಹುಸಿಯಾಗಿಸಿದೆ’ ಇದು ನನ್ನ ಅಭಿಪ್ರಾಯ ಕೂಡ. ಸಿನಿಮಾ ತೆರೆಕಂಡ 12 ದಿನಗಳ ಬಳಿಕ ಈ ಪತ್ರ ಬರೆಯಲು ನನ್ನೊಳಗಿನ ಒತ್ತಡವೇ ಕಾರಣ. ಮಣಿ, ಮುಂಗಾರು ಮಳೆ ಮತ್ತು ಪಂಚರಂಗಿ ಯಿಂದ ಸಹಜವಾಗಿಯೆ ನಿಮ್ಮ ಚಿತ್ರಗಳೆಂದರೆ ನಮಗೆ ಹೆಚ್ಚು ನಿರೀಕ್ಷೆ-ಕುತೂಹಲ. ಪ್ರತಿಭಾನ್ವಿತ ನಟ ಪುನೀತ್ ಅವರು ನಟಿಸುವ ಚಿತ್ರವನ್ನು ನೀವು ನಿರ್ದೇಶಿಸುತ್ತೀರಿ ಎನ್ನುವುದು ಇವೆಲ್ಲವನ್ನೂ ಹೆಚ್ಚು ಮಾಡಿತ್ತು. ಬಹು ಕಲಾತ್ಮಕವಾಗಬಹುದಾಗಿದ್ದ ಚಿತ್ರವೊಂದು ನಿರೀಕ್ಷೆಯ ಮಟ್ಟ ಮುಟ್ಟದಿರಲು ನೀವೇ ಸಂಪೂರ್ಣ ಕಾರಣಕರ್ತರು. ಇದು ಹೇಗೆ….ಎನ್ನುತ್ತೀರಾ….ಮುಂದೆ ಓದಿ…ಭಟ್ಟರೆ…ಹೋಳಿ ಹಬ್ಬದಂದು ನಮ್ಮ ಗೋಳಿನ ಕಥೆ
– ವಿಜಯ್ ಹೆರಗು
ದೇವರಾಜ ಅರಸು ರಸ್ತೆ ಯಲ್ಲಿ ನಾವಿಬ್ರು ನಡ್ಕೊಂಡು ಬರ್ತಾ ಇದ್ವಿ. ಆಗ ಇಬ್ರು ಫಾರಿನ್ನರ್ಸು (ಅಚ್ಚಕನ್ನಡದಲ್ಲಿ ಪರದೇಶಿಗಳು) ನಮ್ಮ ಬಣ್ಣದ ವೇಷ ನೋಡಿ ನಮ್ ಜೊತೆ ಫೋಟೋ ತೆಗೆಸ್ಕೊಂಡರು. ನಾವು ಅವ್ರ ಹತ್ರ ಸ್ವಲ್ಪ ಟಸ್ ಪುಸ್ ಅಂತ ಇಂಗ್ಲೀಷ್ ಮಾತಾಡಿ ಮುಂದಕ್ಕೆ ಹೊರಟ್ವಿ ಅಲ್ಲಿಂದ ಸ್ವಲ್ಪ ಮುಂದೆ ಬಂದ್ರೆ ಪ್ರಜಾವಾಣಿ ಆಫೀಸು. ಅಡ್ಡರಸ್ತೆಯಲ್ಲಿ ನಡ್ಕೊಂಡು ಹೋಗಿ ಮಹಾರಾಣಿ ಜ್ಯೂನಿಯರ್ ಕಾಲೇಜ್ ಮುಂದೆ ಬಂದ್ವಿ. ನಾನು ಆಂಬ್ರೋಸ್ ಹತ್ರ ಏನೋ ಹೇಳ್ತಾ ನಡ್ಕೊಂಡು ಹೋಗ್ತಾ ಇದ್ದೆ. ಇವನು ಹಿಂದೇನೆ ನಿಂತುಬಿಟ್ಟಿದ್ದಾನೆ. ತಿರುಗಿನೋಡಿದ್ರೆ ಮಹಾರಾಣಿ ಕಾಲೇಜ್ ಗೇಟ್ ಮುಂದೆ ನಿಂತ್ಕೊಂಡು ಯಾವ್ದೋ ಹುಡುಗಿಗೆ hoy ಹೇಳೋ ರೀತೀಲಿ ಕೈ ತೋರಿಸ್ತಾ ಇದ್ದ. ನಾನು ಹಿಂದಕ್ಕೆ ಬಂದು ಅವನ್ನ ಎಳ್ಕೊಂಡು ‘ಬಾರೋ ಮಗಾ ಇವತ್ತು ಎಲ್ಲಾ ಕಡೆ ಸ್ಕ್ವಾಡ್ ಇರ್ತಾರೆ’ ಅಂತ ಹೇಳ್ದೆ. ಅಷ್ಟರಲ್ಲಿ ಮಫ್ತಿಯಲ್ಲಿದ್ದ ಪೋಲಿಸ್ ಒಬ್ಬ ಬಂದು ನಮ್ಮಿಬ್ಬರನ್ನೂ ಹಿಡ್ಕೊಂಡ. ನಂಗೆ ಕೈಕಾಲು shake ಆಗೋಕೆ ಶುರುವಾಯ್ತು. ‘ಸರ್ ನಂಗೇನೂ ಗೊತ್ತಿಲ್ಲ ಸರ್ ಇವ್ನು ಅದ್ಯಾರೋ ಹುಡ್ಗಿಗೆ ಕೈ ತೋರಿಸ್ತಿದ್ದ, ನಾನು ಬೇಡ ಬಾ ಅಂತ ಕರದೆ ಅಷ್ಟೇ, ಬೇಕಾದ್ರೆ ಚೆಕ್ ಮಾಡ್ಕೊಳ್ಳಿ ಸರ್ ನನ್ ಹತ್ರ ಬಣ್ಣ ಕೂಡಾ ಇಲ್ಲ ಸರ್’ ಅಂತ ಪೋಲಿಸ್ ಹತ್ರ ಅಂಗಲಾಚಿದೆ. ಆಂಬ್ರೋಸ್ ‘ಆ ಹುಡ್ಗಿ ನನ್ ತಂಗಿ ಸರ್’ ಅಂತ ಸುಳ್ಳು ಹೇಳ್ದ. ‘ಆಯ್ತು ನಡೀರಿ ಸ್ಟೇಷನ್ ಗೆ ಹೋಗೋಣ, ಅದ್ನೇ ಸಾಹೇಬ್ರ ಹತ್ರ ಹೇಳಿ ಬಿಟ್ಬಿಡ್ತಾರೆ’ ಅಂತ ಹೇಳಿದ ಪೋಲಿಸ್ ಆಟೋ ಒಂದಕ್ಕೆ ನಮ್ಮಿಬ್ಬರನ್ನು ಹತ್ತಿಸಿ ತಾನೂ ಕೂತ್ಕೊಂಡ.
ಮೇಲೆ ಹಾರಿ, ನಿನ್ನ ಸೆಳೆತ ಮೀರಿ..!
-ರಂಜಿತ್
ಇದುವರೆಗೂ ಬ್ಯಾಚುಲರ್ ಅಂತ ಹಣೆಪಟ್ಟಿ ಹಾಕ್ಕೊಂಡು ಒಬ್ಬನೇ ಆರಾಮಾಗಿದ್ದೆ. ನಾನು ಬೆಂಗಳೂರಿಗೆ ಬರುವೆ, ಇಲ್ಲೇ ಇರುವೆ ಅಂತ ಸುದ್ಧಿ ಪಕ್ಕಾ ಆದ ಕೂಡಲೇ ಅಮ್ಮ ನಾನೂ ಬೆಂಗಳೂರಿಗೆ ಬರ್ತೇನೆ, ನಿನ್ನ ಜತೆ ಇರ್ತೇನೆ ಅಂದಾಗ ಖುಷಿ ಆಯ್ತು. ಅಲ್ಲಿಗೆ ನನ್ನ ರೂಮು ಜೀವನ, ಚೆಲ್ಲಾಪಿಲ್ಲಿ ಪೇಪರುಗಳ ಫ್ಲೋರಿಂಗ್, ಅಶಿಸ್ತಿನ ಅಭ್ಯಾಸಗಳಿಗೆ ತಿಲಾಂಜಲಿ ಇಡುವ ಅನಿವಾರ್ಯತೆ ಉಂಟಾಯಿತು. ಆದರೂ ಹೊತ್ತೊತ್ತಿಗೆ ಕರೆಕ್ಟಾಗಿ ಸಿಗುವ ಭಾರೀ ಭೋಜನ, ಮನೆಗೆ ಬೇಗ ಹೋಗೋಣ ಅಂತ ಅನ್ನಿಸುವಂತೆ ಮಾಡುವ ಒಂದು ಜೀವ ನಮ್ಮನ್ನು ಕಾಯುತ್ತ ಇರುತ್ತದೆಂಬ ಭಾವನೆಗಳು ಆಸೆ ಹುಟ್ಟಿಸಿದವು. ಒಡಹುಟ್ಟಿದವರೂ ನಿಷ್ಕಲ್ಮಶ, ನಿಷ್ಕಾರಣ ಪ್ರೀತಿ ತೋರದಿರುವ ಈ ಕಾಲದಲ್ಲಿ ಅದಕ್ಕೆ ನಂಬಬೇಕಾದ್ದು ಅಮ್ಮ ಒಬ್ಬರನ್ನೇ ಅಲ್ಲವೇ? ಹಾಗಾಗಿ ರೂಮು ಹುಡುಕುವುದು ಬಿಟ್ಟು ಮನೆ ಹುಡುಕುವುದಕ್ಕೆ ಶುರು ಮಾಡಿದ್ದಾಯಿತು.
ಬೆಂಗಳೂರು ಮಧ್ಯದಲ್ಲಿರುವ ಆಸೆ, ಬೆಂಗಳೂರು ಮ್ಯಾಪಿನ ಎಲ್ಲೋ ಮೂಲೆಯಲ್ಲಿರುವ ಕೆಲಸದ ಜಾಗ, ಈ ಎರಡೂ ತುಂಬ ಮಾನಸಿಕ ಸಂಘರ್ಷ ಉಂಟುಮಾಡಿದವು. ಕೊನೆಗೂ ಎಲ್ಲಾ ಆಸೆಗಳನ್ನು ಟ್ರಾಫಿಕ್ ಎಂಬ ಭೂತ ಹೆದರಿಸಿ ’ಎಲ್ಲಿ ಕೆಲಸವೋ ಅಲ್ಲೇ ವಾಸ’ ಎಂಬ ಗಾದೆ ಹುಟ್ಟಿಸಿ ಮ್ಯಾಪಿನ ಮೂಲೆಯಲ್ಲೇ ಮನೆ ಮಾಡುವಂತೆ ಪ್ರೇರೇಪಿಸಿದವು. ಮನೆ ಆಯ್ತು, ಅಮ್ಮ ಬರುವ ಮುಂಚೆ ಎಲ್ಲಾ ತಯಾರಿರಬೇಕು ಅಂತ ಅನ್ನಿಸಿ ಮನೆಗೆ ಬೇಕಾದ ಎಲ್ಲಾ ಸಾಮಾನುಗಳೂ, ಯಂತ್ರ (ವಾಷಿಂಗ್ ಮೆಶೀನು, ಗ್ಯಾಸು ಸಿಲಿಂಡರು ಇತ್ಯಾದಿ) ತಂದಿರಿಸಿದ್ದಾಯಿತು. ಅಮ್ಮನಿಗೆ ಮುಖ್ಯವಾಗಿ ಬೇಕಾಗಿದ್ದ ಟೀವಿ ಠೀವಿಯಿಂದ ಡ್ರಾಯಿಂಗ್ ರೂಮಿನಲ್ಲಿ ಕೂತಿತು. ಮತ್ತಷ್ಟು ಓದು 
ಕುರಿಯ ವಿಠಲ ಶಾಸ್ತ್ರಿ ಆತ್ಮಕಥನ : ಬಣ್ಣದ ಬದುಕು 6 – ಕುಣಿಯಲು ಕಲಿತವರೇ …
ನನ್ನ ಇನ್ನೊಬ್ಬ ಗೆಳೆಯರಾದ ಕೆ.ಪಿ. ಗೋಪಾಲಕೃಷ್ಣ ಭಟ್ಟರು ಸಲಹೆ ನೀಡುವವರೆಗೂ ಮೇಳಕ್ಕೆ ಸೇರಿ ವೃತ್ತಿಪರ ಕಲಾವಿದನಾಗುವ ಯೋಚನೆ ನನ್ನ ತಲೆಯಲ್ಲೇ ಸುಳಿದಿರಲಿಲ್ಲ.
ಕೆಲವೊಂದು ಕಡೆ ಆಟಗಳಿಂದ ಆಕರ್ಷಿತನಾದಾಗ, ಒಂದೆರಡು ವೇಷಗಳು ನನ್ನ ಮೇಲೆ ಪ್ರಭಾವ ಬೀರಿದಾಗ ‘ನಾನು ಹಾಗೆ ಕುಣಿಯಲಾಗುತ್ತಿದ್ದರೆ?’ ಎಂದುಕೊಂಡಿದ್ದೆಯೇ ಹೊರತು, ಆರು ತಿಂಗಳ ಕಾಲ ಎಡೆಬಿಡದೆ ಪ್ರತಿ ರಾತ್ರೆಯೂ ಗೆಜ್ಜೆ ಕಟ್ಟುವ ಯೋಚನೆ ಮಾಡಿರಲಿಲ್ಲ.
ಮೇಳಗಳ ನೇರ ಸಂಪರ್ಕವಿರಲಿಲ್ಲವಾದರೂ, ವೇಷ ಹಾಕುವವರು ಕೆಲವರ ಗುರುತಿತ್ತು. ವೇಷಧಾರಿಗಳ ಜೀವನದ ‘ಸೊಗಸು’ ಕಾಣಿಸಿತ್ತು.
ಅವರು ಯಾವ ದೇವಿಯ ವರಪ್ರಸಾದದಿಂದಾಗಿಯೇ ಕಲಾವಿದರಾಗಿರಲಿ, ಬೇರೇನೂ ಉದ್ಯೋಗ ದೊರೆಯದೆಯೇ ಆಟದ ಮೇಳ ಸೇರಲು ಬಂದವರು ಎನ್ನುವ ಭಾವನೆ ಜನರಲ್ಲಿ ಬೇರೂರಿತ್ತು. ಕೆಲವರಂತೂ, ಆ ಭಾವನೆಯನ್ನು ಮತ್ತೂ ಬೆಳೆಸಲು ಸಹಕರಿಸಿದ್ದರೆಂದರೆ ಹೆಚ್ಚಲ್ಲ.
ಆಜಬ್ಬ
– ಅಬ್ದುಲ್ ಸತ್ತಾರ್ ಕೊಡಗು
ಅದು ರಸ್ತೆ ಬದಿ. ಹೇಳ್ಕೊಳ್ಳೋಕೆ ಜಿಲ್ಲಾ ಹೆದ್ದಾರಿ ಆಗಿದ್ರೂ ಯಾರು ಈ ಸ್ಥಾನ ಕೊಟ್ರೋ ಗೊತ್ತಿಲ್ಲ. ದಿನಕ್ಕೆ ಮೂವತ್ತು ಗಾಡಿ ಓಡಾಡೋದೇ ಹೆಚ್ಚು. ಬರೀ ಗುಂಡಿಗಳಲ್ದೆ ರಸ್ತೆ ಏನೂ ಕಾನ್ತಿರ್ಲಿಲ್ಲ. ಒಂದು ಮಳೆಗಾಲಕ್ಕೆ ರಸ್ತೆ ಬದೀಲಿದ್ದ ಮರಗಳೆಲ್ಲಾ ಕೆಯೀಬಿಯೋರ ಇದ್ದ ಬದ್ದ ಕರೆಂಟು ಕಂಬದ ಮೇಲೆ ಬಿದ್ದಿದ್ದ್ರಿಂದ ಅವ್ರು ಆ ಮರಕ್ಕೆಲ್ಲಾ ಮೋಕ್ಷಾ ಕೊಟ್ಟಿದ್ರು. ವರ್ಷದ ಹಿಂದೆ ಕಡ್ದು ಹಾಕಿದ್ದ ಆ ಮರಗಳ ಬುಡ ಹಾಗೆ ಇದ್ದು ಈಗ ಸಂಪೂರ್ಣ ಒಣಗಿ ಹೋಗಿತ್ತು. ಮಾಗೊಡಪ್ಪನ ಅಂಗ್ಡಿಯಿಂದ ಹತ್ತಿಪ್ಪತ್ತು ಮೀಟರು ದೂರದಲ್ಲಿರೋ, ಕೆಯೀಬಿಯೋರ ಗರಗಸಾಕ್ಕೆ ಪ್ರಾಣ ಕೊಟ್ಟಿದ್ದ ಆ ಮರಗಳ ಬುಡ ನೆಲದಿಂದ ಎರಡಡಿ ಮೇಲೆ ನಿಂತಿದ್ವು. ಅವಕ್ಕೂ ಈಗ ಮೋಕ್ಷ ಸಿಕ್ಕಿತ್ತು.
ಆಜಬ್ಬನ ವಯ್ಸು ಸುಮಾರು ಅರವತ್ತು ದಾಟಿದೆ. ಬರೀ ಮೂಳೆ ಸ್ತಿತೀಗೆ ತಲುಪಿರೋ ಆಜಬ್ಬ ಹೊಟ್ಟೆ ಪಾಡಿಗೆ ರಸ್ತೆ ಬದೀಲಿದ್ದ, ಇಲ್ಲಾ ಇನ್ನೆಲ್ಲೇ ಸೌದೆ, ಕುಂಟೆ ಕಂಡರೆ ಅವನ್ನೆಲ್ಲಾ ಅವನ ಸೈಕಲ್ ಚಕ್ರದ ತಳ್ಳೋ ಗಾಡೀಲಿ ತುಂಬಿಸ್ಕೊಂಡು ಅಡ್ವಾನ್ಸಾಗಿ ಹೇಳಿದ್ದವ್ರ ಮನೆಗೆ ಸಾಗಿಸ್ತಿದ್ದ. ಒಂದು ಹೊರೆಗೆ ಹತ್ತಿಪ್ಪತ್ತು ರೂಪಾಯಿ ಜೊತೆಗೆ ಆಯಾ ಹೊತ್ತಿನೂಟ ಕೂಡ ಸಿಗ್ತಿತ್ತು. ಇತ್ತೀಚಿಗೆ ಸೌದೆ ಅಭಾವ ಉಂಟಾಗ್ತಾ ಬಂದಿದ್ರಿಂದ ರಸ್ತೆ ಬದೀಲಿದ್ದ ಒಂದೊಂದೇ ಬೊಡ್ಡೆ ಆಜಬ್ಬಂಗೆ ಸ್ವಾಹ ಆಗಿತ್ತು. ಮಾಗೊಡಪ್ಪನ ಅಂಗ್ಡಿ ಸಮೀಪ ಇರೋ ಆ ಬುಡಾನ ಕಡಿಯೋಕೆ ಆವತ್ತು ಗಾಡೀಲಿ ಗುದ್ಲಿ ಕೊಡಲಿ ಹಾಕ್ಕೊಂಡು ಬಂದಿದ್ದ ಆಜಬ್ಬ.
ಜಯಶಂಕ್ರ ಬಸ್ಸು ಆ ರಸ್ತೇಲಿ ಅದರ ಚಕ್ರಾನ ಪ್ರಾಯಾಸ ಪಟ್ಕೊಂಡು ಇಳಿಸ್ತಾ ಯೇರಿಸ್ತಾ ಬರ್ತಿದ್ದನ್ನ ಕಂಡ ಆಜಬ್ಬ ಸೌದೆ ಒಡಿಯೋದನ್ನ ನಿಲ್ಸಿ ಕೊಡಲೀನ ಗಾಡಿಗೆ ಆನಿಸಿ ಮದ್ಯಾನ ಆಗ್ತಿದೆ ಅಂತಾ ಅಂದಾಜು ಮಾಡ್ದ. ಹಟಾ ಹಿಡ್ದು ಸೌದೆ ಹೊಡಿತಿದ್ರಿಂದ ಆಜಬ್ಬಂಗೆ ಸುಸ್ತಾಗಿ ಉಸ್ರಾಟ ಹೆಚ್ಚಾಗಿತ್ತು. ಗಾಡೀಲಿ ಹಕ್ಕೊಂದ್ಬಂದಿದ್ದ ಬಾಟಲಿ ತೆರದು ನೀರು ಕುಡ್ದು ಸ್ವಲ್ಪ ಮುಖಕ್ಕೂ ಯೆರಚ್ಕೊಂಡ. ಹೊಟ್ಟೆ ಚುರುಗುಟ್ತಾ ಬೆನ್ನಿಗೆ ಅಂಟಿತ್ತು. ಉದ್ದುದ್ದ ಕೈ ಕಾಲು ಸುಕ್ಕು ಹಿಡ್ದು ಕೆನ್ನೆ, ಕಣ್ಣು ಗುಳೀ ಸೇರಿ ಸುಮಾರು ವರ್ಷ ಆದಂಗಿತ್ತು. ಸುಸ್ತು ಸ್ವಲ್ಪ ಕಡಮೆ ಆದ್ರಿಂದ ಪಂಚೆನ ಬಿಚ್ಚಿ ಮೇಲಕ್ಕೆ ಕಟ್ಕೊಂಡು ಅಮರು ಬೀಡಿ ಹಚ್ಚಿ ಕೊಡ್ಲೀನ ಕೈಗೆ ತಗೊಂಡ. ಗಾಡೀಲಿ ಈಗಾಗ್ಲೆ ಎರಡು ಹೊರೆಷ್ಟು ಸೌದೆ ತುಂಬಿತ್ತು. ಎರಡಡಿ ಇದ್ದ ಆ ಬುಡ ಈಗ ನೆಲಾ ಮಟ್ಟವಾಗಿತ್ತು. ಕೊಡ್ಲಿಯಿಂದಿನ್ನು ಆಗೋದಿಲ್ಲ ಅಂತ ಗಾಡೀಲಿದ್ದ ಗುದ್ಲಿ ತಗೊಂಡು ಬೇರ ಮಣ್ಣ ಬಿದ್ಸೋಕೆ ಶುರುವಾದ. ಮಣ್ಣ ಕೆಬರೀ ಕೆಬರೀ ಅವರ ಸುತ್ತ ಹೊಂಡಾನೇ ಸೃಷ್ಟಿ ಮಾಡ್ದ. ಇನ್ನೊಂದು ಹೊರೆ ಸೌದೆ ಆಗುತ್ತೆ ಅಂತ ಅಂದಾಜು ಮಾಡ್ತಿರೋವಾಗ ಹೊಟ್ಟೆ ಏನಾದ್ರೂ ಬೇಕು ಅಂತಿತ್ತು. ಕೊಡ್ಲಿ ಗುದ್ಲೀನ ಅಲ್ಲಿತ್ತು ಸೀದಾ ಮಾಗೊಡಪ್ಪನ ಅಂಗ್ಡಿ ಕಡೆ ಹೋದ.
ಬೆಂಗಳೂರು ಮಳೆಯಲ್ಲಿ…
– ರಾಕೇಶ್ ಶೆಟ್ಟಿ
(ನಿನ್ನೆ ಸಂಜೆಯಿಂದ ಎಡಬಿಡದೆ ಸುರಿದ ಮಳೆಯಲ್ಲಿ ನೆನೆಯುತ್ತ ಮತ್ತೆ ನೆನಪಾಗಿದ್ದು ’ಬೆಂಗಳೂರು ಮಳೆಯಲ್ಲಿ’ ಲೇಖನ.ನಿಲುಮೆಯ ಓದುಗರಿಗಾಗಿ ಈ ಲೇಖನ)
ಎಂದಿನಂತೆ ಊಟಕ್ಕೆ ಅಂತ ಮೆಸ್ ಕಡೆ ಹೋದ್ರೆ ಅವ್ರು ಬಾಗಿಲು ಹಾಕಿದ್ರು.ಸಮಯ 10 ಆಗಿತ್ತು.ಅಲ್ಲೇ ಹತ್ತಿರದಲ್ಲೇ ಇರೋ ಇನ್ನೊಂದು ಹೋಟೆಲ್ ಕಡೆ ಹೋಗೋಣ ಬಾರೋ ಅಂದೇ ಶ್ರೀಕಾಂತಂಗೆ.ಹೇಯ್ ಅಲ್ ಬೇಡ್ವೋ ರಾಮಯ್ಯ ಕಾಲೇಜ್ ಹತ್ರ ಇರೋ ಪಂಜಾಬಿ ಮೆಸ್ಗೆ ಹೋಗೋಣ ಅಂದ.ಸರಿ ಅಂತ ಹೊರಟ್ವು.ಬಹುಶ ಅರ್ಧ ದಾರಿ ಹೋಗಿದ್ವು.ಹೊಟ್ಟೆ ಚುರು ಚುರು ಅನ್ನೋಕೆ ಶುರು ಆಗಿತ್ತು.ಶುರುವಾಯ್ತು ಭರ್ಜರಿ ಗಾಳಿ,ಮಳೆ.ಅಲ್ಲೇ ಒಂದು ಕಡೆ ಹೋಗಿ ನಿಂತು ಮಳೆ ಯಾವಾಗ ನಿಲ್ಲುತ್ತೋ ಅಂತ ಕಾಯ್ತಾ ಇದ್ವಿ.೧ ಗಂಟೆ ಕಳೆದರು ಮಳೆ ನಿಲ್ಲೋ ಹಾಗೆ ಕಾಣಲಿಲ್ಲ. ‘ಲೇ,ಇಲ್ಲೇ ನಿಂತ್ರೆ ಊಟ ಸಿಗೋಲ್ಲ,ಬಾ ಮಳೆಲಿ ಹೋಗಿ ಊಟ ಇದ್ರೆ ಪಾರ್ಸೆಲ್ ತಗೊಂಡು ಹೋಗೋಣ’ ಅಂದೇ.ಸರಿ ಅಂತೇಳಿ ನಾವ್ ಅಲ್ಲಿ ಹೋಗೋ ಅಷ್ಟೊತ್ತಿಗೆ ಅವ್ರು ಬಾಗಿಲು ಹಾಕಿದ್ರು. ಆಗಲೇ ೧೧.೨೦ ಆಗಿತ್ತು ಎಲ್ಲರು ಬಾಗಿಲು ಹಾಕಿಯಾಗಿತ್ತು.ಊಟ ಸಿಗ್ಲಿಲ್ಲ,ಸರಿ ವಾಪಸ್ ರೂಮ್ಗೆ ಹೋಗೋಣ ಅಂತ ಹೊರಟ್ರೆ,ರಸ್ತೆ ಅನ್ನೋದು ನದಿಯ ರೂಪ ಪಡೆದಿತ್ತು.’ಬೆಂಗಳೂರಿನ ರಸ್ತೆಗಳಲ್ಲಿ ಅದೆಲೆಲ್ಲಿ ಓಪನ್ ಮ್ಯಾನ್ ಹೋಲ್ಗಳಿವೆಯೋ ಮೊದ್ಲೇ ಗೊತ್ತಾಗೊಲ್ಲ.ಈಗ ಮಳೆ ನೀರಿಗೆ ರಸ್ತೇನೆ ಕಾಣ್ತಾ ಇಲ್ಲ,ಹುಶಾರೋ ಲೋ, ಎಲ್ಲಾದರು ಗುಂಡಿಗೆ ಬಿದ್ಬಿಟ್ಟಿಯಾ,ಕಡಿಮೆ ಅಂದ್ರು ೭೦ ಕೆ.ಜಿ ಇದ್ದೀಯ ನಾನ್ ಅಂತು ಹೋದ್ರೆ ಹೋದೆ ಅಂತ ಬಿಟ್ಬಿಡ್ತೀನಿ’ ಅಂದೇ ಶ್ರೀಕಾಂತಂಗೆ. ನೀನ್ ಬಿದ್ರೆ ನಾನು ಹಂಗೆ ಮಾಡ್ತೀನಿ ಮಗನೆ ಅಂದ.ಕಡೆಗೆ ಈ ಟೆನ್ಶನ್ ಬೇಡ ಮಧ್ಯ ರಸ್ತೆಲೆ ನಡೆಯೋಣ ಅಂತೇಳಿ ನಿರ್ಧರಿಸಿ ಹೋಗ್ತಾ ಇದ್ರೆ ಕಿಟಕಿಯಿಂದ ಇಣುಕಿ ನೋಡೋ ಜನ ಇಂತ ಕೆಟ್ಟ ಮಳೆಯಲ್ಲಿ ಅದು ಅಂತ ರಸ್ತೆಯಲ್ಲಿ ಹೋಗೋ ನಮ್ಮನ್ನ ಮೆಂಟಲ್ಗಳು ಅನ್ಕೊಂಡಿದ್ರೋ ಏನೋ 🙂
ವಾಕ್ಪಥ ಹಾಗು ಪುಳಿಯೋಗರೆ ಪಾಯಿಂಟ್
೨೨ ಸೆಪ್ಟೆಂಬರ್, ೨೦೧೧ ನನ್ನ ಸ್ನೇಹಿತನಿಂದ ಒಂದು ವಾಣಿಜ್ಯ-ಸಮಾಲೋಚನೆಗಾಗಿ ಕರೆಬಂದಾಗ, ಅದು ೨೪ರ ಸೆಪ್ಟೆಂಬರ‍್ಗೆ ನಿಗದಿಯಾಯಿತು. ೨೫ನೇ ಭಾನುವಾರ
ಚುಂಚನಗಿರಿಯಲ್ಲಿ ನಡೆಯಲಿರೋ ಕಾರ್ಯಕ್ರಮಕ್ಕೆ ಇನ್ನೊಬ್ಬ ಸ್ನೇಹಿತನಿಂದ ಬಂದ ಕರೆಗೆ ತುಂಬು ಆಸಕ್ತಿಯಿಂದಲೇ ಒಪ್ಪಿಗೆ ಇತ್ತಾಗಿತ್ತು. ೨೪ರ ಬೆಳಿಗ್ಗೆ ನಾ ಬೆಂಗಳೂರಿಗೆ ಬಂದಿಳಿದು, ಮಧ್ಯಾಹ್ನದ ಸಮಾಲೋಚನೆಯ ತಯ್ಯಾರಿಯಲ್ಲಿದ್ದಾಗ, ತಲೆ ಇನ್ನೇನೋ ಯೋಚಿಸಲಾರಂಭಿಸಿತ್ತು. ಮನಸ್ಸು ಹೊಯ್ದಾಡುತ್ತಾ, ಗೊಣಗುತಿತ್ತು.. ಸದ್ಯದಲ್ಲೆಲ್ಲೋ, ವಾಕ್ಪಥ ಕಾರ್ಯಕ್ರಮ ಇದೆ, ಎಂಬುದಾಗಿ. ಮನಸ್ಸಿನೊತ್ತಡ ತಡೆಯಲಾರದೇ, ಫೇಸ್‌ಬುಕ್‌ನ “ಇವೆಂಟ್ಸ್” ತೆರೆದು ನೋಡಿದಾಗ, ಆಶ್ಚರ್ಯ, ಆಘಾತ, ಸಂತೋಷ, ಎಲ್ಲಾ ಒಟ್ಟೊಟ್ಟಿಗೆ..! ನನ್ನ ಮನಸ್ಸಿನ ಹೊಳಹಿನಂತೆ ನಂತರದ ದಿನವೇ (೨೫/೦೯/೨೦೧೧) ವಾಕ್ಪಥದ “ಏಳನೇ ಹೆಜ್ಜೆ”. ಈ ವಿಚಾರ ಆಶ್ಚರ್ಯಕ್ಕೆ ಕಾರಣವಾಗಿತ್ತು. ಯಾವಾಗಲೂ ಕಾಯುತ್ತಿದ್ದ ಈ ವಿಶೇಷ ಕಾರ್ಯಕ್ರಮ ಅಚಾನಕ್ಕಾಗಿ ನನ್ನ ಮುಂದೆ ತೆರೆದುಕೊಂಡಿದ್ದು, ನಿಜಕ್ಕೂ ನನಗೆ ಸಂತೋಷದೊಂದಿಗೆ ಅಚ್ಚರಿಗೊಳಿಸಿತ್ತು. ಆದರೆ ನನ್ನ ಸ್ನೇಹಿತನಿಗೆ ಚುಂಚನಗಿರಿಯ ಕಾರ್ಯಕ್ರಮಕ್ಕೆ ಬರುವೆ ಅಂದದ್ದು, ವಾಕ್ಪಥದಲ್ಲಿ ಭಾಗವಹಿಸಲು ಅಡ್ಡಿಮಾಡುತ್ತಲ್ಲಾ ಎಂಬ ಆಘಾತಕ್ಕೆ ಕಾರಣವಾಯಿತು.





