ಎಳೆ ಹುಡುಗನ ಕನಸುಗಳು
ಪವನ್ ಪರುಪತ್ತೆದಾರ
ಜೀವನವನ್ನು ಸರಿಯಾಗಿ ಗಮನಿಸುತ್ತಾ ಹೋದರೆ ಒಮ್ಮೊಮ್ಮೆ ಅತೀ ಚಿಕ್ಕ ವಿಷಯಗಳು ಮನಸಿಗೆ ನಾಟಿಬಿಡುತ್ತವೆ, ನಮ್ಮ ಮನೆ ಪಕ್ಕದಲ್ಲೇ ಇರುವ ಒಬ್ಬ ಹುಡುಗನ್ನ ನನ್ನ ಗಾಡಿ ಒರೆಸಲೆಂದು ಕರೆದೆ ಅವನ ಹೆಸರು ವಿಶ್ವನಾಥ, ಪ್ರೀತಿಯಿಂದ ಎಲ್ಲರು ಪಪ್ಪಳ ಎಂದು ಕರೀತಾರೆ. ಹತ್ತಿರದಲ್ಲೇ ಇರೋ ಒಂದು ಸರ್ಕಾರೀ ಶಾಲೆಯಲ್ಲಿ 3 ನೆ ತರಗತಿ ವ್ಯಾಸಂಗ ಮಾಡ್ತಾ ಇದಾನೆ. ಓದಿನಲ್ಲೂ ಮುಂದು ಕೆಲಸದಲ್ಲೂ ಮುಂದು ನ ಕರೆದ ತಕ್ಷಣ ಓಡಿ ಬಂದು ಏನು ಪವನಣ್ಣ ಕರೆದ್ರಲ್ಲ ಅಂದ, ಗಾಡಿ ಒರೆಸಿ ಕೊಡೊ ಪಪ್ಪಳ ಅಂದೆ, ಅದಕ್ಕೆ ಅವರಮ್ಮಮ್ಗೆ ಅಮ್ಮೋ ನ ಪವನಣ್ಣ ವೀಟ್ ಕಿಟೆ ಇರಕ್ಕೆ ಅಂತ ಕಿರುಚಿದ( ಅವರ ಮಾತೃ ಭಾಷೆ ತಮಿಳು ).
ನಾನು ಗಾಡಿ ವರೆಸೋ ಬಟ್ಟೆ ತೆಗೆದು ಕೊಟ್ಟೆ ಹಾಗೆ ಒರೆಸುತ್ತಾ ಒರೆಸುತ್ತಾ ಪವನಣ್ಣ ನೀವು ಎಷ್ಟನೆ ಕ್ಲಾಸು ಅಂದ, ನಾನು ಇಂಜಿನಿಯರಿಂಗ್ ಕಣೋ ಪಪ್ಪಳ ಅಂದೆ, ಅಂದ್ರೆ 20 ನೆ ಕ್ಲಾಸ್ ಅ ಅಂದ ನಾನು ಸ್ವಲ್ಪ ಯೋಚಿಸಿ ಲೆಕ್ಕ ಹಾಕಿ 16 ನೆ ಕ್ಲಾಸು ಅಂದೆ, ಹಾಗಾದ್ರೆ ನಾನು ಇ ಥರ ಗಾಡಿ ತೊಗೋಬೇಕು ಅಂದ್ರೆ ಇನ್ನು ೧೩ ಕ್ಲಾಸ್ ಓದಬೇಕು ಅಂದ. ಸ್ವಲ್ಪ ನಕ್ಕು ಹೌದು ಧೌದು ಎಂದೆ..
ಹಾಗೆ ಗಾಡಿ ಒರೆಸುತ್ತಾ ಒರೆಸುತ್ತಾ ಪವನಣ್ಣ ನೆನ್ನೆ ನಾನು ಸೌತೆ ಕಾಯಿ ಮಾರಕ್ ಹೋಗಿದ್ದೆ ಅಂದ , ಅವರ ತೋಟದಲ್ಲಿ ಸೌತೆ ಕಾಯಿ ಬೆಳೆ ಇರಲಿಲ್ಲ ಅಲ್ಲದೆ ಅಕ್ಕ ಪಕ್ಕದ ಯಾವ ತೋಟದಲ್ಲೂ ಸೌತೆಕಾಯಿ ಬೆಳೆ ಇರಲಿಲ್ಲ ಇವನ ಹೇಗೆ ಮಾರಿಕೊಂಡು ಬಂದ ಅನ್ನೋ ಅನುಮಾನದಲ್ಲೇ, ಲೋ ಪಪ್ಪಳ ಸೌತೆಕಾಯಿ ಎಲ್ಲಿಂದ ಬಂತೋ ಅಂದೆ. ಅದಕ್ಕೆ ಅವ ಪವನಣ್ಣ ಆದ ಯಾರ್ದೋ ಮನೇಲಿ ಸ್ಕೂಲ್ ಇಂದ ವಾಪಾಸ್ ಬರೋವಾಗ ಹಸುಕಾಕು ಅಂತ ಕೊಟ್ರು, ನ ಮಾರಿಕೊಂಡು ಬಂದ್ ಬಿಟ್ಟೆ ಅಂದ ಅದಕ್ಕೆ ನಾನು ಲೋ ಕೆಟ್ಟಿರೋ ಸೌತೆಕಾಯಿ ಯಾರದ್ರು ಮಾರ್ತರೇನೋ ಅಂದೆ ಅವನು ಇಲ್ಲ ಪವನಣೋ.ಚಂದಗಿತ್ತು ಸ್ವಲ್ಪ ಬಲ್ತೋಗಿತ್ತು ಅಷ್ಟೇ ಅದಕ್ಕೆ ಮಾರಿಕೊಂಡು ಬಂದೆ ಅಂದ. ಸರಿ ಎಷ್ಟು ಕಾಸ್ ಬಂತು ಏನ್ ಮಾಡಿದೆ ಅಂದೆ, ಅದಕ್ಕೆ ೨೦ ರುಪಾಯಿ ಬಂತು, ನಮ್ಮಮ್ಮ ಪಾಪ ಓಲೆ ಇಲ್ಲ ಅಂತ ಇದ್ಲು ಅದಕ್ಕೆ ಚಿನ್ನದ ವಾಲೆ ತಂದು ಕೊಟ್ಟೆ ಅಂದ. ನನಗೆ ನಗು ತಡೆಯಕ್ಕಾಗದೆ, ಲೋ ಪಪ್ಪಳ 20 ರೂಪಾಯಿಗೆ ಯಾರೋ ಚಿನ್ನದ ವೋಲೆ ಕೊಡ್ತಾರೆ ಅಂದ್ರೆ ಅಯ್ಯೋ ಹೋಗ ಪವನಣ್ಣ ಅಷ್ಟೇ ಮತ್ತೆ ನಿಮಗೆ ಗೊತ್ತಿಲ್ಲ ಅಂದ , ಆಮೇಲೆ ಹಾಗೆ ಮುಂದುವರೆಸುತ್ತಾ ಆದ್ರೆ ಆ ವಾಲೆನ ಐಶು ಕದ್ದುಕೊಂಡೋಗವಳೆ ಕೇಳಿದ್ರೆ ನಂದೇ ಅಂತವ್ಲೇ ಪವನಣ್ಣ ಅಂದ, ಮತ್ತೆ ಈಗ ಏನೋ ಮಾಡ್ತ್ಯ ಅಂದೆ ಅದಕ್ಕೆ ಅವನು ಅಯ್ಯೋ ಹೋದ್ರೆ ಹೋಗ್ಲಿ ಶುಕ್ರವಾರ ಸಂತೆಗೆ ನಮ್ಮತ್ತೆ ಜೊತೆ carrot ಮಾರಕ್ ಹೋಗ್ತೀನಿ ಸ್ಕೂಲ್ ಬಿಟ್ ತಕ್ಷಣ ಹೋಗಿ 3 hour ವ್ಯಾಪಾರ ಮಾಡಿದ್ರೆ 20 ರುಪಾಯಿ ಕೊಡ್ತಾರೆ ಅ ಕಾಸಲ್ಲಿ ಸಂತೆಲೆ ಓಲೆ ತೆಕ್ಕೊಡ್ತೀನಿ ಅಂದ.
wow ಅವನ ಅಮ್ಮನಿಗೆ ವಾಲೆ ಕೊಡಿಸಬೇಕಂಬ ಅಸೆ ಅ ವಯಸಿಗೆ ತಾಯಿಯ ನೋವನ್ನ ಅರ್ಥ ಮಾಡ್ಕೊಳೋ ಮನಸು ನೋಡಿ ನನಗೆ ದಿಗ್ಭ್ರಮೆ ಆಯಿತು.ಅಷ್ಟರಲ್ಲೇ ಗಾಡಿ ಒರೆಸಿದ್ದಾಗಿತ್ತು ಒರೆಸೋ ಬಟ್ಟೆ ಒದೆರಿ ವಾಪಾಸ್ ಕೊಟ್ಟು ಹೋಗ್ತೀನಿ ಪವನಣ್ಣ ನಮ್ಮಪ್ಪನ ಜೊತೆ ನೀರ್ ಕಟ್ಟಕ್ ಹೋಗ್ಬೇಕು ಅಂತ ನಿಂತ, ನಾನು ಜೆಬಿಗೆ ಕೈ ಹಾಕಿದರೆ 3 ರು ಚಿಲ್ಲರೆ ಇತ್ತು ಕೊಟ್ಟು ಹೋಗಿ ಹುಂಡಿಗೆ ಹಕ್ಕೊಲೋ ಪಪ್ಪಳ ಅಂದೇ ಕುಷಿ ಕುಷಿಯಾಗಿ ಮನೆ ಕಡೆ ಓಡಿದ,…..!!!
********************************************************************
ದುಡ್ಡು ಇದ್ದರೆ ದುನಿಯಾ, ಜಾತಿ ಇದ್ದರೆ ಅಧಿಕಾರ – ಹೊಸಗಾದೆ
ಕೋಮಲ್
ಸಿದ್ದ ಯಾಕೋ ಸಾನೇ ಬೇಜಾರಾಗಿದ್ದ, ಮನೆ ಮುಂದೆ ತಲೆ ಮ್ಯಾಕೆ ಟವಲ್ ಹಾಕ್ಕಂಡು, ವಿಧವೆ ತರಾ ಕುಂತಿದ್ದ. ಯಾಕ್ಲಾ ಸಿದ್ದ ಅಂದ ಸಂಭು. ನೋಡ್ಲಾ ನಾನು ರಾಜಕೀಯ ನೋಡ್ತಾನೇ ಇದೀನಿ, ಎಲ್ಲಿಗಲಾ ಬಂತು ನಮ್ಮ ರಾಜಕೀಯ, ಅಧಿಕಾರಕ್ಕಾಗಿ ಹೊಡೆದಾಟ, ಜಾತಿ, ಕಾಸು ಎಲ್ಲಾ ಬತ್ತಾ ಐತಲ್ಲೋ, ಹಿಂಗಾದ್ರೆ ನಮ್ಮಂತಹ ಬಡವರು, ರೈತರು ಬದಕಕ್ಕೆ ಆಯ್ತದೇನ್ಲಾ ಅಂದ ಸಿದ್ದ. ನಮ್ಮ ಜಾತಿ ಪ್ರಬಲವಾಗಿಲ್ಲ ಅಂದ್ರೆ ಸಾಯೋ ಗಂಟ ಬರೀ ಕಾರ್ಯಕರ್ತನಾಗೇ ಇರಬೇಕಾಯ್ತದೆ ಕಲಾ, ಅದೇ ಪ್ರಬಲ ಜಾತಿ ಇದ್ದೋರು ಅಧಿಕಾರನೂ ಮಾಡ್ತಾರೆ, ಅಂಗೇ ಕಾಸು ಮಾಡ್ಕಂತಾರೆ ಅಂದ ಸಂಭು. ಪಾಪ ಸಂಭುನೂ ಅಳಕ್ಕೆ ಸುರು ಮಾಡ್ದ. ಬುಡ್ಲಾ ಅಳಬೇಡ ಬುಡ್ಲಾ ಅಂದ ಸಿದ್ದ. ನಮ್ಮದು ಜಾತ್ಯಾತೀತ ರಾಜ್ಯ ಅಲ್ಲ ಕಲಾ. ನಮ್ಮದು ಜಾತಿ ರಾಜ್ಯ ಅಂದ ಸುಬ್ಬ.
ಕಡೆಗೆ ಎಲ್ಲಾ ಸೇರ್ಕಂಡು, ನಿಂಗನ ಅಂಗಡಿಗೆ ಚಾ ಕುಡಿಯುವಾ ಅಂತಾ ಹೋದ್ವಿ. ಅಲ್ಲಿ ನಮ್ಮ ಮಿಕ್ಕಿದ ಗೆಳೆಯರು ಕೂಡ ಬೈ ಟು ಚಾ ಕುಡಿತಾ ಕುಂತಿದ್ರು, ಬರೀ ಚಲ್ಟಾ ಐತೆ ಅನ್ನೋರು. ಕಿಸ್ನ ಡಿಕಾಕ್ಸನ್ ಕಮ್ಮಿ ಆಗೈತೆ ಅಂತಿದ್ದ. ಮಗಾ ನಾಗ ಮಾತ್ರ ಇಂಗ್ಲೀಸ್ ಪೇಪರ್ ಓದ್ತಾ ಇದ್ದ. ಓದಿರೋದು ಮಾತ್ರ ಮೂರನೇ ಕಿಲಾಸು. ಪೋಟೋ ನೋಡ್ತಾ ಇದೀನಿ ಕನ್ರಲಾ ಅಂತಿದ್ದ ನಾಗ, ಅದೂ ಉಲ್ಟಾ ಮಡಿಕ್ಕಂಡು. ಏಥೂ. ಏನ್ರಲಾ ಸಮಾಚಾರ ಅಂದ ತಂಬೂರಿ ನಾಗ. ನೋಡ್ರಲಾ ಒಂದು ಟೇಮಲ್ಲಿ ರೆಡ್ಡಿಗಳು ಅಂದ್ರೆ ಸರ್ಕಾರನೇ ಹೆದರೋದು ಕಲಾ, ಅವರು ಇಲ್ಲದೆ ಸರ್ಕಾರನೇ ನಡೆಸಕ್ಕೆ ಆಗಕ್ಕಿಲ್ಲಾ ಅನ್ನೋ ಟೇಮ್ ಇತ್ತು. ಯಡೂರಪ್ಪನು ಹೆದರೋದು. ಹಯ ಕಮಾಂಡ್ ಹೆದರೋದು. ಮತ್ತಷ್ಟು ಓದು 
ಸಂಸ್ಕೃತಿ ಸಂಕಥನ – ೫
– ರಮಾನಂದ ಐನಕೈ
ಆಧುನಿಕ ಇತಿಹಾಸದಲ್ಲಿ ಪದೇ ಪದೇ ಕಲ್ಯಾಣ ರಾಜ್ಯ ‘ವೆಲ್ಫೇರ್ ಸ್ಟೇಟ್’ದ ಕುರಿತು ಉಲ್ಲೇಖವಾಗುತ್ತದೆ. ಕಲ್ಯಾಣ ರಾಜ್ಯ ಅಂದರೆ ಏನು? ಪ್ರಜೆಗಳ ಸರ್ವತೋಮುಖ ಕ್ಷೇಮವನ್ನು ಹೆಗಲ ಮೇಲೆ ಹೊತ್ತ ಪರಿಕಲ್ಪನೆ ಇದು. ಸಾಮಾಜಿಕ ಭದ್ರತೆ (ಸೋಶಿಯಲ್ ಸೆಕ್ಯುರಿಟಿ) ಕಲ್ಯಾಣ ರಾಜ್ಯದ ಒಂದು ಆದರ್ಶ. ಪ್ರತಿಯೊಬ್ಬ ಪ್ರಜೆಗೆ ಸಾಮಾಜಿಕ ಭದ್ರತೆ ನೀಡುವುದೂ ಕಲ್ಯಾಣ ರಾಜ್ಯದ ಒಂದು ಗುರಿ.
ಪಾಶ್ಚಾತ್ಯರು ಈ ಸಮಾಜಿಕ ಭದ್ರತೆಯನ್ನು ಕಲ್ಪಿಸಿಕೊಂಡ ರೀತಿ ಭಿನ್ನವಾಗಿದೆ. ಈ ಭೂಮಿಯ ಮೇಲೆ ಹುಟ್ಟಿದ ಪ್ರತಿಯೊಬ್ಬ ಮನುಷ್ಯನಿಗೆ ಬದುಕುವ ಹಕ್ಕಿದೆ. ಇದನ್ನು ಯಾರೂ ಪ್ರಶ್ನಿಸಲು ಸಾಧ್ಯವಿಲ್ಲ. ಆದ್ದರಿಂದ ಪ್ರತಿ ಮನುಷ್ಯನಿಗೆ ಬದುಕಲು ಬೇಕಾದ ಅನ್ನ, ನೀರು, ಮನೆ, ಬಟ್ಟೆ ಮುಂತಾದ ಅನೇಕ ಅವಶ್ಯಕತೆಗಳನ್ನು ಪ್ರಭುತ್ವ (ಸ್ಟೇಟ್) ಪೂರೈಸಿ ಅವರಲ್ಲಿ ಭದ್ರತೆಯ ಭಾವನೆಯನ್ನು ಹುಟ್ಟಿಸಬೇಕು. ಆಗ ಪ್ರಜೆಗಳು ಸಂತೋಷವಾಗಿರುತ್ತಾರೆ ಎಂಬುದು ಅವರ ಚಿಂತನೆ. ಇದನ್ನೇ ಸಾಮಾಜಿಕ ಭದ್ರತೆ ಎಂದು ಕರೆದರು. ಇದಕ್ಕಾಗೇ ಅನೇಕ ರಾಷ್ಟ್ರಗಳು ತಮ್ಮನ್ನು ವೆಲ್ಫೇರ್ ಸ್ಟೇಟ್ಸ್ ಎಂದು ಕರೆದುಕೊಂಡವು. ಇದನ್ನು ಸರಳವಾಗಿ ಹೇಳಬಹುದಾದರೆ ಕನಿಷ್ಟ ಅವಶ್ಯಕತೆಯ ಭೌತಿಕ ಸವಲತ್ತುಗಳನ್ನು ನೀಡುವುದೇ ಅವರ ಪ್ರಕಾರ ಸಾಮಾಜಿಕ ಭದ್ರತೆ. ಪಾಶ್ಚಾತ್ಯರ ಈ ಲೋಕಜ್ಞಾನ ಭಾರತೀಯರಿಗೆ ರೋಮಾಂಚಕವಾಗಿ ಕಂಡದ್ದು ಸಹಜ. ಏಕೆಂದರೆ ಪಾಶ್ಚಾತ್ಯ ಸಂಸ್ಕೃತಿಯನ್ನು ಒಂದು ಪರಿಪೂರ್ಣ ಮಾದರಿ ಎಂದು ನಾವು ಸ್ವೀಕರಿಸಿಬಿಟ್ಟಿದ್ದೇವೆ.
ಜನಲೋಕಪಾಲ ಅನ್ನುವುದು ಮಾಯದಂಡವೇನಲ್ಲ…!
– ರಾಕೇಶ್ ಶೆಟ್ಟಿ
ಒಂದೆಡೆ ಅಣ್ಣಾರನ್ನ ಬೆಂಬಲಿಸಿ ಜನ ಬೀದಿಗಿಳಿದರೆ, ಇನ್ನೊಂದೆಡೆ ಅಣ್ಣಾ ಹೋರಾಟವನ್ನ ಪ್ರಶ್ನಿಸಿ ಹಲವಾರು ಪ್ರಶ್ನೆಗಳೆದ್ದಿವೆ.
’ಜನಲೋಕಪಾಲ್’ ಬಂದ ತಕ್ಷಣ ಎಲ್ಲ ಭ್ರಷ್ಟರು ಮಾಯವಾಗ್ತಾರೆ ಅಂತ ಖುದ್ದು ಅಣ್ಣಾ ಮತ್ತು ಸಿವಿಲ್ ಸೊಸೈಟಿಯವರ್ಯಾರು ಸಹ ಎಲ್ಲೂ ಹೇಳಿಲ್ಲ.ಹಾಗಾಗ್ಯೂ ಇಂತ ವಾದ ಹುಟ್ಟು ಹಾಕಿದ್ದು ಯಾರು? ಬಹುಷಃ ಕಪಿಲ್ ಸಿಬಲ್ ಇರಬೇಕು ಅದನ್ನೆ ಹಿಡಿದು ಕೆಲವರು ’ಜನಲೋಕಪಾಲ್’ ಬಂದ್ರೆ ಭ್ರಷ್ಟಚಾರ ಮಾಯವಾಗುತ್ತಾ!? ಅಂತ ಕೇಳ್ತಾ ಇದ್ದಾರೆ ಕೆಲವರು. ಅಂತವರಿಗೊಂದು ಪ್ರಶ್ನೆ ಪೋಲಿಸ್ ಇಲಾಖೆ ಅನ್ನುವುದು ಬಂದು ಎಷ್ಟು ವರ್ಷಗಳಾಯ್ತು? ಕಳ್ಳತನ-ಕೊಲೆ-ದರೋಡೆ ನಿಂತಿದೆಯಾ ಸ್ವಾಮಿ!? ಇಲ್ಲ ತಾನೆ..! ಆದರೆ ಜನ್ರಿಗೊಂದು ಹೆದರಿಕೆಯಂತೂ ಇರುತ್ತದೆ ತಪ್ಪು ಮಾಡೋಕೆ ಹಾಗೆ ತಪ್ಪು ಮಾಡಿದವರನ್ನ ಹಿಡಿದು ಜೈಲಿಗೆ ಅವರು ನೂಕುತಿದ್ದಾರಲ್ವಾ? ಹಾಗೆಯೇ ಜನಲೋಕಪಾಲ ಅನ್ನುವುದು ಸಹ.ಅದು ಬಂದ ತಕ್ಷಣ ಎಲ್ಲ ಸರಿ ಹೋಗದು.ಅದು ಸುಧಾರಣೆಯ ಒಂದು ಅಸ್ತ್ರವಷ್ಟೆ.
ಈ ಎಡವಟ್ಟುಗಳು ಯಾಕೆ ಹೀಗೆ ಅಂತ?
– ಸಚಿನ್ ಕೆ
ನಮಸ್ಕಾರ ಸಾ. ಎಂಗಿದೀರಾ.
ನೋಡಿ ಸಾ, ಪ್ರಪಂಚ ಹೆಂಗೈತೆ ಅಂದ್ರೆ ಹಿಂಗೂ ಜನ ಇರ್ತಾರ ಅಂತ ಗೊತ್ತಿರ್ಲಿಲ್ಲ.
ಗಾಂಧಿ ಮಆತ್ಮ್ ನ ತರ ನೀವು ಉಪ್ವಾಸ ಮಾಡಿದ್ರೆ ಜನ ಅದರಲ್ಲೂ ಹುಳುಕು ಕಂಡಿಡಿತಾರೆ ಅಂದ್ರೆ, ಈ ಜನ ಎಷ್ಟು ಗಬ್ಬೆದ್ದು ಹೋಗಿದ್ದಾರೆ ಅಂತ. ಆ ಬ್ರಹ್ಮ ಇವರ ತಲೆ ಒಳಗೆ ಮಿದುಳು ಇಟ್ಟಿಲ್ಲ ಅನ್ಸುತ್ತೆ, ಅದರೆ ಬದಲು ಸಗಣಿ ಮಡಗವ್ನೆ. ಈ ಬಡ್ಡೆತ್ತೇವು ಬರೀ ಉಲ್ಟಾ ಮಾತಾಡೋದೆ ಆಗ್ವಾಯ್ತು.
ಅವಯ್ಯ ದೇಸಾನ ಏನೋ ಬದಲಾವ್ಣೆ ಮಾಡ್ತೀನಿ ಅಂತ ಮಾತಾಡ್ತಿಲ್ಲ. ಲಂಚ ತಿನ್ನೋ ಎಲ್ಲ ಬೇವರ್ಸಿ ಮುಂಡೇವು ಗಳಿಗೆ ಸರ್ಯಾದ ಸಿಕ್ಸೆ ಆಗ್ಲಿ ಅಂತ ಗೋರ್ಮೆಂಟ್ ನೋರು ಸರಿಯಾದ ರೂಲ್ಸ್ ಮಾಡ್ಲಿ ಅಂತ. ಆದರೆ ಈ ಉಲ್ಟಾ ಮಾತಾಡ್ತ ಇರೋ ಈ ಹೈಕಳು ಕೇಳೋ ಪ್ರಸ್ನೆಗಳನ್ನು ನೋಡಿದ್ರೆ ನಗ ತಡ್ಯಾಕಾಗ್ತಿಲ್ಲ.
ಭ್ರಷ್ಟಾಚಾರ ಎಂದರೆ ಅನುಕೂಲ ಸಿಂಧು
– ಪವನ್ ಪರುಪತ್ತೆದಾರ
ನನಗೊಬ್ಬ ಸ್ನೇಹಿತ ಇದ್ದಾನೆ ಪ್ರವೀಣ್ ಅಂತ, ನನ್ನ ಜೊತೆ ಓದಿಲ್ಲವಾದರೂ ನನ್ನ ಸಹಪಾಠಿ ಅವನು, ಒಂದೇ ತರಗತಿ ಆದರೆ ಬೇರೆ ಶಾಲೆ. ಅವನ ಕೆಲಸ ತಾಲ್ಲೂಕು ಕಚೇರಿಯಲ್ಲಿ. ಸರ್ಕಾರದಿಂದ ಕೊಟ್ಟ ಕೆಲಸ ಅಲ್ಲ, ಅವನೇ ಹುಡುಕಿ ಕೊಂಡಿರುವ ವೃತ್ತಿ. ನಿಜ ಹೇಳಬೇಕೆಂದರೆ ನಮ್ಮೂರಿನ ತಾಲ್ಲೂಕು ಕಚೇರಿಯೋಳಗಿರುವರಿಗಿಂತ ಇವನು ಹೆಚ್ಚು ಕೆಲಸ ಮಾಡುತ್ತಾನೆ. ಪಹಣಿ, registration, ಖಾತೆ ಬದಲಾವಣೆ, encumberance ಸರ್ಟಿಫಿಕೇಟ್, survey sketch ಕಾಪಿ, ನಿಮಗೇನು ಬೇಕು?? ತಾಲ್ಲೂಕು ಕಚೇರಿಯ ಗೇಟ್ ನ ಪ್ಯೂನ್ ಇಂದ ಹಿಡಿದು ತಹಶೀಲ್ದಾರ್ ತನಕ, ಏನು ಕೆಲಸ ಬೇಕಾದರುಮಾಡಿಕೊಡುತ್ತಾನೆ(ಮಾಡಿಸಿಕೊಡುತ್ತಾನೆ).
ಇತ್ತೀಚಿಗೆ ನನಗೆ ಬಹಳ ಜರೂರಾಗಿ ನಮ್ಮ ಜಮೀನಿನ ಪಹಣಿ ಬೇಕಾಗಿತ್ತು. ನಮ್ಮ ಊರಿನ ಪಹಣಿ ಕೇಂದ್ರ ಬಹಳ ದಿನಗಳಿಂದ ದುರಸ್ಥಿಯಲ್ಲಿತ್ತು. ಆಗಷ್ಟೇ ಕೊಡಲು ಶುರು ಮಾಡಿದ್ದರು. ಅದ್ದರಿಂದ ತಾಲ್ಲೂಕು ಕಚೇರಿ ಬಳಿ ಹೋಗಿ ಸಾಲು ನೋಡಿದೊಡನೆ ಭಯವಾಯ್ತು. ಅದರಲ್ಲೂ ನಮ್ಮ ಸರ್ಕಾರೀ ಕಛೇರಿಯೋಳಗಿನ ಗಣಕ ಯಂತ್ರಗಳು ಯಾವಾಗ ಕೆಡುತ್ತವೋ ಗೊತ್ತಿಲ್ಲ. ಇವತ್ತು ಕೆಟ್ಟರೆ ಇನ್ನು ರಿಪೇರಿ ಆಗುವುದು ಯಾವಾಗಲೋ??? ಅಲ್ಲಿವರೆಗೂ ನನಗೂ ಕಾಯುವ ಅವಕಾಶವಿರಲಿಲ್ಲ. ಮತ್ತಷ್ಟು ಓದು 
ಕಲಾವಿದರು ಕಸಿದುಕೊಳ್ಳುತ್ತಿರುವ ಕನ್ನಡ ಗ್ರಾಹಕನ ಸ್ವಾತಂತ್ರ್ಯ.!
– ಮಹೇಶ್ ರುದ್ರಗೌಡರ್
ಜೀ ಟಿವಿಯಲ್ಲಿ ಜಾನ್ಸಿ ರಾಣಿ ಅನ್ನೊ ಹಿಂದಿ ದಾರಾವಾಹಿಯನ್ನು ಕನ್ನಡಕ್ಕೆ ಡಬ್ ಮಾಡಿ ಪ್ರಸಾರ ಮಾಡಿದ್ರು ಅಂತ ನಮ್ಮ ಕಿರುತೆರೆ ಕಲಾವಿದರು ಆ ವಾಹಿನಿಯ ಕಚೇರಿಗೆ ನುಗ್ಗಿ ಪ್ರತಿಭಟನೆ ನಡೆಸಿದರು. ಕಲಾವಿದರ ಪ್ರಕಾರ ಇದರಿಂದ ಕಿರುತೆರೆಯನ್ನೇ ನಂಬಿ ಜೀವನ ನಡೆಸುತ್ತಿರುವ ಅನೇಕ ಕುಟುಂಬಗಳು ಬೀದಿಗೆ ಬರುತ್ತವಂತೆ. ಇದರ ಜೊತೆಗೆ ಜೀ ಟಿವಿಯ ಈ ನಡೆ ಕನ್ನಡ ವಿರೋದಿಯಂತೆ. ಇವರ ವಾದವನ್ನು ಮತ್ತು ಕನ್ನಡತನವನ್ನು ಸ್ವಲ್ಪ ಆಳವಾಗಿ ನೋಡಿ ಬರೋಣ ಬನ್ನಿ.
ಹುರುಳಿಲ್ಲದ ವಾದ.!
ಈ ದಾರಾವಾಹಿ ಈಗಾಗಾಲೇ ತೆಲುಗು, ತಮಿಳು ಬಾಶೆಗೆ ಡಬ್ ಆಗಿ ಅಲ್ಲಿ ಪ್ರಸಾರವಾಗುತ್ತಿದೆ. ಹಾಗಾದರೆ ಆಂದ್ರ ತಮಿಳುನಾಡಿನಲ್ಲಿ ಕಲಾವಿದರೇ ಇಲ್ಲವೇ.? ಅಲ್ಲಿಯೂ ಕಲಾವಿದರಿದ್ದಾರೆ, ಅವರಲ್ಲಿಯೂ ಅನೇಕರಿಗೆ ಕಿರುತೆರೆಯಿಂದಲೇ ಹೊಟ್ಟೆ ತುಂಬುತ್ತದೆ. ಅಲ್ಲಿ ಅವರಿಗೆ ಇಲ್ಲದ ಸಮಸ್ಯೆ ದಿಡೀರನೇ ಕರ್ನಾಟಕಕ್ಕೆ ಬಂದ ಕೂಡಲೇ ಹೇಗೆ ಹುಟ್ಟುತ್ತದೆ. ಇದಕ್ಕೆ ಯಾರು ಕಾರಣ. ಯಾಕೆ ಈ ಮನಸ್ಥಿತಿ.! ಇದೇ ಸಂದರ್ಬದಲ್ಲಿ ಒಬ್ಬ ಕಲಾವಿದರು ಹೇಳಿದ್ರು, ಒಂದು ದಾರಾವಾಹಿ ಕನ್ನಡಕ್ಕೆ ಡಬ್ ಮಾಡಲು ಬಿಟ್ಟರೆ, ಅದರ ಜೊತೆಗೆ ನೂರಾರು ದಾರಾವಾಹಿಗಳು ಬಂದು ನಿಲ್ಲುತ್ತವೆ ಅಂತ.! ಇದು ಯಾವ ಮನಸ್ಥಿತಿಯನ್ನು ತೋರಿಸುತ್ತದೆ. ಸ್ಪರ್ದೆ ಎದುರಿಸುವ ಹಿಂಜರಿಕೆಯನ್ನು ತೋರಿಸುತ್ತದೆ ಅಲ್ಲವೇ.! ಸ್ಪರ್ದೆ ಎಂದ ತಕ್ಷಣ ಬೀದಿಗೆ ಬರುವ ಮಾತು ಇತರ ಬಾಶೆಯ ಕಲಾವಿದರ ಬಾಯಲ್ಲಿ ಬರದೇ ಬರೀ ನಮ್ಮ ಕಲಾವಿದರ ಬಾಯಲ್ಲಿ ಮಾತ್ರ ಏಕೆ ಬರುತ್ತದೆ.? ಒಂದು ಹಿಂದಿ ಬಾಶೆಯಲ್ಲಿರುವ ದಾರಾವಾಹಿಯನ್ನು ಕನ್ನಡ ಚಾನಲ್ಲಿನಲ್ಲಿ ಕನ್ನಡದಲ್ಲಿ ತೋರಿಸಿದರೇ ಅದು ಕನ್ನಡ ವಿರೋದಿ ಎನ್ನುವ ಇವರ ಕನ್ನಡತನಕ್ಕೆ ಏನನ್ನಬೇಕು. ಡಬ್ ಮಾಡದೇನೇ ಹಿಂದಿಯಲ್ಲೇ ತೋರಿಸಿದರೆ ಅದು ಕನ್ನಡಪರವಾಗುವುದೋ.! ಮತ್ತಷ್ಟು ಓದು 
`ಆವರಣ’ ಹಿಂದಿಗೆ
-ಕಾಲಂ ೯
ಕನ್ನಡದಲ್ಲಿ ವಾದ-ವಿವಾದಗಳಿಗೆ ಕಾರಣವಾಗಿದ್ದ ಎಸ್. ಎಲ್. ಭೈರಪ್ಪನವರ ‘ಆವರಣ’ ಹಿಂದಿ ಜಗತ್ತನ್ನೂ ಪ್ರವೇಶಿಸಿದೆ. ಈ ಹಿಂದೆಯೇ ತಮಿಳು, ಮರಾಠಿ, ಸಂಕ್ಸಿತಕ್ಕೆ ಆವರಣ ಹೋದ ಸುದ್ದಿ ಇತ್ತು.
ಮುಸ್ಲಿಂ ನವಾಬರ ‘ಜನಾನ’ದ ವರೆಗೆ ಕಥೆ ಪ್ರವೇಶಿಸಿದ್ದು ಒಂದು ಕಡೆಯಾದರೆ ಮತ್ತೊಂದೆಡೆ ಬುದ್ಧಿಜೀವಿಗಳ ಹರಕು-ಹುಳುಕನ್ನು ಕಾದಂಬರಿ ಹರಾಜು ಹಾಕಿ ವಿವಾದಕ್ಕೆ ಕಾರಣವಾಗಿತ್ತು. ಒಂದೇ ವರ್ಶದಲ್ಲಿ 20ಕ್ಕೂ ಹೆಚ್ಚು ಮುದ್ರಣಗಳಿಗೂ ಹೋಗಿತ್ತು.
ಮೂಲಕಥೆ ಉತ್ತರಭಾರತದ ಹಿಂದಿ ಜಗತ್ತಿನದೇ. ಇದೀಗ ಕಾದಂಬರಿ ಹಿಂದಿ ಜಗತ್ತನ್ನು ಪ್ರವೇಶಿಸಿದೆ. ಕುವೆಂಪು ಭಾಷಾ ಭಾರತಿಯ ಅಧ್ಯಕ್ಷರಾಗಿರುವ ಡಾ| ಪ್ರಧಾನ ಗುರುದತ್ ಹಿಂದಿಗೆ ಅನುವಾದಿಸಿದ್ದಾರೆ.
ಇಂಡಿಯಾ ಟುಡೇ ಹಿಂದಿ ಅವತರಣಿಕೆಯ ಈ ವಾರದ ಸಂಚಿಕೆ ಅರ್ಧ ಪುಟದ ವಿಮರ್ಶೆ ಪ್ರಕಟಿಸಿದೆ. ವಿಮರ್ಶಕ ಶಶಿಭೂಷಣ ದ್ವಿವೇದಿಗೆ ಪ್ರಧಾನರ ಅನುವಾದ ಸಮಧಾನ ತಂದಿಲ್ಲ.
ಇದೇ ಅಗಸ್ಟ್ 16ರಂದು ಕೇರಳದ ಕೊಚ್ಚಿನ್ ನಲ್ಲಿ ಆವರಣದ ಸಂಸ್ಕೃತ ಆವೃತ್ತಿಗೆ ಕೇಂದ್ರ ಸಾಹಿತ್ಯ ಅಕಾಡಮಿಯ ‘ಅತ್ಯುತ್ತಮ ಅನುವಾದ’ ಪುರಸ್ಕಾರ ಸಿಗಲಿದೆ ಎಂದು ಗೊತ್ತಾಗಿದೆ.
**********
ಜಾತಿ ಸೂಚಕ ಹೆಸರಿಗೆ ನಿರ್ಬಂಧ, ಹಿಮಾಚಲ ಪೊಲೀಸರ ಮಾದರಿ ನೀತಿ
-ರಾಕೇಶ್ ಎನ್ ಎಸ್
ಹಿಮಾಚಲ ಪ್ರದೇಶದ ಪೊಲೀಸ್ ಇಲಾಖೆ ಅತ್ಯುತ್ತಮ ನಿರ್ಧಾರವೊಂದನ್ನು ಕೈಗೊಂಡಿದೆ. ಅದೇನೆಂದರೆ ತನ್ನ ಪೊಲೀಸರ ಪೂರ್ಣ ಹೆಸರಿನ ಜೊತೆ ಸಾಮಾನ್ಯವಾಗಿ ಒಂದು ಭಾಗವಾಗಿರುವ ಜಾತಿ ಸೂಚಕ ಹೆಸರನ್ನು ಕಿತ್ತು ಹಾಕುವ ವಿಶಿಷ್ಟ ಯೋಜನೆಯನ್ನು ಅದು ಹಾಕಿಕೊಂಡಿದೆ ಎಂದು ‘ದಿ ಇಂಡಿಯನ್ ಎಕ್ಸ್‌ಪ್ರೆಸ್’ನ ಜೂನ್ ೨೪ರ ನವದೆಹಲಿ ಆವೃತ್ತಿಯ ಮುಖಪುಟದಲ್ಲಿನ ವರದಿಯೊಂದು ಹೇಳುತ್ತಿತ್ತು.






