ಗಾಂಧಿ ತಾತಾ ಯಾಕಾಗಿ ಹೀಗೆಲ್ಲಾ ಮಾಡಿದಿರಿ?
– ಶ್ರೀಕಾಂತ್ ಆಚಾರ್ಯ
ನೇರಾ ನೇರಾ ವಿಷಯಕ್ಕೆ ಬರುತ್ತೀನಿ. ಕೆಲವಷ್ಟು ವಿಷಯಗಳಲ್ಲಿ ಗಾಂಧೀ ತಾತಾ ತುಂಬಾ ಇಷ್ಟವಾಗಿ ಬಿಡುತ್ತಾರೆ. ಆದರೆ ಉಳಿದ ಕೆಲವು ವಿಷಯಗಳಲ್ಲಿ ನನಗೆ ಗಾಂಧೀಜಿಯ ಬಗ್ಗೆ ಒಳ್ಳೆಯ ಅಭಿಪ್ರಾಯಗಳಿಲ್ಲ. ಅಷ್ಟಕ್ಕೂ ನನ್ನ ಅಭಿಪ್ರಾಯ ಇಲ್ಲಾರಿಗೂ ಅನಿವಾರ್ಯವಲ್ಲ ಬಿಡಿ. ಹೇಳಿದ್ದೆಲ್ಲವನ್ನ ಸುಖಾಸುಮ್ಮನೆ ನಂಬಿ ಬಿಡಿ ಅಂತ ನಿಮ್ಮಲ್ಲಿ ಅಂಗಾಲಾಚುವುದೂ ಇಲ್ಲ. ಸಮಾನ ಮನಸ್ಕರಿದ್ದರೆ ಓದಿಕೊಳ್ಳಬಹುದು. ಹೌದು ಅಂತನ್ನಿಸಿದರೆ ಮಾತ್ರ ತಾಕಲಾಟಕ್ಕೆ ಎಡತಾಕುತ್ತೀರಿ. ಯೋಚನೆಗೆ ಬೀಳುತ್ತೀರಿ. ಅಖಂಡ ಭಾರತದ ಕೋಟ್ಯಾಂತರ ಜನರ ಹೃದಯ ಹೊಕ್ಕಿ ಕುಳಿತ ಗಾಂಧೀಜಿಯನ್ನ ಕೆಲವೊಂದು ಕಾರಣಕ್ಕೆ ದ್ವೇಷಿಸುತ್ತಿದ್ದೀನಿ ಅಂದರೆ ಬಹುಷಃ ನೀವೂ ತಕರಾರು ಮಾಡಲಿಕ್ಕಿಲ್ಲ(ವಿಷಯ ಬಲ್ಲವರಿಗೆ ಮಾತ್ರ) ಅಲ್ಲವಾ? ಮತ್ತಷ್ಟು ಓದು 
ಶಂಕರಾಚಾರ್ಯರ ಕುರಿತು ವಿವೇಕಾನಂದರ ಧೋರಣೆಗಳು.
-ಚೈತನ್ಯ ಮಜಲುಕೋಡಿ
ಶಂಕರರ ಕುರಿತು ಹಲವು ಬುದ್ಧಿಜೀವಿಗಳು ಅನುಸರಿಸಿರುವ ಏಕಮುಖ ಮತ್ತು ಛಿದ್ರಾನ್ವೇಷಣ ಮನಸ್ಥಿತಿಯ ಧೋರಣೆಯಲ್ಲಿ ಶಂಕರರೆಂದರೆ ವಿವೇಕಾನಂದರಿಗೆ ಅಲರ್ಜಿ ಎಂಬಂತೆ ಬಿಂಬಿಸಿಬಿಟ್ಟಿದ್ದಾರೆ. ಅಂತಹವರಿಂದಾಗಿ ನಮ್ಮಲ್ಲಿ ಯಾರು ಏನು ಬರೆದಿದ್ದಾರೆಂದು ಪೂರ್ತಿಯಾಗಿ ಅವಲೋಕಿಸುವ ಜಿಜ್ಞಾಸೆಯ ಆಸಕ್ತಿ ಮತ್ತೂ ಕಡಿಮೆಯಾಗಿಬಿಟ್ಟಿದೆ. ಪ್ರಸ್ತುತ ನಮಗೆ ವಿವೇಕಾನಂದರು ತಮ್ಮ ವಿಚಾರಗಳಲ್ಲಿ ಶಂಕರರ ಬಗ್ಗೆ ಯಾವ ರೀತಿಯ ಮನೋಭಾವ ಹೊಂದಿದ್ದರೆಂದು ಸಮಗ್ರವಾಗಿ ಅರಿಯಬೇಕಾದ್ದು ಮುಖ್ಯವಾದ ಕೆಲಸ. ತಮ್ಮ ಪ್ರಖರ ವಿದ್ವತ್ತಿನ ಸ್ವರೂಪದಿಂದ ಇಂದಿಗೂ ಈ ಆಚಾರ್ಯದ್ವಯರು ದೇದೀಪ್ಯಮಾನರಾಗಿ ಬೆಳಗುತ್ತಿದ್ದಾರೆ. ಸಾವಿರವಿವೇಕಾನಂದರು ಸೇರಿದರೆ ಒಬ್ಬರು ಶಂಕರಾಚಾರ್ಯರಾಗಬಹುದು ಎಂದು ಅವರ ಪಟ್ಟಶಿಷ್ಯೆ ಸಿಸ್ಟರ್ ನಿವೇದಿತಾ ಅವರೇ ಒಂದೆಡೆ ಹೇಳಿದ್ದಾರೆ. ಹಾಗಾಗಿ ಸ್ವಾಮಿ ವಿವೇಕಾನಂದರು ಯಾವ ಸಂದರ್ಭಗಳಲ್ಲಿ ಏನೆಲ್ಲ ನುಡಿದಿದ್ದಾರೆ/ಬರೆದಿದ್ದಾರೆ ಎಂಬ ಹಿನ್ನೆಲೆ, ಶಂಕರರ ಬಗ್ಗೆ ಅವರಿಗೆ ದೊರಕಿರಬಹುದಾದ ಅಂಶಗಳು, ಅವರ ವೈಚಾರಿಕ ತುಲನೆ ಮತ್ತು ಧೋರಣೆ, ಶಂಕರಾಚಾರ್ಯರ ಬರವಣಿಗೆ ಮತ್ತು ಜೀವನ ಇವುಗಳ ಬಗ್ಗೆ ವಿವೇಕಾನಂದರ ವಿಚಾರಗಳೇನಿದ್ದವು ಎಂಬುದನ್ನ ನೋಡೋಣ. ಮತ್ತಷ್ಟು ಓದು 
ಶಂಕರಾಚಾರ್ಯರನ್ನು ಸ್ತುತಿಸಿದ್ದಾಯಿತು, ವಿದ್ಯಾರಣ್ಯರನ್ನೂ ಸ್ಮರಿಸೋಣ….
-ಶ್ರೀನಿವಾಸ ರಾವ್
||ಅವಿದ್ಯಾರಣ್ಯಕಾನ್ತಾರೇ ಭ್ರಮತಾಂ ಪ್ರಾಣಿನಾಂ ಸದಾ
ವಿದ್ಯಾಮಾರ್ಗೋಪದೇಷ್ಟಾರಂ ವಿದ್ಯಾರಣ್ಯಗುರುಂ ಶ್ರಯೇ||
ವಿಜಯನಗರ ಸಾಮ್ರಾಜ್ಯ ಸ್ಥಾಪನೆಗೆ ಮಾರ್ಗದರ್ಶನ ನೀಡಿದರು. ದಕ್ಷಿಣಪಥದಲ್ಲಿ ಹಿಂದೂ ಧರ್ಮದ ಸಾಮ್ರಾಜ್ಯವನ್ನು ಸ್ಥಾಪಿಸುವ ಮೂಲಕ ಶೃಂಗೇರಿ ಪೀಠಾಧಿಪತಿಗಳ ಬಿರುದಾವಳಿಗೆ ‘ಕರ್ನಾಟಕ ಸಿಂಹಾಸನ ಪ್ರತಿಷ್ಠಾಪನಾಚಾರ್ಯ’ ಎಂಬ ಬಿರುದನ್ನು ತಂದುಕೊಟ್ಟಿದ್ದೂ ಅವರೇ. ಶೃಂಗೇರಿಯ ಈಗಿನ ಪೀಠಾಧಿಪತಿಗಳಿಗೆ ‘ಕರ್ನಾಟಕ ಸಿಂಹಾಸನ ಪ್ರತಿಷ್ಠಾಪನಾಚಾರ್ಯ’ ಎಂದು ಬಿರುದಾವಳಿಗಳಲ್ಲಿ ಹೇಳಿದರೂ ನಮಗೆ ಆ ಯತಿಶ್ರೇಷ್ಠರೇ ನೆನಪಾಗುತ್ತಾರೆ. ಮನಸ್ಸು ಪುಟಿದೇಳುತ್ತದೆ. ‘ವಿದ್ಯಾಶಂಕರ ಪಾದಪದ್ಮಾರಾಧಕ’ ಎಂದಾಗಲೂ ವಿದ್ಯಾತೀರ್ಥರ ಶಿಷ್ಯರಾಗಿ-ಭಾರತೀ ತೀರ್ಥರ ಕರಕಮಲ ಸಂಜಾತರಾಗಿದ್ದ ಅವರನ್ನೇ ಮನಸ್ಸು ನೆನೆಯುತ್ತದೆ. ಮತ್ತಷ್ಟು ಓದು 
ತಮ್ಮನ ಪುನರ್ಮಿಲನ
– ರಂಜನ್ ಕೇಶವ
ಪ್ರತಾಪನು ಚೇತಕ್ ನೊಡನೆ ರಣಭೂಮಿಯಿಂದ ತೆರಳಿದಾಗ ಹಲ್ದೀಘಾಟಿಯ ಯುದ್ಧ ಭಾಗಶಃ ಮುಗಿದಿತ್ತು. ಪ್ರತಾಪನಿಗೆ ಒಂದುಕಡೆ ಯುದ್ಧದಲ್ಲುಂಟಾದ ಸೋಲಿನ ನಿರಾಶೆ ಮತ್ತೊಂದೆಡೆ ಮೊಘಲ್ ಸೇನೆಯನ್ನು ಮುಂದೆ ತಡೆಯುವುದು ಹೇಗೆಂಬ ಚಿಂತೆ. ತರಾತುರಿಯಲ್ಲಿ ತೆರಳಿದ್ದಕ್ಕಾಗಿ ಪ್ರತಾಪನು ಏಕಾಂಗಿಯಾಗಿದ್ದ, ಜೊತೆಗೆ ಯಾವೊಬ್ಬ ಸಹಚರನೋ ಸರದಾರರೋ ಇರಲಿಲ್ಲ. ವ್ಯಾಕುಲಗೊಂಡ ಮನಸ್ಸಿನ ಕಾರಣ ಏಕಾಂಗಿತನದ ಅರಿವೂ ಇಲ್ಲ.
ಹೀಗೆ ಸಾಗುತ್ತಿದ್ದ ಪ್ರತಾಪನನ್ನು ಅವನ ಅರಿವಿಗೆ ಬಾರದಂತೆ ಇಬ್ಬರು ಮೊಘಲ್ ಸವಾರರು ಹಿಂಬಾಲಿಸುತಿದ್ದರು ! ಇಬ್ಬರಲ್ಲೂ ಪ್ರತಾಪನನ್ನು ಕೊಂದು ಷೆಹಂಷಾಹ್ ನಿಂದ ಪುರಸ್ಕಾರ ಪಡೆಯುವ ಆಕಾಕ್ಷೆಯಿತ್ತು.
ಚೇತಕ್ ಕುದುರೆ ತನ್ನ ಸ್ವಾಮಿಯನ್ನು ರಕ್ಷಿಸಲೆಂದು ನೆಲದ ಏರಿಳಿತ, ಕಲ್ಲು ಬಂಡೆ ಮತ್ಯಾವ ಅಡೆತಡೆಗಳಿಗೂ ಸ್ವಲ್ಪವೂ ವೇಗ ಕುಗ್ಗಿಸದೇ ಒಂದೇ ರಭಸದಲ್ಲಿ ಓಡುತ್ತಿತ್ತು. ಕಾಲಿನ ಗಾಯದ ರಕ್ತಸ್ರಾವದಲ್ಲೂ ಯಾವ ಬಾಧೆಯನ್ನೂ ಲೆಕ್ಕಿಸದೇ ಮುನ್ನುಗ್ಗುತ್ತಿತ್ತು. ಹೀಗೆ ಸಾಗುತ್ತಾ ಒಂದು ನದಿಯ ಕವಲನ್ನು ಚೇತಕ್ ಒಂದೇ ನೆಗೆತಕ್ಕೆ ದಾಟಿತು. ಆದರೆ ಆ ಮೊಘಲ್ ಸೈನಿಕರ ಕುದುರೆಗಳಿಗೆ ದಾಟಲಾಗದೆಯೇ ಅಲ್ಲೇ ನಿಂತವು. ಮತ್ತಷ್ಟು ಓದು 
ನೆಪೋಲಿಯನ್ ಹಾದಿ
– ರಂಜನ್ ಕೇಶವ
ಕೇವಲ 27 ವರ್ಷದ ಹರೆಯ ನೆಪೋಲಿಯನ್ ಬೋನಾಪಾರ್ಟ್ ಆಗಷ್ಟೇ ಇಟಲಿಯಲ್ಲಿಯ ಫ್ರೆಂಚ್ ಸೇನೆಗೆ ಬ್ರಿಗೇಡಿಯರ್ ಜನರಲ್ ಆಗಿ ನೇಮಕಗೊಂಡಿದ್ದ . ಅಲ್ಲಿಯತನಕವೂ ಯಾವತ್ತೂ ಒಂದು ಬೃಹತ್ ಸೇನೆಯನ್ನು ನೇತೃತ್ವ ವಹಿಸಿರಲಿಲ್ಲ . ಮೊದಲ ಬಾರಿಗೆ ನೇಮಕಗೊಂಡ ಈ ಚಿಕ್ಕ ಹುಡುಗ ಏನು ಸಾಧಿಸಿ ತೋರಿಸಿಯಾನೋ ಎಂದು ಅವನ ಕೆಳಗಿನವರು ಮೂದಲಿಸುತ್ತಿದ್ದರು. ಅದಲ್ಲದೇ ಕುಬ್ಜಕಾಯ ಬೇರೆ ಎಂದು ಅಣಕಿಸುತ್ತಿದ್ದರಂತೆ. ಆದರೆ ನೆಪೋಲಿಯನ್ನಿನ ಆ ಕುಬ್ಜ ಶರೀರದೊಳಡಗಿತ್ತು ಅಧಮ್ಯ ಆತ್ಮವಿಶ್ವಾಸ ಮಿತಿಮೀರಿದ ಛಲ. ಇದನ್ನು ವ್ಯಕ್ತಪಡಿಸಲು ಒಂದು ಅವಕಾಶಕ್ಕಾಗಿ ಹಾತೊರೆಯುತ್ತಿದ್ದನಷ್ಟೇ. ಸಿಕ್ಕ ಈ ಮೊದಲ ಅವಕಾಶವನ್ನು ಚೆನ್ನಾಗಿ ಬಳಸಿಕೊಳ್ಳುವುದಕ್ಕಾಗಿ ಜಾಗರೂಕತೆಯಿಂದ ತಯಾರಿಮಾಡುತ್ತಿದ್ದ. ಮತ್ತಷ್ಟು ಓದು 
ಬ್ಯಾಟಲ್ ಆಫ್ ಅಸಲ್ ಉತ್ತರ್
– ರಂಜನ್ ಕೇಶವ
ಸೆಪ್ಟಂಬರ್ 6 1965 ರಂದು ಪಾಕಿಸ್ತಾನೀ ಸೇನೆಯನ್ನು ತಡೆಯುವ ಸಲುವಾಗಿ ನಾಲ್ಕನೇ ಗ್ರೆನೇಡಿಯರ್ ಬ್ರಿಗೇಡ್, ಇಚೋಗಿಲ್ ಕಾಲುವೆಯ ಪನ್ನಾ ಸೇತುವೆಯನ್ನು ಆಕ್ರಮಿಸಲು ಕಳುಹಿಸಿರುತ್ತಾರೆ. ಅದು ಸೇನಾನೆಲೆ ದಿಬ್ಬಾಪುರದಿಂದ 11 ಕಿ ಮೀ ದೂರದ ಪ್ರದೇಶ . ಆದರೆ ಪಾಕಿಗಳು ಷೆಲ್ ಧಾಳಿ ಮುಖಾಂತರ ತೀವ್ರವಾಗಿ ಪ್ರತಿಕ್ರಿಯಿಸಿದ್ದರಿಂದ ಭಾರತೀಯ ಪಡೆ ಮುಂದುವರೆದರೂ ಸೇತುವೆಯನ್ನು ದ್ವಂಸಗೊಳಿಸಲಾಗದೇ ಹಿಮ್ಮೆಟ್ಟಬೇಕಾಯಿತು . ಅದೇ ಸಮಯದಲ್ಲಿ ಒಂದು ಗೋರ್ಖಾ ಪಡೆ ಬಲ್ಲನ್ವಾಲಾ ಎಂಬ ಪ್ರದೇಶವನ್ನು ಗೆಲ್ಲಲಾಗದೇ ಹಿಮ್ಮೆಟ್ಟಬೇಕಾಯಿತು . ಮತ್ತೆ ಪ್ರಾರಂಭದ ವಿಫಲತೆಯನ್ನು ಸರಿಪಡಿಸಿಕೊಂಡು ಸೇನಾವ್ಯೂಹವನ್ನು ಪುನರ್ ರಚಿಸಲು ಖೇಮ್ ಖರನ್ ನ ಅಸಲ್ ಉತ್ತರ್ ಎಂಬಲ್ಲಿಗೆ ಬಂದು ಸೇರಿದರು. ಮತ್ತಷ್ಟು ಓದು 
ಬಾಬಾಸಾಹೇಬ್ ಅಂಬೇಡ್ಕರ್ : ಇದ್ದದ್ದು ಇದ್ದ ಹಾಗೆ
– ರೋಹಿತ್ ಚಕ್ರತೀರ್ಥ
ಇದು ಡಾ. ಬಾಬಾಸಾಹೇಬ್ ಭೀಮರಾವ್ ಅಂಬೇಡ್ಕರ್ ಅವರ ಸಪಾದ ಜನ್ಮಶತಮಾನೋತ್ಸವದ ವರ್ಷ. ಹತ್ತೊಂಬತ್ತನೇ ಶತಮಾನದ ಕೊನೆಯ ದಶಕದಲ್ಲಿ ಹುಟ್ಟಿದ ಅಂಬೇಡ್ಕರ್ ಆ ಕಾಲದ ಅನಕ್ಷರತೆ, ಜಾತಿ ತಾರತಮ್ಯ, ಶೋಷಣೆ, ನಿರುದ್ಯೋಗ, ಸ್ವಾತಂತ್ರ್ಯ ಹೋರಾಟ ಮುಂತಾದ ಎಲ್ಲ ಪರಿಸ್ಥಿತಿಗಳನ್ನೂ ನೋಡಬೇಕಾಯಿತು, ಸ್ವತಃ ಅನುಭವಿಸಬೇಕಾಯಿತು. ಹುಡುಗ ಚೂಟಿ, ಬುದ್ಧಿವಂತ. ಜಾತಿಯ ಕಾರಣವೊಂದೇ ಮುಂದಾಗಿ ಆತನ ಭವಿಷ್ಯವನ್ನು ಕಮರಿಸಬಾರದೆಂಬ ಎಚ್ಚರದಿಂದ ಬ್ರಾಹ್ಮಣ ಗುರು ಮಹಾದೇವ ಅಂಬೇಡ್ಕರ್, ತನ್ನ ಈ ಪ್ರೀತಿಯ ಶಿಷ್ಯನಿಗೆ ಅಂಬಾವಾಡೇಕರ್ ಎಂಬ ಕುಲಸೂಚಕವನ್ನು ತಿದ್ದಿ ಅಂಬೇಡ್ಕರ್ ಎಂಬ ನಾಮಕರಣ ಮಾಡಿದರು. ಅಲ್ಲಿಂದ ಮುಂದಕ್ಕೆ ಹುಡುಗ, ಹುಟ್ಟಿದೂರು ಸತಾರದಲ್ಲಿ ಪ್ರಾಥಮಿಕ ಶಾಲೆ ಮುಗಿಸಿ, ಮುಂಬಯಿಯ ಪ್ರತಿಷ್ಠಿತ ಎಲ್ಫಿನ್‍ಸ್ಟನ್ ಹೈಸ್ಕೂಲು, ಕಾಲೇಜುಗಳಲ್ಲಿ ವಿದ್ಯಾಭ್ಯಾಸ ಮುಂದುವರೆಸಿ, ಉನ್ನತ ಶಿಕ್ಷಣಕ್ಕಾಗಿ ಅಮೆರಿಕ, ಇಂಗ್ಲೆಂಡ್ ಪ್ರವಾಸಗಳನ್ನು ಮಾಡಿದ್ದೆಲ್ಲ ನಂಬಲಸಾಧ್ಯವೆನಿಸುವ ವಾಸ್ತವ.ಕೊಲಂಬಿಯಾ ವಿಶ್ವವಿದ್ಯಾಲಯದಲ್ಲಿ ಪಿಎಚ್‍ಡಿ ಪಡೆದಾಗ ಅಂಬೇಡ್ಕರರಿಗೆ 26 ವರ್ಷ. ನಂತರದ ಪ್ರಯಾಣ ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್ ಕಡೆಗೆ. ಅಲ್ಲಿ ಅರ್ಥಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ, ಜೊತೆಗೆ ಬ್ಯಾರಿಸ್ಟರ್-ಎಟ್-ಲಾ ಎಂಬ ಕಾನೂನು ಪದವಿ ಪಡೆದು, ತನ್ನ 32ನೇ ವಯಸ್ಸಿಗೆ ಡಿಎಸ್‍ಸಿ ಗಳಿಸಿ ಭಾರತಕ್ಕೆ ಮರಳಿದರು. ದಲಿತರ ಹುಡುಗನೊಬ್ಬ ಹೀಗೆ ಅಖಂಡ 28 ವರ್ಷ ವ್ಯಾಸಂಗವೊಂದರಲ್ಲೇ ಮುಳುಗಿ, ವಿದೇಶದ ಹೆಸರುವಾಸಿ ಸಂಸ್ಥೆಗಳಲ್ಲಿ ಡಿಗ್ರಿಯ ಮೇಲೆ ಡಿಗ್ರಿಯನ್ನು ಸಂಪಾದಿಸಿದ ಕತೆ ರೋಮಾಂಚನಗೊಳಿಸುವಂಥಾದ್ದು. ಮತ್ತಷ್ಟು ಓದು 
ಋಗ್ವೇದ ೧೦.೮೫.೧೩ ಅಘಾಸು ಹನ್ಯಂತೇ ಗಾವಃ
– ವಿನಾಯಕ ಹಂಪಿಹೊಳಿ
ಸ್ವಘೋಷಿತ ಅಭಿನವ ಪ್ರವಾದಿ ಜಾಕೀರ ನಾಯ್ಕರ ಶಿಷ್ಯರೊಂದಿಗೆ ಸ್ವಲ್ಪ ದಿನಗಳ ಹಿಂದೆ ನನ್ನ ಕೆಲವು ಮಿತ್ರರು ಚರ್ಚೆಯೊಂದನ್ನು ನಡೆಸಿದ್ದರು. ಆ ಚರ್ಚೆಯಲ್ಲಿ ನಾನೂ ಭಾಗವಹಿಸಿದ್ದೆ. ಅಲ್ಲಿ ನಮ್ಮ ವಿರೋಧಿಗಳ ವಾದವೊಂದು ನನ್ನ ಗಮನ ಸೆಳೆಯಿತು. ಅಲ್ಲಿ ನಮ್ಮ ವಿರೋಧಿಗಳು “ಋಗ್ವೇದದಲ್ಲಿ ಗೋಮಾಂಸದ ಉಲ್ಲೇಖವಿದೆ. ಮದುವೆಯ ಸಂದರ್ಭದಲ್ಲಿ ಆಕಳುಗಳನ್ನು ಕಡಿಯಲಾಗುತ್ತಿತ್ತು ಎಂಬುದಕ್ಕೆ ಆಧಾರವಿದೆ. ಬೇಕಾದರೆ ಋಗ್ವೇದದ ೧೦ನೇ ಮಂಡಲದ ೮೫ನೇ ಸೂಕ್ತದ ೧೩ನೇ ಋಕ್ಕನ್ನು ನೋಡಿ” ಎಂದು ಹೇಳಿದ್ದರು. ಆ ಋಕ್ಕು ಹೀಗಿತ್ತು.
ಸೂರ್ಯಾಯಾ ವಹತುಃ ಪ್ರಾಗಾತ್ಸವಿತಾ ಯಮವಾಸೃಜತ್ | ಅಘಾಸು ಹನ್ಯಂತೇ ಗಾವೋsರ್ಜನ್ಯೋಃ ಪರ್ಯುಹ್ಯತೇ || ಮತ್ತಷ್ಟು ಓದು 
ಮಧುರೈ ಮೀನಾಕ್ಷಿ
– ರಂಜನ್ ಕೇಶವ
ಭಯ ಹುಟ್ಟಿಸುವಂತಹ ಬೃಹತ್ ಗಾತ್ರದ ಕಂಬಗಳು. ಅದರಲ್ಲಿ ದೊಡ್ಡ ದೊಡ್ಡ ಗಾತ್ರದ ಸಿಂಹದಂತಿರುವ ರಾಕ್ಷಸನ ಕೆತ್ತನೆಗಳು. ಇಂಥಹ ಸಾಲು ಸಾಲು ಕಂಬಗಳು ದಾರಿಯ ಇಕ್ಕೆಲಗಳಲ್ಲಿ ಇರುತ್ತವೆ. ಮೊದಲಸಲ ನೋಡುವವರಿಗೆ ಇಲ್ಲಿನ ಭವ್ಯ ಕೆತ್ತನೆಗಳ ನೋಟವೇ ಒಮ್ಮೆ ದಿಗಿಲು ಹುಟ್ಟಿಸಬಹುದು. ಮೀನಾಕ್ಷಿ ಮಂದಿರಸಮೂಹಗಳು ಒಂದು ಬೃಹತ್ ಆವರಣದ ಮಧ್ಯೆಯಲ್ಲಿವೆ. ಇದಕ್ಕೆ ಉತ್ತರ, ದಕ್ಷಿಣ, ಪೂರ್ವ – ಪಶ್ಚಿಮ ಎಂಬಂತೆ ನಾಲ್ಕು ಪ್ರವೇಶದ್ವಾರಗಳು. ಒಳ ಪ್ರವೇಶಿಸುತ್ತಿದ್ದಂತೆ ಒಂದು ಚಕ್ರವ್ಯೂಹ ಪ್ರವೇಶಿಸಿದಂತೆ ಅನೇಕ ಮಾರ್ಗಗಳ ದರ್ಶನ. ಮಾರ್ಗಗಳ ಪರಿಚಯವಿಲ್ಲದೆ ಒಳ ಪ್ರವೇಶಿಸಿದರೆ ದಾರಿ ತಪ್ಪಿ ಒಳಗೊಳಗೆಯೇ ವ್ಯರ್ಥ ಸಮಯ ಕಳೆಯುವ ಸಾಧ್ಯತೆಯೇ ಹೆಚ್ಚು. ಮತ್ತಷ್ಟು ಓದು 
ಕಮ್ಯುನಿಸ್ಟರ ರಕ್ತ ಚರಿತ್ರೆಯ ಪುಟಗಳು
– ರಾಕೇಶ್ ಶೆಟ್ಟಿ
ಇತ್ತೀಚೆಗೆ ಹೈದರಾಬಾದ್ ಯುನಿವರ್ಸಿಟಿಯ ರೋಹಿತ್ ವೆಮುಲ ಎಂಬ ಯುವಕನ ಆತ್ಮಹತ್ಯೆ ಹಾಗೂ ದೆಹಲಿಯ ಜೆ.ಎನ್.ಯು ವಿವಾದಗಳ ಸಮಯದಲ್ಲಿ ಕಾಕಗಳು (ಕಾಂಗ್ರೆಸ್+ಕಮ್ಯುನಿಸ್ಟ್) ಮೋದಿಯವರ ಸರ್ಕಾರ ವಿದ್ಯಾರ್ಥಿಗಳ ಮೇಲೆ ದಬ್ಬಾಳಿಕೆ ಮಾಡುತ್ತಿವೆ ಎಂದು ಉಯಿಲೆಬ್ಬಿಸಿದ್ದಾರೆ.ಕರ್ನಾಟಕದಲ್ಲಿರುವ ಇವರ ಅಣ್ತಮ್ಮಂದಿರು ದಿನ ಬೆಳಗಾದರೆ ಟೌನ್ ಹಾಲ್ ಎದುರು ನಿಲ್ಲುತ್ತಿದ್ದಾರೆ. ಆದರೆ,ಯುನಿವರ್ಸಿಟಿ,ವಿದ್ಯಾರ್ಥಿಗಳ ಬಗ್ಗೆ ಮಾತನಾಡುವ ನೈತಿಕತೆ ಕಾಕಗಳಿಗಿದೆಯೇ? ಕರ್ನಾಟಕದ ಕುವೆಂಪು ಯುನಿವರ್ಸಿಟಿಯಲ್ಲಿದ್ದ CSLC ಎಂಬ ಸಂಶೋಧನಾ ಕೇಂದ್ರವನ್ನು ಮುಚ್ಚಿಸಿದ್ದು ಇದೇ ಕಾಂಗ್ರೆಸ್ ಸರ್ಕಾರ,ಮುಚ್ಛಿಸುವಂತೆ ಒತ್ತಡ ಹಾಕಿದ್ದು ಟೌನ್ ಹಾಲ್ ಬುದ್ಧಿಜೀವಿಗಳೇ. ಕಾಂಗ್ರೆಸ್ಸಿನವರ ಇತಿಹಾಸ ಎಲ್ಲರಿಗೂ ತಿಳಿದಿರುವುದೇ.ಆದರೆ ಈ ಕಮ್ಯುನಿಸ್ಟರ ಪುಣ್ಯ ಕಾರ್ಯಗಳ ಬಗ್ಗೆ ಸ್ವಲ್ಪ ಹೇಳಬೇಕು. (ಇದು ಕೇವಲ ಕೇರಳದ ಕಮ್ಯುನಿಸ್ಟರ ಇತಿಹಾಸ.ಬಂಗಾಳದ ಕಾಮ್ರೇಡುಗಳ ಕತೆ ಇದಕ್ಕೂ ದೊಡ್ಡದು)
ಅದು ಸೆಪ್ಟಂಬರ್ ೧೭,೧೯೯೬ರ ದಿನ.ಕೇರಳದ ಪರುಮಲ ಜಿಲ್ಲೆಯ ದೇವಸ್ವೋಮ್ ಕಾಲೇಜಿನ ಕ್ಯಾಂಪಸ್ಸಿಗೆ ಲಗ್ಗೆಯಿಟ್ಟ ಕಮ್ಯುನಿಸ್ಟರು ‘ಅನು,ಸುಜಿತ್,ಕಿಮ್’ ಎಂಬ ಎಬಿವಿಪಿಯ ಕಾರ್ಯಕರ್ತರ ಮೇಲೆ ಮುಗಿಬಿದ್ದರು.ಎಬಿವಿಪಿಯೊಂದಿಗೆ ಗುರುತಿಸಿಕಂಡಿದ್ದೇ ಈ ಹುಡುಗರು ಮಾಡಿದ್ದು ತಪ್ಪು,ಕೇರಳದಲ್ಲಿ ಕಮ್ಯುನಿಸ್ಟರು ನಿಮ್ಮನ್ನು ಸುತ್ತುವರೆದರೆಂದರೇ ಸ್ಟಾಲಿನ್/ಮಾವೋ ಪ್ರೇತಾತ್ಮ ಮೃತ್ಯು ರೂಪದಲ್ಲಿ ನಿಮ್ಮೆದುರು ಬಂದು ನಿಂತಂತೆಯೇ ಸರಿ.ಪ್ರಾಣ ಉಳಿಸಿಕೊಳ್ಳಲು ಓಡಿದ ಈ ಹುಡುಗರು ಪಂಪಾ ನದಿಗೆ ಹಾರಿ ಈಜಲಾರಂಭಿಸಿದ್ದರು.ನೀರಿಗೆ ಬಿದ್ದ ವಿದ್ಯಾರ್ಥಿಗಳ ಮೇಲೆ ಕಮ್ಯುನಿಸ್ಟ್ ಗೂಂಡಾಗಳು ಕಲ್ಲು ತೂರಲಾರಂಭಿಸಿದರು. ಆಚೆ ದಡದಲ್ಲಿ ಬಟ್ಟೆ ಒಗೆಯುತ್ತಿದ್ದ ಹೆಣ್ಣು ಮಕ್ಕಳು ಕಮ್ಯುನಿಸ್ಟರ ಕಲ್ಲಿನೇಟಿಗೆ ತುತ್ತಾಗಿ ಮುಳುಗುತ್ತಿದ್ದ ಹುಡುಗರತ್ತ ಸೀರೆಗಳನ್ನೆಸೆದು ಅವರನ್ನು ಉಳಿಸಿಕೊಳ್ಳಲು ಪ್ರಯತ್ನಿಸಿದರೇ,ಮಹಿಳಾವಾದದ ಭಾಷಣ ಬಿಗಿಯುವ ಕಾಮ್ರೇಡುಗಳು ಅವರ ಮೇಲೆ ಕಲ್ಲಿನ ಮಳೆ ಸುರಿದರು.ವಿಧಿಯಿಲ್ಲದೇ ಆ ಹೆಣ್ಣುಮಕ್ಕಳು ಪ್ರಾಣ ಉಳಿಸಿಕೊಳ್ಳಲು ಓಡಿದರು.ಇತ್ತ ಹದಿಹರೆಯದ ವಿದ್ಯಾರ್ಥಿಗಳ ಪ್ರಾಣಕ್ಕೆ ಆಜಾದಿ ಸಿಕ್ಕಿತ್ತು.ಸ್ಟಾಲಿನ್ ಘೋರಿಯೊಳಗಿಂದಲೇ ಲಾಲ್ ಸಲಾಂ ಎಂದನೇನೋ. ಕಡೆಗೇನಾಯ್ತು.ಅವರದ್ದೇ ಸರ್ಕಾರ,ಅವರು ಮಾಡಿದ್ದೇ ಕಾನೂನು.ಯಾರೆಂದರೇ ಯಾರಿಗೂ ಶಿಕ್ಷೆಯಾಗಲಿಲ್ಲ.ಇಂದು ಅದೇ ಕಮ್ಯುನಿಸ್ಟರು ವಿದ್ಯಾರ್ಥಿಗಳ ಆಜಾದಿ ಬಗ್ಗೆ ಮಾತನಾಡುತಿದ್ದಾರೆಂದರೇ ಎಂತ ವ್ಯಂಗ್ಯವಲ್ಲವೇ?







