ಕನ್ನಡವೆನೆ ಕುಣಿದಾಡುವುದೆನ್ನೆದೆ…
ಇತ್ತೀಚೆಗಿನ ಎರಡು ಸಂಗತಿಗಳು ನಮ್ಮ ಕನ್ನಡ ನುಡಿ ಈ ರಾಜ್ಯದ ಘನತೆ ಬಗ್ಗೆ ಹತ್ತು ಹಲವು ವಿಚಾರಗಳ ಚರ್ಚೆಗೆ ವೇದಿಕೆಯಾಗಿವೆ. ಅದು ಹೇಮಾಮಾಲಿನಿ ನಮ್ಮ ರಾಜ್ಯದಿಂದ ಆರಿಸಿ ಬಂದಿದ್ದಿರಬಹುದು ಅಥವಾ ಬೆಳಗಾವಿಯಲ್ಲಿ ನಾರಾಯಣ ಮೂರ್ತಿ ಅವರು ವಿಶ್ವ ಕನ್ನಡ ಸಮ್ಮೇಳನ ಉದ್ಘಾಟಿಸಲಿರುವುದು.
ಇವೇ ಆ ಎರಡು ವಿದ್ಯಮಾನಗಳು. ಪತ್ರಿಕೆಯಲ್ಲಿ ಮಾತ್ರವಲ್ಲದೇ ನೆಟ್ ಲೋಕದಲ್ಲು ಚರ್ಚೆಗೆ ಗ್ರಾಸವಾಗಿತ್ತು. ಇದು ಒಳ್ಳೆಯ ಬೆಳವಣಿಗೆ. ಚರ್ಚೆ ಯಾವಾಗಲೂ ಭಿನ್ನ ದನಿ ಗಳನ್ನು ಕೇಳಿಸುತ್ತದೆ. ಮತ್ತು ಭಿನ್ನ ಸ್ವರ ಕೇಳಿಸುತ್ತದೆ..ಆದರೆ ಪೂರ್ವಾಗ್ರಹ ಪೀಡಿತ ಕಿವಿಗಳಿಗೆ ಭಿನ್ನ ರಾಗ ಬೇಕಾಗಿಲ್ಲ.ಫೇಸ್ ಬುಕ್ ನಲ್ಲಿ ನಾ ಹಾಕಿದ ಕಾಮೆಂಟಿಗೆ ಉತ್ತರವಾಗಿ ನನ್ನ ಮಾತೃಭಾಷೆ ಯಾವುದೆಂದು ಪ್ರಶ್ನಿಸಲಾಯಿತು. ನಾ ಅದಕ್ಕೆ ಸರಿಯಾದ ಉತ್ತರ ಕೊಟ್ಟೆ. ಸ್ನೇಹಿತ ರೋರ್ವರು ಬರೆಯುತ್ತ ವಿಶ್ವಕನ್ನಡ ಸಮ್ಮೇಳನ ಮಲ್ಯ ಅವರು ಉದ್ಘಾಟಿಸಲಿ ಎಂದು ಕುಹಕವಾಡಿದರು. ಈಗ ಮೂರ್ತಿ ಅವರಿಗೂ ಇರಿಸುಮುರಿಸಾಗಿ ನಮ್ಮ ಮುಖ್ಯಮಂತ್ರಿ ಜೊತೆ ನಕಾರ ಸೂಚಿಸಿದ್ದರೂ ತಮ್ಮ ಮೂಗು ಎಲ್ಲಿ ಮಣ್ಣಾಗುತ್ತದೆ ಎಂಬ ಹೆದರಿಕೆ ಸರಕಾರಕ್ಕೂ ಬಂದು ಶತಾಯ ಗತಾಯ ಮೂರ್ತಿ ಅವರೇ ಅದನ್ನು ಉದ್ಘಾಟಿಸಲಿದ್ದಾರೆ ಅಂತ ಹೇಳಿಕೆ ಬಂದಿದೆ. ಮತ್ತಷ್ಟು ಓದು 
ಡಾಲರ್ ಲೆಕ್ಕಕ್ಕೆ : ಕನ್ನಡ ಪಕ್ಕಕ್ಕೆ
– ರಾಕೇಶ್ ಶೆಟ್ಟಿ
ಬೆಳಗಾವಿಯಲ್ಲಿ ನಡೆಯೋ ವಿಶ್ವ ಸಮ್ಮೇಳನದ ಉದ್ಘಾಟನೆಗಾಗಿ ಇನ್ಫೋಸಿಸ್ ನಾರಾಯಣ ಮೂರ್ತಿಯವರನ್ನ ಸರ್ಕಾರ ಆಹ್ವಾನಿಸಿದ್ದು, ಮತ್ತದಕ್ಕೆ ಸಾಹಿತಿ ಬರಗೂರು ರಾಮಚಂದ್ರಪ್ಪ ಅವರು ಆಕ್ಷೇಪಿಸಿ ಪತ್ರ ಬರೆದಿದ್ದು ಈದೀಗ ಚರ್ಚೆಗೆ ಗ್ರಾಸವಾಗಿದೆ.ಯಾರೇ ಕೂಗಾಡಲಿ ಊರೇ ಹೊರಾಡಲಿ ’ಇನ್ಫಿ ನಾಣಿ’ಯವ್ರೆ ಉದ್ಘಾಟನೆ ಮಾಡ್ತಾರೆ ಅಂತ ಯಡ್ಯೂರಪ್ಪನವ್ರು ಹೇಳಿಯಾಗಿದೆ.ಅದು ಬದಿಗಿರಲಿ.ಬರಗೂರರ ಪತ್ರಕ್ಕೆ ಪ್ರತಿವಾದವಾಗಿ ಕನ್ನಡ ಪ್ರಭದಲ್ಲಿ ಪ್ರತಾಪ್ ಸಿಂಹ “ನಾರಾಯಣ ಮೂರ್ತಿ ಕನ್ನಡ ನಾಡಿನಲ್ಲಿ ಕನ್ನಡಿಗರಿಗೆ ಬದುಕು ಕಟ್ಟಿಕೊಟ್ಟದ್ದು ಕನ್ನಡದ ಕೆಲಸವಲ್ಲವೇ?ಕೇವಲ ಸಾಹಿತ್ಯ ಕೃಷಿಯೊಂದೇ ಕನ್ನಡದ ಕೈಂಕರ್ಯವೇ? ” ಅಂತ ಕೇಳಿದ್ದಾರೆ.ಮುಕ್ತ ಚರ್ಚೆಗೆ ಆಹ್ವಾನವನ್ನು ನೀಡಿದ್ದಾರೆ.ಅದನ್ನೆಲ್ಲ ಓದುವಾಗ ಬಹಳಷ್ಟು ಜನ ಬರಗೂರರಿಗೆನು ಹಕ್ಕಿದೆ?ಸಾಹಿತಿಗಳೇ ಏಕೆ ಬೇಕು ಅಂದಿದ್ದಾರೆ?
ನಿಜ.ಕೇವಲ ಸಾಹಿತ್ಯ ಕೃಷಿಯೊಂದೇ ಕನ್ನಡದ ಕೈಂಕರ್ಯವಲ್ಲ ಅನ್ನುವ ಪ್ರತಾಪ್ ಮಾತು ಒಪ್ಪಲೆಬೇಕಾದದ್ದು.ಆದರೆ ಬೆಂಗಳೂರಿನ ಭಾಗ್ಯೋದಯಕ್ಕೂ ಇನ್ಫೋಸಿಸ್ ನಾರಾಯಣ ಮೂರ್ತಿಯವರೆ ಕಾರಣ ಅನ್ನುವ ರೀತಿಯ ಮಾತುಗಳು ಸಹ್ಯವೇ?ಸುಮ್ಮನೆ ಕನ್ನಡಿಗರಿಗೆ ಕೆಲಸ ಕೊಟ್ರೂ,ಜೀವನ ಕೊಟ್ರೂ ಅಂತ ಅಬ್ಬರಿಸಿದರಾಯಿತೆ.ಕನ್ನಡಿಗರಿಗೆ ಕೆಲಸ ಕೊಟ್ರೂ ಕೊಟ್ರೂ ಅನ್ನೋವ್ರು ಒಮ್ಮೆ ಹೋಗಿ ಮೂರ್ತಿಯವರ ಕಂಪೆನಿಯಲ್ಲಿ ಎಷ್ಟು ಪ್ರತಿಶತ ಜನ ಕನ್ನಡಿಗರಿದ್ದಾರೆ?ಅಲ್ಲಿರುವ ಕನ್ನಡಿಗರಾದರು ಯಾವ ಡೆಸಿಗ್ನೇಷನ್ ಹೊಂದಿದ್ದಾರೆ? ಅಸಲಿಗೆ ಅಲ್ಲಿನ ಕನ್ನಡಿಗ ಉದ್ಯೋಗಿಗಳ ಪಾಡೇನಿದೆ ಅನ್ನುವುದಾದ್ರು ಕೇಳಿ ನೋಡಿ.ಅಲ್ಲಿ ಯಾರ ಕಾರು-ಬಾರು ನಡೆಯುತ್ತಿದೆ ಅನ್ನುವುದು ತಿಳಿಯಬಹುದು. ಇವೆಲ್ಲದರ ಸತ್ಯ ದರ್ಶನವಾದರೆ ಕನ್ನಡ ನಾಡಿನಲ್ಲಿ ಕನ್ನಡಿಗರಿಗೆ ಬದುಕು ಕಟ್ಟಿಕೊಟ್ಟರು ಅನ್ನುವಂತೆ ಮಾತಾಡಿರುವುದು ಸುಳ್ಳೇ ಸುಳ್ಳು ಅನ್ನುವುದು ಗೊತ್ತಾಗುತ್ತದೆ.
ನಾರಾಯಣ ಮೂರ್ತಿ ಅವರಿಂದ ಏನ್ ಕಲಿಬೇಕು, ಏನ್ ಬೇಡ ?
ಮೂರ್ತಿಯವರಿಂದ ಕಲಿಯಬೇಕಾದದ್ದು ಸಾಕಷ್ಟಿದೆ !

ವಿಜಯ್ ಮಲ್ಯ ವಿಶ್ವಕನ್ನಡ ಸಮ್ಮೇಳನವನ್ನು ಉದ್ಘಾಟನೆ ಮಾಡಬೇಕು!

ಪ್ರೀತಿ ನಿನ್ನೊಂದಿಗೆ ನನ್ನ ಬಾಳಿರಲಿ !!!!
ಶ್ರೀದೇವಿ ಅಂಬೆಕಲ್ಲು
ಪ್ರೀತಿ ನಿನ್ನೊಂದಿಗೆ ನನ್ನ ಬಾಳಿರಲಿ….ಈ ಪ್ರೀತಿ ಒಂಥರಾ ಕಚಗುಳಿ.. ಅದೊಂದು ಮಧುರ ಅನುಭೂತಿ. ಕೆಲವರಿಗೆ ಕಲ್ಪನೆಗೆ ನಿಲುಕದ್ದು, ಅಕ್ಷರಗಳಲ್ಲಿ ಬಣ್ಣಿಸಲಾಗದ್ದು…
ಆದ್ರೆ ಪ್ರೀತಿ ಎಂದರೆ ಕೇವಲ ’ಮಾತಲ್ಲ’, ಪ್ರೀತಿ ಎಂದರೆ ’ಜವಾಬ್ದಾರಿ’, ’ಪ್ರೀತಿ ಎಂದರೆ ’ದುಡಿಮೆ’, ಪ್ರೀತಿ ಎಂದರೆ ’ಬದುಕು’. ಪ್ರೀತಿ ಅನ್ನೋ ಸಂಬಂಧದೊಳಗೆ ನಂಬಿಕೆ, ಕಳಕಳಿ, ಮನವಿ, ಕಾಳಜಿ, ಸ್ನೇಹ, ಸೆಳೆತ, ಹೊಂದಾಣಿಕೆ ಒಂದಷ್ಟು ಮುನಿಸು ಜತೆಗೆ ಒಪ್ಪಂದ ಈ ಎಲ್ಲ ಭಾವಗಳೂ ಸಮ್ಮಿಳಿತಗೊಂಡಿರಬೇಕು.
ಗಂಡು- ಹೆಣ್ಣಿನ ನಡುವಿನ ಪ್ರೀತಿಯ ಸಂಬಂಧ ಅದೊಂದು ವಿಸ್ಮಯ ಲೋಕ. ಅದರೊಳಗಿನ ಪಯಣ ಒಂದು ಅದ್ಭುತ ಯಾನ. ಅಲ್ಲಿ ಒಮ್ಮೊಮ್ಮೆ ಮಳೆಯೂ ಇರುತ್ತದೆ. ಕಾಮನಬಿಲ್ಲೂ ಮೂಡುತ್ತದೆ. ಗೊತ್ತಲ್ವಾ… ಕಾಮನಬಿಲ್ಲು ಕಾಣಬೇಕು ಅಂದ್ರೆ ಮಳೆ ಬರಬೇಕು, ಬಿಸಿಲು ಇರಬೇಕು. ಹಾಗೆನೇ ಪ್ರೀತಿ ಉಳಿಬೇಕು ಅಂದ್ರೆ ಸಂಬಂಧದೊಳಗೆ ನಂಬಿಕೆನೂ ಇರಬೇಕು, ತ್ಯಾಗನೂ ಇರಬೇಕು. ಹಾಗಾಗಿ ನಂಬಿಕೆಯಲ್ಲಿ ರೂಪುಗೊಂಡ ಪ್ರೀತಿ ಕಳೆದುಕೊಳ್ಳುವುದಕ್ಕೆ ಸಾಧ್ಯ ಇಲ್ಲ, ಕಳೆದುಕೊಂಡ ಪ್ರೀತಿನ ಮರೆಯೋದಕ್ಕೂ ಸಾಧ್ಯ ಇಲ್ಲ. ಬದುಕಿರುವವರೆಗೆ ಪ್ರೀತಿ ’ಪ್ರೀತಿ’ಯಾಗಿ ಉಳಿಯದೇ ಹೋದರೂ ನೆನಪಾಗಿ ಕಾಡುವುದು ಖಂಡಿತ. ಮತ್ತಷ್ಟು ಓದು 
ಈ ಸುದ್ದಿ ಸಂಪಾದಕೀಯದ ಕಣ್ತಪ್ಪಿದ್ದು ಹೇಗೆ?
ವಿಶೇಷ ಅಂದ್ರೆ ಈ ಬ್ಲಾಗು ನಡೆಸೋರು ಯಾರು ಅಂತ ತಿಳಿಯೋಕೆ ಜನ್ರು ಮಾಡಿದ ತಿಣುಕಾಟ, ಹಾಕಿದ ಗೆಸ್ಸು ಕಡಿಮೆಯೇನಲ್ಲ. ಆದರೆ ಸಂಪಾದಕೀಯದ್ದು ಇದಕ್ಕೆಲ್ಲ ದಿವ್ಯಮೌನವೇ ಉತ್ತರ. ಇಂಥ ಮೌನವೇ ಜನರಿಗೆ ಈ ಬ್ಲಾಗಿನ ವಿಷಯಗಳಲ್ಲಿ ಓದುಗರಿಗೆ ಇನ್ನಷ್ಟು ಕುತೂಹಲ ಬೆಳೆಯುವಂತೆ ಮಾಡಿದೆ.ಸಂಪಾದಕೀಯ ಅಷ್ಟೇ ಮಾಡಿ ಸುಮ್ಮನಾಗಿದ್ರೆ ಅದರಲ್ಲಿ ಏನೂ ವಿಶೇಷ ಇರುತ್ತಿರಲ್ಲಿಲ್ಲ.ಟೀವಿ ಪೇಪರ್ ಹೀಗೆ ಎಲ್ಲ ಮಾಧ್ಯಮಗಳ ಆರೋಗ್ಯದ ಬಗ್ಗೆ ಆಗಾಗ ಮಾತಾಡ್ತಾ ಮೀಡಿಯಾಗಳ ಹಿಡನ್ ಅಜೆಂಡಾಗಳನ್ನು, ಹಿತಾಸಕ್ತಿಗಳನ್ನು ಜನರ ಎದುರಿಗೆ ಬೆತ್ತಲೆಗೊಳಿಸಿದ್ದು ಸುಳ್ಳೇನಲ್ಲ.ಇದೊಂಥರ ಜರ್ನಲಿಸಂ ವಿದ್ಯಾರ್ಥಿಗಳಿಗೆ ಪ್ರಾಕ್ಟಿಕಲ್ ಕ್ಲಾಸ್ ಅನ್ನಿಸಿದ್ರೆ ವಿಶೇಷವೇನಿಲ್ಲ ಬಿಡಿ. ಮತ್ತಷ್ಟು ಓದು 
ಈ ಮಾಯಿ ಬರೆದಷ್ಟೂ ಮುಗಿಯದ ಕಥೆ
ಚಿತ್ರಾ ಸಂತೋಷ್
ಇಂದು ಮಿರ್ವಾಲಾ ಎಂಬ ಪುಟ್ಟ ಹಳ್ಳಿಯಲ್ಲಿ ಶಾಲೆ ಇದೆ. ನೂರಾರು ಮಕ್ಕಳು ಅಲ್ಲಿ ಓದುತ್ತಿದ್ದಾರೆ. ಮೇಲ್ವರ್ಗ-ಕೆಳ ವರ್ಗದ ತಾರತಮ್ಯ ನಿಧಾನವಾಗಿ ಇತಿಹಾಸವಾಗುತ್ತಿದೆ. ಚೌಕಟ್ಟಿನೊಳಗೆ ಬಂಧನವಾಗುತ್ತಿದ್ದ ಹೆಣ್ಣು ಮಕ್ಕಳು ಹೊರಜಗತ್ತನ್ನು ಕಾಣುವ ಪ್ರಯತ್ನ ಮಾಡುತ್ತಿದ್ದಾರೆ. ನೊಂದ ಹೆಣ್ಣು ಮಕ್ಕಳು ಮಾಯಿಯ ಮಡಿಲಲ್ಲಿ ಭರವಸೆ ಕಾಣುತ್ತಿದ್ದಾರೆ. ಮೀರ್ವಾಲದಲ್ಲಿ ಇಂಥದ್ದೊಂದು ಕ್ರಾಂತಿ ಆಗುತ್ತಿದ್ದರೆ ಅದಕ್ಕೆ ಕಾರಣ ಮುಕ್ತಾರ್ ಮಾಯಿ, ಅವಳ ಆಶಾವಾದ ಅಷ್ಟೇ.
ಇವಳ ಬಗ್ಗೆ ಬರೆಯೋಕೇನಿದೆ?
ಪತ್ರಿಕೆಗಳಲ್ಲಿ, ಬ್ಲಾಗ್‌ಗಳಲ್ಲಿ ಪೇಜುಗಟ್ಟಲೆ ಅವಳ ಬಗ್ಗೆ ಬರೆದವರಿದ್ದಾರೆ. ಇನ್ನೇನಿದೆ ನಾನು ಬರೆಯೋದು ಹೊಸತು? ನನಗೂ ತುಂಬಾ ಸಲ ಹಾಗೆನಿಸಿದೆ. ಆದರೂ, ಇನ್ನೊಂದೆಡೆ ಆ ಹೆಣ್ಣು ಮಗಳು ಬತ್ತದ ತೊರೆ, ಅವಳೆಂದೂ ಮುಗಿಯದ ಕತೆ ಎಂದನಿಸುತ್ತದೆ. ಏಕೆಂದರೆ, ಶೋಷಣೆಗೆ ಎದೆಗೊಟ್ಟು ‘ಸ್ವಾತಂತ್ರ್ಯ’ ವನ್ನು ಕಂಡುಕೊಂಡ ಹೆಣ್ಣುಮಗಳು ಆಕೆ, ತನ್ನ ಬದುಕಿನ ಸೌಧವನ್ನು ತಾನೇ ನಿರ್ಮಿಸಿಕೊಂಡು ಜಗತ್ತಿನ ಕೋಟ್ಯಂತರ ಹೆಣ್ಣು ಮಕ್ಕಳಿಗೆ ಧೈರ್ಯದ ಪಾಠ ಕಲಿಸಿದವಳು ಅವಳು. ಕಣ್ಣೀರ ಕೋಡಿಯಲ್ಲೇ ಭರವಸೆಯ ಹೂವಂತೆ ಅರಳಿದವಳು ಅವಳು.
ಅವಳೇ ಮುಕ್ತಾರ್ ಮಾಯಿ.
ಈ ಹೆಸರು ಕೇಳದವರು ವಿರಳ. ಹುಟ್ಟೂರು ಪಾಕಿಸ್ತಾನದ ಮೀರ್ವಾಲ. ಪಾಕಿಸ್ತಾನ ಅಂದ್ರೆ ಅಲ್ಲಿ ಹೆಣ್ಣು ಮಕ್ಕಳ ಬದುಕೇನು? ಎನ್ನುವುದು ಜಗತ್ತಿಗೇ ಗೊತ್ತಿದೆ. ಇಲ್ಲಿ ಹೆಣ್ಣು ಮಕ್ಕಳಿಗೆ ಸಂಪ್ರದಾಯ, ಚೌಕಟ್ಟುಗಳೇ ಬಂಧನ. ಹೆಣ್ಣು ಮಕ್ಕಳು ನಾಲ್ಕು ಗೋಡೆಯಾಚೆಯಿಂದ ಹೊರಬಂದು, ಸಮಾಜದ ಮುಖ್ಯವಾಹಿನಿಯಲ್ಲಿ ಕಾಣಿಸಿಕೊಳ್ಳೋದೇ ಅಪರೂಪ. ಒಂದು ವೇಳೆ ಮನೆಯಿಂದ ಹೊರಬಂದರೆ ಮಗಳ ಭವಿಷ್ಯ ಉಳಿಯುತ್ತೆ ಅನ್ನೋ ಗ್ಯಾರಂಟಿ ಹೆತ್ತವರಿಗೂ ಇಲ್ಲ. ನಿತ್ಯ ಅರಾಜಕತೆಯ ಬೀಡಾಗಿದ್ದ ಪಾಕಿಸ್ತಾನದಂಥ ರಾಷ್ಟ್ರದಲ್ಲಿ ಒಬ್ಬಳು ಹೆಣ್ಣು ಮಗಳು ತನಗಾದ ಅನ್ಯಾಯದ ವಿರುದ್ಧ ಬದುಕನ್ನೇ ಪಣವಾಗಿಟ್ಟು ಹೋರಾಟ ಮಾಡಿ, ಗೆಲುವು ಪಡೆದಳೆಂದರೆ ಅದು ಮುಕ್ತಾರ್ ಮಾಯಿ ಮಾತ್ರ! ಈಗ ಪಾಕಿಸ್ತಾನದ ಹೆಣ್ಣು ಮಕ್ಕಳಿಗೆ ಮುಕ್ತಾರ್ ಮಾಯಿ ಕೇವಲ ಸಾಮಾನ್ಯ ಹೆಣ್ಣು ಮಗಳಲ್ಲ, ಅವಳೊಬ್ಬಳು ತಾಯಿ, ಹೋರಾಟಗಾರ್ತಿ, ಇಲ್ಲಿನ ಹೆಣ್ಣು ಮಕ್ಕಳ ದನಿ. ಮತ್ತಷ್ಟು ಓದು 
ಬದುಕ ‘ಜಾತ್ರೆ’ ಯಲ್ಲಿ ಸಾಹಿತ್ಯದ ಪಾತ್ರ!
ಅರೆಹೊಳೆ ಸದಾಶಿವ ರಾವ್

ಒಂದು ರೀತಿಯ ನವೀಕರಣಗೊಂಡ ಮೂಡ್‌ನೊಂದಿಗೆ ಬರೆಯಕುಳಿತರೆ, ಅದೇಕೋ ‘ಜಾತ್ರೆ’ಬಹಳವಾಗಿ ಕಾಡುತ್ತಿದೆ. ಇದು ಎಲ್ಲೆಡೆಯಲ್ಲಿಯೂ ಜಾತ್ರೆನಡೆಯುವ ಸಂದರ್ಭ. ಅದರಲ್ಲೂ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳು ಒಂದು ರೀತಿಯ ದೇವ-ದೈವದ ಕೇಂದ್ರವಾಗಿರುವ ಕಾರಣ, ಇದು ಒಂದು ರೀತಿಯ ಜಾತ್ರೆಯ ಸೀಸನ್. ಅದು ಕೋಲ, ಮಾರಿ, ನೇಮ, ರಥೋತ್ಸವ, ಗೆಂಡ ಸೇವೆ,…..ಇತ್ಯಾದಿ ಹೆಸರಿನಿಂದ ನಡೆಯುವ ವರ್ಷಂಪ್ರತಿ ಧಾರ್ಮಿಕ ಕಾರ್ಯಕ್ರಮಗಳಾದರೆ, ಅಷ್ಟಬಂಧ, ಬ್ರಹ್ಮಕಲಶೋತ್ಸವ, ಪುನ:ಪ್ರತಿಷ್ಠೆ, ನಾಗಮಂಡಲ…..ಇತ್ಯಾದಿಗಳಿಂದ ಕರೆಯಿಸಿಕೊಳ್ಳುವ ವಿಶೇಷ ಉತ್ಸವಗಳು. ಈಗ ನೀವು ಒಮ್ಮೆ ರಸ್ತೆ ಬದಿ ಹಾದಿರಿ ಎಂದಾದರೆ, ಇಂತಹ ಬ್ಯಾನರ್‌ಗಳು, ಕಟೌಟ್‌ಗಳು, ತೋರಣಗಳು ಎಲ್ಲೆಂದರಲ್ಲಿ ಕಾಣಸಿಕ್ಕಿದರೆ, ಎಲ್ಲಾ ಧಾರ್ಮಿಕ ಕೇಂದ್ರಗಳು ಹೊಸ ಬಣ್ಣ ಬಳಿದುಕೊಂಡು ಸಿಂಗಾರಗೊಂಡು ನಿಂತಿರುತ್ತವೆ. ಇಂತಹ ಉತ್ಸವಗಳು ಇಡಿಯ ಊರಿಗೆ ಊರೇ ಸಂಭ್ರಮಿಸಲು ಕಾರಣವಾಗುತ್ತವೆ. ಈ ಮೂಲಕ ನಾಟಕ, ಯಕ್ಷಗಾನ ಹಾಗೂ ಇನ್ನಿತರ ಕಲಾ ಪ್ರಕಾರಗಳ ಪ್ರದರ್ಶನ, ಊರಿನ ಸಂಭ್ರಮಕ್ಕೆ ಮೆರುಗು ನೀಡಿದರೆ, ಒಂದು ರೀತಿಯ ಜಡ ಹಿಡಿದ ಮನಸ್ಸುಗಳಿಗೆ ನವೀಕರಣವಾಗುವಲ್ಲಿ ಬಹು ಮುಖ್ಯ ಪಾತ್ರವಹಿಸುತ್ತದೆ.
ಇತ್ತೀಚೆಗೆ ನನ್ನೂರಿನ ಜಾತ್ರೆಯಲ್ಲಿ ಎರಡು ದಿನ ಕಳೆದು ಬಂದಾಗ ನನಗನಿಸಿದ್ದು, ಇದೂ ಜೀವನದ ಒಂದು ಅವಿಭಾಜ್ಯ ಅಂಗವೇ ಅಲ್ಲವೇ ಎಂಬುದು. ಅಲ್ಲಿ ಏನುಂಟು ಏನಿಲ್ಲ ಹೇಳಿ? ಬಾಲ್ಯದ ಗೆಳೆಯರ ಪುನರ್ಮಿಲನ, ಕುಡಿಮೀಸೆಯ ದಿನಗಳ ಕನಸಿನ ಮರು ನೆನಪು, ಚಾಪೆ ಹಿಡಿದೇ ಆಟಕ್ಕೆಂದು ಹೋಗಿ ೫ರೂಪಾಯಿಯ ಟಿಕೆಟ್ ಪಡೆದು ಗದ್ದೆಯಲ್ಲಿ ಮಲಗಿ ಬೆಳಗ್ಗೆದ್ದು ಮನೆಗೆ ಮರಳಿದ ದಿನದ ಮೆಲುಕು, ಆಟಿಕೆಯ ಅಂಗಡಿಯ ಮುಂದೆ ನಿಂತು ಇದು ಬೇಕೇ ಬೇಕೆಂದು ರೊಚ್ಚೆ ಹಿಡಿದು ಸಿಗದಾಗ ಮನೆಗೆ ಬಂದು ಅಳುಮೋರೆ ಹಾಕಿ ಹಬ್ಬ ಬಹಿಷ್ಕಾರ ಮಾಡಿದ ದಿನಗಳ ಗಮ್ಮತ್ತು……ಒಂದೇ ಎರಡೇ!. ಇದೆಲ್ಲಾ ಬಾಲ್ಯದ ದಿನಗಳು ಮರಳಿ ಬರಬೇಕೆಂದರೆ ಮತ್ತು ಬದುಕಿನ ಇಂದಿನ ಜಂಜಡಗಳಿಗೆ ತುಸು ನೆಮ್ಮದಿ ಸಿಗಬೇಕೆಂದಿದ್ದರೆ, ವರ್ಷಕ್ಕೊಮ್ಮೆ ನಡೆಯುವ ಹಬ್ಬಕ್ಕೆ ಹೋಗಿಯೇ ಸವಿಯಬೇಕು ಎಂಬುದನ್ನು ಈ ಸಲ ನನ್ನೂರ ಹಬ್ಬ ನನಗೆ ಖಚಿತವಾಗಿಸಿತು.
ಮತ್ತಷ್ಟು ಓದು 
ಹಾರೋಬೂದಿಯ ವಿರುದ್ಧ ಅಖಾಡಕ್ಕಿಳಿದ ಪೇಜಾವರ ಶ್ರೀ ಮತ್ತು ಸಂಘಟನೆಗಳು
“ಎಂಥ ದೊಡ್ಡ ದೊಡ್ಡರೆಲ್ಲ ಬಂದ್ರು, ವೀಡಿಯೋ ಮಾಡಿದ್ರು, ಪತ್ರಿಕೆಯವ್ರು ಬಂದ್ರು ಏನೆಲ್ಲ ಬರೆದ್ರೂ, ಬೂದಿ ಪರೀಕ್ಷೆ ಮಾಡ್ತೀವಿ ಅಂತ ಬಂದ್ರು, ಬೇಕಾದ್ದು ರಿಪೋರ್ಟ್ ಕೊಟ್ರು ಆದ್ರು ಯಾರಿಂದಲೂ ಏನೂ ಮಾಡೋಕೆ ಆಗ್ಲಿಲ್ಲ. ಇನ್ನು ನೀವ್ ವಿಡೀಯೋ ಮಾಡಿ ಏನ್ ಬರೆದ್ರೂ ನಮಗೇನಿಲ್ಲ. ಇದು ಸರ್ಕಾರದ್ದೇ ಪ್ರೋಜೆಕ್ಟ್, ಸರಕಾರದ್ದೇ ಕಂಪೆನಿ. ಏ ಇವರ ಇವರ ಕಾರಿಗೆ ಅಡ್ಡ ನಿಲ್ಲಿಸ್ರೋ. ಕ್ಯಾಮೆರಾ ಕಿತ್ತುಕೊಳ್ಳೋ….”
ಎಂದು ಇತ್ತಿಚೆಗೆ ಉಡುಪಿಯ ಪ್ರತಿಷ್ಠಿತ ಕಂಪೆನಿಯ ಗುತ್ತಿಗೆದಾರನೊಬ್ಬ ಹಾರೋಬೂದಿ ಇರುವ ಸ್ಥಳಕ್ಕೆ ಹೋದ್ರೆ ಈ ರೀತಿ ಧಮ್ಕಿ ಹಾಕುತ್ತಾನೆ. ಇಷ್ಟೆಲ್ಲ ಧೈರ್ಯದಿಂದ ಈ ಗುತ್ತಿಗೆದಾರ ಮಾತಾಡ್ತಾ ಇರಬೇಕಾದ್ರೆ ಅವನ ಹಿಂದೆ ಪ್ರಬಲವಾದ ಕಾಣದ ಕೈ ಇರಬಹುದು ನೀವೆ ಯೋಚಿಸಿ. ಇಂಥ ಎಷ್ಟೋ ಜನರ ಉಪಟಳವನ್ನು ನಮ್ಮ ಜನ ಎಷ್ಟು ದಿನ ಅಂತ ಸಹಿತಾರೇ? ಅದಕ್ಕೆ ನೋಡಿ ಈ ಪ್ರತಿಷ್ಠಿತ ಕಂಪೆನಿ ಮತ್ತು ಅಹಂಕಾರಿಗಳ ವಿರುದ್ಧ ನೊಂದ ಜನತೆ ಚಳುವಳಿಗೆ ಇಳಿದಿದ್ದಾರೆ.
ಯುಸಿಪಿಎಲ್ ವಿರುದ್ಧ ಜನಾಂದೋಲನ”
“ಪೇಜಾವರ ಶ್ರೀ ಹಾರೋಬೂದಿಯಿಂದ ತೊಂದರೆಗೊಳಗಾದವರ ನಿವಾಸಗಳಿಗೆ ಭೇಟಿ, ನಾಗಾರ್ಜುನ ಆಧುನಿಕ ಭಸ್ಮಾಸುರ ಈ ಯೋಜನೆಯ ವಿರುದ್ಧ ಯಾರೇ ಹೋರಾಟ ಮಾಡಿದರೂ ನನ್ನ ಸಂಪೂರ್ಣ ಬೆಂಬಲ ಇದೆ”
ಹಾರೂಬೂದಿ ಅತ್ಯಂತ ವಿಷಕಾರಕ ಅಂಶ ಹೊಂದಿದ್ದು ಪರಿಸರ ಜಾನುವಾರು ಹಾಗೂ ಜನಜೀವನದ ಮೇಲೆ ಗಂಭೀರ ಪರಿಣಾಮ ಬೀರಲಿದೆ- ಪರಿಸರವಾದಿ ಡಾ.ಎನ್.ಎ. ಮಧ್ಯಸ್ಥ ಆತಂಕ”
“ ಕಂಪೆನಿಯನ್ನು ಸ್ಥಗಿತಗೊಳಿಸಲು ಮಾರ್ಚ್ ೫ ರಂದು ದಕ್ಷಿಣಕನ್ನಡ ಉಡುಪಿ ಬಂದ್ ನಡೆಸಲು ನಿರ್ಧಾra
ಇವೆಲ್ಲ ಇತ್ತೀಚೆಗೆ ಪ್ರಜಾವಾಣಿಯಲ್ಲಿ ಮೂಡಿಬಂದ ಸುದ್ದಿಗಳು
ನಿಲುಮೆಯ ಪ್ರಿಯ ಓದುಗರೇ, ಕಳೆದ ಕೆಲವು ದಿನಗಳ ಹಿಂದೆ ನಂದಿಕೂರಿನ ಪ್ರತಿಷ್ಠಿತ ಕಂಪೆನಿಯ ಕುರಿತಂತೆ ಹಾರೋಬೂದಿಯ ನೋಡಿದಿರಾ ಎಂಬ ಲೇಖನ ಪ್ರಕಟವಾಗಿತ್ತು. ಅದರಲ್ಲಿ ಬೂದಿಯಿಂದ್ ಆಗುತ್ತಿರುವ ತೊಂದರೆಯ ಬಗ್ಗೆ ಮತ್ತು ಜನರ ಬಗ್ಗೆ ಹೇಳಲಾಗಿತ್ತು. ಈ ಸಮಸ್ಯೆಯನ್ನು ಬಗೆಹರಿಸಲು ಸಂಘಟನೆ ಮತ್ತು ಸರ್ಕಾರಕ್ಕೆ ಮನವಿ ಮಾಡಲಾಗಿತ್ತು. ಅದರ ಮುಂದುವರಿಕೆಯೆಂಬಂತೆ ಈ ಸಮಸ್ಯೆಯ ವಿರುದ್ಧ ಜನಾಂದೋಲನ ಆರಂಭವಾಗಿದೆ.
ಪೇಜಾವರಶ್ರೀಗಳು ಸೇರಿದಂತೆ ಅನೇಕ ಪ್ರಮುಖರು ಈ ಅಂದೋಲನದಲ್ಲಿ ಪಾಲ್ಗೊಂಡಿದ್ದಾರೆ. ಈ ಆಂದೋಲನ ಪ್ರಾರಂಭವಾಗಿ ನಂದಿಕೂರಿನ ಸುತ್ತಮುತ್ತಲ ಪ್ರದೇಶಗಳಾದ ಎರ್ಮಾಳು, ಕಟ್ಪಾಡಿ, ಉದ್ಯಾವರ ಸೇರಿದಂತೆ ಸುಮಾರು ೫೦ ಕಡ್‌ಗಳಲ್ಲಿ ಪಾದಯಾತ್ರೆ ನಡೆಸಿ ಜನಜಾಗೃತಿ ಮೂಡಿಸಲಾಗಿದೆ. ಅಲ್ಲದೇ ಇದೇ ಮಾರ್ಚ್ ೫ ರಂದು ದಕ್ಷಿಣಕನ್ನಡ ಉಡುಪಿ ಜಿಲ್ಲಾ ಬಂದ್ ಗೆ ಕರೆ ನೀಡಲಾಗಿದೆ. ಈ ಜನಾಂದೋಲನದಲ್ಲಿ ಪಾದಯಾತ್ರೆಯ ಮೂಲಕ ಕಂಪೆನಿಯ ಯೋಜನೆಯ ಅಪಾಯವೆನ್ನು ಬಿಂಬಿಸುವ ಟ್ಯಾಬ್ಲೋ ಹಾಗೂ ಧ್ವನಿಮುದ್ರಿತ ಯಕ್ಷಗಾನ ಪ್ರಸಂಗ, ಕಂಪೆನಿ ವಿರೋಧಿ ಘೋಷಣೆಗಳು, ಭಿತ್ತಿಪತ್ರಗಳನ್ನು ಹಂಚುವ ಮೂಲಕ ಜಾಗೃತಿ ಮೂಡಿಸಲಾಗಿದೆ. ದಕ್ಷೀಣಕನ್ನಡ ಜಿಲ್ಲಾ ಬಂದ್‌ಗೆ ಜಿಲ್ಲೆಗಳ ಪ್ರಮುಖ ಸಂಘಟನೆಗಳಾದ ಮೀನುಗಾರರ ಸಂಘ, ಉಡುಪಿ ತಾಲೂಕು ಗ್ರಾಮ ಪಂಚಾಯಿತಿ ಒಕ್ಕೂಟ, ವಿಜಯಕುಮಾರ ಹೆಗ್ಡೆ ನೇತೃತ್ವದ ರೈತಸಂಘ, ಉದ್ಯಾವರ ಗ್ರಾಮ ಸಂರಕ್ಷಣಾ ಸಮಿತಿ ಮೊದಲಾದ ಸಂಘಟನೆಗಳು ಬೆಂಬಲ್ ಸೂಚಿಸಿವೆ.
ಇದೆಲ್ಲ ಬೆಳವಣಿಗೆಗಳನ್ನು ನೋಡಿದಾಗ ನೊಂದ ಜನರಿಗೆ ನ್ಯಾಯ ದೊರೆಯಬಹುದೆಂಬ ಆಶಾಕಿರಣ ಮೂಡುತ್ತಿದೆ. ಈಗ ಹೋರಾಟ ಮುಂದಾಗಿರುವ ಸಂಘಟನೆಗಳು ಯಾವುದೇ ಒತ್ತಡಕ್ಕೆ ಮಣಿಯದೇ ಜನಪರವಾದ ಹೋರಾಟ ಮಾಡಿ ಮುಂದೆ ಬರಬಹುದಾದ ದೊಡ್ಡ ಗಂಡಾಂತರವನ್ನು ತಪ್ಪಿಸಬೇಕಾಗಿದೆ. ಇದಲ್ಲದೇ ಈ ಹೋರಾಟಕ್ಕೆ ಸ್ಥಳೀಯ ಜನರ ಬೆಂಬಲವೂ ಅತ್ಯಗತ್ಯ.
ಚಿತ್ರ ಕೃಪೆ: deccanherald.com, thecanaratimes.com
“ದೇವರು” ಇದ್ದಾನಾ….? ಮೂರ್ತಿರಾಯರು ಏನಂತಾರೆ ಕೇಳಿ
ಶತಶತಮಾನಗಳ ಹಿಂದೆ, ಮಾನವನಲ್ಲಿ ಆತ್ಮಪ್ರಜ್ಣೆ ಅರಳಿ ಅವನು ತನ್ನ ಸುತ್ತಲ ಪ್ರಪಂಚವನ್ನು ಕೂತೂಹಲದಿಂದ ನೋಡಲಾರಂಭಿಸಿದಾಗ ಅವನಿಗೆ ಕಂಡದ್ದೇನು ?
ಅಗ್ನಿಪರ್ವತಗಳಿಂದ ಭುಗಿಲೆದ್ದು ಗಗನಕ್ಕೆ ಏರುತ್ತಿರುವ ಜ್ವಾಲೆ; ಕಾದು ಕರಗಿ ಉಕ್ಕಿ ತನ್ನ ದಾರಿಯಲ್ಲಿ ಸಿಕ್ಕಿದ್ದನ್ನೆಲ್ಲ ಸುಟ್ಟು ಹರಿಯುತ್ತಿರುವ ಲಾವಾರಸ; ಮೋಡದ ದಟ್ಟಣೆಯನ್ನು ಇರಿದಿರಿದು ಕಣ್ಣು ಕೋರ್ಯೆಸುವ ಮಿಂಚು; ಕಾಳ್ಗಿಚ್ಚಿನಿಂದ ಭಸ್ಮವಾಗುತ್ತಿರುವ ಕಾಡು; ಕ್ಷುಬ್ದವಾದ ಸಮುದ್ರ, ಅದರ ತೀರದ ಮೇಲೆ ಅಪ್ಪಳಿಸುವ ಅಲೆಗಳು; ಇವುಗಳ ಜೊತೆಗಿನ ಗುಡುಗಿನ ಆರ್ಭಟ, ಸಿಡಿಲಿನ ಹೊಡೆತ, ಈ ಭಯಂಕರ ಪ್ರಪಂಚದಲ್ಲಿ ನಾನು ಹೇಗೆ ತಾನೆ ಬದುಕಿಯೇನು ?’ ಎಂದು ಅವನು ತಲ್ಲಣಿಸಿರಬೇಕು.
ಹೀಗೆ ಪ್ರಕೃತಿಯ ರೋಷವನ್ನೂ ಅದರ ಮಾರಕ ಪರಿಣಾಮವನ್ನೂ ನೋಡಿದ ಮಾನವನೇ ಅದರ ಮತ್ತೊಂದು ಮುಖವನ್ನೂ ನೋಡಿದ; ಸೂರ್ಯೋದಯ ಸೂರ್ಯಾಸ್ತಗಳ ಬಣ್ಣದ ಸಿರಿ; ಕಾಮನಬಿಲ್ಲಿನ ಸೊಬಗು; ಮಳೆಯಿಂದ (ಆ ಮಳೆ ಗುಡುಗು ಸಿಡಿಲುಗಳ ಜೊತೆಗೆ ಬಂದದ್ದು!) ತೊಯ್ದು ಕಾಡಿನಲ್ಲೂ ಬಯಲಿನಲ್ಲೂ ಹಸುರಿನ ಹಬ್ಬ; ಗಾಳಿಯಲ್ಲಿ ನಲಿದಾಡುತ ಹೂವುಗಳ ಕೋಮಲತೆ, ಸುಗಂಧ; ರಾತ್ರಿಯ ಆಕಾಶದಲ್ಲಿ ಮಿನುಗುವ ನಕ್ಷತ್ರಗಳು, ಅವುಗಳ ನಡುವಿನ ರಹಸ್ಯಪೂರ್ಣ
ನೀಲಿಯಾಳ; ಜಗತ್ತಿಗೆಲ್ಲ ಸೌಮ್ಯ ಸೌಂದರ್ಯವನ್ನು ಕೊಟ್ಟು, ತಂಪೆರೆಯುವ ಬೆಳದಿಂಗಳು; ಸಮುದ್ರದ ಪಾರವಿಲ್ಲದ ಹರವು, ಗಾಂಭೀರ್ಯ……….










