ಈ ಸುದ್ದಿ ಸಂಪಾದಕೀಯದ ಕಣ್ತಪ್ಪಿದ್ದು ಹೇಗೆ?
ವಿಶೇಷ ಅಂದ್ರೆ ಈ ಬ್ಲಾಗು ನಡೆಸೋರು ಯಾರು ಅಂತ ತಿಳಿಯೋಕೆ ಜನ್ರು ಮಾಡಿದ ತಿಣುಕಾಟ, ಹಾಕಿದ ಗೆಸ್ಸು ಕಡಿಮೆಯೇನಲ್ಲ. ಆದರೆ ಸಂಪಾದಕೀಯದ್ದು ಇದಕ್ಕೆಲ್ಲ ದಿವ್ಯಮೌನವೇ ಉತ್ತರ. ಇಂಥ ಮೌನವೇ ಜನರಿಗೆ ಈ ಬ್ಲಾಗಿನ ವಿಷಯಗಳಲ್ಲಿ ಓದುಗರಿಗೆ ಇನ್ನಷ್ಟು ಕುತೂಹಲ ಬೆಳೆಯುವಂತೆ ಮಾಡಿದೆ.ಸಂಪಾದಕೀಯ ಅಷ್ಟೇ ಮಾಡಿ ಸುಮ್ಮನಾಗಿದ್ರೆ ಅದರಲ್ಲಿ ಏನೂ ವಿಶೇಷ ಇರುತ್ತಿರಲ್ಲಿಲ್ಲ.ಟೀವಿ ಪೇಪರ್ ಹೀಗೆ ಎಲ್ಲ ಮಾಧ್ಯಮಗಳ ಆರೋಗ್ಯದ ಬಗ್ಗೆ ಆಗಾಗ ಮಾತಾಡ್ತಾ ಮೀಡಿಯಾಗಳ ಹಿಡನ್ ಅಜೆಂಡಾಗಳನ್ನು, ಹಿತಾಸಕ್ತಿಗಳನ್ನು ಜನರ ಎದುರಿಗೆ ಬೆತ್ತಲೆಗೊಳಿಸಿದ್ದು ಸುಳ್ಳೇನಲ್ಲ.ಇದೊಂಥರ ಜರ್ನಲಿಸಂ ವಿದ್ಯಾರ್ಥಿಗಳಿಗೆ ಪ್ರಾಕ್ಟಿಕಲ್ ಕ್ಲಾಸ್ ಅನ್ನಿಸಿದ್ರೆ ವಿಶೇಷವೇನಿಲ್ಲ ಬಿಡಿ.
ಅದೆಲ್ಲ ಇರಲಿ ನಾನು ಹೇಳಹೊರಟ ವಿಷಯ ಮರೆತೆ ಬಿಟ್ಟೆ.ಮೊನ್ನೆಯೇ ಈ ವಿಷಯ ಬರೆಯಬೇಕು ಅಂತಿದ್ದೆ ಆದ್ರೆ ಏನೋನೋ ಕೆಲಸ ತಗುಲಿ ಹಾಕಿಕೊಂಡು ಬಿಡುವಾದದ್ದೇ ಈಗ ನೋಡಿ.ಹೀಗೆ ಸಂಪಾದಕೀಯದ ಹಳೆ ಪೋಸ್ಟ್ ಗಳಲ್ಲಿ ಕಣ್ಣಾಡಿಸುವಾಗ “ಒಂದು ಸುದ್ದಿಯನ್ನು ಬೇರೆಬೇರೆ ಪತ್ರಿಕೆಗಳು ಹೇಗೆ ನೋಡುತ್ತವೆ ಎಂಬುದೇ ಮಾಧ್ಯಮ ವೃತ್ತ ಆರಿಸಿಕೊಂಡ ವಿದ್ಯಾರ್ಥಿಗಳಿಗೆ ಅಧ್ಯಯನದ ಸರಕಾಗಬಹುದು.” ಅಂತ ಹೇಳುತ್ತಾ ಸಂಪಾದಕೀಯ ತಂಡ, ‘ಭಯೋತ್ಪಾದನಾ ಕೃತ್ಯ ನಡೆಸಿದ ಮುಸ್ಲಿಮರು ಮಾತ್ರ ಭಯೋತ್ಪಾದಕರು!’ ಅನ್ನೋ ವಿಷಯದ ಕುರಿತ ವಿಶ್ಲೇಷಣೆ ಪ್ರಕಟಿಸಿತ್ತು.ಮಾಲೆಗಾಂವ್ ಸ್ಪೋಟ ಪ್ರಕರಣದ ಆರೋಪಿ ಪ್ರವೀಣ್ ಮುತಾಲಿಕನ ಬಂಧನದ ಸುದ್ದಿಯನ್ನು ಕನ್ನಡ ಪತ್ರಿಕೆಗಳು ಪ್ರಕಟಿಸುವಾಗ ತೋರಿದ ವಿಶೇಷತೆಯನ್ನ ಬಿಮ್ಬಿಸುತಿತ್ತು ಆ ಲೇಖನ.
ಅದೇ ತರಹ ಸನ್ನಿವೇಶ ಮತ್ತೊಮ್ಮೆ ಕ್ರಿಯೇಟ್ ಆದದ್ದೂ ಗೋಧ್ರಾ ಹತ್ಯಾಕಾಂಡದ ತೀರ್ಪು ಬಂದಾಗ. ಇಲ್ಲೂ ವಾರ್ತಾಭಾರತಿ ತನ್ನ ವಿಶೇಷ ದೃಷ್ಟಿಕೋನದಿಂದ ಈ ಸುದ್ದಿಯನ್ನು ಬರೆಯಿತು.ಸಂಪಾದಕೀಯ ಈ ವಿಷಯವನ್ನು ತನ್ನ ಚರ್ಚೆಗೆ ಎತ್ತಿಕೊಳ್ಳಬಹುದೆಂದು ನಾನು ಕಾಯುತ್ತಿದ್ದೆ.ಆದರೆ ಸಂಪಾದಕೀಯದಿಂದ ಈ ಮುಖ್ಯ ಸಂಗತಿ ಕಣ್ತಪ್ಪಿದ್ದು ವಿಶೇಷ. ಇದರಿಂದ ನಷ್ಟವಾದದ್ದು ಸಂಪಾದಕೀಯದ ವಿಶ್ಲೇಷಣೆಗಾಗಿ ಕಾದುಕೂತ ನಮ್ಮಂಥ ಸಾಮಾನ್ಯ ಜನರಿಗೆ.
ಸಂಪಾದಕೀಯದ ಕಣ್ತಪ್ಪಿದ ವಿಶೇಷತೆ ಜನರ ಕಣ್ತಪ್ಪದಿರಲಿ ಅನ್ನುವ ಉದ್ದೇಶದಿಂದ ಇದನ್ನ ನಾನು ಬರೆಯುತಿದ್ದೇನೆ. ರೈಲಿಗೆ ಬೆಂಕಿ ಹಚ್ಚಿದ್ದು ಆಕಸ್ಮಿಕವಲ್ಲ,ಅದು ಪೂರ್ವಯೋಜಿತ.ಈ ಕೃತ್ಯದಲ್ಲಿ ಭಾಗಿಯಾದ ಅಪರಾಧಿಗಳ ಶಿಕ್ಷೆಯ ಪ್ರಮಾಣವನ್ನು ಮುಂದೆ ನಿರ್ಧರಿಸಲಾಗುವುದು ಎಂದು ಕೋರ್ಟ್ ತೀಪಿತ್ತಿದೆ ಎಂದು ವಿಜಯಕರ್ನಾಟಕ,ಪ್ರಜಾವಾಣಿ ಸೇರಿದಂತೆ ಕನ್ನಡದ ಬಹುತೇಕ ಎಲ್ಲ ಪತ್ರಿಕೆಗಳು ಮುಖಪುಟದಲ್ಲಿಯೇ ಬ್ಯಾನರ್ ಹೆಡ್ ಲೈನ್ ಜೊತೆಗೆ ಸುದ್ದಿ ಮಾಡಿದ್ದವು. ಆದರೆ ವಾರ್ತಾ ಭಾರತೀಯ ‘ಸಂಪಾದಕೀಯ’ ಪುಟದಲ್ಲಿ ‘ಗೋದ್ರಾ ರೈಲಿಗೆ ಬೆಂಕಿ ಬಿದ್ದಿದ್ದು ಆಕಸ್ಮಿಕವೋ,ಪೂರ್ವ ಯೋಜಿತವೋ ಇನ್ನೂ ಇತ್ಯರ್ಥವಾಗಿಲ್ಲ’ ಅಂತ ಬರೆದಿದ್ದಾರೆ!






“ವಾರ್ತಾಭಾರತಿ”ಯ ಸುದ್ದಿ-ವಿಶ್ಲೇಷಣೆಗಳು ಪೂರ್ವಾಗ್ರಹಪೀಡಿತ ಎಂಬುದು ನನ್ನ ಅಭಿಪ್ರಾಯ.
ಉದಾಹರಣೆಗೆ, ಅವರು ಮದನಿ ಬಂಧನದ ಕುರಿತಾಗಿ ಅನೇಕ ಸುದ್ಧಿಗಳನ್ನು ಪ್ರಕಟಿಸಿರುವರು.
ಮದನಿಯು ತಪ್ಪನ್ನೇ ಮಾಡಿಲ್ಲ, ಆತನನ್ನು ಬಂಧಿಸಿ ೪ ತಿಂಗಳಾದರೂ ಯಾವುದೇ ಆರೋಪ ಸಾಭೀತಾಗಿಲ್ಲ; ಹೀಗಾಗಿ ಆತನನ್ನು ಬಿಡುಗಡೆ ಮಾಡಬೇಕು; ಎನ್ನುವ ಸುದ್ದಿಯನ್ನೂ ನೀಡಿರುವರು.
ಆದರೆ, ಸಾಧ್ವಿ ಪ್ರಜ್ಞಾಸಿಂಗ್ ಠಾಕೂರ್ ಕುರಿತಾಗಿ ಏಕೆ ಏನನ್ನೂ ಪ್ರಕಟಿಸಿಲ್ಲ?
ಆಕೆ ಬಂಧನವಾಗಿ ೪ ವರ್ಷವಾದರೂ ಯಾವುದೇ ಆರೋಪ ಸಾಭೀತಾಗಿಲ್ಲ; ಅನೇಕ ಖಾಯಿಲೆಗಳಿಂದ ಅವರು ಮರಣಾವಸ್ಥೆ ತಲುಪಿದ್ದಾರೆ; ಪೊಲೀಸರು ಚಿತ್ರಹಿಂಸೆ ನೀಡಿದ್ದಾರೆ;
೪ ತಿಂಗಳು ಬಂಧನದಲ್ಲಿರುವ ಮದನಿಯ ಕುರಿತಾಗಿ ಇಷ್ಟೊಂದು ಕನಿಕರ ತೋರುವವರಿಗೆ, ೪ ವರ್ಷ ಬಂಧನದಲ್ಲಿರುವ ಸಾಧ್ವಿಯ ಕುರಿತಾಗಿ ಏಕೆ ಏನೂ ಅನಿಸುವುದಿಲ್ಲ?
ಇದು ಪೂರ್ವಾಗ್ರಹವಲ್ಲದೆ ಮತ್ತೇನು?
ಹಲೋ, ಗೋಧ್ರಾ ರೈಲಿಗೆ ಬೆಂಕಿ ಬಿದ್ದದ್ದು ಪೂರ್ವಯೋಜಿತ ಕೃತ್ಯ ಎಂಬ ಕೋರ್ಟ್ ತೀರ್ಪು ಸಂಪಾದಕೀಯದ ಕಣ್ತಪ್ಪಿ ಹೋಗಿರಬಹುದು. ಕೋರ್ಟ್ ತೀರ್ಪಿನಲ್ಲಿ ಸುಮಾರು 31ಜನ ಆರೋಪಿಗಳನ್ನು ದೋಷಿಗಳೆಂದು ತೀರ್ಮಾನಿಸಿದೆ. ಆದರೆ ಗೋಧ್ರಾ ನಂತರದ ಗಲಭೆಯಲ್ಲಿ ಸಾವಿರಾರು ಜನರನ್ನು ಬಲಿತೆಗೆದುಕೊಂಡ ಹತ್ಯಾಕಾಂಡದ ಆರೋಪಿಗಳಿಗೆ ಶಿಕ್ಷೆ ವಿಧಿಸುವುದು ಕೂಡ ಕೋರ್ಟ್ ಜವಾಬ್ದಾರಿಯಾಗಿದೆ. ಗೋಧ್ರಾ ನಂತರದ ಗಲಭೆಗಳನ್ನು ಕುರಿತ ಲೇಖನಗಳು ಪತ್ರಿಕೆಗಳಲ್ಲಿ ಪ್ರಕಟವಾಗುತ್ತಿರುವುದು ತೀರಾ ವಿರಳವಾಗಿದೆ. ಸಾವಿರಾರು ಜನರನ್ನು ಬಲಿತೆಗೆದುಕೊಂಡ ನಿರಾಯುಧ ಜನರ ಹತ್ಯಾಕಾಂಡ ಘೋರ ಪಾತಕಕೃತ್ಯ. ಆರೋಪಿಗಳಿಗೆ ಸೂಕ್ತ ಶಿಕ್ಷೆ ನೀಡಿದಾಗಲೇ ಸತ್ತವರ ಆತ್ಮಕ್ಕೆ ಶಾಂತಿ ಸಿಗುತ್ತದೆ. ಇವುಗಳನ್ನು ಕುರಿತ ಲೇಖನಗಳನ್ನು ವಾರ್ತಾಭಾರತಿ ಪ್ರಕಟಿಸಿದರೂ ಗೋಧ್ರಾ ನಂತರದ ಗಲಭೆಯ ಆರೋಪಿಗಳಿಗೆ ಶಿಕ್ಷೆ ನೀಡಬೇಕೆಂದು ಒತ್ತಾಯಿಸುವ ಲೇಖನಗಳು ಬೇರೆ ಪತ್ರಿಕೆಗಳ ಕಣ್ತಪ್ಪಿ ಹೋಗುತ್ತಿರುವುದು ವಿಷಾದನೀಯ.
ಗೋಧ್ರಾ ನಂತರದ ಗಲಭೆ ಸಮರ್ಥನೀಯವಲ್ಲ ನಿಜ.ಆದರೆ ಈ ಲೇಖನ ಯಾವುದರ ಸುತ್ತ ಇದೆ ಅದನ್ನ ಮಾತ್ರ ನೋಡಿ ಶೆಟ್ರೆ
yellarau .. avaravar.. mugine nerake baredu navu sari, anth toriusuva dariyali edeve..
ಕೃಷ್ಣ ಬಂಗೇರ ಅವರೆ,
ಒಳ್ಳೆ ಲೇಖನ, ನಾನು ನಿವಂದಹಾಗೆ ಸಂಪಾದಕೀಯದ ನಿರಂತರ ಓದುಗ. ಹಲವಾರು ಬಾರಿ ಅದನ್ನು ಮೆಚ್ಚಿದವ ಕೂಡಾ. ಆದರೆ ಇತ್ತಿಚೇಗೆ ಯಾಕೊ ಸಂಪಾದಕೀಯ ಜನವಾಹಿನಿಯಿಂದ ದೂರ ಸರಿಯುತ್ತಿದೆಯೇನೋ ಎಂದು ಅನ್ನಿಸಿದೆ. ತನ್ನ ಪ್ರಶ್ನೆಗಳಿಗುತ್ತರಿಸದಿರುವವರ ಕಾಡುವ ತಾಣವಿಂದು ತನಗೆ ಬಂದ ಕಾಮೆಂಟುಗಳಿಗೆ ಉತ್ತರಿಸದೆ, ಹೊಡೆದು ಓಡುವ ಆಟ ಆಡುತ್ತಿದೆಯೇನೋ ಅನ್ನಿಸಲು ಶುರುವಾಗಿದೆ. ಹೀಗೆ ನಡೆದರೆ ಚಿಂತನಶಿಲ ಕನ್ನಡಿಗರ ತಿರಸ್ಕಾರಕ್ಕೆ ಗುರಿಯಾಗುವ ಮತ್ತೊಂದು ಜಾಲತಾಣವಾಗಲಿದೆ.
ಹಾಗಾಗದಿರಲಿ ಎಂಬ ಹಾರೈಕೆಯೊಂದಿಗೆ
ಸಂದೀಪ
ಈ ಸಂಪಾದಕೀಯದ ವಿಶೇಷ ಏನು ಗೊತ್ತಾ? ಆ ಬ್ಲಾಗಿನಲ್ಲಿ ಶೇ ಎಂಭತ್ತರಷ್ಟು ಕಾಮೆಂಟುಗಳು “ಅನಾನಿಮಸ್” ಗುಂಪಿನವು. ಆದರೆ ನಾನು ಗೂಗಲ್ ಐಡಿ ಇಟ್ಟುಕೊಂಡೇ ಬರೆದ ನಾಲಕ್ಕು ಪ್ರತಿಕ್ರಿಯೆಗಳಲ್ಲಿ ಎರಡು ಮಾತ್ರ ಪ್ರಕಟವಾಗಿವೆ! ಹೀಗಿರುವಾಗ ಈ ಬ್ಲಾಗು ಯಾವ ಉದ್ದೇಶವನ್ನಿಟ್ಟುಕೊಂಡು ಕೆಲಸ ಮಾಡುತ್ತಿದೆ ಎಂದೇ ಸಂಶಯವಾಗುತ್ತಿದೆ.
ಮಾಡರೇಟ್ ಮಾಡುವ ಉದ್ದೇಶವೇ ಅದಲ್ವೆ? ಮಹೇಶ್. ತಾವು ಸಹಿಸಲಾಗದ ಉತ್ತರಕೊಡಲಾಗದ ಪ್ರತಿಕ್ರಿಯೆಗಳನ್ನು ಪ್ರಕಟಿಸದಂತೆ ತಡೆಯುವ ದೃಷ್ಠಿಯಿಂದಲೆ ಆ ಸೌಲಭ್ಯ ಬಳಸಿಕೊಳ್ಳುವುದು. ನನ್ನ ಕನಿಷ್ಠ ೪-೫ ಪ್ರತಿಕ್ರಿಯೆಗಳನ್ನು ಪ್ರಕಟಿಸಲೇ ಇಲ್ಲ. ಅದನ್ನೂ ಕೇಳಿ ಬರೆದಿದ್ದ ಪ್ರತಿಕ್ರಿಯೆಯೂ ಪ್ರಕಟವಾಗಲಿಲ್ಲ. ಎಷ್ಟೆ ಆಗ್ಲಿ ಹೆಸರೇ ಸಂಪಾದಕೀಯ, ಅವ್ರು ಏನ್ ಬರೆದ್ರೂ ಸೈ.
ಅದೊಂದು ಅಪ್ಪಟ ಹಿಂದೂ ವಿರೋಧಿ ಬ್ಲಾಗ್. ಅದರ ಪ್ರತಿ ಅಕ್ಷರದಲ್ಲೂ ಹಿಂದೂ ವಿರೊಧಿ ಭಾವನೆಯೆ ತುಂಬಿದೆ. ಅದು ಒಂದು ರೀತಿಯಲ್ಲಿ ನುಡಿ ಭಯೋತ್ಪಾದನೆ. ಇದಕ್ಕೆ ಮುನ್ನ ಸುದ್ದಿಮಾತು ಇದೇ ಕೆಲ್ಸ ಮಾಡ್ತಿತ್ತು. ಈಗ ಸಂಪಾದಕೀಯ. ಮಿಂಚಿ ಮರೆಯಾಗುತ್ತವೆ ಬಿಡಿ.
@ರಾಕೇಶ್ ಶೆಟ್ಟಿ @Narendra Kumar.S.S ,
ಸರಿಯಾಗಿ ಹೇಳಿದ್ದೀರಿ , ಮಾಧ್ಯಮ ಪೂರ್ತಿ ಕುಲಗೆಟ್ಟು ಹೋಗಿದೆ, ಗೋದ್ರ ತೀರ್ಪಿನ ನಂತರ ಪೇಪರ್ ನವರಾಗಲಿ,ಟಿ ವಿ ಯವರಾಗಲಿ ಹೇಳಿದ್ದನ್ನು ನೋಡಿದರೆ , ಅದು ಕೇವಲ ದಾರಿ ತಪ್ಪಿಸುವ ಹುನ್ನರವಲ್ಲದೆ ಬೇರೇನಲ್ಲ ಎಂಬುದು ಶತಸ್ಸಿದ್ದ. ಎಲ್ಲರೂ ರಾಜಕಾರಣಿಗಳ ಚೇಲಾಗಳೇ, ಅವರನ್ನು ಮೆಚ್ಚಿಸಲೋಸುಗವೇ ಈ ತರಹದ ಕೆಲಸ ಮಾಡುತ್ತಾರೆ. ಅವರಿಗೆ ಪದ್ಮ ಭೂಷಣ ಇತ್ಯಾದಿ ಇತ್ಯಾದಿ ಪ್ರಶಸ್ತಿಗಳು ಬರುತ್ತವೆ !!!!!
ಮಾಧ್ಯಮಗಳೇ ಬ್ರಷ್ಟರಾದರೆ , ಒಳ್ಳೆಯದನ್ನು ಬಯಸಲು ಸಾದ್ಯವೇ?
ಗೋದ್ರ ವಿಷಯವನ್ನೇ ತೆಗೆದುಕೊಂಡರೆ, ೩೧ ಜನಕ್ಕೆ ಶಿಕ್ಷೆ ಆಗಿದ್ದು ಅದರಿಂದಾಗಿ ಅಲ್ಲಿ ನಡೆದ ಪೂರ್ವ ಯೋಜಿತ ಕೃತ್ಯ ಸಾಬೀತಾಗಿದ್ದು ,ಯಾರಿಗೂ ವಿಷಯವೇ ಆಗಲಿಲ್ಲ , ಅವರಿಗೆ ಕಂಡಿದ್ದು ೬೧ ಜನರ ಬಿಡುಗಡೆ ಮಾತ್ರ (ಅವರಲ್ಲೂ (೬೧ ಜನರಲ್ಲೂ) ಬಹಳ ಜನ ಅಪರಾಧಿಗಲಿದ್ದರು ಅನ್ನುವುದು ಬೇರೆ ಮಾತು ). ನಮ್ಮ ನ್ಯಾಯಾಲಯದ ದ್ಯೆಯವೇ ಅದು “೧೦೦ ಅಪರಾಧಿಗಳು ತಪ್ಪಿಸಿಕೊಂಡರೂ ಒಬ್ಬ ನಿರಪರಾಧಿಗೆ ಅನ್ಯಾಯವಾಗ ಬಾರದು.” ಆದರೆ ಎಲ್ಲರೂ ಅದನ್ನು ದುರುಪಯೋಗ ಪಡಿಸಿಕೊಳ್ಳುತ್ತಿರುವುದು ಮಾತ್ರ ದುರದೃಷ್ಟಕರ!.
^ : ಡೆಕ್ಕನ್ ಹೆರಾಲ್ಡ್ ಅಂತೂ ಒಂದು ಹೆಜ್ಜೆ ಮುಂದೆ ಹೋಗಿ ತನ್ನ ಸಂಪಾದಕೀಯದಲ್ಲೇ ಹನ್ನೊಂದು ಜನಕ್ಕೆ ಶಿಕ್ಷೆ ಆಗಿದ್ದಕ್ಕೆ ಅತ್ತು ಕಣ್ಣೀರಿಟ್ಟಿದೆ. ನ್ಯಾಯಲಯದ ತೀರ್ಪನ್ನೇ ಪ್ರಶ್ನಿಸಿದೆ. ಇದಕ್ಕಿಂತ ದುರದೃಷ್ಟ ಇನ್ನೇನಿದೆ?
@ಮಹೇಶ ಪ್ರಸಾದ ನೀರ್ಕಜೆ,
ಹೌದಾ? ಹಾಗಿದ್ದರೆ ನಾಳೆ ಕಸಬ್ ಗೆ ಶಿಕ್ಷೆಯಾದಾಗಲೂ ಅದು ಅತ್ತೂ ಕರೆದು, ಅವನು ಮುಗ್ದ ಯುವಕ ,ಹದಿ ಹರೆಯ ಅಂತೆಲ್ಲಾ ಸಂಪಾದಕೀಯ ಬರೆದರೆ ಆಶ್ಚರ್ಯವಿಲ್ಲ!!!!
ನಾವಂತೂ ಮಾತಾಡೋಲ್ಲ ಅಂತ ಅದಕ್ಕೆ ಚೆನ್ನಾಗಿ ಗೊತ್ತಿದೆ ….ಇನ್ನು ಸರ್ಕಾರ ಪದ್ಮಭೂಷಣ ಕೊಟ್ಟರೂ ಕೊಡಬಹುದು …ಏನಂತೀರಿ?