ತಾಯಿಯೋ ತಂದೆಯೋ…?
ಪ್ರವೀಣ್ ಬೆಂಗಳೂರು
ಕೆಲಸ ಮುಗಿಸಿ ಹೊರಡುವ ಹೊತ್ತಾಯಿತು, ಹೊರ ಬಂದು ನೋಡಿದರೆ ಸಂಜೆಗತ್ತಲು. ಇನ್ನೇನು ಆಗಲೋ ಈಗಲೋ ಭೋರ್ಗರೆವ ಮಳೆಯ ಸೂಚನೆ ಆದರೂ ಲೆಕ್ಕಿಸದೆ ಹೊರಟೆ; ಹತ್ತು ಹೆಜ್ಜೆ ಹಾಕಿ ಮುನ್ನಡೆದೆ, ಮಳೆ ಸುರಿದೇ ಬಿಟ್ಟಿತು. ತಕ್ಷಣವೇ ನನ್ನ ಸೂಟ್‌ಕೇಸ್‌ನಲ್ಲಿದ್ದ ರೈನ್‌ಕೋಟ್ ತೆಗೆದು ಹಾಕಿಕೊಳ್ಳುವ ಹೊತ್ತಿಗೆ ನನೆದು ತೊಪ್ಪೆಯಾಗಿ ಹೋಗಿದ್ದೆ. ಆದರೂ ಧರಿಸಿ ನಡೆಯುತ್ತಲೇ ಹೊರಟೆ. ಮಾರ್ಗ ಮಧ್ಯದಲ್ಲಿ ಶಾಲೆಯಿಂದ ಹೊರಟ ಮಗು ಮಳೆಯಿಂದ ಅಲ್ಲಿಯೇ ಬಳಿಯಿದ್ದ ಅಂಗಡಿಯ ಮುಂದೆ ಸ್ವಲ್ಪವೇ ನೆನೆಯುತ್ತಾ ನಿಂತಿದ್ದನ್ನು ಕಂಡೆ. ಮಗು ಚಳಿಯಿಂದ ನಡುಗುತ್ತಿತ್ತು. ನಾನು ಮಗುವಿನ ಬಳಿಗೆ ಹೋಗುವಷ್ಟರಲ್ಲಿ ಮಗುವಿನ ತಂದೆ ಬಂದು ಮಗುವನ್ನು ಬಿಗಿದಪ್ಪಿ ಹಿಡಿದು ಭುಜಕ್ಕೆ ಆನಿಸಿಕೊಂಡು ಹೊರಟರು. ಹಿಂದಿನಿಂದ ಮಗು ನನ್ನನ್ನು ನೋಡಿ ಸುಂದರವಾದ ನಗೆಯೊಂದ ಬೀರಿತು. ಆಗಲೇ ನನಗನ್ನಿಸಿತು ತಾಯಿಯ ಬಿಸಿಯಪ್ಪುಗೆಯಷ್ಟೇ ಮನಕ್ಕೆ ಆಹ್ಲಾದ ನೀಡುವುದು ತಂದೆಯ ಎದೆಯಪ್ಪಿಗೆ ಎಂದು. ಎಲ್ಲಿಯೋ ಓದಿದ್ದ ನೆನಪು ತಂದೆಯು ಎದೆಗೆ ಅಪ್ಪಿಕೊಂಡು ಮಗುವನ್ನು ಮಲಗಿಸುವಾಗ ಆ ಮಕ್ಕಳು ಬೇಗೆ ಮಲಗುತ್ತವೆ ಕಾರಣ ತಂದೆಯ ಹೃದಯ ಬಡಿತ ತನ್ನ ಮಗುವಿನ ಹೃದಯ ಮಿಡಿತಕ್ಕೆ ಕೊಂಡಿಯಂತಿರುತ್ತದೆ.
ಮತ್ತಷ್ಟು ಓದು 
ಬಡವರ ಬದುಕಿಗೆ ‘ಅರ್ಥ’ವೇ ಇಲ್ವಾ?
-ಮರಳಿಧರ ದೇವ್
ದಿನಕ್ಕೆ ಒಬ್ಬ ವ್ಯಕ್ತಿ ಕೇವಲ ೨೫ ರೂಪಾಯಿಗಳನ್ನು ಗಳಿಸಿದರೆ ಸಾಕಂತೆ, ಇದಕ್ಕಿಂತ ಹೆಚ್ಚಿಗೆ ಖರ್ಚು ಮಾಡುವವರು ಬಡವರಲ್ಲವಂತೆ. ಈ ರೀತಿ ಮೂರ್ಖತನದ ಹೇಳಿಕೆ ದಾಖಲು ಮಾಡಿರುವುದು ಯೋಜನಾ ಆಯೋಗ. ಒಬ್ಬ ವ್ಯಕ್ತಿಯ ದೀನದ ಖರ್ಚು ೨೫ ರೂಪಾಯಿಗಳಿಗಿಂತ ಹೆಚ್ಚಿದ್ದರೆ ಅವರು ಸರಕಾರದಿಂದ ಯಾವುದೇ ವಿಶೇಷ ಅನುದಾನ ಪಡೆಯಲು ಅರ್ಹರಲ್ಲ.
ಈ ರೀತಿಯ ವರದಿ ತಯ್ಯಾರಿಸುವವರಿಗೆ ದೇಶದ ಹಣದುಬ್ಬರದ ಹಾಗು ದೈನಂದಿನ ಖರ್ಚುಗಳಿಗೆ ಬೇಕಾಗಿರುವ ಹಣದ ಬಗ್ಗೆ ಅರಿವಿದೆಯೇ? ಇಂತಹ ಜನರು ಯೋಜನಾ ಅಯೋಗದಲ್ಲಿರೋದ್ರಿಂದಾನೆ ದೇಶದಲ್ಲಿ ಹಣದುಬ್ಬರ ಗಗನಕ್ಕೆ ಏರ್ತಾ ಇದ್ರೂ ಸರಕಾರಗಳು ಏನು ಆಗೇ ಇಲ್ಲ ಅನ್ನೋ ರೀತಿ ತೂಕಡಿಸುತ್ತಾ ಕೂತಿವೆ. ಅಲ್ಲ ಸ್ವಾಮಿ ಪ್ರತಿ ತಿಂಗಳಿಗೊಮ್ಮೆ ಪೆಟ್ರೋಲ್ ದರವನ್ನು ಮನಸೋ ಇಚ್ಚೆ ಹೆಚ್ಚಿಸಿ ಎಲ್ಲ ಪದಾರ್ಥಗಳ ಬೆಲೆಯನ್ನು ನಿಯಂತ್ರಣಕ್ಕೆ ಬಾರದೆ ಹಾಗೆ ಮಾಡಿ ಈಗ ಬರಿ ೨೫ ರೂಪಾಯಿಗಳಲ್ಲಿ ನಿಮ್ಮ ಜೀವನ ನಡೆಸಬೇಕು ಅಂತ ಆಯೋಗದ ವರದಿ ಹೇಳಿದ್ರೆ ಜನ ಸಾಮಾನ್ಯರು ಎಲ್ಲಿಗೆ ಹೋಕ್ಬೇಕು? ಮತ್ತಷ್ಟು ಓದು 
ಕಳ್ಳತನವೊಂದು ಬಿಟ್ಟು ಎಲ್ಲ ಕೆಲ್ಸ ಬರುತ್ತೆ ಸ್ಸಾರ್. .
-ಕಾಲಂ೯
ಮಾಧ್ಯಮದಿಂದ ಬಹುದೂರದಲ್ಲಿ ಆಗಿಹೋದ ಸಂಭಾಷಣೆಯಿದು. ನಮ್ಮ ರಸ್ತೆಯ ಸ್ವಚ್ಛತೆಯ ಹೊಣೆಹೊತ್ತ ಪೌರಕಾರ್ಮಿಕ ನಾಗರಾಜನೊಂದಿಗೆ ಅದೊಂಥರಾ ದೋಸ್ತಿ. ಬೆಳಗಿನ ವಾಕಿಂಗ್ – ಅವನೆಲ್ಲೋ ಎದುರಾಗಿ `ನಮಸ್ಕಾರ ಸ್ಸಾರ್’ ಎಂಬ ಮುಗುಳ್ನಗೆ ಧಕ್ಕದೆ ಮುಗಿಯೋದಿಲ್ಲ. ಮಾತಿಗೇನಾದರೂ ನಿಂತರೆ ಅನೇಕ ಸಲ ಅವನು ಹೊಸ ಹೊಳಹುಗಳನ್ನು ಸರಳವಾಗಿ ದಾಟಿಸಿಬಿಡ್ತಾನೆ. ಮೊನ್ನೆ ಆದದ್ದು ಹಾಗೆಯೇ.
ನಾವಿರೋ ಕಟ್ಟಡದ ಡ್ರೈನೇಜ್ ಬ್ಲಾಕ್ ಆಗಿ ಬದುಕು ಅಸಹನೀಯವೆನಿಸಲು ಆರಂಭವಾಗಿತ್ತು. ಹೀಗಾಗಿದೆ ಸ್ವಲ್ಪ ನೋಡು ಬಾ ಮಾರಾಯ ಅಂತಂದದ್ದೇ ತಡ ನಾಗರಾಜ ಬಂದ. ಸಮಸ್ಯೆ ಗಂಭೀರವಾಗೇ ಇದೆ, ಆಪರೇಷನ್ನೇ ಮಾಡಬೇಕಿದೆ ಎಂಬುದನ್ನು ಗಮನಕ್ಕೆ ತಂದು ಕೆಲಸ ಶುರು ಹಚ್ಚಿಕೊಂಡ. ಮತ್ಯಾವಗಲೋ ರಿಪೇರಿ ನಡೆದ ಜಾಗಕ್ಕೆ ಹೋದೆ. ಪೈಪ್‌ಲೈನ್ ಒಡೆದು ಹೋಗಿತ್ತು. ಅದನ್ನು ರೀಪ್ಲೇಸ್ ಮಾಡುತ್ತಾ ಬಾಣಲೆಯಲ್ಲಿ ಕಲಸಿದ ಸಿಮೆಂಟು ಇಟ್ಟುಕೊಂಡು ಕೆಲಸ ಮಾಡುತ್ತಿದ್ದ. ಹಾಗೇ ಕೇಳಿದೆ `ನಾಗರಾಜಣ್ಣ ನಿಂಗೆ ಗಾರೆ ಕೆಲ್ಸನೂ ಬರುತ್ತಾ?’. ಆಳದಲ್ಲೆಲ್ಲೋ ಹುದುಗಿಸಿದ್ದ ತಲೆಯನೆತ್ತಿ ನಾಗರಾಜ ಹೇಳಿದ `ಕಳ್ಳತನವೊಂದು ಬಿಟ್ಟು ಎಲ್ಲ ಕೆಲ್ಸ ಬರುತ್ತೆ ಸ್ಸಾರ್. . . ’ ದೀರ್ಘವಾಗಿ ಉಸಿರೆಳೆದುಕೊಳ್ಳುವ ಸರದಿ ನನ್ನದಾಗಿತ್ತು. ಕಳ್ಳತನದ ಹೊಸ ಅಧ್ಯಾಯಗಳನ್ನು ತೆರೆದು ಕಂಬಿ ಎಣಿಸುತ್ತಿರುವ ಯಾರ‍್ಯಾರೋ ಕಣ್ಣ ಮುಂದೆ ಬಂದು ಹೋದರು. ಸುದ್ದಿಗಾಗಿ ಕಾಸಿನ ಮಾಧ್ಯಮದ ಜಾಯಮಾನವೂ ಕಣ್ಣೆದುರು ಬಂದು ಹಿಂಡಿ ಹಾಕಿತು. ಮತ್ತಷ್ಟು ಓದು 
ಸಂಸ್ಕೃತಿ ಸಂಕಥನ – ೬
– ರಮಾನಂದ ಐನಕೈ
ಸಂಶೋಧನೆ ಅಂದರೆ ಏನು? ಇತ್ತೀಚಿನ ದಿನಗಳಲ್ಲಿ ಯಾರಾದರೂ ಸಂಶೋಧನೆ ಮಾಡಿದ್ದಾರೆ ಅಥವಾ ಪಿ.ಎಚ್.ಡಿ. ಪದವಿ ಪಡೆದಿದ್ದಾರೆಂದರೆ ನಗು ಬರುತ್ತದೆ. ನೌಕರಿ ಪಡೆಯಲು ಅಥವಾ ನೌಕರಿಯಲ್ಲಿ ಬಡ್ತಿ ಪಡೆಯಲು ಈ ಪಿ.ಎಚ್.ಡಿ. ಅರ್ಹತೆಯಾಗುತ್ತದೆಯೆಂಬ ಕಾರಣಕ್ಕೆ ಮಾಡುತ್ತಾರೆಯೇ ವಿನಾ ಆಸಕ್ತಿಗಾಗಿ ಅಲ್ಲ. ನಮ್ಮ ವಿಶ್ವವಿದ್ಯಾಲಯಗಳ ಸಂಶೋಧನಾ ವಿಭಾಗಗಳಿಗೆ ಈ ದುರ್ಗತಿ ಬಂದಿದೆ. ಹಣ ಕೊಟ್ಟರೆ ವಿಶ್ವವಿದ್ಯಾಲಯಗಳ ಪ್ರಾಧ್ಯಾಪಕರೇ ಪ್ರಬಂಧ ಬರೆದು ಪದವಿ ಕೊಡುತ್ತಾರೆ. ಪಿ.ಎಚ್.ಡಿ. ಎಂಬುದು ವ್ಯಾಪಾರವಾಗಿದೆ. ಸಂಶೋಧನೆಗೆ ಆಯ್ದುಕೊಳ್ಳುವ ವಿಷಯವಾದರೂ ಎಂಥದ್ದು. ಯಾರಿಗೂ ಪ್ರಯೋಜನವಾಗದ ವಿಷಯ. ಸಂಶೋಧನಾ ಪ್ರಬಂಧವನ್ನು ನೆಟ್ಟಗೆ ಮೂರು ಜನರು ಓದಲಾರರು. ಈ ರೀತಿಯ ಸಂಶೋಧನೆಗಳಿಂದ ಅಥವಾ ಸಂಶೋಧಕರಿಂದ ದೇಶಕ್ಕೆ ಏನಾದರೂ ಪ್ರಯೋಜನ ಇದೆಯಾ?
ಸುಮಾರು ಹತ್ತು ವರ್ಷಗಳ ಹಿಂದಿನ ಘಟನೆ. ಶಿರಸಿಯ ಗಣಪತಿ ದೇವಸ್ಥಾನದ ಹತ್ತಿರವಿರುವ ಶಂಕರಹೊಂಡದ ಸ್ವಚ್ಛತಾ ಕಾರ್ಯಕ್ರಮ ನಡೆಯತ್ತಿತ್ತು. ಆಗ ಒಂದು ಪುಟ್ಟ ವಿಗ್ರಹ ಸಿಕ್ಕಿತು. ಕ್ಷಣಾರ್ಧದಲ್ಲಿ ಇಡೀ ಶಿರಸಿ ನಗರ ವ್ಯಾಪಿಸಿತು ಈ ಸುದ್ದಿ. ಅಷ್ಟರಲ್ಲಿ ಇತಿಹಾಸ ಸಂಶೋಧಕನೊಬ್ಬ ಅಲ್ಲಿಗೆ ಬಂದ ಆತ ಆಗಷ್ಟೇ ಅರೆಕಾಲಿಕ ಇತಿಹಾಸ ಉಪನ್ಯಾಸಕನಾಗಿ ಸೇರಿದವ. ಆಗಲೇ ಹೆಸರಿನ ಹಿಂದೆ ಪ್ರೊಫೆಸರ್ ಎಂದು ಬಳಸುತ್ತಿದ್ದ. ಆತ ಈ ವಿಗ್ರಹವನ್ನು ಕೂಲಂಕಶವಾಗಿ ಪರಿಶೀಲಿಸಿ ಅದರ ಕುರಿತು ಪತ್ರಿಕಾ ಪ್ರಕಟಣೆ ನೀಡಿದ.
ನಿನ್ನೆ ಈಕ್ವಿನಾಕ್ಸ್…!
– ಹಂಸಾನಂದಿ
ನೆನ್ನೆ ಗೆಳೆಯರೊಡನೆ ಮಾತಾಡ್ತಾ ಹೇಳ್ದೆ – “ಇವತ್ತು ಈಕ್ವಿನಾಕ್ಸ್” ಅಂತ.
“ಹಂಗಂದ್ರೇನು” ಅಂದರು ಅವರು.
ಮತ್ತೆ ಶುದ್ಧ ಸಂಸ್ಕೃತದಲ್ಲಿ “ಇವತ್ತು ಶರದ್ ವಿಷುವ” ಅಂತ ಹೇಳ್ಬಹುದಿತ್ತು – ಅದರ ಬದಲು ಕೇಳಿದರೆ, ತಾನಾಗೇ ಅರ್ಥ ಆಗೋ ಅಂತಹ ಪದ ಯಾಕೆ ಹೇಳ್ಬಾದ್ರು ಅನ್ನಿಸಿ “ಸಮಹಗಲಿರುಳು” ಅಂದೆ.
ಪದದಲ್ಲೇ ಅರ್ಥ ಬಂತಲ್ಲ? ಅಂದ್ರೆ ಇವತ್ತು ರಾತ್ರಿ ಮತ್ತೆ ಹಗಲು ಒಂದೇ ಸಮ ಇರುತ್ತವೆ. ಬೆಂಗಳೂರು (ಅಥವಾ ಕರ್ನಾಟಕದಲ್ಲಿ ಯಾವ ಜಾಗ ಆದರೂ) ಭೂಮಧ್ಯರೇಖೆಗೆ ಬಹಳ ದೂರ ಇಲ್ಲದೇ ಇರೋದ್ರಿಂದ ಚಳಿಗಾಲಕ್ಕೂ ಬೇಸಿಗೇಗೂ ದಿನ ರಾತ್ರಿಗಳ ಅವಧಿ ತುಂಬಾ ಬದಲಾಗೋದಿಲ್ಲ. ಆದ್ರೆ, ಭೂಮಧ್ಯ ರೇಖೆಯಿಂದ ಹೆಚ್ಚು ಹೆಚ್ಚು ಉತ್ತರಕ್ಕೆ (ಅಥವಾ ದಕ್ಷಿಣಕ್ಕೆ) ಹೋದಹಾಗೆ ಕಾಲ ಬದಲಾದ ಹಾಗೆ ಹಗಲು ಹೆಚ್ಚಾಗೋದೂ, ಅಥವಾ ರಾತ್ರಿ ಹೆಚ್ಚಾಗೋದೋ ಸುಲಭವಾಗಿ ಗೊತ್ತಾಗುತ್ತೆ.
ಕುರಿಯ ವಿಠಲ ಶಾಸ್ತ್ರಿ ಆತ್ಮಕಥನ : ಬಣ್ಣದ ಬದುಕು 3 – ನಜ್ಜು ಗುಜ್ಜಾಗುವ ಪ್ರಹ್ಲಾದ
ಮನೆಯಲ್ಲೊಂದು ದಿನ ಯಾವುದೋ ಶುಭಕಾರ್ಯ ನಿಮಿತ್ತ ನೆರೆಕರೆಯವರು ಸೇರಿದ್ದರು. ನಮ್ಮ ಊರಿನತ್ತ ಯಾವುದೇ ಕಾರ್ಯಕ್ಕಾಗಿ ಭೇಟಿ ಕೊಟ್ಟರೆ ‘ಉಂಡೊಡನೆ ಊರು ಬಿಡುವ’ ಕ್ರಮವಿರುವುದಿಲ್ಲ.
ಆ ದಿನ ಸಂಜೆಯ ಹೊತ್ತಿಗೆ ತೆರಳುವವರು ತೆರಳಿದ ತರುವಾಯವೂ, ಕೆಲವರು ಸಮೀಪದವರು ಉಳಿದಿದ್ದರು. ಬಂಧುಗಳೂ ಇದ್ದರು.
ಊರಿನ ಹಲವು ಸಮಸ್ಯೆಗಳ, ಜನರ ನಡೆನುಡಿಯ ವಿಚಾರಗಳ ಚರ್ಚೆ ಮಾತುಕತೆಗಳಲ್ಲಿ ಆಗುತ್ತಿತ್ತು. ಅಂತೆಯೇ ಮಾತು ಮುಂದುವರಿದು ತಾಳಮದ್ದಳೆಯ ಕಡೆಗೂ ತಿರುಗಿತು. ಬರಿಯ ಮಾತಿನಿಂದ ಪಾತ್ರ ಪೋಷಣೆಯಾಗುವುದಿಲ್ಲ, ಸಜೀವ ಚಿತ್ರಣವಾಗುವುದಿಲ್ಲ ಎಂದು ಒಬ್ಬರು ಹೇಳಿದರು.
”ಪಾತ್ರ ಚಿತ್ರಣ ಬೇಕಾದರೆ ಬಯಲಾಟವನ್ನೇ ನೋಡಬೇಕು” ಎಂದರು ಇನ್ನೊಬ್ಬರು.
ಮಳೆಗಾಲ ಕಳೆದಿದ್ದು, ಮೇಳಗಳು ಹೊರಡುವುದಕ್ಕೆ ಇನ್ನೂ ಸಮಯವಿದ್ದುದಾಗಿ ನನ್ನ ನೆನಪು.
ಮತ್ತಷ್ಟು ಓದು 
ಅವನಲ್ಲಿನ ಅವಳ ಕಥೆ
-ಕಾಲಂ ೯
ಅವಳು? ನಿಜಕ್ಕೂ ಅವಳೇನಾ?
ಈ ಅವನಲ್ಲಿನ ಅವಳ ಕಥೆಯೇ – ಬದುಕು ಬಯಲು – ಹಿಜ್ಡಾ ಒಬ್ಬಳ ಆತ್ಮಕಥೆ.
ನಾಲ್ಕು ವರ್ಷದ ಹಿಂದಿನ ಮಾತು. ಗಾಂಧಿಬಜಾರಿನ ’ಅಂಕಿತ’ದಲ್ಲಿ ಗೆಳೆಯನೊಬ್ಬನ ಬರುವಿಕೆಗೆ ಕಾಯ್ತಾ ಇದ್ದೆ ಪುಸ್ತಕಗಳನ್ನು ತಡವುತ್ತಾ. . . . ಸಂಜೆ ೪ ರ ಸಮಯ, ಕಂಬತ್ತಳ್ಳಿ – ಪ್ರಭಾ ಇಬ್ಬರೂ ಇರಲಿಲ್ಲ. ಗಲ್ಲಾದಲ್ಲಿ ಕೂತ ಸಹಾಯಕ ಹುಡುಗಿಯೊಬ್ಬಳು ಕಿವಿಗೆ ಫೋನ್ ಹಚ್ಚಿಕೊಂಡಿದ್ದಳು. ನಾನು ಪುಸ್ತಕ ತಡವುತ್ತಿದ್ದ ಜಾಗದಿಂದ ಮತ್ತೂ ಒಳಗೆ ಹಿರಿಯೊಬ್ಬರು ಧಾರ್ಮಿಕ ಪುಸ್ತಕಗಳಲ್ಲಿ ಕಳೆದುಹೋಗಿದ್ದರು. ಆ ಕ್ಷಣ ಇಬ್ಬರು ಹಿಜ್ಡಾಗಳು ಅಂಕಿತದೊಳಗೆ ನುಗ್ಗಿದರು. ಫೋನಿನಲ್ಲಿದ್ದ ಗಲ್ಲಾದ ಹುಡುಗಿ ಗಲಾಟೆ ಮಾಡದಂತೆ ಸನ್ನೆ ಮಾಡಿದಳು. ನಾನು ಮತ್ತೂ ಒಳಗೆ ಹೋದರೂ ದೃಷ್ಟಿ ಇತ್ತಲೇ ನೆಟ್ಟಿದ್ದೆ. ಗಲ್ಲಾದ ಹುಡುಗಿ ಕೊಟ್ಟ ಐದೋ ಎರಡೋ ರೂಪಾಯಿ ಹಿಜ್ಡಾಗಳಿಗೆ ಸಮಾಧಾನ ತರಲಿಲ್ಲ. ಅವರು ತಮ್ಮ ನಖ್ರಾ ತೋರಿಸುತ್ತಲೇ ಪುಸ್ತಕಗಳಿಗೆ ಕೈ ಹಾಕಿದರು. ಮತ್ತೆ ಗಲ್ಲಾದ ಹುಡುಗಿ ಅದನ್ನೆಲ್ಲ ಮುಟ್ಟಬಾರದೆಂದು ತಾಕೀತು ಮಾಡಿದಳು. ಆಗ ಈ ಹಿಜ್ಡಾಗಳು ತಮಗೊಂದು ಪೆನ್ನು ಕೊಡುವಂತೆ ಕೇಳಿದರು. ಗಲ್ಲಾದ ಹುಡುಗಿ ನಿರಾಕರಿಸಿದಳಾದರೂ ಕೊನೆಗೆ ಇಬ್ಬರಿಗೂ ಒಂದೊಂದು ಪೆನ್ನು ಕೊಟ್ಟು ಸಾಗು ಹಾಕಿದಳು. ಒಳಗಿನಿಂದ ಇದೆಲ್ಲವನ್ನೂ ನೋಡುತ್ತಿದ್ದ ನನಗೆ ಅವರೇನಾದರೂ ಪೆನ್ನನ್ನು ಬಳಸಿಯೇ ಬಿಟ್ಟರೇ? ತಮ್ಮ ಅನುಭವಗಳನ್ನೆಲ್ಲ ಕೆತ್ತಿಯೇ ಬಿಟ್ಟರೆ? ಅಲ್ಲೇ ಪುಸ್ತಕಗಳಾಗಿ ಬಿದ್ದಿದ್ದ ಮೊಗಳ್ಳಿ, ಜೋಗಿ, ವಸುಧೇಂದ್ರ ಎಲ್ಲ ಏನಾಗಬಹುದು? ಎಂದೆಲ್ಲ ಅನ್ನಿಸಿತ್ತು. ಮತ್ತಷ್ಟು ಓದು 
ಕುರುಡಾಗದಿರು ಭಾರತೀಯ ನಿನ್ನ ಕಣ್ಣುಗಳಿರುವ ತನಕ..
ಅಶ್ವಿನ್ ಎಸ್ ಅಮೀನ್
ಕೋಮುವಾದ, ಜಾತಿವಾದ, ಇವುಗಳ ನಡುವಿನ ಸಂಘರ್ಷಗಳು ಯಾವ ದೇಶದಲ್ಲಿ ಎಷ್ಟರವರೆಗೆ ಇರುತ್ತವೆಯೋ ಅಲ್ಲಿಯ ತನಕ ಆ ದೇಶದ ಬೆಳವಣಿಗೆ ಕುಂಠಿತವಾಗಿ ಸಾಗುತ್ತದೆ. ಅದರಲ್ಲೂ ಆಳುವ ಸರಕಾರಗಳು ನಡೆಸುವ ಒಂದು ಸಮುದಾಯದವರ ಓಲೈಕೆ ಅದು ಅಲ್ಪಸಂಖ್ಯಾತರನ್ನಾಗಲೀ, ಬಹುಸಂಖ್ಯಾತರನ್ನಾಗಲೀ ದೇಶದ ಹಿತದೃಷ್ಟಿಯಿಂದ ಒಳ್ಳೆಯದಲ್ಲ.

”ಅರುಣರಾಗ”
ರಾಘವೇಂದ್ರ ನಾವಡ ಕೆ ಎಸ್
“ಅಗ್ನಿಮೀಳೇ ಪುರೋಹಿತ೦ ಯಜ್ಞಸ್ಯ ದೇವ ಮೃತ್ವಿಜ೦“…. ನಿಧಾನವಾಗಿ ದೇವರ ಮನೆಯಿ೦ದ ಕೇಳಿ ಬರುತ್ತಿದ್ದ ಮ೦ತ್ರದಿ೦ದಲೇ ನನಗೆ ಗೊತ್ತಾಗಿ ಹೋಯಿತು. ರಾಯರು ಮನೆಯಲ್ಲಿಯೇ ಇದ್ದಾರೆ೦ದು. ಮು೦ದಡಿಯಿಡುತ್ತಿದ್ದ ಕಾಲನ್ನು ಹಿ೦ದೆಗೆದೆ. ಕರೆಗ೦ಟೆ ಒತ್ತುವುದೇ ಬೇಡವೇ ಎ೦ಬ ಸ೦ದೇಹ… ಸ್ವಲ್ಪ ಹೊತ್ತು ಕಾಯೋಣವೆ೦ದು. ನಿರ್ಮಾಲ್ಯ ಸ್ನಾನ.. ಅಲ೦ಕಾರ.. ನೈವೇದ್ಯ ಮ೦ಗಳಾರತಿ.. ಕನಿಷ್ಟವೆ೦ದರೂ ಇನ್ನರ್ಧ ಘ೦ಟೆ ಕಾಯಲೇಬೇಕೆ೦ಬ ಅರಿವು ಮೂಡಿತಲ್ಲದೆ, ಸುಮ್ಮನೇ ವಿಳ೦ಬವಾಗುತ್ತದಲ್ಲ ಎ೦ದೂ ಬೇಸರಿಸಿದೆ. ಆದರೆ ಇ೦ದು ಅವಶ್ಯವಾಗಿ ನನಗೆ ಶೇಷಗಿರಿರಾಯರನ್ನು ನೋಡಲೇ ಬೇಕಿತ್ತು. ಬಾಲಾಪರಾಧ ಕೇ೦ದ್ರದಲ್ಲಿ ನೋಡಿ ಬ೦ದ ನನ್ನ ಮಗನ ಬಗ್ಗೆ ಮಾತಾಡಲೇ ಬೇಕಿತ್ತು. ಹಿ೦ದಿನ ದಿನ ರಾತ್ರಿಯೇ ರಾಯರು ಹೇಗೋ ಸ೦ಗ್ರಹಿಸಿದ ನನ್ನ ದೂರವಾಣಿ ಸ೦ಖ್ಯೆಗೆ ಸೂಚ್ಯವಾಗಿ ವಿಚಾರ ತಿಳಿಸಿ, ಬೆಳಿಗ್ಗೆ ನಮ್ಮನ್ನು ಅವರ ಮನೆಗೆ ಬರ ಹೇಳಿದ್ದರು.
ಅದೂ-ಇದೂ ಹಾಳು ಮೂಳು ಯೋಚನೆಗಳಾದರೂ ನನ್ನ ಮಗನ ಸುತ್ತಲೇ ಸುತ್ತುತ್ತಿದ್ದವು. ಇಷ್ಟಪಟ್ಟು ಮದುವೆಯಾದ ಶಾ೦ತಿ, ಹೆಸರಿನಲ್ಲಲ್ಲದೆ, ಬಾಳಿಗೂ ಶಾ೦ತಿ ತ೦ದಿದ್ದಳು. ಹೆಚ್ಚು ದಿನ ಕಾಯಿಸಲೂ ಇಲ್ಲ! ಮುದ್ದು “ಅರುಣ“ನನ್ನು ನನಗೆ ನೀಡಿದ್ದಳು. ನಮ್ಮಿಬ್ಬರ ಬಾಳಿನ ಬೆಳಕಿನ೦ತೆ ಬೆಳಗುತ್ತಿದ್ದ ಅರುಣನಿಗೆ ೬ ವರ್ಷ ತು೦ಬುವಷ್ಟರಲ್ಲಿ ಶಾ೦ತಿ ನನ್ನಿ೦ದ ಹಾಗೂ ಅರುಣನಿ೦ದ ದೂರಾದಳು.. ಮತ್ತೆರಡು ವರ್ಷ ಅವನನ್ನು ನಾನೇ ಕಣ್ರೆಪ್ಪೆ ಕೊ೦ಕಾಗದ೦ತೆ ಸಾಕಿದ್ದು. ಯಾವುದಕ್ಕೂ ಕಡಿಮೆಯಿರದ ಆರ್ಥಿಕ ಸ್ಥಿತಿ ನನ್ನದು. ಸುಮಾರು ೨ ಎಕರೆ ಅಡಿಕೆ ತೋಟದಲ್ಲಿಯೇ ಬದಿಗೆಲ್ಲಾ ತೆ೦ಗಿನ ಮರಗಳು.. ಏನೂ ತೊ೦ದರೆಯಿಲ್ಲದೆ ದಿನ ಕಳೆಯುತ್ತಿದ್ದವು. ಆ ದಿನಗಳಲ್ಲಿಯೇ ಪರಿಚಯವಾದವಳು ಮೀರಾ… ಏನೋ ಒ೦ದು ರೀತಿಯ ಆಕರ್ಷಣೆಯೋ ಸೆಳೆತವೋ.. ಅರುಣನ ಇರುವನ್ನು ಅರಿತೂ ನನ್ನನ್ನು ಪ್ರೀತಿಸಿದಳು. ಮತ್ತೊಮ್ಮೆ ಗೃಹಸ್ಥನಾಗಿ,ಮೀರಾಳನ್ನೂ ಮನೆ-ಮನ ತು೦ಬಿಸಿಕೊ೦ಡೆ. ಅವಳ ನೆರಳಿನಲ್ಲಿಯೂ ಅರುಣನಿಗ್ಯಾವುದೇ ಭಯವಿರಲಿಲ್ಲ.. ಮೊದ-ಮೊದಲು ನಿಧಾನವಾದರೂ ನ೦ತರದ ದಿನಗಳಲ್ಲಿ ಅವರಿಬ್ಬರೂ ಪರಸ್ಪರ ಗೆಳೆಯರಾದರು.. ಆ೦ಟಿ ಅಮ್ಮನಾದಳು. ಮೀರಾಳಿಗೆ ಅರುಣ ಅವಳ ಮಗನೇ ಆಗಿ ಹೋದ. ಶಾಲೆಯಿ೦ದ ಬ೦ದಾಗ ಮೀರಾಳೇ ಮೊದಲು ಎದುರಾಗಬೇಕಿತ್ತು. ಶಾಲೆಯಿ೦ದ ಬ೦ದವನೇ, ತಾಯಿಯೊ೦ದಿಗೆ, ತೋಟಕ್ಕೂ ಬರುತ್ತಿದ್ದ. ಮದ್ದು ಹೊಡೆಸುತ್ತಲೋ, ಕಾಯಿ ಕೀಳಿಸುತ್ತಲೋ ಅಥವಾ ಇನ್ಯಾವುದಾದರೂ ಕೆಲಸದಲ್ಲಿ ಮುಳುಗಿರುತ್ತಿದ್ದ ನನ್ನನ್ನು ಎಚ್ಚರಿಸುತ್ತಿದ್ದದ್ದೇ ಅವನು ಓಡಿಕೊ೦ಡು ನನ್ನತ್ತ ಬರುತ್ತಾ ಕೂಗುತ್ತಿದ್ದ “ಅಪ್ಪಾ“ ಎನ್ನುವ ಕೂಗು. ಮತ್ತಷ್ಟು ಓದು 
ಹಾಗೇ ಉಳಿದ ಪ್ರಶ್ನೆ…..
ವಿಜಯ್ ಹೆರಗು
ಅವರು ‘ಭಗಿನಿ’ ಹೋಟೆಲಿನ ಒಂದು ಟೇಬಲ್ಲಿನಲ್ಲಿ ಮಂದ ಬೆಳಕಿನ ಕೆಳಗೆ ಬಿಯರ್ ಜೊತೆಗೆ ಆಲೂ ಜೀರಾ ತಿನ್ನುತ್ತಾ ಮಾತಾಡ್ತಾ ಇದ್ರು. ನಾನು ಅವರ ಮಾತನ್ನೇ ಗಮನ ಇಟ್ಟು ಕೇಳ್ತಾ ಇದ್ದೆ. ಅವರು ನಮ್ಮ ಕಂಪೆನಿಯ ಹಿರಿಯ ಅಧಿಕಾರಿಗಳಲ್ಲಿ ಒಬ್ಬರು. ಅವರ ಜೊತೆ ನಾವು ನಾಲ್ಕೈದು ಮಂದಿ ಕೂತಿದ್ವಿ. ಅವರು ನಿಮಗೆಲ್ಲಾ ಒಂದು ಪ್ರಶ್ನೆ ಕೇಳ್ತೀನಿ ಯೋಚಿಸಿ ಉತ್ತರ ಕೊಡಿ ಅಂದ್ರು. ಅವರು ಕೇಳಿದ ಪ್ರಶ್ನೆ ಹೀಗಿದೆ.ಒಂದು ಊರು. ಆ ಊರಿನ ರೈಲ್ವೇ ಹಳಿಗಳ ಮೇಲೆ ಐದು ಮಕ್ಕಳು ಆಟ ಆಡ್ತಿದ್ದಾರೆ. ಐದರಲ್ಲಿ ನಾಲ್ಕು ಮಕ್ಕಳು live trackನಲ್ಲಿ ಆಡ್ತಾ ಇದ್ರು, ಒಬ್ಬ ಹುಡುಗ ಮಾತ್ರ dead trackನಲ್ಲಿ ಆಡ್ತಿದ್ದ. ಎಕ್ಸ್ ಪ್ರೆಸ್ ರೈಲೊಂದು ವೇಗವಾಗಿ ಬರುತ್ತಿದೆ. ರೈಲ್ವೇ ಗಾರ್ಡ್ ಕೊನೇ ಕ್ಷಣದಲ್ಲಿ ಹಳಿಯ ಮೇಲೆ ಆಡ್ತಿರೋ ಮಕ್ಕಳನ್ನು ನೋಡ್ತಾನೆ. ಅವನ ಕೈಯಲ್ಲಿ ಲಿವರ್ ಇದೆ….ಅವನಿಗಿರುವ option ಎರಡು. ಮೊದಲನೆಯದು live trackನಲ್ಲಿ ಆಡ್ತಿರೋ ನಾಲ್ಕು ಮಕ್ಕಳನ್ನು ಬಚಾವು ಮಾಡುವುದು ಅಥವಾ ಎರಡನೆಯದು dead trackನಲ್ಲಿ ಆಡ್ತಿರೋ ಒಬ್ಬಹುಡುಗನನ್ನು ಉಳಿಸುವುದು.
ನಾವು ಎಲ್ಲರೂ ಹೇಳಿದ ಉತ್ತರ ಮೊದಲನೆಯ option ಆಗಿತ್ತು. ಯಾಕಂದ್ರೆ ನಮ್ಮ ಮನಸ್ಸಿನಲ್ಲಿ ಇದ್ದದ್ದು ಒಂದೇ ಉದ್ದೇಶ. ನಾಲ್ಕು ಮಕ್ಕಳ ಜೀವ ಉಳಿಸುವ ಸಲುವಾಗಿ ಒಂದು ಮಗುವಿನ ಜೀವ ಹೋದರೆ ತಪ್ಪೇನಿಲ್ಲ ಹಾಗಾಗಿ ಮೊದಲನೆಯ option ಸೂಕ್ತ ಎನ್ನಿಸಿತು. ಅದನ್ನೇ ನಾವೆಲ್ಲರೂ ಹೇಳಿದ್ವಿ.







