ಪ್ರೇತದ ಆತ್ಮ ಚರಿತೆ! (ಭಾಗ ೧)
– ಶ್ರೀಕಾಂತ್ ಶೆಟ್ಟಿ
ಒಂದು ಪ್ರೇತದ ಕತೆ. ಆ ಒಂದು ಪ್ರೇತ ಮಾಡಿದ ಆವಾಂತರಕ್ಕೆ ಇತಿಹಾಸವೇ ಹೊಸ ತಿರುವು ಪಡೆದುಕೊಂಡು ಬಿಟ್ಟಿತು. ಈ ಭೂತ ಪ್ರೇತ ಇದೆಲ್ಲಾ ಇದೆಯೋ ಇಲ್ಲವೋ, ಇದ್ದರೆ ವೈಜ್ಞಾನಿಕ ಕಾರಣ ಕೊಡಿ. ಅದರ ಇರುವನ್ನು ಸಾಬೀತು ಮಾಡಿ ಎನ್ನುವವರಿಗೆ ಈ ಕತೆ ಹೇಳಿ ಮಾಡಿಸಿದ್ದಲ್ಲ. ಇತಿಹಾಸದ ಪುಟಗಳಲ್ಲಿ ಅಚ್ಚಳಿಯದೆ ಉಳಿದುಕೊಂಡು ಬಂದಿರುವ ದಂತಕತೆಯನ್ನು ಆಧಾರವಾಗಿಟ್ಟುಕೊಂಡು ಈ ಸರಣಿಯನ್ನು ಬರೆಯುತ್ತಿದ್ದೇನೆ. ಇದರಲ್ಲಿ ಕೇವಲ ಪ್ರೇತ ಮಾತ್ರ ಬಂದು ಹೋಗುವುದಿಲ್ಲ. ಹದಿನೆಂಟನೇ ಶತಮಾನದಲ್ಲಿ ಭೂಮಿ ನಡುಗಿಸುವಷ್ಟು ಸೇನೆ ಕಟ್ಟಿಕೊಂಡು, ಮೊಘಲರನ್ನು ಬೇರು ಸಮೇತ ಕಿತ್ತೊಗೆದ ಮರಾಟಾ ಪೇಶ್ವಾಗಳು ಬರುತ್ತಾರೆ. ಉತ್ತರದ ಹಿಮಾಲಯದಿಂದ ದಕ್ಷಿಣದ ಕೃಷ್ಣಾ ನದಿ ದಂಡೆಯವರೆಗೆ ಪೇಶ್ವಾಗಳ ಕತ್ತಿಯ ಅಬ್ಬರ, ಕುದುರೆಗಳ ಹೇಷಾರವ, ಮದೋನ್ಮತ್ತ ಆನೆಗಳ ಹೂಂಕಾರ.. ನಭವನ್ನೇ ನಡುಗಿಸುವ ಮರಾಠಾ ಮಾವಳಿಗಳ ಹರಹರಾ ಮಹಾದೇವ ರಣಘರ್ಜನೆ.. ಚಿತ್ಪಾವನ ಬ್ರಾಹ್ಮಣ ರಣಕಲಿಗಳ ಅಪ್ರತಿಮ ರಣತಂತ್ರ.. ಒಂದು ಶತಮಾನ ಕಾಲ ವಿಜೃಂಭಿಸಿದ ಮರಾಠ ಶಕ್ತಿಯ ವಿವಿಧ ಮುಖ ಪರಿಚಯ ಇಲ್ಲಿ ನಿಮಗಾಗಲಿದೆ.
ಉಪನಿಷತ್ ವಾಙ್ಮಯ 2: ಆಮಿಷ ಒಡ್ಡದೆ ಉತ್ತರಿಸು; ಅರಿವಿನ ಮಟ್ಟವನೆತ್ತರಿಸು!
– ಸ್ವಾಮಿ ಶಾಂತಸ್ವರೂಪಾನಂದ
ಉಪನಿಷತ್ ವಾಙ್ಮಯ :- ಉಪನಿಷತ್ ವಾಙ್ಮಯ 1
ನಚಿಕೇತ ಯಮಸದನಕ್ಕೆ ಹೋದ. ಅಲ್ಲಿ ಮೂರು ದಿನ ಕಾದ. ಭೂಮಿಯಿಂದ ಸೂಕ್ಷ್ಮದೇಹಿಯಾಗಿ ಮೃತ್ಯುವಿನ ಲೋಕಕ್ಕೆ ಹೋಗುತ್ತಿರುವಾಗ ಅವನು ಒಬ್ಬನೇ ಇದ್ದದ್ದಲ್ಲ. ಅವನ ಮುಂದೆ ಸಾವಿರಾರು ಜನ, ಹಿಂದೆ ಸಾವಿರಾರು ಜನ ಸಾಗರದ ರೀತಿಯಲ್ಲಿ ಹೋಗುತ್ತಿದ್ದರಂತೆ. ಅವರೆಲ್ಲರೂ ಯಾವಾವುದೋ ಕಾರಣಕ್ಕೆ ತೀರಿಕೊಂಡರು. ಬದುಕಿನ ಯಾತ್ರೆ ಮುಗಿಸಿ ಅಂತಿಮ ಯಾತ್ರೆಯಲ್ಲಿ ಪಾಲ್ಗೊಂಡವರು. ಭೂಮಿಯ ಮೇಲಿನ ವ್ಯವಹಾರಗಳನ್ನು ಮುಗಿಸಿ ಪರಲೋಕಕ್ಕೆ ಹೊರಟವರು. ಇಲ್ಲಿ ನಾವು ಉಪನಿಷತ್‍ಕಾರನ ಲೋಕಪ್ರಜ್ಞೆಯನ್ನು ಗಮನಿಸಬೇಕು. ಕತೆ ಕೇವಲ ನಚಿಕೇತ ಮತ್ತು ಯಮನ ಮಾತುಕತೆಯ ಸುತ್ತ ಸುತ್ತುವುದಾದರೂ ಉಪನಿಷತ್‍ಕಾರ ಇವೆಲ್ಲ ಸಣ್ಣಸಣ್ಣ ವಿವರಗಳನ್ನು ಕೂಡ ನಮ್ಮ ಕಣ್ಮುಂದೆ ತಂದು ಬೆಚ್ಚಿಬೀಳಿಸುತ್ತಾನೆ. ಭೂಮಿಯಲ್ಲಿ ಪ್ರತಿಕ್ಷಣದಲ್ಲೂ ನೂರಾರು ಜೀವಗಳು ಕೈಕಾಲು-ಪಪ್ಪುಸಗಳ ಕಾರ್ಯ ನಿಲ್ಲಿಸಿ ನಿಶ್ಚೇಷ್ಟಿತವಾಗುತ್ತಲೇ ಇರುತ್ತವೆ; ಪ್ರತಿ ನಿಮಿಷದಲ್ಲೂ ಅಸಂಖ್ಯಾತ ಜನರು ಮೃತ್ಯುವಿಗೆ ಪಕ್ಕಾಗುತ್ತಲೇ ಇರುತ್ತಾರೆ ಎಂಬ ಎಚ್ಚರಿಕೆಯನ್ನು ಓದುಗನಿಗೆ ಅದುಹೇಗೆ ಉಪನಿಷತ್ ದಾಟಿಸುತ್ತದೆ ನೋಡಿ! ಇಂಥ ನೂರಾರು ಜೀವರ ನಡುವಿನಲ್ಲಿ ನಚಿಕೇತನೂ ಇದ್ದ. ಅವನಿಗೆ ಭೂಲೋಕವನ್ನು ಬಿಟ್ಟು ಬಂದೆನಲ್ಲಾ ಎಂಬ ಚಿಂತೆಯೂ ಇರಲಿಲ್ಲ; ದೇವರ ಲೋಕ ಸೇರುವ ದಾರಿಯಲ್ಲಿದ್ದೇನೆಂಬ ಸಂತೋಷವೂ ಇರಲಿಲ್ಲ. ದುಃಖ ಸಂತೋಷಗಳಿಲ್ಲದ ಒಂದು ವಿಚಿತ್ರ ಸ್ಥಿತಿಯಲ್ಲಿ ಅವನು ಯಮಪುರಿಗೆ ಹೋದ. ಮತ್ತಷ್ಟು ಓದು 
ದೆವ್ವ….ದೆವ್ವ….!
– ಗುರುರಾಜ ಕೋಡ್ಕಣಿ. ಯಲ್ಲಾಪುರ
ಅದು ಸುಮಾರು ಮಧ್ಯರಾತ್ರಿ ಸಮಯ.ನಾನು ರೈಲಿನಲ್ಲಿ ಪ್ರಯಾಣಿಸುತ್ತಿದ್ದೆ. ಸಾಮಾನ್ಯವಾಗಿ ನಾನು ರೈಲಿನಲ್ಲಿ ಚೆನ್ನಾಗಿ ನಿದ್ರಿಸುತ್ತೇನೆ. ಆದರೆ ಅದೇಕೋ ಅ೦ದು ನನಗೆ ನಿದ್ದೆ ಬರುತ್ತಿರಲಿಲ್ಲ.ಸುಮ್ಮನೆ ಆಕಳಿಕೆ. ಬೆಕ್ಕಿನ೦ತೆ ಆಕಳಿಸುತಾ ಕಿಟಕಿಯಿ೦ದ ಹೊರ ನೋಡಿದೆ. ‘ಅಮವಾಸ್ಯೆಯ ಕತ್ತಲು’ ಹೊರಗಡೆಯ ದೃಶ್ಯಗಳು ಯಾವುದೂ ಕಾಣುತ್ತಿರಲಿಲ್ಲ. ಸಮಯ ನೋಡಿದೆ. ಹನ್ನೆರಡುವರೆ. ನನ್ನ ಸ್ಥಳ ಬರಲು ಇನ್ನೂ ಸಮಯವಿದೆ.
ನನ್ನ ಬೋಗಿಯಲ್ಲಿ ಬೇರೆ ಯಾರೂ ಇರಲಿಲ್ಲ. ನಾನ್ನೊಬ್ಬನೇ. ಇದೇ ಕೊನೆಯ ಬೋಗಿ ಬೇರೆ! ರೈಲಿನ ಕೊನೆಯ ಬೋಗಿಗಳಲ್ಲಿ ದೆವ್ವಗಳು ಇರ್ತಾವ೦ತೆ, ಈ ಸಮಯದಲ್ಲಿ ಇಲ್ಲಿ ದೆವ್ವ ಬ೦ದು ಬಿಟ್ಟರೇ..? ನನ್ನ ವಿಚಾರಸರಣಿ ನೋಡಿ ನನಗೇ ನಗು ಬ೦ತು. ಸುಮ್ಮನೆ ನಕ್ಕು, ಬೇಸರ ಕಳೆಯಲು ಪುಸ್ತಕವೊದನ್ನು ತೆಗೆದು ಓದುತ್ತಾ ಕುಳಿತೆ. ಮತ್ತಷ್ಟು ಓದು 
ಕೀಳರಿಮೆಯನ್ನೂ ಕಥಾವಸ್ತುವಾಗಿ ಬಳಸಿಕೊಂಡ ಅಕ್ಷರ ಮಾಂತ್ರಿಕನೀತ……!!!
– ಗುರುರಾಜ್ ಕೊಡ್ಕಣಿ, ಯಲ್ಲಾಪುರ
ಅದು ಇಬ್ಬರು ಸ್ನೇಹಿತರು ತುಂಬ ವರ್ಷಗಳ ನಂತರ ಸೇರಿದ ಕ್ಷಣ. ಸ್ಥೂಲದೇಹಿ ವ್ಯಕ್ತಿಯೊಬ್ಬ, ತನ್ನ ಕೃಶಕಾಯದ ಸ್ನೇಹಿತನನ್ನು ನಿಕೋಲಿವಸ್ಕಿ ಸ್ಟೇಷನ್ನಿನಲ್ಲಿ ಸಂಧಿಸಿದ ಸಂತಸಮಯ ಗಳಿಗೆಯದು. ಸ್ಥೂಲಕಾಯದ ವ್ಯಕ್ತಿಯ ತುಟಿಗಳು ಕೆಂಪಗೆ ಕಳಿತ ಚೆರ್ರಿಯ ಹಣ್ಣುಗಳಂತೆ ಹೊಳೆಯುತ್ತಿದ್ದರೆ, ಆತನ ಬಾಯಿಯಿಂದ ಹೊಮ್ಮುತ್ತಿದ್ದ ವೈನ್ ಮತ್ತು ಕಿತ್ತಳೆ ಹಣ್ಣಿನ ಗಂಧ ಆತ ಅದಾಗಲೇ ತನ್ನ ಊಟವನ್ನು ಮುಗಿಸಿದ್ದನ್ನೆನ್ನುವುದಕ್ಕೆ ಸಾಕ್ಷಿಯಾಗಿದ್ದವು. ನಿಧಾನವಾಗಿ ಹಳಿಗಳ ಮೇಲೆ ತೆವಳುತ್ತಿದ್ದ ರೈಲಿನಿಂದ ಪ್ಲಾಟಿಫಾರ್ಮಿನ ಮೇಲೆ ಕುಪ್ಪಳಿಸಿದ್ದ ಕೃಶದೇಹಿ ವ್ಯಕ್ತಿಯ ಎರಡೂ ಕೈಗಳಲ್ಲಿ ಬಟ್ಟೆ ತುಂಬಿದ ಸೂಟ್ ಕೇಸು ಮತ್ತೀತರ ಸರಂಜಾಮುಗಳಿದ್ದವು. ಅವನ ಅಂಗಿಯಿಂದ ಹೊಮ್ಮುತ್ತಿದ್ದ ತಿಳಿಯಾದ ಕಂಪು ಆತ ರೈಲಿನಲ್ಲಿಯೇ ಮಾಂಸದ ತುಂಡುಗಳ ಜೊತೆಗೆ ಕಾಫಿಯನ್ನು ಸೇವಿಸಿದ್ದನೆನ್ನುವುದರ ಪುರಾವೆಯಾಗಿದ್ದವು. ಅವನ ಜೊತೆಗಿದ್ದ ತೆಳ್ಳಗಿನ ಮೈಕಟ್ಟಿನ, ನೀಳ ಗದ್ದದ ಅವನ ಮಡದಿ ಮತ್ತು ಒಕ್ಕಣ್ಣನಂತೇ ಕಾಣುತ್ತಿದ್ದ ಬಾಲಕ ರೈಲಿನಿಂದಿಳಿದು ಕೃಶಕಾಯದ ವ್ಯಕ್ತಿಯನ್ನೇ ಹಿಂಬಾಲಿಸತೊಡಗಿದರು. ಮತ್ತಷ್ಟು ಓದು 
ಆತನ ಕತೆಗಳಲ್ಲಿ ಮಾ೦ತ್ರಿಕತೆಯೂ ಇದೆ, ವಾಸ್ತವವೂ ಇದೆ…!!
– ಗುರುರಾಜ್ ಕೊಡ್ಕಣಿ,ಯಲ್ಲಾಪುರ
ಅದೊ೦ದು ಬೆಚ್ಚಗಿನ, ಮಳೆಯಿಲ್ಲದ ಸೋಮವಾರದ ಸು೦ದರ ಬೆಳಗು. ಔರೇಲಿಯೊ ಎಸ್ಕೊವರ್ ಎನ್ನುವ ಪದವಿಯಿಲ್ಲದ ದ೦ತವೈದ್ಯ ಬೆಳಗ್ಗಿನ ಅರು ಗ೦ಟೆಗಾಗಲೇ ತನ್ನ ಚಿಕಿತ್ಸಾಲಯದ ಬಾಗಿಲು ತೆರೆದಿದ್ದ. ಪ್ಲಾಸ್ಟಿಕ್ ಅಚ್ಚುಗಳಿಗಿನ್ನೂ ಅ೦ಟಿಕೊ೦ಡಿದ್ದ ಕೆಲವು ನಕಲಿ ಹಲ್ಲುಗಳನ್ನು ಗಾಜಿನ ಬೀರುವಿನಿ೦ದ ತೆಗೆದಿರಿಸಿಕೊ೦ಡ ಆತ, ಮೇಜಿನ ಮೇಲೆ ಬೆರಳೆಣಿಕೆಯಷ್ಟಿದ್ದ ತನ್ನ ವೈದ್ಯಕೀಯ ಉಪಕರಣಗಳನ್ನು ಅವುಗಳ ಗಾತ್ರಕ್ಕನುಗುಣವಾಗಿ ಪ್ರದರ್ಶನಕ್ಕಿಡುತ್ತಿದ್ದಾನೆನ್ನುವ೦ತೆ ಜೋಡಿಸಲಾರ೦ಭಿಸಿದ. ಕಾಲರಿಲ್ಲದ ಪಟ್ಟೆಗಳುಳ್ಳ ಅ೦ಗಿಯನ್ನು ಧರಿಸಿದ್ದ ಆತನ ಪ್ಯಾ೦ಟನ್ನು ಭುಜದಿ೦ದ ಹಾದು ಹೋಗಿದ್ದ ಎರಡು ಪಟ್ಟಿಗಳು ಆತನ ಸೊ೦ಟದ ಮೇಲೆ ನಿಲ್ಲಿಸಿದ್ದವು. ಉದ್ದವಾಗಿ ಪೇಲವವಾಗಿದ್ದ ಆತನದ್ದು ನಿರ್ಭಾವುಕ ಮುಖಚರ್ಯೆ. ಸ೦ದರ್ಭಕ್ಕುನುಗುಣವಾಗಿ ಸ್ಪ೦ದಿಸದ ಕಿವುಡನ ಮುಖಭಾವ ಆತನದ್ದು. ತನ್ನೆಲ್ಲ ಸಲಕರಣೆಗಳನ್ನು ಮೇಜಿನ ಮೇಲೆ ಜೋಡಿಸಿಕೊ೦ಡು ಮುಗಿದ ನ೦ತರ ತನ್ನಲ್ಲಿದ ಡ್ರಿಲ್ಲೊ೦ದರಿ೦ದ ನಕಲಿ ಹಲ್ಲುಗಳಿಗೆ ಹೊಳಪುಕೊಡುವ ಕಾರ್ಯದಲ್ಲಿ ಆತ ನಿರತನಾದ. ಅನ್ಯಮನಸ್ಕತೆಯಿ೦ದ ಸ್ಥಿರವಾಗಿ ತನ್ನ ಕಾರ್ಯನಿರ್ವಹಿಸುತ್ತಿದ್ದ ಆತ ಅವಶ್ಯಕತೆಯಿರದಿದ್ದರೂ ತನ್ನ ಕೊರೆಯುವ ಯ೦ತ್ರವನ್ನು ಕಾಲಿನಿ೦ದ ನೂಕುತ್ತಿದ್ದ. ಮತ್ತಷ್ಟು ಓದು 
ಕತೆಯೊ೦ದು ಸಾರ್ಥಕವೆನಿಸುವುದೇ ಹೀಗಲ್ಲವೇ…??
– ಗುರುರಾಜ್ ಕೊಡ್ಕಣಿ,ಯಲ್ಲಾಪುರ
ಸುಮಾರು ಐವತ್ತು ವರ್ಷಗಳ ಹಿ೦ದಿನ ಮಾತು. ಮಧ್ಯವಯಸ್ಕ ವಿಧುರನೊಬ್ಬ ತನ್ನ ಮಕ್ಕಳೊ೦ದಿಗೆ ನ್ಯೂಯಾರ್ಕ್ ಪಟ್ಟಣದಿ೦ದ ಆಸ್ಟ್ರೇಲಿಯಾ ದೇಶಕ್ಕೆ ಬ೦ದು ನೆಲೆಸಿದ. ಆಸ್ಟ್ರೇಲಿಯಾ ದೇಶದ ರೇವು ಪಟ್ಟಣವೊ೦ದರಲ್ಲಿ ದುಡಿಯುತ್ತಿದ್ದ ಈ ಮಧ್ಯವಯಸ್ಕನಿಗೆ ಇಬ್ಬರು ಮಕ್ಕಳು. ಮಕ್ಕಳ ಪೈಕಿ ಕಿರಿಯ ಹುಡುಗನಿಗೆ ಸುಮಾರು ಹನ್ನೆರಡು ವರ್ಷ ವಯಸ್ಸಾಗಿತ್ತು. ಅತ್ಯ೦ತ ಸ್ಫುರದ್ರುಪಿಯಾಗಿದ್ದ ತಿಳಿಹಸಿರು ಬಣ್ಣದ ಕ೦ಗಳಿನ ಪುಟ್ಟಪೋರನ ಕಿರಿದಾದ ನೇತ್ರಗಳಲ್ಲಿ ಬೆಟ್ಟದಷ್ಟು ಆಸೆ ತು೦ಬಿತ್ತು. ಕೂತರೂ ನಿ೦ತರೂ ಆತನದ್ದು ಒ೦ದೇ ಕನಸು. ತಾನೊಬ್ಬ ದೊಡ್ಡ ಸಿನಿಮಾ ನಟನಾಗಬೇಕು. ಮೊದಲಿಗೆ ಸರ್ಕಸ್ ಕ೦ಪನಿಯೊ೦ದರಲ್ಲಿ ಸೇರಿಕೊ೦ಡು ಬಗೆಬಗೆಯ ಕಸರತ್ತುಗಳನ್ನು ಕಲಿತುಕೊ೦ಡು ನೋಡುಗರನ್ನು ಮೆಚ್ಚಿಸಬೇಕು, ಆನ೦ತರ ಜಗಮೆಚ್ಚುವ ನಾಯಕನಟನಾಗಬೇಕು. ಆದರೇನು ಮಾಡುವುದು? ಅವನ ಕನಸುಗಳು ಸು೦ದರ, ವಾಸ್ತವ ಕಠೋರ. ಮನೆಯಲ್ಲಿ ಕಿತ್ತುತಿನ್ನುವ ಬಡತನ. ಹೊಟ್ಟೆಪಾಡಿಗಾಗಿ ಅಪ್ಪನೊ೦ದಿಗೆ ಅವನೂ ಸಹ ಬ೦ದರಿನಲ್ಲಿ ಸಹಾಯಕನಾಗಿ ಕೆಲಸ ಮಾಡುತ್ತಿದ್ದ. ದುಡಿತದಿ೦ದ ತ೦ದ ಹಣವನ್ನು ಕೂಡಿಡುತ್ತ, ಎ೦ದಿಗಾದರೊ೦ದು ದಿನ ತಾನು ಸಿನಿಮಾ ನಟನಾಗಲೇಬೇಕೆನ್ನುವ ಮಹತ್ವಾಕಾ೦ಕ್ಷೆಯೊ೦ದಿಗೆ ಆತ ತನ್ನ ದಿನಗಳನ್ನು ತಳ್ಳುತ್ತಿದ್ದ. ಮತ್ತಷ್ಟು ಓದು 
ಸಾಮಾನ್ಯ ಘಟನೆಯೂ, ಅಸಾಮಾನ್ಯ ಕತೆಯೂ..
“ಟೇಬಲ್ ಫಾರ್ ಟೂ ಸರ್..? ಹೀಗೆ ಬನ್ನಿ ಸರ್, ಮೇಡಮ್ ಅಲ್ನೋಡಿ” ಎಂದ ಪರಿಚಾರಕ, ಕಿಟಕಿಯ ಪಕ್ಕದಲ್ಲಿದ್ದ ಮೇಜಿನತ್ತ ಕೈ ತೋರಿಸಿ, “ಅಲ್ಲಿ ಕುಳಿತುಕೊಳ್ಳಿ ಸರ್, ಅಲ್ಲಿಂದ ಸಮುದ್ರದ ನಯನ ಮನೋಹರ ದೃಶ್ಯವನ್ನು ನೀವು ಸುಲಭವಾಗಿ ವೀಕ್ಷಿಸಬಹುದು” ಎಂದು ನುಡಿದ. “ನಿಜ ಮಾರ್ಕ್, ನಾವು ಅಲ್ಲಿಯೇ ಕುಳಿತುಕೊಳ್ಳೋಣ. ದೋಣಿಯಲ್ಲಿ ಕುಳಿತು ಊಟ ಮಾಡಿದ ಸುಂದರ ಅನುಭವ ಆ ಟೇಬಲ್ಲಿನ ಮೇಲೆ ನಮಗಾಗಬಹುದು” ಎಂದು ನುಡಿದ ಆಲಿಸ್ ಪರಿಚಾರಕನನ್ನು ಹಿಂಬಾಲಿಸತೊಡಗಿದಳು. ಚಕ್ಕನೇ ಅವಳ ತೋಳನ್ನು ಬಳಸಿದ ಆಕೆಯ ಪತಿ ಮಾರ್ಕ್, “ಆ ಟೇಬಲ್ಲಿಗಿಂತ ಬಹುಶಃ ನಾವು ಈ ಟೇಬಲ್ಲಿನಲ್ಲಿ ಕುಳಿತು ಊಟ ಮಾಡುವುದು ಹೆಚ್ಚು ತೃಪ್ತಿಕರವೆನಿಸಬಹುದು” ಎಂದು ನುಡಿದ. ತೀರ ಹೊಟೆಲ್ಲಿನ ನಟ್ಟುನಡುವಿದ್ದ ಮೇಜನ್ನು ಗಮನಿಸಿ “ಅಷ್ಟು ಜನರ ನಡುವೆಯಾ..?? ಆದರೆ..”ಎಂದು ರಾಗವೆಳೆಯುತ್ತಿದ್ದ ಆಲಿಸಳ ಮಾತನ್ನು ಅರ್ಧಕ್ಕೆ ತುಂಡರಿಸಿದ ಮಾರ್ಕ್, “ಪ್ಲೀಸ್ ಆಲಿಸ್”ಎನ್ನುತ್ತ ಬಿನ್ನವಿಸಿದ. ಹಾಗೆ ಪತ್ನಿಯನ್ನು ವಿನಂತಿಸಿಕೊಂಡ ಆತ, ಆಕೆಯ ತೋಳನ್ನು ಬಿಗಿಯಾಗಿ ಹಿಡಿದೆಳೆದುಕೊಂಡ ರೀತಿಯನ್ನು ಗಮನಿಸಿದ ಆಕೆ “ಏನಾಯ್ತು ಮಾರ್ಕ್..”? ಎಂದು ಕೇಳಿದಳು.”
ಶ್ಶ್..!!”ಎನ್ನುತ್ತ ಕೈಬೆರಳನ್ನು ತುಟಿಗಳ ಮೇಲಿಟ್ಟುಕೊಂಡ ಅವನು, ಆಲಿಸಳನ್ನು ಕರೆದುಕೊಂಡು ಹೋಟೆಲ್ಲಿನ ನಡುಮಧ್ಯದಲ್ಲಿದ್ದ ಟೇಬಲ್ಲಿನೆಡೆಗೆ ಕರೆದೊಯ್ದ. ಆತನ ವಿಲಕ್ಷಣ ವರ್ತನೆಯನ್ನು ಗಮನಿಸಿದ ಆಲಿಸ್, “ಏನಾಯ್ತು ಮಾರ್ಕ್..”?ಎಂದು ಪುನ: ಪ್ರಶ್ನಿಸಿದಳು. “ಹೇಳುತ್ತೇನೆ ಡಾರ್ಲಿಂಗ್, ಮೊದಲು ಊಟವನ್ನು ತರಿಸಿಕೊಳ್ಳೋಣ, ನೀನು ಸಿಗಡಿ ಮೀನು ತಿಂತಿಯಾ ಅಥವಾ ಮೊಟ್ಟೆಯ ಆಮ್ಲೆಟ್ ತರಿಸಲಾ..”? ಎಂದು ಕೇಳಿದ ಮಾರ್ಕ್. “ನಿಮಗೇನು ಇಷ್ಟವೋ ಅದನ್ನೇ ತರಿಸಿ” ಎಂದಳು ಅವನ ಮಡದಿ. ಕ್ಷಣಕಾಲ ಇಬ್ಬರೂ ಪರಸ್ಪರರತ್ತ ಪ್ರೇಮದಿಂದ ಮುಗುಳ್ನಕ್ಕರು. ಅವರ ಟೇಬಲ್ಲಿನ ಪಕ್ಕದಲ್ಲೇ ನಿಂತಿದ್ದ ಪರಿಚಾರಕ ಕೊಂಚ ಅಸಹನೆಯಿಂದ ಚಲಿಸಿದ.
“ಮೊದಲು ಸಿಗಡಿ ಮೀನುಗಳನ್ನು ತನ್ನಿ” ಎನ್ನುತ್ತ, “ಆಮೇಲೆ ಆಮ್ಲೇಟ್, ನಂತರ ಸ್ವಲ್ಪ ಚಿಕನ್ ಮತ್ತು ಕಾಫಿ ತೆಗೆದುಕೊಳ್ಳೋಣ. ನನ್ನ ಡ್ರೈವರ್ ಕೂಡ ಇಲ್ಲಿಯೇ ಊಟ ಮಾಡಲಿದ್ದಾನೆ. ನಾವು ಎರಡು ಗಂಟೆಗೆಲ್ಲ ಇಲ್ಲಿಂದ ಹೊರಡಬೇಕು” ಎಂದು ವಿವರಿಸಿದ ಆತ, ಸುಸ್ತಾದವರಂತೆ ನಿಟ್ಟುಸಿರೊಂದನ್ನು ಹೊರಹಾಕಿದ. ದೂರದಲ್ಲಿ ಕಾಣುತ್ತಿದ್ದ ಸಮುದ್ರವನ್ನೊಮ್ಮೆ, ಶುಭ್ರವಾದ ಆಗಸದತ್ತ ಒಮ್ಮೆ ಕಣ್ಣು ಹಾಯಿಸಿದ ಅವನು ತನ್ನ ಮಡದಿಯನ್ನೇ ನೋಡತೊಡಗಿದ. ಸುಂದವಾದ ಟೋಪಿಯೊಂದನ್ನು ಧರಿಸಿದ್ದ ಆಕೆ, ಟೋಪಿಯ ಪಾರದರ್ಶಕ ಮುಖಪರದೆಯಡಿ ಮತ್ತಷ್ಟು ಮುದ್ದಾಗಿ ಗೋಚರಿಸಿದಳು ಅವನಿಗೆ. “ನೀನಿಂದು ತುಂಬಾ ಮುದ್ದಾಗಿ ಕಾಣುತ್ತಿದ್ದಿಯಾ ಡಾರ್ಲಿಂಗ್, ಸಾಗರದ ಈ ನೀಲಿ ನೀರಿನ ಪ್ರತಿಫಲನದಿಂದ ನಿನ್ನ ನೀಲಿ ಕಣ್ಣುಗಳು ಇನ್ನಷ್ಟು ಸುಂದರವಾಗಿ ಗೋಚರಿಸುತ್ತಿದೆ. ಇತ್ತೀಚೆಗೆ ನೀನು ಸ್ವಲ್ಪ ದಪ್ಪವಾಗಿದ್ದೀಯಾ. ಕೊಂಚ ದಪ್ಪವಾಗುವುದರಲ್ಲಿ ತಪ್ಪೇನಲ್ಲ ಆದರೆ ಮಿತಿ ಮೀರಬಾರದು ಅಷ್ಟೇ” ಎಂದು ಮುಗುಳ್ನಕ್ಕ. ತನ್ನ ಗಂಡನ ಹೊಗಳಿಕೆಯಿಂದ ಹೆಮ್ಮೆಯಿಂದ ಆಲಿಸಳ ಎದೆಯುಬ್ಬಿತು. “ಆದರೆ ನಾವೇಕೆ ಕಿಟಕಿಯ ಬಳಿಯಿದ್ದ ಟೇಬಲ್ಲಿನಲ್ಲಿ ಕೂರಲಿಲ್ಲ ಎಂದು ಹೇಳಲೇ ಇಲ್ಲವಲ್ಲ ನೀನು”ಎಂದು ಪ್ರಶ್ನಿಸಿದಳು ಆಲಿಸ್. ಮಾರ್ಕ್ ನಿಗೆ ಸುಳ್ಳು ಹೇಳಬೇಕೆನ್ನಿಸಲಿಲ್ಲ. “ಯಾಕೆಂದರೆ ಒಂದು ಕಾಲಕ್ಕೆ ನನಗೆ ತೀರ ಆತ್ಮೀಯರಾಗಿದ್ದವರೊಬ್ಬರು ಅಲ್ಲಿ ಕುಳಿತಿದ್ದರು” ಎಂದು ನುಡಿದ ಪತಿಯನ್ನು ಪ್ರಶ್ನಾರ್ಥಕವಾಗಿ ನೋಡಿದ ಆಲಿಸ್, “ಅವರು ನನಗೆ ಪರಿಚಯವಿಲ್ಲದವರೇನು ..”? ಎಂದು ಪ್ರಶ್ನಿಸಿದಳು. “ಹೌದು ನನ್ನ ಮಾಜಿ ಪತ್ನಿ”ಎಂದ ಮಾರ್ಕನ ದನಿಯಲ್ಲೊಂದು ಮುಜುಗರ. ಅಂಥದ್ದೊಂದು ಉತ್ತರವನ್ನು ನಿರೀಕ್ಷಿಸಿರದ ಆಲಿಸಳಿಗೆ ಹೇಗೆ ಪ್ರತಿಕ್ರಿಯಿಸಬೇಕೆನ್ನುವುದು ತಿಳಿಯದೆ ಅರೇಕ್ಷಣ ಪೆಚ್ಚಾಗಿ ಅವನನ್ನೇ ದಿಟ್ಟಿಸತೊಡಗಿದಳು. ನಿಮಿಷಾರ್ಧದಲ್ಲಿ ಸುಧಾರಿಸಿಕೊಂಡ ಆಲಿಸ್, “ಅರೇ..! ಅವಳು ಅಲ್ಲಿ ಕುಳಿತಿದ್ದರೇನಾಯ್ತು ಡಾರ್ಲಿ೦ಗ್, ಅದಕ್ಯಾಕೆ ನೀನು ತಲೆ ಕೆಡಿಸಿಕೊಳ್ಳಬೇಕಿತ್ತು? ಪ್ರಪಂಚ ತುಂಬ ಚಿಕ್ಕದು, ಆಕೆ ಮುಂದೆಯೂ ಎಲ್ಲಿಯಾದರೂ ನಮಗೆದುರಾಗಬಹುದು. ಅದರಲ್ಲೇನೂ ವಿಶೇಷವಿಲ್ಲ” ಎಂದು ನುಡಿದ ಆಲಿಸ್, ಕ್ಷಣ ಮಾತ್ರದ ಮೌನದ ನಂತರ, “ಆಕೆ ನಿನ್ನನ್ನು ನೋಡಿದಳಾ..?? ನೀನು ಅವಳನ್ನು ನೋಡಿದ್ದು ಆಕೆಗೆ ಗೊತ್ತಾಯಿತೆ..?? ಆಕೆಯನ್ನು ನನಗೆ ತೋರಿಸಬಲ್ಲೆಯಾ..”? ಎನ್ನುತ್ತ ಪ್ರಶ್ನೆಗಳ ಸುರಿಮಳೆಗೈದಳು.
“ಓಹ್, ಪ್ಲೀಸ್, ಈಗ ನೀನಾಕೆಯನ್ನು ನೋಡಬೇಡ ಆಲಿಸ್, ಬಹುಶಃ ಆಕೆ ನಮ್ಮನ್ನೀಗ ಗಮನಿಸುತ್ತಿರಲಿಕ್ಕೂ ಸಾಕು. ಅಲ್ಲಿ ಕುಳಿತಿದ್ದಾಳಲ್ಲ ಕಂದು ಕೇಶಗಳ ಟೋಪಿ ಧರಿಸಿದ ಹೆಂಗಸು. ನೋಡು, ಆ ಕೆಂಪಂಗಿ ಧರಿಸಿದ ಸಣ್ಣ ಹುಡುಗನ ಹಿಂದಿನ ಕುರ್ಚಿಯ ಮೇಲೆ ಕುಳಿತಿದ್ದಾಳಲ್ಲ ಅವಳೇ” ಎಂದ ಮಾರ್ಕ್. ತಾನಾಕೆಯನ್ನು ನೋಡಿದೆ ಎಂಬಂತೆ ತಲೆಯಾಡಿಸಿದ ಆಲಿಸ್, ನಿಜಕ್ಕೂ ತನ್ನ ಟೋಪಿಯಡಿಯಿಂದಲೇ ಆ ಹೆಂಗಸನ್ನು ಗಮಸಿದ್ದಳು. ತನಗೆ ತಾನೇ ಹೇಳಿಕೊಳ್ಳುತ್ತಿದ್ದಾನೇನೋ ಎನ್ನುವಂತೆ “ಹೊಂದಾಣಿಕೆ” ಎಂದು ಸುಮ್ಮನಾದನಾತ. ಆಲಿಸ್ ಕೇಳದಿದ್ದರೂ, “ಹೊಂದಾಣಿಕೆಯೇ ಇರಲಿಲ್ಲ ನಮ್ಮ ನಡುವೆ ಆಲಿಸ್. ಆದರೂ ಯಾವುದೇ ಜಗಳ ಕಿತ್ತಾಟಗಳಿಲ್ಲದಂತೆ ನಾವು ತುಂಬ ಪ್ರೌಢವಾಗಿಯೇ ಬೇರೆಯಾದೆವು. ಆನಂತರ ನನಗೆ ನಿನ್ನ ಮೇಲೆ ಪ್ರೀತಿಯಾಯಿತು. ನಿನಗೂ ನನ್ನ ಮೇಲೆ ಪ್ರೇಮವಿತ್ತು. ನಾವಿಬ್ಬರೂ ಒಂದಾಗಿದ್ದು ನಮ್ಮ ಅದೃಷ್ಟವೇ ಎನ್ನಬಹುದು ಆಲಿಸ್” ಎನ್ನುತ್ತ ಬಲಹೀನವಾಗಿ ನಕ್ಕ. ಸ್ವಚ್ಛ ಬಿಳುಪು ಉಡುಪುಗಳನ್ನು ಧರಿಸಿದ್ದ ಕಿಟಕಿ ಟೇಬಲ್ಲಿನ ಮಹಿಳೆಯ ಸುಂದರವಾದ ಕೂದಲುಗಳು ಸಮುದ್ರದ ಮೇಲಾಗುತ್ತಿದ್ದ ಬಿಸಿಲಿನ ಪ್ರತಿಫಲನದಿಂದ ಹೊಳೆಯುತ್ತಿದ್ದವು. ಆಕೆಯ ಅರೆತೆರೆದ ಕಣ್ಣುಗಳು, ಸೇದುತ್ತಿರುವ ಸಿಗರೇಟನ್ನು ಆಕೆ ಅಸ್ವಾದಿಸುತ್ತಿದ್ದಳೆನ್ನುವುದರ ಸಾಕ್ಷಿಯಂತಿತ್ತು. ಆಕೆಯನ್ನು ಗಮನಿಸುತ್ತಿದ್ದ ಆಲಿಸ್ ತನ್ನ ದೃಷ್ಟಿಯನ್ನು ತನ್ನ ಪತಿಯತ್ತ ತಿರುಗಿಸಿದಳು. ಕ್ಷಣ ಕಾಲದ ಮೌನದ ನಂತರ, “ಆಕೆಯ ಕಣ್ಣುಗಳೂ ಸಹ ನೀಲಿಯಾಗಿವೆ ಎಂದು ನೀನು ನನಗೇಕೆ ತಿಳಿಸಲಿಲ್ಲ ಮಾರ್ಕ್”? ಎಂದು ಪ್ರಶ್ನಿಸಿದಳು. “ಅದನ್ನು ನಿನಗೆ ಹೇಳಬೇಕೆಂದು ನನಗೆಂದೂ ಅನ್ನಿಸಲೇ ಇಲ್ಲ” ಎಂದ ಮಾರ್ಕ್, ಬ್ರೆಡ್ಡಿನ ಬುಟ್ಟಿಯನ್ನೆತ್ತಿ ಹಿಡಿದಿದ್ದ ಆಲಿಸಳ ಕೈಯನ್ನು ಮೃದುವಾಗಿ ಚುಂಬಿಸಿದ. ಹಾಗೊಂದು ಅನಿರೀಕ್ಷಿತ ಚುಂಬನದಿಂದ ಆಲಿಸಳ ಮುಖ ನಾಚಿಕೆಯಿಂದ ಕೆಂಪಾಯಿತು. ಹೊಂಬಣ್ಣದ ಕೇಶರಾಶಿಯ ಆಲಿಸ್, ನಾಜೂಕು ಸ್ವಭಾವದ ಭಾವುಕ ಮಹಿಳೆಯಾಗಿದ್ದಳು. ತನ್ನ ಪತಿಯ ಪ್ರೇಮದ ಭಾವುಕತೆಗೆ ಶರಣಾಗಿದ್ದ ಆಕೆಯ ಮುಖದಲ್ಲಿ ಸಂತೋಷವೆನ್ನುವುದು ಎದ್ದು ಕಾಣುತ್ತಿತ್ತು. ಅವರು ತೃಪ್ತಿಯಿಂದ ಊಟ ಮಾಡಿದರು. ಇಬ್ಬರೂ ಸಹ ಬಿಳಿಯುಡುಪಿನ ಮಹಿಳೆಯನ್ನು ಮರೆತವರಂತೆ ವರ್ತಿಸಿದರು. ಆಲಿಸ್ ಆಗಾಗ ಜೋರಾಗಿ ನಗುತ್ತಿದ್ದಳಾದರೂ, ಮಾರ್ಕ್ ಮಾತ್ರ ಕೊಂಚ ಎಚ್ಚರಿಕೆಯಿಂದಿದ್ದ. ಆತ ಕುರ್ಚಿಯ ಮೇಲೆ ತಲೆಯೆತ್ತಿ ನೇರವಾಗಿ ಕುಳಿತಿದ್ದ. ಕಾಫಿಗಾಗಿ ಕಾಯುತ್ತಿದ್ದಷ್ಟು ಸಮಯ ಇಬ್ಬರೂ ಪರಸ್ಪರ ಮಾತನಾಡದೆ ಮೌನವಾಗಿಯೇ ಕುಳಿತಿದ್ದರು. ನೆತ್ತಿಯ ಮೇಲಿನ ಸೂರ್ಯ ನಿಧಾನವಾಗಿ ಸಮುದ್ರದತ್ತ ಸಾಗುತ್ತಿದ್ದ. ಕೆಲವು ಕ್ಷಣಗಳ ನಂತರ, “ಆಕೆಯಿನ್ನೂ ಅಲ್ಲಿಯೇ ಕುಳಿತಿದ್ದಾಳೆ ಮಾರ್ಕ್”ಎಂದು ಪಿಸುಗುಟ್ಟಿದಳು ಆಲಿಸ್.
“ಆಕೆಯ ಉಪಸ್ಥಿತಿ ನಿನಗೆ ಕಿರಿಕಿರಿಯನ್ನುಂಟು ಮಾಡುತ್ತಿದೆಯಾ ಆಲಿಸ್..? ನಾವು ಬೇರೆಲ್ಲಿಯಾದರೂ ಕಾಫಿ ಕುಡಿಯೋಣವಾ..”? ಎನ್ನುತ್ತ ಕಾಳಜಿಯಿಂದ ಕೇಳಿದ ಮಾರ್ಕ್. “ಅಯ್ಯೋ..!! ಇಲ್ಲಪ್ಪ, ನಾನ್ಯಾಕೆ ಕಿರಿಕಿರಿ ಅನುಭವಿಸಬೇಕು. ಕಿರಿಕಿರಿಯನ್ನು ಬೇಕಿದ್ದರೆ ಆಕೆ ಅನುಭವಿಸಲಿ. ಇಷ್ಟಕ್ಕೂ ಆಕೆ ತುಂಬ ಸಂತೋಷವಾಗಿರುವಂತೆಯೇನೂ ಗೋಚರಿಸುತ್ತಿಲ್ಲ, ನೀನೊಮ್ಮೆ ಆಕೆಯನ್ನು ನೋಡಿದರೆ ನಿನಗೇ ಗೊತ್ತಾಗುತ್ತದೆ” ಎಂದಳು ಆಲಿಸ್. “ನನಗೆ ಆಕೆಯನ್ನು ನೋಡುವುದು ಇಷ್ಟವಿಲ್ಲ. ಆಕೆಯ ನೋಟ ಎಂಥದೆನ್ನುವುದು ನನಗೆ ಗೊತ್ತು” ಎಂದ ಮಾರ್ಕ್ ಒಮ್ಮೆ ನಿಟ್ಟುಸಿರಾದ. “ಓಹ್,ಆಕೆ ಅಷ್ಟು ಕೆಟ್ಟವಳಾಗಿದ್ದಳೇ..? ಎನ್ನುವ ಮರುಪ್ರಶ್ನೆ ಆಲಿಸಳದ್ದು. ಸೇದುತ್ತಿದ್ದ ಸಿಗರೇಟಿನ ಹೊಗೆಯನ್ನೊಮ್ಮೆ ತನ್ನ ಹೊಳ್ಳೆಗಳಿಂದ ಹೊರಚೆಲ್ಲಿದ ಮಾರ್ಕ್, ಹುಬ್ಬುಗಂಟಿಕ್ಕಿ, “ಛೇ,ಛೇ ಕೆಟ್ಟವಳು ಅಂತಲ್ಲ, ಆದರೆ ಆಕೆಯೊಂದಿಗೆ ನನಗೆ ಸಂತೋಷದಿಂದಿರಲಾಗಲಿಲ್ಲ ಅಷ್ಟೇ” ಎಂದು ನಕ್ಕ. “ಈಗ ನೀನು ಸಂತೋಷದಿಂದಿರುವೆಯಾ ಮಾರ್ಕ್..”? ಎಂದು ಪ್ರಶ್ನಿಸಿದ ಆಲಿಸ್, ಉತ್ತರಕ್ಕಾಗಿ ಕಾತುರದಿಂದ ಮಾರ್ಕನತ್ತ ನೋಡತೊಡಗಿದಳು. “ಇದೆಂತಹ ಪ್ರಶ್ನೆ ಆಲಿಸ್. ನಿನ್ನ ಪ್ರೀತಿಯಿಂದ ನಾನೆಷ್ಟು ಸುಖಿ ಎನ್ನುವ ಅನುಮಾನವೂ ನಿನಗಿಲ್ಲ. ನೀನು ನಿಜಕ್ಕೂ ಒಬ್ಬ ದೇವತೆ. ನೀನೇ ನನ್ನ ನಿಜವಾದ ಪ್ರೇಮ. ನಿನ್ನಂಥವಳನ್ನು ಪಡೆಯಲು ನಾನು ಪುಣ್ಯ ಮಾಡಿರಬೇಕು. ನಿನ್ನ ಪ್ರೇಮ ತುಂಬಿದ ಕಣ್ಣುಗಳನ್ನು ನೋಡುತ್ತಿದ್ದರೇ, ಸಾಗರದಬಣ್ಣ ತುಂಬಿದ ನಿನ್ನ ಕಣ್ಣುಗಳಲ್ಲಿ ನಾನು ಕಳೆದೇ ಹೋಗುತ್ತೇನೆ “ಎಂದ ಮಾರ್ಕ್ ನ ಮಾತುಗಳಲ್ಲಿ ಕೊಂಚ ನಾಟಕೀಯತೆ ಇತ್ತು. “ಆಕೆಯನ್ನು ಸಂತೊಷವಾಗಿಡುವುದು ಹೇಗೆನ್ನುವುದೇ ನನಗೆ ತಿಳಿಯುತ್ತಿರಲಿಲ್ಲ. ಅಸಾಧ್ಯಳು ಆಕೆ” ಎಂದು ನುಡಿದ ಮಾರ್ಕನ ಕಣ್ಣುಗಳಲ್ಲೊಂದು ಅವ್ಯಕ್ತ ಅಸಹನೆ. ವಾತಾವರಣ ತಂಪಾಗಿಯೇ ಇದ್ದರೂ ತೀರ ಸೆಖೆಯೆನ್ನುವಂತೆ ತನ್ನ ಕೈಯಿಂದ ಗಾಳಿಯಾಡಿಸಿಕೊಳ್ಳಲಾರಂಭಿಸಿದಳು ಆಲಿಸ್. ಆಕೆಯ ಕಣ್ಣಗಳಿನ್ನೂ ಬಿಳಿಯುಡುಪಿನ ಯುವತಿಯ ಮೇಲೆ ನೆಟ್ಟಿದ್ದವು. ಸಿಗರೇಟಿನ ಕೊನೆಯ ಜುರಿಕೆಗಳನ್ನೆಳೆಯುತ್ತಿದ್ದ ಆ ಯುವತಿಯ ತಲೆ ಕುರ್ಚಿಗೆ ಆತುಕೊಂಡಿತ್ತು. ತೀರ ಬಳಲಿಕೆಯಿಂದ ಮುಕ್ತಿ ಸಿಕ್ಕಿದ ಭಾವದ ಅಭಿವ್ಯಕ್ತಿಯೆನ್ನುವಂತೆ ಆಕೆ ಕಣ್ಣು ಮುಚ್ಚಿಕೊಂಡಿದ್ದಳು.
ಸಭ್ಯವಾಗಿಯೇ ತನ್ನ ಭುಜವನ್ನೊಮ್ಮೆ ಮೇಲೆ ಹಾರಿಸಿದ ಮಾರ್ಕ್, “ಏನು ಮಾಡುವುದು ಆಲಿಸ್..? ಕೆಲವರು ಇರುವುದೇ ಹಾಗೆ. ಸದಾಕಾಲ ಅತೃಪ್ತರು. ಅಂಥವರು ಯಾವತ್ತಿಗೂ ಆನಂದದಿಂದ ಇರಲಾರರು. ಅಂಥವರೆಡೆಗೆ ನಾವು ಸಹಾನುಭೂತಿ ತೋರುವುದರ ಹೊರತಾಗಿ ಇನ್ನೇನೂ ಮಾಡಲಾಗದು. ಆದರೆ ನಾವು ಸಂಪೂರ್ಣ ತೃಪ್ತರು ಅಲ್ಲವಾ ಡಾರ್ಲಿಂಗ್..”? ಎಂದು ಹಿತವಾಗಿ ಪ್ರಶ್ನಿಸಿದ ಮಾರ್ಕ್. ಆಕೆ ಉತ್ತರಿಸಲಿಲ್ಲ. ತನ್ನ ಪತಿಯ ಮುಖದತ್ತ ಕಳ್ಳನೋಟ ಬೀರುತ್ತಿದ್ದ ಆಲಿಸಳಲ್ಲೊಂದು ಅವ್ಯಕ್ತ ಕಸಿವಿಸಿ. ನಸುಗೆಂಪು ಮೊಗದ, ತುಂಬು ತೋಳುಗಳ ತನ್ನ ಸದೃಡ ಪತಿಯನ್ನೇ ದಿಟ್ಟಿಸುತ್ತಿದ್ದ ಆಲಿಸಳ ಮನದಲ್ಲಿ, “ಇಷ್ಟು ಸುಂದರ ವ್ಯಕ್ತಿಯೊಂದಿಗೂ ಸಂತಸದಿಂದಿರದಿದ್ದ ಆಕೆಗೆ ಬೇಕಿದ್ದಾದರೂ ಏನು..”? ಎನ್ನುವ ಅನುಮಾನವೊಂದು ಮೂಡಿತ್ತು. ಊಟ ಮುಗಿಸಿ ಎದ್ದ ಮಾರ್ಕ್, ಬಿಲ್ ಕೊಟ್ಟು ತನ್ನ ಕಾರು ಚಾಲಕನಿಗೆ ತಾವು ತೆರಳಬೇಕಾಗಿರುವ ವಿಳಾಸದ ಬಗ್ಗೆ ವಿವರಿಸುತ್ತಿದ್ದರೆ, ಅಸೂಯೆ ಮತ್ತು ಕುತೂಹಲಭರಿತ ದೃಷ್ಟಿಯಿಂದ ಬಿಳಿಯುಡುಪಿನ ಹೆಂಗಸನ್ನೇ ನೋಡುತ್ತಿದ್ದ ಆಲಿಸಳ ಬಾಯಲ್ಲಿ “ಥೂ ಎಂಥಾ ಹೆಂಗಸಪ್ಪ ಈಕೆ, ಅಸಂತೃಪ್ತ, ಅಸಾಧ್ಯ, ಗರ್ವಿ ಹೆಣ್ಣು”ಎನ್ನುವ ಮಾತುಗಳೇ…..
ತೀರ ಸಾಮಾನ್ಯವಾದ ಸಂಗತಿಗಳನ್ನಿಟ್ಟುಕೊಂಡು ಹೀಗೆ ಅಸಾಮಾನ್ಯವಾದ ಕತೆಗಳನ್ನು ಬರೆಯುವುದು ಫ್ರೆಂಚ್ ಕತೆಗಾರರಿಂದ ಮಾತ್ರ ಸಾಧ್ಯವೇನೋ. ನಮ್ಮ ನಡುವೆಯೇ ನಡೆಯಬಹುದಾದ ಸಣ್ಣದ್ದೊಂದು ಘಟನೆಯನ್ನು ಹೆಕ್ಕಿಕೊಂಡು ರಚಿಸಲ್ಪಟ್ಟಿರುವ ಕತೆಯ ಓಘವನ್ನು ಗಮನಿಸಿ. ಊಟಕ್ಕೆಂದು ಹೊಟೆಲ್ಲೊಂದಕ್ಕೆ ತೆರಳುವ ಯುವಕನಿಗೆ ತನ್ನ ಗತಕಾಲದ ಮಡದಿಯೆದುರು ಹೊಸ ಮಡದಿಯನ್ನು ಹೊಗಳುವ ಅನಿವಾರ್ಯತೆ. ಆತ ತನ್ನದೇ ಮನಸ್ಸಿನ ತುಮುಲಗಳಿಂದ ತಪ್ಪಿಸಿಕೊಳ್ಳಲು ಹೆಣಗಾಡುತ್ತಿದ್ದಾನೆ. ಹಾಗಾಗಿ ತೀರ ನಾಟಕೀಯವಾಗಿ ತನ್ನ ಪ್ರೇಮವನ್ನು ಹೊಸ ಮಡದಿಯೆದುರು ಅಭಿವ್ಯಕ್ತಿಸುತ್ತಿದ್ದಾನೆ. ಏನೇ ಹರ ಸಾಹಸಪಟ್ಟರೂ ನವದಂಪತಿಗಳಿಗೆ ಮುಜುಗರವನ್ನು ತಪ್ಪಿಸಿಕೊಳ್ಳುವುದು ಅಸಾಧ್ಯವೆನ್ನಿಸಿ ತಮ್ಮನ್ನು ತಾವೇ ಪರಸ್ಪರರು ಸಂತೈಸಿಕೊಳ್ಳುತ್ತಿದ್ದಾರೆ. ತನ್ನ ಹೊಸ ಮಡದಿಯೊಂದಿಗೆ ಕುಳಿತಿರುವ ಯುವಕನಿಗೆ ತನ್ನ ಮೊದಲ ಮಡದಿ ಏಕಾಏಕಿ ಎದುರಾಗಿಬಿಟ್ಟರೇ ಉಂಟಾಗುವ ಕಸಿವಿಸಿ ತಲ್ಲಣಗಳ ಚಿತ್ರಣವನ್ನು ಬಹುಶಃ “The other wife” ಎನ್ನುವ ಈ ಕತೆಯಷ್ಟು ಅದ್ಭುತವಾಗಿ ಇನ್ಯಾವ ಕತೆಯೂ ಕಟ್ಟಿಕೊಡಲಾರದು. ಫ್ರೆಂಚ್ ಸಾಹಿತ್ಯ ಲೋಕದ ಶ್ರೇಷ್ಟ ಕತೆಗಾರ್ತಿ ಎಂದು ಗುರುತಿಸಲಟ್ಟ ಸಿಡನಿ ಕೂಲೆಟ್ 1937ರಲ್ಲಿ ಈ ಕತೆಯನ್ನು ಬರೆದರು. ಮೂರು ಬಾರಿ ವಿವಾಹವಾಗಿದ್ದ ಕೂಲೆಟ್ಟರ ವೈಯಕ್ತಿಕ ಅನುಭವವೇ ಇಂಥದ್ದೊಂದು ಕತೆಗೆ ಪ್ರೇರಣೆಯಾಗಿರಬಹುದೆನ್ನುವುದು ವಿಮರ್ಶಕರ ಅಭಿಮತ. ಸುಮ್ಮನೇ ಓದಿಕೊಳ್ಳಿ. ನಿಮಗೊಬ್ಬ ಮಾಜಿ ಪ್ರೇಮಿಯೋ, ಪ್ರಿಯಕರನೋ ಇದ್ದು, ಬದುಕಿನ ಅನೂಹ್ಯ ತಿರುವಿನಲ್ಲೊಮ್ಮೆ ನಿಮ್ಮ ಬಾಳಸಂಗಾತಿಯೆದುರು ಅಂಥವರು ಸಿಕ್ಕಾಗ, ನೀವು ಅನುಭವಿಸಿರಬಹುದಾದ ಕಿರಿಕಿರಿ, ಮುಜುಗರಗಳು ನೆನಪಾಗಿ ಸಣ್ಣದ್ದೊಂದು ಮುಗುಳ್ನಗು ನಿಮ್ಮ ಮುಖದಲ್ಲರಳಲಿಕ್ಕೂ ಸಾಕು…
– ಗುರುರಾಜ್ ಕೊಡ್ಕಣಿ,ಯಲ್ಲಾಪುರ
ನಿಂತು ಹೋಗುವವರು ಸತ್ತವರು ಮಾತ್ರ’ ಎನ್ನುವ ದಿಟ್ಟೆಯ ಕುರಿತು…..
– ಗುರುರಾಜ್ ಕೊಡ್ಕಣಿ,ಯಲ್ಲಾಪುರ
“ಬಾಳಿನಲ್ಲೊಂದು ಹೋರಾಟವಿರದಿದ್ದರೆ ಪ್ರಗತಿಯೂ ಇಲ್ಲ. ಸ್ವಾತಂತ್ರ್ಯದ ಪ್ರತಿಪಾದಕರಂತೆ ವರ್ತಿಸುವ ಆದರೆ ಬದುಕಿನ ಸಂಘರ್ಷವನ್ನು ಹಳಿಯುವ ಅನೇಕ ಜನರನ್ನು ನಾನು ಕಂಡಿದ್ದೇನೆ. ನೆಲವನ್ನು ಉಳದೆ, ಬಿತ್ತದೆ ಬೆಳೆಯನ್ನು ಬಯಸುವ ಮನಸ್ಥಿತಿಯ ಇಂಥಹ ಜನ ಗುಡುಗು ಸಿಡಿಲುಗಳಿಲ್ಲದ ಮಳೆಯನ್ನು ಬಯಸುವವರು. ಇವರಿಗೆ ಸಾಗರದ ಸಂಪತ್ತು ಬೇಕು, ಅದರೊಳಗಿನ ಉಪ್ಪುನೀರು, ಅಲೆಗಳ ಅಬ್ಬರ ಬೇಕಿಲ್ಲ. ಬದುಕಿನ ಸಂಘರ್ಷವೆನ್ನುವುದು ನೈತಿಕವಾಗಿರಬಹುದು, ದೈಹಿಕವಾಗಿರಬಹುದು ಅಥವಾ ಇವೆರಡರ ಮಿಶ್ರಣವೂ ಆಗಿರಬಹುದು. ಆದರೆ ಬದುಕಿನ ಅಭಿವೃದ್ಧಿಗೆ ಸಂಘರ್ಷವಂತೂ ಬೇಕೇ ಬೇಕು” ಎಂದು ಭಾವುಕವಾಗಿ ನುಡಿಯುತ್ತಾನೆ ಆಫ್ರೋ ಅಮೇರಿಕನ್ ಸಮಾಜ ಸುಧಾರಕ ಮತ್ತು ಲೇಖಕ ಫ್ರೆಡ್ರಿಕ್ ಡಗ್ಲಾಸ್. ಪ್ರತಿಯೊಬ್ಬ ಸಾಧಕನ ಬದುಕಿನಲ್ಲೂ ನಮ್ಮ ಕಣ್ಣಿಗೆ ಬೀಳದ ಅಗೋಚರವಾದ ಹೋರಾಟವೊಂದಿರುತ್ತದೆ. ಸಾಧನೆಯ ಶಿಖರದ ಶೃಂಗದಲ್ಲಿ ನಿಂತ ಸಾಧಕನ ಚಿತ್ರ ನಮ್ಮೆದುರಿಗೆ ಕಾಣುತ್ತದೆ. ಆದರೆ ಅಂಥದ್ದೊಂದು ಶಿಖರದ ತುತ್ತ ತುದಿಗೆರಲು ಆತ ಪಟ್ಟ ಶ್ರಮ ನಮ್ಮೆದುರಿಗಿರುವುದಿಲ್ಲ. ಪ್ರತಿಯೊಬ್ಬರೂ ಸಹ ತಮ್ಮ ಬದುಕಿನಲ್ಲಿ ಏಟು ತಿಂದವರೇ, ಆದರೆ ಬಿದ್ದ ಏಟಿನಿಂದ ವಿಚಲಿತರಾಗದೇ ಮುನ್ನುಗ್ಗುವವರು ಮಾತ್ರ ಸಾಧಕರಾಗಲು ಸಾಧ್ಯ. ಹಾಗೆ ಬದುಕಿನ ಪ್ರತಿಕ್ಷಣವೂ ಪೆಟ್ಟುತಿನ್ನುತ್ತಲೇ ಬಂದಿದ್ದರೂ, ಸಾಧನೆಯ ಶಿಖರವನ್ನೇರಿ ನಿಂತ ಪೆಟ್ರಿಶಿಯಾ ನಾರಾಯಣ ಎನ್ನುವ ದಿಟ್ಟ ತಮಿಳರ ಹೆಣ್ಣುಮಗಳ ಕತೆಯನ್ನು ಇಂದು ನಿಮಗೆ ಹೇಳಲು ಹೊರಟಿದ್ದೇನೆ. ಮತ್ತಷ್ಟು ಓದು 
ಪ್ಯಾಸೆಂಜರ್ ರೈಲು ….
– ಫಣೀಶ್ ದುದ್ದ
ಅದೆಷ್ಟೋ ಬಾರಿ ನಾವು ರೈಲ್ವೆ ಸ್ಟೇಷನ್ನಲ್ಲೋ, ಬಸ್ ಸ್ಟಾಂಡಿನಲ್ಲೋ, ” ಸಾರ್, ನನ್ನ ಪರ್ಸ್ ಕಳೆದು ಹೋಗಿದೆ.. ನಾನು ಆ ಊರಿಗೆ ಹೋಗಬೇಕು.. ಈ ಊರಿಗೆ ಹೋಗಬೇಕು.. ನನ್ನ ಹತ್ತಿರ ಹತ್ತೇ ರೂಪಾಯಿ ಇರುವುದು.. ನಮ್ಮೂರಿಗೆ ಇಪ್ಪತ್ತು ರೂಪಾಯಿ ಚಾರ್ಜು… ಹತ್ತು ರೂಪಾಯಿ ಇದ್ರೆ ಕೊಡ್ತೀರಾ.?” ಎಂದು ಕೇಳುವವರು ದಿನ ಬೆಳಗಾದರೆ ಸಿಗುತ್ತಾರೆ. ಕೆಲವರು,” ಹತ್ತು ರೂಪಾಯಿ ತಾನೆ, “ಟೀ”ಗೋ, ಸಿಗರೇಟಿಗೋ ಕಳೆಯುವ ಬದಲು ಇವರಿಗೆ ಕೊಟ್ಟರೆ ಉಪಯೋಗವಗುತ್ತದಲ್ಲ ಎಂದು ಹತ್ತೋ, ಇಪ್ಪತ್ತೋ ಕೈಗಿಟ್ಟು ಹೋಗುವವರಿದ್ದಾರೆ. ಇನ್ನು ಕೆಲವರು, “ನಿಮ್ಮಂತವರನ್ನು ಬೇಕಾದಷ್ಟು ಜನರನ್ನು ನೋಡಿದ್ದೀನಿ, ಮೈ ಬಗ್ಗಿಸಿ ದುಡಿಯುವುದು ಬಿಟ್ಟು ಬರಿ ಸುಳ್ಳು ಹೇಳ್ತೀರಾ… ಸುಮ್ನೆ ಹೋಗಿ” ಎಂದು ಬಾಯಿಗೆ ಬಂದಂತೆ ಬೈದು ಹೋಗಿ ಬಿಡುತ್ತಾರೆ. ಆದರೆ ನಾವ್ಯಾರು ಅದರ ಹಿಂದಿರುವ ಸತ್ಯಾಸತ್ಯತೆಗಳನ್ನು ತಿಳಿಯುವ ಗೋಜಿಗೇ ಹೋಗಿರುವುದಿಲ್ಲ… ಮನಬಂದಂತೆ ಬೈದು ಹೋದ ಮೇಲೂ ಕೆಲವರು ಮನದಲ್ಲೇ ಬೇಸರ ಮಾಡಿಕೊಳ್ಳುವುದೂ ಉಂಟು,” ಅಯ್ಯೋ, ನಿಜವಾಗಿ ಅವನಿಗೆ ಹಣ ಬೇಕಾಗಿತ್ತೋ ಏನೋ..ಛೇ..ಹತ್ತು ರೂಪಾಯಿ ಕೊಟ್ಟಿದ್ದರೆ ನನ್ನ ಗಂಟೇನೂ ಹೋಗುತ್ತಿರಲಿಲ್ಲ”ಎಂದು. ಮತ್ತಷ್ಟು ಓದು 
ಭಾನುಮತಿ ನೀ ಸುಮತಿ.
– ನಾಗೇಶ ಮೈಸೂರು
ಮಹಾಭಾರತದಲ್ಲಿ ನಿರ್ಲಕ್ಷ್ಯಕ್ಕೊಳಪಟ್ಟು ನೇಪಥ್ಯಕ್ಕೆ ಸರಿಸಲ್ಪಟ್ಟ ಅನೇಕ ಸ್ತ್ರೀ ಪಾತ್ರಗಳಲ್ಲೊಂದು ಪ್ರಮುಖ ಪಾತ್ರ ಕೌರವೇಶ ದುರ್ಯೋಧನನ ಪತ್ನಿ ಭಾನುಮತಿಯದು. ಭೂಮಂಡಲವನ್ನಾಳುವ ಒಡೆಯನಾದ ಕೌರವೇಶನ ಸತಿಯಾದರೂ ಯಾಕೊ ಅವಳ ಉಲ್ಲೇಖ ಅಲ್ಲಿಲ್ಲಿ ತುಸು ಮೆಲುವಾಗಿ ಹೆಸರಿಸಿದ್ದು ಬಿಟ್ಟರೆ ಗಾಢವಾದ ವಿವರಣೆ ಕಾಣಿಸುವುದಿಲ್ಲ. ಬಹುಶಃ ಸುಯೋಧನನಿಗೆ ಆರೋಪಿಸಿದ ಋಣಾತ್ಮಕ, ಖಳನಾಯಕ ಪಟ್ಟದಿಂದಲೋ ಅಥವಾ ಚತುಷ್ಟಯದ ಚಟುವಟಿಕೆಗಳಿಗೆ ಕೊಟ್ಟಷ್ಟೇ ಗಮನ ಅವನ ಖಾಸಗಿ ಜೀವನಕ್ಕೆ ಕೊಡಲಿಲ್ಲವೆಂದೊ – ಒಟ್ಟಾರೆ ಭಾನುಮತಿ ಹೆಚ್ಚಾಗಿ ತೆರೆಮರೆಯ ಅಪ್ರತ್ಯಕ್ಷ ಪ್ರಭಾವ ಬೀರುವ ಪಾತ್ರವಾಗಷ್ಟೆ ಆಗಿ ಗೌಣವಾಗಿಬಿಡುತ್ತಾಳೆ. ಈಗಲೂ ಅಂತರ್ಜಾಲ ಹುಡುಕಿದರೆ ಅವಳ ಕುರಿತಾದ ವಿವರ ಸಿಗುವುದು ತೀರಾ ಅಲ್ಪವೇ. ಮತ್ತಷ್ಟು ಓದು 






